ಸದಸ್ಯರ ಚರ್ಚೆಪುಟ:Rencita Sequeira
ವಿಷಯ ಸೇರಿಸಿಭಾರತೀಯ ಚಿತ್ರ ರಂಗದ ಒಂದು ಅಂಗವಾದ ತುಳು ಚಿತ್ರರಂಗ ನಾವೆಣಿಸಿದ ರೀತಿಯಲ್ಲಿ ಸಾಗಲಿಲ್ಲ. ಇದಕ್ಕೆ ತನ್ನದೆ ಆದ ಅಡ್ಡಿ ಆತಂಕಗಲು ಇರುವಂತಹದು ನಮಗೆಲ್ಲರಿಗೂ ತಿಳಿದಿರುವಂತಹ ವಿಷಯವೆ. ಸಮಾನ್ಯವಾಗಿ ತುಳು ಚಿತ್ರರಂಗದಲ್ಲಿ ಎರಡರಿಂದ ಮೂರು ಚಿತ್ರಗಳನ್ನು ವರ್ಷವೊಂದರಲ್ಲಿ ತಯಾರು ಮಾಡಲಾಗುತ್ತದೆ. ಆದರೆ ೨೦೧೧ರಲ್ಲಿ ಬಿಡುಗಡೆಯಾದ "ಒರಿಯರ್ದೊರಿ ಅಸಲ್" ಚಿತ್ರದ ಯಶಸ್ಸಿನ ನಂತರ ಒಮ್ಮೆಯೇ ೮-೧೦ ಚಿತ್ರಗಳ ಘೋಷಣೆಯಾಯಿತು.
ಪ್ರಥಮವಾಗಿ ೧೯೭೧ರಲ್ಲಿ "ಎನ್ನ ತಂಗಡಿ" ಎಂಬ ಚಿತ್ರವು ಬಿಡುಗಡೆಯಾಯಿತು. ತುಳು ಚಿತ್ರಗಳು ತುಳುನಾಡಿನಲ್ಲಿ ಮಾತ್ರ ಬಿಡುಗಡೆಯಾಗುತ್ತದೆ. ಏಕೆಂದರೆ ಇದರ ಮಾರುಕಟ್ಟೆ ಕಾಸರಗೋಡಿನಿಂದ ಉಡುಪಿ ಜಿಲ್ಲೆಯವರೆಗೆ ಮಾತ್ರ ಇದೆ. ಆದರೆ ಮುಂಬೈ, ಬೆಂಗಳೂರಿನಲ್ಲಿ ಮತ್ತು ಕೊಲ್ಲಿ ರಾಷ್ಟ್ರದಲ್ಲೂ ತುಳು ಚಿತ್ರಗಳು ಓಡುತ್ತವೆ.
ವಿಮರ್ಶಕರ ದೃಷ್ಠಿಯಲ್ಲಿ ೨೦೦೬ರಲ್ಲಿ ಬಿಡುಗಡೆಯಾದ ಶುದ್ಧ ಚಿತ್ರ ಉತ್ತಮ ಚಿತ್ರವಾದರೂ, ಅತೀ ಹೆಚ್ಚಿನ ಯಶಸ್ಸನ್ನು ಗಳಿಕೆಯ ದೃಷ್ಠಿಯಿಂದಲೂ ೨೦೧೧ರಲ್ಲಿ ಬಿಡುಗಡೆಯಾದ "ಒರಿಯಾರ್ದೊರಿ ಅಸಲ್" ಚಿತ್ರವು ಕಂಡಿತು. ಹೆಚ್ಚಿನವರು ಆರ್ಥಿಕ ದೃಷ್ಟಿಯಿಂದ ನಿರ್ಮಿಸುವುದು ದುಸ್ತರ ಎನಿಸಿದ ಸಮಯದಲ್ಲಿ ಮುಂಬಯಿ ಮೂಲದ ರಾಮಚಂದ್ರರವರು ಕೇವಲ ೧.೫ ಲಕ್ಷದ ಅಂದಾಜಿನಲ್ಲಿ ಶುದ್ಧ ಚಿತ್ರವನ್ನು ತಯಾರಿಸಿದರು. ತುಳು ಚಿತ್ರರಂಗದ ಚಿತ್ರ ಬ್ರಹ್ಮ ಎಂದೇ ಪ್ರಖ್ಯಾತರಾದ ಕೆ.ಎನ್ ಟೇಲರ್ ೧೯೭೧ರಲ್ಲಿ ನಿರ್ಮಿಸಿದ "ದಾರೆದ ಬೊಡೆದಿ" ಚಿತ್ರವು ರೂಪವಾಣಿ ಟಾಕೀಸಿನಲ್ಲಿ ೮ ವಾರ ಪ್ರದರ್ಶನಗೊಂಡಿತು. ದಿವಂಗತ ವಿಶುಕುಮಾರ್ ೧೯೭೩ರಲ್ಲಿ ನಿರ್ದೇಶಿಸಿದ "ಕೋಟಿ ಚೆನ್ನಯ" ಇತಿಹಾಸವನ್ನಾಧರಿಸಿದ ಚಿತ್ರ ಜ್ಯೋತಿ ಚಿತ್ರಮಂದಿರದಲ್ಲಿ ೧೦೦ ದಿನ ಪ್ರದರ್ಶನ ಕಂಡಿತು. ೧೯೭೫ರಲ್ಲಿ ತೆರೆಕಂಡ "ಕರಿಯಣಿ ಕಟ್ಟಂದಿ ಕಂಡನಿ" ವರ್ಣಮಯ ಚಿತ್ರವಾಗಿ ಮೂಡಿ ಬಂತು. ೧೯೭೨ರಲ್ಲಿ ಬಿಡುಗಡೆಯಾದ "ಬಿಸತ್ತಿ ಬಾಬು" ಚಿತ್ರಕ್ಕೆ ರಾಜ್ಯ ಸರಕಾರದಿಂದ ಅತ್ಯುತ್ತಮ ತುಳು ಚಿತ್ರವೆಂಬ ಪ್ರಶಸ್ತಿ ಪಡೆಯಿತು.
