ಸದಸ್ಯ:2430921 Deepa S
ಹೆಜ್ಜೆಮೇಳ
ಕರ್ನಾಟಕದ ಭೂಮಿಯು ತನ್ನ ವೈವಿಧ್ಯಮಾಯ ಬೌಗೋಳಿಕತೆ, ಬಾಷಾ ಸಂಸ್ಕೃತಿ ಮತ್ತು ಪಾರಂಪರೆಗಳಿಂದ ಶ್ರೀಮಂತವಾಗಿದೆ. ಪಶ್ಚಿಮ ಘಟ್ಟಗಳ ಹಸಿರು ಕಾಡುಗಳು, ಬಳ್ಳಾರಿ ಕಣಿವೆಗಳ ಬೂದು ಬೇವಣಿಗಳು, ತುಂಗಭದ್ರಾ ಕಾವೇರಿ ನದಿಗಳ ಪವಿತ್ರ ತಟಗಳು, ಇವೆಲ್ಲವೂ ಈ ನಾಡಿನ ಜೀವಾಳವನ್ನು ರೂಪಿಸುತ್ತವೆ(What Is India, n.d). ಇಂತಹ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಶ್ರೀಮಂತಕೆಯ ನೆಲೆಯಲ್ಲಿ ಹುಟ್ಟಿಬಂದಿರುವುದೇ ಜಾನಪದ ಕಲೆಗಳು. ಜಾನಪದ ಕಲೆಗಳು ಕನ್ನಡಿಗರ ಜನಜೀವ ಬದುಕನು ನೃತ್ಯದ ಮೂಲಕ ಪ್ರದರ್ಶಿಸುತದೆ. ಜಾನಪದ ನೃತ್ಯಗಳು ಸಾಮಾನ್ಯವಾಗಿ ಹಬ್ಬ, ಹುಣ್ಣಿಮೆ, ಕೃಷಿಕರ್ಮ ಇಂತಹ ಸಂಭ್ರಮಗಳಲ್ಲಿ ಅಥವಾ ಧಾರ್ಮಿಕ ಆಚರಣೆಗಳಲ್ಲಿ ಜಾರಿಗೊಳ್ಳುತವೆ(India Forums, n.d). ಉಧಾ: ಡೋಲ್ಲು ಕುಣಿತ, ವೀರಗಾಸೆ, ಪೂಜಾ ಕುಣಿತ, ಭೂತಕೋಲ, ಯಕ್ಷಗಾನ, ಗಾರುಡಿ ಗೊಂಬೆ ಇತ್ಯದಿ. ಇವೆಲ್ಲವು ಪುರಾಣ ಕಥೆಗಳನ್ನು ನೃತ್ಯದ ಮೂಲಕ ತೋರಿಸುತ್ತವೆ, ಈ ನೃತ್ಯಗಳು ಕೇವಲ ಮನೋರಂಗನೆಗಾಗಿ ಅಲ್ಲ ಇವು ಜನರ ಜನಜೀವನಶೈಲಿ, ಭಾವನೆಗಳು ಮತ್ತು ಪಾಠಗಳ ಮುಖ್ಯ ಮೌಲ್ಯನ್ನುಮುಂದಿನ ತಲೆಮಾರಿಗೆ ಸಾಗಿಸುವ ಶಕ್ತಿಯುತ ಮಾಧ್ಯಮಗಳಾಗಿವೆ. ಇವೆಲ್ಲವೂ ಓರಲ್ ಟ್ರಡಿಷನ್ ಮೂಲಕ ಪೀಳಿಗೆಯಿಂದ ಪೀಳಿಗೆಗೆ ಸಾಗಿಸುವ ಮೂಲಕ ಇತಿಹಾಸವನ್ನು ಜೀವಂತವಾಗಿಡಲು ಸಾಧ್ಯವಾಗುತದೆ . ಇಂಧಿನ ಶತಮಾನಕ್ಕೂ ಅದರ ಮುಖ್ಯತ್ವವನ್ನು ತೋರುತ್ತದೆ, ಉಧಾ: ದೈವತಪೂಜಾ ಪದ್ಧತಿಗಳು, ಸ್ಥಳೀಯ ಕಥೆಗಥೆಗಳು, ಹೋರಾಟಗಳ ಐತಿಹಾಸಿಕ ಸ್ಮೃತಿಗಳು. ಇವುಗಳಿಂದ ಕೇವಲ ಕಲೆಗಳಲ್ಲ,ಈ ನಾಡಿನ ಆತ್ಮವನ್ನು ಇವು ಬಹು ಸ್ಪಷ್ಟವಾಗಿ ಪ್ರಧರ್ಶನಗೊಳಿಸಲಾಗುತದೆ.ಹೀಗೆ ಕರ್ನಾಟಕ ಎನ್ನುವ ಶ್ರೀಮಂತ ಭೂಮಿಯು ಅದರ ವೈವಿಧ್ಯ ಕಲೆಗಳಿಂದ ಜನರ ಮನಸಿನಲ್ಲಿ ಆನಂಧ ಹಾಗು ಬಹುತೇಕ ಮೌಲ್ಯಗಳನ್ನ ಹಂಚುತದೆ .
ಇತಿಹಾಸ ಮತ್ತು ಉದ್ಭವ
ಕರ್ನಾಟಕದ ಜಾನಪದ ಪರಂಪರೆ ತನ್ನ ವೈವಿಧ್ಯಮಯ ನೃತ್ಯ ಹಾಗೂ ಸಂಗೀತ ರೂಪಗಳಿಂದ ಖ್ಯಾತವಾಗಿದೆ. ಈ ನಾಡಿನಲ್ಲಿ ಹುಟ್ಟಿದ ‘ಹೆಜ್ಜೆಮೇಳ’ ಎಂಬ ವಿಶಿಷ್ಟ ನೃತ್ಯಪ್ರಕಾರ, ಕೇವಲ ಶೈಲಿಯಲ್ಲಿ ಮಾತ್ರವಲ್ಲ, ತನ್ನ ಸಾರಥ್ಯದಲ್ಲಿಯೂ ವಿಶೇಷವಾದದ್ದು(Web India, 2024). ಇದು ಉನ್ನತ ಶೈಲಿಯ ಕೋಮು ಸಾಮರಸ್ಯವನ್ನು ಪ್ರತಿಬಿಂಬಿಸುವಂತಹ ನೃತ್ಯವಾಗಿದ್ದು, ಹೀಗಾಗಿ ಅದು ಕಲಾತ್ಮಕ ಮೌಲ್ಯಗಳ ಪಕ್ಕದಲ್ಲಿ ಮಾನವೀಯ ಮೌಲ್ಯಗಳ ಪ್ರತಿರೂಪವೂ ಆಗಿದೆ(Web India, 2024).
ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿಯೂ, ವಿಶೇಷವಾಗಿ ಬೀದರ್ ಮತ್ತು ರಾಯಚೂರು ಪ್ರದೇಶಗಳಲ್ಲಿ ಹೆಜ್ಜೆಮೇಳ ಪ್ರಸಿದ್ಧವಾಗಿದೆ. ಬಹುಮಾನ್ಯ ಸಂಗತಿಯಾದ್ದು ಏನೆಂದರೆ, ಇದು ಇಸ್ಲಾಮೀಯ ‘ಮೊಹರಂ’ ಹಬ್ಬದ ಆಚರಣೆ ವೇಳೆ ನಡೆಯುವ ನೃತ್ಯವಾಗಿದ್ದರೂ, ಇದರಲ್ಲಿ ಭಾಗವಹಿಸುವ ಕಲಾವಿದರ ಹೆಚ್ಚಿನವು ಹಿಂದೂ ಸಮುದಾಯದವರು. ಇವು ಧಾರ್ಮಿಕ ಆಚರಣೆಗಳನು ಮೀರಿ, ಸಮುದಾಯಬದ್ಧತೆ ಹಾಗೂ ಪರಸ್ಪರ ಗೌರವದ ಸಂಕೇತವಾಗಿ ಬೆಳೆಯುತ್ತಿವೆ. ಭಾರತದ ಇತಿಹಾಸದಲ್ಲಿ ಹಿಂದೂ-ಮುಸ್ಲಿಂ ಸ್ನೇಹ ಸಂಬಂಧಗಳೆಷ್ಟು ಎತ್ತರಕ್ಕೇರಿದೆಯೆಂಬುದಕ್ಕೆ ಹೆಜ್ಜೆಮೇಳ ಒಂದು ಜೀವಂತ ಸಾಕ್ಷಿಯಾಗಿಯೇ ಕಾಣಿಸುತ್ತದೆ(KannadaJaanapada.blogspot.com, 2014).
ಹೆಜ್ಜೆಮೇಳದ ನೃತ್ಯ ವೈಶಿಷ್ಟ್ಯವೆಂದರೆ, ಇದು ಸಮಸಂಖ್ಯೆಯ (ಸಾಮಾನ್ಯವಾಗಿ ಜೋಡಿಗಳ) ಕಲಾವಿದರು ಭಾಗವಹಿಸುವ ರೂಪ. ನೃತ್ಯಕ್ಕೆ ತಕ್ಕಂತೆ ಕಲಾವಿದರು ಬಿಳಿ ಅಂಗಿ, ಬಿಳಿ ಪಂಚೆ, ಮಧ್ಯದಲ್ಲಿ ಕಪ್ಪು ನಡುಪಟ್ಟಿ, ತಲೆಯ ಮೇಲೆ ರುಮಾಲು ಧರಿಸುತ್ತಾರೆ. ವಿಶೇಷವಾಗಿ ಅವರು ತಮ್ಮ ಬಲಗಾಲಿಗೆ ಮಾತ್ರ ಗೆಜ್ಜೆ ಕಟ್ಟಿ, ಬಲಗೈಯಲ್ಲಿ ಕೋಲು ಹಿಡಿದು ನೃತ್ಯದಲ್ಲಿ ತೊಡಗುತ್ತಾರೆ. ಎಡಗೈಯಲ್ಲಿ ಬಣ್ಣದ ಕರವಸ್ತ್ರ, ಕೆಲವೊಂದು ಸ್ಥಳಗಳಲ್ಲಿ ಎರಡು ಕೈಗಳಲ್ಲಿಯೂ ಕರವಸ್ತ್ರವೇ ಇರುತ್ತದೆ. ಇದು ನೃತ್ಯದ ಭಾವ ಮತ್ತು ವೈಶಿಷ್ಟ್ಯತೆಯನ್ನು ಹೆಚ್ಚಿಸುತ್ತದೆ.
ನೃತ್ಯಕ್ರಮದಲ್ಲಿ ಅನೇಕ ಹೆಜ್ಜೆ ಪ್ರಕಾರಗಳು ಕಂಡುಬರುತ್ತವೆ ಒಂದೆಜ್ಜೆ, ಎರಡೆಜ್ಜೆ, ಸಾದಾ ಹೆಜ್ಜೆ, ಸುತ್ತು ಕೋಲು ಹೆಜ್ಜೆ ಇತ್ಯಾದಿ. ಪ್ರತಿಯೊಂದು ಪ್ರಕಾರವೂ ತಾನೇ ಅನನ್ಯವಾಗಿದ್ದು, ಸಂಗೀತ ವಾದ್ಯಗಳಾದ ಹಲಗೆ, ದಿಮ್ಮು, ಜಣಿ, ಸನಾದಿಗಳ ತಾಳಕ್ಕೆ ತಕ್ಕಂತೆ ಇಬ್ಬಿಬ್ಬರು ಜೋಡಿಗಳಾಗಿ ಹೆಜ್ಜೆ ಹಾಕುತ್ತಾರೆ(Web India, 2024). ಈ ಜೋಡಿಗಳು ಮುಖಾಮುಖಿಯಾಗಿ ಕುಣಿದು, ಕೈಯಲ್ಲಿ ಹಿಡಿದ ಕರವಸ್ತ್ರವನ್ನು ಕೆಳಗೆ ಬೀಸುತ್ತ, ಕೋಲುಗಳನ್ನು ಚಕ್ರಾಕಾರವಾಗಿ ತಿರುಗಿಸುವ ಮೂಲಕ ನೃತ್ಯದ ಆಕರ್ಷಕತೆ ಹೆಚ್ಚಿಸುತ್ತಾರೆ. ನೃತ್ಯ ಕ್ರಮವು ಸಂಯೋಜಿತವಾಗಿ ಮುಂದುವರಿಯುತ್ತಿದ್ದು, ಸೊಂಟದ ಬಳಕೆ, ಮುಖಾಭಿನಯ, ಕಾಲಿನ ಕ್ರಮ ಇವು ಎಲ್ಲವೂ ಹೆಜ್ಜೆಮೇಳದ ಶೈಲಿಯನ್ನು ವಿಶಿಷ್ಟಗೊಳಿಸುತ್ತವೆ(KannadaJaanapada.blogspot.com, 2014).
