ಸದಸ್ಯರ ಚರ್ಚೆಪುಟ:Hitha.U2414421
ವಿಷಯ ಸೇರಿಸಿನಂದಿ ಬೆಟ್ಟ
ನಂದಿ ಹಿಲ್ಸ್ ಬೆಂಗಳೂರಿನಿಂದ ಸುಮಾರು 60 ಕಿಲೋಮೀಟರು ದೂರದಲ್ಲಿರುವ ಸುಂದರವಾದ ಬೆಟ್ಟ ಇದು ಚಿಕ್ಕಬಳ್ಳಾಪುರದಲ್ಲಿದೆ. ಈ ಬೆಟ್ಟವು ತಂಪಾದ ಹವಾಮಾನ ಮತ್ತು ಹಸಿರಿನಿಂದ ತುಂಬಿದೆ. ಜನರು ಇಲ್ಲಿಗೆ ರಜಾ ದಿನಗಳಲ್ಲಿ ಬರುವುದು ಸಾಮಾನ್ಯ .ನಂದಿ ಬೆಟ್ಟಕ್ಕೆ ಹೋದರೆ ನೋಡಲು ಬಹಳಷ್ಟು ಜಾಗಗಳಿವೆ.
ಇಲ್ಲಿ ಮುಖ್ಯವಾಗಿ ಸೂರ್ಯೋದಯ ನೋಡಬಹುದು. ಮುಂಜಾನೆ ಬೇಗ ಹೋದರೆ, ಸೂರ್ಯ ಮೂಡುವ ದೃಶ್ಯ ತುಂಬಾ ಚೆನ್ನಾಗಿರುತ್ತದೆ. ಇಲ್ಲಿ ಒಂದು ಎತ್ತರದ ಜಾಗ ಇದೆ, ಅದಕ್ಕೆ ಟಿಪ್ಪು ಡ್ರಾಪ್ ಎಂದು ಹೆಸರು. ಅಲ್ಲಿಂದ ನೋಡಿದರೆ ಮನಸ್ಸಿಗೆ ಖುಷಿ ಆಗುತ್ತದೆ.ಬೆಟ್ಟದ ಮೇಲೆ ಕೆಲವು ಹಳೆಯ ದೇವಸ್ಥಾನಗಳಿವೆ. ಇವುಗಳಿಗೆ ಯೋಗ ನಂದೀಶ್ವರ ದೇವಸ್ಥಾನ ಮತ್ತು ಭೋಗ ನಂದೀಶ್ವರ ದೇವಸ್ಥಾನ ಎಂದು ಕರೆಯುತ್ತಾರೆ. ಇಲ್ಲಿ ಟಿಪ್ಪು ಸುಲ್ತಾನನ ಒಂದು ಚಿಕ್ಕ ಅರಮನೆಯೂ ಇದೆ. ಈ ಎಲ್ಲಾ ಸ್ಥಳಗಳು ಇತಿಹಾಸವನ್ನು ಹೇಳುತ್ತವೆ. ಇಲ್ಲಿ ಅತಿಥಿ ಗೃಹಗಳು, ಅಮೃತ ಸರೋವರ ಎಂಬ ಸುಂದರವಾದ ಕೆರೆ, ಮತ್ತು ಪಕ್ಷಿ ವೀಕ್ಷಣೆಯಂತಹ ಚಟುವಟಿಕೆಯನ್ನು ನೋಡಬಹುದು. ನಂದಿ ಬೆಟ್ಟದಲ್ಲಿ ಕೇವಲ ನೋಡುವುದು ಮಾತ್ರವಲ್ಲ ಇಲ್ಲಿ ಟ್ರೆಕ್ಕಿಂಗ್ ಮತ್ತು ಸೈಕ್ಲಿಂಗ್ ಕೂಡ ಮಾಡಬಹುದು.
ಬೆಟ್ಟವು ಪ್ರಕೃತಿ ಮತ್ತು ಇತಿಹಾಸದ ಒಂದು ಉತ್ತಮ ಸ್ಥಳವಾಗಿದೆ. ಬೆಂಗಳೂರಿನ ದೂರವಿರುವ ಈ ಬೆಟ್ಟವು ಶಾಂತಿ ಮತ್ತು ನೆಮ್ಮದಿ ನೀಡುತ್ತದೆ. ಇಲ್ಲಿಗೆ ಹೋದರೆ ಮನಸ್ಸಿಗೆ ತುಂಬಾ ಸಂತೋಷ ಸಿಗುತ್ತದೆ. ಇದು ಕುಟುಂಬ ಅಥವಾ ಸ್ನೇಹಿತರೊಂದಿಗೆ ಹೋಗಲು ಉತ್ತಮ ತಾಣ. ಕೊನೇದಾಗಿ ನಂದಿ ಬೆಟ್ಟವು ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ.
Start a discussion with Hitha.U2414421
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with Hitha.U2414421. What you say here will be public for others to see.