ಸದಸ್ಯ:ಫಾತಿಮತ್ ಜಾಸ್ಮಿನ್ ಎಸ್
ಗೋಚರ
ನನ್ನ ಹೆಸರು ಫಾತಿಮತ್ ಜಾಸ್ಮಿನ್ ಎಸ್ ಎಂದು ಪರಿಚಯಿಸಲು ಇಚ್ಚಿಸುತ್ತೇನೆ. 1998ರ ಆಗಸ್ಟ್ 24 ರಂದು ಶೇಣಿ ಎಂಬಲ್ಲಿ ನನ್ನ ಜನನವಾಯಿತು. ನನ್ನ ಬಾಲ್ಯದ ಸುಮಾರು ಹತ್ತು ವರ್ಷಗಳನ್ನು ಅಲ್ಲೇ ಕಳೆದಿದ್ದೇನೆ. ನಾನು ಕಿರಿಯ ಪ್ರಾಥಮಿಕ ಶಾಲೆಯನ್ನು ಶೇಣಿಯಲ್ಲಿ, ಹಿರಿಯ ಪ್ರಾಥಮಿಕ ಶಾಲೆಯನ್ನು ಶಾಂತಿನಗರ ಎಂಬಲ್ಲಿ, ಪ್ರೌಢಶಾಲೆಯನ್ನು ಗ್ರೀನ್ ವ್ಯೂನಲ್ಲಿ ಹಾಗು ಪದವಿ ಪೂರ್ವ ಶಿಕ್ಷಣವನ್ನು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು ಅರಂತೋಡಿನಲ್ಲಿ ಪೂರ್ತಿಗೊಳಿಸಿದ್ದೇನೆ. ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇಲ್ಲಿ ಪ್ರಧಮ ವರ್ಷದ ಬಿ. ಎಸ್ಸಿ. ಬಯೋಟೆಕ್ನೋಲಜಿ ವಿಷಯದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.
ನನ್ನ ಹಿಂದಿನ ವ್ಯಾಸಂಗದ ಸಮಯದಲ್ಲಿ ಜವಾಹರ್ ಲಾಲ್ ನೆಹರು ನವೋದಯ ರಾಷ್ಟ್ರೀಯ ವಿದ್ಯಾಲಯ, ಮೊರಾರ್ಜಿ ದೇಸಾಯಿ, ಮುಂತಾದ ಪ್ರಖ್ಯಾತ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿರುತ್ತೇನೆ. ನಾನು ಪ್ರತಿಭಾ ಕಾರಂಜಿಯಂತಹ ಹಲವಾರು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಹಲವಾರು ಪುರಸ್ಕಾರಗಳನ್ನು ಪಡೆದಿರುತ್ತೇನೆ. ಸಿರಿಗನ್ನಡ, ಜ್ಞಾನಸುರಭಿ ಮುಂತಾದ ಪರೀಕ್ಷೆಗಳನ್ನು ಎದುರಿಸಿ ಅತ್ಯುತ್ತಮ ಅಂಕಗಳನ್ನು ಪಡೆದಿರುತ್ತೇನೆ. ಜಿಲ್ಲಾ ಮಟ್ಟದ ಇಂಸ್ಪ್ಯಾರ್ ಅವಾರ್ಡ್ ಪ್ರತಿಭಾ ಸ್ಪರ್ಧೆಯಲ್ಲಿ ಭಾಗವಹಿಸಿರುತ್ತೇನೆ. ಹಲವಾರು ನೈತಿಕ ಮೌಲ್ಯಗಳನ್ನು ರೂಪಿಸುವಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುತ್ತೇನೆ. ಮುಂತಾದ ಕಾರ್ಯಕ್ರಮಗಳು ನನ್ನ ಜೀವನದಲ್ಲಿ ಮುಂದುವರಿಯಲು ಸಾಕಷ್ಟು ಅನುಭವಗಳನ್ನು ನೀಡಿದೆ. ಜೀವನವೇ ನನ್ನ ಮೊದಲ ಪಾಠಶಾಲೆ. ಆದ್ದರಿಂದ ನಾನು ಅನುಭವದಿಂದಲೇ ಬಹಳಷ್ಟು ಕಲಿತಿದ್ದೇನೆ.
ನನ್ನ ಆಸಕ್ತಿಯೆಂದರೆ ಕಾದಂಬರಿಗಳನ್ನು ಓದುವುದು, ಹೊಸ ವಿಷಯಗಳನ್ನು ತಿಳಿದುಕೊಳ್ಳುವುದು, ಅದರ ಬಗ್ಗೆ ಅಧ್ಯಯನ ನಡೆಸುವುದು.
ನನ್ನ ಆಸಕ್ತಿಯ ಕ್ಷೇತ್ರವನ್ನು ಆರಿಸಿಕೊಂಡು ನಾನು ಶಿಕ್ಷಣವನ್ನು ಮುಂದುವರಿಸುತ್ತಿದ್ದೇನೆ. ನಾನು ತಳಿಶಾಸ್ರದ ಬಗ್ಗೆ ತುಂಬಾ ಆಸಕ್ತಿಯನ್ನು ಹೊಂದಿದ್ದೆ, ಅದರಲ್ಲೇ ಶಿಕ್ಷಣ ಮುಂದುವರೆಸಬೇಕೆಂದು ಬೇರೆಯವರ ಮಾತಿಗೆ ಗಮನ ಕೊಡದೆ ಈ ಕ್ಷೇತ್ರವನ್ನು ಆರಿಸಿಕೊಂಡದ್ದೇನೆ. ಅದರ ಜೊತೆಗೆ ಬೇರೆ ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕೆಂದು ಹಾಗು ನನ್ನ ಶಿಕ್ಷಕರ ಪ್ರೋತ್ಸಾಹದಿಂದ ಈಗ ಕನ್ನಡ wikipedia ಕ್ಕೆ ಕಾಲಿಟ್ಟಿದ್ದೇನೆ. ಇದರಿಂದ ನನ್ನ ಜೀವನದಲ್ಲಿ ಇನ್ನಷ್ಟು ಮುಂದುವರೆಯುತ್ತೇನೆ. ಹೊಸ ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಇದು ತುಂಬಾ ಸಹಾಯಕವಾಗುತ್ತದೆ ಎಂಬ ವಿಶ್ವಾಸದೊಂದಿಗೆ ಮುಂದುವರೆಯುತ್ತಿದ್ದೇನೆ.