ಸದಸ್ಯರ ಚರ್ಚೆಪುಟ:ShriGowri.C.G

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ವಿಶ್ವನಾಥನ್ ಆನಂದ್[ಬದಲಾಯಿಸಿ]

ಮದ್ರಾಸಿನ ಹುಲಿ

ವಿಶ್ವನಾಥನ್ ಆನಂದ್ ಭಾರತೀಯ ಚದುರಂಗದ ಆಟಗಾರ. ೧೧ನೇ ಡಿಸೆಂಬರ್ ೧೯೬೯ರಲ್ಲಿ ಇವರು ತಮಿಳ್ನಾಡಿನ ಮಯಿಲದುಥುರಾಯಲ್ಲಿ ಜನಿಸಿದರು. ೧೯೮೮ರಲ್ಲಿ ವಿಶ್ವನಾಥನ್ ಆನಂದ್ ಭಾರತದ ಮೊದಲ ಗ್ಯ್ರಾಂಡ್ ಮಾಸ್ಟರ್ ಆದರು. ಇವರು ೧೯೯೧-೧೯೯೨ ರಲ್ಲಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪಡೆದ ಮೊದಲ ಆಟಗಾರ. ಇದು ಭಾರತದ ಪ್ರಜೆಗೆ ನೀಡುವ ಅತ್ಯುತ್ತಮ ಪ್ರಶಸ್ತಿ. ಇನ್ನು ೨೦೦೭ ರಲ್ಲಿ ಎರಡನೇ ಅತ್ಯುತ್ತಮ ಪ್ರಶಸ್ತಿಯಾದ ಪದ್ಮ ವಿಭೂಷಣ ಪಡೆದರು. ಹಾಗೂ ಇದನ್ನು ಸಾಧಿಸಿದ ಮೊದಲ ಭಾರತೀಯ ಕ್ರೀಡಾಗಾರ.

ಪರಿಚಯ[ಬದಲಾಯಿಸಿ]

ತಮಿಳು ಕುಟುಂಬದಲ್ಲಿ ಹುಟ್ಟಿ ಬೆಳೆದರು. ತಂದೆ ಕೃಷ್ಣಮೂರ್ತಿ ವಿಶ್ವನಾಥನ್, ಬಿಹಾರನ ಜಮಲಪುರದಲ್ಲಿ ವ್ಯಾಸಂಗ ಮಾಡಿದರು. ತಾಯಿ ಸುಶೀಲ, ಒಬ್ಬ ಗೃಹಿಣಿ ಮತ್ತು ಸಮಾಜ ಸೇವಕಿ. ಕೃಷ್ಣಮೂರ್ತಿ ಮತ್ತು ಸುಶೀಲಾ ಅವರಿಗೆ ೩ ಜನ ಮಕ್ಕಳು. ಶಿವಕುಮಾರ್, ಅನುರಾಧ ಮತ್ತು ಆನಂದ್. ಶಿವಕುಮಾರ್ ಈಗ ಕ್ರಾಂಪ್ಟನ್ ಗ್ರೀವ್ಸ ನಲ್ಲಿ ಜನರಲ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ. ಅನುರಾಧ ಒಬ್ಬ ಪ್ರಾಧ್ಯಾಪಕರಾಗಿ ಅಮೆರಿಕದ ಮಿಚಿಗನ್ ಯುನಿವರ್ಸಿಟಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೬ರಲ್ಲಿ ಆನಂದ್ ಮತ್ತು ಅರುಣಾರ ಮದುವೆ ಆಯಿತು. ಅವರಿಬ್ಬರ ಮಗ ಅಖಿಲ ೯ನೇ ಏಪ್ರಿಲ್ ೨೦೧೧ರಂದು ಹುಟ್ಟಿದ. ಆನಂದನ ಹವ್ಯಾಸಗಳು ಈಜುವುದು, ಹಾಡು ಕೇಳುವುದು ಮತ್ತು ಓದುವುದು.

ಆನಂದ್ ೬ ನೇ ವಯಸ್ಸಿನಲ್ಲೇ ತಾಯಿಯ ಬಳಿ ಚದುರಂಗ ಆಡಲು ಕಲೆತರು. ಆದರೆ ಆಟದ ಜಟಿಲತೆಗಳನ್ನು ಅವರು ಮುಂದೆ ಮಾನಿಲದಲ್ಲಿ ಕಲೆತರು. ಡಾನ್ ಬಾಸ್ಕೊ ಎಂಬ ಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿ ಚೆನ್ನೈನ ಲೋಯೋಲ ಕಾಲೇಜಿನಲ್ಲಿ ವಾಣಿಜ್ಯ ವಿಷಯ ಕಲಿತು, ಬಿ.ಕಾಂ. ಪದವಿಯನ್ನು ಪಡೆದರು.

ಅನಂದನನ್ನು 'ಮದ್ರಾಸಿನ ಹುಲಿ' ಎಂದು ಕರೆಯುತ್ತಾರೆ.

