ವಿಷಯಕ್ಕೆ ಹೋಗು

ಸದಸ್ಯ:AMBARESH S

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಾರಟಗಿ ಪುಷ್ಕರಣಿ

ಈ ನಮ್ಮ ಕಾರಟಗಿ ಭಾಗವನ್ನು ಮೌರ್ಯರು, ಚಾಲುಕ್ಯರು, ನಿಜಾಮರು ,ಮುಂತಾದವರು ಆಳಿ ತನ್ನದೇ ಆದ ಕೊಡುಗೆಯನ್ನು ನೀಡಿದ್ದಾರೆ. ಅವುಗಳಲ್ಲಿ ಈ ಪುಷ್ಕರಣಿ ಸಹ ಒಂದಾಗಿದೆ. ಈ ಪುಷ್ಕರಣಿಯನ್ನು ಕಲ್ಯಾಣಿ ಚಾಲುಕ್ಯರ ಕಾಲದ ಅರಸನಾದ ಸುಂಕಲಿ ವೀರಪ್ಪ ದೊರೆ ನಿರ್ಮಿಸಿದನು. ಈ ಪುಷ್ಕರಣಿ ವಿಶಿಷ್ಟ ವಿನ್ಯಾಸದಿಂದ ರಚಿತವಾಗಿದೆ .ಮೆಟ್ಟಿಲುಗಳು ಮತ್ತು ಕಲ್ಲಿನ ಸಾಲಿಮಂಟಪಗಳು ಕೆತ್ತಿಲಾದ ಉಬ್ಬು ಶಿಲ್ಪಗಳಲ್ಲಿ ನಾಗರ, ವಾನರ, ನಂದಿ , ಪಾರಿವಾಳ, ಕೈಗೆತ್ತಿ ಮುಂತಾದ ಉಬ್ಬು ಶಿಲ್ಪಗಳು ಕಾಣಬಹುದಾಗಿದೆ. ಈ ಪುಷ್ಕರಣಿಯನ್ನ ನಮ್ಮ ಪೂರ್ವಜರು 'ಮಹದೇಶ್ವರ ಹೋಂಡ' ಎಂದು ಕರೆಯುತ್ತಿದ್ದರು ಇದರಲ್ಲಿ ಒಂದು ಮಠವಿತ್ತು ; ಇಲ್ಲಿ ಅಮರ ಶಿಲ್ಪಿ ಜಕಣಾಚಾರಿ ಕಾಲದಲ್ಲಿ ವಿದ್ಯಾ ಬೋಧನೆಯಲ್ಲಿ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ . ನಮ್ಮ ಭಾಗದ ಐತಿಹಾಸಿಕ ಕೊಡುಗೆಗಳಲ್ಲಿ ಇದು ಸಹ ಒಂದಾಗಿದೆ .