ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Jaison vijay rego/sandbox

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರ್ಥಶಾಸ್ತ್ರದಲ್ಲಿ, ಒಂದು ಹಣಕಾಸಿನ ಮಾರುಕಟ್ಟೆ ಎಂಬುದು ಒಂದು ಕಾರ್ಯವಿಧಾನವಾಗಿದ್ದು, ಕಡಿಮೆ ವ್ಯವಹಾರ ನಿರ್ವಹಣಾ ವೆಚ್ಚಗಳಲ್ಲಿ ಮತ್ತು ಪರಿಣಾಮಕಾರಿ-ಮಾರುಕಟ್ಟೆ ಊಹಾಸಿದ್ಧಾಂತವನ್ನು ಪ್ರತಿಬಿಂಬಿಸುವ ಬೆಲೆಗಳಲ್ಲಿ ಜನರು ಹಣಕಾಸಿನ ಭದ್ರತೆಗಳನ್ನು (ಸ್ಟಾಕುಗಳು ಮತ್ತು ಬಾಂಡುಗಳಂಥವು), ವ್ಯಾಪಾರಿ ಸರಕುಗಳನ್ನು (ಅಮೂಲ್ಯ ಲೋಹಗಳು ಅಥವಾ ಕೃಷಿಯ ಸರಕುಗಳಂಥವು), ಮತ್ತು ಇತರ ಮೌಲ್ಯಯುತ ತತ್ಸಮಾನ ವಸ್ತುಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು (ವ್ಯಾಪಾರ ಮಾಡಲು) ಅದು ಅವಕಾಶ ಮಾಡಿಕೊಡುತ್ತದೆ.

ಸಾಮಾನ್ಯ ಮಾರುಕಟ್ಟೆಗಳು (ಇಲ್ಲಿ ಅನೇಕ ವ್ಯಾಪಾರಿ ಸರಕುಗಳು ವ್ಯಾಪಾರ ಮಾಡಲ್ಪಡುತ್ತವೆ) ಮತ್ತು ವಿಶೇಷೀಕರಿಸಲ್ಪಟ್ಟ ಮಾರುಕಟ್ಟೆಗಳೆರಡೂ (ಇಲ್ಲಿ ಕೇವಲ ಒಂದು ವ್ಯಾಪಾರಿ ಸರಕು ಮಾತ್ರವೇ ವ್ಯಾಪಾರ ಮಾಡಲ್ಪಡುತ್ತವೆ) ಅಸ್ತಿತ್ವದಲ್ಲಿವೆ. ಅನೇಕ ಆಸಕ್ತ ಖರೀದಿದಾರರು ಮತ್ತು ಮಾರಾಟಗಾರರನ್ನು ಒಂದು "ಸ್ಥಳದಲ್ಲಿ" ಇರಿಸುವ ಮೂಲಕ ಮಾರುಕಟ್ಟೆಗಳು ಕಾರ್ಯನಿರ್ವಹಿಸುತ್ತವೆ; ಹೀಗೆ ಮಾಡುವುದರಿಂದ ಎರಡೂ ವರ್ಗದವರು ಪರಸ್ಪರರನ್ನು ಕಂಡುಕೊಳ್ಳುವುದು ಅತ್ಯಂತ ಸುಲಭವಾಗಿ ಪರಿಣಮಿಸುತ್ತದೆ. ಸಂಪನ್ಮೂಲಗಳನ್ನು ಹಂಚುವ ದೃಷ್ಟಿಯಿಂದ, ಖರೀದಿದಾರರು ಮತ್ತು ಮಾರಾಟಗಾರರ ನಡುವಿನ ಪಾರಸ್ಪರಿಕ ಕ್ರಿಯೆಗಳ ಮೇಲೆ ಪ್ರಧಾನವಾಗಿ ವಿಶ್ವಾಸವನ್ನಿಡುವ ಒಂದು ಆರ್ಥಿಕತೆಯನ್ನು ಮಾರುಕಟ್ಟೆಯ ಆರ್ಥಿಕತೆ ಎಂದು ಕರೆಯಲಾಗುತ್ತದೆ; ಇದು ನಿಯಂತ್ರಕ ಆರ್ಥಿಕತೆ ಅಥವಾ ಒಂದು ಸಹಜ ಆರ್ಥಿಕತೆಯಂಥ ಮಾರುಕಟ್ಟೆಯದಲ್ಲದ ಆರ್ಥಿಕತೆಗೆ ಪ್ರತಿಯಾಗಿರುತ್ತದೆ.