ಮುಂಬಯಿಯಲ್ಲಿ ಸಾವಿರಾರು ಜನರು ವಿವಿಧ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡ ತುಳುವರು ಇದ್ದಾರೆ. ಆಶ್ಚರ್ಯವೆಂದರೆ ಇವರೆಲ್ಲರೂ ಬಾಲಿವುಡ್ ನ ಆಕರ್ಷಣೆಗೆ ಒಳಗಾಗಿದ್ದಾರೆ. ಮಾತ್ರವಲ್ಲದೆ ಇವರೆಲ್ಲರೂ ಬಾಲಿವುಡ್ ನಲ್ಲಿ ತುಂಬಾ ಹೆಸರನ್ನು ಗಳಿಸಿದ್ದಾರೆ. ಇವರುಗಳಲ್ಲಿ ಮುಖ್ಯವಾದವರೆಂದರೆ ಐಶ್ವರ್ಯ ರೈ, ಸುನಿಲ್ ಶೆಟ್ಟಿ, ಶಿಲ್ಪ ಶೆಟ್ಟಿ, ದೀಪಿಕಾ ಪಡುಕೋಣೆ ಇವರಲ್ಲದೆ ಅಡ್ ಲ್ಯಾಬ್ಸ್ ನ ಮನಮೋಹನ್ ಶೆಟ್ಟಿ ಹಾಗೂ ಅನೇಕ ಜನರು ತೆರೆಯ ಹಿಂದುಗಡೆಯೂ ತಮ್ಮ ಕೆಲಸದಲ್ಲಿ ತೊಡಗಿದ್ದಾರೆ.
ತುಂಬಾ ದಿಗ್ಗಜರು ತುಳು ಚಿತ್ರರಂಗ, ಭಾಷೆ ಮತ್ತು ಜನರ ಬಗ್ಗೆ ಹೊಗಳಿಕೆಯನ್ನು ಚೆಲ್ಲಿದ್ದಾರೆ. ತುಳುವರು ತುಂಬಾ ಸಾಹಸಭರಿತ ಜನರು ಖರ್ಚು ಮಾಡಿದ ಹಣ ಬರದಿದ್ದರೂ ಪುನ: ಚಿತ್ರವನ್ನು ತಯಾರಿಸುವುದರಲ್ಲಿ ಹಿಂದೆ ಬೀಳುವುದಿಲ್ಲ
ತುಳು ಚಿತ್ರರಂಗದಲ್ಲಿ ಈವರೆಗೆ ೪೭ ಚಿತ್ರಗಳು ತಯಾರಿಕೆಯಾಗಿದ್ದರೂ, ಭಾರತೀಯ ಚಿತ್ರರಂಗಕ್ಕೆ ಹೋಲಿಸಿದರೆ ತುಳು ಚಿತ್ರರಂಗ ಇನ್ನೂ ಅಂಬೆಗಾಲಿಡುತ್ತಿದೆ. ಆದರೂ ಇತ್ತೀಚಿನ ದಿನಗಳಲ್ಲಿ ದಾಪುಗಾಲು ಇಡಲು ಪ್ರಯತ್ನಿಸುವುದು ಒಂದು ಬೆಳವಣಿಗೆ. ಮುಂದಿನ ದಿನಗಳಲ್ಲಿ ಸಂಖ್ಯಾ ದೃಷ್ಟಿಯಿಂದ ಗುಣಮಟ್ಟದ ದೃಷ್ಟಿಯಿಂದ ಹಾಗು ಸುದಭಿರುಚಿಯ ದೃಷ್ಟಿಯಿಂದ ಉತ್ತಮ ಚಿತ್ರಗಳು ಮೂಡಿ ಬರಲಿ ಎಂದು ಚಿತ್ರ ರಸಿಕರ ಅನಿಸಿಕೆ.
Start a discussion with Rencita Sequeira
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Rencita Sequeira. What you say here will be public for others to see.