ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Male madeva

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Male madeva


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ಕನ್ನಡ ವಿಕಿ ಸಮುದಾಯ (ಚರ್ಚೆ) ೦೫:೪೮, ೩ ಏಪ್ರಿಲ್ ೨೦೨೨ (UTC)

ಬಸವ ಭಿಕ್ಷು

[ಬದಲಾಯಿಸಿ]

ಬಸವ ಭಿಕ್ಷು ಇವರ ಮೂಲ ನಾಮ ಶ್ರೀ ಬಸವಲಿಂಗ ಮೂರ್ತಿ ಶರಣರು.ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಸಿರಡದು ಎಂಬ ಗ್ರಾಮದಲ್ಲಿ ಗೋವಿಂದಪ್ಪ ಈರಮ್ಮ ದಂಪತಿಗಳ 3 ಜನ ಮಕ್ಕಳಲ್ಲಿ ಮೊದಲನೆಯ ಮಗನಾಗಿ 1974 ಮಾರ್ಚ್ 18 ನೆ ತಾರೀಕು ಜನಿಸಿದರು. ದ್ರಾವಿಡ ಸಮುದಾಯದಲ್ಲಿ ಹುಟ್ಟಿದರು . ಇವರ ತಂದೆ ಯ ಊರು ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು. ರಂಟವಳಲು .ಎಂಬ ಗ್ರಾಮದವರು.ಪ್ರಾಥಮಿಕ ವಿದ್ಯಾಭ್ಯಾಸ ಸಿರಾ ತಾಲ್ಲೋಕಿನ ತಾಳಗುಂದ ತರೂರು ಮಧ್ಯದಲ್ಲಿರುವ ಶಿರದಾಡು ಗ್ರಾಮದಲ್ಲಿ ಮಾಧ್ಯಮಿಕ ಶಿಕ್ಷಣ ಪಕ್ಕದಲ್ಲೇ ಇರುವ ತಾಳಗುಂದ ಗ್ರಾಮದಲ್ಲಿ.ಪ್ರೌಡಶಾಲೆ ಶಿಕ್ಷಣ ಮಧುಗಿರಿ ತಾಲ್ಲೂಕು ಸೆಜ್ಜೆ ಹೊಸಹಳ್ಳಿ ಸುವರ್ಣಮುಖಿ ಪ್ರೌಡ ಶಾಲೆ ಯಲ್ಲಿ 8 ನೆ ತರಗತಿ ಮುಗಿಸಿ 9ಹಾಗೂ 10 ನೆ ತರಗತಿಯನ್ನು ಸಿರಾ ತಾಲೂಕಿನ ಕಾಳಾಪೂರ ದ.ರಂಗನಾಥ ಸ್ವಾಮಿ ಪ್ರೌಡ ಶಾಲೆ ಯಲ್ಲಿ ಮುಗಿಸಿದರು.ಪದವಿ ಪೂರ್ವಶಿಕ್ಷಣ ಮಧುಗಿರಿಯ ಗೌತಮ ಬುದ್ಧ ಕಾಲೇಜಿನಲ್ಲಿ ನಡೆಯಿತು.ಪದವಿ ಶಿಕ್ಷಣ ಮಧುಗಿರಿಯ ಟಿವಿವಿ ಕಾಲೇಜಿನಲ್ಲಿ ನಡೆಯಿತು ಇಲ್ಲಿ ಹ. ಬ .ಮಹದೇವಪ್ಪ ಎಂಬ ಗುರುಗಳು ದೊರೆತರು.ಅವರು ಉತ್ತಮ ವಾಗ್ಮಿ.ಈ ಹುಡುಗನನ್ನು ಎಲ್ಲ ಮಠ ಪೀಠ ಗಳಿಗು ಪರಿಚಯ ಮಾಡಿದರು.ಬಸವ ಭಿಕ್ಷು ಸಾಹಿತ್ಯ ರಚಿಸುವುದರ ಜೊತೆಗೆ ಉತ್ತಮ ವಾಗ್ಮಿ ಯದರು.Male madeva (ಚರ್ಚೆ) ೦೮:೧೫, ೩ ಏಪ್ರಿಲ್ ೨೦೨೨ (UTC)

