ಸದಸ್ಯರ ಚರ್ಚೆಪುಟ:Malcolm glen/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮಂಗಳೂರು, ಕರ್ನಾಟಕದ ದಕ್ಶಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಒಬ್ಬ ಪ್ರಮುಖ ಯಕ್ಷಗಾನ ಕಲಾವಿದರು. ಸಿದ್ಧಕಟ್ಟೆಯವರು ಯಕ್ಷಗಾನ ಮತ್ತು ತಾಳ-ಮದ್ಧಳೆಯಲ್ಲಿ ತನ್ನ ಅಸಾಮಾನ್ಯ ಪ್ರತಿಬೆಯಿಂದ ಹೆಸರುವಾಸಿಯಾಗಿದ್ದರು.

ಪರಿವಿಡಿ [ಅಡಗಿಸು] 1 ವೈಯಕ್ತಿಕ ಜೀವನ 2 ವೃತ್ತಿ ಜೀವನ 3 ಪ್ರಶಸ್ತಿಗಳು 4 ಸಾವು

ವೈಯಕ್ತಿಕ ಜೀವನ [ಬದಲಾಯಿಸಿ]

ಸಿದ್ಧಕಟ್ಟೆಯವರು ರಾಯೀ ಗ್ರಾಮದಲ್ಲಿ ಮೇ ೮ ೧೯೫೨ರಂದು ವಾಸು ಶೆಟ್ಟಿ ಮತ್ತು ಲಿಂಗಮ್ಮರವರ ಎರಡನೇ ಮಗನಾಗಿ ಜನಿಸಿದರು. ಅವರು ಚಿಕ್ಕ ವಯಸ್ಸಿನಲ್ಲೇ ತನ್ನ ಹೆತ್ತವರನ್ನು ಕಳೆದುಕೊಂಡರು. ಭಾರತೀಯ ಶಿಕ್ಷಣ ವ್ಯವಸ್ಥೆಯ 5ನೇ ತರಗತಿ ತಲುಪುವವರೆಗೆ ಅವರು ಶಾಲೆಗೆ ಹೋದರು. ನಂತರ ಸಿದ್ಧಕಟ್ಟೆಯವರು ಯಕ್ಷಗಾನವನ್ನೇ ತಮ್ಮ ವೃತ್ತಿ ಜೀವನವಾಗಿ ಆಯ್ಕೆ ಮಾಡಿ "ಕಲಾಚೇತನ" ಮಾವಿನಕಟ್ಟೆ, ಬಂಟ್ವಾಳ ಇಲ್ಲಿ ತನ್ನ ಉಳಿದ ಜೀವನವನ್ನು ಕಳೆದರು.

ವೃತ್ತಿ [ಬದಲಾಯಿಸಿ] ಸಿದ್ಧಕಟ್ಟೆಯವರು ಕುರಿಯ ವಿಠಲ ಶಾಸ್ತ್ರಿ ಮತ್ತು ಪಾದ್ರಿ ಚಂದು ಇವರ ಮಾರ್ಗದರ್ಶನದಲ್ಲಿ ಕೇಂದ್ರ ಯಕ್ಷಗಾನ ಧರ್ಮಶಾಲಾಗಳ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ನಂತರ ಟ್ರೂಪ್ ಮೂಲಕ ೧೯೬೫ ರಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದರು. ಅವರು ಯಕ್ಷಗಾನದ ಹಿನ್ನೆಲೆ ಸಂಗೀತ ಮತ್ತು ಅದರ ಉಪಕರಣಗಳನ್ನು ಕರ್ನಾಟಕ ಶಾಸ್ತ್ರೀಯ ಸಂಗೀತ ಮೂಲಕ ಅಧ್ಯಯನ ಮಾಡತೊಡಗಿದರು. ಅನಂತರ ಅವರು ಧರ್ಮಸ್ಥಳ ,ಕದ್ರಿ, ಬಪ್ಪನಾಡು, ಕುಂಬ್ಳೆ ಮತ್ತು ಮಧುರ್ ಮೇಳಗಳಿಗೆ ತೆರಳಿದರು. ಪ್ರಾಥಮಿಕವಾಗಿ ತನ್ನ ವಾಕ್ಪುಟುತ್ವವನ್ನು ಕೇಂದ್ರೀಕರಿಸಿದ, ಅವರು ಕುತ್ಲೋಡಿ ವಾಸು ಶೆಟ್ಟಿ,ಡಾ.ಪ್ರಭಾಕರ ಜೋಶಿ, ಕೊರ್ಗಿ ವೆಂಕಟೇಶ್ವರ ಉಪಾಧ್ಯಾಯ ಮತ್ತು ಡಾ.ಶಿಮಾಂತೂರ್ ನಾರಾಯಣ ಶೆಟ್ಟಿ ರಿಂದ ಮಾರ್ಗದರ್ಶನ ತೆಗೆದುಕೊಂಡರು. ತನ್ನ ಅಸಾಧಾರಣ ವ್ಯಕ್ತಿತ್ವ, ಶಿಸ್ತಿನ ಜೀವನ ಮತ್ತು ನಿರಂತರ ಅಭ್ಯಾಸದಿಂದ ಅವರು ಅಗರಿ ಶ್ರೀನಿವಾಸ ಭಾಗವತರಿಂದ ಮೆಚ್ಚುಗೆಗೆ ಪಾತ್ರರಾದರು.

