ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Riya Sony Thomas 12345

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಮೆ: ಅನಿಶ್ಚಿತ ನಷ್ಟ ಎಂಬ ಗಂಡಾಂತರದ ವಿರುದ್ಧ ನಮ್ಮನ್ನು ನಾವು ರಕ್ಷಿಸಿಕೊಳ್ಳಲು ರೂಪಿಸುವ ಒಂದು ರೀತಿಯ ಅಪಾಯ ನಿರ್ವಹಣೆಯ ಉಪಾಯವೇ ವಿಮೆ ಎಂದು ಕಾನೂನು ಮತ್ತು ಅರ್ಥಶಾಸ್ತ್ರ ಪರಿಗಣಿಸುತ್ತವೆ.ಗಡಾಂತರದಿಂದ ಸಂಭವಿಸುವ ನಷ್ಟವನ್ನು ಭರ್ತಿ ಮಾಡುವುದಕ್ಕಾಗಿ, ಪಾವತಿ ಮಾಡಿರುವ 'ಕಂತಿ'ನ ಮೊತ್ತದ ನ್ಯಾಯೋಚಿತ ವಿನಿಮಯವೇ ವಿಮೆ ಎಂದು ವಿಮೆಯನ್ನು ವಿವರಿಸಲಾಗಿದೆ.ಭಾರೀ ಪ್ರಮಾಣದ ಸಂಭವನೀಯ ವಿನಾಶಕಾರಿ ನಷ್ಟವನ್ನು ತಡೆಗಟ್ಟುವ ಉದ್ದೇಶದಿಂದ ಅನುಭವಿಸುವ ನಿಶ್ಚಿತವೂ, ಗೊತ್ತಿರುವಂಥದ್ದೂ ಆದ ಅಲ್ಪ ಪ್ರಮಾಣದ ನಷ್ಟವೆಂದೂ ಇದನ್ನು ಭಾವಿಸಬಹುದು. ವಿಮೆಗಾರ ಎಂದರೆ ವಿಮೆ ಸೇವೆಯನ್ನು ಒದಗಿಸುವ ಸಂಸ್ಥೆ. ವಿಮೆದಾರ ಅಥವಾ ಪಾಲಿಸಿದಾರ ಎಂದರೆ ವಿಮೆಯ ಸೌಲಭ್ಯವನ್ನು ಪಡೆದಿರುವ ವ್ಯಕ್ತಿ ಅಥವಾ ಘಟಕ.