ಅಲ್ಪಾವಧಿಯ ಅಥವಾ ದೀರ್ಘಾವಧಿಯ ನಗದು ಹರಿವುಗಳಿಗೆ ನೆರವಾಗಲು ಕಂಪನಿಗಳು ಹಣವನ್ನು ಸಾಲಪಡೆಯುತ್ತವೆ. ನಿಧಿಯ ಆಧುನಿಕೀಕರಣ ಅಥವಾ ಭವಿಷ್ಯದ ವ್ಯವಹಾರ ವಿಸ್ತರಣೆಗೆ ಸಂಬಂಧಿಸಿದಂತೆಯೂ ಅವು ಸಾಲಪಡೆಯುತ್ತವೆ.

ಅನೇಕವೇಳೆ, ಸರ್ಕಾರಗಳ ತೆರಿಗೆಯ ಆದಾಯಗಳಿಗಿಂತ, ಅವಶ್ಯಕತೆಗಳ ಮೇಲೆ ಅವು ಮಾಡುವ ಖರ್ಚುಗಳೇ ಮಿತಿಮೀರಿರುತ್ತವೆ. ಈ ವ್ಯತ್ಯಾಸವನ್ನು ಸರಿದೂಗಿಸಲು ಅವು ಸಾಲ ಪಡೆಯುವುದು ಅಗತ್ಯವಾಗಿರುತ್ತದೆ. ರಾಷ್ಟ್ರೀಕರಣಗೊಂಡ ಉದ್ಯಮಗಳು, ಪೌರಸಂಸ್ಥೆಗಳು, ಸ್ಥಳೀಯ ಪ್ರಾಧಿಕಾರಗಳು ಹಾಗೂ ಸಾರ್ವಜನಿಕ ವಲಯದ ಇತರ ಆಡಳಿತ ಘಟಕಗಳ ಪರವಾಗಿಯೂ ಸಹ ಸರ್ಕಾರಗಳು ಸಾಲಪಡೆಯುತ್ತವೆ. UKಯಲ್ಲಿ, ಸಾಲಪಡೆಯುವಿಕೆಯ ಒಟ್ಟು ಅವಶ್ಯಕತೆಯನ್ನು ಸಾರ್ವಜನಿಕ ವಲಯದ ನಿವ್ವಳ ನಗದು ಅವಶ್ಯಕತೆ (ಪಬ್ಲಿಕ್‌ ಸೆಕ್ಟರ್‌ ನೆಟ್‌ ಕ್ಯಾಶ್‌ ರಿಕ್ವೈರ್‌ಮೆಂಟ್‌-PSNCR) ಎಂದು ಅನೇಕವೇಳೆ ಉಲ್ಲೇಖಿಸಲಾಗುತ್ತದೆ.

