ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Dr Arjun Y Pangannavar

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Latest comment: ೧ ವರ್ಷದ ಹಿಂದೆ by 2405:201:D042:68B0:BD09:B42E:CA25:C6D9 in topic ಆದಿ ಸಂತ ಕವಿ ವಾಲ್ಮೀಕಿ
ನಮಸ್ಕಾರ Dr Arjun Y Pangannavar


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೬:೨೮, ೨೩ ಅಕ್ಟೋಬರ್ ೨೦೨೦ (UTC)

ಆದಿ ಸಂತ ಕವಿ ವಾಲ್ಮೀಕಿ

[ಬದಲಾಯಿಸಿ]

ಭಗವಾನ ವಾಲ್ಮೀಕಿಜೀ ಚರಿತ್ರೆ

      ಆದಿಕವಿ ವಾಲ್ಮೀಕಿಯ ಜನ್ಮ ಕುಲ ಮತ್ತು ಪರಿವರ್ತನೆಗೆ ಸಂಬಂಧಿತ,  ಇಲ್ಲಿವರೆಗೆ ಪ್ರಚಲಿತವಿದ್ದ, ಕಥೆಗಳು ಯಾವುದೇ ಗಟ್ಟಿ-ಆಧಾರ ಮತ್ತು ಪುರಾವೆಗಳನ್ನು ಹೊಂದಿರುವದಿಲ್ಲ, ಅವುಗಳೆಲ್ಲವೂ, ಕಾಲಾಂತರದಲ್ಲ್ಲಿ, ವಿಶೇಷವಾಗಿ ಕ್ರಿ.ಶ ೧೦ ರಿಂದ  ೧೬ನೇ ಶತಮಾನದ ಅವಧಿಯಲ್ಲಿ  ಪುರಾಣಗಳ ಮೂಲಕ  ಸೇರ್ಪಡೆಯಾದ  ಕಥೆಗಳು. ಆದಿಕವಿ ವಾಲ್ಮೀಕಿಯ ಪಾಂಡಿತ್ಯ ತಿಳಿದು ಅದು ಒಬ್ಬ ವ್ಯಾಧಕುಲಜನಿಂದ ಸಾಧ್ಯವಿಲ್ಲ ಎಂಬ ಭ್ರಾಂತಿಯಲ್ಲಿ ಅವನೊಬ್ಬ ಬ್ರಾಹ್ಮಣನೆಂದು ವಿವರಿಸುವ  ಕಥೆಗಳನ್ನು ಹುಟ್ಟುಹಾಕಿದರು; ಕುಡಕುಟಾರಿ ಕನಜಿರಿಗೆಯು ತನ್ನ ಗೂಡಿನಲ್ಲಿಟ್ಟ ಕೀಟವನ್ನು ಚುಚ್ಚಿ ಚುಚ್ಚಿ ತನ್ನ ಪ್ರಭೇದರೂಪಕ್ಕೆ ಪರಿವರ್ತಿಸಿಕೊಂಡತೆ ಆದಿಕವಿ ವಾಲ್ಮೀಕಿಯನ್ನು ಬ್ರಾಹ್ಮಣನೆಂದು ಪರಿವರ್ತಿಸಿಕೊಳ್ಳುಲು ಬ್ರಾಹ್ಮಣ ಪಂಡಿತರ ಪ್ರಯತ್ನ ಮಾಡುತ್ತಿರುವರು. ಅದರಂತೆ ನಾರದರ ಉಪದೇಶ, ಹುತ್ತಿನಿಂದ ಹೊರ ಬರುವ, ದರೋಡೆಕೋರನಿಂದ ಮುನಿಯಾಗಿ ವಾಲ್ಮೀಕಿಜೀ ಪರಿವರ್ತನೆಗೊಳ್ಳುವ  ಉಪಕತೆಗಳೆಲ್ಲ ಆಧಾರರಹಿತ, ಅಸಂಬದ್ಧ, ಹಾಸ್ಯಾಸ್ಪದ ಕಥೆಗಳು:  ಮೂಲತಃ ಆದಿಕವಿ ವಾಲ್ಮೀಕಿಜೀ ಒಬ್ಬ ಮಾನವ  ಮತ್ತು ಇತಿಹಾಸ-ವ್ಯಕ್ತಿ  ಆದರೆ ದೇವರ್ಷಿ ನಾರದ ಒಬ್ಬ ಪುರಾಣ-ವ್ಯಕ್ತಿ  ಹೀಗಾಗಿ  ಇವರ ಭೇಟಿ  ಒಂದು  ಅಸಂಬದ್ಧ  ಘಟನೆ  ಮತ್ತು ವಿವರಣೆ.