ಇವರನ್ನು ದಕ್ಷಿಣ ರೂಪದಲ್ಲಿ ಜನಪ್ರಿಯತೆಯನ್ನು ಹೊಂದಿದ ಕಾರಣ ಬಡಗತಿಟ್ಟು(ಉತ್ತರ ರೂಪ)ಗೆ ಆಹ್ವಾನಿಸಿದರು. ಅವರು ಪೆರ್ಡೂರು ಮೇಳದ ಮೂಲಕ ಮತ್ತು ನಂತರ ಸಾಲಿಗ್ರಾಮದ ಮೂಲಕ ಪ್ರವೇಶಿಸಿದರು. ಅವರು ಹೆರಂಜಲು ವೆಂಕಟರಮಣ ರಿಂದ ಬಡಗತಿಟ್ಟು ನಾಟ್ಯವನ್ನು ಕಲೆತರು. ಅವರು ಬಡಗತಿಟ್ಟಿನಲ್ಲೂ ತುಂಬಾ ಜನಪ್ರಿಯತೆಯನ್ನು ಗಳಿಸಿದರು.ಹೀಗೆ ತೆಂಕನತಿಟ್ಟಿನಿಂದ ಬಡಗಟ್ಟಿನವರೆಗೆ ಜನಪ್ರಿಯತೆಯನ್ನು ಗಳಿಸಿರುವವರಲ್ಲಿ ಇವರೂ ಒಬ್ಬರು. ಅವರು ಕೆಲವು ವರ್ಷಗಳ ನಂತರ ಯಾದನೂರು ಮೇಳದಿಂದ ತೆಂಕಣತಿಟ್ಟಿಗೆ ಹಿಂಬಂದರು.ಅದಾದ ನಂತರ ಹೊಸನಗರ ಮೇಳದಲ್ಲಿ ಕೆಲಸ ಮಾಡಲಾರಂಬಿಸಿದರು.

ಶೆಟ್ಟಿಯವರು ಪುಸ್ತಕಗಳು ಮತ್ತು ಲೇಖನಗಳ ಒಂದು ಮಹಾನ್ ಸಂಗ್ರಾಹಕ.ಅವರಿಗೆ ರಾಮಾಯಣ, ಮಹಾಭಾರತ, ಭಾಗವತ ಮತ್ತು ಕೆಲವು ಭಾರತೀಯ ಕೃತಿಗಳ ಆಳವಾದ ಜ್ಞಾನವಿತ್ತು. ತನ್ನ ವೈಯಕ್ತಿಕ ಗ್ರಂಥಾಲಯದಲ್ಲಿ ಎರಡು ಸಾವಿರ ಪುಸ್ತಕಗಳಿದ್ದವು. ಅದ್ಭುತ ಧ್ವನಿ,ಸ್ಪಷ್ಟ ಉಚ್ಚಾರಣೆ , ಸಂಭಾಷಣೆ, ಪುರಾಣ ಕಥೆಗಳ ಮತ್ತು ಉಪ ಕಥೆಗಳು ಯುದ್ಧತಂತ್ರದ ವ್ಯುತ್ಪತ್ತಿ ಸಂಗ್ರಹಿಸಿದ್ದರು.ಸೂಕ್ತ ಸನ್ನಿವೇಶವನ್ನು ಮತ್ತು ಸಕಾಲಿಕ ವಿಧಾನದಲ್ಲಿ ನಾಣ್ಣುಡಿ ಮತ್ತು ಸಂಸ್ಕೃತ ಶ್ಲೋಕ ಚರ್ಚೆ ತನ್ನಲ್ಲಿದ್ದ ಕೆಲವು ವಿಶೇಷ ಪುಸ್ತಕಗಳಾಗಿದ್ದವು.

ಪ್ರಶಸ್ತಿಗಳು [ಬದಲಾಯಿಸಿ] ಸಿದ್ಧಕಟ್ಟೆಯವರು ಭಾರತದಲ್ಲಿ ಮತ್ತು ಕೊಲ್ಲಿ ದೇಶಗಳಲ್ಲಿ ವಿವಿಧ ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅವರು ಯಕ್ಷಗಾನ ಮತ್ತು ತಾಳ-ಮದ್ದಳೆಯಲ್ಲಿ ಮಾತಿನ ಮಳ್ಳನೆಂದೆ ಹೆಸರುವಾಸಿಯಾಗಿದ್ದಾರೆ.ಅವರಿಗೆ ೨೦೦೯ ರಲ್ಲಿ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ ನೀಡಲಾಯಿತು.

ಸಾವು [ಬದಲಾಯಿಸಿ] ಸಿದ್ಧಕಟ್ಟೆಯವರು ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲ ಇಲ್ಲಿ ೨೦೧೪ ಮಾರ್ಚ್ ೨೨ ರಂದು ಮೆದುಳು ಕಾಂಡದ ಸ್ಟ್ರೋಕ್ ನಿಂದ ಸಾವನ್ನಪ್ಪಿದರು.

ಅನೇಕ ತನ್ನ ಅಭಿಮಾನಿ ಅನುಯಾಯಿಗಳು ಮತ್ತು ಸಹೋದ್ಯೋಗಿಗಳು ಸಿದ್ದಕಟ್ಟೆಯವರ ಅಂತಿಮ ದರ್ಶನಕ್ಕೆಂದು ಅವರ ನಿವಾಸದಲ್ಲಿ ಅಂದು ಸೇರಿದ್ದರು.