ಸದಸ್ಯರ ಚರ್ಚೆಪುಟ:Kaliyugkrishna
ವಿಷಯ ಸೇರಿಸಿಗೋಚರ
ಕಾಖಂಡಕಿಯ ಮಹಿಪತಿದಾಸರ ಅವರ ಪರಂಪರೆ ಬಗ್ಗೆ.
[ಬದಲಾಯಿಸಿ]
ನನ್ನ ಹೆಸರು ಡಾ|| ಶ್ರೀಕೃಷ್ಣ ಕಾಖಂಡಕಿ. ಸಂಸ್ಕ್ರುತ ಉಪನ್ಯಾಸಕನಾಗಿದ್ದೇನೆ. ನಾನು ಬಿಜಾಪುರದ ನಿವಾಸಿಯಾಗಿದ್ದು ಸಂಸ್ಕ್ರುತ ಕನ್ನಡ ತೆಲುಗು, ಹಿಂದಿ ಇಂಗ್ಲಿಷ ಭಾಷೆಗಳನ್ನು ಬಲ್ಲೆ. ಪ್ರಕೃತ ನಾನು ಕಾಖಂಡಕಿಯ ಮಹಿಪತಿದಾಸರ ಬಗ್ಗೆ ಬರೆಯಲು ಹಂಬಲಿಸಿದ್ದೇನೆ.
ವ್ಯಾಸ - ದಾಸ ಸಾಹಿತ್ಯ ಬೆಳೆದು ಬಂದಿದ್ದು ಶ್ರೀ ಮಧ್ವಾಚಾರ್ಯರಿಂದ. ದ್ವಾದಶ ಸ್ತೋತ್ರ ಇದಕ್ಕೆ ಉತ್ತಮ ಉದಾಹರಣೆ. ನಂತರ ನರಹರಿತೀರ್ಥರು, ಶ್ರೀಪಾದರಾಜರು ಶ್ರೀ ವ್ಯಾಸತೀರ್ಥರು, ಶ್ರೀವಾದಿರಾಜರು, ಶ್ರೀರಾಘವೇಂದ್ರತೀರ್ಥರು ಹೀಗೆ ಯತಿಪರಂಪರೆಗಳಲ್ಲಿ ಬೆಳೆದು, ಶ್ರೀಪಾದರಾಜರ ಹಾಗೂ ಶ್ರೀವ್ಯಾಸರಾಜರ ಕಾಲದಲ್ಲಿ ಉತ್ತುಂಗ ಶಿಖರವೇರಿದ್ದನ್ನು ಕಾಣಬಹುದು. ಆಗಲೇ ಶ್ರೀಪುರಂದರದಾಸರು, ಕನಕದಾಸರು, ಜಗನ್ನಾಥದಾಸರು ಇತ್ಯಾದಿಗಳು ಆಗಿದ್ದು. ಈ ಮಧ್ಯೆ ೧೮ನೇಶತಮಾನದಲ್ಲಿ ಮತ್ತೆ ಉತ್ತುಂಗ ಶಿಖರಕ್ಕೇರಿದ್ದು ನಮಗೆ ತಿಳಿದಿದೆ. ಈ ಮಧ್ಯಕಾಲದಲ್ಲಿ ಅನೇಕ ಘಟಿಸಿದ ಕಾರಣಗಳ ಬಾಹುಲ್ಯದಿಂದ ದಾಸಸಾಹಿತ್ಯ ಲುಪ್ತವಾಯಿತು ಅನ್ನುವಾಗಲೇ ಅದನ್ನು ಅನೂಚಾನವಾಗಿ ಮುಂದುವರೆಸಿಕೊಂಡು ಬಂದವರು ಶ್ರೀಕ್ಷೇತ್ರ ಕಾಖಂಡಕಿಯ ಮಹಿಪತಿದಾಸರು.