ಸಮಾಜ ಸುಧಾರಕ== ಶ್ರೀ ಬಸವಲಿಂಗ ಮೂರ್ತಿ ಶರಣರು.ಮೈಸೂರು ==

ಬಾಲ್ಯ ಶ್ರೀ ಬಸವ ಲಿಂಗಮೂರ್ತಿ ಶರಣರ.ಮೊದಲ ಹೆಸರು ಜಿ.ಸಿದ್ದಗಂಗಯ್ಯ.1974ಮಾರ್ಚ್ 18 ನೆ ತಾರಿಕಿನಂದು ಕರ್ನಾಟಕದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಶಿರದಡು ಎಂಬ ಗ್ರಾಮದಲ್ಲಿ ಗೋವಿಂದಪ್ಪ ಈರಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು.ಈ ದಂಪತಿಗಳ ಮೂಲ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕು ರಂಟ ವಳಲು ಎಂಬ ಗ್ರಾಮ. ಇವರದು ದೇವಾಲಯದ ಕುಟುಂಬ.ರಂತವಳಲು ಗೋವಿಂದಪ್ಪ ನವರ ತಂದೆ ಪೂಜಾರಿ ನರಸಿಂಹಯ್ಯ ನವರು ರಂಟವಾಲ ಲಕ್ಷ್ಮಿ ದೇವಾಲಯದ ಪ್ರಧಾನ ಅರ್ಚಕರು.ಒಳ್ಳೆಯ ಧಾರ್ಮಿಕ ಸಂಪ್ರದಾಯಸ್ಥ ಕುಟುಂಬ.ಗೋವಿಂದಪ್ಪ ನವರೂ ಸಿರದಡು ಗ್ರಾಮದ ಕರಿಯಪ್ಪ ನವರ ದತ್ತು ಪುತ್ರಿ.ಹಾಗಾಗಿ ಸಿರಾ ತಾಲೂಕಿನ ಸಿರಾ ದಡ ಗ್ರಾಮದಲ್ಲಿ ಜೀವನ ಸಾಗಿಸಿದರು. ವಿವಾಹವಾದ 4 ವರ್ಷಗಳ ನಂತರ ಒಂದು ಗಂಡು ಮಗು ಜನಿಸಿತು.ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಈ ಮಗುವಿನ ನಾಮಕರಣ ಕಾರ್ಯ ನಡೆಯಿತು.ತ್ರಿವಿಧ ದಾಸೋಹ ಕ್ಕೇ ಹೆಸರಾಗಿದ್ದ ಶತಾಯುಷಿ ಡಾಕ್ಟರ್ ಶಿವಕುಮಾರ ಮಹಾಸ್ವಾಮಿಗಳು ಮಗುವಿಗೆ ಸಿದ್ದಗಂಗಯ್ಯ ಎಂದು ನಾಮಕರಣ ಮಾಡಿದರು 5 ನೆ ವರ್ಷಕ್ಕೆ ತಾಯಿಯ ತವರು ಸಿರದಾಡು ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು.ಇಲ್ಲಿ ಚನ್ನಬಸಪ್ಪ ಎಂಬ ಗುರುಗಳು ಬಾಲಕನಿಗೆ ಒಳ್ಳೆಯ ಶಿಕ್ಷಣ ಸಂಸ್ಕಾರ ಕೊಟ್ಟರುMale madeva (ಚರ್ಚೆ) ೦೪:೫೧, ೧೮ ಏಪ್ರಿಲ್ ೨೦೨೨ (UTC)

ಸೌಹಾರ್ದತೆಯ ಸಂತ ಶ್ರೀ ಬಸವಲಿಂಗ ಮೂರ್ತಿ ಶರಣರು.

[ಬದಲಾಯಿಸಿ]

ಜನನ. 1974 ಮಾರ್ಚ್ 18 ಹುಟ್ಟಿದ ಸ್ಥಳ. ಶಿರದಡ.ಸಿರಾ ತಾಲೂಕ ತುಮಕೂರು ಜಿಲ್ಲೆ.ಕರ್ನಾಟಕ ವಿದ್ಯಾಬ್ಯಾಸ. MA ಕನ್ನಡ ಸಾಹಿತ್ಯ.ಮೈಸೂರಿನಲ್ಲಿ 2001 ನೆ ಇಸವಿಯಲ್ಲಿ ಸನ್ಯಾಸ ಧೀಕ್ಷೆ.ಚಿತ್ರದುರ್ಗದ ಮುರುಘಾ ಮಠದ ಲ್ಲೀ 2002ರಲ್ಲಿ ಮೈಸೂರಿನ ಜಗದ್ಗುರು ಮುರುಘಾ ರಾಜೇಂದ್ರ ಮಹಾಲಿಂಗೇಶ್ವರ ಮಠಕ್ಕೆ ನೇಮಕ. 2007 ರಲ್ಲೀ ಪೀಠ ತ್ಯಾಗ 2008 ರೆಲ್ಲಿ ಮೈಸೂರಿನಲ್ಲಿ ಭಾವೈಕ್ಯ ಪೀಠ ಸ್ಥಾಪನೆ.2015 ರಾಲ್ಲಿ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಚನ್ನೆನ ಹಳ್ಳಿ ಯಲ್ಲಿ ಜಗದ್ಗುರು ಪೀಠ ಸ್ಥಾಪನೆ Male madeva (ಚರ್ಚೆ) ೧೬:೫೯, ೧೮ ಏಪ್ರಿಲ್ ೨೦೨೨ (UTC)

ಶ್ರೀ ಬಸವದ್ಯಾನ ಮಂದಿರ. ಮೈಸೂರು

[ಬದಲಾಯಿಸಿ]