ವಿಮಾ ವಿಧಗಳು ಮೊತ್ತ ಪ್ರಮಾಣವನ್ನು ಲೆಕ್ಕಹಾಕಬಹುದಾದ ಯಾವುದೇ ಸಂಭವನೀಯ ಅಪಾಯವನ್ನು ವಿಮೆ ಇಳಿಸಬಹುದಾಗಿದೆ. ವಿಮಾ ಪರಿಹಾರದ ಬೇಡಿಕೆಗೆ ಆಸ್ಪದ ನೀಡುವಂತಹ ವಿಶಿಷ್ಟ ರೀತಿಯ ಅಪಾಯಗಳಿಗೆ 'ಆಪತ್ತುಗಳು' ಎನ್ನಲಾಗುತ್ತದೆ. ವಿಮಾ ಪಾಲಿಸಿಯೊಂದು ಯಾವ ಆಪತ್ತುಗಳು ತನ್ನ ವ್ಯಾಪ್ತಿಯೊಳಗೆ ಬರಬಹುದು, ಯಾವುದು ಬಾರದು ಎಂಬ ವಿವರಗಳನ್ನು ನೀಡುತ್ತದೆ. ಚಾಲ್ತಿಯಲ್ಲಿರುವ ಹಲವು ತೆರನಾದ ವಿಮೆಗಳ (ಸಮಗ್ರವಲ್ಲದ) ಪಟ್ಟಿಗಳು ಕೆಳಕಂಡಂತಿವೆ. ಒಂದು ಪಾಲಿಸಿಯು ಕೆಳಕಂಡಂತೆ ಒಂದು ಅಥವಾ ಹೆಚ್ಚು ಬಗೆಗಳ ಅಪಾಯಗಳನ್ನು ವ್ಯಾಪ್ತಿಯೊಳಗೆ ಸೇರಿಸಿಕೊಳ್ಳಬಹುದು. ಉದಾಹರಣೆಗೆ, ವಾಹನ ವಿಮೆಯು ಆಸ್ತಿಪಾಸ್ತಿಯ ಅಪಾಯ (ವಾಹನಕ್ಕೆ ಹಾನಿ ಅಥವಾ ವಾಹನವು ಕಳುವಾಗುವಂತಹ ಅಪಾಯ) ಮತ್ತು ಹೊಣೆಗಾರಿಕೆಯ ಅಪಾಯ (ಅಪಘಾತದಿಂದ ಸಂಭವಿಸುವ ಕಾನೂನು ಮೊಕದ್ದಮೆಗಳು) ಎರಡನ್ನೂ ತನ್ನ ವ್ಯಾಪ್ತಿಯೊಳಗೆ ಸೇರಿಸಿಕೊಳ್ಳುವುದು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಗೃಹ ಮಾಲೀಕನ ವಿಮೆ ಪಾಲಿಸಿಯು ಮಾದರಿಯಾಗಿ - ಗೃಹಕ್ಕೆ ಮತ್ತು ಗೃಹ ಮಾಲೀಕನ ವಸ್ತುಗಳಿಗೆ ಹಾನಿ, ಗೃಹ ಮಾಲೀಕನ ವಿರುದ್ಧದ ಕಾನೂನು-ರೀತ್ಯಾ ಪರಿಹಾರ ಬೇಡಿಕೆಗಳನ್ನು ಒಳಗೊಂಡಿರುವ ಹೊಣೆಗಾರಿಕೆಯ ವಿಮೆ ಮತ್ತು ಮಾಲೀಕನ ಸ್ವತ್ತಿನಲ್ಲಿ ಅತಿಥಿಗಳಿಗೆ ಸಂಭವಿಸಬಹುದಾದ ಸಣ್ಣ ಅಪಘಾತಗಳಿಗೆ ವೈದ್ಯಕೀಯ ಖರ್ಚು- ಇವೆಲ್ಲವನ್ನೂ ಸಹ ಒಳಗೊಂಡಿರುವ ಆಸತಿಪಾಸ್ತಿ ವಿಮೆಯನ್ನು ಸಹ ಒಳಗೊಂದಿರುತ್ತದೆ.

