ಸದಸ್ಯ:Abhilasha.mr/ನನ್ನ ಪ್ರಯೋಗಪುಟ/MTR and its founder

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಂ ಟಿ ಆರ್:[ಬದಲಾಯಿಸಿ]

ಮಾವಳ್ಳಿ ಟಿಫನ್ ರೂಂ (ಸಾಮಾನ್ಯವಾಗಿ ಎಂಟಿಆರ್ ಎಂದು ಕರೆಯಲಾಗುತ್ತದೆ), ಭಾರತದಲ್ಲಿ ಆಹಾರ ಸಂಬಂಧಿತ ಉದ್ಯಮದ ಬ್ರಾಂಡ್ ಹೆಸರು. ಇದು ಬೆಂಗಳೂರಿನ ಲಾಲ್ ಬಾಗ್ ರಸ್ತೆಯಲ್ಲಿದೆ ಮತ್ತು ನಗರದಲ್ಲಿ ೬ ಇತರೆ ಶಾಖೆಗಳನ್ನು ಹೊಂದಿದ್ದು ಸಿಂಗಪುರ್, ದುಬೈ ಮತ್ತು ಮಸ್ಕಟ್ಗಳಲ್ಲಿ ಒಂದೊಂದು ಶಾಖೆ ಅಥವಾ ರೆಸ್ಟೊರೆಂಟ್ಗಳಿವೆ. ಎಂಟಿಆರ್ ಅನ್ನು ದಕ್ಷಿಣ-ಭಾರತೀಯ ಜನಪ್ರಿಯ ಉಪಹಾರ ಪದಾರ್ಥವಾದ ರವಾ ಇಡ್ಲಿ ಸಂಶೋಧಕ ಎಂದು ಹೆಸರಿಸಲ್ಪಡಲಾಗಿದೆ.

ಇತಿಹಾಸ:[ಬದಲಾಯಿಸಿ]

ಎಂ.ಟಿ.ಆರ್ ಫುಡ್ಸ್ ಲಿಮಿಟೆಡ್ ಬೆಂಗಳೂರಿನಲ್ಲಿ ಮಾವಳ್ಳಿ ಟಿಫಿನ್ ಕೊಠಡಿ ಎಂದು ಕರೆಯಲ್ಪಡುವ ಏಕೈಕ ರೆಸ್ಟೊರೆಂಟ್ ಆಗಿ ಆರಂಭವಾಯಿತು.೧೯೨೪ರಲ್ಲಿ ಯಜ್ಞನಾರಾಯಣ ಮಯ್ಯ ಹಾಗೂ ಅವರ ಸಹೋದರರಾದ ಪರಮೇಶ್ವರ ಮಯ್ಯ ಮತ್ತು ಗಣಪಯ್ಯ ಮಯ್ಯ ತಾವು ಜೀವನ ನಡೆಸುತ್ತಿದ ದಕ್ಷಿಣ ಕನ್ನಡದ ಹತ್ತಿರದ ಉಡುಪಿಯನ್ನು ಬಿಟ್ಟು ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದರು. ಅಡುಗೆಗಳಲ್ಲಿ ಪ್ರವೀಣರಾಗಿದ್ದ ಅವರು ಆ ಕಾಲದಲ್ಲಿ ಕೆಲವು ಪ್ರಮುಖ ಜನರ ಮನೆಗಳಲ್ಲಿ ಅಡುಗೆ ಮಾಡುವವರಾಗಿ ಉದ್ಯೋಗವನ್ನು ಕಂಡುಕೊಂಡರು. ೧೯೨೪ ರಲ್ಲಿ, ತನ್ನ ಉದ್ಯೋಗದಾತರಿಂದ ಪ್ರೋತ್ಸಾಹ ಪಡೆದು ಮತ್ತು ಅವರ ಸಹಾಯದಿಂದ ಪರಮೇಶ್ವರ ಮಯ್ಯ ಬೆಂಗಳೂರಿನ ಲಾಲ್ಬಾಗ್ ಫೋರ್ಟ್ ರಸ್ತೆಯಲ್ಲಿ ಸಣ್ಣ ರೆಸ್ಟಾರೆಂಟ್ ಅನ್ನು ಪ್ರಾರಂಭಿಸಲು ನಿರ್ಧರಿಸಿದರು ಅದು ಎಂಟಿಆರ್ ರೆಸ್ಟೊರೆಂಟಾಗಿ ಸ್ಥಾಪನೆಗೊಂಡಿತು. ಐದು ವರ್ಷಗಳ ನಂತರ ಯಜ್ಞನಾರಾಯಣ ಮಯ್ಯ, ತಮ್ಮ ಸಹೋದರ ಪರಮೇಶ್ವರ ಮಯ್ಯನ ಮರಣದ ನಂತರ ರೆಸ್ಟೊರೆಂಟನ್ನು ಮುಂದುವರೆಸಲು ತಮ್ಮನ್ನು ತಾವು ತೊಡಗಿಸಿಕೊಂಡರು. ಮುಂದಿನ ಮೂರು ದಶಕಗಳಲ್ಲಿ ಯಜ್ಞನಾರಾಯಣ ಮಯ್ಯ ತಮ್ಮ ಉದ್ಯಮಶೀಲ ಜಾಗೃತೆಯಿಂದ ಎಂಟಿಆರ್ಗೆ ಪ್ರಶಂಸನೀಯ ಖ್ಯಾತಿ ತಂದರು. "ಸಮಗ್ರತೆ ಎಂಟಿಆರ್ನ ಬೆನ್ನೆಲುಬಾಗಿದೆ, ದಶಕಗಳವರೆಗೆ ಇದು ಉಳಿದುಕೊಂಡಿರುವುದಕ್ಕೆ ಅದರ ಆಹಾರ ಮತ್ತು ನೀತಿಸಂಹಿತೆಯೆ ಮುಖ್ಯಕಾರಣಗಳಾಗಿವೆ". ೧೯೫೧ರಲ್ಲಿ ಯುರೋಪ್ನಲ್ಲಿರುವ ರೆಸ್ಟೊರೆಂಟ್ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಅಧ್ಯಯನ ಮಾಡಲು ಯುರೋಪ್ಗೆ ತೆರಳಿದರು. ಅಲ್ಲಿನ ರೆಸ್ಟೊರೆಂಟ್ಗಳ ಸ್ವಚ್ಛತೆ, ನೈರ್ಮಲ್ಯ, ಶಿಸ್ತು, ಅಭ್ಯಾಸಗಳು ಅವರ ಮೇಲೆ ಪ್ರಭಾವ ಬೀರಿತು, ಅವರು ಹಿಂತಿರುಗಿದ ನಂತರ ಆರೋಗ್ಯ, ಸ್ವಚ್ಛತೆ, ನೈರ್ಮಲ್ಯಗಳಂತಹ ಕೆಲವು ಬದಲಾವಣೆಗಳನ್ನು ತಮ್ಮ ರೆಸ್ಟೊರೆಂಟಿನಲ್ಲಿ ತಂದರು ಹಾಗೂ ಅವರು ನೆಲೆಗೊಂಡಿದ್ದ ಪ್ರದೇಶದಲ್ಲಿ ಸಣ್ಣ ಮಳಿಗೆಗಳನ್ನು ತೆರೆದು ಅವುಗಳಿಗೆ ಮಾವಳ್ಳಿ ಟಿಫನ್ ರೂಂ ಎಂದು ಮರುನಾಮಕರಣ ಮಾಡಿದರು. ೧೯೬೦ರಲ್ಲಿ ಈ ರೆಸ್ಟೊರೆಂಟನ್ನು ಬೆಂಗಳೂರಿನ ಲಾಲ್ಬಾಗ್ ರಸ್ತೆಯಲ್ಲಿರುವ ತನ್ನ ಪ್ರಸ್ತುತ ಸ್ಥಳಕ್ಕೆ ಸ್ಥಳಾಂತರಿಸಿತು ನಂತರ ಉನ್ನತ ಸ್ಥಾನ ಹಾಗೂ ಹೆಸರನ್ನು ಪಡೆಯಿತು. ಎಂಟಿಆರ್ ಈಗ ರಸ್ತೆಯ ಒಂದು ಹೆಗ್ಗುರುತಾಗಿದೆ. ಪ್ರಸ್ತುತವಾಗಿ ಎಂಟಿಆರ್ ಬ್ರಾಂಡ್ ಎರಡು ಪ್ರತ್ಯೇಕ ಘಟಕಗಳನ್ನು ಪ್ರತಿನಿಧಿಸುತ್ತದೆ ಅವೆಂದರೆ, ಎಂಟಿಆರ್ ರೆಸ್ಟೊರೆಂಟ್ ವ್ಯವಹಾರ ಮತ್ತು ಎಂಟಿಆರ್ ಫುಡ್ಸ್ ಹಾಗೂ ಮೊದಲೇ ಸಿದ್ಧಪಡಿಸಲಾದ ಆಹಾರ ವ್ಯವಹಾರ.