2003ನೇ ಇಸ್ವಿಯ ಸಂದರ್ಭದಲ್ಲಿ ಶ್ರೀ ಬಸವಲಿಂಗ ಮೂರ್ತಿ ಶರಣರು ಮೈಸೂರಿನ ಅಗ್ರಹಾರದ ಜಗದ್ಗುರು ಮುರುಘಾ ರಾಜೇಂದ್ರ ಮಹಾಲಿಂಗೇಶ್ವರ ಮಠದಲ್ಲಿ ಮಠಾಧೀಶರಾಗಿ ಸೇವೆ ಮಾಡುತ್ತಿದ್ದರು ಅಲ್ಲಿ ಪ್ರತಿ ತಿಂಗಳು ನಡೆಯುವ ಸತ್ಸಂಗದಲ್ಲಿ ಸಾವಿರಾರು ಜನ ಬಂದು ಪಾಲ್ಗೊಂಡು ಸ್ವಾಮಿಗಳ ಬೋಧನೆಗಳನ್ನು ಕೇಳಿ ಪ್ರಭಾವಿತರಾಗಿ ಚಿಂತನೆ ನಡೆಸಿ ಪರಿವರ್ತಿತರಾಗಿದ್ದರು ಎಲ್ಲಾ ಧರ್ಮದ ಎಲ್ಲಾ ಸಮುದಾಯಗಳ ಜನರು ಕೂಡ ಆಗಮಿಸಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದರು ಅಲ್ಲಿಗೆ ಇಬ್ಬರು ಮುಸ್ಲಿಮ್ಸ್ ದಂಪತಿಗಳು ಬರುತ್ತಿದ್ದರು ಸನ್ಮಾನ್ಯ ಜಾಹೀದುಲ್ಲ ಖಾನ್ ಹಾಗೂ ಅವರ ಧರ್ಮಪತ್ನಿ ಸಲ್ಮಾ ಸಿದ್ದಿಕ ಅವರು ಪರಿವಾರ ಸಮೇತರಾಗಿ ಆಗಮಿಸುತ್ತಿದ್ದರು ಸ್ವಾಮಿಗಳ ವೈಚಾರಿಕ ಚಿಂತನೆಯನ್ನ ಕೇಳಿದ್ದ ಇವರು ಪ್ರಭಾವಿತರಾಗಿ ಶ್ರೀ ಬಸವಲಿಂಗ ಮೂರ್ತಿ ಶರಣರಿಗೆ ನಿವೇಶನ ಒಂದನ್ನ ಕೊಡಬೇಕು ಎಂದು ತೀರ್ಮಾನಿಸಿ ರಮನಹಳ್ಳಿಯ ಹತ್ತಿರ ಇರುವ ಅವರ ಜಮೀನಿನಲ್ಲಿ ಸಣ್ಣದೊಂದು ನಿವೇಶನವನ್ನು ದಾನ ಮಾಡಿದರು ಸ್ವಾಮಿಗಳು ತಕ್ಷಣವೇ ಕಟ್ಟಡವನ್ನು ನಿರ್ಮಿಸಲು ಪ್ರಾರಂಭಿಸಿದರು ಬಹಳಷ್ಟು ಜನ ಎಲ್ಲಾ ಧರ್ಮಿಯರು ಸಹಕರಿಸಿದರೆ ಇಲ್ಲಿ ಕಟ್ಟಡ ನಿರ್ಮಾಣವಾಯಿತು ಅದಕ್ಕೆ ಶ್ರೀ ಬಸವ ಧ್ಯಾನ ಮಂದಿರ ಎಂದು ನಾಮಕರಣ ಮಾಡಿ ಭಾವೈಕ್ಯ ಪೀಠವನ್ನು ಸ್ಥಾಪಿಸಿದರು 2010ನೇ ಇಸ್ವಿಯಲ್ಲಿ ಸುತ್ತೂರು ಜಗದ್ಗುರುಗಳಿಂದ ಹಾಗೂ ಚಿತ್ರದುರ್ಗದ ಜಗದ್ಗುರುಗಳಿಂದ ಈ ಕಟ್ಟಡ ಉದ್ಘಾಟನೆಗೊಂಡಿತು ಅಂದಿನಿಂದ ಹಿಂದಿನವರೆಗೂ ಸ್ವಾಮಿಗಳು ಕಾರ್ಯಕ್ರಮಗಳನ್ನು ಮಾಡಿಕೊಂಡು ಸಂಹಾರ್ದತೆಯ ಬಳಗವನ್ನ ಸೃಷ್ಟಿಸಿಕೊಂಡು ಎಲ್ಲಾ ಧರ್ಮೀಯರಿಗೂ ಬೋಧನೆ ಮಾಡುತ್ತಾ ದಾಸೋಹ ಮಾಡುತ್ತಾರೆ ಪ್ರವಚನ ನೀಡುತ್ತಾ ಇದ್ದರು ಕಾಲ ನಂತರದಲ್ಲಿ ಅಗ್ರಹಾರದ ಮಹಾಲಿಂಗೇಶ್ವರ ಮಠವನ್ನು ಬಿಟ್ಟು ರಮ್ಮನ ಹಳ್ಳಿಯಲ್ಲಿ ವಾಸ ಮಾಡತೊಡಗಿದರು ಸಾವಿರಾರು ಜನ ಎಲ್ಲಾ ಧರ್ಮದವರು ಮಠಕ್ಕೆ ಬರತೊಡಗಿದರು ಇದರಿಂದ ಜನಗಳಿಗೆ ಬಹಳ ಆನಂದವಾಯಿತು ಸ್ವಾಮಿಗಳಿಗೂ ಆನಂದವಾಯಿತು ಹೀಗೆ ಬಸವ ಧ್ಯಾನ ಮಂದಿರವು ಸಾಮಾಜಿಕ ಶೈಕ್ಷಣಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮದೇ ಆದ ರೀತಿಯಲ್ಲಿ ಸೇವೆ ಮಾಡುತ್ತಿದೆ ಮೈಸೂರಿನಿಂದ 10 ಕಿ.ಮೀ ದೂರದಲ್ಲಿರುವ ಬಸವ ಧ್ಯಾನ ಮಂದಿರವು ಎಲ್ಲಾ ಧರ್ಮದವರ ನಂಬಿಕೆಯ ಕೇಂದ್ರವಾಗಿದೆ ಎಲ್ಲಾ ಧರ್ಮದವರು ಬಂದು ಇಲ್ಲಿ ಧ್ಯಾನ ಮಾಡುತ್ತಾರೆ ನಮಾಜ್ ಮಾಡುತ್ತಾರೆ ಪ್ರಾರ್ಥನೆ ಮಾಡುತ್ತಾರೆ ಎಲ್ಲಾ ಧರ್ಮದವರು ಸೇರಿ ಸಾಹಿತ್ಯ ಸಂಸ್ಕೃತಿ ಕಲೆ ಮುಂತಾದವುಗಳ ಪ್ರಚಾರವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಶ್ರೀ ಬಸವಲಿಂಗ ಮೂರ್ತಿ ಶರಣರು ಬಸವ ಧ್ಯಾನ ಮಂದಿರದ ಸಂಸ್ಥಾಪಕ ಅಧ್ಯಕ್ಷರಾಗಿದ್ದಾರೆ Male madeva (ಚರ್ಚೆ) ೧೩:೩೯, ೩೦ ಜುಲೈ ೨೦೨೩ (IST)Reply

