ಸದಸ್ಯರ ಚರ್ಚೆಪುಟ:Susha Dinesh
ವಿಷಯ ಸೇರಿಸಿನನ್ನ ಪರಿಚಯ
[ಬದಲಾಯಿಸಿ]ನಮ್ಮ ಹೆಸರು ನಮ್ಮ ವ್ಯಕ್ತಿತ್ವದ ಒಂದು ಅಂಗ. ಜನರು ನಮ್ಮನ್ನು ನಮ್ಮ ಹೆಸರಿನಿಂದ ಗುರುತಿಸುತ್ತಾರೆ. ನಾನು ಸುಶ.ಡಿ. ಸುಶ ಎಂಬ ಪದಕ್ಕೆ ಶಾಂತಿ, ಸೌಂದರ್ಯ ಎಂಬ ಅರ್ಥ ಇದೆ.
ನನ್ನ ತಂದೆ ದಿನೇಶ್. ಎ.ವಿ, ನನ್ನ ತಾಯಿ ಸುಮಿತ್ರ.ವಿ. ನನ್ನ ತಮ್ಮ ನ ಹೆಸರು ಸುದಿನ್.ಡಿ. ಅವನು ಭದ್ರಾವತಿಯ ಶ್ರೀ ಸತ್ಯ ಸಾಯಿ ಬಾಬಾ ವಿಧ್ಯಾ ಸಂಸ್ಥೆಯ ಈಶ್ವರಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೯ನೇ ತರಗತಿಯಲ್ಲಿ ಓದುತ್ತಿದ್ದಾನೆ.
ನಾವು ಮೂಲತಃ ಕೇರಳದವರು. ನಮ್ಮ ಮಾತೃಭಾಷೆ ಮಲಯಾಳಂ. ನಾವು ಕೇರಳದ ಮಲಪುರಮಂ ಜಿಲ್ಲೆಯ ಚಂಗರಗುಳಂ ತಾಲೂಕಿನ ಆಂದೂರ್ವಳಪಿಲ್ ಮನೆತನದವರು. ನಮ್ಮ ಕುಲ ವೃತ್ತಿ ಬೇಸಾಯ. ನಮ್ಮ ಪೂರ್ವಜರು ಕೇರಳದಿಂದ ಬಂದು ಇಲ್ಲಿ ನೆಲೆಸಿದ್ದರು. ನನ್ನ ಜನನ ಉಕ್ಕಿನ ನಗರ ಎಂದು ಕರೆಯಲ್ಪಡುವ ಭದ್ರಾವತಿಯಲ್ಲಿ.( ಜನ್ಮ ದಿನಾಂಕ: ೩೦/೦೩/೧೯೯೯). ಇದು ನನ್ನ ತಾಯಿಯ ನಾಡು. ನಾನು ನನ್ನ ಬಾಲ್ಯವನ್ನು ಕಳೆದದ್ದು ಕಾಫಿಯ ನಾಡು ಮೂಡಿಗೆರೆಯಲ್ಲಿ. ಇದು ನನ್ನ ತಂದೆಯ ಊರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲುಕಿನ ಬೀಜುವಳ್ಳಿ ಗ್ರಾಮದಲ್ಲಿರುವ ವೇಲಪ್ಪನ್ ನಿಲಯ ನನ್ನ ಮನೆ. ನಾನು ನನ್ನ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಮೂಡಿಗೆರೆಯ ಎಂ.ಇ.ಸ್, ಸಿ.ಬಿ.ಎಸ್.ಇ ಶಾಲೆಯಲ್ಲಿ ಮಾಡಿದ್ದೇನೆ. ಈ ಶಾಲೆಯ ಶಿಕ್ಷಕರು ನನ್ನ ವ್ಯಕ್ತಿತ್ವ ರೂಪಿಸಲು ನನಿಗೆ ಸಹಾಯ ಮಾಡಿದ್ದಾರೆ. ೧೦ ನೇ ತರಗತಿಯಲ್ಲಿ ಉನ್ನತ ಅಂಕಗಳನ್ನು ಪಡೆದು, ನಾನು ಶಿವಮೊಗ್ಗ ಜಿಲ್ಲೆಯ ಶ್ರೀ ಅರಬಿಂದೋ ಪದವಿ ಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದೆ, ವಿಜ್ಞಾನ ನನ್ನ ವಿಷಯವಾಗಿತ್ತು, ನನಗೆ ವಾಣಿಜ್ಯದಲ್ಲಿ ಕೊಂಚ ಆಸಕ್ತಿ ಇತ್ತು. ೧೨ನೇ ತರಗತಿಯಲ್ಲಿ ಶೇಕಡ ೮೬ ಅಂಕಗಳನ್ನು ಗಳಿಸಿದೆ.
