ಸದಸ್ಯರ ಚರ್ಚೆಪುಟ:Sybil Cutinha 12345
ವಿಷಯ ಸೇರಿಸಿಪ್ರಕೃತಿ ಮಾತೆಯ ಪುಣ್ಯ ಮಡಿಲು ಸುಬ್ರಹ್ಮಣ್ಯ
ಅನೇಕ ಧರ್ಮಗಳ ನೆಲೆಬೀಡಾದ ಭಾರತ, ವಿವಿಧ ಮತ ಪಂಥಗಳನ್ನು ಹೊಂದಿದ್ದರೂ ವೈವಿಧ್ಯತೆಯಲ್ಲಿ ಏಕತೆಯನ್ನು ಕಾಣುವ ಪುಣ್ಯಭೂಮಿ, ಈ ಧಾರ್ಮಿಕ ಪ್ರವೃತ್ತಿಯ ಹಿನ್ನಲೆಯೇ ಇಲ್ಲಿಯ ಜನರ ಮನೋಭಾವನೆ ಅರಿಯ ಬಹುದು. ವಿದೇಶಿಯರು ಸಹ ಇಲ್ಲಿಯ ಧಾರ್ಮಿಕ ವಾತಾವರಣಕ್ಕೆ ಮಾರುಹೋಗಿ, ಇದರ ಮಹತ್ವ ಅರಿತಿದ್ದಾರೆ.
ಇಡೀ ದೇಶದಲ್ಲಿಯೇ ಕರ್ನಾಟಕವು ೮ನೇ ಅತೀ ದೊಡ್ಡ ರಾಜ್ಯವಾಗಿದೆ. ಇದು ಅನೇಕ ಪುಣ್ಯ ಕ್ಷೇತ್ರಗಳನ್ನು ಹೊಂದಿದ್ದು, ನಾಡಿನ ಎಲ್ಲಾ ಮೂಲೆ ಮೂಲೆಗಳಿಂದ ಪ್ರವಾಸಿಗರನ್ನು ಆಕರ್ಷಿಸುವಲ್ಲಿ, ಧಾರ್ಮಿಕ ಭಾವನೆಗಳನ್ನು ಗಟ್ಟಿಗೊಳಿಸುವಲ್ಲಿ ಗಣನೀಯ ಪ್ರಭಾವ ಬೀರಿದೆ. ದಕ್ಷಿಣ ಕನ್ನಡ ಜಿಲ್ಲೆಯೆಂದರೆ ಧಾರ್ಮಿಕ ಕೇಂದ್ರವೆಂದೇ ಖ್ಯಾತಿಗೊಂಡಿದೆ. ಇಲ್ಲಿರುವ ಅಸಂಖ್ಯಾತ ದೇವಾಲಯಗಳು ನಾಡಿನಾದ್ಯಂತ ಪ್ರಸಿದ್ಧವಷ್ಟೇ ಅಲ್ಲ, ಜಾಗೃತ ಸ್ಥಾನಗಳೂ ಆಗಿ, ಭಕ್ತಾಧಿಗಳ ಧಾರ್ಮಿಕ ಭಾವನೆಗಳನ್ನು ಗಟ್ಟಿಗೊಳಿಸುವ ಕೇಂದ್ರಗಳಾಗಿವೆ. ಜೈನ ಧರ್ಮದವರ ಆರಾಧ್ಯ ದೈವ ಬಾಹುಬಲಿ ಮೂರ್ತಿ ಕಾರ್ಕಳ, ವೇಣೂರು ಮತ್ತು ಧರ್ಮಸ್ಥಳಗಳಲ್ಲಿವೆ. ಮೂಡಬಿದಿರೆಯಲ್ಲಿ ಸಾವಿರ ಕಂಬದ ಬಸದಿ, ಉಳ್ಳಾಲದ ಸಯ್ಯದ ಮದನಿ ದರ್ಗಾ, ಸೈಂಟ್ ಅಲೋಶಿಯಸ್, ರೋಸರಿಯೋ, ಮಿಲಾಗ್ರಿಸ್, ವೆಲೆನ್ಸಿಯಾ ಹಾಗೂ ಕಾರ್ಕಳದ ಅತ್ತೂರ ಚರ್ಚ್ ವಿಶೇಷವಾಗಿ ಖ್ಯಾತಿಗೊಂಡಿವೆ.
