ಸದಸ್ಯ:ಎನ್.ಎಸ್. ದೊಡ್ಡೇಗೌಡ
ನಾನು ನರಿಗೇಹಳ್ಳಿ ದೊಡ್ಡೇಗೌಡ s/o ಸಿದ್ದನಾಯಕಪ್ಪ. ನಮ್ಮೂರು ತುಮಕೂರು ಜಿಲ್ಲೆ ತುರುವೇಕೆರೆ ತಾ. ಮಾಯಸಂದ್ರ ಹೋಬಳಿಗೆ ಸೇರಿದ, ನರಿಗೇಹಳ್ಳಿ ಗ್ರಾಮ. ಈ ಗ್ರಾಮ ೧೫೩೫ ರ ಆಸುಪಾಸಿನಲ್ಲಿ ನಿರ್ಮಾಣವಾಗಿರಬಹುದು. ಈ ಊರಿನ ಸಂಸ್ಥಾಪಕರು ಯದುವಂಶ ಜನಾಂಗದ ದುಮ್ಮಿ ದೊಡ್ಡನಾಯಕ ಹಾಗೂ ಶಲ್ಯೆ ತಿಮ್ಮನಾಯಕ ಎಂದು ತಿಳಿದುಬಂದಿದೆ. ಈ ಊರು ಹಿಂದೆ ದಟ್ಟವಾದ ಅರಣ್ಯ ಪ್ರದೇಶವಾಗಿದ್ದು ನರಿಕೆಯಹಳ್ಳಿಕಾರರ ಕುಟುಂಬಕ್ಕೆ ಈ ಗ್ರಾಮವನ್ನು ಜಹಾಗೀರು ನೀಡಿದರು ಎಂಬುದು ಇತಿಹಾಸದಿಂದ ತಿಳಿಯುತ್ತದೆ. ಇಲ್ಲಿಯ ಜನಸಂಖ್ಯೆ ೩೦೦ರ ಆಸುಪಾಸಿನಲ್ಲಿದೆ. ಇಲ್ಲಿ ೬೦ ಮನೆಗಳಿದ್ದು ಎಲ್ಲರೂ ಯದುವಂಶಿಕರು, (ಹಳ್ಳಿಕಾರರು) ವಾಸಿಸುತ್ತಿದ್ದಾರೆ. ಇವರ ಮೂಲಕಸುಬು ಪಶುಸಂಗೋಪನೆ, ಕೆಲ ಶತಮಾನಗಳಿಂದೀಚೆಗೆ ಕಾಡನ್ನು ಕಡಿದು ವ್ಯವಸಾಯಕ್ಕೆ ಭೂಮಿಯನ್ನು ಹದಗೊಳಿಸಿಕೊಂಡಿದ್ದಾರೆ.ಇಲ್ಲಿ ಶ್ರೀ ಕ್ಷೇತ್ರ ದಬಾನದಯ್ಯ ಸ್ವಾಮಿ ದೇವಾಲಯವಿದ್ದು. ಕೊರಡಿನ ಹಳ್ಳಿಕಾರರು ಶತಮಾನಗಳಿಂದ ಪೂಜಿಸುತ್ತಾ ಬಂದಿದ್ದಾರೆ.ಇಲ್ಲಿ ಕಟ್ಟೆಮನೆಯಿದ್ದು ಅದು ನರಿಗೇಹಳ್ಳಿ ದೊಡ್ಡೇರಿ ಕಟ್ಟೆಮನೆ ಎಂದು ಹೆಸರುವಾಸಿಯಾಗಿದೆ. ಇಲ್ಲಿ ಕೊರಡಿನ ಹಳ್ಳಿಕಾರರು 40 ಮನೆ, ಕೆಂಪನ ಹಳ್ಳಿಕಾರರು 3 ಮನೆ, ಗೋಡೆ ಹಳ್ಳಿಕಾರರು 1 ಮನೆ , ಕೊಟ್ಟಿ ಹಳ್ಳಿಕಾರರು 1ಮನೆ ಯವರಿದ್ದಾರೆ. ಇಲ್ಲಿ ಗ್ರಾಮ ದೇವತೆ ಮಾರಮ್ಮ ಪಟಾಲದಮ್ಮ, ಜಿಡ್ಡಗೆರೆಯಮ್ಮ, ಶ್ರೀ ರಾಮ ಮಂದಿರ ಭಜನೆ ಗುಡಿ ಇದೆ. ಈ ಊರಿಗೆ ಹೊಸಕೆರೆ ಹಳೆಕೆರೆ 2 ಕೆರೆಗಳಿದ್ದು ಮಳೆಯಾಶ್ರಿತವಾಗಿವೆ.
