ವಿಷಯಕ್ಕೆ ಹೋಗು

ಸದಸ್ಯ:ANKUSHB1990/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮೇಖ್ರಿ ವೃತ್ತದ ಇತಿಹಾಸ []

[ಬದಲಾಯಿಸಿ]

೧೯೩೦ರ ದಶಕದ ಸಂದರ್ಭ. ಬೆಂಗಳೂರು ನಗರಕ್ಕೆ ಮೊದಲು ಸರಕು ಸರಂಜಾಮುಗಳು ಸರಬರಾಜಾಗುತ್ತಿದ್ದುದು ಗ್ರಾಮಾಂತರ ಪ್ರದೇಶಗಳಿಂದ. ಬೆಂಗಳೂರಿಗೆ ಹೊಂದಿಕೊಂಡ ಗ್ರಾಮಾಂತರ ಪ್ರದೇಶ ಹೆಬ್ಬಾಳದ ಕೆರೆಯಿಂದ ಬೆಂಗಳೂರು ನಗರಕ್ಕೆ ಪ್ರವೇಶ ಪಡೆಯಬೇಕಾದರೆ ಅದು ಕಡಿದಾದ ಗುಡ್ಡಗಳಿಂದ, ಕಿರಿದಾದ ರಸ್ತೆಯಿಂದ ಕೂಡಿತ್ತು. ಆಗಿನ ಸಂಪರ್ಕ ಸಾಧನ ಎತ್ತಿನ ಬಂಡಿಯೊಂದೇ. ಇಂತಹ ರಸ್ತೆಯಲ್ಲಿ ಬರಬೇಕಾದರೆ ಎತ್ತಿನ ಬಂಡಿಯನ್ನು ಎಳೆಯುವ ಎಂತಹ ಬಲಿಷ್ಠ ಎತ್ತುಗಳಾದರೂ ಭಾರದಿಂದ ಕುಸಿದು ಬೀಳುತ್ತಿದ್ದವು. ಇಂತಹ ಕರುಣಾಜನಕ ಸ್ಥಿತಿಯನ್ನು ಕಣ್ಣಾರೆ ಕಂಡ ಸೌದಿ ಅರೇಬಿಯಾದ ವರ್ತಕ ಇನಾಯತ್ತುಲ್ಲಾ ಮೆಹ್ಕ್ರಿ ತನ್ನ ಸ್ವತಃ ೧೦,೦೦೦ರೂಪಾಯಿಗಳನ್ನು ಖರ್ಚು ಮಾಡಿ ಕಡಿದಾದ ಗುಡ್ಡವನ್ನು ಕಡಿದು ಎತ್ತಿನ ಬಂಡಿ ಸುಗಮವಾಗಿ ಸಾಗುವ ರಸ್ತೆಯನ್ನು ನಿರ್ಮಿಸಿದರು.

ಈ ಸಂದರ್ಭದಲ್ಲಿ ಬೆಂಗಳೂರಿನ ಆಳ್ವಿಕೆ ಮೈಸೂರು ಒಡೆಯರ ಅಧೀನದಲ್ಲಿತ್ತು. ಒಡೆಯರಾದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯ್ ಆಳ್ವಿಕೆ ನಡೆಸುತ್ತಿದ್ದರು. ಮೈಸೂರಿನ ದಿವಾನರಾಗಿದ್ದವರು ಸರ್ ಮಿರ್ಜಾ ಇಸ್ಮಾಯಿಲ್. ಸರ್ ಮಿರ್ಜಾ ಇಸ್ಮಾಯಿಲ್ಲರಿಗೆ ಮೆಹ್ಕ್ರಿಯವರ ಕಾರ್ಯ ತಿಳಿದು ಅದನ್ನು ಮಹಾರಾಜರಿಗೆ ತಿಳಿಸಿದರು. ನಾಗರಿಕರ ಉಪಕಾರಕ್ಕಾಗಿ ತನ್ನ ಸ್ವಂತ ಖರ್ಚಿನಿಂದ ದಾರಿ ನಿರ್ಮಿಸಿಕೊಟ್ಟ ವಿಚಾರ ತಿಳಿದ ಮಹಾರಾಜರು ಬಾನಿನಷ್ಟು ಹರ್ಷದ ಜೊತೆಗೆ ಪ್ರಜೆಗಳ ಈ ಸಂಕಷ್ಟ ತಮ್ಮ ಗಮನಕ್ಕೆ ಬರಲಿಲ್ಲ ಎಂದು ಕೊರಗನ್ನು ವ್ಯಕ್ತಪಡಿಸುತ್ತಾರೆ. ನಂತರ  ಮಹಾರಾಜರು ಮೆಹ್ಕ್ರಿಯವರನ್ನು  ಮೈಸೂರಿಗೆ ಕರೆಸಿ ಅವರಿಗೆ ೧೩,೦೦೦ರೂಪಾಯಿಗಳ ಗೌರವ ಧನವನ್ನು ನೀಡಿ ಅವರನ್ನು ಸನ್ಮಾನಿಸಿದರು. ಆದರೆ ಪ್ರತಿಫಲ ಬಯಸದ ಮೆಹ್ಕ್ರಿ ಇದನ್ನು ಗೌರವಯುತವಾಗಿ ತಿರಸ್ಕರಿಸಿದರು.