ಮುಖವೇಣಿ ನರಸಿಂಹಯ್ಯ ರಂಟವಾಳ

[ಬದಲಾಯಿಸಿ]

ಮುಖವೇಣಿ ನರಸಿಂಹಯ್ಯನವರು ದಿನಾಂಕ 18. 4 .1945 ನೇ ಇಸವಿಯಲ್ಲಿ ಮಧುಗಿರಿ ತಾಲೂಕಿ ರಂಗವಾಳಲು ಗ್ರಾಮದಲ್ಲಿ ಗ್ರಾಮದಲ್ಲಿ ನರಸಿಂಹಯ್ಯ ಮತ್ತು ಲಕ್ಷ್ಮೀದೇವಿ ದಂಪತಿಗಳ ನಾಲ್ಕನೆಯ ಮಗನಾಗಿ ಜನಿಸಿದರು ದಲಿತ ಕುಟುಂಬದಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ಜೀತಗಾರಿಕೆ ಪದ್ಧತಿ ವ್ಯವಸ್ಥೆಯಲ್ಲಿ ಜೀವನ ಸಾಗಿಸಬೇಕಾಯಿತು ಆಂಧ್ರಪ್ರದೇಶದ ಬ್ಯಾಡಗೆರೆ ಎಂಬ ಗ್ರಾಮದಲ್ಲಿ ಶ್ರೀಮಂತರೊಬ್ಬರ ಮನೆಯಲ್ಲಿ ಜೀತಕ್ಕಿದ್ದ ಇವರು ಬಾಲ್ಯದಲ್ಲಿಯೇ ಸಂಗೀತದ ಬಗ್ಗೆ ಆಸಕ್ತಿ ಹೊಂದಿದ್ದರು ಬೇಡ ಗೆರೆಯಲ್ಲಿ ಒಮ್ಮೆ ಸಂಪೂರ್ಣ ರಾಮಾಯಣ ಯಕ್ಷಗಾನ ನಾಟಕ ನಡೆಯುತ್ತದೆ ಅಲ್ಲಿಗೆ ಹಲವಾರು ಜನ ಕಲಾವಿದರು ಆಗಮಿಸುತ್ತಾರೆ ಮುಖವೇಣಿ ಬಾರಿಸುವ ಕಲಾವಿದರು ಕೂಡ ಬಂದಿರುತ್ತಾರೆ ಇದನ್ನು ನೋಡಿದ ನರಸಿಂಹಯ್ಯ ಅವರಿಗೆ ಹೋಗಿ ನಮಸ್ಕಾರವನ್ನು ಮಾಡಿ ನನಗೆ ಈ ಮುಖವೇನೇ ವಿದ್ಯೆಯನ್ನು ಕಳಿಸಿಕೊಡಿ ಎಂದು ಕೇಳಿದರು ಅದಕ್ಕೆ ತಕ್ಷಣವೇ ಸ್ಪಂದಿಸಿದವರು ಇವರ ಕಲಿಕೆ ಗೋಸ್ಕರ ಮೂರು ದಿನಗಳ ಕಾಲ ಬ್ಯಾಡಗಿರಿಯಲ್ಲಿ ಇದ್ದು ನರಸಿಂಹಯ್ಯನವರಿಗೆ ಮುಖವೇಣಿಯನ್ನು ಕಲಿಸಿದರು ಕೇವಲ ಮೂರೇ ದಿನಕ್ಕೆ ಮುಖವೇಣಿಯನ್ನು ಕಲಿತರು ಮತ್ತು ಅವರಿಂದ ಒಂದು ಮುಖವೇಣಿಯನ್ನು ಕೊಡುಗೆಯಾಗಿ ಪಡೆದರು ನಿಧಾನವಾಗಿ ಮೂರು ವರ್ಷಗಳವರೆಗೆ ಅವರು ಹೇಳಿಕೊಟ್ಟ ವಿದ್ಯೆಯನ್ನು ತಾನೊಬ್ಬನೇ ಯಾರ ಸಹಾಯವು ಇಲ್ಲದೆ ಕಲಿತು ಇವರು ಸಹ ಕಲಾವಿದರಾದರು ಮನೆಯಲ್ಲಿ ಮುಖವೇಣಿಯನ್ನು ನುಡಿಸುತ್ತಿದ್ದರು ಜಿತಗಾರಿಗೆ ಎಂದ ಮೇಲೆ ಹೊಲದ ಕೆಲಸ ಮನೆ ಕೆಲಸ ಇದ್ದೇ ಇರುತ್ತೆ ಜೀತಗಾರಿಕೆ ಮಾಡುತ್ತದೆ ಸಂಗೀತಗಾರಿಕೆಯನ್ನು ಕಲಿತುಕೊಂಡರು ನಂತರದಲ್ಲಿ ಇವರ ಕಲಿಕೆಯನ್ನು ನೋಡಿ ಸುತ್ತಮುತ್ತಲ ಗ್ರಾಮಸ್ಥರು ಇವರು ಮುಖವನೇ ನುಡಿಸುವುದನ್ನು ಕೇಳಲು ನೂರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು ಹಾಗೆಯೇ ಸುತ್ತಮುತ್ತಲ ಗ್ರಾಮದಲ್ಲಿ ದೇವತಾ ಕಾರ್ಯಗಳು ನಡೆದರೆ ಅದಕ್ಕೆಲ್ಲ ಇವರು ಸಹನಾಯಿಯನ್ನು ನುಡಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ದೇವಸ್ಥಾನಗಳ ಮುಂದೆ ಕುಳಿತು ಸಹ ನಾಯಿಯನ್ನು ನುಡಿಸುತ್ತಿದ್ದರು ಇವರ ಕೀರ್ತಿ ಮಧುಗಿರಿ ತಾಲೂಕಿನ ಅದ್ಯಂತ ತುಮಕೂರು ಜಿಲ್ಲೆಯ ಜನತಾ ಹೊಸರಿಸಿ ನಡೆಯುವ ನಾಟಕಗಳಿಗೆ ಇವರನ್ನೇ ತರಿಸುತ್ತಿದ್ದರು ನರಸಿಂಹಯ್ಯನವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರೂ ಪತ್ನಿಯ ಹೆಸರು ಸಾಕಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದರು ಸುಮಾರು 75 ವರ್ಷಗಳ ಕಾಲ ಬದುಕಿದ್ದರು ಅವರ ಜೀವನದ ಕೊನೆಯವರೆಗೂ ಶಹನಯ ವಾದನವನ್ನು ಬಿಡಲಿಲ್ಲ ಹಾಗೆಯೇ ಹಲವಾರು ಜನ ಯುವಕರಿಗೆ ಕಲಿಸಿದರು ಇವರು ಹಲವಾರು ರಾಜ್ಯಮಟ್ಟದ ಜಿಲ್ಲಾಮಟ್ಟದ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ ಜನಪದ ಗಾಯನದಲ್ಲಿ ಇವರು ಎತ್ತಿದ ಕೈ ಹಲವಾರು ಜನಪದ ಗೀತೆಗಳನ್ನ ಹಾಡಿ ಜನಮನವನ್ನ ಸೂರ್ಯಗೊಂಡಿದ್ದರು. ಮುಖವೇಣಿ ನರಸಿಂಹಯ್ಯನವರ ಹಿಂದೆ ಖ್ಯಾತರಾಗಿ ತುಮಕೂರು ಜಿಲ್ಲೆಗೆ ಹೆಸರನ್ನು ತಂದರು ಇವರು 1994ರಲ್ಲಿ ರಂಟವಾಳಲು ಗ್ರಾಮದಲ್ಲಿ ತೀರಿಕೊಂಡರು ಹಲವಾರು ಜನ ಕಂಬನಿ ಮಿಡಿದರು ಮಧುಗಿರಿ ತಾಲೂಕಿನಲ್ಲಿ ಮುಖವೇನೇ ನರಸಿಂಹಯ್ಯ ಎಂದೆ ಪ್ರಖ್ಯಾತರಾದರು ಛಲವಾದಿ ಸಮುದಾಯಕ್ಕೆ ಇವರು ಕಿರೀಟ ಪ್ರಾಯರಾಗಿದ್ದಾರೆ Male madeva (ಚರ್ಚೆ) ೧೧:೫೩, ೧ ಆಗಸ್ಟ್ ೨೦೨೩ (IST)Reply