     ವಾಸ್ತವಿಕತೆಯಲ್ಲಿ, ಯವನರು, ಬರ್ಬರರು, ಮುಂತಾದ ಪರಕೀಯರು ಮಧ್ಯ-ಏಷಿಯಾ, ಯುರೋಪಗಳಿಂದ ಭರತ-ಖಂಡಕ್ಕೆ ಬರುವ ಮೊದಲು ‘ಪ್ರಚೇತಸÀ’ ಬುಡಕಟ್ಟು ಸಾಮ್ರಾಜ್ಯಗಳನ್ನು ಕಟ್ಟಿಕೊಂಡು ತಲೆತಲಾಂತರ ಆಳುತಿದ್ದರು ಹಾಗೂ ಅವರ ಆಳ್ವಿಕೆ ಕ್ರಿ.ಶ.ಪೂರ್ವ ೩೯೨೬ ರಿಂದ ೩೮೮೬ ರವರೆಗೆ ಇತ್ತು ಎಂದು ಇತ್ತೀಚಿನ ಸಂಶೋಧನೆಗಳು ಹೇಳುತ್ತವೆ. ಅದರ ನಂತರ ಸಪ್ತಋಷಿ, ದಕ್ಷ, ರುಧ್ರ, ಅದಿತ್ಯ, ಹಿರನ್ಯಕಶಪು, ಮೊದಲನೇ ಇಂದ್ರ, ಮನು ಮತ್ತು ಪ್ರಹ್ಲಾದರ ಆಡಳಿತ ಪ್ರಾರಂಭವಾದAತೆ ಪ್ರಚೇತಸÀರ ಪ್ರಭಾವ ಕ್ಷೀಣಿಸಿತು. ಕ್ರಿ.ಶ.ಪೂರ್ವ ೩೮೦೧ ರಿಂದ ೩೭೯೧ರ ಅವಧಿಯಲ್ಲಿ ಭೂಮಂಡಲದ ಮೇಲೆ ಮಹಾಜಲಪ್ರಳಯ ಸಂಭವಿಸಿತು,  ಅದೇ ವೇಳೆಯಲ್ಲಿ ಇಕ್ಷ್ವಾಕು ವಂಶದ ಸಾಮ್ರಾಜ್ಯ ಕ್ರಿ.ಶ.ಪೂರ್ವ ೩೭೮೬ ರಂದು ಉದಯಿಸಿತು, ಅವರೊಂದಿಗೆ ಕ್ರಮೇಣ ಪುರು, ಸ್ರವಸ್ತ, ಮಧು ಮುಂತಾದ ವಂಶಗಳ ಸಾಮ್ರಾಜ್ಯಗಳು ಹುಟ್ಟಿಕೊಂಡವು. ರಾಜಾ ದಶರಥರ ತಂದೆ ರಾಜಾ ಅಜನ ಕಾಲ ಕ್ರಿ.ಶ. ೩೩೨೧ರಲ್ಲಿ ಪ್ರಾರಂಭಿಸಿತು, ಅದರಂತೆ ರಾಜಾ ರಾಮನ ಕಾಲ ಕ್ರಿ.ಶ.À ಪೂರ್ವ ೩೨೯೬ ರಿಂದ (ರಾಮ ಹುಟ್ಟಿದ ವರ್ಷದಿಂದ) ಪ್ರಾರಂಬಿಸಿತು. ಇದೇ ಕಾಲದಲ್ಲ್ಲಿ ಪ್ರಚೇತಸ ವಂಶದ ಮಹರ್ಷಿ ವಾಲ್ಮೀಕಿಜೀ ಜೀವಿಸಿದ್ದು, ರಾಜಾ ರಾಮ ಮತ್ತು ಆದಿಕವಿ ವಾಲ್ಮೀಕಿ ಒಂದೇ ಕಾಲಗಟ್ಟದವರು.