ವಾಹನ ವಿಮೆ ಹಾಳಾದ ವಾಹನ,ನಿಮಗೆ ಅಪಘಾತ ಸಂಭವಿಸಿದಲ್ಲಿ ಹಣಕಾಸಿನ ನಷ್ಟ ವಿರುದ್ಧ ವಾಹನ ವಿಮೆಯು ನಿಮ್ಮನ್ನು ರಕ್ಷಿಸುತ್ತದೆ. ಇದು ನಿಮ್ಮ ಮತ್ತು ವಿಮಾ ಸಂಸ್ಥೆಯ ನಡುವಿನ ಒಂದು ಕರಾರು. ನೀವು ವಿಮೆಕಂತುಗಳನ್ನು ಪಾವತಿಸಲು ಒಪ್ಪಿ, ವಿಮಾ ಸಂಸ್ಥೆಯು ನಿಮ್ಮ ಪಾಲಿಸಿಯಲ್ಲಿ ವ್ಯಾಖ್ಯಾನಿಸಲಾದ ನಷ್ಟಗಳನ್ನು ಸಂದಾಯ ಮಾಡಲು ಒಪ್ಪುತ್ತದೆ. ವಾಹನ ವಿಮೆಯು ಆಸ್ತಿಪಾಸ್ತಿ, ಹೊಣೆಗಾರಿಕೆ ಮತ್ತು ವೈದ್ಯಕೀಯ ವಿಮಾ ರಕ್ಷಣೆಯನ್ನು ನೀಡುತ್ತದೆ:ನಿಮ್ಮ ವಾಹನವು ಕಳುವಾದಲ್ಲಿ ಅಥವಾ ಅದಕ್ಕೆ ಹಾನಿಯಾದಲ್ಲಿ ಆಸ್ತಿಪಾಸ್ತಿ ರಕ್ಷಣೆಯು ಇದಕ್ಕೆ ವಿಮೆ ಪರಿಹಾರ ಬೇಡಿಕೆ ಹಣವನ್ನು ಸಂದಾಯ ಮಾಡುವುದು.ಇತರರ ದೇಹಕ್ಕಾದ ಗಾಯ ಅಥವಾ ಆಸ್ತಿಪಾಸ್ತಿಗೆ ಹಾನಿ ಒದಗಿದ ಸಂದರ್ಭದಲ್ಲಿ ಕಾನೂನುಬದ್ಧವಾಗಿ ನಿರ್ವಹಿಸಬೇಕಾದ ನಿಮ್ಮ ಜವಾಬ್ದಾರಿಯನ್ನು ವಿಮೆ ಪರಿಹಾರ ನೀಡಿಕೆಯ ಮೂಲಕ ನಿಮ್ಮ ಹೊಣೆಯನ್ನು ಹೊರುತ್ತದೆ.ಗಾಯಗಳಿಗೆ ವೈದ್ಯಕೀಯ ಚಿಕಿತ್ಸೆ, ಪುನರ್ವಸತಿ ಸೌಲಭ್ಯ; ಕೆಲವೊಮ್ಮೆ ವೇತನ ನಷ್ಟವನ್ನು ಭರಿಸುತ್ತದೆ, ಜೊತೆಗೆ ಅಂತ್ಯಕ್ರಿಯೆಯ ವೆಚ್ಚವನ್ನೂ ಸಹ ಸಂದಾಯ ಮಾಡುತ್ತದೆ.ವಾಹನ ವಿಮಾ ಪಾಲಿಸಿಯು ಆರು ವಿಧಗಳ ರಕ್ಷಾ ಕವಚವನ್ನು ಹೊಂದಿದೆ. ಬಹುಪಾಲು ದೇಶಗಳು ವಿಮೆಯ ಕೆಲವು ರಕ್ಷಣೆಗಳನ್ನು ಕೊಂಡುಕೊಳ್ಳುವಂತೆ ಸೂಚಿಸುತ್ತದೆ; ಎಲ್ಲಾ ರಕ್ಷಾ ಕವಚಗಳಿಗೂ ಜೋತುಬೀಳುವ ಅಗತ್ಯವಿಲ್ಲ. ಕಾರಿಗಾಗಿ ಸಾಲ ನೀಡುವ ಸಂಸ್ಥೆಯು ಕೆಲವು ವಿಮಾ ರಕ್ಷಣೆಗಳನ್ನು ವಾಹನದ ಮೇಲೆ ಇಳಿಸುವಂತೆ ಸೂಚಿಸುತ್ತದೆ. ವಾಹನ ಪಾಲಿಸಿಗಳಲ್ಲಿ ಬಹುಪಾಲು ವರ್ಷ ಅಥವಾ ಅರ್ಧ ವರ್ಷದ ಕಾಲಾವಧಿಗೆ ಊರ್ಜಿತವಾಗಿರುತ್ತದೆ.