ಹೆಜ್ಜೆಮೇಳದ ಅತ್ಯಂತ ಚುರುಕಾದ ಭಾಗವೆಂದರೆ ‘ಬೈಸಾಕೆ’. ಇಲ್ಲಿ ನಾಲ್ಕು ಜನರ ಗುಂಪು ಕಾರ್ಯನಿರ್ವಹಿಸುತ್ತವೆ. ಇಬ್ಬರು ನಿಂತ ಸ್ಥಿತಿಯಿಂದ ಹೆಜ್ಜೆ ಹಾಕುತ್ತ ಕೈಚಲನೆ ಮೂಲಕ ಆರಂಭಿಸಿ, ನಂತರ ಇಬ್ಬರು ಕುಳಿತುಕೊಳ್ಳುತ್ತಾರೆ ಮತ್ತು ಉಳಿದ ಇಬ್ಬರು ಅವರ ಮೇಲಿಂದ ಜಿಗಿಯುತ್ತಾರೆ. ಈ ಜಿಗಿತದ ನಂತರ ಕುಳಿತವರು ಎದ್ದು, ಜಿಗಿದವರ ಮೇಲೆ ಮತ್ತೆ ಜಿಗಿಯುವ ಮೂಲಕ ನೃತ್ಯದಲ್ಲಿ ಉತ್ಸಾಹದ ಬಾಣ ಬೆಳಗಿಸಲಾಗುತ್ತದೆ. ಇಂತಹ ಜಿಗಿತದ ನಾಟ್ಯರೂಪ, ಶಕ್ತಿಯುಳ್ಳ ಸಾಮರಸ್ಯ ಹಾಗೂ ಸಮಯ ಜ್ಞಾನದ ಪ್ರೌಢತೆಯನ್ನು ತೋರಿಸುತ್ತದೆ.
ಇನ್ನೊಂದು ವಿಭಿನ್ನ ಶೈಲಿ ‘ಸುತ್ತು ಕೋಲು ಹೆಜ್ಜೆ’. ಈ ಶೈಲಿಯಲ್ಲಿ ಕಲಾವಿದರು ತಮ್ಮ ಬಲಗೈಯಲ್ಲಿ ಹಿಡಿದ ಕೋಲುಗಳನ್ನು ತಿರುಗಿಸುತ್ತಾ, ಅನೇಕ ಬಾರಿ ಪರಸ್ಪರರ ಕೋಲುಗಳಿಗೆ ಸಣ್ಣ ತಾಕಿದ ನಾದದೊಂದಿಗೆ ಹೆಜ್ಜೆ ಹಾಕುತ್ತಾರೆ. ಕೆಲವು ಸಂದರ್ಭಗಳಲ್ಲಿ ಕಲಾವಿದರು ಎರಡು ಸಾಲುಗಳಲ್ಲಿ ನಿಂತು ಹಗ್ಗವನ್ನು ಹಿಡಿದು ಜಡೆ ಹಣೆಹಾಕುವಂತೆ ಹೆಜ್ಜೆ ಹಾಕುತ್ತಾರೆ. ಈ ಹಗ್ಗ ಮೇಲ್ಮಟ್ಟದಲ್ಲಿ ಕಟ್ಟಲಾಗದೆ, ಸಾಲಿನಲ್ಲಿ ಮೊದಲಿಗೆ ನಿಂತ ಇಬ್ಬರು ಕೇವಲ ಹಿಡಿದಿರುತ್ತಾರೆ. ಉಳಿದವರು ಹೆಜ್ಜೆಗೆ ತಕ್ಕಂತೆ ಮುಂದುವರೆಯುತ್ತಾರೆ. ಹೀಗೆ ಹೆಣೆದ ಜಡೆಯನ್ನು ನಂತರ ಪುನಃ ಬಿಚ್ಚುವುದರಿಂದ ನೃತ್ಯದ ಶೈಲಿಗೆ ಚಲನ ಮತ್ತು ಶ್ರದ್ಧೆ ಎರಡೂಂಟಾಗುತ್ತದೆ.
ಅತ್ಯಂತ ಅಪರೂಪದ, ಆದರೆ ಗಂಭೀರವಾದ ರೂಪವೆಂದರೆ ‘ಮುಳ್ಳಿನ ಹೆಜ್ಜೆಮೇಳ’. ಇಲ್ಲಿ ಕಲಾವಿದರು ಕ್ಯಾಕ್ಟಸ್ ಸಸ್ಯದ ಮುಳ್ಳುಗಳುಳ್ಳ ಕೋಲುಗಳನ್ನು ಎರಡು ಸಾಲುಗಳ ಮಧ್ಯೆ ಇಡಲಾಗುತ್ತದೆ. ಈ ಮುಳ್ಳುಗಳಿಗೆ ತಾಕಿಸದೇ ಹೆಜ್ಜೆ ಹಾಕುವ ಕಲಾವಿದರು ತಾವು ಪ್ರದರ್ಶಿಸುವ ನೃತ್ಯವಲ್ಲದೇ ಬದುಕಿನ ಸಂದೇಶವನ್ನೂ ಸಾರುತ್ತಾರೆ. ಈ ಶೈಲಿಯೆಂದರೆ ಬದುಕಿನಲ್ಲಿ ಎದುರಾಗುವ ಕಷ್ಟ, ಆಮಿಷಗಳು ಮುಳ್ಳಿನಂತೆ ಇದ್ದರೂ ಅದರಿಂದ ತಪ್ಪಿಸಿಕೊಳ್ಳುವ ಎಚ್ಚರತೆಯಿಂದ ಸಾಗಬೇಕು ಎಂಬುದನ್ನು ತೋರಿಸುತ್ತದೆ. ಇಂತಹ ದಾರಿಯಲ್ಲಿ ಹೆಜ್ಜೆ ಹಾಕುವುದು ಕೇವಲ ಶಾರದೀಯ ಕೌಶಲ್ಯವಲ್ಲ, ಜೀವನ ಶೈಲಿಯ ಪ್ರತಿರೂಪವೂ ಹೌದು.