ಎಂಟಿಆರ್ ರೆಸ್ಟೊರೆಂಟ್:[ಬದಲಾಯಿಸಿ]

ಎಂಟಿಆರ್ ರೆಸ್ಟೊರೆಂಟ್ ಬೆಂಗಳೂರಿನಲ್ಲಿರುವ ಸಸ್ಯಹಾರಿ ರೆಸ್ಟೊರೆಂಟ್ ಆಗಿದೆ. ಇದು ೧೯೨೪ರಲ್ಲಿ ಸಂಸ್ಥಾಪನೆಗೊಂಡಿತು. ಗ್ಲೋಬ್ ಟ್ರೆಕ್ ಎಂಬ ಜಾಗೃತಿಕ ಪ್ರವಾಸ ಸಂಬಂಧಿತ ಸರಣಿಗಳಿಂದ ಇದು ದೂರದರ್ಶನಗಳಲ್ಲಿ ಕೂಡ ಕಾಣಿಸಿಕೊಂಡಿದೆ. ಒಮ್ಮೆಲೆ ಕರ್ನಾಟಕದ ಮುಖ್ಯಮಂತ್ರಿ ಈ ರೆಸ್ಟೊರೆಂಟ್ನಲ್ಲಿ ಮಸಾಲ ದೋಸೆಯನ್ನು ತಿನ್ನಲು ಸರತಿಯಲ್ಲಿ ನಿಂತಿದ್ದರೆಂಬ ಮಾತಿದೆ. ರೆಸ್ಟೊರೆಂಟ್ ಕಟ್ಟಡವು ಎರಡು ಮಹಡಿಗಳನ್ನು ಹೊಂದಿದೆ. ಸ್ವಚ್ಛತೆ ಮತ್ತು ಆಹಾರದ ಗುಣಮಟ್ಟಕ್ಕೆ ಹೆಚ್ಚು ಗಮನ ನೀಡಲಾಗುತ್ತದೆ, ಅನೇಕ ವರ್ಷಗಳಿಂದ ಗ್ರಾಹಕರು ಅಡುಗೆ ಮನೆ ಮೂಲಕ ರೆಸ್ಟೊರೆಂಟ್ಗೆ ಪ್ರವೇಶಿಸಿದರು, ಇದರಿಂದಾಗಿ ಅವರು ತಿನ್ನುವುದಕ್ಕಿಂತ ಮುಂಚೆ ರೆಸ್ಟೊರೆಂಟಿನ ಸ್ವಚ್ಛತೆಯ ಬಗ್ಗೆ ತೃಪ್ತಿಯನ್ನು ಹೊಂದಲು ಸಾಧ್ಯವಾಯಿತು. ಎರಡನೇ ಯುದ್ಧ ಸಮರದ ಸಮಯದಲ್ಲಿ ಅಕ್ಕಿಯಿಲ್ಲದೆ ಎಂಟಿಆರ್ಗೆ ಇಡ್ಲಿಗಳನ್ನು ತಯಾರಿಸಲು ತುಂಬಾ ತೊಂದರೆಯಾಯಿತು, ಆದ್ದರಿಂದ ಅವರು ಅಕ್ಕಿ ಬದಲು ರೆವೆಯಿಂದ ಇಡ್ಲಿಯನ್ನು ಮಾಡಲು ಪ್ರಯೋಗ ಮಾಡಿ ಅದು ಜನಪ್ರಿಯ ಉಪಹಾರವಾಗಿ ಯಶಸ್ವಿಯಾಯಿತು. ಎಂಟಿಆರ್ ಅನ್ನು ೭ ಗಂಟೆಗಳಲ್ಲಿ ೨೧೦೦೦ ಗ್ರಾಹಕರನ್ನು ಪೂರೈಸುವ ವಿಶ್ವದ ಮೊದಲ ತ್ಚರಿತ ಉಪಹಾರ ಕೇಂದ್ರ ಎಂದು ಕರೆಯಲ್ಪಡಲಾಗಿದೆ. ಎಂಟಿಆರ್ ರೆಸ್ಟೊರೆಂಟ್ ಪ್ರಸ್ತುತವಾಗಿ ಹೇಮಾಮಾಲಿನಿ ಮಯ್ಯ, ವಿಕ್ರಮ್ ಮಯ್ಯ ಹಾಗೂ ಅರವಿಂದ ಮಯ್ಯರವರ ನೇತೃತ್ವದಲ್ಲಿದೆ. ಈ ರೆಸ್ಟೊರೆಂಟಿನ ವಿಶೇಷತೆಯೆಂದರೆ ಬೆಳ್ಳಿ ಲೋಟಗಳನ್ನು ಪಾನೀಯಗಳ ನೀಡಲು ಬಳಸಲಾಗುತ್ತದೆ. ಎಂಟಿಆರ್ ಅನ್ನು ಆಹಾರ ಸರಬರಾಜು ಕಾಯ್ದೆ ಭಾರತೀಯ ತುರ್ತು ಪರಿಸ್ಥಿತಿ (೧೯೭೦ರ ದಶಕದ ಮಧ್ಯಭಾಗದಲ್ಲಿ) ಅವಧಿಯಲ್ಲಿ ಪದಾರ್ಥಗಳನ್ನು ಪೂರೈಸಲು ಲಾಭದಾಯಕವಾಗದೆನಿಸಿದಾಗ ಅದನ್ನು ಮುಚ್ಚಿಸಲ್ಪಡಲಾಯಿತು ಹಾಗೂ ೧೯೮೪ರ ಸಮಯದಲ್ಲಿ ಉದ್ಯೋಗಗಳನ್ನು ಉಳಿಸಲು ಎಂಟಿಆರ್ ಮಸಾಲೆಗಳು ಮತ್ತು ಹುರಿದ ಹಿಟ್ಟು ಮಿಶ್ರಣಗಳ ಮಾರಾಟಕ್ಕೆ ಹಾಗೂ ತ್ವರಿತ ಆಹಾರ ವ್ಯವಹಾರಕ್ಕೆ ಕಾಲಿರಿಸಿತು.[೧]

ಎಂಟಿಆರ್ ಫುಡ್ಸ್:[ಬದಲಾಯಿಸಿ]