ಗೃಹ ವಿಮೆ ಅನಾಹುತ ಎಂಬ ದುರ್ಘಟನೆಯಲ್ಲಿ ಹಾನಿಗೀಡಾದ ಕಟ್ಟಡಕ್ಕೆ ಪರಿಹಾರ ಒದಗಿಸುವುದು ಗೃಹ ವಿಮೆ. ಕೆಲವು ಭೌಗೋಳಿಕ ವಲಯಗಳಲ್ಲಿ, ಹೆಚ್ಚುವರಿ ವಿಮಾ ವ್ಯಾಪ್ತಿಯ ಅಗತ್ಯವಿರುವ ಪ್ರವಾಹ, ಭೂಕಂಪದಂತಹ ಆಪತ್ತುಗಳನ್ನು ಪ್ರಮಾಣಿತ ವಿಮೆಗಳು ತಮ್ಮ ವ್ಯಾಪ್ತಿಯಿಂದ ಹೊರಗಿಡುತ್ತವೆ. ನಿರ್ವಹಣಾ-ಸಂಬಂಧಿತ ಸಂಗತಿಗಳ ಹೊಣೆ ಗೃಹ ಮಾಲೀಕರದ್ದೇ. ವಿಮೆಯು ವಿವರಣಾ ಪಟ್ಟಿಯನ್ನು ಒಳಗೊಂಡಿರಬಹುದು, ಅಥವಾ (ವಿಶೇಷವಾಗಿ ಬಾಡಿಗೆಯ ಮೇಲೆ ಮನೆ ಪಡೆದಿರುವವರಿಗಾಗಿ) ಅದನ್ನು ಪ್ರತ್ಯೇಕ ಪಾಲಿಸಿಯಾಗಿ ಕೊಂಡುಕೊಳ್ಳಬಹುದು. ಸಾಕು ಪ್ರಾಣಿಗಳಿಂದಾಗಲೀ ಕುಟುಂಬದ ಸದಸ್ಯರಿಂದಾಗಲೀ ಆಸ್ತಿಪಾಸ್ತಿಗೆ ಹಾನಿ ಸಂಭವಿಸಿದರೆ ಅದಕ್ಕೂ ಪರಿಹಾರ ಒದಗಿಸುವಂಥ ಹೊಣೆ ಹೊರುವಂಥ ಮತ್ತು ಕಾಯಿದೆಯನುಸಾರದ ಜವಾಬ್ದಾರಿಯನ್ನೂ ನಿಭಾಯಿಸುವಂಥ ವಿಮೆಯನ್ನು ಕೆಲವು ದೇಶಗಳು ಜಾರಿಗೆ ತಂದಿವೆ.

ಆರೋಗ್ಯ ವಿಮೆ ಯುನೈಟೆಡ್ ಕಿಂಗ್‌ಡಮ್ರಾಷ್ಟ್ರೀಯ ಆರೋಗ್ಯ ಸೇವೆಯ ವಿಮಾ ಪಾಲಿಸಿಗಳು ಯುನೈಟೆಡ್‌ ಕಿಂಗ್ಡಮ್‌ನಲ್ಲಿ ಜಾರಿಯಲ್ಲಿದೆ ಅಥವಾ ವೈದ್ಯಕೀಯ ಚಿಕಿತ್ಸೆಯ ವೆಚ್ಚದ ಬಹು ಪಾಲನ್ನು ಭರಿಸುವಂಥ ಇತರೆ ಸಾರ್ವಜನಿಕ-ನಿಧಿ ಬೆಂಬಲಿತ ಆರೋಗ್ಯ ಕಾರ್ಯಕ್ರಮಗಳೂ ಅಲ್ಲುಂಟು.ವೈದ್ಯಕೀಯ ವಿಮೆಯಂಥ, ದಂತ ವೈದ್ಯ ವಿಮೆಯೂ ಸಹ ದಂತ ಚಿಕಿತ್ಸೆಯ ವೆಚ್ಚಗಳ ವಿರುದ್ಧ ವ್ಯಕ್ತಿಗಳಿಗೆ ರಕ್ಷಣೆ ಒದಗಿಸುತ್ತದೆ.ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ, ಉದ್ಯಮಿಗಳ ಅನುಕೂಲಗಳ ಪಾಕ್ಯೇಜ್‌ನಲ್ಲಿ ಆರೋಗ್ಯ ವಿಮೆಯೊಂದಿಗೆ ಆಗಾಗ್ಗೆ ದಂತ ವಿಮೆಯು ಸಹ ಸೇರಿದೆ.

