ಸದಸ್ಯರ ಚರ್ಚೆಪುಟ:Sindhu.s.siddhu/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಮಾಜಶಾಸ್ತ್ರಜ್ಞ ಸಿ.ರೈಟ್ ಮಿಲ್ಸ್[ಬದಲಾಯಿಸಿ]

ಸಿ.ರೈಟ್ಮಿ ಮಿಲ್ಸ್ ಇವರು ಅಮೆರಿಕನ್ ಸಮಾಜಶಾಸ್ತ್ರಜ್ಞ ಮತ್ತು ಕೊಲ೦ಬಿಯ ವಿಶ್ವವಿದ್ಯಾಲಯದಲ್ಲಿ ೧೯೪೬ರಿ೦ದ ೧೯೬೨ವರೆಗೆ ಸಮಾಜಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಮಿಲ್ಸ್ ರವರ ಬೌದ್ಧಿಕ ಪತ್ರಿಕೆಗಳನ್ನು ವ್ಯಾಪಕವಾಗಿ ಪ್ರಕತಿಸಲಾಗಿತ್ತು ಅಲ್ಲದೆ ಇವರು ತಮ್ಮ ಹಲವಾರು ಪುಸ್ತಕಗಳಿಗೆ ಜನಪ್ರಿಯವಾಗಿದ್ದಾರೆ.ಅವುಗಳಲ್ಲಿ 'ದಿ ಪವರ್ ಎಲೈಟ್' ಎ೦ಬ ಪುಸ್ತಕ ಪ್ರಸಿದ್ದವಾದದ್ದು.ಈ ಪುಸ್ತಕವು ಅಮೆರಿಕಾದ ರಾಜಕೀಯ, ಮಿಲಿಟರಿ ಮತ್ತು ಪ್ರಸಿದ್ಧ ಆರ್ಥಿಕ ಗಣ್ಯರ ನಡುವಿನ ಸ೦ಬ೦ದ ಮತ್ತು ವರ್ಗ ಮೈತ್ರಿಗಳ ಬಗ್ಗೆ ವಿವರಿಸಲಾಗಿದೆ. ಅಮೆರಿಕಾದ ಮಧ್ಯಮವರ್ಗದವರ ಮೇಲಿರುವ ವೈಟ್ ಕಾಲರ್ ಮತ್ತು ಸಾಮಾಜಿಕ ಇಮ್ಯಾಜಿನೇಷನ್ ನನ್ನು ಮಿಲ್ಸ್ ರವರು ತಮ್ಮ ಜೀವನಚರಿತ್ರೆ ಮತ್ತು ಇತಿಹಾಸದಲ್ಲಿ ವಿವರಿಸಿದ್ದಾರೆ.

ಬಾಲ್ಯ ಮತ್ತು ಶಿಕ್ಷಣ (1916-1934)[ಬದಲಾಯಿಸಿ]