ಛಲವಾದಿ ಮಠ. ಚೆನ್ನೇನಹಳ್ಳಿ.

[ಬದಲಾಯಿಸಿ]

ಮಠದ ಪರಿಚಯ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಹೋಬಳಿಯ ತಾಳಗುಂದ ಪೋಸ್ಟ್ ಚನ್ನೇನಳ್ಳಿ ಎಂಬುವಂತಹ ಒಂದು ಕುಗ್ರಾಮದಲ್ಲಿ ಸುಮಾರು 20 ವರ್ಷಗಳ ಹಿಂದೆ ಛಲವಾದಿ ಜಗದ್ಗುರು ಪೀಠವನ್ನು ಕರಿಯಪ್ಪಜ್ಜ ಎಂಬುವವರು ಅಡಿಪಾಯ ಹಾಕಿದ್ದರು. ಛಲವಾದಿ ಸಮುದಾಯವು ಕರ್ನಾಟಕದಲ್ಲಿ ತನ್ನದೇ ಆದ ಸಾಂಸ್ಕೃತಿಕ ಶೈಕ್ಷಣಿಕ ಸಾಮಾಜಿಕ ಸೇವೆಗೆ ಹೆಸರುವಾಸಿಯಾಗಿದೆ ಛಲವಾದಿ ಸಮುದಾಯದಲ್ಲಿ ಬಹಳಷ್ಟು ಜನ ಕಲಾವಿದರು ರಾಜಕಾರಣಿಗಳು ಶಿಕ್ಷಕರು ವಕೀಲರು ಎಲ್ಲಾ ರಂಗಗಳಲ್ಲಿಯೂ ಸೇವೆ ಮಾಡಿದಂತಹ ಜನರಿದ್ದಾರೆ ಸುಮಾರು ನೂರು ವರ್ಷಗಳ ಹಿಂದೆಯೇ ಚೆನ್ನೇನಳ್ಳಿಯ ಸರ್ವೆ ನಂಬರ್ 50ರಲ್ಲಿ ಮಾದೇಶ್ವರ ದೇವಸ್ಥಾನವಿತ್ತು ಈ ಮಾದೇಶ್ವರ ದೇವಸ್ಥಾನವನ್ನು ಕರಿಯಪ್ಪಜ್ಜನವರು ಅಭಿವೃದ್ಧಿಪಡಿಸಿದ್ದರು. ಕಾಲ ನಂತರದಲ್ಲಿ ಅದು ಶಿಥಿಲವಾಯಿತು ಹಾಗೂ ಆ ಸಮಯದಲ್ಲಿಯೇ ಛಲವಾದಿಮಠವನ್ನು ಕರಿಯಪ್ಪಜ್ಜನವರು ಸ್ಥಾಪಿಸಿದರೆಂದು ಹಿರಿಯರು ಹೇಳುತ್ತಾರೆ ಪೂಜ್ಯ ಕರಿಯಪ್ಪಜ್ಜನವರು ಸ್ವತಂತ್ರ ಪೂರ್ವದಲ್ಲಿಯೇ ಛಲವಾದಿಗಳನ್ನು ಸಂಘಟಿಸಿ ಪೂಜೆ ಪುನಸ್ಕಾರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ ಎಂದು ಹಿರಿಯರು ಹೇಳುತ್ತಾರೆ ಈ ಮಠವನ್ನು ಇತ್ತೀಚೆಗೆ ಅವರ ಮೊಮ್ಮಗನಾದ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು ಅಭಿವೃದ್ಧಿಪಡಿಸಿ ಭಕ್ತಾದಿಗಳ ದೇಣಿಗೆಯೊಂದಿಗೆ ಸರ್ಕಾರದ ಅನುದಾನದೊಂದಿಗೆ ಮಠವನ್ನು ಅಭಿವೃದ್ಧಿ ಮಾಡುತ್ತಿದ್ದಾರೆ ಮಾದೇಶ್ವರ ದೇವಸ್ಥಾನವು ಕೂಡ ಅಭಿವೃದ್ಧಿಯಾಗುತ್ತಿದೆ ಛಲವಾದಿ ಮಠವು ಸುಮಾರು ಒಂದು ಎಕರೆ ಜಾಗದಲ್ಲಿ ಅಭಿವೃದ್ಧಿಯಾಗುತ್ತಿದೆ ಮುಂದಿನ ದಿನಗಳಲ್ಲಿ ಇಲ್ಲಿ ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ ಎಂದು ಸ್ವಾಮಿಗಳು ತಿಳಿಸಿದ್ದಾರೆ ಕರಿಯಪ್ಪಜ್ಜನವರು ಸ್ವತಂತ್ರ ಪೂರ್ವ ಕಾಲದಲ್ಲಿ ಆಧ್ಯಾತ್ಮಿಕ ಜೀವನವನ್ನು ನಡೆಸಿದರು ಸಮುದಾಯದ ಹಿರಿಯರಾದ ಎಚ್ ಎಂ ಗಂಗಾಧರಯ್ಯ ಇವರೊಂದಿಗೆ ಒಳ್ಳೆಯ ಒಡನಾಟವನ್ನ ಇಟ್ಟುಕೊಂಡಿದ್ದರು ಜನಗಳನ್ನು ಸಂಘಟನೆ ಮಾಡಿ ಸಮುದಾಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು ಇದರ ಮುಂದುವರಿಕೆ ಭಾಗವಾಗಿ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು ಅವರ ಕಾರ್ಯಗಳನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಒಂದು ಎಕ್ಕರೆ ಜಮೀನಿನಲ್ಲಿ ಮಠವನ್ನು ನಿರ್ಮಾಣ ಮಾಡಿ ಸಮುದಾಯದ ಹಿತಕ್ಕಾಗಿ ಮಠವನ್ನು ನಿರ್ಮಾಣ ಮಾಡುತ್ತಿದ್ದಾರೆ ಈ ಸಂದರ್ಭದಲ್ಲಿ ನಾಡಿನ ಹಲವಾರು ಹಿರಿಯರು ಬಂದು ನೋಡಿ ಶುಭ ಹಾರೈಸಿ ಹೋಗುತ್ತಿದ್ದಾರೆ ಛಲವಾದಿ ಮಠವು ಸುಮಾರು 20 ವರ್ಷಗಳಿಂದ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳ ನೇತೃತ್ವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಅಂಬೇಡ್ಕರ್ ಜಯಂತಿ ಒನಕೆ ಓಬವ್ವನ ಅವರ ಜಯಂತಿ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ ಪ್ರತಿ ತಿಂಗಳಿಗೊಮ್ಮೆ ಜ್ಞಾನ ಸಂಗಮ ಕಾರ್ಯಕ್ರಮವನ್ನು ಮಾಡುತ್ತಿದ್ದರು ಈಗ ಮಠದ ಅಭಿವೃದ್ಧಿ ಪ್ರಗತಿಯಲ್ಲಿ ಇರುವುದರಿಂದ ಮುಂದಿನ ದಿನಗಳಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ಎಲ್ಲಾ ಚಟುವಟಿಕೆಗಳು ಕೂಡ ಮುಂದುವರೆಯಲಿದೆ ಚಲವಾದಿ ಜಗದ್ಗುರು ಪೀಠದ ಟ್ರಸ್ಟ್ರಚನೆಯಾಗಿದ್ದು ಈ ಟ್ರಸ್ಟ್ ಸಾಮಾಜಿಕ ಸಮುದಾಯದ ಸೇವೆಯನ್ನು ಮಾಡಲು ಪ್ರಯತ್ನ ಮಾಡುತ್ತಿದೆ ನಾಡಿನ ಹಲವಾರು ಸಂಘಟನೆಗಳ ಮುಖ್ಯಸ್ಥರು ಸ್ವಾಮಿಗಳೊಂದಿಗೆ ಕೈಜೋಡಿಸಿ ಕಾರ್ಯಕ್ರಮದ ಸಮುದಾಯದ ಅಭಿವೃದ್ಧಿಗೆ ನಿಂತಿದ್ದಾರೆ ಬಂಧುಗಳೇ ದಲಿತ ಸಮುದಾಯಗಳಲ್ಲಿ ಮಠಗಳೇ ಇಲ್ಲದಿದ್ದನ್ನು ಗಮನಿಸಿ ಪೂಜೆ ಶ್ರೀಕರಿಯಪ್ಪಜ್ಜನವರು ಚೆನ್ನೈನ ಹಳ್ಳಿಯಲ್ಲಿ ಮಠವಾಗಬೇಕು ಈ ಮಠದ ಮೂಲಕವಾಗಿ ಸಮುದಾಯದ ಜನ ಸಂಘಟಿತರಾಗಬೇಕು ಶಿಕ್ಷಣವನ್ನು ಪಡೆಯಬೇಕು