ವಿಷಯಕ್ಕೆ ಹೋಗು

ಸದಸ್ಯ:ಸೋಮು.ಕುಂಬಾರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶನಿಯನ್ನೇ ಗೆದ್ದ ಗಣೇಶ!*ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿಯಂದು ಸಂಭ್ರಮದಿಂದ ಗಣೇಶನನ್ನು ತಂದು ವಾರದವರೆಗೆ ಕೂರಿಸಿ ಕಣ್ ಸೆಳೆಯುವಂತೆ ಅಲಂಕಾರ ಮಾಡಿ,ತರತರಹದ ಭಕ್ಷ್ಯ ,ನೈವೇದ್ಯಮಾಡಿ ಭಯ-ಭಕ್ತಿಯಿಂದ ಪೂಜಿಸಿ, ಕೊನೆಗೆ ಊರೆಲ್ಲಾ ಮೆರವಣಿಗೆ ಮಾಡಿ ಜೈಕಾರ ಹಾಕಿ ಕುಣಿದು ಕುಪ್ಪಳಿಸುತ್ತ ಕೆರೆ-ಕಟ್ಟೆಗಳವರೆಗೂ ತೆರಳಿ ಗಣೇಶನನ್ನು ನೀರಿನಲ್ಲಿ ವಿಲೀನಗೊಳಿಸುವ ಯುವಕರು ಈ ಗಣೇಶನ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ?ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಇರುವ ಮೂನ್ನೂರ ಮೂವತ್ತು ಕೋಟಿ ದೇವರುಗಳಲ್ಲಿ ಪ್ರಥಮ ಪೂಜೆ ಗಣೇಶನಿಗೆ ನಡೆಯಲು ಕಾರಣವೇನು?ಹಾಗಾದರೆ ಎಲ್ಲಾ ದೇವರಿಗಿಂತ ಗಣೇಶನೇ ಶ್ರೇಷ್ಠನೆ? ನೀವು ಗಮನಿಸಿರಬಹುದು ಯಾವುದೇ ಶುಭಕಾರ್ಯ ಮಾಡುವ ಸಂದರ್ಭದಲ್ಲಿ ಗೋವಿನ ಸಗಣಿಯನ್ನು ತಂದು ಅದಕ್ಕೆ ಗರಿಕೆ ಮುಡಿಸಿ ಅದನ್ನೆ ಗಣಪತಿಯೆಂದು ಪೂಜೆ ಮಾಡುತ್ತಾರೆ.ಹಾಗಾದರೆ ಗಣಪತಿಗೂ ಸಗಣಿ ಮತ್ತು ಗರಿಕೆಗೂ ಎಲ್ಲಿಯ ಸಂಬಂಧ? ತಿಳಿಯುವ ಕುತೂಹಲವಿದ್ದರೆ ಈ ಸಣ್ಣ ಕಥೆಯನ್ನು ಓದಿಬಿಡಿ….ಶನಿದೇವರೆಂದರೆ ಕೇವಲ ಮಾನವರು ಮಾತ್ರವಲ್ಲ, ಬ್ರಹ್ಮ-ವಿಷ್ಣು-ಮಹೇಶ್ವರನ ಸಹಿತ ದೇವಾನುದೇವತೆಗಳೇ ಹೆದರುತ್ತಾರಂತೆ! ಈ ಶನಿದೇವರಿಂದಾಗಿ ಕಷ್ಟ ಅನುಭವಿಸದ ದೇವರುಗಳೆ ಇಲ್ಲವಂತೆ.ಆದರೆ ನಮ್ಮ-ಗಣೇಶ ಈ ವಿಷಯದಲ್ಲಿ ತುಂಬಾ ಅದೃಷ್ಟಶಾಲಿ. ಎಲ್ಲಾ ದೇವತೆಗಳನ್ನು ಕಾಡಿದ ಶನಿದೇವರು ಗಣೇಶನನ್ನು ಕಾಡಲು ಏಕೆ ಸಾಧ್ಯವಾಗಲಿಲ್ಲ? ಅದೊಂದು ಸ್ವಾರಸ್ಯಕರ ಘಟನೆ.ಒಮ್ಮೆ ವಿಹಾರಕ್ಕೆಂದು ಹೊರಟ ಗಣೇಶನಿಗೆ ಆಕಸ್ಮಿಕವಾಗಿ ಎದುರಾಗಿದ್ದು ಈ ಶನಿರಾಜ. ಮುದ್ದು ಮುದ್ದಾಗಿ ಕಾಣುತ್ತಿದ್ದ ಗಣಪತಿಯನ್ನು ನೋಡಿದ ಶನಿರಾಜನಿಗೆ ಗಣಪತಿಯನ್ನೊಮ್ಮೆ ಹಿಡಿಯುವ ಮನಸ್ಸಾಗಿ ಗಣಪತಿಯ ಕಡೆ ಹೊರಟ.