ಸದಸ್ಯ:Aadyasridhar.h.s

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಪರಿಚಯ[ಬದಲಾಯಿಸಿ]

ನನ್ನ ಹೆಸರು ಆಧ್ಯ ಶ್ರೀಧರ್. ನಾನು ಕಾಫಿ ನಾಡು ಚಿಕ್ಕಮಂಗಳೂರು ಹುಡುಗಿ. ನನ್ನ ತಂದೆಯ ಹೆಸರು ಶ್ರೀಧರ್ ಮತ್ತು ನನ್ನ ತಾಯಿಯ ಹೆಸರು ಸುಮಾ. ನನಗೊಬ್ಬಳು ತಂಗಿ ಇದ್ದಾಳೆ, ಅವಳ ಹೆಸರು ಐಶಾನಿ ಮತ್ತು ಅವಳು ಎಲ್ಕೆಜಿ ವರ್ಗ ದಲ್ಲಿ ಓಧುತಿಧಾಳೇ. ನಮ್ಮದು ಒಂದು ಪುಟ್ಟ ಕುಟುಂಬ. ನಾವು ಚಿಕ್ಕಮಗಳೂರಿನಲ್ಲಿ ನಮ್ಮ ಮುತ್ತಾತನ ಕಾಲದಿಂದ ವಾಸಮಾಡುತ್ತಿಧಾರೆ. ನನಗೆ ಸ್ವಿಮ್ಮಿಂಗ್ ಮಾಡುವುದು, ನನ್ನ ತಂಗಿ ಜೊತೆ ಆಟವಾಡುವುದು ಎಂದರೆ ತುಂಬಾ ಇಷ್ಟ.

ನನ್ನ ಶಾಲಾ ವಿದ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಶಾಲಾ ವಿದ್ಯಾ ಭ್ಯಾಸ ನನ್ನ ಊರಲ್ಲೇ ಮಾಡಿದ್ದು. ಎಲ್.ಕೆ. ಜಿ ಯಿಂದ ಐದನೇ ತರಗತಿವರೆಗೂ ಎಮ್. ಈ. ಎಸ್ ಶಾಲೆಯಲ್ಲಿ ಮುಗಿಸಿದೆ. ನಂತರ, ನನ್ನ ಶಾಲಾ ಅಭ್ಯಾಸ ಸಂಪೂರ್ಣವಾಗಿ ಅಂಬರ್ ವ್ಯಾಲಿ ಎಂಬ ಶಾಲೆಯಲ್ಲಿ ಮುಗಿಸಿದೆ. ನನ್ನ ಶಾಲೆ ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ಧಿ ಪಡೆದ ಶಾಲೆಗಳಲ್ಲಿ ಒಂದು ಎಂದು ಹೇಳಲು ತುಂಬಾ ಹೆಮ್ಮೆ ಆಗುತ್ತೆ.ಅಲ್ಲದೆ, ನಮ್ಮ ಶಾಲೆಯಲ್ಲಿ ಪ್ರತಿಯೊಬ್ಬರು ಹಾಸ್ಟೆಲ್ನಲ್ಲಿ ಇರಬೇಕಾಗಿತ್ತು, ಹಾಗಾಗಿ ನಾನು ನನ್ನ ಶಾಲೆಯಲ್ಲಿ ನನ್ನ ಸ್ನೇಹಿತರ ಜೊತೆ, ಶಿಕ್ಷಕರ ಜೊತೆ ಒಳ್ಳೆ ಕ್ಷಣಗಳನ್ನು ಕಳೆದಿದ್ದೇನೆ. ಆ ದಿನಗಳನ್ನು ಯಾವತ್ತು ಮರೆಯಕಾಗಲ್ಲ. ಹಾಸ್ಟೆಲ್ನಲ್ಲಿ ಕದ್ದು ಟಿವಿ ನೋಡೋದು, ಮನೆಯಿಂದ ತಿಂಡಿ ಕದ್ದು ಶಾಲೆಗೆ ತರುವುದು, ಆ ಜಗಳಗಳು, ಕಿತ್ತಾಟ, ಪ್ರೀತಿ, ಸ್ನೇಹ ಈ ಯಾವ ಕ್ಷಣಗಳನ್ನು ಮರೆಯಲು ಸಾಧ್ಯವಿಲ್ಲ. ಅಷ್ಟೇ ಅಲ್ಲ, ನಾವು ಬೇಗ ಐದು ಗಂಟೆಗೆ ಎದ್ದು ಎಕ್ಸರ್ಸೈಜ್ ಮಾಡಿ ನಂತರ ಕ್ಲಾಸ್ಗೆ ಹೋಗಿ ಮಧ್ಯಾಹ್ನ ವಾಪಸ್ ಹಾಸ್ಟೆಲ್ಗೆ ಬಂದು ಸ್ಪೋರ್ಟ್ಸ್ಗೆ ರೆಡಿ ಆಗಿ ಆಡಕ್ಕೆ ಹೋದರೆ ಮತ್ತೆ ಬರುವುದು ಸಂಜೆ ಆರಕ್ಕೆಏನೇ. ನಂತರ, ಓದಕ್ಕೆ ಕೂರಿಸಿಬಿಡುತ್ತಿದ್ದರು. ಹೀಗೆ, ನಮಗೆ ಮುಂದೆ ಏನು ಮಾಡುವುದು ಎಂದು ಯೋಜನೆ ಮಾಡಲು ಕೂಡ ಸಮಯ ಇರಲಿಲ್ಲ, ನನ್ನ ಶಾಲೇನೆ ನಾವು ಯಾವಾಗ ಏನು ಮಾಡಬೇಕು ಎಂದು ಮುಂಚೆಏನೇ ನಿರ್ಧಾರ ಮಾಡುತಿದ್ದರು. ಮನಸಾರೆ ಹೇಳಬೇಕು ಎಂದರೆ, ದೇವರು ಮತ್ತೊಮ್ಮೆ ನನ್ನನ್ನು ಇದೆ ಜನರ ಮದ್ಯೆ ಹುಟ್ಟಿಸು ಎಂದು ಬೇಡಿಕೊಳ್ಳುತ್ತೇನೆ.ಅಷ್ಟೇ ಅಲ್ಲ, ನನ್ನ ಶಾಲೆ ನನಗೆ ತುಂಬಾ ಕಲಿಸಿತು, ಒಬ್ಬ ಮನುಷ್ಯನಿಗೆ ಇರಬೇಕಾದ ಗುಣಗಳು, ಜನರ ಮುಂದೆ ಕಾಂಫಿಡೆಂಟ್ ಆಗಿ ಮಾತನಾಡಲು, ಹೀಗೆ ಹಲವಾರು ವಿಷಯ ಕಲಿಸಿ ನಮ್ಮ ಕಾಲೇಜ್ ಜೀವನವನ್ನು ಇನ್ನು ಹಗುರ ಮಾಡಿದ್ದಾರೆ.

