ಸದಸ್ಯ:ಕಾಸು ಮಣುರೆ
ಗೋಚರ
ಜೀವನ
ಸಹನೆಯ ಆದರ್ಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳೋದು ಅಷ್ಟೇನು ಸುಲಭವಲ್ಲ ಆದರೂ ಸಾದ್ಯವೇನಿಲ್ಲ. "ತಾಳ್ಮೆ ಕಹಿಯಾದರೆ ಫಲ ಸಿಹಿ" ಎಂಬಂತೆ ಇದನ್ನ ಜೀವನದಲ್ಲಿ ಸಂಪೂರ್ಣ ತಿಳಿದರೆ ಜೀವನದ ಒಂದು ಭಾಗ ತಿಳಿದಂತೆ.ಮತ್ತು ಅನೇಕ ಮಹಾಪುರುಷರು ,ವಿರ ಮಹಿಳೆಯರು ತಮ್ಮ ಜೀವನದಲ್ಲಿಯ ಕಷ್ಟ ನಷ್ಟಗಳನ್ನು ಅನುಭವಿಸಿದರೂ ತಮ್ಮ ತಾಳ್ಮೆ ಬಿಡದೆ ಗುರಿ ಸಾಧಿಸಿದರು.ಅನೇಕ ಜನರು ತಮ್ಮ ಜೀವನದಲ್ಲಿ ಕಹಿಯಾತನೆಗಳನ್ನ ಅನುಭವಿಸಿ ಬಡತನದಲ್ಲಿ ಬೆಂದರು.ತಮ್ಮ ಜೀವನ ಯಾವುದು? ಏನು? ಎಂಬುದನ್ನ ತಿಳಿದುಕೊಂಡರು.
ಜಗತ್ತಿನಲ್ಲಿ ಹಲವಾರು ರೀತಿಯ ಜನರು ತಮ್ಮ ಜೀವನ ನಡೆಸುತ್ತಾರೆ,ಆದರೆ ಜೀವನ ಎಂಬುದು ಯಾರಿಗೂ ತಿಳಿದಿಲ್ಲ.ತಿಳಿದವರು ಬಹಳ ದಿನ ಉಳಿದಿಲ್ಲ.
ಒಬ್ಬ ವ್ಯಕ್ತಿ ಬಡತನದಲ್ಲಿ ಸಮಾಜ ಸೇವೆ ಮಾಡುತ್ತ ,ಸಮಾಜದಿಂದ ದೊರೆತ ಗೌರವದಿಂದ ಅವನು ತನ್ನ ಅಭಿಪ್ರಾಯವನ್ನ ಜನರಲ್ಲಿ ಹಂಚಿಕೊಳ್ಳುತ್ತಾನೆ.ಈ ನೆಲ ಯಾಕೆ ಹಸನಾಗದು ಎಂಬುದೇ ನನ್ನ ಪ್ರಶ್ನೆ?ಕಸಗುಡಿಸಿ ಕಸಗುಡಿಸಿ ಬೇಸರವಾಯಿತು ,ನನ್ನ ಮನದಾಸೆ ಎಲ್ಲ ಕಳೆದುಕೊಂಡೇ ಆದರೆ ಬಹಳ ಕಸ ಬಿದ್ದಿದೆ ಅಂತ ಅನಿಸುತ್ತಿದೆ ಯಾವಾಗ ಹಸನಾಗುವುದೋ ಏನೋ ನೀನೇ ಬಲ್ಲೆ ಬಸವಲಿಂಗ.ಕಾಮದ ಕಣ್ಣೋಟ ,ಚರ್ಮದ ಹಸಿವು ಯಾವಾಗ ಇಂಗುವುದೋ ಬಸವಲಿಂಗ ಆವಾಗಲೇ ಈ ಜಗತ್ತು ಹಸನಾಗುವುದು ಏನೋ ಅನಿಸುತ್ತೆ.
