ವಿಷಯಕ್ಕೆ ಹೋಗು

ಸದಸ್ಯ:2330924 Ashwini

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ತೆ,

ನನ್ನ ಹೆಸರು ಅಶ್ವಿನಿ ಬಿರಾದರ್, ನಾನು ಉತ್ತರ ಕರ್ನಾಟಕದ, ಕಲ್ಬುರ್ಗಿ ಎಂಬ ಜಿಲ್ಲೆಯಿಂದ ಬಂದವರು. ಕಲ್ಬುರ್ಗಿ ಎಂದರೆ ಕಲ್ಲಿನ ಭೂಮಿ ಎಂದರ್ಥ. ಸುಮಾರು 6ನೇ ಕ್ರಿಸ್ತಶಕದಲ್ಲಿ, ಈ ಭೂಮಿ ರಾಷ್ಟ್ರಕೂಟರ ಆಳ್ವಿಕೆಯಲ್ಲಿತ್ತು. ನನ್ನ ತಂದೆಯ ಹೆಸರು ನಾನ ಗೌಡ ಎಂ ಬಿರಾದರ್, ಗುತ್ತಿಗೆಗಾರಿಕೆಯಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ನನಗೆ ಇಬ್ಬರು ಅಣ್ಣಂದಿರು ಮತ್ತು ಒಬ್ಬಳು ಅಕ್ಕ ಇದ್ದಾಳೆ. ನನ್ನ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ವಿದ್ಯಾಭ್ಯಾಸವನ್ನು ನಾನು ಆರ್. ಎಂ. ಎಸ್. ಎ ಎಂಬ ಶಾಲೆಯಲ್ಲಿ ಮುಗಿಸಿದ್ದೇನೆ. ನನಗೆ ಕ್ರೀಡೆಗಳಲ್ಲಿ ತುಂಬಾ ಆಸಕ್ತಿ, ಹಾಗೂ ಕ್ರೀಡೆಗಳಲ್ಲಿ ಹಲವಾರು ಪ್ರಶಸ್ತಿಗಳು ದೊರಕಿವೆ. ನನಗೆ ಗುಂಡು ಎಸೆತ ಕ್ರೀಡೆಯಲ್ಲಿ ರಾಜ್ಯ ಪುರಸ್ಕಾರ ದೊರಕಿದೆ.ಪ್ರಸ್ತುತ ನಾನು ಕ್ರೈಸ್ಟ್ ಪದವಿಪೂರ್ವಕ ಕಾಲೇಜು ಬೆಂಗಳೂರಿನಲ್ಬಿ, ಬಿ. ಎ ಪದವಿಯನ್ನು ಮಾಡುತ್ತಿದ್ದೇನೆ.

ಧನ್ಯವಾದಗಳು.