ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Rathan Suvarna

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೯೭೧ರ ಭಾರತ-ಪಾಕಿಸ್ತಾನ ಯುದ್ಧವು ಭಾರತ ಮತ್ತು ಪಾಕಿಸ್ತಾನಗಳ ನಡುವಿನ ಒಂದು ಪ್ರಮುಖ ಸೈನಿಕ ಸಂಘರ್ಷವಾಗಿದೆ. ಈ ಯುದ್ಧವು ಬಾಂಗ್ಲಾ ವಿಮೋಚನೆಗೆ ಸಂಬಂಧಿಸಿದೆ. ಅದನ್ನು ಕೆಲವು ಸಲ ಪಾಕಿಸ್ತಾನದ ಆಂತರಿಕ ಯುದ್ಧ ಎಂದೂ ಕರೆಯುತ್ತಾರೆ. ಯುದ್ಧದ ನಿಖರ ದಿನಾಂಕಗಳ ಬಗ್ಗೆ ಒಮ್ಮತವಿಲ್ಲವಾದರೂ ಅಧಿಕೃತವಾಗಿ ಎರಡೂ ದೇಶಗಳ ನಡುವೆ ಡಿಸೆಂಬರ್ ೩, ೧೯೭೧ ರಂದು ವೈಷಮ್ಯ ಉಂಟಾಯಿತು. ೩ ಡಿಸೆಂಬರ್ ೧೯೭೧ ಮತ್ತು ೧೬ ಡಿಸೆಂಬರ್ ೧೯೭೧ ರ ನಡುವೆ ಭಾರತದ ಪಶ್ಚಿಮ ಗಡಿಯಲ್ಲಿ ನಡೆದ ಸಶಸ್ತ್ರ ಸಂಘರ್ಷವನ್ನು "ಭಾರತ-ಪಾಕಿಸ್ತಾನ ಯುದ್ಧ ಎಂದು ಭಾರತ ಮತ್ತು ಬಾಂಗ್ಲಾ ದೇಶಗಳ ಸೈನ್ಯಗಳು ಕರೆದಿವೆ. ಯುದ್ಧವು ಪಾಕಿಸ್ತಾನ ಸೈನ್ಯದ ಶರಣಾಗತಿಯೊಂದಿಗೆ ಕೊನೆಗೊಂಡಿತು.