ಅಪಘಾತ, ಕಾಯಿಲೆ ಮತ್ತು ನಿರುದ್ಯೋಗ ವಿಮೆ ಗಾಯಗಳಿಂದಲೋ ಅಥವಾ ಕಾಯಿಲೆಯಿಂದಲೋ ಆರೋಗ್ಯ ಕುಂಠಿತಗೊಂಡು ಉದ್ಯೋಗವನ್ನು ಮುಂದುವರೆಸಲು ಅಶಕ್ಯರಾದಂಥ ಸಂದರ್ಭದಲ್ಲಿ ವಿಕಲತಾ ವಿಮೆ ಧನ ಬೆಂಬಲ ನೀಡುತ್ತದೆ. ಭೋಗ್ಯ ಮತ್ತು ಕ್ರೆಡಿಟ್ ಕಾರ್ಡ್‌ಗಳಿಂದ ಉಂಟಾದ ಹೊಣೆಗಳನ್ನು ಪಾವತಿಸಲು ಈ ವಿಮೆಯು ಮಾಸಿಕ ಹಣ ಬೆಂಬಲ ಒದಗಿಸುತ್ತದೆ.ಕೆಲಸ ನಿರ್ವಹಿಸಲು ಅಶಕ್ಯರಾದಾಗ ವ್ಯವಹಾರಸ್ಥರಿಗೆ ತಮ್ಮ ಆಡಳಿತ ವೆಚ್ವಗಳ ನಿರ್ವಹಣೆಗಾಗಿ ಧನ ನೆರವು ನೀಡುತ್ತದೆ.ಸಂಪೂರ್ಣ ಶಾಶ್ವತ ಅಂಗವೈಫಲ್ಯ ವಿಮೆಯು ಶಾಶ್ವತವಾಗಿ ಅಂಗವೈಕಲ್ಯ ಹೊಂದಿ ತನ್ನ ಕಸುಬಿನಲ್ಲಿ ಮುಂದುವರೆಯಲು ಅಶಕ್ಯನಾ/ಳಾಗಿರುವ ವ್ಯಕ್ತಿಗೆ ಅನುಕೂಲಗಳನ್ನು ನೀಡುತ್ತದೆ. ಇದನ್ನು ಆಗಾಗ್ಗೆ ಜೀವ ವಿಮೆಗೆ ಅನುಬಂಧ ಎಂದು ಪರಿಗಣಿಸಲಾಗಿದೆ.

ಅವಘಡ ವಿಮ ಯಾವುದೇ ಅಪಘಾತಗಳ ವಿರುದ್ಧ ಅವಘಡ ವಿಮೆಯು ರಕ್ಷಣೆ ನೀಡುತ್ತದೆ. ಸಂಭವಿಸಬಹುದಾದ ಅಪಘಾತ ನಿರ್ದಿಷ್ಟ ಮಾನದಂಡಕ್ಕೆ ಒಳಪಟ್ಟಿರುವುದಿಲ್ಲ.ಮೂರನೆಯ ಪಕ್ಷದವರಿಂದ ಆಗುವ ಅಪರಾಧೀ ಕೃತ್ಯಗಳಿಂದ ಸಂಭವಿಸುವ ನಷ್ಟಗಳನ್ನು ಭರಿಸಿಕೊಡುವುದು ಅಪರಾಧ ವಿಮೆ.ಇದು ಒಂದು ರೀತಿಯ ಆಕಸ್ಮಿಕ ವಿಮೆಯೇ. ಉದಾಹರಣೆಗೆ, ಕಳ್ಳತನ ಅಥವಾ ಹಣದ ದುರುಪಯೋಗದಿಂದ ಸಂಭವಿಸಬಹುದಾದ ನಷ್ಟಗಳನ್ನು ತುಂಬಿಕೊಡಲು ಸಂಸ್ಥೆಯೊಂದು ಅಪರಾಧ ವಿಮೆಯನ್ನು ಪಡೆಯಬಹುದು.ಬೇರೆ ದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಸಂಸ್ಥೆಗಳು ಆ ದೇಶಗಳಲ್ಲಿ ತಲೆ ಎತ್ತುವ ಕ್ರಾತಿ ಅಥವಾ ರಾಜಕೀಯ ಸ್ಥಿತ್ಯಂತರದಿಂದಾಗಿ ವ್ಯವಹಾರ ನಷ್ಟಕ್ಕೆ ತುತ್ತಾದ ಸಂದರ್ಭದಲ್ಲಿ ರಾಜಕೀಯ ಅಪಾಯ ವಿಮೆ ಪರಿಹಾರ ಒದಗಿಸುತ್ತದೆ.ಇದು ಅವಘಡ ವಿಮೆಯಲ್ಲಿನ ಒಂದು ಬಗೆ.