ಆರ್ಥಿಕವಾಗಿ ಅಭಿವೃದ್ಧಿಯಾಗಬೇಕು ಎಂದು ಕನಸು ಕಂಡು ಸ್ವಾತಂತ್ರ್ಯ ಪೂರ್ವದಲ್ಲಿ ಈ ಮಠಕ್ಕೆ ಅಡಿಪಾಯವನ್ನು ಹಾಕಿದ್ದಾರೆ. ಹಿಂದಿನ ಸ್ವಾಮಿಗಳಾದ ಪರಮಪೂಜ್ಯ ಶ್ರೀ ಬಸವಲಿಂಗ ಮೂರ್ತಿ ಸ್ವಾಮಿಗಳು M.A ಪದವಿಪಡೆದಿದ್ದು . ಭಾರತದ ಅತ್ಯಂತ ಕಾಲನಡಿಗೆಯಲ್ಲಿ ಸಂಚಾರ ಮಾಡುತ್ತ ಬಸವಣ್ಣನವರ ತತ್ವ ಸಿದ್ಧಾಂತಗಳನ್ನು ಅವರ ಮೂಲ ಉದ್ದೇಶಗಳನ್ನು ಜನಸಾಮಾನ್ಯರಿಗೆ ಪ್ರಚಾರ ಮಾಡಿದ್ದಾರೆ ಚೆನ್ನೆನಹಳ್ಳಿಯಲ್ಲಿ ಮಠವನ್ನು ಅಭಿವೃದ್ಧಿ ಮಾಡುವುದರ ಮೂಲಕ ಜನಸೇವೆಗೆ ನಿರಂತರವಾಗಿ ತೊಂಕ ಕಟ್ಟಿ ನಿಂತಿದ್ದಾರೆ ದಲಿತರಲ್ಲಿ ಮಠಗಳೇ ಇಲ್ಲದಿರುವಾಗ ನಮ್ಮ ಸಮುದಾಯಕೊಂದು ಮಠವಾಗಬೇಕೆಂದು ಯೋಚಿಸಿ ಸರ್ಕಾರದೊಂದಿಗೆ ಒಳ್ಳೆಯ ಭಾಂದವ್ಯವನ್ನು ಬೆಳೆಸಿ ಅನುದಾನವನ್ನು ಪಡೆದು ಮಠವನ್ನು ನಿರ್ಮಿಸುತ್ತಿದ್ದಾರೆ ನಾಡಿನ ಹಲವಾರು ಜನ ಸಮುದಾಯದ ರಾಜಕಾರಣಿಗಳು ಜನ ಸೇವಕರು ಸಂಘಟನೆಗಳ ಮುಖ್ಯಸ್ಥರು ಪತ್ರಕರ್ತರು ಶಿಕ್ಷಕರು ವಕೀಲರು ಈ ಮಠಕ್ಕೆ ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನ ನೀಡಿ ಮಠದ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಚನ್ನೇನಹಳ್ಳಿ ಯ ಚಲವಾದಿ ಮಠವು ತುಮಕೂರಿನಿಂದ 45 ಕಿ.ಮೀ ದೂರದಲ್ಲಿದೆ ಶಿರಾದಿಂದ ಹದಿನೈದು ಕಿಲೋಮೀಟರ್ ದೂರದಲ್ಲಿದೆ ಕಳ್ಳಂಬೆಳ್ಳ ದಿಂದ ತಾಳಗುಂದ ಮಾರ್ಗವಾಗಿ ಶಿರಾದಡು ಗ್ರಾಮಕ್ಕೆ ಬಂದರೆ. ಅಲ್ಲಿಂದ ಒಂದು ಕಿಲೋಮೀಟರ್ ಪೂರ್ವಕ್ಕೆ ಈ ಮಠವಿದೆ ಈ ಮಠಕ್ಕೆ ಹಲವಾರು ಜನ ಸಾಧು ಸಂತರು ಭೇಟಿ ಮಾಡಿ ಮಠಕ್ಕೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದ್ದಾರೆ ಆದುದರಿಂದ ಸಮುದಾಯದ ಬಾಂಧವರು ಈ ಮಠದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಪಾಲ್ಗೊಂಡು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಪೂಜ್ಯ ಸ್ವಾಮಿಗಳ ಅಭಿಪ್ರಾಯವಾಗಿದೆ Male madeva (ಚರ್ಚೆ) ೧೦:೦೨, ೧೨ ಜನವರಿ ೨೦೨೪ (IST)Reply