    ಪ್ರಚೇತಸ ಬುಡಕಟ್ಟು ವಂಶದ ಸಾಮ್ರಾಜ್ಯ ಈಗಿನ ಭಾರತದಲ್ಲ್ಲಿ ಯಮುನಾನದಿ ದಕ್ಷಿಣದಿಂದ ಪ್ರಾರಂಭವಾಗಿ ನರ್ಮದಾ ವೇತ್ರವತಿ ಸುಕ್ತಿಮತಿ ನದಿಗಳ ಕೊಳ್ಳ ಗಿರಿ-ಪರ್ವತ ಅರಣ್ಯ ಬಯಲು ಸೀಮೆಗಳನ್ನು ಒಳಗೊಂಡ ವಿಸ್ತಾರವಾದ ಪ್ರದೇಶವಾಗಿತ್ತು (ವಿದರ್ಭ ಪ್ರದೇಶ). ಇದೇ ಪ್ರದೇಶದಲ್ಲ್ಲಿ ಪ್ರಚೇತಸ ವಂಶದ ವ್ಯಾಧ ರಾಜ ಹವಿರ್ಧನ ನಿಷಾಧ-ರಾಜ್ಯವಾಳುತಿದ್ದನು, ಅವನ ಪತ್ನಿ ರಾಣಿ ಸುವರ್ಣ ಮತ್ತು ಅವರ ಏಕೈಕ ಮಗ ಸುಮಾಲಿ. ಸುಮಾಲಿಯನ್ನು ಹತ್ತನೆ ಪ್ರಚೇತಸನೆಂದು ಕರೆಯುತಿದ್ದರು. ಹವಿರ್ಧನ ಮತ್ತು ಸುವರ್ಣ ಹಾಗೂ ವ್ಯಾಧರಾಜ್ಯದ ಪ್ರಜೆಗಳು ಪ್ರಚೇತಸ ಮತ್ತು ಅನುತಾದೇವಿ ಒಪ್ಪಿಗೆಯಂತೆ ಸಂಭ್ರಮದಿಂದ ಅವರ ಮದುವೆ ಮಾಡಿದರು. ಪ್ರಚೇತಸÀ ಅನುತಾದೇವಿ ದಂಪತಿಗಳಿಗೆ, ಕಾಲಾಂತರದಲ್ಲ್ಲಿ, ಒಂಬ್ಬತ್ತು ಗಂಡು ಮತ್ತು ಎರಡು ಹೆಣ್ಣು ಮಕ್ಕಳು ಹುಟ್ಟಿದವು. ಶಿವನ ಆರಾಧಕಳಾದ ಅನುತಾದೇವಿ ಕ್ರಮೇಣ ಮಕ್ಕಳಲ್ಲಿ ನ್ಯಾಯ ನೀತಿ ಧರ್ಮ ಸಂಸ್ಕಾರಗಳನ್ನು ಬೆಳೆಸಿದಳು, ಪ್ರಚೇತಸನೂ ಅದರ ಪ್ರಭಾವಕ್ಕೊಳಗಾದನು. ಈ ಮಧ್ಯೆ ತಂದೆ ಹವಿರ್ಧನ  ಮತ್ತು ತಾಯಿ ಸುವರ್ಣ ವೃದಾಪ್ಯದಿಂದ ಮರಣ ಅಪ್ಪಿದರು, ಅವರ ವಿಯೋಗ ಪ್ರಚೇತಸನನ್ನು ಬಹುವಾಗಿ ಕಾಡಿತು, ಅವನು ವೈರಾಗ್ಯದಿಂದ ರಾಜ್ಯವನ್ನು ತೊರೆದು  ಕುಟುಂಬ ಸಮೇತ  ಕ್ರೌಂಚಾರಣ್ಯದಲ್ಲಿ ನದಿ ಸರೋವರ ಹತ್ತಿರ ಆಶ್ರಮ ಕಟ್ಟಿಕೊಂಡು ಮುನಿ ದಾಂಪತ್ಯ ಬದುಕು ಪ್ರಾರಂಭಿಸಿದನು, ಮುನಿ ಪ್ರಚೇತಸÀವೆಂಬ ಖ್ಯಾತಿಯನು ಗಳಿಸಿದನು.