ಇಲ್ಲಿಯವರೆಗೆ ಹೆಜ್ಜೆಮೇಳದ ನೃತ್ಯ ವೈಶಿಷ್ಟ್ಯ, ಸಾಂಸ್ಕೃತಿಕ ಹಿನ್ನೆಲೆ, ಧಾರ್ಮಿಕ ಭಾಷ್ಯ ಎಲ್ಲವನ್ನೂ ನೋಡಿ ಅರ್ಥವಾಗುವುದು ಏನೆಂದರೆ, ಈ ನೃತ್ಯ ಕೇವಲ ಕಲಾತ್ಮಕ ನೈಪುಣ್ಯದ ಪ್ರತಿಫಲವಲ್ಲ; ಇದು ಕೋಮು ಸಾಮರಸ್ಯದ ಪ್ರತಿರೂಪ(KannadaJaanapada.blogspot.com, 2014). ಮೊಹರಂ ಹಬ್ಬದ ಸಂದರ್ಭ, ಇದು ಕೇವಲ ಮುಸ್ಲಿಂ ಸಮುದಾಯಕ್ಕೆ ಸೀಮಿತವಲ್ಲದಂತೆ ರೂಪುಗೊಂಡಿದೆ. ಇದನ್ನು ಮುಸ್ಲಿಮೇತರರು, ವಿಶೇಷವಾಗಿ ಹಿಂದೂಗಳು ಪ್ರೀತಿಯಿಂದ ಪಾಲ್ಗೊಳ್ಳುವುದು, ಈ ನೃತ್ಯದ ಪ್ರಾಮುಖ್ಯತೆಯೆಷ್ಟೋ ಹತ್ತಿರದಿಂದ ಅರಿಯಿಸುತ್ತದೆ.
ಬಹುಶಃ ಕೋಮು ಸಾಮರಸ್ಯ ಎಂಬುದೂ ಒಂದು ಮುಳ್ಳಿನ ದಾರಿಯೇ ಅದರಲ್ಲಿ ನಡೆಯಬೇಕಾದರೆ ಎಚ್ಚರ ಮತ್ತು ಸಹನಶೀಲತೆ ಅಗತ್ಯ. ಹೆಜ್ಜೆಮೇಳ ಈ ಸಂದೇಶವನ್ನೇ ಶ್ರದ್ಧಾ, ಶಕ್ತಿ ಮತ್ತು ಶಿಸ್ತಿನಿಂದ ಸಾರುತ್ತಾ ನಾಟಕೀಯವಾಗಿ ಆಚರಿಸುತ್ತಿದೆ. ಈ ನೃತ್ಯ, ಕೇವಲ ಹಳೆಯ ಪರಂಪರೆಯ ಸ್ಮೃತಿ ಮಾತ್ರವಲ್ಲ; ಅದು ಇಂದಿನ ಸಮಾಜಕ್ಕೂ ಮಾರ್ಗದರ್ಶನ ನೀಡಬಲ್ಲ ಕಲಾತ್ಮಕ ಸಾಧನವಾಗಿದೆ.
ಸಾಮಾಜಿಕ ಮತ್ತು ಸಾಂಸ್ಕೃತಿಕ ಪ್ರಭಾವ
ಹೆಜ್ಜೆಮೇಳ ಎಂಬ ಜಾನಪದ ನೃತ್ಯ, ಕೇವಲ ಕಲೆ ಅಥವಾ ಆಚರಣೆಯ ಮಟ್ಟಕ್ಕೆ ಸೀಮಿತವಿಲ್ಲ. ಇದು ಸಾಮಾಜಿಕ ಬಂಧನೆ, ಸಾಂಸ್ಕೃತಿಕ ಪರಸ್ಪರತೆ, ಮತ್ತು ಮಾನವೀಯ ಮೌಲ್ಯಗಳ ಪ್ರತಿರೂಪವನ್ನಾಗಿ ಪರಿಣಮಿಸಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಗ್ರಾಮೀಣ ಬದುಕಿನಲ್ಲಿ, ಈ ನೃತ್ಯ ಶೈಲಿಯು ಸಮಾಜದ ವಿವಿಧ ಅಂಶಗಳ ಮೇಲೆ ನಿರಂತರವಾಗಿ ಪರಿಣಾಮ ಬೀರುತ್ತಾ ಬಂದಿದೆ.
