ವಿಷಯಕ್ಕೆ ಹೋಗು

ಸದಸ್ಯ:ಚಿನ್ಮಯಿ ಪರಮೇಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವನ ಕೈಯಲ್ಲಿ ಸಂಸ್ಕೃತಿ ಎಂಬ ಮಾಣಿಕ್ಯ

ಇಂದಿನ ಸಮಾಜದಲ್ಲಿ ಭಾರತದ ಸಂಸ್ಕೃತಿ ಹೇಗಿದೆ ಎಂದರೆ ಅದರ ಮೌಲ್ಯ ತಿಳಿಯದೆ ವಿನಾಶದ ಅಂಚಿನಲ್ಲಿದೆ. ಹಿಂದೆ ತಾಮ್ರದ ತಟ್ಟೆಯಲ್ಲಿ ಊಟ ಮಾಡುತ್ತಿದ್ದರು, ಸಂಸ್ಕೃತಿಗೆ ಗೌರವ ಪ್ರಮುಖವಾಗುತ್ತಿತ್ತು. ಬಾಳೆ ಎಲೆಯಲ್ಲಿ ಊಟ ಮಾಡುತ್ತಿದ್ದರು, ಸಂಸ್ಕೃತಿಯೇ ಬದುಕಿನ ಸೇತುವೆಯಾಗುತ್ತಿತ್ತು. ಆದರೆ ಈಗ ಎಲ್ಲರೂ use and throw ತಟ್ಟೆಯಲ್ಲಿ ಊಟ ಮಾಡುತ್ತಾರೆ. ಸಂಸ್ಕೃತಿ ಬಳಸಿ ಎಸೆಯುವಂತಾಗಿದೆ.

ಇಂದಿನ ಸಂಸ್ಕೃತಿಯಲ್ಲಿ ಎಲ್ಲವೂ ಅಯೋಮಯ. ನಮ್ಮ ದೇಶದ ಸಂಸ್ಕೃತಿಯನ್ನು ಅರಿಯದ ಮತಿಗಳಿಂದ ಅನ್ಯ ದೇಶದ ಸಂಸ್ಕೃತಿಯನ್ನು ಪಾಲಿಸಲಾಗುತ್ತಿದೆ. ಇದರಿಂದ ಭಾರತದ ಹಿರಿಮೆ ಕುಂದುತ್ತಿದೆ. ಇಂದಿನ ಫ್ಯಾಷನ್ ಬಿನ್ನಾಣಗಳು ಬರಿ ಮಾನವನ ಹುನ್ನಾರಗಳಾಗಿವೆ. ಸಂಸ್ಕೃತಿ ಎಂಬ ಮಾಣಿಕ್ಯ ಕೋತಿಯ ಬದಲು ಮಾನವನ ಕರದಲ್ಲಿ ಬಂಧಿಯಾಗಿ ಮಾನವತೆಗೆ ಕುತ್ತಾಗುತ್ತಿದೆ.

ಧೃತಿಗೆಟ್ಟು ಇನ್ನು ಎಷ್ಟು ಹೇಳಲಿ......?

ಧನ್ಯವಾದಗಳು 🙏