ಸದಸ್ಯ:1810190 Vibha

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{Infobox Person

| name = ವಿಭ. ಎಸ್. ರೆಡ್ಡಿ
| image =  https://commons.wikimedia.org/wiki/File:1810190_vibha.jpg  
| birth_place = [[ಬೆಂಗಳೂರು, ಕರ್ನಾಟಕ]], ಭಾರತ
| residence = [[ಹೆಚ್.ಎಸ್.ಆರ್ ಬಡಾವಣೆ, ಬೆಂಗಳೂರು ]], ಭಾರತ
| occupation = {{ವಿದ್ಯಾರ್ಥಿ|ಕ್ರೈಸ್ಟ್ ವಿಶ್ವವಿದ್ಯಾಲಯ}}
}}

ಪರಿಚಯ

ನನ್ನ ಹೆಸರು ವಿಭಾ. ಎಸ್. ರೆಡ್ಡಿ. ನನ್ನ ತಂದೆಯ ಹೆಸರು ಸದಾಶಿವ ರೆಡ್ಡಿ , ತಾಯಿಯ ಹೆಸರು ಸುನೀತ. ನಾನು ೦೫-೦೫-೨೦೦೦ ರಂದು ಜನಿಸಿದೆ. ನನಗೆ ಭೂಮಿಕ ಎಂಬ ತಂಗಿಯಿದ್ದಾಳೆ. ಅವಳು ಹತ್ತನೇ ತರಗತಿಯಲ್ಲಿ ಓದುತ್ತಿದ್ದಾಳೆ. ನನ್ನ ಹುಟೂರು ಬೆಂಗಳೂರು. ನನ್ನ ತಂದೆ ಒಬ್ಬ ಸಿವಿಲ್ ಕಾಂಟ್ರಾಕ್ಟರ್. ನನ್ನ ತಾಯಿ ಗೃಹಿಣಿಯಾಗಿದ್ದಾಳೆ. ನಮ್ಮದು ಬಹಳ ಶಿಸ್ತಿನ ಕುಟುಂಬ. ನನಗೆ ನನ್ನ ಬಾಲ್ಯದ ಬಗ್ಗೆ ಜಾಸ್ತಿ ನೆನಪಿಲ್ಲ. ನಾನು ಜನಿಸಿದಾಗ ಬಹಳ ದಪ್ಪವಾಗಿದ್ದೆ. ನನ್ನ ತಾಯಿಯ ಕುಟುಂಬದ ಕಡೆ ನನ್ನ ತಾತನಿಗೆ ನಾನೇ ಮೊದಲ ಮೊಮ್ಮಗಳು. ಆದ್ದರಿಂದ ನಾನೆಂದರೆ ಎಲ್ಲರಿಗೂ ತುಂಬ ಪ್ರೀತಿ. ನನ್ನನ್ನು ತುಂಬ ಮುದ್ದಿನಿಂದ ಮತ್ತು ಪ್ರೀತಿಯಿಂದ ಬೆಳೆಸಿದ್ದಾರೆ. ನನ್ನ ಎಲ್ಲಾ ಜವಾಬ್ದಾರಿಗಳನ್ನು ನನ್ನ ಮತ್ತು ನನ್ನ ಕುಟುಂಬದ ಕಡೆಗೆ ಚೆನ್ನಾಗಿ ಅರ್ಥೈಸುತ್ತೇನೆ. ನಾನು ಎಲ್ಲಾ ಕೆಲಸಗಳು ಸಮಯಕ್ಕೆ ಮುಗಿಸುತ್ತೇನೆ. ಸರಳತನ ನನ್ನಲ್ಲಿ ಜಾಸ್ತಿ ಇದೆ. ಎಲ್ಲರ ಜೊತೆ ನಾನು ನಗುತ್ತಲೆ ಮಾತಾಡುತ್ತೇನೆ. ನಾನು ಒಬ್ಬ ಸ್ವಯಂ ಪ್ರೇರಿತ ಹುಡುಗಿ. ನನ್ನ ಸಾಮರ್ಥ್ಯವು ನನ್ನ ಮನೋಭಾವವಾಗಿದೆ, ನಾನು ನನ್ನ ದೌರ್ಬಲ್ಯ ಹೇಳಲು ಬಯಸುವುದಿಲ್ಲ. ನಾನು ಉತ್ಕಟಭಾವದಿಂದ ಹೊಸ ವಿಷಯಗಳನ್ನು ಕಲಿಯುತ್ತೇನೆ ಹಾಗು ಅವುಗಳನ್ನು ಉತ್ತಮಗೊಳಿಸಲು ಪ್ರಯತ್ನಿಸುತ್ತೇನೆ. ನನಗೆ ನೀಲಿ ಮತ್ತು ಕಪ್ಪು ರಂಗುಗಳು ಎಂದರೆ ತುಂಬ ಇಷ್ಟ.