ಭಾರತ-ಪಾಕಿಸ್ತಾನ ವೈಷಮ್ಯದ ಕಿಚ್ಚಿಗೆ ಬಾಂಗ್ಲಾ ವಿಮೋಚನೆಯ ಯುದ್ಧವು ಕಿಡಿಯಾಯಿತು. ಆ ಯುದ್ಧವು ಸತತವಾಗಿ ಅಧಿಕಾರದಲ್ಲಿದ್ದ ಪಶ್ಚಿಮ ಪಾಕಿಸ್ತಾನ ಮತ್ತು ಬಹುಮತ ಹೊಂದಿದ್ದ ಪೂರ್ವ ಪಾಕಿಸ್ತಾನಗಳ ನಡುವಿನ ತಿಕ್ಕಾಟವಾಗಿತ್ತು . ೧೯೭೦ ರ ಪಾಕಿಸ್ತಾನದ ಚುನಾವಣೆಯಲ್ಲಿ ಪೂರ್ವ ಪಾಕಿಸ್ತಾನದ ಅವಾಮಿ ಲೀಗ್ ಪಕ್ಷವು ಪೂರ್ವ ಪಾಕಿಸ್ತಾನದಲ್ಲಿನ ೧೬೯ ಸ್ಥಾನಗಳ ಪೈಕಿ ೧೬೭ ನ್ನು ಗೆದ್ದು ೩೧೩ ಸ್ಥಾನಗಳಿದ್ದ ಪಾಕಿಸ್ತಾನದ ಶಾಸನ ಸಭೆ ಮಜ್ಲಿಸ್-ಏ -ಶುರಾದಲ್ಲಿ ಸರಳ ಬಹುಮತ ಪಡೆಯುವುದರೊಂದಿಗೆ ಬಾಂಗ್ಲಾ ವಿಮೋಚನೆಯ ಯುದ್ಧದ ಕಿಡಿಯು ಹತ್ತಿಕೊಂಡಿತು. ಅವಾಮಿ ಲೀಗ್ ನ ಮುಖ್ಯಸ್ಥ ಶೇಖ್ ಮುಜೀಬುರ್ ರಹಮಾನ್ ಅವರು ಪಾಕಿಸ್ತಾನ ಅಧ್ಯಕ್ಷರನ್ನು ಭೆಟ್ಟಿಯಾಗಿ ಸರಕಾರ ರಚಿಸುವ ಹಕ್ಕನ್ನು ಪ್ರತಿಪಾದಿಸಿದರು. ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ನಾಯಕ ಝುಲ್ಫೀಕರ್ ಅಲಿ ಭುಟ್ಟೋ, ಪಾಕಿಸ್ತಾನದ ನಾಯಕತ್ವವನ್ನು ಮುಜೀಬುರ್ ಗೆ ಒಪ್ಪಿಸಲು ನಿರಾಕರಿಸಿದ ಮೇಲೆ ಪಾಕಿಸ್ತಾನದ ಅಧ್ಯಕ್ಷ ಯಾಹ್ಯಾಖಾನ್ ಬಹುತೇಕ ಪಶ್ಚಿಮ ಪಾಕಿಸ್ತಾನೀಯರನ್ನೇ ಹೊಂದಿದ್ದ ಸೈನ್ಯವನ್ನು ಕರೆಸಿದರು.

ಭಿನ್ನಮತೀಯರ ಸಾಮೂಹಿಕ ಬಂಧನಗಳು ಆರಂಭವಾದವು. ಪೂರ್ವ ಪಾಕಿಸ್ತಾನದ ಸೈನಿಕರನ್ನು , ಪೋಲೀಸರನ್ನು ನಿಶ್ಶಸ್ತ್ರಗೊಳಿಸುವ ಯತ್ನಗಳು ನಡೆದವು. ಅನೆಕ ದಿನಗಳ ಮುಷ್ಕರ ಮತ್ತು ಅಸಹಕಾರದ ನಂತರ ಪಾಕಿಸ್ತಾನದ ಸೈನ್ಯವು ಮಾರ್ಚ್ ೨೫ , ೧೯೭೧ ಢಾಕಾ ಮೇಲೆ ಎರಗಿತು. ಅವಾಮಿ ಲೀಗ್ ಅನ್ನು ಪ್ರತಿಬಂಧಿಸಲಾಯಿತು , ಅದರ ಅನೇಕ ಸದಸ್ಯರು ತಪ್ಪಿಸಿಕೊಂಡು ಭಾರತಕ್ಕೆ ಓಡಿ ಬಂದರು. ಮುಜೀಬರನ್ನು ಬಂಧಿಸಿ ಪಶ್ಚಿಮ ಪಾಕಿಸ್ತಾನಕ್ಕೆ ಕರೆದೊಯ್ಯಲಾಯಿತು.

