ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Seethaarun

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೌಕಾಯಾನದ ಕಲೆಯು ೬೦೦೦ ವರ್ಷಗಳ ಹಿಂದೆಯೇ ಪ್ರಾಚೀನ ಭಾರತದ ಸಿಂಧು ನದಿಯಲ್ಲಿ ಹುಟ್ಟಿತು. Navigation ಎನ್ನುವ ಪದದ ಮೂಲ ಸಂಸ್ಕೃತದ ನವಗತ ಆಗಿದೆ. NAVY ಎನ್ನುವ ಪದ ಸಂಸ್ಕೃತದ ‘ನೌ’ ಪದದಿಂದ ಹುಟ್ಟಿದೆ. ಹಡಗು ಯಾನಕ್ಕೆಂದೇ ಮೀಸಲಾದ ವಿಶ್ವದ ಪ್ರಪ್ರಥಮ ಸಂಸ್ಥೆಯ ಉಲ್ಲೇಖ ಇರುವುದು ಪ್ರಾಚೀನ ಭಾರತದ ಮೌರ್ಯ ಸಾಮ್ರಾಜ್ಯದಲ್ಲಿ. ಮೌರ್ಯ ಸಾಮ್ರಾಜ್ಯದಲ್ಲಿ ನೌಕಾದಳದ ಅಧ್ಯಕ್ಷನ ಸುಪರ್ದಿಯಲ್ಲಿದ್ದ ಜಲಮಾರ್ಗದ ಇಲಾಖೆಯ ಬಗ್ಗೆ ಒಂದು ಸಂಪೂರ್ಣ ಅಧ್ಯಾಯವೇ ಚಾಣಕ್ಯನ ಅರ್ಥಶಾಸ್ತ್ರದಲ್ಲಿ ಇದೆ. ಮೌರ್ಯ, ಶಾತವಾಹನ, ಚೋಳ, ವಿಜಯನಗರ, ಕಳಿಂಗದಂತಹ ಪ್ರಾಚೀನ ಭಾರತೀಯ ಸಾಮ್ರಾಜ್ಯಗಳು ತಮ್ಮ ಸ್ವಂತ ದೊಡ್ಡ ನೌಕಾದಳಗಳನ್ನು ಹೊಂದಿದ್ದವು. ವಾಸ್ಕೊ ಡಾ ಗಾಮಾ ಭಾರತಕ್ಕೆ ಮೊದಲ ಬಾರಿಗೆ ಸಮುದ್ರ ಮಾರ್ಗವನ್ನು ಕಂಡುಹಿಡಿದನು ಎನ್ನುವುದು ಸತ್ಯವಲ್ಲ. ಹಾಗೆ ನೋಡಿದರೆ ಆಫ್ರಿಕಾ ತೀರದಲ್ಲಿ ದಾರಿ ತಪ್ಪಿ ನಿಂತಿದ್ದ ವಾಸ್ಕೊ ಡಾ ಗಾಮಾನಿಗೆ ಭಾರತದ ಸಮುದ್ರ ದಾರಿಯನ್ನು ತೋರಿಸಿದ್ದು ಅಲ್ಲಿ ವ್ಯಾಪಾರಕ್ಕೆ ತನ್ನ ಸ್ವಂತ ಹಡಗಿನಲ್ಲಿ ಬಂದಿದ್ದ ಓರ್ವ ಗುಜರಾತಿ ವ್ಯಾಪಾರಿ. ವಾಸ್ಕೊ ಡಾ ಗಾಮಾ ಅಥವಾ ಕೊಲಂಬಸ್ ಇವರಿಗಿಂತ ಎರಡು ಸಾವಿರ ವರ್ಷಗಳ ಮುಂಚೆಯೇ ಭಾರತೀಯರು ಸಮುದ್ರಯಾನದಲ್ಲಿ ಪರಿಣತಿ ಹೊಂದಿದ್ದು, ದೂರ ದೇಶಗಳಿಗ ವ್ಯಾಪಾರ, ಸಂಸ್ಕೃತಿ ವಿನಿಮಯಕ್ಕೆಂದು ಹೋಗಿ ಬರುತ್ತಿದ್ದರು. ಆಗ್ನೇಯ ಏಷ್ಯಾದ ಉದ್ದಗಲಕ್ಕೂ ಭಾರತೀಯ ಸಂಸ್ಕೃತಿ ಹರಡಿರುವುದು ಪ್ರಾಚೀನ ಭಾರತೀಯ ಸಮುದ್ರಯಾನದ ಕೌಶಲ್ಯಗಳ ಪುರಾವೆಯಾಗಿದೆ. ಆದ್ದರಿಂದ ವಾಸ್ಕೊ ಡಾ ಗಾಮಾ ಭಾರತಕ್ಕೆ ಸಮುದ್ರ ಮಾರ್ಗ ಕಂಡುಹಿಡಿದ ಮೊದಲ ಯುರೋಪಿಯನ್ ಎಂದು ಹೇಳುವುದು ಹೆಚ್ಚು ಸಮಂಜಸವಾಗುತ್ತದೆ.

Start a discussion with Seethaarun

Start a discussion