ಬಾಂಡುಗಳ ನೀಡಿಕೆಯನ್ನು ಕೈಗೊಳ್ಳುವ ಮೂಲಕ ಸರ್ಕಾರಗಳು ಸಾಲಪಡೆಯುತ್ತವೆ. UKಯಲ್ಲಿ, ಬ್ಯಾಂಕು ಖಾತೆಗಳು ಮತ್ತು ಅಧಿಕಮೌಲ್ಯದ ಬಾಂಡುಗಳನ್ನು ನೀಡುವ ಮೂಲಕ ಸರ್ಕಾರವು ವ್ಯಕ್ತಿಗಳಿಂದಲೂ ಸಾಲಪಡೆಯುತ್ತದೆ. ಸರ್ಕಾರದ ಸಾಲವು ಕಾಯಂ ಆಗಿರುವಂತೆ ತೋರುತ್ತದೆ. ಸದರಿ ಸಾಲವು ಪೂರ್ತಿಯಾಗಿ ತೀರಿಸಲ್ಪಟ್ಟ ಸ್ಥಿತಿಯಲ್ಲಿ ಇರುವುದಕ್ಕಿಂತ ಹೆಚ್ಚಾಗಿ ವಾಸ್ತವವಾಗಿ ಹೊರ-ತೋರಿಕೆಯಲ್ಲಿ ವಿಸ್ತರಿಸುತ್ತದೆ. ಋಣಭಾರದ ಮೌಲ್ಯ ವನ್ನು ತಗ್ಗಿಸಲು ಹಣದುಬ್ಬರ ದ ಮೇಲೆ ಪ್ರಭಾವಬೀರುವುದು ಸರ್ಕಾರಗಳಿಂದ ಅನುಸರಿಸಲ್ಪಡುವ ಒಂದು ಕಾರ್ಯತಂತ್ರವಾಗಿದೆ.

ಪೌರಸಂಸ್ಥೆಗಳು ಮತ್ತು ಸ್ಥಳೀಯ ಪ್ರಾಧಿಕಾರಗಳು ತಮ್ಮದೇ ಹೆಸರಿನಲ್ಲಿ ಸಾಲಪಡೆಯುವುದರ ಜೊತೆಗೆ, ರಾಷ್ಟ್ರೀಯ ಸರ್ಕಾರಗಳಿಂದ ಧನಸಹಾಯವನ್ನೂ ಸ್ವೀಕರಿಸಬಹುದು. UKಯಲ್ಲಿ, ಹ್ಯಾಂಪ್‌ಷೈರ್‌ ಜಿಲ್ಲಾ ಪರಿಷತ್ತಿನಂಥ ಒಂದು ಪ್ರಾಧಿಕಾರವು ಇದರ ವ್ಯಾಪ್ತಿಯಲ್ಲಿ ಬರುತ್ತದೆ.

ವಿಶಿಷ್ಟವೆಂಬಂತೆ, ಸಾರ್ವಜನಿಕ ಸಂಸ್ಥೆಗಳು ರಾಷ್ಟ್ರೀಕರಣಗೊಂಡ ಉದ್ಯಮಗಳನ್ನು ಒಳಗೊಳ್ಳುತ್ತವೆ. ಅಂಚೆಯ ಸೇವೆಗಳು, ರೈಲ್ವೆ ಕಂಪನಿಗಳು ಮತ್ತು ಸಾರ್ವಜನಿಕ ಪ್ರಯೋಜಕತೆಯ ಕಂಪನಿಗಳನ್ನು ಇವು ಒಳಗೊಳ್ಳಬಹುದು.

ಸ್ಥಳೀಯವಾಗಿ ಹಣವನ್ನು ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ಅನೇಕ ಸಾಲಗಾರರು ತೊಡಕುಗಳನ್ನು ಹೊಂದಿರುತ್ತಾರೆ. ವಿದೇಶಿ ವಿನಿಮಯ ಕೇಂದ್ರದ ಮಾರುಕಟ್ಟೆಗಳ ನೆರವಿನೊಂದಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಅವರು ಸಾಲಪಡೆಯಬೇಕಾಗಿ ಬರುತ್ತದೆ.


