ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Melita martin

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದಿನನಿತ್ಯ ಜೀವನದಲ್ಲಿ ಕನ್ನಡ ಭಾಷೆಯನ್ನು ಬೆಳೆಸುವುದರ ಜತೆಗ ಕನ್ನಡದಲ್ಲಿ ವ್ಯವಹರಿಸಬೇಕು. ಕನ್ನಡ ಭಾಷೆಯನ್ನು ಉಸಿರಾಗಿಸಿಕೊಳ್ಳುವುದರೊಂದಿಗೆ ನಾಡು ನುಡಿಗೆ ತಲೆಬಾಗಿಸಬೇಕು

ಪರಿಷತ್ ಎಲ್ಲ ಕನ್ನಡ ಪರ ಸಂಘಟನೆಗಳನ್ನು ವಿಶ್ವಾಸಕ್ಕೆೆ ತೆಗೆದುಕೊಂಡು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು. ಜತೆಗೆ ಯುವ ಸಾಹಿತಿಯ ಪ್ರತಿಭೆಗಳಿಗೆ ಆದ್ಯತೆ ನೀಡಬೇಕು.

ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್‌ಗೆ ಸುದೀರ್ಘವಾದ ಇತಿಹಾಸವಿದ್ದು ಪರಿಷತಿನ ಕಾರ್ಯಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಳ್ಳುವ ಮುಖಾಂತರ ಪರಿಷತ್ತನ್ನು ಕ್ರಿಯಾಶೀಲವಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ಆ ದಿಶೆಯಲ್ಲಿ ನಾವು ಜವಾಬ್ದಾರಿಯುತವಾದ ಕಾರ್ಯಗಳನ್ನು ಮಾಡಲು ಕನ್ನಡಪರ ಸಂಘಟನೆಗಳು ಸಹಕರಿಸಬೇಕು.

ಕನ್ನಡ ಸಾಹಿತ್ಯ, ಭಾಷೆ ಬೆಳವಣಿಗೆಗೆ ಪೂರಕವಾಗಿ ತಾಲೂಕು ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಗಡಿಭಾಗದಲ್ಲಿ ಕಾವ್ಯ, ಕಥಾ, ಕಮ್ಮಟಗಳನ್ನು ಹಮ್ಮಿಕೊಳ್ಳಬೇಕು.

ಆಂಗ್ಲ ಭಾಷೆಯನ್ನು ಅನ್ನ ನೀಡುವ ಭಾಷೆ ಎಂಬ ಭ್ರಮೆಯಿಂದ ಹೊಸ ತಲೆಮಾರಿನ ಬಹುತೇಕರು ಆಂಗ್ಲ ಭಾಷೆಯತ್ತ ವಾಲುತ್ತಿದ್ದಾರೆ. ಇಂತಹ ಭ್ರಮೆಗಳನ್ನು ಜನಮಾನಸದಿಂದ ಹೋಗಲಾಡಿಸಲು ಕನ್ನಡಿಗರು ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವ ಮತ್ತು ಬೆಳೆಸುವ ಮನಸ್ಥಿತಿಯನ್ನು ನಿರ್ಮಿಸಬೇಕು. ಪಟ್ಟಣದ ಶ್ರೀ ವೆಂಕಟರಮಣಸ್ವಾಮಿ ದೇವಸ್ಥಾನದ ಮುಂಭಾಗ ಕನ್ನಡ ಅಭಿವೃದ್ದಿ ಪ್ರಾಧಿಕಾರ ಹಾಗೂ ತಾಲ್ಲೂಕು ಆಡಳಿತದ ವತಿಯಿಂದ ಏರ್ಪಡಿಸಿದ್ದ ಕನ್ನಡ ನುಡಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಜನಸಾಮಾನ್ಯರ ಭಾಷೆಯಾಗಿದ್ದು, ಕರ್ನಾಟಕದಲ್ಲಿ ಆಡಳಿತ, ಶಿಕ್ಷಣ, ನ್ಯಾಯಾಂಗದಲ್ಲಿ ಸಂಪೂರ್ಣ ಕನ್ನಡ ಬಳಕೆಯಾಗಬೇಕು. ಸರೋಜಿನಿ ಮಹಿಷಿ ವರದಿಯಂತೆ ಕನ್ನಡಿಗರಿಗೆ ಉದ್ಯೋಗದಲ್ಲಿ ಆದ್ಯತೆ ನೀಡಬೇಕು. ಅಧಿಕಾರ ವಿಕೇಂದ್ರೀಕರಣವಾದಂತೆ ಕೈಗಾರಿಕಾ ವಿಕೇಂದ್ರೀಕರಣವಾಗಿ ತಾಲ್ಲೂಕುಗಳಲ್ಲೂ ಕಾರ್ಖಾನೆಗಳು ಪ್ರಾರಂಭವಾದಾಗ ರಾಜ್ಯದ ಜನತೆಗೆ ಹೆಚ್ಚು ಉದ್ಯೋಗ ಸಿಗಲಿದೆ ಎಂದರು.

ಪ್ರಾಧಿಕಾರವು ಪ್ರತಿಯೊಂದು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನುಡಿ ಹಬ್ಬವನ್ನು ಏರ್ಪಡಿಸಿ ಆ ಮೂಲಕ ಕನ್ನಡಿಗರ ಭಾವನಾತ್ಮಕ ಸಂಬಂಧಗಳಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದೆ. ಕನ್ನಡ ಭಾಷೆಯ ಬಗ್ಗೆ ಪ್ರೀತಿ ಹೆಚ್ಚಿಸಲು ಕಲೆ, ಸಾಹಿತ್ಯ, ನೃತ್ಯ, ಜಾನಪದ ಸೊಗಡು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಇಂದಿನ ದಿನ ಮಾನದಲ್ಲಿ ಇಂಗ್ಲಿಷ್ ವ್ಯಾಮೋಹದಿಂದ ಎಲ್ಲರೂ ನಮ್ಮ ತಾಯಿ ಭಾಷೆ ಕನ್ನಡವನ್ನು ಮರೆತ್ತಿದ್ದೇವೆ ಮೂಲ ಬೇರಾದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸೊದು ನಮ್ಮೆಲ್ಲರ ಕರ್ತವ್ಯ.

ಕನ್ನಡ ನಾಡು ನುಡಿ, ಭಾಷೆಗೆ ಎಲ್ಲರೂ ಒಗ್ಗಟಾಗಿ ನಿಷ್ಠೆಯಿಂದ ಶ್ರಮವಹಿಸಬೇಕು. .

Start a discussion with Melita martin

Start a discussion