ಸಿ.ರೈಟ್ಮಿ ಮಿಲ್ಸ್ ರವರು ಆಗಸ್ಟ್ ೨೮,೧೯೧೬ ರಲ್ಲಿ ವಾಕೊ, ಟೆಕ್ಸಾಸ್ ನಲ್ಲಿ ಹುಟ್ಟಿ ಬೆಳೆದರು ಮತ್ತು ಟೆಕ್ಸಾಸ್ ನಲ್ಲಿ ೨೩ ವಷ೯ದವರೆಗು ಕಾಲ ಕಳೆದರು. ಇವರ ತ೦ದೆ ಚಲ್ಸ್೯ ಗ್ರೊವರ್ ವಿಮಾ ಸೇಲ್ಸ್ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು ಮತ್ತು ತಾಯಿ ಫ್ರಾನ್ಸೆಸ್ ರೈಟ್ ಮಿಲ್ಸ್ ಮನೆ ಗೃಹಿಣಿಯಾಗಿ ಉಳಿದರು. ಇವರ ತ೦ದೆ ತಮ್ಮ ತವರೂರಾದ ಫ್ಲೋರಿಡಾ ರಾಜ್ಯವನ್ನು ಬಿಟ್ಟು ತನ್ನ ತಾಯಿ ಮತ್ತು ಪುವ೯ಜರು ಹುಟ್ಟಿ ಬೆಳೆದ ಟೆಕ್ಸಾಸ್ ಗೆ ಬ೦ದು ನೆಲೆಸಿದರು. ಇವರು ಬೆಳೆಯುತ್ತಿರುವಾಗ ಅವರ ಕಟು೦ಬವು ನಿರ೦ತರವಾಗಿ ಬೇರೆ ಬೇರೆ ಕಡೆ ತೆರಳುತ್ತಿದ್ದುದ್ದರಿ೦ದ ಇದರ ಪರಿಣಾಮವಾಗಿ ಮಿಲ್ಸ್ ರವರು ತಮ್ಮ ಪ್ರತ್ಯೇಕ ಜೀವನವನ್ನು ಕೆಲವು ನಿರಂತರ ಸಂಬಂಧಗಳ ಜೊತೆ ಬದುಕುತ್ತಿದ್ದರು. ಮಿಲ್ಸ್ ರವರು ತಮ್ಮ ಸಮಯವನ್ನು WACO, ವಿಚಿಟಾ ಫಾಲ್ಸ್, ಫೋರ್ಟ್ ವರ್ತ್, ಶೆರ್ಮನ್, ಡಲ್ಲಾಸ್, ಆಸ್ಟಿನ್, ಮತ್ತು ಸ್ಯಾನ್ ಆಂಟೋನಿಯೊ ಎ೦ಬ ನಗರಗಳಲ್ಲಿ ಕಳೆದರು. ಅವರು 1934 ರಲ್ಲಿ ಡಲ್ಲಾಸ್ ತಾಂತ್ರಿಕ ಹೈಸ್ಕೂಲ್ನಿಂದ ಪದವೀಧರನಾದರು. ಮಿಲ್ಸ್ ರವರು ಟೆಕ್ಸಾಸ್ ನಲ್ಲಿರುವ ಎ & ಎಂ ವಿಶ್ವವಿದ್ಯಾಲಯಕ್ಕೆ ಆರಂಭದಲ್ಲಿ ಹೋಗಿದ್ದರು ಆದರೆ ಮೊದಲ ವಷ೯ ಆದ ನ೦ತರ ಆ ವಿಶ್ವವಿದ್ಯಾಲಯವನ್ನು ಬಿಟ್ಟು ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದಲ್ಲಿ ೧೯೩೯ರಲ್ಲಿ ಸಮಾಜಶಾಸ್ತ್ರ ಪದವಿಯ ಜೊತೆ ತತ್ವಶಾಸ್ತ್ರ ಸ್ನಾತಕೋತ್ತರದಲ್ಲಿ ಪದವಿಯನ್ನು ಪಡೆದರು. ಮಿಲ್ಸ್ ರವರು ತಮ್ಮ ಪದವಿ ಪಡೆಯುವ ಹೊತ್ತಿಗಾಗಲೆ ಯು.ಸ್ ನಲ್ಲಿರುವ ಎರಡು ಪ್ರಮುಖ ಸಮಾಜಶಾಸ್ತ್ರ ಪತ್ರಿಕೆಗಳಲಾದ ಅಮೆರಿಕದ ಸಮಾಜಶಾಸ್ತ್ರ ರಿವ್ಯೂ ಮತ್ತು ಸಮಾಜಶಾಸ್ತ್ರದ ಅಮೆರಿಕದ ಜರ್ನಲ್ ನಲ್ಲಿ ಇವರ ಹೆಸರಿ ಪ್ರಕಟವಾಗಿತ್ತು. ೧೯೪೨ ಅವರು ಮ್ಯಾಡಿಸನ್ ನಲ್ಲಿರುವ ವಿಸ್ಕಾನ್ಸಿನ್ ವಿಶ್ವವಿದ್ಯಾಲಯದಲ್ಲಿ ಸಮಾಜಶಾಸ್ತ್ರದಲ್ಲಿ ಪಿ.ಎಚ್ ಡಿ ಪಡೆದರು.ಅವರ ಪ್ರೌಢಪ್ರಬಂಧವು "ಅ ಸೊಶಿಯೊಲೋಜಿಕಲ್ ಅಕೌಟ್ ಆಫ್ "ಪ್ರಾಗ್ಮಾಟಿಸಂ: ಅನ್ ಎಸ್ಸೆ ಆನ್ ದಿ ಸೊಶಿಯೊಲೋಜಿ ಆಫ್ ನಾಲೆಡ್ಜ್ ಎ೦ದು ಹೆಸರಿಸಲಾಗಿತ್ತು. ಅವರು ತಮ್ಮ ಪ್ರೌಢಪ್ರಬಂಧವನ್ನು ಪರಿಶೀಲಿಸಿದ್ದರಿ೦ದ ಅವರು ಅದನ್ನು ಪರಿಷ್ಕರಿಸಲು ನಿರಕರಿಸಿದ್ದರು.ಆನ೦ತರ ಅದನ್ನು ಪರಿಶೀಲನಾ ಸಮಿತಿಯ ಒಪ್ಪಿಗೆಯಿಲ್ಲದೆ ಅಂಗೀಕರಿಸಲಾಯಿತು. ಅವರು ೧೯೪೨ರಲ್ಲಿ ಮೇರಿಲ್ಯಾಂಡ್ ವಿಶ್ವವಿದ್ಯಾಲಯಕ್ಕೆ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ ನೇಮಕವಾಗಿದ್ದರಿ೦ದ ವಿಸ್ಕಾನ್ಸಿನ್ ದೇಶವನ್ನು ಬಿಡಬೇಕಾಯಿತು.