ವಿದೇಶಿ ಹಣ ಚಲಾವಣಾ ವ್ಯವಹಾರದ ಚಿತ್ರಣವು ಇಂದು ಈ ಕೆಳಗಿನ ಅಂಶಗಳನ್ನು ತೋರಿಸುತ್ತದೆ:

ಬ್ಯಾಂಕುಗಳು/ಸಂಸ್ಥೆಗಳು ಸಟ್ಟಾ ವ್ಯಾಪಾರಿಗಳು ಸರ್ಕಾರದ ಖರ್ಚುವೆಚ್ಚ (ಉದಾಹರಣೆಗೆ, ಹೊರದೇಶದಲ್ಲಿನ ಸೇನಾ ನೆಲೆಗಳು) ಆಮದುದಾರರು/ರಫ್ತುದಾರರು ಪ್ರವಾಸಿಗಳು =ಹಣಕಾಸಿನ ಮಾರುಕಟ್ಟೆಗಳ ವಿಶ್ಲೇಷಣೆ[ಬದಲಾಯಿಸಿ] ಹಣಕಾಸಿನ ಮಾರುಕಟ್ಟೆಗಳ ಕುರಿತಾದ ಮತ್ತು ಕಾಲಾನುಸಾರ ಬೆಲೆಗಳು ಹೇಗೆ ಬದಲಾಗುತ್ತವೆ ಎಂಬುದಕ್ಕೆ ಸಂಬಂಧಿಸಿದ ಅಧ್ಯಯನವನ್ನು ಕೈಗೊಳ್ಳಲು ಸಾಕಷ್ಟು ಪ್ರಯತ್ನವು ನಡೆದಿದೆ. ಡೋವ್‌ ಜೋನ್ಸ್‌‌ & ಕಂಪನಿ ಮತ್ತು ಮತ್ತು ದಿ ವಾಲ್‌ ಸ್ಟ್ರೀಟ್‌ ಜರ್ನಲ್‌‌‌‌‌ನ ಸಂಸ್ಥಾಪಕರಲ್ಲಿ ಒಬ್ಬನಾದ ಚಾರ್ಲ್ಸ್‌ ಡೋವ್‌ ಎಂಬಾತ, ಈ ವಿಷಯಕ್ಕೆ ಸಂಬಂಧಿಸಿದಂತಿರುವ ಪರಿಕಲ್ಪನೆಗಳ ಒಂದು ಸಂಚಯವನ್ನು ಖಚಿತವಾಗಿ ನಿರೂಪಿಸಿದ್ದು, ಇವನ್ನು ಈಗ ಡೋವ್‌ ಸಿದ್ಧಾಂತ ಎಂದು ಕರೆಯಲಾಗುತ್ತದೆ. ಭವಿಷ್ಯ ಬದಲಾವಣೆಗಳನ್ನು ಊಹಿಸಲು ಪ್ರಯತ್ನಿಸುವ, ತಾಂತ್ರಿಕ ವಿಶ್ಲೇಷಣೆ ಎಂದು ಕರೆಯಲ್ಪಡುವ ವಿಧಾನಕ್ಕೆ ಇದು ಆಧಾರವಾಗಿದೆ. "ತಾಂತ್ರಿಕ ವಿಶ್ಲೇಷಣೆ"ಯ ಸೂತ್ರಗಳ ಪೈಕಿ ಒಂದರ ಅನುಸಾರ, ಮಾರುಕಟ್ಟೆ ಪ್ರವೃತ್ತಿಗಳು ಭವಿಷ್ಯದ ಕುರಿತಾಗಿ, ಕಡೇಪಕ್ಷ ಅಲ್ಪಾವಧಿಯಲ್ಲಿ, ಒಂದು ಸೂಚನೆಯನ್ನು ನೀಡುತ್ತವೆ. ತಾಂತ್ರಿಕ ವಿಶ್ಲೇಷಕರು ನೀಡಿರುವ ಸಮರ್ಥನೆಗಳನ್ನು ಅನೇಕ ವಿದ್ವಾಂಸರು ಅಲ್ಲಗಳೆದಿದ್ದಾರೆ; ಈ ವಿದ್ವಾಂಸರು ಪ್ರತಿಪಾದಿಸುವ ಪ್ರಕಾರ, ಅಡ್ಡಾದಿಡ್ಡಿ ನಡೆಯ ಊಹಾಸಿದ್ಧಾಂತದ ಕಡೆಗೆ ಸಾಕ್ಷ್ಯವು ಬೆರಳುಮಾಡಿ ತೋರಿಸುತ್ತದೆ; ಮುಂದಿನ ಬದಲಾವಣೆಯು ಕೊನೆಯ ಬದಲಾವಣೆಯೊಂದಿಗೆ ಪರಸ್ಪರ ಸಂಬಂಧವನ್ನು ಹೊಂದಿರುವುದಿಲ್ಲ ಎಂಬುದಾಗಿ ಸದರಿ ಅಡ್ಡಾದಿಡ್ಡಿ ನಡೆಯ ಊಹಾಸಿದ್ಧಾಂತವು ಪ್ರತಿಪಾದಿಸುತ್ತದೆ.