   ಪ್ರಚೇತಸ ಮುನಿ ದಾಂಪತ್ಯ ಬದುಕಿನಲ್ಲಿ ಒಂದು ಹರುಷದ ಕಿರಣ ಬೆಳಗಿತು, ಅನುತಾದೇವಿಗೆ ಹತ್ತನೆ ಮಗುವಿನ ಭಾಗ್ಯ ಕಾಣಿಸಿತು, ಅವಳಿಗೆ ಅಪೂರ್ವ ಆನಂದದ ಅನುಭವವಾಯಿತು, ಸತ್ಪುರುಷನ ಆಗಮನದ  ಸಂಕೇತ ಅವಳಿಗೆ ಗೋಚರಿಸಿತು. ಶರತ್ ಋತುವಿನ  ಅಶ್ವೀನಿ  ಮಾಸದ  ಶೀತಲಕರದ  ಶೀಗೆ ಹುಣ್ಣಿಮೆ ದಿನ ಪಶು ಪಕ್ಷಿಗಳು ಅನಂದದಲ್ಲಿ ಆಶ್ರಮ ಸುತ್ತ ಮುತ್ತ ಇಂಚರ ಧ್ವನಿಯಲ್ಲಿ ಹಾಡುತ ಆಡುತ್ತ ನಲಿಯುತಿದ್ದವು, ಶುಭ್ರ ಆಕಾಶ  ಭೂಮಾತೆ ಅರಣ್ಯ  ಗಿಡ ಬಳ್ಳಿಗಳು ಸಂತೋಷದ ಕಂಪನ್ನು ತೇಲಿ ಬಿಟ್ಟವು, ಸೂರ್ಯ ಲಗುಬಗೆಯಿಂದ ಸಂಜೆಗೆ ಅಹ್ವಾನ ನೀಡಿತು, ಹುಣ್ಣಿಮೆ ಚಂದ್ರ ಅದೆನೋ ಹೊಸ ಶೀತಲ ಕರಗಳೊಂದಿಗೆ ಉದಯಿಸಿದ ಮತ್ತು ಯುಗ ಕವಿಯನ್ನು ಬರಮಾಡಿಕೊಳ್ಳಲು ಎಲ್ಲೆಡೆ ಕ್ಷೀರಸಾಗರದ ವಾತಾವರಣ ಚೆಲ್ಲಿದ. ಶೀಗೆಹುಣ್ಣಿಮೆ ದಿನ ಚಂದಿರ ಉದಯಿಸಿದ ನಾಲ್ಕು ಗಳಿಗೆಯಲ್ಲಿ ರತ್ನದಂತಹ ಗಂಡು ಮಗುವಿಗೆ ಅನುತಾದೇವಿ ಜನ್ಮಕೊಟ್ಟಳು, ಕಂದನ ರತ್ನತೇಜದ ಮುಖ ಮೈಕಟ್ಟು ನೋಡಿ ವೀಣೆನಾದದಂತಹ ಅಳುವ ಧ್ವನಿ ಕೇಳಿ ಪ್ರಚೇತಸÀ ಮುನಿ ಮತ್ತು ಅನುತಾದೇವಿಗೆ ಸಂತೋಷವಾಯಿತು. ಮಗು ನಕ್ಕರೆ ಅತ್ತರೆ ವೀಣೆಯಿಂದ ಸ್ವರಗಳು ಬಂದಂತೆ ಭಾಸವಾಗುವದರಿಂದ ಅನುತಾದೇವಿ ತನ್ನ ಕಂದನಿಗೆ ವ್ಯಾಧ ಬುಡಕಟ್ಟು ಸಂಸ್ಕೃತಿಯAತೆ ಹದಿಮೂರನೇ ದಿನ ‘ವಲ್ಲಕಿ’ ನೆಂದು ನಾಮಕರಣ ಮಾಡಿದರು. ವಲ್ಲಕಿ ಅಂದರೆ ವೀಣೆ ಅಥವಾ ದ್ವಿತಾರಾ. ಕಂದನಲ್ಲಿಯ ರತ್ನದಂತಹ ತೇಜನ್ನು ಕಂಡು ತಾಯಿ ಅನುತಾದೇವಿ ‘ವಲ್ಲಕಿ’ನನ್ನು ‘ರತನ’ ಎಂತಲೂ ಅಕ್ಕರೆಯಿಂದ ಕರೆಯುತಿದ್ದಳು, ರತ್ನಕರದಂತೆ ಜ್ಞಾನದ ಬೆಳಕು ಚಲ್ಲಲ್ಲೆಂದು ಅನುತಾದೇವಿಯು  ಮಗ ‘ರತ್ನಕರ’ನಿಗೆ ಹಾರೈಸುತಿದ್ದಳು.