ಕೋಮು ಸಾಮರಸ್ಯದ ಜೀವಂತ ಉದಾಹರಣೆ
[ಬದಲಾಯಿಸಿ]ಅತೀಮುಖ್ಯವಾಗಿ ಹೆಜ್ಜೆಮೇಳವು ಧರ್ಮ-ಜಾತಿ ಮೀರಿ ಜನರನ್ನು ಒಗ್ಗೂಡಿಸುವ ಕಲೆಯಾಗಿದೆ. ಇಸ್ಲಾಮೀಯ ಪವಿತ್ರ ತಿಥಿಯಾದ ಮೊಹರಂ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ನೃತ್ಯವನ್ನು ನಟನೆ ಮಾಡುವವರು ಬಹುತೇಕ ಹಿಂದೂ ಸಮುದಾಯದವರು ಎಂಬುದೇ ವಿಶೇಷ (India Forums, n.d). ಇದು ಭಾರತದಲ್ಲಿ ಧರ್ಮಗಳ ನಡುವಿನ ಸಹಭಾವನೆ, ಗೌರವ ಮತ್ತು ಪರಸ್ಪರ ಒಡನಾಟವನ್ನು ಬಿಂಬಿಸುವ ಅತ್ಯಂತ ಪ್ರಬಲ ಮಾದರಿಯಾಗಿದೆ. ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಇತಿಹಾಸಪೂರಿತ ಸಹವಾಸವನ್ನು ನೆನಪಿಸುವಂತೆ, ಹೆಜ್ಜೆಮೇಳವು ಒಂದೇ ವೇದಿಕೆಯಲ್ಲಿ ಎರಡು ಧರ್ಮಗಳ ಮೌಲ್ಯಗಳನ್ನು ಸಂಯೋಜಿಸುತ್ತದೆ. ಈ ನೃತ್ಯ ಶೈಲಿ, ಧಾರ್ಮಿಕ ಆಚರಣೆಯ ಸಮಯದಲ್ಲಿಯೂ ಸಹ, ಎಲ್ಲರಿಗೂ ಸೇರಿರುವ ಜಾನಪದ ಪರಂಪರೆಯಾಗಿ ಬೆಳೆಯುತ್ತಿದೆ. ಈ ಮೂಲಕ ಇದು ನೃತ್ಯದಿಂದ ಹೆಚ್ಚಾಗಿ ಸಾಮಾಜಿಕ ಸಂದೇಶವನ್ನೇ ನೀಡುತ್ತಿದೆ “ಭಿನ್ನತೆಯಲ್ಲಿ ಏಕತೆಯೇ ನಮ್ಮ ಶಕ್ತಿ.”
ಗ್ರಾಮೀಣ ಸಮಾಜದಲ್ಲಿ ಒಗ್ಗೂಡುವ ಶಕ್ತಿಯು
[ಬದಲಾಯಿಸಿ]ಹೆಜ್ಜೆಮೇಳವು ಒಂದು ಗ್ರಾಮ ಅಥವಾ ಸಮುದಾಯದ ಎಲ್ಲಾ ವರ್ಗಗಳ ಜನರನ್ನು ಒಂದೇ ವೇದಿಕೆಯಲ್ಲಿ ಒಟ್ಟುಗೂಡಿಸುತ್ತದೆ(Story of Kannada, 2008). ಈ ನೃತ್ಯದ ಮೇಳಾವಳಿಯಲ್ಲಿ ಪಾಲ್ಗೊಳ್ಳುವುದು, ಕೇವಲ ಕಲಾವಿದರಿಗಷ್ಟೆ ಅಲ್ಲ, ಎಲ್ಲಾ ಗ್ರಾಮಸ್ಥರಿಗೂ ಒಂದು ಸಾಮೂಹಿಕ ಮೆರವಣಿಗೆಯ ಅನುಭವವಾಗಿದೆ. ತಯಾರಿ ಕಾರ್ಯಗಳಲ್ಲಿ ಯುವಕರು, ಮಹಿಳೆಯರು, ಹಿರಿಯರು ಎಲ್ಲರೂ ಭಾಗವಹಿಸುತ್ತಾರೆ. ಇದರಿಂದಾಗಿ, ಈ ನೃತ್ಯವು ಸಮುದಾಯದ ಏಕತೆ, ಸಹಕಾರ ಮತ್ತು ಶ್ರಮಭಾಜನೆ ಎಂಬ ಮೌಲ್ಯಗಳನ್ನು ಬೆಳೆಸುತ್ತದೆ. ಇಂದಿನ ವಿಪರೀತ ವೈಯಕ್ತಿಕತೆಯ ಯುಗದಲ್ಲಿ ಈ ಶಕ್ತಿ ಅಪರೂಪದದ್ದಾಗಿದ್ದು, ಜಾನಪದ ಕಲೆಯ ಮೂಲ ಬಲವೆಂದರೆ ಜನರ ನಡುವೆ ಬಲವಾದ ಭಾವನಾತ್ಮಕ ಸಂಪರ್ಕವನ್ನು ರೂಪಿಸುವುದು ಎಂಬುದನ್ನು ನೆನಪಿಸುತ್ತದೆ.
ಸಾಂಸ್ಕೃತಿಕ ಪೈಪೋಟಿಯಲ್ಲಿ ಅಪೂರ್ವ ಶೈಲಿಯ ಮೌಲ್ಯ
[ಬದಲಾಯಿಸಿ]ಹೆಜ್ಜೆಮೇಳವು ನೃತ್ಯಕಲೆ ಮಾತ್ರವಲ್ಲ. ಅದು ಸಾಂಸ್ಕೃತಿಕ ಪಾಠಗಳೊಂದಿಗೆ ಕೂಡಿರುವ ಅತ್ಯಂತ ಪ್ರಬಲ ಮಾಧ್ಯಮವಾಗಿದೆ. ನೃತ್ಯದ ಎಲ್ಲ ಪ್ರಕಾರಗಳು ಬೈಸಾಕೆ, ಸುತ್ತು ಕೋಲು, ಮುಳ್ಳಿನ ಹೆಜ್ಜೆ ಇವು ಬೇರೆಯದೇ ಸಾಂಸ್ಕೃತಿಕ ಸನ್ನಿವೇಶಗಳನ್ನು ಬಿಂಬಿಸುತ್ತವೆ. ಪ್ರತಿ ಹಂತವೂ ಬದುಕಿನ ಪಾಠವನ್ನು ಕಲಿಸುತ್ತಾ, ನೃತ್ಯದ ಮೂಲಕ ಜೀವನತತ್ತ್ವಗಳನ್ನೇ ಪ್ರಸ್ತಾಪಿಸುತ್ತ. ಹೆಜ್ಜೆಮೇಳದಲ್ಲಿ ಕಂಡುಬರುವ ಸೌಂದರ್ಯ, ಶಿಸ್ತು, ಶಕ್ತಿ ಮತ್ತು ಸಮಯಜ್ಞಾನ ಜನಪದ ಜ್ಞಾನ. ಇದನ್ನು ನೋಡುವುದು ಕೇವಲ ಮನರಂಜನೆಯ ಮೂಲಕವಲ್ಲ, ಒಂದು ಸಂಸ್ಕೃತಿಯೊಳಗಿನ ಬುದ್ಧಿವಂತಿಕೆ, ಸಾಮಾಜಿಕ ಸಂಕೇತ ಮತ್ತು ಮಾನವೀಯತೆಯ ಚಿತ್ರಣವಾಗಿ ಗ್ರಹಿಸಬೇಕು.
