ವಿಷಯಕ್ಕೆ ಹೋಗು

ಸದಸ್ಯ:ಸತ್ಯ ವೇದ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸತ್ಯವೇದ ಅನ್ನುವುದು ಬೈಬಲ್ ಎಂಬ ಆಂಗ್ಲಭಾಷೆಯ ಪದವಾಗಿದೆ. ಸಾಮಾನ್ಯವಾಗಿ ಸತ್ಯವೇದದಲ್ಲಿ ೬೬ ಪುಸ್ತಕಗಳು ಅಡಕವಾಗಿದೆ. ಆದರೆ ಕ್ಯಾಥೊಲಿಕ್ ಪಂಗಡದವರು ಉಪಯೋಗಿಸುವ ಬೈಬಲಿನಲ್ಲಿ ೭೨ ಪುಸ್ತಕಗಳು ಸೇರಿವೆ. ಅದಕ್ಕೆ ಅಪಕ್ರಿಪ ಪುಸ್ತಕಗಳು ಎಂದು ಹೇಳುತ್ತಾರೆ. ಇಡೀ ಸತ್ಯವೇದವು ಯೇಸುವಿನ ಕುರಿತ ಮುನ್ನೋಟವಾಗಿ ಹೇಳುತ್ತದೆ. ಮನುಷ್ಯರೆಲ್ಲರೂ ಪಾಪಮಾಡಿ ಭೂಮಿಯ ಮೇಲೆ ಜೀವಿಸಲು ಆಸಾಧ್ಯವಾದಗ ದೇವರು ಜಲಪ್ರಳಯದ ಮೂಲಕವಾಗಿ ಇಡೀ ಭೂಲೋಕದ ಮನುಷ್ಯರನ್ನು ನಾಶಮಾಡಿ ನೋಹನ ಮೂಲಕವಾಗಿ ಹೊಸ ಸಂತತಿಯನ್ನು ಅನುಗ್ರಹಿಸಿದನು. ಆದರೂ ಮನುಷ್ಯರ ಪಾಪಕ್ಕೆ ಪ್ರಯಶ್ಚಿತ್ತಕ್ಕೆ ಆ ಕಾಲದಲ್ಲಿ ಪ್ರಾಣಿಗಳನ್ನು ಬಲಿಯಾಗಿ ಅರ್ಪಿಸಬೇಕಾಗಿತ್ತು. ಅದರ ಬದಲಾಗಿ ದೇವರು ಒಂದು ವಿಶೇಷವಾದ ಬಲಿಯನ್ನು ಭೂಲೋಕಕ್ಕಾಗಿ ನೇಮಿಸಿದನು. ತನ್ನ ಮಗನನ್ನು ಈ ಲೋಕಕ್ಕೆ ಕಳುಹಿಸಿ ಮನುಷ್ಯರೆಲ್ಲರ ಪಾಪಕ್ಕಾಗಿ ತನ್ನನ್ನೇ ಬಲಿಯಾಗಿ ಅರ್ಪಿಸಿ, ತನ್ನನ್ನು ಬರಿದುಮಾಡಿಕೊಂಡು, ನಮಗಾಗಿ ಆತನನ್ನು ಕೊಟ್ಟನು.