ಶನಿದೇವರು ತನ್ನ ಕಡೆಯೆ ಬರುತ್ತಿರುವುದನ್ನು ನೋಡಿ ನಡುಗಿಹೋದ ಗಣೇಶ. ಈ ಮಹಾನುಭಾವ ನನ್ನನ್ನೇನಾದರೂ ಹಿಡಿದು ಬಿಟ್ಟರೆ ಏನು ಗತಿ ಎಂದು ಚಿಂತಿಸಿದ.ಈತನಿಗೆ ಸಿಗಲೇಬಾರದು ಎಂದು ಕೊಂಡವನೆ ಅಲ್ಲಿಂದ ಓಡತೊಡಗಿದ. ಹಾಗೆ ಓಡುತ್ತಿದ್ದ ಗಣೇಶನನ್ನು ಕೂಗಿದ ಶನಿದೇವರು ನಿಲ್ಲುವಂತೆ ಹೇಳಿ ನಾನೇನು ನಿನಗೆ ತೊಂದರೆ ಮಾಡುವುದಿಲ್ಲ, ಒಂದೇ ಒಂದು ಕ್ಷಣ ನಿನ್ನ ಜನ್ಮರಾಶಿ ಪ್ರವೇಶಿಸಿ ಹೋರಟು ಹೋಗುತ್ತೆನೆ ಎಂದನು.ಇದಕೊಪ್ಪದ ಗಣೇಶ ನಿನ್ನ ಸಹವಾಸವೇ ಬೇಡ ಎಂದು ಹೇಳಿ ಮತ್ತೆ ಓಡತೊಡಗಿದ. ಗಣೇಶನ ಮಾತಿನಿಂದ ಕೆರಳಿದ ಶನಿದೇವರು ಏನಾದಾರಾಗಲಿ ಈತನನ್ನು ಹಿಡಿಯದೆ ಬಿಡುವುದಿಲ್ಲವೆಂದು ತಿರ್ಮಾನಿಸಿ ಗಣೇಶನ ಬೆನ್ನುಹತ್ತಿದ.ಗಣೇಶ ಇನ್ನೂ ಜೋರಾಗಿ ಓಡತೊಡಗಿದ. ಅದರೂ ನಮ್ಮ ಡೊಳ್ಳುಹೊಟ್ಟೆಯ ಗಣೇಶನಿಗೆ ಓಡಲು ಕಷ್ಟವಾಗಿ ನಿಂತುಬಿಟ್ಟ.ಇದನ್ನು ಕಂಡು ಖುಷಿಗೊಂಡ ಶನಿದೇವರು ನಗುತ್ತಲೆ ಗಣೇಶನ ಕಡೆ ಬರತೊಡಗಿದರು. ಆಗ ನಮ್ಮ ಬುದ್ಧಿವಂತ ಗಣಪ, ಅಲ್ಲಿಯೆ ಪಕ್ಕದಲ್ಲಿ ಮೆಯ್ಯುತ್ತಿದ್ದ ಹಸುವನ್ನು ಕಂಡು ಅದರ ಮುಂದೆ ಹುಲ್ಲಿನ ಗರಿಕೆಯಾಗಿಬಿಟ್ಟ.ಆ ಗರಿಕೆಯನ್ನು ಹಸು ತಿಂದು ಬಿಟ್ಟಿತು. ಇದನ್ನು ಗಮನಿಸಿದ ಶನಿದೇವರು ಸಹ ಹಸುವಿನ ಮುಂದೆ ಗರಿಕೆಯಾದಾಗ ಹಸು ಅದನ್ನು ತಿಂದುಬಿಟ್ಟಿತು.ಈಗ ಗಣೇಶನಿಗೆ ಫಜಿತಿಗಿಟ್ಟುಕೊಂಡಿತು. ಎತ್ತಹೋಗುವುದೆಂದು ತಿಳಿಯದೆ ಹಸುವಿನ ಸಗಣಿಯರೂಪದಲ್ಲಿ ಆಚೆಬಂದ.ಗಣೇಶ ಹಸುವಿನ ಸಗಣಿಯಜೊತೆ ಹೊರ ಹೋಗಿದ್ದನ್ನು ನೋಡಿದ ಶನಿದೇವರು ಅಸಹ್ಯಪಟ್ಟುಕೊಂಡು ಹೊರಟು ಹೋದರು.ಅಂದಿನಿಂದ ಯಾವುದೇ ಶುಭ ಕಾರ್ಯಮಾಡುವಾಗ ಶನಿಯ ವಕ್ರದೃಷ್ಟಿ ಬೀಳದಿರಲೆಂದು, ಸಗಣಿ ಮತ್ತು ಗರಿಕೆಯನ್ನು ತಂದು ಸಗಣಿಯನ್ನು ಉಂಡೆ ಮಾಡಿ ಗರಿಕೆ ಮುಡಿಸಿ ಗಣೇಶನನ್ನು ಪ್ರಥಮವಾಗಿ ಪೂಜಿಸುತ್ತಾರೆ.ಅದ್ದರಿಂದ ಎಲ್ಲಾ ಶುಭಕಾರ್ಯಗಳಲ್ಲಿ ಗಣೇಶನ ಪ್ರತಿಮೆ ಅಥವಾ ಪ್ರಪಥಮ ಪೂಜೆ ಗಣಪನಿಗೆ ಸಲ್ಲಿಸುತ್ತಾರೆ.