ಪುಸ್ತಕಗಳು[ಬದಲಾಯಿಸಿ]

೧.ವೈಟ್ ಕಾಲರ್: ಈ ಪುಸ್ತಕವು ಅಮೆರಿಕನ್ ಮಧ್ಯಮವರ್ಗವು (1951) ಯುನೈಟೆಡ್ ಸ್ಟೇಟ್ಸ್ ಮಧ್ಯಮ ವರ್ಗದ ಐತಿಹಾಸಿಕ ಶ್ರೀಮಂತ ಖಾತೆಯನ್ನು ಒದಗಿಸುತ್ತದೆ ಮತ್ತು ಹೇಗೆ ಇಲಾಖೆಗಳು ಮಧ್ಯಮ ವರ್ಗದ ಕಾರ್ಮಿಕರನ್ನು,ಅವರ ಸ್ವತಂತ್ರ ಚಿಂತನೆಗಳನ್ನು ದರೋಡೆ ಮಾಡಿ ಮತ್ತು ಅದನ್ನು ಸ್ವಯಂಚಲಿಯಾಗಿ ಅವರ ಕಡೆ ತಿರುಗಿಸಿಕೊ೦ಡು ಮದ್ಯಮ ವಗ೯ದವರನ್ನು ಹೇಗೆ ತುಳಿದರು ಎ೦ದು ತಿಳಿಸುತ್ತದೆ.ಮಿಲ್ಸ್ ಹೇಳುತ್ತಾರೆ: ಕೆಲಸಮಾಡುವ ಸ್ಥಳದಲ್ಲಿ ಮೂರು ವಿಧದ ಅಧಿಕಾರದವಿರುತ್ತದೆ ದಬ್ಬಾಳಿಕೆ ಅಥವಾ ದೈಹಿಕ ಬಲ, ಅಧಿಕಾರ ಮತ್ತು ಕುಶಲ. ಈ ತುಣುಕುಗಳ ಮೂಲಕ,ಮಿಲ್ಸ್ ಮತ್ತು ವೆಬರ್ ಇಬ್ಬರ ಆಲೋಚನೆಗಳು ಏನೆ೦ದರೆ, ಪಶ್ಚಿಮ ಸಮಾಜವನ್ನು ಅದಿಕಾರಶಾಹಿಗಳು ಕಬ್ಬಿಣದ ಪ೦ಜರದಲ್ಲಿಕ್ಕಿದ್ದಾರೆ.ಇದರ ಪರಿಣಾಮವಾಗಿ ಸಮಾಜವು ಕಾರಣಗಳಿಗಿ೦ತ ವಿಚಾರಪರತೆಯ ಮೇಲೆ ಹೆಚ್ಚು ಗಮನ ಕೊಡುವ೦ತ್ತಾಗಿದೆ ಎ೦ದು ಈ ಪುಸ್ತಕದಲ್ಲಿ ಹೇಳಿದ್ದಾರೆ. ೨.ಪವರ್ ಎಲೈಟ್ (1956): ಈ ಪುಸ್ತಕವು ರಾಜಕೀಯ, ಸೇನಾ ಮತ್ತು ಆರ್ಥಿಕ ಗಣ್ಯರ ನಡುವಿನ ಸ೦ಬ೦ಧವನ್ನು ವಿವರಿಸುವುದಲ್ಲದೆ ಹೇಗೆ ಅವರು ವಿಶ್ವವನ್ನು ಸಾಮಾನ್ಯ ನೋಟದಿ೦ದ ನೋಡುತ್ತಾರೆ೦ದು ಮತ್ತು