27 ಮಾರ್ಚ್ ೧೯೭೧ ರಂದು , ಪಾಕಿಸ್ತಾನ ಸೈನ್ಯದಲ್ಲಿ ಮೇಜರ್ ಆಗಿದ್ದು ಬಂಡೆದ್ದ ಝಿಯಾ ಉರ್ ರಹಮಾನ್ ಮುಜಿಬುರ್ ಪರವಾಗಿ ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಘೋಷಿಸಿದರು. ಏಪ್ರಿಲ್ ನಲ್ಲಿ ದೇಶಭ್ರಷ್ಟರಾದ ಅವಾಮೀ ಲೀಗ್ ನಯಕರು ಒಂದು ದೇಶಭ್ರಷ್ಟ ಸರಕಾರ ವನ್ನು ಮೆಹೆರ್ ಪುರದ ಹತ್ತಿರ ಸ್ಥಾಪಿಸಿದರು ಈಸ್ಟ್ ಪಾಕಿಸ್ತಾನ್ ರೈಫಲ್ಸ್ ಎಂಬ ಅರೆಸೈನಿಕ ಪಡೆಯೂ ಬಂಡುಕೋರರೊಂದಿಗೆ ಸೇರಿಕೊಂಡಿತು. ಮುಕ್ತಿವಾಹಿನಿ ಎಂಬ ಗೆರಿಲ್ಲಾ ಮಾದರಿಯ ನಾಗರಿಕರ ಸೈನ್ಯವೊಂದನ್ನು ಬಾಂಗ್ಲಾ ಸೈನ್ಯಕ್ಕೆ ಸಹಾಯಮಾಡುವುದಕ್ಕಾಗಿ ರಚಿಸಲಾಯಿತು.

ಬಾಂಗ್ಲಾ ವಿಮೋಚನೆಯ ಯುದ್ಧದಲ್ಲಿ ಭಾರತದ ಪಾತ್ರ.

೨೭ ಮಾರ್ಚ್ ೧೯೭೧ರಂದು ಭಾರತದ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರು ಸ್ವಾತಂತ್ರ್ಯಕ್ಕಾಗಿ ಪೂರ್ವ ಪಾಕಿಸ್ತಾನದ ಜನರ ಹೋರಾಟಕ್ಕೆ ತಮ್ಮ ಸರಕಾರದ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸಿದರು. ಭಾರತ-ಪೂರ್ವ ಪಾಕಿಸ್ತಾನದ ಗಡಿಯನ್ನು ಭಾರತದಲ್ಲಿ ಸುರಕ್ಷಿತ ಆಶ್ರಯಕ್ಕಾಗಿ ನಿರಾಶ್ರಿತರಿಗಾಗಿ ತೆರೆಯಲಾಯಿತು. ಪಶ್ಚಿಮ ಬಂಗಾಲ,ಬಿಹಾರ,ಆಸ್ಸಾಮ್ , ಮೇಘಾಲಯ ಮತ್ತು ತ್ರಿಪುರಗಳ ಸರಕಾರಗಳು ಗಡಿಯಗುಂಟ ನಿರಾಶ್ರಿತರ ಶಿಬಿರಗಳನ್ನು ವ್ಯವಸ್ಥೆಗೊಳಿಸಿದವು . ಕೂಡಲೇ ಪಾಕಿಸ್ತಾನದ ದೇಶಭ್ರಷ್ಟ ಸೈನ್ಯಾಧಿಕಾರಿಗಳು ಮತ್ತು ಸ್ವಯಂಸೇವಕರು ಈ ಶಿಬಿರಗಳನ್ನು ಮುಕ್ತಿವಾಹಿನಿ ಗೆರಿಲ್ಲಾಗಳ ಭರತಿ ಮತ್ತು ತರಬೇತಿಗಳಿಗೆ ಬಳಸಲು ಆರಂಭಿಸಿದರು.

ಪೂರ್ವ ಪಾಕಿಸ್ತಾನದಲ್ಲಿ ಹಿಂಸಾಚಾರ ಹೆಚ್ಚಿದಂತೆ ಅಂದಾಜು ಒಂದು ಕೋಟಿ ನಿರಾಶ್ರಿತರು ಭಾರತಕ್ಕೆ ಬಂದರು. ಅದರಿಂದಾಗಿ ಪಾಕಿಸ್ತಾನದಲ್ಲಿ ಅರಾಜಕತೆಯೂ ಆರ್ಥಿಕ ಸಂಕಷ್ಟವೂ ಉಂಟಾದವು. ಪಾಕಿಸ್ತಾನದ ಆಪ್ತಗೆಳೆಯ ಅಮೆರಿಕವು ಪಶ್ಚಿಮ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಮತ್ತು ಇತರ ಅಗತ್ಯವಸ್ತು ಪೂರೈಕೆ ಮಾಡುವದಾಗಿ ಮಾತು ಕೊಟ್ಟಿತು.

