ಸದಸ್ಯ:2340742yashaswini/ನನ್ನ ಪ್ರಯೋಗಪುಟ
ಆತ್ಮಚರಿತ್ರೆ: ಯಶಸ್ವಿನಿ.ಎ
ದೊಡ್ಡವರು ತಮ್ಮ ಆತ್ಮ ಚರಿತ್ರೆ ಬರೆಯುವ ಮುನ್ನವೇ ದೊಡ್ಡವರಾಗಿರುವುದರಿಂದ, ಅವರು ಬರೆದದ್ದೆಲ್ಲಾ ಮಹತ್ವದ್ದಾಗಿಯೇ ಕಾಣುತ್ತದೆ. ಈ ಮಾತುಗಳನ್ನಾಡಿದವರು ದೆಹಲಿಯ ಜೆ.ಎನ್.ಯು ವಿವಿಯ ವಿಶ್ರಾಂತ ಪ್ರಾಧ್ಯಾಪಕರು, ಹಾಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿರುವ ಪುರುಷೋತ್ತಮ ಬಿಳಿಮಲೆ ಅವರ ಆತ್ಮಚರಿತ್ರೆ "ಕಾಗೆ ಮುಟ್ಟಿದ ನೀರು" ಬರೆಯುವಾಗ ಅವರ ಮೊದಲ ನುಡಿ ಇದಾಗಿದೆ.....
....ಹಾಗೆಯೇ ನಮ್ಮ ಕನ್ನಡ ವಿಭಾಗದ ಉಪನ್ಯಾಸರು ನನ್ನ ಆತ್ಮಚರಿತ್ರೆ ಬರೆಯಲು ಹೇಳಿದಾಗ, ನನಗೆ ಈ ಮೇಲಿನ ಬಿಳಿಮಲೆ ಅವರ ಬರಹ ನೆನಪಾಯ್ತು....
ನನ್ನ ಈ ಹದಿನೆಂಟು ವರ್ಷದ ವಯಸ್ಸಿನಲ್ಲಿ ನನ್ನ ಬಾಲ್ಯ, ಪ್ರಾಥಮಿಕ, ಪ್ರೌಢಶಾಲಾ, ಪದವಿ ಪೂರ್ವ ಶಿಕ್ಷಣ ಮುಗಿಸಿ, ಈಗ ಪದವಿ ಶಿಕ್ಷಣ ಪಡೆಯುತ್ತಿರುವ ಈ ಹಂತದಲ್ಲಿ ವಿಶೇಷವಾಗಿ ವಿದ್ಯಾಭ್ಯಾಸ ಬಿಟ್ಟರೆ ಸಾದನೆ ಎಂಬುದು ಏನು ಇಲ್ಲ, ಎಲ್ಲವೂ ಮುಂದೆ ಸಾದಿಸಬೇಕಾದ ಕಾಲಘಟ್ಟವೆ ನನ್ಮುಂದಿದೆ. ಆದರೂ ನನ್ನನ್ನು ಈ ಮಟ್ಟಕ್ಕೆ ಬೆಳೆಸಿದ ನಮ್ಮ ತಾಯಿ, ತಂದೆ, ಬಂದು ಬಳಗ, ಗುರು ಹಿರಿಯರು, ಸ್ನೇಹಿತರು ಜೊತೆಗೆ ಈ ಪರಿಸರದ ಪಂಚ ಭೂತಗಳ ಋಣವಿದೆ.
ಕರ್ನಾಟಕದ ಮೂಡಣ ದಿಕ್ಕಿನ ಕೋಲಾರ ಜಿಲ್ಲೆಯ ಮಾಲೂರು ಪಟ್ಟಣ ನಮ್ಮೂರು, ನಮ್ಮ ತಂದೆ ತಾಯಿ ಇಬ್ಬರು ಪದವಿದರರಾಗಿದ್ದು, ರೈತ ಕುಟುಂಬದಿಂದ ಬಂದವರು, ನಮ್ಮ ಹಾಡು ಭಾಷೆ ನಾಡ ಭಾಷೆ "ಕನ್ನಡ"ವಾದರೂ, ಮಾತೃಭಾಷೆ ತೆಲುಗು. ನಮ್ಮ ತಂದೆಯ ಹೆಸರು ಅಶ್ವತ್ಥರೆಡ್ಡಿ ಅಪ್ಪಣ್ಣರೆಡ್ಡಿ , ತಾಯಿಯ ಹೆಸರು ಸ್ವಾರೂಪ ಅಶ್ವತ್ಥರೆಡ್ಡಿ , ನನಗೊಬ್ಬ ಆರನೇ ತರಗತಿಯಲ್ಲಿ ಓದುತ್ತಿರುವ ಭವಿಷ್ಯ.ಎ ಹೆಸರಿನ ತಂಗಿಯೂ ಇದ್ದಾಳೆ. ನಮ್ಮ ತಾತ ಜಮೀನುಧಾರರಾದ ಕಾರಣ, ನಮ್ಮ ತಂದೆಯೂ ಸ್ಥಿತಿವಂತರಾಗಿ, ತಮ್ಮ ಪಾಲಿನ ಭೂಮಿಯಲ್ಲಿ ಕೃಷಿ ಹಾಗೂ ತೋಟಗಾರಿಕೆ ವೃತ್ತಿ ಜೀವನ ನಡೆಸುವುದರ ಜೊತೆಗೆ, ವಿವಿಧ ವ್ಯವಹಾರ, ಸಮಾಜ ಸೇವೆ, ಸಾಹಿತ್ಯ, ಸಂಘಟನೆ, ರಾಜಕೀಯ.... ಹೀಗೆ ಎಲ್ಲಾ ಕ್ಷೇತ್ರದಲ್ಲಿ ನಮ್ಮ ತಂದೆ ನಮ್ಮೂರಿನಲ್ಲಿ ಎಲ್ಲರಿಗೂ ಪರಿಚಯಸ್ತರು.
ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಅವರ ಬದುಕು ಬರಹಗಳು, ನಮ್ಮ ತಂದೆಗೆ ತುಂಬಾ ನೆಚುವ ವಿಚಾರಗಳು, ಅದನ್ನೆ ನಮಗೂ ಪಸರಿಸುವ ವಾತಾವರಣದಲ್ಲಿ ನಮ್ಮನ್ನು ಬೆಳೆಸುತ್ತಿದ್ದಾರೆ. ನಮ್ಮ ತಂದೆ ಹೆಸರಿನಲ್ಲಿ ರೆಡ್ಡಿ ಎಂಬ ಸೂಚಕವಿದೆ, ಆದರೆ ನಮ್ಮ ಹೆಸರಿನಲ್ಲಿ ಜಾತಿ ಸೂಚಕ ಇರಭಾರದು ಎಂಬ ಕಾರಣದಿಂದ, ನನಗೆ ಯಶಸ್ವಿನಿ ಎಂದು, ನನ್ನ ತಂಗಿಗೆ ಭವಿಷ್ಯ ಎಂದು ಹೆಸರು ನಾಮಕರಣ ಮಾಡಿದ್ದಾರೆ.
ನನ್ನ ಶಿಕ್ಷಣ, ಬೆಳವಣಿಗೆಗೆ ನನಗೆ ಎಂದೂ ನಮ್ಮ ಪೋಷಕರು ಯಾವುದೇ ಅಡ್ಡಿ, ಆತಂಕಗಳು ಬರುವುದಕ್ಕೆ ಬಿಡಲಿಲ್ಲ. ಈ ಕಾರಣದಿಂದಲೆ ನಾನು ಈ ಮಟ್ಟಕ್ಕೆ ಶಿಕ್ಷಣ ಪಡೆಯಲು ಅನುವಾಗಿದೆ. ನಮ್ಮ ಪೋಷಕರಲ್ಲಿ, ಅದರಲ್ಲೂ ನಮ್ಮ ತಾಯಿಗೆ ನಾನು ಡಾಕ್ಟರ್ ಹಾಗಬೇಕೆಂಬ ಆಸೆ ಇತ್ತು, ಆದರೆ ಒತ್ತಡ ಇಲ್ಲ, ನಿನಗೆ ನೆಚ್ಚುವ, ಭವಿಷ್ಯದಲ್ಲಿ ಬದುಕು ಕಟ್ಟಿಕೊಡುವ ಯಾವುದೇ ಶಿಕ್ಷಣಕ್ಕೆ ಸೈ ಎಂದವರು ನಮ್ಮ ತಂದೆ ತಾಯಿಗಳು. ಈ ಕಾರಣದಿಂದಲೇ ನಾನು ನೀಟ್ ಫಲಿತಾಂಶ ಬರುವ ಮುನ್ನವೆ, ಬೆಂಗಳೂರಿನ ಕೆಲವು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಆನ್‌ಲೈನ್ ಮೂಲಕ ಮುಂದಿನ ವ್ಯಾಸಂಗದ ಪ್ರವೇಶಕ್ಕೆ ಅರ್ಜಿ ಸಲ್ಲಿಸಿ, ಕೊನೆಗೆ ಕ್ರೈಸ್ಟ್ ವಿವಿ ಯಲ್ಲಿ ನನ್ನ ಈಗಿನ ಪದವಿಗೆ ಪ್ರವೇಶ ಪಡೆದೆ. ಒಳ್ಳೆಯ ವಾತಾವರಣ ವಿರುವ ಈ ಕಾಲೇಜಿನ ಶಿಕ್ಷಣ, ನನಗೆ ಸಂತೋಷ ತಂದಿದೆ.
ಇಂದಿನ ನೆಮ್ಮದಿ ಬದುಕಿಗೆ ಏಣಿಯ ಮೆಟ್ಟಿಲು ಆದವರ ಬಗ್ಗೆ ನಾನು ಎಂದು ಮರೆಯಲಾಗದು.
ಮುಂದೆ ನನ್ನ ಉನ್ನತ ಶಿಕ್ಷಣದ ನಂತರ ಸಾದನೆ ಮಾಡಿ ತೋರಿಸುವ, ಈ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯಾಗುವ ಬಯಕೆ ನನ್ನದು. ಆಗ ನನ್ನ ನಿಜವಾದ ಸಾದನೆಯ ಹಾದಿಯ ಕುರಿತಾಗಿ ಹಾಗೂ ನನ್ನ ಯಶಸ್ವಿಯ ಹಿಂದೆ ಪ್ರಭಾವ ಬೀರಿದ ವ್ಯಕ್ತಿಗಳ ಕುರಿತಾಗಿ ಆತ್ಮಚರಿತ್ರೆ ಬರೆಯುವ ಆಸೆಯೂ ಇದೆ. ಈ ಸಣ್ಣ ಪರಿಚಯದ ಹಾದಿ ಮುಂದೆ ನನ್ನ ಯಶಸ್ಸಿನ ಮುನ್ನುಡಿಯಾಗುವ ನಂಬಿಕೆ ನನ್ನದಾಗಿದೆ.
ಧನ್ಯವಾದಗಳು
- ಯಶಸ್ವಿನಿ. ಎ