ಒಂದಷ್ಟು ಕಾಲಮಾನದ ಅವಧಿಯಲ್ಲಿ ಬೆಲೆಯಲ್ಲಿ ಆಗುವ ಬದಲಾವಣೆಗಳ ಪ್ರಮಾಣವನ್ನು ಚಂಚಲತೆ ಎಂದು ಕರೆಯಲಾಗುತ್ತದೆ.ಬೆನೋಯಿಟ್‌ ಮ್ಯಾಂಡೆಲ್‌ಬ್ರಾಟ್‌ ಎಂಬಾತ ಕಂಡುಕೊಂಡಿರುವ ಪ್ರಕಾರ, ಬೆಲೆಗಳಲ್ಲಿನ ಬದಲಾವಣೆಗಳು ಗೌಸ್‌‌ನ ವಿತರಣಾ ವಿಧಾನವೊಂದನ್ನು ಅನುಸರಿಸುವುದಿಲ್ಲ; ಆದರೆ ಅದಕ್ಕೆ ಬದಲಿಗೆ ಅವು ಲೆವಿ ಸ್ಥಿರ ವಿತರಣೆಗಳಿಂದ ಉತ್ತಮವಾಗಿ ರೂಪಿಸಲ್ಪಟ್ಟಿವೆ. ಬದಲಾವಣೆಯ ಪ್ರಮಾಣ, ಅಥವಾ ಚಂಚಲತೆಯು, 1/2ಕ್ಕಿಂತ ಸ್ವಲ್ಪವೇ ಹೆಚ್ಚಿರುವ ಒಂದು ಘಾತಕ್ಕಿರುವ ಕಾಲಮಾನದ ಉದ್ದದ ಮೇಲೆ ಅವಲಂಬಿತವಾಗಿದೆ. ಒಂದು ಅಂದಾಜಿಸಲಾದ ವಿಚಲನದೊಂದಿಗೆ ಗೌಸ್‌‌ನ ವಿತರಣಾ ವಿಧಾನವೊಂದನ್ನು ಬಳಸಿಕೊಂಡು ಓರ್ವರು ಲೆಕ್ಕಹಾಕಬಹುದಾದುದಕ್ಕಿಂತ, ಏರುತ್ತಿರುವ ಅಥವಾ ಇಳಿಯುತ್ತಿರುವ ದೊಡ್ಡ ಬದಲಾವಣೆಗಳು ಹೆಚ್ಚಾಗಿರುವ ಸಾಧ್ಯತೆಗಳಿರುತ್ತವೆ.ಅಂತರರಾಷ್ಟ್ರೀಯ ಮಾರುಕಟ್ಟೆಯ ಪರಿಣಾಮಗಳ ಸೂಕ್ತ ವಿಶ್ಲೇಷಣೆಯು, ಕಾಳಜಿಯ ಒಂದು ಹೊಸ ಕ್ಷೇತ್ರವಾಗಿದೆ. ಇಂದಿನ ಜಾಗತಿಕ ಹಣಕಾಸಿನ ಮಾರುಕಟ್ಟೆಗಳು ಸಂಬಂಧಿಸಲ್ಪಟ್ಟಿರುವ ರೀತಿಯಲ್ಲಿಯೇ, ಜಾಗತಿಕ ಹಣಕಾಸಿನ ಜಾಲದೊಂದಿಗೆ ಪ್ರಯೋಜನಗಳು ಮತ್ತು ಪರಿಣಾಮಗಳೆರಡೂ ಸಹ ಸಂಬಂಧವನ್ನು ಹೊಂದಿರುತ್ತವೆ ಎಂಬುದನ್ನು ಅರಿತುಕೊಳ್ಳುವುದು ಮುಖ್ಯವಾಗಿರುತ್ತದೆ. ಸಮಗ್ರೀಕರಣದ ಕಾರಣದಿಂದಾಗಿ ಹೊಸ ಅವಕಾಶಗಳು ಕಾಣಿಸಿಕೊಳ್ಳುತ್ತಿದ್ದಂತೆ, ನೀತಿಚ್ಯುತಿಯ ಸಾಧ್ಯತೆಗಳೂ ಸಹ ಕಾಣಿಸಿಕೊಳ್ಳುತ್ತವೆ. ಸಂಬಂಧವನ್ನು ಹೊಂದಿರುವ ಸಮಗ್ರ ಜಾಗತಿಕ ಜಾಲದ ಮೂಲಕ ಸಮಸ್ಯೆಯೊಂದು ಅತ್ಯಂತ ಶೀಘ್ರವಾಗಿ ಕಂಪನವನ್ನು ಉಂಟುಮಾಡಬಲ್ಲುದಾದ್ದರಿಂದ, ಮಾರುಕಟ್ಟೆಗಳನ್ನು ವಿಶ್ಲೇಷಿಸಲು ಪ್ರಯತ್ನಿಸುವಾಗ ಇದು ಅನನ್ಯ ವಿವಾದಾಂಶಗಳನ್ನು ಮುಂದೊಡ್ಡುತ್ತದೆ. ಉದಾಹರಣೆಗೆ, ದೇಶವೊಂದರಲ್ಲಿನ ಒಂದು ಬ್ಯಾಂಕಿನ ವೈಫಲ್ಯವು ಇತರ ದೇಶಗಳಿಗೆ ಶೀಘ್ರವಾಗಿ ಹಬ್ಬುತ್ತದೆ; ಇದರಿಂದಾಗಿ ಸೂಕ್ತ ವಿಶ್ಲೇಷಣೆಯು ಹೆಚ್ಚು ಕಷ್ಟಕರವಾಗಿ ಪರಿಣಮಿಸುತ್ತದೆ.ಹಣಕಾಸಿನ ಮಾರುಕಟ್ಟೆಗಳನ್ನು ವಿಭಿನ್ನ ಉಪ-ಬಗೆಗಳಾಗಿ ವಿಂಗಡಿಸಬಹುದು: ಬಂಡವಾಳ ಮಾರುಕಟ್ಟೆಗಳು ಒಂದು ಉಪ-ಬಗೆಯಾಗಿದ್ದು, ಈ ಕೆಳಗಿನ ವಿಶಿಷ್ಟತೆಗಳನ್ನು ಇವು ಒಳಗೊಳ್ಳುತ್ತವೆ: ಸ್ಟಾಕು ಮಾರುಕಟ್ಟೆಗಳು: ಷೇರುಗಳು ಅಥವಾ ಸಾಮಾನ್ಯ ಸ್ಟಾಕಿನ ನೀಡಿಕೆಯ ಮೂಲಕ ಇವು ಧನಸಹಾಯ ಮಾಡುತ್ತವೆ, ಮತ್ತು ಅದರ ತರುವಾಯದ ಮಾರಾಟದಲ್ಲಿ ನೆರವಾಗುತ್ತವೆ. ಬಾಂಡು ಮಾರುಕಟ್ಟೆಗಳು: ಬಾಂಡುಗಳ ನೀಡಿಕೆಯ ಮೂಲಕ ಇವು ಧನಸಹಾಯ ಮಾಡುತ್ತವೆ, ಮತ್ತು ಅದರ ತರುವಾಯದ ಮಾರಾಟದಲ್ಲಿ ನೆರವಾಗುತ್ತವೆ. ವ್ಯಾಪಾರಿ ಸರಕು ಮಾರುಕಟ್ಟೆಗಳು: ಇವು ವ್ಯಾಪಾರಿ ಸರಕುಗಳ ಮಾರಾಟಕಾರ್ಯವನ್ನು ಸರಾಗಗೊಳಿಸುತ್ತವೆ. ಹಣ ಮಾರುಕಟ್ಟೆಗಳು: ಇವು ಅಲ್ಪಾವಧಿಯ ಸಾಲದ ಮೂಲಕ ಧನಸಹಾಯ ಮತ್ತು ಹೂಡಿಕೆಯನ್ನು ಒದಗಿಸುತ್ತವೆ. ಉತ್ಪನ್ನಗಳ ಮಾರುಕಟ್ಟೆಗಳು: ಇವು ಹಣಕಾಸಿನ ಅಪಾಯದ ನಿರ್ವಹಣೆಗೆ ಸಂಬಂಧಿಸಿದ ಸಾಧನಗಳನ್ನು ಒದಗಿಸುತ್ತವೆ. ಮುಮ್ಮಾರಿಕೆಯ ಒಪ್ಪಂದಗಳ ಮಾರುಕಟ್ಟೆಗಳು: ಒಂದು ಭವಿಷ್ಯದ ದಿನಾಂಕದಲ್ಲಿ ಉತ್ಪನ್ನಗಳ ಮಾರಾಟಕ್ಕೆ ಸಂಬಂಧಿಸಿದ ಪ್ರಮಾಣಕವಾಗಿಸಿದ ಮುಂಗಡದ ಒಪ್ಪಂದಗಳನ್ನು ಇವು ಒದಗಿಸುತ್ತವೆ; ಇದನ್ನೂ ನೋಡಿ: ಮುಂಗಡ ಮಾರುಕಟ್ಟೆ. ವಿಮಾ ಮಾರುಕಟ್ಟೆಗಳು: ಹಲವಾರು ಅಪಾಯಗಳ ಮರುವಿತರಣೆಯನ್ನು ಇವು ಸರಾಗಗೊಳಿಸುತ್ತವೆ. ವಿದೇಶಿ ವಿನಿಮಯ ಕೇಂದ್ರದ ಮಾರುಕಟ್ಟೆಗಳು: ವಿದೇಶಿ ವಿನಿಮಯ ಕೇಂದ್ರದಿಂದ ನಡೆಯುವ ಮಾರಾಟವನ್ನು ಇವು ಸರಾಗಗೊಳಿಸುತ್ತವೆ.

