ಸದಸ್ಯ:ರಶ್ಮಿ ವಿನಯ್/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯುರೇಶಿಯನ್ ಬ್ಲ್ಯಾಕ್ ಕ್ಯಾಪ್ ಯೂರೋಪ್, ಪಶ್ಚಿಮ ಏಶಿಯ ಹಾಗೂ ಉತ್ತರ ಆಫ಼್ರಕಾದಲ್ಲಿ ಕಂಡುಬರುವ ಸಾಮಾನ್ಯ ಹಾಡುಹಕ್ಕಿ. ಇದರ ಮೇಲ್ಭಾಗ ಬೂದು ಬಣ್ಣದ್ದಾಗಿದ್ದು, ಕೆಳಭಾಗ ತಿಳಿಯಾದ ಬೂದು ಬಣ್ಣವನ್ನು ಹೊಂದಿದೆ. ಗಂಡು ಹಕ್ಕಿಗೆ ಕಪ್ಪನೆಯ, ಹೆಣ್ಣು ಹಕ್ಕಿಗೆ ಕೆಂಪು ಮಿಶ್ರಿತ ಕಂದುಬಣ್ಣದ ಟೋಪಿಯಿದೆ. ಗಂಡು ಹಕ್ಕಿಯ ಕೂಗು ತುಂಬು ಕಂಠದ್ದಾಗಿ ಸಂಗೀತಮಯವಾಗಿರುತ್ತದೆ[೧]. ಬ್ಲ್ಯಾಕ್ ಕ್ಯಾಪ್ ಪಕ್ಷಿಯು ಮಾಗಿದ ಡೆಸಿಡ್ಯುವಸ್ ಕಾಡುಗಳಲ್ಲಿ ಅಂದವಾದ ಬಟ್ಟಲಿನ ಆಕಾರದ ಗೂಡನ್ನು ನಿರ್ಮಿಸುತ್ತದೆ. ಹೆಣ್ಣು ಹಕ್ಕಿಯು ೪-೫ ತೆಳುಹಳದಿ ಬಣ್ಣದ ಮೊಟ್ಟೆಗಳನ್ನು ಇಡುತ್ತದೆ. ಅವು ಸುಮಾರು ೧೧ ದಿನಗಳಲ್ಲಿ ಒಡೆಯುತ್ತವೆ. ಮರಿಗಳಿಗೆ ೧೧-೧೨ ದಿನಗಳಲ್ಲಿ ಗರಿಗಳು ಮೂಡಿದ ನಂತರ ಸ್ವಲ್ಪಕಾಲ ತಂದೆತಾಯಿ ಹಕ್ಕಿಗಳು ಗುಟುಕು ಕೊಡುತ್ತವೆ. ಹಕ್ಕಿಗಳು ಶೀತವಾತಾವರಣದ ಪ್ರದೇಶಗಳಿಂದ ವಲಸೆ ಹೋಗಿ[೨] ಪಶ್ಚಿಮ ಯೂರೋಪಿನ ಮೆಡಿಟೆರೇನಿಯನ್ನಿನ ಹಾಗೂ ಆಫ಼್ರಿಕಾದ ಕುರುಚಲು ಕಾಡುಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ಜರ್ಮನಿಯ ಕೆಲವು ಹಕ್ಕಿಗಳು ಭ್ರಿಟಿಶ್ ಐಲ್ಸ್ ನ ಹೂದೋಟಗಳಲ್ಲಿ ಚಳಿಗಾಲವನ್ನು ಕಳೆಯುತ್ತವೆ. ವಂಶವೃದ್ಧಿಯ ಕಾಲದಲ್ಲಿ ಹುಳುಗಳನ್ನು ತಿನ್ನುತ್ತವೆಯಾದರೂ ಸಾಮಾನ್ಯವಾಗಿ ಚಿಕ್ಕ ಚಿಕ್ಕ ಹಣ್ಣುಗಳನ್ನೇ ಹೆಚ್ಚಾಗಿ ತಿನ್ನುತ್ತವೆ. ತೋಟಗಳಲ್ಲಿ ವಾಸಿಸುವ ಹಕ್ಕಿಗಳು ಬ್ರೆಡ್, ಜಿಡ್ಡಿನ ಪದಾರ್ಥ ಹಾಗೂ ಕಡಲೆಬೀಜವನ್ನು ತಿನ್ನುತ್ತವೆ.

ಇತರ ವಿಷಯಗಳು[ಬದಲಾಯಿಸಿ]

ಬೇಟೆಗಾರ ಪ್ರಾಣಿಗಳು[ಬದಲಾಯಿಸಿ]

  • ಯುರೇಶಿಯನ್ ಸ್ಪ್ಯಾರೋ ಹಾಕ್
  • ಯುರೇಶಿಯನ್ ಮ್ಯಾಗ್ಪೈ
  • ಅಳಿಲುಗಳು

ಪರಾವಲಂಬಿ ಜೀವಿಗಳು[ಬದಲಾಯಿಸಿ]

  • ಕೋಗಿಲೆ
  • ಪ್ರೋಟೋಜ಼ೋಅನ್ಸ್
  • ಎಚ್. ಪ್ಯಾರಬೆಲೋಪೋಲ್ಸ್ಕಿ

ನಿವಾಸ ಸ್ಥಳಗಳು[ಬದಲಾಯಿಸಿ]

  1. ಓಕ್ ಕಾಡುಗಳು
  2. ಅಕೇಶಿಯ
  3. ಮ್ಯಾಂಗ್ರೋವ್ ಕಾಡುಗಳು
  4. ಜೊಂಡು

ಉಲ್ಲೇಖ[ಬದಲಾಯಿಸಿ]

  1. "Black cap warbler". Black cap warbler. Retrieved 2 October 2021. {{cite web}}: External link in |ref= (help)
  2. https://elifesciences.org/articles/54462