ಮೌಖಿಕ ಪರಂಪರೆ ಮತ್ತು ತಲೆಮಾರುಗಳಿಂದ ಪಾಠವಾಹನ
[ಬದಲಾಯಿಸಿ]ಇದು ಹಲವು ತಲೆಮಾರುಗಳಿಂದ ಮೌಖಿಕವಾಗಿ ಪಾಠವಾಹಿತವಾಗುತ್ತಿರುವ ಶೈಲಿಯಾಗಿದೆ. ಹಿರಿಯರು ತಮ್ಮ ಅನುಭವದ ಮೂಲಕ, ಬಾಲ್ಯದಿಂದಲೇ ಮಕ್ಕಳಿಗೆ ಹೆಜ್ಜೆಮೇಳದ ವ್ಯಾಖ್ಯಾನಗಳನ್ನು ಕಲಿಸುತ್ತಾರೆ (Kannada Janapada blogspot, 2014). ಹಾಡುಗಳ ಪಾಠ, ವಾದ್ಯಗಳ ನುಡಿಸು, ನೃತ್ಯದ ಕ್ರಮ ಇವೆಲ್ಲವೂ ಸಂಪ್ರದಾಯದಿಂದ ಮುಂದಕ್ಕೆ ಸಾಗುತ್ತವೆ. ಇದು ಗ್ರಾಮೀಣ ಜನಪದ ಪರಂಪರೆಯ ಜೀವಂತ ಜೀವಾಳವಾಗಿದೆ.ಇಂತಹ ಪಾಠವಾಹನದ ವಿಧಾನವು, ಆಧುನಿಕ ಶಿಕ್ಷಣ ವ್ಯವಸ್ಥೆಯ ಮಿತಿಗಳನ್ನು ಮೀರಿ, ಸಂಸ್ಕೃತಿ ಉಳಿವಿಗೆ ನೆರವಾಗುವ ಅತ್ಯಂತ ಶ್ರೇಷ್ಠ ಮಾದರಿಯಾಗಿದೆ. ಇದು ಜನಪದ ಕಲೆಯ ಅಜರಾಮರತೆಯನ್ನು ಸಾಧ್ಯವನ್ನಾಗಿ ಮಾಡುತ್ತದೆ.
ಅಪರೂಪದ ಶಿಸ್ತಿನ ಪ್ರತಿರೂಪ
[ಬದಲಾಯಿಸಿ]ಹೆಜ್ಜೆಮೇಳವನ್ನು ವೈಶಿಷ್ಟ್ಯಗೊಳಿಸುವ ಇನ್ನೊಂದು ಅಂಶವೆಂದರೆ ಶಿಸ್ತಿನ ನಿಯಂತ್ರಣ. ಹಲವಾರು ಪ್ರದರ್ಶನಗಳು, ತೀವ್ರ ಜಿಗಿತಗಳು, ಸಮಕಾಲಿಕ ಹೆಜ್ಜೆಗಳು ಇವೆಲ್ಲವೂ ಕಲಾವಿದರಿಂದ ಕಠಿಣ ನಿಯಂತ್ರಣ ಹಾಗೂ ಸಹಕಾರದ ಅಗತ್ಯವನ್ನು ತರುತ್ತವೆ. ಈ ಮೂಲಕ ಕಲಾವಿದರು ಕೇವಲ ಶಾರೀರಿಕ ಕೌಶಲ್ಯವಲ್ಲ, ಮಾನಸಿಕ ಶಿಸ್ತು, ಸಾಮೂಹಿಕ ಸಮಂಜಸ್ಯ ಮತ್ತು ಕರ್ತವ್ಯದ ಭಾವನೆಗಳನ್ನು ಅಭ್ಯಾಸಿಸುತ್ತಾರೆ. ಇದರಿಂದಾಗಿ ಈ ನೃತ್ಯವು ವೈಯಕ್ತಿಕ ವಿಕಾಸಕ್ಕೂ ಸಹ ಅನನ್ಯವಾದ ಸಾಧನವಾಗಿದೆ. ಪ್ರತಿ ಕಲಾವಿದನಿಗೆ ಇದು ಒಂದು ಆತ್ಮಶಾಸ್ತ್ರದ ಪಾಠವನ್ನೇ ನೀಡುತ್ತದೆ ನಾನೊಬ್ಬ ಕಲಾವಿದ ಮಾತ್ರವಲ್ಲ, ನಾನೊಂದು ಸಮುದಾಯದ ಪ್ರತಿನಿಧಿ. ಹೆಜ್ಜೆಗತಿ ಒಳ್ಳೆಯದಾದರೆ, ದಾರಿ ಎಷ್ಟು ಮುಗ್ಗರಿಸಿದರೂ ಮುನ್ನಡೆಯ ಬಹುದು.
ಸಂರಕ್ಷಣೆ ಮತ್ತು ಆಧುನೀಕರಣ
ಹೆಜ್ಜೆಮೇಳವು ತನ್ನ ವಿಶಿಷ್ಟ ಶೈಲಿ, ಭಾಷಾ ಸಂಯೋಜನೆ, ಕೋಮು ಸಾಮರಸ್ಯದ ಸಂಕೇತ ಮತ್ತು ಸಮುದಾಯದ ಸಾಂಸ್ಕೃತಿಕ ಹೆಜ್ಜೆಗಳೊಂದಿಗೆ, ಕರ್ನಾಟಕದ ಅಮೂಲ್ಯ ಜಾನಪದ ಸಂಪತ್ತಾಗಿ ಗುರುತಿಸಿಕೊಂಡಿದೆ. ಆದರೆ ಇಂದಿನ ಬದಲಾಗುತ್ತಿರುವ ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಪರಿಸರದಲ್ಲಿ, ಈ ನೃತ್ಯರೂಪಕ್ಕೆ ಹಲವು ಸವಾಲುಗಳು ಎದುರಾಗಿವೆ. ಹಾಗಾಗಿ, ಹೆಜ್ಜೆಮೇಳದ ಸಂರಕ್ಷಣೆ ಹಾಗೂ ಆಧುನೀಕರಣ ಅನಿವಾರ್ಯವಾಗಿದೆ.