ನನ್ನ ಕನಸು
ಬಹಳ ದಿನದ ಕನಸೊಂದು ನನಗೆ ಮನೆ ಮುಂದೆ ಗಿಡ ನೆಟ್ಟು ಹೂ ಅರಳಿಸಬೇಕೆಂದು ಈಡೇರಲಿಲ್ಲ ನನ್ನ ಕನಸು ನನ್ನ ಪುಂಡ ಸ್ನೇಹಿತರಿಂದ ಮರೀಚಿಕೆಯಾಗಿ ಉಳಿಯಿತು ಹಾಗೆಯೆ ಕನಸಾಗಿ
ನಾನು ಎಣಿಸಿರಲಿಲ್ಲ ದಿನಗಳಿಗೆ ಬೇಗ ಬರಬಹುದೆಂದು ಆ ಸಿನವ ಮನೆಯ ಹಿರಿಯರು ಎಳೆದು ತಂದರು ಮದುವೆಯೆಂಬ ಪ್ರೇಮ ಕುಣಿಕೆಯಲಿ ಬಂದಿಸಿದರು ಹೂವಿಂದ ನನ್ನ ಸತಿ ಜೊತೆಗೆ.
ನನ್ನ ಕನಸನ್ನ ಹೇಳಿದೆ ಸತಿಗೆ ಅವಳೋ ಮೊದಲೇ ನಾಸ್ತಿಕಳು ದೇವರೆಂದರೆ ಮೈಲು ದೂರ ಇನ್ನೂ ಹೂ ಗಿಡದ ಕಥೆ ಮುಗಿಯಿತೆಂದು ತಿಳಿದು ಶಪಿಸಿದೆ ಆ ವಿಧಿಯನ್ನು
ಹೀಗೆಯೇ ಮುಂದುವರೆದಿತ್ತು ಹಾಗೆಯೇ ನನ್ನ ಕನಸು ಗೆಳೆಯ ಕರೆದನು ಒಬ್ಬ ಗುರುವಿನ ಬಳಿಗೆ ಮುಖ ನೋಡಿ ಹೇಳಿದರೆ ಮನೆಮುಂದೆ ಒಂದು ಗಿಡವ ಬೆಳೆದು ನೋಡೆಂದು
ಆ ದಿನವೇ ಹುಡುಕಿ ತಡಕಿ ತಂದು ನಿಲ್ಲಿಸಿದೆ ಹೂ ಗಿಡವೊಂದ ಸತಿಗಾಯಿತು ಎಲ್ಲಿಲ್ಲದ ಖುಷಿ ನೀರೆರೆದಳು ಹಗಲು ರಾತ್ರಿ ಹೂ ಬಿಟ್ಟಿತು ಗಿಡದ ತುಂಬ ನನಸಾಯಿತು ನನ್ನ ಕನಸು ನನಸಾಗಿ
ಇಂತಿ ಎನ್.ಎಸ್.ದೊಡ್ಡೇಗೌಡ ನರಿಗೇಹಳ್ಳಿ
ಮುಂಜಾನೆ ಎದ್ದು ಮಾರಮ್ಮಾ ಬೀದೀಲಿ ನಿಂತಿದ್ಲು ತಲೆ ಬಿಚ್ಚಿ
ಅವಳಿಗೋ ಕುರಿ ಕೋಳಿ ಕೋಣಗಳ ಚಿಂತೆ... ಬಲಿಕೊಡುವವರಾರಿಲ್ಲಾ..!
ಇವಳೇ ಹಿಡಿಯುವ ಮನಸ್ಸು ಆದರೇ..! ಕೋಳಿ ಕೊಚ್ಚೆ ತಿನ್ನುತ್ತಿವೆ ಕುರಿ ಗೊಣ್ಣೆ ಸುರಿಸುತ್ತಿವೆ
ಕೋಣಗಳ ಮೈಮೇಲೆ ಕಜ್ಜಿ ಗಾಯಗಳೇ.. ನೊಣ ಜೀಂ ಗುಡುವ ಶಬ್ದ ಮಾರಮ್ಮ ಬಂದ ದಾರಿ