ಸಾಧನೆ[ಬದಲಾಯಿಸಿ]

ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಶಿಪ್ - ೨೦೦೮ರಲ್ಲಿ ವಿಜೇತ ರಾಗಿದ್ದರು.

೧೪ನೇ ವಯಸ್ಸಿನಲ್ಲಿ ಮೊದಲನೇ ಬಾರಿಗೆ ರಾಷ್ಟ್ರ ಮಟ್ಟದ ಪ್ರತಿಯೋಗದಲ್ಲಿ ಗೆಲುವು ಸಾಧಿಸಿದರು. ಆನಂದ್ ೧೫ ವರ್ಷದವರಿದ್ದಾಗ ಭಾರತದ ಅತಿ ಕಿರಿಯ ಅಂತರಾಷ್ಟ್ರೀಯ ಚದುರಂಗ ಮಾಸ್ಟರ್ ಎನ್ನಿಸಿಕೊಂಡರು. ೧೯೮೭ರಲ್ಲಿ ಭಾರತದ ಮೊದಲನೇ ಅಂತಾರಾಷ್ಟ್ರೀಯ ಕಿರಿಯ ಚೆಸ್ಸ್ ಚಾಂಪಿಯನ್ ಶಿಪ್ ಗೆದ್ದರು. ೧೮ರ ವಯಸ್ಸಿನಲ್ಲಿ ಅವರಿಗೆ ಪದ್ಮ ಶ್ರೀಯನ್ನು ನೀಡಲಾಯಿತು.

ಇವರು ೨೦೦೦ ದಿಂದ ೨೦೦೨ ರವರೆಗೆ ನಡೆದ ಎಫ್ಐಡಿಎ ವಿಶ್ವ ಚೆಸ್ ಚಾಂಪಿಯನ್ ಶಿಪ್ ಏರ್ಪಡಿಸುವುದರ ಮೂಲಕ ಈ ರೀತಿ ಮಾಡಿದ ಏಷ್ಯಾದ ಮೊದಲ ವ್ಯಕ್ತಿ ಎಂದು ಪ್ರಸಿದ್ಧರಾಗಿದ್ದಾರೆ. ಇವರು ೨೦೦೭ ರಲ್ಲಿ ಯಾವುದೇ ರೀತಿಯ ಸ್ಪರ್ಧೆಯಿಲ್ಲದೆ ವಿಶ್ವ ಚಾಂಪಿಯನ್ ಆದರು. ಇವರು ೨೦೦೬ ರ ಏಪ್ರಿಲ್ ನಲ್ಲಿ ಎಲೋ ಮಾರ್ಕ್ ನ ಎಫ್ಐಡಿಎ ರೇಟಿಂಗ್ ಲಿಸ್ಟ್ ನಲ್ಲಿ ೨೩೦೦ ಅಂಕಗಳನ್ನು ಪಡೆದರು ಹಾಗೂ ಅದನ್ನು ಮಾಡಿದ ನಾಲ್ಕನೇ ಆಟಗಾರನೆಂದು ಹೆಸರು ಪಡೆದರು. ಈ ರೀತಿ ಮಾಡಿದ ಇತರರೆಂದರೆ ಗ್ಯಾರಿ ಕಸ್ಪಾರವ್, ವ್ಲಾದಿಮಿರ್‌‌ ಕ್ರಾಮ್ನಿಕ್, ವೆಸೆಲಿನ್ ತೊಪಲೊವ್. ಇವರು ಪ್ರಥಮ ಸ್ಥಾನವನ್ನು ೨೧ ತಿಂಗಳುಗಳ ಕಾಲ ಅಲಂಕರಿಸಿದ್ದರು. ಇದು ದಾಖಲೆಯಾಗಿದೆ. ಹಾಗೂ ಇವರು ವಿಶ್ವ ರಾಪಿಡ್ ಚೆಸ್ ಚಾಂಪಿಯನ್ ಶಿಪ್ ನಲ್ಲಿ ೨೦೦೩ ಮತ್ತು ೨೦೧೭ರಲ್ಲಿ ವಿಜೇತ ರಾಗಿದ್ದರು.

ಚದುರಂಗ ಪಂದ್ಯಗಳು[ಬದಲಾಯಿಸಿ]

