ಸದಸ್ಯ:ಶಮೀರ್/sandbox

ವಿಕಿಪೀಡಿಯ ಇಂದ
Jump to navigation Jump to search
                          ಸಕ್ಕರೆಯ ಬಗೆಗಿನ ತಪ್ಪು ಕಲ್ಪನೆಗಳುಸಕ್ಕರೆಯನ್ನು ಸೇವಿಸುವುದರಿಂದ ಮಧುಮೇಹ ಬರಬಹುದೇ ಅನ್ನುವುದು. ಇಲ್ಲ. ಸಕ್ಕರೆಯ ಸೇವನೆ ಮಧುಮೇಹಕ್ಕೆ ಕಾರಣ ಆಗಲಾರದು. ಆದರೆ ಮಧುಮೇಹ ಅಂದರೆ ಡಯಾಬೆಟೆಸ್‌ ಇರುವವರ ದೇಹದಲ್ಲಿ ಸಕ್ಕರೆಯ ಬಳಕೆ ಸಹಜವಾಗಿ ಆಗುವುದಿಲ್ಲ. ವ್ಯಕ್ತಿಗೆ ಮಧುಮೇಹ ಉಂಟಾಗುವಲ್ಲಿ ಆತನ ಅಥವಾ ಆಕೆಯ ಆನುವಂಶಿಕ ಕಾರಣಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ. ದೇಹದ ತೂಕ ಅಧಿಕವಾಗಿದ್ದರೆ ಅಥವಾ ಬೊಜ್ಜು ದೇಹವನ್ನು ಹೊಂದಿದ್ದರೆ ಅಥವಾ ದೇಹಕ್ಕೆ ವಯಸ್ಸಾಗುವ ಸರಳ ಕಾರಣದಿಂದಲೂ ಸಹ ಮಧುಮೇಹ ಬರಬಹುದು. ಮಧುಮೇಹದ ನಿರ್ವಹಣೆಯಲ್ಲಿ ಕ್ರಮವಾದ ಆಹಾರದ ಜತೆಗೆ, ವ್ಯಾಯಾಮ ಮತ್ತು ಧ್ಯಾನಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತವೆ. ತನ್ನ ದೇಹದ ಅಧಿಕ ರಕ್ತ-ಸಕ್ಕರೆಯನ್ನು ನಿರ್ವಹಿಸುವಲ್ಲಿ ವ್ಯಕ್ತಿಯು ತನ್ನ ದೇಹದ ಒಟ್ಟಾರೆ ಕಾಬೋìಹೈಡ್ರೇಟ್‌, ಪ್ರೊಟೀನ್‌ಗಳು ಮತ್ತು ತಾನು ಸೇವಿಸುವ ಊಟ, ತಿಂಡಿಗಳಲ್ಲಿ ಇರುವ ಕೊಬ್ಬನ್ನು ನಿರ್ವಹಿಸಬೇಕಾಗುವುದು. ನಮಗೆ ರಿಫೈಂಡ್‌ ಸಕ್ಕರೆಯ ಬಗ್ಗೆ ಗೊತ್ತೇ ಇದೆ, ಆದರೆ ಹಣ್ಣುಗಳಿಂದ ಮತ್ತು ಪಿಷ್ಟಗಳಿಂದ ನೈಸರ್ಗಿಕವಾಗಿ ದೊರಕುವ ಸಕ್ಕರೆಯ ಅಂಶಗಳು ದೇಹದ ಸಕ್ಕರೆಯ ಮಟ್ಟವನ್ನು ಹೆಚ್ಚಿಸುತ್ತವೆ. ಈ ಕಾರಣದಿಂದಾಗಿ ಸೇವಿಸುವ ಆಹಾರದಲ್ಲಿ ಸಂತುಲನೆ ಇರಬೇಕಾದುದು ಬಹಳ ಆವಶ್ಯಕ.

ಕಡಿಮೆ ಸಕ್ಕರೆ ಸೇವಿಸುವುದರಿಂದ ಅಥವಾ ಸಕ್ಕರೆ ಸೇವಿಸದೆಯೇ ಇರುವುದರಿಂದ ರಕ್ತದಲ್ಲಿ ಸಕ್ಕರೆ ಅಂಶ (ಹೈಪೋಗ್ಲೆ„ಸೆಮಿಯಾ) ತಗ್ಗುತ್ತದೆಯೇ?

ಕಡಿಮೆ ಸಕ್ಕರೆ ಸೇವಿಸುವುದರಿಂದ ಹೈಪೋಗ್ಲೆ„ಸೆಮಿಯಾ ಉಂಟಾಗುತ್ತದೆ ಎಂಬುದು ಕೆಲವು ಜನರ ನಂಬಿಕೆ. ರಕ್ತದಲ್ಲಿ ಕಡಿಮೆ ಸಕ್ಕರೆ ಅನ್ನುವುದು ಒಂದು ರೋಗ ಪರಿಸ್ಥಿಯೇ ಹೊರತು, ಅದೊಂದು ಕಾಯಿಲೆ ಅಲ್ಲ. ಆರೋಗ್ಯವಂತ ಮನುಷ್ಯರಲ್ಲೂ ಸಹ ಊಟಗಳ ನಡುವೆ, ಆಹಾರ ಸೇವನೆಯ ನಡುವಿನ ಅಂತರದ ಅವಧಿಗಳಲ್ಲಿ ದೇಹದ ರಕ್ತದ ಸಕ್ಕರೆಯ ಅಂಶ ಕುಸಿದಿರುತ್ತದೆ. ಹಾಗಾಗಿ ಕಡಿಮೆ ಸಕ್ಕರೆಯನ್ನು ಸೇವಿಸುವುದರಿಂದ ಅಥವಾ ಸಕ್ಕರೆಯನ್ನು ಸೇವಿಸದೆಯೇ ಇರುವುದರಿಂದ ಖಂಡಿತವಾಗಿಯೂ ಹೈಪೋಗ್ಲೆ„ಸೆಮಿಯಾ ಉಂಟಾಗಲಾರದು.