ಎಂಟಿಆರ್ ಫುಡ್ಸ್ ಕಂಪೆನಿಯು ಮಾರ್ಚ್ ೨೦೦೭ರಲ್ಲಿ ೮೦ ಮಿಲಿಯನ್ ಡಾಲರ್ಸ್ಗೆ ನಾರ್ವೆ ಕಂಪೆನಿಯಾದ ಆರ್ಕ್ಲಾಗೆ ಮಾರಾಟ ಮಾಡುವವರೆಗೂ ಯಜ್ಞನಾರಾಯಣ ಮಯ್ಯನ ಮಗನಾದ ಸದಾನಂದ ಮಯ್ಯರವರ ನೇತೃತ್ವದಲ್ಲಿತ್ತು.೧೯೭೦ರ ಮಧ್ಯದಲ್ಲಿ ಭಾರತವು ತುರ್ತು ಪರಿಸ್ಥಿತಿಯಲ್ಲಿದ್ದಾಗ ಆಹಾರ ನಿಯಂತ್ರಣ ಕಾಯ್ದೆ, ಆಹಾರವನ್ನು ಕಡಿಮೆ ಬೆಲೆಯಲ್ಲಿ ಮಾರಾಟ ಮಾಡಲು ಆದೇಶಿಸಿತು, ಈ ಕ್ರಮದಿಂದ ಎಂಟಿಆರ್ ತನ್ನ ರೆಸ್ಟೊರೆಂಟ್ ವ್ಯವಹಾರದಲ್ಲಿ ಉನ್ನತ ಗುಣಮಟ್ಟವನ್ನು ಕಾಯ್ದುಕೊಳ್ಳಲು ಕಷ್ಟವಾಯಿತು ಹಾಗೂ ಚಟ್ನಿಗಳು ಮತ್ತು ರಸಂಗಳಂತಹ ಸಿದ್ಧತೆ ಇರುವ ತಿಂಡಿಗಳನ್ನು ಮಾರುವ ಮೂಲಕ ತ್ವರಿತ ಆಹಾರ ವ್ಯವಹಾರಕ್ಕೆ ವಿತರಿಸಲು ಇದು ಒತ್ತಾಯಕ್ಕೊಳಗಾಗಿತು. ೧೯೭೦ರ ದಶಕದಿಂದ, ಎಂಟಿಆರ್ ಡಿಪಾರ್ಟಮೆಂಟ್ ಸ್ಟೋರ್ಸನ್ನು ರೆಸ್ಟೊರೆಂಟ್ ಹತ್ತಿರ ತೆರೆದುಕೊಂಡು, ಚೆನ್ನೈನಲ್ಲಿ ಕೂಡ ಒಂದು ಮಳಿಗೆಯನ್ನು ತೆರೆಯಲ್ಪಟ್ಟಿತು. ಪ್ಯಾಕೇಜ್ ಮಾಡಲಾದ ಆಹಾರಗಳನ್ನು ವಿಭಿನ್ನ ಶ್ರೇಣಿಗಳಲ್ಲಿ ಅಂದರೆ- ಮಸಾಲೆಗಳು, ತ್ವರಿತ ಮಿಶ್ರಣಗಳು, ಸಿದ್ಧತಿನ್ನುವ ಆಹಾರಗಳು, ಚಿಪ್ಸ್, ಉಪ್ಪಿನಕಾಯಿ, ಐಸ್ ಕ್ರೀಮ್ ಮುಂತಾದ ಆಹಾರಗಳನ್ನು ಎಂಟಿಆರ್ ತಯಾರಿಸುತ್ತದೆ. ಭಾರತಕ್ಕೆ ಮೊಟ್ಟಮೊದಲಭಾರಿಗೆ ಐಸ್ ಕ್ರೀಮ್ ತಯಾರಿಸುವ ಯಂತ್ರವನ್ನು ತಂದ ಕಂಪೆನಿಯೆಂದರೆ ಎಂಟಿಆರ್ ಎಂದು ಪ್ರಕಟಿಸಲಾಗಿದೆ. ಎಂಟಿಆರ್ ಆಹಾರ ಸುರಕ್ಷತೆ ಮತ್ತು ನೈರ್ಮಲ್ಯದ ಕಠಿಣ ಮಾನದಂಡವಾದ ಅಪಾಯದ ವಿಶ್ಲೇಷಣೆ ಕ್ರಿಟಿಕಲ್ ಕಂಟ್ರೋಲ್ ಪಾಯಿಂಟ್ (HACCP) ಪ್ರಮಾಣೀಕರಣದೊಂದಿಗೆ ಪ್ರಮಾಣೀಕರಿಸಲ್ಪಡುವ ಮೊಟ್ಟಮೊದಲ ಭಾರತೀಯ ಸಂಸ್ಕರಿಸಿದ ಆಹಾರ ಕಂಪನಿಯಾಗಿದೆ.[೨]