ಬಂಡವಾಳ ಮಾರುಕಟ್ಟೆಗಳು, ಪ್ರಾಥಮಿಕ ಮಾರುಕಟ್ಟೆಗಳು ಮತ್ತು ದ್ವಿತೀಯಕ ಮಾರುಕಟ್ಟೆಗಳನ್ನು ಒಳಗೊಂಡಿರುತ್ತವೆ. ಹೊಸದಾಗಿ ರೂಪುಗೊಂಡ (ನೀಡಿಕೆಯಾದ) ಭದ್ರತೆಗಳು, ಪ್ರಾಥಮಿಕ ಮಾರುಕಟ್ಟೆಗಳಲ್ಲಿ ಖರೀದಿಸಲ್ಪಡುತ್ತವೆ ಅಥವಾ ಮಾರಾಟಗೊಳ್ಳುತ್ತವೆ. ಹೂಡಿಕೆದಾರರು ತಾವು ಹೊಂದಿರುವ ಭದ್ರತೆಗಳನ್ನು ಮಾರಾಟ ಮಾಡಲು ಅಥವಾ ಅಸ್ತಿತ್ವದಲ್ಲಿರುವ ಭದ್ರತೆಗಳನ್ನು ಖರೀದಿಸಲು ದ್ವಿತೀಯಕ ಮಾರುಕಟ್ಟೆಗಳು ಅನುವುಮಾಡಿಕೊಡುತ್ತವೆ

Start a discussion about ಸದಸ್ಯ:Jaison vijay rego/sandbox

Start a discussion