ವಿಷಯಕ್ಕೆ ಹೋಗು

ಸದಸ್ಯ:ಸಂತೋಷ ಗುಡ್ಡಿಯಂಗಡಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕತ್ತೆ ಕಿವಿ ನಾಟಕ.

ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸರ್ಕಾರಿ ಪ್ರೌಢಶಾಲೆ ಕುಪ್ಪರವಳ್ಳಿಯ ಮಕ್ಕಳು 2025-26 ನೇ ಶೈಕ್ಷಣಿಕ ವರ್ಷದಲ್ಲಿ ಕತ್ತೆಕಿವಿ ಎನ್ನುವ ವಿಜ್ಞಾನ ನಾಟಕವನ್ನು ಆಡಿದ್ದಾರೆ. ಶಾಲೆಯ ರಂಗಶಿಕ್ಷಕರಾದ ಸಂತೋಷ ಗುಡ್ಡಿಯಂಗಡಿ ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.

ಈ ಕತ್ತೆ ಕಿವಿ ನಾಟಕವು ನಂಜನಗೂಡು ತಾಲೂಕು, ಮೈಸೂರು ಜಿಲ್ಲೆ ಮತ್ತು ಮೈಸೂರು ವಿಭಾಗ ಮಟ್ಟದ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಮತ್ತು ನಾಟಕದಲ್ಲಿ ಫ್ರಾಗೇಶ ಪಾತ್ರ ಮಾಡಿದ ರಕ್ಷಾ ಶ್ರೇಷ್ಠ ನಟಿ ಮತ್ತು ಉತ್ತಮ ನಾಟಕ ರಚನೆ ಬಹುಮಾನ ಪಡೆದು ದಕ್ಷಿಣ ಭಾರತ ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಗೆ ಆಯ್ಕೆಯಾಗಿತ್ತು.

ಈ ನಾಟಕದಲ್ಲಿ ಶಾಲೆಯ ವಿದ್ಯಾರ್ಥಿಗಳಾದ ನಿಸರ್ಗ, ಝಾನ್ಸಿ, ರಕ್ಷಾ, ರನ್ಯ ಎನ್. ಎಸ್., ಪುಷ್ಪ ಸಿ., ಕೀರ್ತನ ಎನ್. ಜಿ., ಭರತ್ ವಿ. ಎನ್., ಮನು ನಾಯಕ ಬಿ. ಎಂ. ಅಭಿನಯಿಸಿದ್ದಾರೆ.

ಫ್ರಾಗೇಶ ಪಾತ್ರಧಾರಿ ರಕ್ಷಾ ಜಿಲ್ಲಾಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಶ್ರೇಷ್ಠ ನಟಿ ಬಹುಮಾನ ಕ್ಕೆ ಪಾತ್ರವಾಗಿದ್ದಾಳೆ.