ಅವರು ಮೊನಾಕೊದಲ್ಲಿನ ವಾರ್ಷಿಕ 'ಅಂಬರ್ ಕಣ್ಣು ಕಟ್ಟಿದ ಮತ್ತು ಕ್ಷಿಪ್ರ ಚದುರಂಗ ಪಂದ್ಯ'ದಲ್ಲಿ ೧೯೯೪, ೧೯೯೭, ೨೦೦೩, ೨೦೦೫ ಮತ್ತು ೨೦೦೬ರಲ್ಲಿ ಯಶಸ್ಸನ್ನು ಸಾಧಿಸಿದರು. ೧೯೯೭ ಮತ್ತು ೨೦೦೫ರಲ್ಲಿ ಕೇವಲ ಆನಂದ್ ಮಾತ್ರ ಕಣ್ಣು ಕಟ್ಟಿದ ಮತ್ತು ಕ್ಷಿಪ್ರ ಚದುರಂಗ - ಇವೆರಡೂ ವಿಭಾಗದಲ್ಲಿ ಒಮ್ಮೆಲೇ ಗೆದ್ದರು. ಆನಂದ್ ಕೋರಸ್ ಚೆಸ್ ಚಾಂಪಿಯನ್ ಶಿಪ್ ಇದರಲ್ಲಿ ೫ ಬಾರಿ ಗೆದ್ದ ಮೊದಲನೆಯ ಆಟಗಾರ.

ಮೂರು ಅತಿ ದೊಡ್ಡ ಮತ್ತು ಮಹತ್ವದ ಚದುರಂಗ ಪಂದ್ಯಗಳಾದ ಕೋರಸ್, ಲಿನೇರ್ಸ್ ಮತ್ತು ಡೋರ್ಟ್ ಮಂಡ್ ಇವುಗಳಲ್ಲಿ ಯಶಸ್ಸು ಗಳಿಸಿದ ವಿಶ್ವದ ಮೊದಲನೆ ಆಟಗಾರ ಆನಂದ್ ಅವರು. ಕೋರಸ್ (೧೯೮೯, ೧೯೯೮, ೨೦೦೩, ೨೦೦೪, ೨೦೦೬), ಲಿನೇರ್ಸ್ (೧೯೯೮, ೨೦೦೭, ೨೦೦೮) ಮತ್ತು ಡೋರ್ಟ್ ಮಂಡ್ (೧೯೯೬, ೨೦೦೦, ೨೦೦೪).

ಬಿರುದುಗಳು[ಬದಲಾಯಿಸಿ]

ವಿಶ್ವನಾಥನ್ ಆನಂದ್ ಅವರಿಗೆ ಸಾಕಷ್ಟು ಪುರಸ್ಕಾರಗಳು ಸಂದಿವೆ. ಮುಖ್ಯವಾಗಿ 'ಅರ್ಜುನ' ಪ್ರಶಸ್ತಿಯನ್ನು ೧೯೮೫ ರಲ್ಲಿ ಅತ್ಯುತ್ತಮ ಭಾರತೀಯ ಚದುರಂಗ ಆಟಗಾರನೆಂದು ನೀಡಲಾಯಿತು.

[https://en.wikipedia.org/wiki/Padma_Shri

ಪದ್ಮ ಶ್ರೀ - ಭಾರತ ಸರ್ಕಾರ ೧೯೮೭ರಲ್ಲಿ ನೀಡಿತು

ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ - ಭಾರತದ ಅತಿ ಹೆಚ್ಚಿನ ಕ್ರೀಡಾ ಗೌರವ ೧೯೯೧-೧೯೯೨. ಪದ್ಮ ಭೂಷಣ - ೩ನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ಸರ್ಕಾರದಿಂದ ೨೦೦೦ರಲ್ಲಿ ಸಿಕ್ಕಿತು. ಪದ್ಮ ವಿಭೂಷಣ - ೨ನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ಭಾರತ ಸರ್ಕಾರ ೨೦೦೭ರಲ್ಲಿ ನೀಡಿತು. ರಾಷ್ಟ್ರೀಯ ನಾಗರಿಕ ಪ್ರಶಸ್ತಿ ಮತ್ತು ಸೋವಿಯೆಟ್ ಲ್ಯಾಂಡ್ ನೆಹರು ಪ್ರಶಸ್ತಿಯನ್ನು ೧೯೮೭ ರಲ್ಲಿ ನೀಡಲಾಯಿತು. ಬ್ರಿಟಿಷ್ ಚೆಸ್ ಫೆಡರೆಷನ್ 'ಬುಕ್ ಆಫ್ ದಿ ಇಯರ್' ಪ್ರಶಸ್ತಿಯನ್ನು ಅವರ ಪುಸ್ತಕ 'ಮೈ ಬೆಸ್ಟ್ ಗೇಮ್ಸ್ ಆಫ್ ಚೆಸ್'ಗೆ ೧೯೯೮ರಲ್ಲಿ ನೀಡಲಾಯಿತು.

ಉಲೆಖಗಳು[ಬದಲಾಯಿಸಿ]

೧. https://en.wikipedia.org/wiki/Viswanathan_Anand

೨.https://timesofindia.indiatimes.com/sports/chess/viswanathan-anand-says-quality-of-competition-too-high-in-india/articleshow/65049475.cms

೩.https://www.thehindu.com/opinion/op-ed/a-question-for-anand/article24323076.ece

೪.https://indianexpress.com/article/sports/sport-others/rapid-chess-win-a-personal-validation-viswanathan-anand-5265230/