ಇವರ ಕಾರ್ಯಕ್ಷೇತ್ರ ಕಾಖಂದಕಿ. ಬಬಲೇಶ್ವರತಾಲೂಕು, ಬಿಜಾಪುರ ಜಿಲ್ಲೆಯಲ್ಲಿದೆ. ಬಿಜಾಪುರದಿಂದ ೩೩ ಕಿಲೋಮೀಟರ ದೂರವಿದೆ. ಇತ್ತ ಕೊಲಾರ ಬಿಜಾಪುರ ಮಾರ್ಗದಿಂದಲೂ ದಾರಿಯಿದ್ದು, ಕಾರಜೋಳ ಕ್ರಾಸ್ ಹತ್ತಿರ ಇಳಿದು, ಬರಬಹುದು. ಸುಮಾರು ೨೦ ಕಿಲೋಮೀಟರ ಆಗಬಹುದು. ಪ್ರಸಿದ್ಧ ಗುಮ್ಮಟನಗರಿಯಲ್ಲಿ ಆದಿಲ್ ಶಹಾನ ಆಸ್ಥಾನದಲ್ಲಿ ಇದ್ದವರು. ಪ್ರತಿನಿತ್ಯ ಇಂದಿನ ಬಸ್ ನಿಲ್ದಾಣದ ಹತ್ತಿರವಿರುವ ನರಸಿಂಹದೇವರ ಆಲಯದಲ್ಲಿ ಭಾಗವತ ಪ್ರವಚನ ನೀಡುವಾಗ ಸಾಕ್ಷಾತ್ ರಾಜನೇ ಬಂದು ಆಲಿಸುತ್ತಿದ್ದನೆಂದು ಇತಿಹಾಸದ ಪುಟಗಳಲ್ಲಿ ಕಂಡುಬರುತ್ತದೆ. ನಂತರ ಸಾರವಾಡದ ಭಾಸ್ಕರಸ್ವಾಮಿಗಳ ಕಾರುಣ್ಯದಿಂದ ತಮ್ಮ ನೈಜ ಸ್ವರೂಪವನ್ನು ತಿಳಿದು ಶ್ರೀಹರಿಸರ್ವೋತ್ತಮ ಎಂಬ ಶ್ರೀಮಧ್ವಾಚಾರ್ಯರ ತತ್ತ್ವವನ್ನು ಪ್ರತಿಪಾದಿಸಲು ಕಟಿ ಬದ್ಧ್ಹರಾಗಿ ನಿಂತು "ಮಹಿಪತಿ" ಎಂಬ ಅಂಕಿತದೊಂದಿಗೆ ರಚಿಸಿದ ಕೃತಿಗಳ ಸಂಖ್ಯೆ ಸಾವಿರಕ್ಕಿಂತಲೂ ಹೆಚ್ಚಿಗೆ ಇವೆ. ವಿಶೇಷವಾಗಿ ಉಳಿದ ದಾಸರು ವರ್ಣಿಸದೇ ಇರುವ ಯಲ್ಲವ್ವನ, ದತ್ತಾತ್ರೇಯನ ವಿಶೇಷ ಕೃತಿಗಳು ಗಮನ ಸೆಳೆಯುತ್ತವೆ. ಕಾಲಜ್ಝಾನದ ವಿಷಯವಂತೂ ಇಂದಿನ ದಿನಕ್ಕೂ ಸತ್ಯವಾಗಿ ಕಂಡು ಬರುತ್ತಲಿವೆ. ಭೀಮಸೇನ ಜೋಷಿಯವರು ಹಾಡಿರುವ ಹಾಡುಗಳು ಮಹಿಪತಿದಾಸರ ಪ್ರಚಾರಕ್ಕೆ ಕಾರಣವಾಯಿತು. ಸೀಮಿತ ವಾತವರಣದಲ್ಲಿತ್ತು. ಎನ್ನಪಾಲಿಸು, ಕಾಯೋ ಕರುಣಾನಿಧೆ ಮುಂತಾದವುಗಳು ಜಗತ್ಪ್ರಸಿದ್ಧವಾಗಿವೆ. ಇತ್ತೀಚಿನ ಹಾಡುಗಾರರಂತೂ ಅತ್ಯಂತ ಆನಂದದಿಂದ ಇವರ ಹಾಡುಗಳನ್ನು ಹಾಡುವುದರ ಮೂಲಕ ಸ್ವಾನುಭವವನ್ನು ಪಡೆಯುತ್ತಿದ್ದಾರೆ. ಆಗಸ್ಟ ೪.೧೩,