ನಮ್ಮ ಈ ಧರ್ಮ ಸಂಸ್ಕ್ರತಿಯನ್ನು ಉಳಿಸಿಕೊಂಡು ಬಂದ ಕ್ಶೇತ್ರಗಳೆಂದರೆ ಈ ಧರ್ಮಕ್ಷೇತ್ರಗಳು ಧರ್ಮ, ಕಲೆ, ಶಿಕ್ಷಣ, ಸಾಂಸ್ಕೃತಿಕ, ಆಧ್ಯಾತ್ಮಿಕ ನೆಲೆಗೆ ಈ ಕ್ಷೇತ್ರಗಳು ಸಹಾಯಕಾರಿಯಾಗಿವೆ.
ಪರಮಾತ್ಮನ ಸೃಷ್ಠಿ ಎಂದೇ ಖ್ಯಾತಿಯಾಗಿರುವ ಸಪ್ತ ಮಹಾಕ್ಷೇತ್ರಗಳಲ್ಲಿ ಒಂದಾಗಿರುವ ದಕ್ಷಿಣ ಕನ್ನಡದ ಸುಬ್ರಹ್ಮಣ್ಯ ಕ್ಷೇತ್ರವು ಬಹಳ ಪ್ರಸಿದ್ಧಿಗೊಂಡಿವೆ. ಸುಳ್ಯ ತಾಲೂಕಿನ ಪೂರ್ವಭಾಗದಲ್ಲಿ ನೆಲೆಸಿದ ಈ ಪವಿತ್ರ ಕ್ಷೇತ್ರವು ಮಲೆನಾಡಿನ ಸೆರಗಿನಲ್ಲಿ ಆವೃತಗೊಂಡಿದೆ. ಒಂದು ಕಾಲಕ್ಕೆ ರಾಜಧಾನಿಯಾಗಿ ಮೆರೆದ ಉತ್ತುಂಗಕ್ಕೇರಿದ ಈ ಸ್ಥಾನ ಇಂದು ಒಂದು ಗ್ರಾಮವಾಗಿ ಉಳಿದಿದೆ. ಈ ಕ್ಷೇತ್ರ ಪಾವನ ಭೂಮಿ ಪೂರ್ವದಲ್ಲಿ ಕುಕ್ಕೆ ಪಟ್ಟಣವೆಂದೇ ಪ್ರಸಿದ್ಧಿ ಹೊಂದಿತ್ತು. ಇಲ್ಲಿ ಸುಬ್ರಹ್ಮಣ್ಯ, ನರಸಿಂಹ, ಉಮಾಮಹೇಶ್ವರ ಮೂರ್ತಿಗಳಿಗೆ ಪೂಜೆ ಸಲ್ಲುತ್ತದೆ. ಇದು ೮ನೆಯ ಶತಮಾನದ ದೇವಸ್ಥಾನವೆಂದು ದಾಖಲೆಗಳಿಂದ ತಿಳಿದುಬರುವುದು. ಮುಂದೆ ಎರಡು ಕಿಲೋ ಮೀಟರ್ ಕ್ರಮಿಸಿದರೆ ಕುಮಾರಧಾರ ನದಿಯೂ ಸಿಗುವುದು. ಇಲ್ಲಿ ಬೃಹತ್ ಆಕಾರದ ರಥವಿದ್ದು ಅದು ಸುಮಾರು ಒಂದೂವರೆ ಶತಮಾನದಷ್ಟು ಹಳೆಯದು ಎಂದು ತಿಳಿದುಬರುತ್ತದೆ.
ಶ್ರೀ ಕ್ಷೇತ್ರದಲ್ಲಿ ಧಾರಾ ತೀರ್ಥವಿದೆ. ತಾರಕಾದಿ ಮಹಾಸುರರನ್ನು ನಿಗ್ರಹಿಸಿದ ನಂತರ ಅಸ್ತ್ರವನ್ನು ಈ ತೀರ್ಥದಲ್ಲಿ ತೊಳೆದದ್ದರಿಂದ ಕುಮಾರಧಾರ ಎಂದು ಹೆಸರು ಪ್ರಾಪ್ತಿಯಾಯಿತು. ಶ್ರೀ ಕ್ಷೇತ್ರ ನೆಲೆಗೊಂಡಿರುವ ಸುಬ್ರಹ್ಮಣ್ಯ ಗ್ರಾಮಕ್ಕೆ ಮೊದಲಿನಂತೆ ರಾಜಧಾನಿ ವೈಭವ ಇಲ್ಲದೇ ಹೋದರೂ ಪ್ರಕೃತಿ ಸಂಪದ್ಭರಿತವಾಗಿ ಶ್ರೀಮಂತವಾಗಿರುವ ಗ್ರಾಮವಾಗಿದೆ.
Start a discussion with Sybil Cutinha 12345
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Sybil Cutinha 12345. What you say here will be public for others to see.