ಸದಸ್ಯ:ಚೈತನ್ಯ ಸಿ ಎನ್
ಗೋಚರ
"ಗಲಗಿನ ಚನ್ನಯ್ಯ ತಾತ,"
ಗಲಗಿನ ಚೆನ್ನಯ್ಯ ತಾತನವರು, ಮೂಲತ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗಲಗಿನ ಗ್ರಾಮದಲ್ಲಿ. ೫೦ ರ ದಶಕದಲ್ಲಿ ಹುಟ್ಟಿದರು. ಇವರು ಶರಣ ಸಾಹಿತ್ಯದ ಮಾರ್ಗದಲ್ಲಿ ನಡೆದು ಬಂದು ಇವರು ಕೂಡ ಶರಣರು ವ್ಯಕ್ತಿಯಾಗಿದ್ದಾರೆ ಈ ಹಿಂದೆ ೧೨ ನೇ ಶತಮಾನದಲ್ಲಿ ಬಸವಣ್ಣ ಚೆನ್ನಬಸವಣ್ಣನವರು, ನಡೆದ ಮಾರ್ಗವನ್ನು ಅನುಸರಿಸಿ, ಗಲಗಿನ ಚೆನ್ನಯ್ಯ ತಾತನವರು ಕೂಡ ಅದೇ ಮಾರ್ಗದಲ್ಲಿ ಅನುಸರಿಸಿಕೊಂಡು ಶರಣ ಸಾಹಿತ್ಯದಲ್ಲಿ ಹೆಸರು ಮಾಡಿದ್ದಾರೆ.
ಗಲಗಿನಲ್ಲಿ ಮಠವು ಕೂಡ ಇದೆ, ಅದು ಆರೂಢ ಮಠವೆಂದು ಹೆಸರು ಇದೆ. ಈ ಮಠಕ್ಕೆ ಯಾವುದೇ ರೀತಿಯಿಂದ ಜಾತಿ, ವರ್ಣ, ಭೇದಭಾವ, ಮಾಡದೇ ಇವತ್ತಿಗೂ ಕೂಡ ಮಠವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಗಲಗಿನ ಚನ್ನಯ್ಯ ತಾತನವರ ಮೊಮ್ಮಗನಾದ ನಿಂಗಯ್ಯ ತಾತ ಮತ್ತು ಅಯ್ಯಪ್ಪ ತಾತನವರು.
ಈ ಮಠದಲ್ಲಿ ಗೌರಿ ಹುಣ್ಣಿಮೆಯಂದು ಅಂದರೆ ೯ ದಿವಸದ ನಂತರ ಅದ್ದೂರಿಯಾಗಿ ಚೆನ್ನಯ್ಯ ತಾತನವರ ಪಲ್ಲಕ್ಕಿಯನ್ನು ಹೊತ್ತುಕೊಂಡು ಮೆರವಣಿಗೆಯನ್ನು ಮಾಡುತ್ತಾ ಆಚರಣೆ ಮಾಡುತ್ತಾರೆ,
ಮಠದಿಂದೆ ಇರುವ ಹೊಳೆಯಿಂದ ಪಲ್ಲಕ್ಕಿಯನ್ನು ಹೊತ್ತುಕೊಂಡು ಮೆರವಣಿಗೆ ಮಾಡುತ್ತಾರೆ. ಇನ್ನು ಹೀಗೆ ಹಲವು ಹಬ್ಬ ಮಾಡುತ್ತಾ ಪ್ರತಿಯೊಂದು ಅಮಾವಾಸ್ಯೆಗಳಿಗೆ ಪೂಜೆ-ಪುನಸ್ಕಾರಗಳು ಗಲಗಿನ ಚನ್ನಯ್ಯ ತಾತನವರ ಮಠದಲ್ಲಿ ನೆರವೇರಿಸುತ್ತಾರೆ. ಎಂದು ಹೇಳಬಹುದು.....