ನನ್ನ ಹೆಚ್ಚಿನ ವ್ಯಾಸಾಂಗ[ಬದಲಾಯಿಸಿ]

ಮುಂದ್ ನನ್ನ ಪಿ.ಯು.ಸಿಗೆ ನಾನು ಕ್ರೈಸ್ಟ್ ಕಾಲೇಜು ಎಂಬ ಪ್ರಸಿದ್ಧವಾದ ಕಾಲೇಜಿಗೆ ನಾನು ಹತ್ತನೇ ತರಗತಿಯಲ್ಲಿ ಗಳಿಸಿದ 86% ಅಂಕಗಳಿಂದ ಸೇರಿಕೊಂಡೆ. ನನ್ನ ಹುಟ್ಟೂರು ಬಿಟ್ಟು ಮೊದಲನೇ ಬಾರಿ ಬೆಂಗಳೂರಿಗೆ ಬಂದಾಗ ಸ್ವಲ್ಪ ಭಯ ಇತ್ತು ಯಾಕೆಂದರೆ ಇದು ಹೊಸ ಜಾಗ ಆಗಿತ್ತು. ಆದರೆ ಇಲ್ಲನ ನನ್ನ ಸ್ನೇಹಿತರು ನನಗೆ ತುಂಬಾ ಸಹಾಯ ಮಾಡಿದರು. ನನಗೂ ಧೈರ್ಯ ಬಂತು. ಇನ್ನು ಆ ಎರಡು ವರ್ಷ ಹೇಗೆ ಹೋಯ್ತು ಅಂತಾನೆ ಗೊತ್ತಾಗಲಿಲ್ಲ. ನಾನು ಏನು ಕಲಿತಿದ್ದೆ ನಮ್ಮ ಶಾಲೆಯಲ್ಲಿ, ಕ್ರೈಸ್ಟ್ ಕಾಲೇಜು ಅದಕ್ಕಿಂತ ಹೆಚ್ಚು ಕಲಿಸಿ ನನ್ನನು ವಾಣಿಜ್ಯ ಲೋಕಕ್ಕೆ ಕರೆತಂದಿದೀತು. ಈ ಸಮಯದಲ್ಲೇ ನನಗೆ ಗೊತ್ತಾಗಿದ್ದು ನನ್ನಲೂ ಕೂಡ ನಟನೆ, ಕಲೆ ಇದೇಎಂದು. ಇದಕ್ಕೆ ಕಾರಣ ನಮ್ಮ ಕಾಲೇಜು. ಹಾಗಾಗಿ ನಾನು ನಿರ್ಧಾರ ಮಾಡಿ ನನ್ನ ನಂತರ ಅಥವಾ ಮುಂದಿನ ವಿದ್ಯಾಭ್ಯಾಸ ವನ್ನು ಕ್ರೈಸ್ಟ್ ಕಾಲೇಜಿನಲ್ಲೇ ಮಾಡಬೇಕೆಂದು ನಿರ್ಧಾರ ಮಾಡಿದೆ. ಈಗ ನಾನು ನನ್ನ ಬಿಕಾಂ ಡಿಗ್ರಿಯನ್ನು ಕ್ರಿಶ್ಚಿಯನ್ ಕಾಲೇಜಿನಲ್ಲೇ ಮುಂದಿಉವರಿಸುತ್ತಿದೇನೆ. ಈ ಮೂರು ವರ್ಷಗಳ ಕಾಲ ಎಲ್ಲಾ ಒಳ್ಳೆಯದಾಗಲಿ, ಹಾಗೆ ಇನ್ನು ಹೆಚ್ಚು ನೆನಪುಗಳನ್ನು ಗಳಿಸಲು ಆಶಿಸುತ್ತೇನೆ.