ಸದಸ್ಯ:ಲಕ್ಷ್ಮಣ ಸಿರವಾಟಿ ಮಸ್ಕಿ/ನನ್ನ ಪ್ರಯೋಗಪುಟ
ಹಗಲು ವೇಷಗಾರರು (ಹಾಡು ಭಾಷೆಯಲ್ಲಿ ಎಸೆಗಾರರು)
[ಬದಲಾಯಿಸಿ]
ನಮ್ಮ ಹೆಮ್ಮೆಯ ಮಹಾನ್ ಗ್ರಂಥಗಳಾದ ರಾಮಾಯಣ ಮಹಾಭಾರತವನ್ನು ಓದಿ ತಿಳಿದುಕೊಂಡಿದ್ದಾರೆ. ಕೆಲವರು ಓದಿದ್ದರು ಮಹಾನ್ ಗ್ರಂಥಗಳು ತಿಳಿಯದೇ ಇರುವುದು ಉಂಟು ಅಂತಹ ದೊಡ್ಡ ಮಹಾನ್ ಗ್ರಂಥಗಳಾದ ರಾಮಾಯಣ ಮಹಾಭಾರತವನ್ನು ಹಾಡು, ಕತೆ ಅಥವಾ ನಾಟಕ ಮತ್ತು ಅತ್ಯಂತ ಸರತೆಯಿಂದ ಈ ಹಗಲು ವೇಷಗಾರರು ಅವಿದ್ಯಾವಂತರಾಗಿ ತಿಳಿಸುತ್ತಿರುವುದು ಅತ್ಯಂತ ಆಶ್ಚರ್ಯವಾಗುತ್ತದೆ .
ರಾಮಾಯಣ ಮಹಾಭಾರತ ಕತೆಗಳು ವಿದ್ಯಾವಂತ ಅಕ್ಷರ ರೂಪದ ಗ್ರಂಥಗಳಿಂದ ಓದಿ ತಿಳಿದುಕೊಂಡಿದ್ದಾರೆ.ಭಾರತಾದ್ಯಂತ ಬಹು ಸಂಸ್ಕೃತಿಯ ಅವಿದ್ಯಾವಂತ ಅಲೆಮಾರಿ ಮೂಲದವರಾದ ಜನರ ಬಾಯಲ್ಲಿ ರಾಮಾಯಣ ಮಹಾಭಾರತ ಕತೆಗಳು ಜೀವಂತವಾಗಿವೆ .
ಅವಿದ್ಯಾವಂತರು ರಾಮಾಯಣ ಮಹಾಭಾರತ ಕತೆಗಳನ್ನು ಎಲ್ಲಿ ಕಲಿತು ಕೊಂಡರು?
ಇವರಿಗೆ ಯಾರು ಕಳಿಸಿದರು ಎಂಬ ಪ್ರಶ್ನೆಗೆ ಸರಿಯಾದ ಉತ್ತರ ವೇಷಗಾರರಿಂದ .ಸಂಗೀತ ಮತ್ತು ಸಾಹಿತ್ಯವನ್ನು ತಮ್ಮ ನಾಲಿಗೆಯಲ್ಲಿ ಇಟ್ಟುಕೊಂಡು ಮುಖಕ್ಕೆ ಬಣ್ಣ ಬಳಿದು ಕೊಂಡು ಬೀದಿ ಬೀದಿಗಳಲ್ಲಿ ಮನೆ ಮನೆ ಮುಂದೆ ಕತೆ ಹೇಳಿದ ಶಾಶ್ವತ ಶಿಕ್ಷಕರು ಇವರು
ಈಗಿನ ಕಂಪ್ಯೂಟರ್ ಯುಗದಲ್ಲಿ ಅಭಿವೃದ್ಧಿ ಎನ್ನುತ್ತಾ ಮೂಲತದಿಂದ ಬಂದಂತಹ ಭಾರತದ ಸಂಸ್ಕೃತಿ ಜಾನಪದ ಕಲೆಗಳಾದ ಹಗಲು ವೇಷ , ಮತ್ತು ಇನ್ನಿತರ ಕಲೆಗಳು ಮರೆಯಾಗುತ್ತಿವೆ. ಈ ರೀತಿ ಬೆಳವಣಿಗೆಯು ನಮ್ಮ ಸಂಸ್ಕೃತಿಯನ್ನೇ ಮರೆಮಾಚುತ್ತಿವೆ