೧೯೯೦ ರ ದಶಕದಲ್ಲಿನ ಬದಲಾವಣೆಗಳು[ಬದಲಾಯಿಸಿ]

ರಾಷ್ಟ್ರವ್ಯಾಪಿ ಅನುಸರಣೆಯನ್ನು ಪಡೆಯಲು 1998 ರಲ್ಲಿ ಎಂಟಿಆರ್ ಹೊಸ ಉತ್ಪನ್ನವನ್ನು ಪ್ರಾರಂಭಿಸಿತು. ಆ ಉತ್ಪನ್ನವು ಮೃದುವಾದ ಐಸ್ಕ್ರೀಮ್ ಕೋನ್ ಆಗಿತ್ತು. ಐಸ್ ಕ್ರೀಮ್ ಮಾರುಕಟ್ಟೆಯಲ್ಲಿ ದೀರ್ಘಕಾಲದವರೆಗೆ ದೊಡ್ಡ ಆಹಾರ ಕಂಪೆನಿಗಳು ಹಾಗು ಪ್ರಮುಖವಾಗಿ ಹಿಂದೂಸ್ಥಾನ್ ಲಿವರ್ಗಳಿಂದ ಪ್ರಾಬಲ್ಯ ಹೊಂದಿದ್ದವು. ಎಂಟಿಆರ್ನ ಹೊಸ ಕೋನ್ ತಕ್ಷಣದ ಹಿಟ್ ಆಗಿತ್ತು. ಕಂಪೆನಿಯು ಹಿಂದೂಸ್ತಾನ್ ಲೀವರ್ ವಿರುದ್ಧ ಅದರ ಐಸ್ ಕ್ರೀಂ ಬೆಲೆಯನ್ನು ಸ್ಪರ್ಧಾತ್ಮಕವಾಗಿಟ್ಟು ಇನ್ನೂ ಹೆಚ್ಚಿನ ಲಾಭಾಂಶವನ್ನು ಪಡೆಯಲು ಸಾಧ್ಯವಾಯಿತು. ಕಂಪೆನಿಯು ತನ್ನ ಐಸ್ಕ್ರೀಮ್ ಬಂಡವಾಳವನ್ನು ಶೀಘ್ರವಾಗಿ ವಿಸ್ತರಿಸಿತು, ಪ್ಯಾಕೇಜ್ ಮಾಡಿದ ವಿವಿಧ ಐಸ್ ಕ್ರೀಮ್ನ ಹಲವಾರು ರೀತಿಗಳಲ್ಲಿ ಹೊರತಂದಿತು, ಅದರಲ್ಲಿ ಕೆಲವುಗಳು ಫೈವ್-ಸ್ಟಾರ್ ಹೋಟೆಲುಗಳಿಗೆ ಮಾರಾಟವಾದವು. ಎಂಟಿಆರ್ ಶುದ್ಧತೆಗಾಗಿ ಖ್ಯಾತಿ ಹೊಂದಿದ್ದರಿಂದ ಹೊಸ ಗ್ರಾಹಕರನ್ನು ಆಯ್ಕೆ ಮಾಡುವುದರಲ್ಲಿ ಜಯಶಾಲಿಯಾಯಿತು.[೩]

ಉಲ್ಲೇಖನಗಳು[ಬದಲಾಯಿಸಿ]

  1. https://www.theloophk.com/hong-kong-city-guide-history-mtr-mass...
  2. https://shop.mtrfoods.com/about-us
  3. www.referenceforbusiness.com › … › Food Products