ಸದಸ್ಯ:ಆನಂದ/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗೋಲ್ಡನ್ ಲಯನ್ ಟ್ಯಾಮರಿನ್

ಗೋಲ್ಡನ್ ಲಯನ್ ಟ್ಯಾಮರಿನ್ (Leontopithecus rosalia, ಲಿಯೆಂಟೊಪಿಥಿಕಸ್ ರೊಸಲಿಯ) ಎಂಬುದು ಒಂದು ಬಗೆಯ ಕೋತಿ. ಇದರ ಇನ್ನೊಂದು ಹೆಸರು ಹೊಂಬಣ್ಣದ ಕೋತಿ ಎಂದು. ಇದರ ಆವಾಸ ದಕ್ಷಿಣ ಅಮೇರಿಕಾ ಖಂಡದ ಬ್ರೆಸಿಲ್ ದೇಶದ ಅಟ್ಲಾಂಟಿಕ್ ತೀರದ ಕಾಡುಗಳಲ್ಲಿ. ಇದನ್ನು ಅಳಿವಿನಂಚಿನಲ್ಲಿರುವ ಪ್ರಾಣಿಯೆಂದು ಘೋಷಿಸಲಾಗಿದೆ. ಅರಣ್ಯದಲ್ಲಿ ಇವುಗಳ ಸಂಖ್ಯೆ ಸುಮಾರು ೧೦೦೦; ಮತ್ತು ವಿಶ್ವದ ಬೇರೆ ಬೇರೆ ೧೫೦ ಪ್ರಾಣಿ ಸಂಗ್ರಹಾಲಯಗಳಲ್ಲಿ ೪೯೦ ಇರಬಹುದು.