ಪ್ರಾಥಮಿಕ ಶಿಕ್ಷಣ

ನಾನು ನನ್ನ ಪ್ರಥಮಿಕ ಶಿಕ್ಷಣವನ್ನು ಲಾರೆನ್ಸ್ ಪುಬ್ಲಿಕ್ ಶಾಲೆಯಲ್ಲಿ ಪೂರೈಸಿದ್ದೇನೆ. ನನ್ನ ದ್ವಿತೀಯ ಶಿಕ್ಶಣವನ್ನು ಫ಼್ರೆಡಂಮ್ ಇಂಟರ್ನ್ಯಾಶನಲ್ ಶಾಲೆಯಲ್ಲಿ ಮುಗಿಸಿದ್ದೇನೆ. ನಾನು ನನ್ನ ಶಾಲೆಯಲ್ಲಿ ಒಳ್ಳೆಯ ಹೆಸರನ್ನು ಪಡೆದಿದ್ದೆ. ಶಾಲೆಯಲ್ಲಿ ನನ್ನ ಸ್ನೇಹಿತರನ್ನು ಯಾವಾಗಲೂ ಪ್ರೇರೇಪಿಸಲು ಮತ್ತು ಅವರ ಕಠಿಣ ಕಾಲದಲ್ಲಿ ಅವರಿಗೆ ಸಹಾಯ ಮಾಡಲು ನಾನು ಇಷ್ಟಪಡುತ್ತೇನೆ. ಯಾವುದೇ ಒತ್ತಡದ ಸ್ಥಿತಿಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಲು ನಾನು ಸಮರ್ಥನಾಗಿದ್ದೇನೆ. ಕ್ರೀಡಾ ಕ್ಶೇತ್ರದಲ್ಲಿ ನನಗೆ ಬಹಳ ಆಸಕ್ತಿಯಿತ್ತು . ಬ್ಯಾಡ್ಮಿಂಟನ್ ಮತ್ತು ಬ್ಯಾಸ್ಕೆಟ್ಬಾಲ್ ಬಹಳ ಚೆನ್ನಾಗಿ ಆಡುತ್ತಿದ್ದೆ. ಕ್ರಿಕೆಟ್ ಆಟದಲ್ಲಿ ಕೂಡ ನನೆಗೆ ಆಸಕ್ತಿಯಿತ್ತು. ಟಗ್ ಆಫ್ ವಾರ್ ಎಂಬ ಆಟದಲ್ಲಿ ಪದಕವನ್ನು ಗೆದ್ದಿದ್ದೇನೆ. ನನ್ನ ತರಗತಿಯಲ್ಲಿ ನಾನು ತರಗತಿಯ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದೆ. ಶಾಲೆಯಲ್ಲಿ ಬಹಳ ಗೆಳತಿಯರಿದ್ದರು. ನಾನು ಈಗ ನನ್ನ ಶಾಲೆ, ಶಿಕ್ಶಕರು ಮತ್ತು ಸ್ನೇಹಿತರನ್ನು ಮಿಸ್ ಮಾಡುತ್ತೇನೆ .

ಪ್ರೌಢ ಶಿಕ್ಷಣ

ನಾನು ಪಿ.ಯು.ಸಿ ಶಿಕ್ಶಣವನ್ನು ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಪೂರೈಸಿದ್ದೇನೆ. ಈ ಶಾಲೆಯ ವಾತಾವರಣ ನನ್ನನ್ನು ಬದಲಾಯಿಸಿದೆ. ಈ ಶಾಲೆಗೆ ಸೇರಿಕೊಂಡಾಗ ನನಗೆ ಯಾರು ಗೊತ್ತಿರಲಿಲ್ಲ. ಇಲ್ಲಿ ಹೊಂದುಕೊಳ್ಳುವುದಕ್ಕೆ ನನಗೆ ಬಹಳ ಸಮಯವಾಯಿತು. ದಿನಗಳು ಕಳೆಯುತ್ತಾ, ನಾನು ಹೊಂದುಕೊಂಡೆ. ಈ ಶಾಲೆಗೆ ಸೇರಿದಾಗ ನನ್ನ ಅಂಕಗಳು ಹೆಚ್ಚಾಯಿತು ಹಾಗೆ ನನಗೆ ಓದಲ್ಲಿ ಕೂಡ ಆಸಕ್ತಿ ಹೆಚ್ಚಾಯಿತು. ಲೆಕ್ಕಶಾಸ್ತ್ರದಲ್ಲಿ ಓಳ್ಳೆಯ ಅಂಕವನ್ನು ಪಡೆದೆ. ಶಾಲೆಯ ಎಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೆ. ಪರೀಕ್ಶೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣನಾದೆ. ನನ್ನ ಹವ್ಯಾಸಗಳು ಇವು- ರೇಖಾಚಿತ್ರ , ನೃತ್ಯ , ಸಂಗೀತ , ಅಡುಗೆ , ಪುಸ್ತಕಗಳು ಓದುವುದು, ಗಾಸಿಪ್ ಮಾಡುವುದು, ಟಿವಿ ನೋಡುವುದು ಮತ್ತು ಶಾಪಿಂಗ್.