ಪರಂಪರೆಯ ನಿರಂತರತೆಗೆ ಬೆಂಬಲ
[ಬದಲಾಯಿಸಿ]ಇದೊಂದು ಮೌಖಿಕ ಪರಂಪರೆ ಆಗಿರುವುದರಿಂದ, ಮುಂದಿನ ತಲೆಮಾರಿಗೆ ನೃತ್ಯಪ್ರಕ್ರಿಯೆಗಳ ಪಾಠವಾಹನ ಈಗ ಬಹುಶಃ ತೊಂದರೆಗೆ ಒಳಗಾಗಿದೆ. ಪುರಾತನ ಕಲಾವಿದರ ಸಂಖ್ಯೆ ಕುಗ್ಗುತ್ತಿದೆ ಮತ್ತು ಯುವ ಪೀಳಿಗೆ ಈ ಕಲೆಯ ಕುರಿತು ಆಸಕ್ತಿಯ ಕೊರತೆಯನ್ನು ತೋರಿಸುತ್ತಿದ್ದಾರೆ(News18, 2024). ಈ ಹಿನ್ನೆಲೆಯಲ್ಲಿ ಸರ್ಕಾರದ ಜಾನಪದ ಅಕಾಡೆಮಿಗಳು, ಸಂಸ್ಕೃತಿ ಇಲಾಖೆ, ಹಾಗೂ ತಾಣಿಕ ಸಂಶೋಧನಾ ಕೇಂದ್ರಗಳು ಸಹಕಾರ ನೀಡುವ ಅಗತ್ಯವಿದೆ.ಅಧಿಕೃತ ದಾಖಲೆ: ನೃತ್ಯದ ಶೈಲಿಗಳು, ಹಾಡುಗಳು, ವಾದ್ಯ ಶೈಲಿಗಳು, ಧ್ವನಿಚಿತ್ರಗಳು.
ಪಠ್ಯಕ್ರಮದಲ್ಲಿ ಸೇರಿಸುವುದು: ಶಾಲಾ-ಕಾಲೇಜುಗಳಲ್ಲಿ ಈ ನೃತ್ಯವನ್ನು ಪಾಠ್ಯ ವಿಷಯವಾಗಿ ಅಥವಾ ಕಾರ್ಯಾಗಾರ ರೂಪದಲ್ಲಿ ಪರಿಚಯಿಸುವುದು ಸಹ ಮೂಲದೃಷ್ಟಿಯಿಂದ ಉಪಯುಕ್ತ.
ಸ್ಥಳೀಯ ಮೇಳಗಳು: ಹೆಜ್ಜೆಮೇಳ ಪ್ರದರ್ಶನಗಳಿಗಾಗಿ ಜಿಲ್ಲಾ ಮಟ್ಟದ ಜಾನಪದ ಉತ್ಸವಗಳನ್ನು ಪ್ರೋತ್ಸಾಹಿಸುವುದು.
ಆಧುನೀಕರಣದ ಹೊಸ ದಾರಿ
[ಬದಲಾಯಿಸಿ]ಸಾಂಸ್ಕೃತಿಕ ಪರಂಪರೆಯು ಕೇವಲ ಹಳೆಯದನ್ನು ಉಳಿಸಿಕೊಳ್ಳಬೇಕೆಂಬ ಗುರಿಯಿಂದ ನಿರ್ವಹಿಸಲಾಗುವುದಿಲ್ಲ. ಅದು ಹೊಸ ಕಾಲದ ಮಟ್ಟಿಗೆ ಆಧುನೀಕರಿಸಲ್ಪಡಬೇಕಾಗಿದೆ, ಆದರೆ ತನ್ನ ಮೂಲಾತ್ಮಾವನ್ನು ಕಳೆದುಕೊಳ್ಳದೆ. ಹೆಜ್ಜೆಮೇಳವನ್ನು ಯುವಜನತೆಗೆ ಆಕರ್ಷಕಗೊಳಿಸಲು ಕೆಲವು ಕ್ರಮಗಳು ಅನಿವಾರ್ಯ:
ಸಾಮಾಜಿಕ ಮಾಧ್ಯಮಗಳು: ಹೆಜ್ಜೆಮೇಳದ ನೃತ್ಯ ವಿಡಿಯೋಗಳು, ಕಲಾವಿದರ ಸಂದರ್ಶನಗಳು, ಸಾಮಾಜಿಕ ಸಂದೇಶಗಳು ಇತ್ಯಾದಿಗಳನ್ನು ಯುಟ್ಯೂ ಬ್ , ಫೇಸ್ಬುಕ್, ಇನ್ಸ್ಟಾಗ್ರಾಮ್ ಮುಂತಾದವುಗಳಲ್ಲಿ ಹರಡುವುದು.
ಸಂಗೀತ ಸಂಯೋಜನೆ: ತಾಳ ಮತ್ತು ವಾದ್ಯ ಶೈಲಿಯನ್ನು ಸ್ವಲ್ಪ ಆಧುನಿಕ ಧ್ವನಿಯಲ್ಲಿ ರೂಪಿಸಿ, ನವೀನ ಸಂಗೀತ ಪ್ರಿಯರಿಗೆ ಪರಿಚಯಿಸುವುದು(Department of Kannada and Culture, n.d).
ಆಂತರರಾಷ್ಟ್ರೀಯ ವೇದಿಕೆ: ಹೆಜ್ಜೆಮೇಳವನ್ನು ಅಂತಾರಾಷ್ಟ್ರೀಯ ಜಾನಪದ ಉತ್ಸವಗಳಲ್ಲಿ ಪರಿಚಯಿಸಿ, ವಿಶ್ವದ ಗಮನ ಸೆಳೆಯುವ ಪ್ರಯತ್ನ.
