ಸದಸ್ಯ:ಬಿ ಶಿವಕುಮಾರ ಶಾಸ್ತ್ರಿ
ಗೋಚರ
ಪೌರಾಣಿಕ ಕಥೆಗಳನ್ನು ವಿಶಿಷ್ಟವಾಗಿ ಹಾಡುತ್ತಾ, ವಿವರಣೆ ನೀಡುವ ‘ಹರಿಕಥೆ’ ಇಂದಿಗೂ ಪ್ರಸಿದ್ಧಿ ಪಡೆದಿದೆ. ಇಂತಹ ಪವಿತ್ರವಾದ ಹರಿಕಥೆಯನ್ನೇ ವೃತ್ತಿ ಧರ್ಮವನ್ನಾಗಿಸಿಕೊಂಡು, ಅದಕ್ಕೂ ಮಿಗಿಲಾಗಿ ಉಸಿರಾಗಿಸಿಕೊಂಡು ನೂರಾರು ಊರು ಸುತ್ತಿ ಸಾವಿರಾರು ವೇದಿಕೆಗಳಲ್ಲಿ ತನ್ನ ನಿರರ್ಗಳ ದನಿಯಿಂದ ಈಗಾಗಲೇ ತನ್ನದೇ ಆದ ಶ್ರೋತೃ ಬಳಗವನ್ನು ಹೊಂದಿರುವ ನಾದಸಂಗಮ ಪ್ರತಿಷ್ಠಾನದ ಹIIವಿII ಬಿ.ಶಿವಕುಮಾರಶಾಸ್ತ್ರಿಯವರು ಕರ್ನಾಟಕದ ಬಹುತೇಕ ಹರಿಕಥೆಯ ಕೇಳುಗರಿಗೆ ಚಿರಪರಿಚಿತರು. ಈಗಾಗಲೇ ಸಾಮಾಜಿಕ ಜಾಲ ತಾಣದ ಮುಖಾಂತರ ರಾಜ್ಯಾದ್ಯಂತ ಮನೆ ಮಾತಾಗಿದ್ದಾರೆ.