ಸದಸ್ಯ:ಅನಿಶ ದಿಸ/sandbox

ವಿಕಿಪೀಡಿಯ ಇಂದ
Jump to navigation Jump to search

..........= ಕಾಕಮಾಚಿಯೂ ಔಷಧವೇ!=........

ಕಾಕಮಾಚಿಯು ಎಂದು ಸಂಸ್ಕೃತದಲ್ಲಿ ಕರೆಯುವ ಬ್ಲಾಕ್ ನೈಟ್ ಅಥವಾ ಬ್ಲಾಕ್ ಶೀಡ್ ಎಂದು ಆಂಗ್ಲ ಹೆಸರು ಹೊಂದಿರುವ ಸೊಲ್ಯಾನಮ್ ನೈಗ್ರಮ್ ಎಂಬ ವೈಜ್ಞಾನಿಕ ಹೆಸರರಿನ ಈ ಗಿಡವು ೫-೨೦ ಇಂಚು ಎತ್ತರ ಬೆಳೆಯುವ ಸಸ್ಯ. ಇದು ಭಾರತದ ಎಲ್ಲೆಡೆ ಕಾಣಸಿಗುತ್ತದೆ. ನೆರಳಿನಲ್ಲಿ ಬೆಳೆಯುವ ಈ ಗಿಡ ವರ್ಷವಿಡೀ ಹೂವು ಮತ್ತು ಹಣ್ಣುಗಳಿಂದ ತುಂಬಿರುತ್ತದೆ.ಇದರ ಹಣ್ಣುಗಳು ಕಾಯಿಯಾಗಿದ್ದಾಗ ಹಸಿರು ಬಣ್ಣವನ್ನು ಹಣ್ಣಾದಾಗ ನೀಲಿ ಅಥವಾ ನೇರಳೆ ಬಣ್ಣ ಹೊಂದಿರುತ್ತದೆ. ಕೆಲವು ಹಳದಿ ಕೆಂಪು ಬಣ್ಣದ ಹಣ್ಣುಗಳು ಇವೆ. ಇದರ ಎಲೆಗಳನ್ನು ಆಹಾರ ರೂಪದಲ್ಲಿ ಬಳಸುತ್ತಾರೆ. ಹಣ್ಣುಗಳನ್ನು ತಿನ್ನಲು ರುಚಿಯಾಗಿರುವುದರಿಂದ ಮಕ್ಕಳಿಗೆ ಇಷ್ಟ ಕಾಕಾಮಾಚಿ ತ್ರಿದೋಷರ ಮೂಲಿಕೆಯಾಗಿದೆ. ಇದರ ಉಷ್ಣಗುಣ ಸ್ನಿಗ್ಧಗುಣ ವಾತಹರವಾಗಿದೆ. ಕಹಿರಸವನ್ನು ಹೊಂದಿರುವುದರಿಂದ ಪಿತ್ತ ಮತ್ತು ಕಫಹರವಾಗಿದೆ.ಕಾಕಾಮಾಚಿ ಎಲೆಗಳಲ್ಲಿ ಸಸಾರಜನಕ, ಶರ್ಕಪಿಷ್ಟ, ಕ್ಯಾಲ್ಸಿಯಂ ಕಬ್ಬಿಣ ಸತ್ವ ಹಾಗೂ ಜೀವಸತ್ವ ಹಾಗೂ ಸಿ. ಜೀವಧಾತುಗಳು ಸಮೃದ್ಧವಾಗಿವೆ. ಹಸಿರು ಮಣ್ಣಿನಲ್ಲಿ ಸೊಲೆನೈಗ್ರೈನ್ ಎಂಬ ರಸಾಯನಿಕದ್ರವ್ಯಗಳಿವೆ ಎಲೆಗಳಲ್ಲಿ ಆಲ್ಕಲಾಯ್ಡ್ ಅಧಿಕವಾಗಿದೆ. ಕಲಿತ ಹಣ್ಣಿನಲ್ಲಿ ೧೫-೨೦ ಪ್ರತಿಶತ ಗ್ಲೂಕೋಸ್ ಫ್ರಕ್ಟೊಸ್ 'ಸಿ' ಜೀವಧಾತು ಹಾಗೂ ಬೀಟಾ ಕೆರೋಟಿನ್ ಗಳಿವೆ.