ಆಧುನೀಕರಣವು ಪರಂಪರೆಯ ತಾತ್ವಿಕ ಮೌಲ್ಯಗಳನ್ನು ಕಾಪಾಡಿದರೆ ಮಾತ್ರ ಅದನ್ನು ನಿಜವಾದ ಬೆಳವಣಿಗೆ ಎನಿಸಬಹುದು.
ಉಪಸಂಹಾರ
ಹೆಜ್ಜೆಮೇಳ ಎಂಬ ನೃತ್ಯ ಶೈಲಿ ಕೇವಲ ಕಲಾ ಪ್ರದರ್ಶನವಲ್ಲ, ಅದು ಸಮಾಜದ ಸಂಸ್ಕೃತಿಯ, ಮತ್ತು ಮಾನವೀಯ ಸಂಬಂಧಗಳ ಜೀವಂತ ಪ್ರತಿರೂಪವಾಗಿದೆ. ಇದು ಉತ್ತರ ಕರ್ನಾಟಕದ ಮಣ್ಣಿನಲ್ಲಿ ಹುಟ್ಟಿ ಬೆಳೆದಿದ್ದು, ಅಲ್ಲಿ ನಡೆಯುವ ಜೀವದ ಬಡಿತ, ಸಂಸ್ಕೃತಿಯ ಶ್ವಾಸ ಮತ್ತು ಸಮುದಾಯದ ಏಕತೆ
ಇದರಲ್ಲಿರುವ ಧರ್ಮಾತೀತ ಭಾವನೆ, ಸಹಜ ಶಿಸ್ತಿನ ನೃತ್ಯ ಕ್ರಮ, ವಿವಿಧ ಶೈಲಿಯ ವೈವಿಧ್ಯತೆ, ಮತ್ತು ಬದುಕಿನ ಸತ್ಯಗಳ ಪ್ರತಿಫಲನೆ ಇವೆಲ್ಲವೂ ಹೆಜ್ಜೆಮೇಳವನ್ನು ಕರ್ನಾಟಕದ ಅತ್ಯಂತ ಪ್ರಮುಖ ಜಾನಪದ ನೃತ್ಯ ರೂಪಗಳಲ್ಲಿ ಒಂದಾಗಿ ಸ್ಥಾನಗೊಳಿಸುತ್ತವೆ(Web India, 2024).
ಇಂದಿನ ತಂತ್ರಜ್ಞಾನಮಯ ಯುಗದಲ್ಲಿ, ನಾವು ಈ ಶೈಲಿಯನ್ನು ಕೇವಲ ಸ್ಮೃತಿಗತ ಮಾಡುವಲ್ಲಿ ನಿರತರಾಗದೇ, ಅದರ ಜೀವಂತತೆಯನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ಪರಿಚಯಿಸಬೇಕಾಗಿದೆ. ಅದು ನಮ್ಮ ಹೊಣೆಗಾರಿಕೆಯ ಭಾಗ. ಹೆಜ್ಜೆಮೇಳ ನಮಗೆ ನೆನಪಿಸುವ ಸಂದೇಶ ಏನೆಂದರೆ:
"ಸಂಸ್ಕೃತಿಯ ಹೆಜ್ಜೆಗಳಲ್ಲಿ ಸಾಗಿದರೆ, ಸಮಾಜದ ದಾರಿಯೂ ಸಮತೋಲನವಾಗಿರುತ್ತದೆ."
ಅದು ಕೇವಲ ಪಾದಗಳ ನೃತ್ಯವಲ್ಲ ಅದು ಹೃದಯಗಳ ಹೆಜ್ಜೆಮೇಳ.
ಉಲ್ಲೇಖ:
WebIndia123.com. (2024, November 16). Alayi Hejje – Secular dances of Karnataka. WebIndia123. Retrieved from https://www.webindia123.com/karnataka/ART/alayihejje.htm
WhatIsIndia.com. (n.d). Karnataka – Art, Culture & Heritage. WhatIsIndia.com. Retrieved April 27, 2025, from https://www.whatisindia.com/issues/karnatak/karnataka_art_culture_heritage.html
Indian Economic Observer. (2024, December 2). HEJJE, India’s first luxury transition care centre, opens in Bangalore. Retrieved from https://indianeconomicobserver.com/hejje-luxury-transition-care-centre-bangalore
IndiaForums.com. (n.d.). Music & dances of Karnataka: Fair and festivals of Karnataka. Retrieved April 27, 2025, from https://indiaforums.com/music-dances-of-karnataka
HEJJE. (n.d.). Best transition care centre in Bangalore. Retrieved April 27, 2025, from https://hejje.health/best-transition-care-centre-bangalore
HEJJE. (n.d.). About HEJJE. Retrieved April 27, 2025, from https://hejje.health/about
News18. (2024, November). Hejje campaign: ಮಂಗಳೂರಿನಲ್ಲಿ 'ಹೆಜ್ಜೆ' ಅಭಿಯಾನ ಶುರು, ವಿನೂತನ ಪ್ರಯೋಗ ನೋಡಿ! (Hejje campaign started in Mangaluru, see the innovative experiment). News18 Kannada. Retrieved from https://news18.com/kannada/hejje-campaign-mangaluru
Story of Kannadiga. (2008, December). Arts and crafts: The craft of wood carving. Retrieved from https://storyofkannada.blogspot.com/2008/12/arts-crafts-wood-carving.html
Kannada Jaanapada. (2014, December 30). Karnataka folklore. Retrieved from https://kannadajaanapada.blogspot.com/2014/12/karnataka-folklore.html
Kannada Lyrics. (2012, December 3). Avala Hejje: Bandeya baaline Belakaagi Kannada lyrics. Retrieved from https://kannadakalyrics.blogspot.com/2012/12/avala-hejje-bandeya-baaline-belakaagi.html
KannadaKalike.org. (n.d.). Janapada Loka. Retrieved April 27, 2025, from https://kannadakalike.org/janapada-loka
Department of Kannada and Culture. (n.d.). Hejjemela. Government of Karnataka. Retrieved September 8, 2025, from https://janapada.karnataka.gov.in/new-page/HEJJEMELA/kn