೧೯೭೧ ರ ಆರಂಭಕ್ಕೆ ಇಂದಿರಾಗಾಂಧಿಯವರು ಯೂರೋಪ್ ಪ್ರವಾಸ ಕೈಗೊಂಡರು. ವಿಶ್ವಸಂಸ್ಥೆಯ ಭದ್ರತಾಸಮಿತಿಯಲ್ಲಿನ ಪಾಕಿಸ್ತಾನದ ಪರ ನಿರ್ದೇಶನ ವಿಷಯದಲ್ಲಿ ಅಮೇರಿಕದ ಪಕ್ಷವನ್ನು ಯುನೈಟೆಡ್ ಕಿಂಗ್‍ಡಂ ಮತ್ತು ಫ್ರಾನ್ಸ್ ಎರಡೂ ದೇಶಗಳು ತೊರೆಯುವಂತೆ ಮಾಡುವಲ್ಲಿ ಅವರು ಯಶಸ್ವಿಯಾದರು. ಇಂದಿರಾರ ಮಹತ್ತರ ಸಾಧನೆಯೆಂದರೆ ೯ ಅಗಸ್ಟ್ ರಂದು ಸೋವಿಯೆಟ್ ಯೂನಿಯನ್ ಜತೆ ಇಂಡೋ-ಸೋವಿಯೆಟ್ ಸ್ನೇಹ ಮತ್ತು ಸಹಕಾರ ಒಪ್ಪಂದವೊಂದಕ್ಕೆ ಸಹಿ ಹಾಕಿದ್ದು. ಇದರಿಂದ ಅಮೆರಿಕಕ್ಕೆ ಆಘಾತವುಂಟುಮಾಡಿದ್ದಲ್ಲದೆ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾವು ಈ ಬಿಕ್ಕಟ್ಟಿನಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ಕಡಿಮೆ ಮಾಡಿದರು. ಪಾಕಿಸ್ತಾನದ ಸ್ನೇಹಿತ ಚೈನಾವು ಅದಕ್ಕೆ ಕೇವಲ ನೈತಿಕಬೆಂಬಲವನ್ನು ಕೊಟ್ಟಿತಲ್ಲದೆ , ಬಾರತದ ಜತೆಗಿನ ತನ್ನ ಗಡಿಯತ್ತ ತನ್ನ ಸೈನ್ಯವನ್ನೇನೂ ಕಳಿಸಲಿಲ್ಲ. ಮುಕ್ತಿವಾಹಿನಿಯ ಕಾರ್ಯಾಚರಣೆಗಳು ಪಾಕಿಸ್ತಾನೀ ಸೈನ್ಯಕ್ಕೆ ತೀವ್ರ ಸಾವುನೋವನ್ನುಂಟು ಮಾಡಿದವು. ಭಾರತದೊಳಕ್ಕೆ ಬರತೊಡಗಿದ ನಿರಾಶ್ರಿತರ ಸಂಖ್ಯೆ ಹೆಚ್ಚುತ್ತಿದ್ದಂತೆ ಭಾರತಕ್ಕೆ ಆರ್ಥಿಕಹೊರೆ ಹೆಚ್ಚತೊಡಗಿತು. ಭಾರತವು ಮುಕ್ತಿವಾಹಿನಿಗೆ ಶಸ್ತ್ರಾಸ್ತ್ರ ಮತ್ತು ತರಬೇತಿ ಸೇರಿದಂತೆ ಹೆಚ್ಚಿನ ಬೆಂಬಲ ಕೊಡತೊಡಗಿತು.

Start a discussion with Rathan Suvarna

Start a discussion