    ಕೃಣು,  ಋಷ,  ಶಂಖು,  ನಳ,  ಅಗ್ನಿ, ಸುಸೇನ,  ಶರಾರಿ, ಚೇತಸ, ಸುಚೇತಸ ಅಣ್ಣಂದಿರರು ಮತ್ತು ಚರಣಿ, ರಿಷ್ಯ ಅಕ್ಕಂದಿರರ ಜೊತೆ  ಆಡುತ ನಲಿಯುತ ‘ವಲ್ಲಕಿ’ ಕಿಶೋರಾವಸ್ಥೆ ತಲುಪಿದನು. ‘ವಲ್ಲಕಿ’ಯನ್ನು ಸಹೋದರ ಸಹೋದರಿಯರು ಮುದ್ದಿನಿಂದ ‘ವಾಲ್ಯ’ ನೆಂದು ಕರೆಯುತಿದ್ದರು. ಪುತ್ರಿ ಪುತ್ರರನ್ನು ವಾತ್ಸಲ್ಯದೀ  ಬೆಳಸಿದಳು ಅನುತಾದೇವಿ. ಬಾಲ ‘ವಲ್ಲಕಿ’ ಜಿಜ್ಞಾಸೆಗೆ ಒಳಪಟ್ಟು ಕೇಳುವ ಪ್ರತಿ ಪ್ರಶ್ನೆಗಳಿಗೆ ವಿರೋಧಿಸದೇ ಉತ್ತರ ನೀಡುತಿದ್ದಳು. ಮುನಿ ಪ್ರಚೇತಸರು ‘ವಲ್ಲಕಿ’ನ ಆಸಕ್ತಿಯನ್ನು ಸೂಕ್ಷ್ಮವಾಗಿ ಗಮನಿಸಿ ಅವನಿಗೆ ಎಲ್ಲ ವಿದ್ಯೆಗಳನ್ನು ಕಲಿಸಲು ಪ್ರಾರಂಭಿಸಿದನು. ಅನುತಾದೇವಿಯು ಶಿವನ ಆರಾಧಕಳಾಗಿದ್ದರಿಂದ ಶಬರರ (ವ್ಯಾಧರ) ಪ್ರಜಾಪತಿ (ಮೂಲ ಪುರುಷ) ಶಿವನ ಬಗ್ಗೆ ಮಗ ‘ವಲ್ಲಕಿ’ಗೆ ಬೋಧನೆ ಮಾಡುತಿದ್ದಳು.