ಮೆಹ್ಕ್ರಿಯವರ ಕಾರ್ಯವನ್ನು ಚಿರಸ್ಥಾಯಿಗೊಳಿಸುವ ಸಲುವಾಗಿ ೧೯೩೫ರ ಏಪ್ರಿಲ್‌ನಲ್ಲಿ ಬಳ್ಳಾರಿ ರಸ್ತೆಯ ಜಯಮಹಲ್, ಹೆಬ್ಬಾಳ ವಿಂಡ್ಸರ್ ಮ್ಯಾನರ್ ಸಂಧಿಸುವ ರಸ್ತೆಗೆ “ಇನಾಯತುಲ್ಲಾ ಮೆಹ್ಕ್ರಿ ಸ್ಕ್ವಾರ್” ಎಂದು ಹೆಸರಿಡಲಾಯಿತು. ಇದನ್ನು ಅಂದಿನ ಮದ್ರಾಸ್ ಪ್ರೆಸಿಡೆನ್ಸಿಯ ಲಾರ್ಡ್ ಜಾನ್ ಹೋಪ್  ಉದ್ಘಾಟಿಸಿದರು. ನಂತರದ ದಿನಗಳಲ್ಲಿ ಇಲ್ಲಿ ಐದು ದೀಪದ ಕಂಬಗಳನ್ನು ನೆಟ್ಟು, ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ನಂತರ ಸುತ್ತಲೂ ಉದ್ಯಾನವನವನ್ನು ನಿರ್ಮಿಸಲಾಯಿತು.

೧೯೬೫ರವರೆಗೆ “ಇನಾಯತುಲ್ಲಾ ಮೆಹ್ಕ್ರಿ ಸ್ಕ್ವಾರ್” ಆಗಿದ್ದ ಈ ವೃತ್ತ ೧೯೬೫ರ ಗೆಜೆಟೆಡ್ ನೋಟಿಫಿಕೇಶನ್ ಮೂಲಕ “ಇನಾಯತುಲ್ಲಾ ಮೆಹ್ಕ್ರಿ ವೃತ್ತ”ವಾಗಿ ಮರುನಾಮಕರಣ ಪಡೆಯಿತು, ಮೆಹ್ಕ್ರಿ ಜನರ ಬಾಯಲ್ಲಿ ಮೇಖ್ರಿಯಾಗಿ ಪರಿವರ್ತನೆಗೊಂಡಿದೆ.


ಜಯಮಹಲ್‌ನಿಂದ ವಿಂಡ್ಸರ್ ಮ್ಯಾನರ್ ಕಡೆಗೆ ಹೋಗುವ ರಸ್ತೆಯಲ್ಲಿ ಎಡಭಾಗಕ್ಕಿರುವ ಅರಮನೆ ಮೈದಾನದ ಗೋಡೆಯಲ್ಲಿ “ಇನಾಯತುಲ್ಲಾ ಮೆಹ್ಕ್ರಿ ಸ್ಕ್ವಾರ್” ಎಂದು ಕೆತ್ತಿದ ನಾಮಫಲಕ ಕಾಣಬಹುದು. ಇಂದು ಅಲ್ಲಿ ಕೆಳ ಸೇತುವೆ ನಿರ್ಮಾಣ ಮಾಡಲಾಗಿದೆ. ಕೆಂಪೇಗೌಡರು ಸ್ಥಾಪಿಸಿದ ಗೋಪುರ ಕೂಡ ಇರುವುದು ಇಲ್ಲಿನ ಸಮೀಪವೇ.

ಆದಾರಗಳು

[ಬದಲಾಯಿಸಿ]

https://www.youtube.com/watch?v=yxSoKVTKkyU

https://www.youtube.com/watch?v=u5SDLuEWafo

https://economictimes.indiatimes.com/magazines/panache/date-with-history-a-familys-journey-from-medina-to-mysore-kingdom/articleshow/52024450.cms

https://www.deccanherald.com/content/245419/diamond-jubilee-glory-mehkri-circle.html

  1. https://economictimes.indiatimes.com/magazines/panache/date-with-history-a-familys-journey-from-medina-to-mysore-kingdom/articleshow/52024450.cms