ಹೆಣ್ಣು ಹೊನ್ನು ಮಣ್ಣಿನ ಮೋಹ ಮುಂಗಾರು ಮಳೆ ತರಹ ಎಷ್ಟು ಸಿಕ್ಕರು ಸಾಕಾಗದು ಈ ಕೆಟ್ಟ ಮನುಷ್ಯನಿಗೆ.ಎಲ್ಲವೂ ತನ್ನದಾಗಬೇಕು ಎಂಬ ದುರಾಶೆ.ಹುಟ್ಟುವಾಗ ಜಾತಕ ಸತ್ತ ಮೇಲೆ ಸೂತಕ ಯಾಕೆ ಮಾಡುವೆ ಮಧ್ಯದಲ್ಲಿ ನಿನ್ನಿ ನಾಟಕ,ನಿನ್ನ ಜೀವನದಲ್ಲಿ ನಿರೀಕ್ಷೆಗಿಂತ ದೇವರ ಪರೀಕ್ಷೆಯೇ ಜಾಸ್ತಿ ಎಂದು ನನಗೆ ನಮ್ಮ ಗುರುಗಳು ಹೇಳಿದ ಮಾತು ನೆನಪಿಗೆ ಬಂದಿತು.
ಭಾರತದಲ್ಲಿ ಅನೇಕ ಜನರು ತಮಗಾಗಿ ಜೀವಿಸದೆ ಬೆರೆಯವರಿಗಾಗಿ ಜೀವಿಸುತ್ತಾರೆ ಮತ್ತು ತಮಗಾದ ನೋವು ಎಲ್ಲ ಇನ್ನೊಬರ ಸಂತೋಷದಲ್ಲಿ ಮರೆಯುತ್ತಾರೆ ಅವರ ಸಂತೋಷದಲ್ಲಿಯೇ ತಮ್ಮ ಸಂತೋಷ ಕಾಣುತ್ತಾರೆ.ಮಾನವನ ಜೀವನವು ಒಂದು ಸುಂದರವಾದ ರಂಗೋಲಿ ತರಹ ಒಂದು ಚುಕ್ಕಿ ತಪ್ಪಿದರೂ ತಗೆದ ಎಲ್ಲ ರಂಗೋಲಿ ಹಾಳಾಗುತ್ತೆ.ನಾವು ಜೀವಿಸುವ ಪ್ರತಿ ಹೆಜ್ಜೆಯಲ್ಲೂ ನಮ್ಮ ಗಮನವಿರಬೇಕು ಆಗ ನಾವು ಜೀವಿಸುವ ಜೀವನಕ್ಕೆ ಒಂದು ಅರ್ಥ ಸಿಗುತ್ತೆ...
ಜೀವನ ಎಂದರೆ ಸಮುದ್ರ ಇದ್ದ ಹಾಗೆ, ಅದರಲ್ಲಿ ಈಜಾಡಿ ಹೊರಬರುವುದು ಬಹಳ ಕಷ್ಟದ ಮಾತಾಗಿದೆ.ಈಜಿ ದಡ ಸೇರಿದರೆ ಸ್ವರ್ಗ ಅಲ್ಲೇ ಮುಳಿಗಿದರೆ ನರಕ ಅಂತ ಹೇಳಬಹುದು.ಜೀವನದ ಇನ್ನೊಂದು ಅರ್ಥವೇನೆಂದರೆ ಜೈವಿಕ ಜಗತ್ತಿನಲ್ಲಿ ಹುಟ್ಟು ಸಾವುಗಳ ನಡುವೆ ಬದುಕಿನ ಹೋರಾಟಕ್ಕೆ ಜೀವನ ಅಂತ ಕರೆಯುತ್ತಾರೆ.ಮಾನವನ ಜೀವನದಲ್ಲಿ 2 ಭಾಗಗಳಿವೆ ಒಂದು ಸುಖ ಇನೊಂದು ದುಃಖ.ಇವು ಮಾನವನ ಜೀವನದಲ್ಲಿ ಒಂದರ ನಂತರ ಮತ್ತೊಂದು ಬಂದರೆ ಇದಕ್ಕೆ ಸಮಾಧಾನ ,ಶಾಂತಿಯೇ ಔಷಧಿ ಅಂತ ಹೇಳಬಹುದು..
ಕಾಶಿನಾಥ ಗು ಮಣುರೆ
+918999061313
+919923243252