ಕಾಲೇಜು ಶಿಕ್ಷಣ

ಪಿ.ಯು.ಸಿ ಮುಗಿಸಿದ ನಂತರ ನಾನು ಡಿಗ್ರಿ ಮಾಡಲು ಕ್ರೈಸ್ಟ್ ವಿಶ್ವವಿದ್ಯಾಲಯ ಸೇರಿದ್ದೇನೆ. ಇಲ್ಲಿ ನಾನು ಬಿ.ಕಾಂ ಮಾಡುತ್ತಿದ್ದೇನೆ. ಇಲ್ಲಿ ಕೂಡ ನನಗೆ ಹೊಂದುಕೊಳ್ಳುವುದರಲ್ಲಿ ತೊಂದರೆಯಾಯಿತು. ಪ್ರತಿ ದಿನ ನಾನು ಮನೆಗೆ ಹೋಗಿ ಅಳುತ್ತಿದ್ದೆ. ಆದರೆ ಇವಾಗ ನನಗೆ ಗೆಳೆಯರು ಸಿಕ್ಕಿದ್ದಾರೆ. ಕಾಲೇಜಿನಲ್ಲಿ ನಾವು ತುಂಬ ಮಜಾ ಮಾಡುತ್ತೇವೆ. ಹರ್ಷಿತ ಎಂಬ ಹುಡುಗಿ ನನ್ನ ಜೀವದ್ಗೆಳತಿ. ಅವಳ ಜೊತೆ ನಾನು ಬಹಳ ಸಮಯ ಕಳೆಯುತ್ತೇನೆ. ಅವಳೆಂದರೆ ನನಗೆ ಪಂಚಪ್ರಾಣ . ಅವಳು ನನ್ನ ಜೀವನಕ್ಕೆ ಬಂದಿರುವುದು ನನಗೆ ಬಹಳ ದೊಡ್ಡ ಉಡುಗೊರೆ. ಮೊದಲ ಸೆಮೆಸ್ಟರ್ ಚೆನ್ನಗಿ ಕಳೆಯಿತು. ಕನ್ನಡ ತರಗತಿಗಳು ನಾವು ಬಹಳ ಆನಂದಿಸಿದೆವು. ಮುಂದಿನ ಸೆಮೆಸ್ಟರ್ ಕೂಡ ನಾವು ಮಜಾ ಮಾಡುತ್ತಾ ಕಳೆಯಬೇಕೆಂದು ಭಾವಿಸುತ್ತೇನೆ. ಈ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಬಹಳಷ್ಟು ಅವಕಾಶಗಳು ನೀಡುತ್ತದೆ. ಇಲ್ಲಿಂದ ನಾನು ಕೂಡ ಸಾಕಷ್ಟು ಕಲಿಯಬೇಕೆಂದು ಆಶಿಸುತ್ತೇನೆ. ನನ್ನ ಈ ಪಯಣ ನಯವಾಗಿ ಸಾಗಲಿ ಎಂದು ಭಾವಿಸುತ್ತೇನೆ.

ಮಹತ್ವಾಕಾಂಕ್ಷೆ

ನನ್ನ ಜೀವನದಲ್ಲಿ ಏನಾದರು ಸಾಧಿಸಬೇಕೆನ್ನುವುದೇ ನನ್ನ ಕನಸು. ನನಗೆ ಕೆ.ಏ.ಎಸ್ ಆಫಿಸರ್ ಆಗಬೇಕೆಂಬುವುದು ಆಸೆ. ನನ್ನ ಈ ಕನಸನ್ನು ನನಸಾಗಿಸಲು ನಾನು ತುಂಬ ಕಷ್ಟ ಪಡಬೇಕು. ನನ್ನ ತಂದೆ-ತಾಯಿಗೂ ನಾನು ಕೆ.ಏ.ಎಸ್ ಪಾಸ್ ಆಗಬೇಕು ಮತ್ತು ರಾಜ್ಯಕ್ಕೆ ತನ್ನದೇ ಆದ ಕೊಡುಗೆ ನೀಡಬೇಕು ಎನ್ನುವುದು ಅವರ ಆಸೆ. ನನಗೆ ನನ್ನ ತಂದೆಯೇ ಆದರ್ಷ. ಅವರದ್ದು ಬಹಳ ಬಡತನದ ಕುಟುಂಬ. ಆದರೆ ನನ್ನ ತಂದೆ ತನ್ನ ವಿದ್ಯಭ್ಯಾಸವನ್ನು ಮುಗಿಸಿ ಕುಟುಂಬದ ಸಂಪಾದನೆಯಲ್ಲಿ ಅವರು ಕೂಡ ಸಹಾಯ ಮಾಡಿದರು. ಹಾಗಾಗಿ ನಾನು ಕೂಡ ನನ್ನ ಪೋಷಕರನ್ನು ಸಂತೋಷಪಡಿಸಬೇಕು.