ಪುಸ್ತಕ ಓದುವುದು, ಪ್ರಬಂಧಗಳ ರಚನೆ, ಭಾಷಣ ಇವುಗಳಲ್ಲಿ ನನಿಗೆ ಆಸಕ್ತಿ ಹೆಚ್ಚು. ಚಿತ್ರ ಕಲೆ, ಲಲಿತ ಕಲೆ, ಒರಿಗ್ಯಾಮಿ, ಕಸದಿಂದ ರಸ, ಇವು ನನ್ನ ಹವ್ಯಾಸಗಳು.
ಈಗ ನಾನು ಮಂಗಳೂರಿನ ಸಂತ ಅಲೋಶಿಯಸ್ ಕಾಲೆಜಿನಲ್ಲಿ ಬಿ.ಎಸ್ ಸಿ ವ್ಯಾಸಾಂಗ ಮಾಡುತ್ತಿದ್ದೀನಿ. ಜೀವ ರಸಾಯನ ವಿಜ್ಞಾನ ನನ್ನ ವಿಷಯ. ನಂತರ ನನಗೆ ವೈದ್ಯಕೀಯ ಜೀವ ರಸಾಯನ ವಿಜ್ಞಾನದಲ್ಲಿ ಎಂ.ಎಸ್ ಸಿ ಮಾಡುವ ಆಸಕ್ತಿ ಇದೆ.
ಸಂತ ಅಲೋಶಿಯಸ್ ಕಾಲೇಜಿನಲ್ಲಿ ಸಹಾಯ ಎಂಬ ಕಾರ್ಯಕ್ರಮವಿದೆ. ಇದು ನಮ್ಮ ಶಿಕ್ಷಣದ ಒಂದು ಭಾಗ. ಇದರ ಅಂಗವಾಗಿ ನಾವು ಅನಾಥಾಶ್ರಮ, ಹೀಗೆ ಹಲವು ಸೇವಾ ಸಂಸ್ಥೆಗಳಿಗೆ ಹೋಗಿ ನಮ್ಮಿಂದಾಗುವ ಸೇವೆಯನ್ನು ಸಲ್ಲಿಸುತ್ತೀವಿ. ಶಿಕ್ಷಣದೊಂದಿಗೆ ಜೀವನದಲ್ಲಿ ಮೌಲ್ಯಗಳನ್ನು ತುಂಬುವ, ನಮ್ಮಲ್ಲಿ ಮಾನವೀಯತೆಯನ್ನು ಅಳವಡಿಸುವ,ಸೇವೆಯ ಮನೋಭಾವವನ್ನು ಹೆಚ್ಚಿಸುವ ಈ ಸಹಾಯ ನನಗೆ ಅಚ್ಚುಮೆಚ್ಚು.
ನನ್ನ ತಂದೆ-ತಾಯಿ ನನಗೆ ಸ್ಪೂರ್ತಿ, ಅವರು ಪಡುತ್ತಿರುವ ಕಷ್ಟ ನನ್ನ ಜೀವನಕ್ಕೆ ದಾರಿದೀಪ. ಉನ್ನತ ವ್ಯಾಸಂಗ ಮಾಡಿ, ನನ್ನ ಕುಟುಂಬಕ್ಕೆ ನೆರವಾಗ ಬೇಕು ಎಂಬುದೇ ನನ್ನ ಜೀವನದ ಪರಮ ಗುರಿ.
Susha Dinesh (ಚರ್ಚೆ) ೧೯:೫೮, ೨೫ ಆಗಸ್ಟ್ ೨೦೧೬ (UTC)
ಪರಿಚಯ Susha Dinesh (ಚರ್ಚೆ) ೦೨:೨೯, ೨೬ ಆಗಸ್ಟ್ ೨೦೧೬ (UTC)