ಜೀವ ವಿಮೆ ಮೃತ ವ್ಯಕ್ತಿಯ ಕುಟುಂಬಕ್ಕೆ ಅಥವಾ ನಿಯುಕ್ತರಾದ ಇತರೆ ಫಲಾನುಭವಿಗಳಿಗೆ ಆರ್ಥಿಕ ಅನುಕೂಲಗಳನ್ನೂ, ಅಥವಾ ವಿಮೆದಾರರಿಗೆ ವಿಶಿಷ್ಟ ವರಮಾನದ ನೆರವನ್ನೂ ನೀಡುವುದು ಜೀವ ವಿಮೆ.ಮೃತ ವ್ಯಕ್ತಿಯ ಕುಟುಂಬಕ್ಕೆ ಹೂಳುವಿಕೆ, ಅಂತ್ಯ ಕ್ರಿಯೆ ಹಾಗೂ ಇನ್ನಿತರ ವೆಚ್ಚ ಭರಿಸಲೂ ಅದು ನೆರವಾಗಬಹುದು.ಇಡಿ ಗಂಟಿನ ಪರಿಹಾರ ನೀಡಿಕೆ ಅಥವಾ ವಾರ್ಷಿಕ ಹಣ ನೀಡಿಕೆಯ ವ್ಯವಸ್ಥೆ- ಈ ಎರಡರಲ್ಲಿ ಯಾವುದು ಫಲಾನುಭವಿಗೆ ಸಿಕ್ಕುವಂತಾಗಬೇಕು ಎಂಬ ಆಯ್ಕೆಯನ್ನು ಜೀವ ವಿಮಾ ಪಾಲಿಸಿಗಳು ಪಾಲಿಸಿದಾರನ ಪಾಲಿಗೆ ಬಿಟ್ಟಿದೆ.

ಆಸ್ತಿಪಾಸ್ತಿ ವಿಮೆ ಈ ಇಲ್ಲಿನೋಯಿಸ್ ಮನೆಗಾದ ಟಾರ್ನೆಡೊಯಿಂದಾದ ಹಾನಿಯನ್ನು ವಿಮೆಯ ಉದ್ದೇಶಕ್ಕಾಗಿ "ದೇವರ ಕೆಲಸ" ಎಂದು ಪರಿಗಣಿಸಲಾಯಿತು.ಆಸ್ತಿಪಾಸ್ತಿ ವಿಮೆಯು ಬೆಂಕಿ, ಕಳ್ಳತನ ಅಥವಾ ಹವಾಮಾನ ವೈಪರೀತ್ಯಗಳಿಂದ ಉಂಟಾಗಬಹುದಾದ ವಿಪತ್ತುಗಳ ವಿರುದ್ಧ ರಕ್ಷಣೆ ನೀಡುತ್ತದೆ. ಅಗ್ನಿ ಆಕಸ್ಮಿಕ ವಿಮೆ, ಪ್ರವಾಹ ಪ್ರಕೋಪ ವಿಮೆ, ಭೂಕಂಪದ ಆಪತ್ತಿನ ವಿಮೆ, ಗೃಹ ವಿಮೆ, ಒಳನಾಡ ನೌಕಾ ವಿಮೆ ಮತ್ತು ಕುದಿಪಾತ್ರೆ ವಿಮೆಯಂತಹ ವಿಶಿಷ್ಟ ರೂಪಗಳನ್ನು ಇದು ಒಳಗೊಂಡಿದೆ.

Start a discussion with Riya Sony Thomas 12345

Start a discussion