ವಿಷಯಕ್ಕೆ ಹೋಗು

ಸದಸ್ಯ:ಕುಮಾರ ಇಂದ್ರಬೆಟ್ಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕುಮಾರ ಇಂದ್ರಬೆಟ್ಟ ಅವರು ಕನ್ನಡ ಸಾಹಿತ್ಯದ ಸಮಕಾಲೀನ ಬರಹಗಾರರಲ್ಲಿ ಭರವಸೆಯ ಬರಹಗಾರರಾಗಿದ್ದಾರೆ. ಶ್ರೀಯುತರು ಪಾವಗಡ ತಾಲ್ಲೂಕಿನ, ಇಂದ್ರಬೆಟ್ಟ ಗ್ರಾಮದವರು. 1987ರಲ್ಲಿ ದುರ್ಗಪ್ಪ ಹಾಗೂ ಲಕ್ಷ್ಮಂಮಂ ಅವರ ಮಗನಾಗಿ ಜನಿಸಿ, ಹುಟ್ಟೂರಲ್ಲಿ ಪ್ರಾಥಮಿಕ ಶಿಕ್ಷಣವನ್ನು ಮುಗಿಸಿ, ಮಾಧ್ಯಮಿಕ ಶಿಕ್ಷಣವನ್ನು ಪೋತಗಾನಹಳ್ಲಿಯ ಸರಕಾರಿ ಶಾಲೆಯಲ್ಲಿ ಪೂರೈಸಿ, ಸೆಕೆಂಡರಿ ಶಿಕ್ಷಣವನ್ನು ಅಂಬೇಡ್ಕರ್ ಗ್ರಾಮೀಣ ಶಾಲೆಯಲ್ಲಿ ಮುಗಿಸಿರುತ್ತಾರೆ. ನಂತರ ಪಾವಗಡದ ಬಾಪೂಜಿ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿ, ವೈ.ಇ.ಆರ್. ರಂಗಯ್ಯಶೆಟ್ಟಿ ಸರ್ಕಾರಿ ಪದವಿ ಕಾಲೀಜಿನಲ್ಲಿ ಪದವಿಸ್ ಶಿಕ್ಷಣವನ್ನು ಪೂರೈಸಿ ಉನ್ನತ ವ್ಯಾಸಾಂಗಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅದ್ಯಯನ ಕೇಂದ್ರದಲ್ಲಿ ಎಂ.ಎ. ಪೂರೈಸಿ. ಅನಂತರ ಎಮ್.ಇ.ಎಸ್. ಶಿಕ್ಷಣ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪದವಿಯನ್ನು ಪೂರೈಸಿ ಕೆಲವು ದಿನಗಳ ಕಾಲ ಉಪಂಯಾಸಕನಾಗಿ ವೃತ್ತಿ ಜೀವನವನ್ನು ಪ್ರಾರಂಭಿಸುತ್ತಾರೆ. ನಂತರ ಪಿಹೆಚ್.ಡಿ. ಪದವಿಗಾಗಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅದ್ಯಯನ ಕೇಂದ್ರದಲ್ಲಿ JRF ಧನಸಹಾಯದೊಂದಿಗೆ "ಹೊಸ ತಲೆಮಾರಿನ ಕನ್ನಡ ಮಹಿಳಾ ಕಾವ್ಯ: ವಸ್ತು ಮತ್ತು ಅಭಿವ್ಯಕ್ತಿಯ ನೆಲೆಗಳು" ಎಂಬ ವಿಷಯದ ಮೇಲೆ ಸಂಶೊಧನೆ ನಡೆಸಿ ಪಿಹೆಚ್ಡಿ ಪದವಿ ಪಡೆದಿದ್ದಾರೆ . ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿರುವ ಶ್ರೀಯುತರು ಇದುವರೆಗೂ 'ನಿನಗೂ ಕೂಡ ಕಳಂಕವೆ', 'ಬೆಂಕಿ ಸುವುವ ಜಲ'ಎಂಬ ಎರಡು ಕವನ ಸಂಕಲನಗಳನ್ನೂ, 'ತೇವ ತಾಗಿದ ಬೀಜ', 'ಎಳೆ ಬಿಸಿಲು' ಎಂಬ ವಿಮರ್ಶಾ ಸಂಕಲನಗನ್ನೂ, 'ಬರಿಗಾಲು','ಹಲವು ನುಡಿಗಳ ನಡಿಗೆ', ಕವಡೆಯ ಕಣ್ಣು, ಸಾಹಿತ್ಯ ಚೇತನ, ಸಾಹಿತ್ಯ ಪ್ರಸ್ತಾನ, ದಲಿತ ಕಾವ್ಯ ಯಾನ, ಹಾಗೂ 'ugc NET&K-SET ಕನ್ನಡ ಪ್ರಶ್ನೊತ್ತರ ಕೋಶ'ಮೊದಲಾದ ಕೃತಿಗಳನ್ನು ಇತರರೊಂದಿಗೆ ಸೇರಿ ಸಂಪಾದನೆ ಮಾಡಿದ್ದಾರೆ. ಇವರ ಎಲ್ಲಾ ಸಾಹಿತ್ಯ ಬರಹಗಳು 'UGC NET AND KSET SYLLABUS ನಲ್ಲಿ ಸೇರ್ಪಡೆಗೊಂದಿವೆ.