ಸದಸ್ಯ:ದ್ರವ್ಯ ಇಂದಾವರ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೀಟಗಳ ನಿರ್ವಹಣೆಯಲ್ಲಿ ನೈಸರ್ಗಿಕ ವಿಧಾನಗಳು: ಬೇವಿನ ಸಿಂಪಡಣೆ: ಬೇವಿನಮರದ ವಿವಿಧ ಉತ್ಪನ್ನಗಳಿಂದ ಸುರಕ್ಷಿತವೂ ಪರಿಣಾಮಕಾರಿಯೂ ಆದ ಜೈವಿಕ ಕೀಟನಾಶಕಗಳನ್ನು ತಯಾರಿಸಬಹುದು.ಬರವನ್ನು ಸೊಳ್ಳೆಯೂ ಸೇರಿದಂತೆ ಬಹುತೇಕ ಎಲ್ಲಾ ರೀತಿಯ ಕೀಟಗಳ ಮೇಲೂ ಪ್ರಯೋಗಿಸಬಹುದು.ಕೆಲ ಸಮಯ ಫಲಿತಾಂಶ ಸಿಕ್ಕಲಿಲ್ಲ ಕೆಲ ವಾರಗಳೇ ಆಗಬಹುದು. ಏಕೆಂದರೆ ಕೀಟಗಳಲ್ಲಿ ಬೇವು ಅದರ ಸಚಿತಾನೋತ್ಪತ್ತಿ ಚಕ್ರವನ್ನು ನಾಶಪಡಿಸುತ್ತದೆ.ಕೀಟನಾಶಕವಾಕಿ ಬಳಸಲು ಬೇವು ಬಹಳ ಸೂಕ್ತ. ಏಕೆಂದರೆ ಇದು ಮನುಷ್ಯರಿಗೆ ಸುರಕ್ಷಿತ,ಅನೇಕ ಮಿತ್ರ ಕೀಟಗಳ ಮೇಲೆ,ವಿಷೇಷವಾಗಿ ಪೀಡೆ ಭಕ್ಷಕಗಳ ಮೇಲೆ ತೀವ್ರ ಪರಿಣಾಮ ಉಂಟು ಮಾಡುವುದಿಲ್ಲ. ಕೆಲ ಸನ್ನಿವೇಷಗಳಲ್ಲಿ ಉಪಕಾರಿ ಎರಡು ಹುಳುಗಳ ಸಂತಾನ ವು್ರದ್ದಿಪಡಿಸುತ್ತದೆ.

ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಸಿಂಪಡಣೆ: ಮೂರು ಗಡ್ಡೆ ಬೆಳ್ಳುಳ್ಳಿಉನ್ನು ಸುಲಿದು ಒಂದುದೊಡ್ಡ ಹಿಡಿ ಹಸಿ ಮೆಣಸಿನಕಾಯಿ ಜೊತೆ ಬೆರಸಿ ಒಂದು ಮಡಕೆಯಲ್ಲಿ ಹಾಕಿ ಕುದಿಸಿ. ೫೦೧ ಸೋಪಿನ ಬಿಲ್ಲೆಯ ಕಾಲು ಭಾಗವನ್ನು ಇದಕ್ಕೆ ಸೇರಿಸಿ ಒಂದೇ ಸಮ ಚನ್ನಾಗಿ ಕಲಕಿ. ಒಂದು ದಿನ ಹಾಗೆಯೇ ಬಿಡಿ. ಇದನ್ನು ಸೋಸಿಕೊಂಡು ಪ್ರತಿ ಸಿಂಪಡಣೆಗೆ ಎರಡು ಕೊಡದಂತೆ ಬಳಸಿ. ಬೆಳ್ಳುಳ್ಳಿ ಒಂದು ಕೀಟನಾಷಕ, ಶಲೀಂದ್ರ ನಾಶಕ ಹಾಗೂ ಪೀಡೆ ವಿಕರ್ಷಕ. ಸೋಪನ್ನು ಬಳಸುವುದರಿಂದ ಸಿಂಪಡಣೆ ಸಸ್ಯಗಳಿಗೆ ಸುಲಭವಾಗಿ ಹತ್ತಿಕೊಳ್ಳುತ್ತದೆ.

ಸೋಪಿನ ಸಿಂಪಡಣೆ: ಸೀಗಡಿ ಹಸಿರುಳ ಸಣ್ಣ ಕ್ವಾರೆ ಹುಳ ಮತ್ತು ಇತರ ಎಲೆ ತಿನ್ನುವ ಕೀಟಗಳಿಗೆ ಪರಿಣಾಮಕಾರಿ. ಈ ಸಿಂಪಡಣೆ ತಯಾರು ಮಾಡಲು ಒಂದು ಲೀಟರ್ ನೀರಿಗೆ ಒಂದು ದೊಡ್ಡ ಚಮಚ ಸೋಪಿನಪುಡಿ ಅಥವಾ ಸೋಪಿನ ಬಿಲ್ಲೆ ಬೇಕು.ಇದನ್ನು ಕೇವಲ ಕೀಟಗಳ ಮೇಲೆ ಅಥವಾ ಘಾಸಿಯಾದ ಸಸ್ಯಗಳ ಮೇಲೆ ಸಿಂಪಡಣೆ ಮಾಡಿ.ಪಾತ್ರ ತೊಳೆದು ಅಥವಾ ಬಟ್ಟೆ ತೊಳೆದು ಉಳಿದ ನೀರನ್ನು ಸಿಂಪಡಣೆಗೆ ಬಳಸಬಹುದು.

ಅಡಿಕೆ ಸಿಂಪಡಣೆ: ದೊಡ್ಡ ಬಸವನಹುಳ ಹಾಗೂ ಇತರ ಬಗೆಯ ಬಸವನಹುಳಗಳಿಗೆ ಇದು ಅತ್ಯಂತ ಪರಿಣಾಮಕಾರಿ ವಿಷ ಎಂದು ಸಾಭೀತಾಗಿದೆ. ಅಡಿಕೆ ರಸವನ್ನು ತಗೆದು ಒಂದು ಬಕೇಟಲ್ಲಿ ಹಾಕಿ ಅದಕ್ಕೆ ನೀರು ಬೆರಸಿ ನೇರವಾಗಿ ಹೊಡೆಯಿರಿ. ಈ ಸಿಂಪಡಣೆ ಅಡಿಕೆ ಸುಣ್ಣ ಅಥವಾ ಎರಡನ್ನೂ ಬಳಸಿ ಮಾಡಬಹುದು.