      ಅದೇ ವೇಳೆ ಕೋಸಲ-ರಾಜ್ಯದ ಅನಿಷ್ಠ ಸಾಮಾಜಿಕ ವ್ಯವಸ್ಥೆ, ಸ್ತ್ರೀಶೋಷಣೆ ಮತ್ತು ರಾಜಕೀಯ ದಾಳಗಳ ಬಗ್ಗೆ ಹಾಗೂಆ ನಾಗರಿಕ ಸಮಾಜದಿಂದ ಸ್ತ್ರೀಯರಿಗೆ ಆಗುವ ಅವಮಾನ ಅನ್ಯಾಯದ ಬಗ್ಗೆ ಮಗ ವಾಲ್ಯನಿಗೆ ಮನವರಿಕೆ ಮಾಡುತಿದ್ದಳು, ಅದು ಯುವ ವಾಲ್ಮೀಕಿ ಮನದಲ್ಲ್ಲಿ ಸ್ತ್ರೀಸಂವೇದನೆ ಬೀಜವನ್ನು ಮೊಳೆಸಿತು. ತಂದೆ ಮುನಿ ಪ್ರಚೇತಸ ಮತ್ತು ತಾಯಿ ಅನುತಾದೇವಿ ಕಿಶೋರ ವಾಲ್ಮೀಕಿಗೆ ಜ್ಞಾನದ ದೀವಟಿಗೆಯಾದರು, ಗುರುವಾದರು; ಕಿಶೋರ ವಾಲ್ಯನ ಇಂಚರ ಧ್ವನಿ ಕವಿತೆ-ವರ ಮತ್ತು ಬ್ರಹ್ಮಜ್ಞಾನ ಅವನನ್ನು ‘ವಾಲ್ಯ ಋಕ್’ನಾಗಿ ಅವತರಿಸಲು ಸಹಾಯಕವಾದವು ಹಾಗೂಅದರಲ್ಲಿ ತಾಯಿ ಅನುತಾದೇವಿಯ ಪಾತ್ರ ಬಹುಮುಖ್ಯವಾಗಿತ್ತು. ವಾಲ್ಯನು ಬಾಲ್ಯದಲ್ಲ್ಲಿ ರಸ ಮತ್ತು ನಾದಗಳ ಋಷಿ ಆಗಿದ್ದರಿಂದ ಗುರು ವಸಿಷ್ಠರು ಅವನಿಗೆ ವಾಲ್ಮೀಕಿ ಎಂದು ಉಪಾಧಿಯನ್ನು ನೀಡಿದರು. ‘ವಾಲ್ಯ>ವಲ್ಲಕಿ ಋಕ್’ ಪದಗಳ ಸಮಾಸ ಪದವಾಗಿ ‘ವಾಲ್ಮೀಕಿ’ (ವಲ್ಲಕಿಧಾರ ಋಕ್>ಋಷಿ) ಎಂದು ಉಚ್ಚಾರ ಪದ ಹೆಚ್ಚು ಪ್ರಚಾರ ಪಡೆಯಿತು.

     ಪ್ರಚೇತಸ ಮತ್ತು ಅನುತಾದೇವಿಗೆ ಮುಪ್ಪು ಆವರಿಸಿತು, ಎಲ್ಲ ಮಕ್ಕಳು ತಂತಮ್ಮ ಬದುಕಿನ ನೆಲೆ ಕಂಡುಕೊಂಡರು. ತಂದೆ ತಾಯಿ ಮಾತ್ರ ಮಗ ವಾಲ್ಯನೊಂದಿಗೆ ಆಶ್ರಮದಲ್ಲ್ಲಿ ಕಾಲು ದೂಕುತ್ತಿದ್ದರು. ಒಂದು ದಿನ ಗಂಗಾನದಿ ಪ್ರದೇಶದ ‘ನಿಷ್ಯಾಧ ಸಾಮ್ರಾಜ್ಯದ’ ರಾಜನು ಬೇಟೆಯಾಡುತ್ತ ಪ್ರಚೇತಸ ಮುನಿ ಆಶ್ರಮಕ್ಕೆ ಬರುವನು, ಅವನು ಪ್ರಚೇತಸ ಮುನಿಯನ್ನು ಕಂಡು ಹರುಷಗೊಂಡನು ಮತ್ತು ವ್ಯಾಧರಾಜ ಹವಿರ್ಧನನ್ನು ನೆನೆಸಿಕೊಂಡನು. ಅವನ ಆತಿಥ್ಯ ಸ್ವೀಕರಿಸುವಾಗ ರತ್ನ ಹೊಳಪಿನ ಅಗ್ನಿ ತೇಜಿನ ಯುವಕ ವಾಲ್ಯನನ್ನು ಕಂಡನು.  ಮಹಾ ಮುನಿ ಪ್ರಚೇತಸನನ್ನು ವ್ಯಾಧರಾಜನು ತನ್ನ ರಾಜ್ಯದ ಸೀಮೆ ರಕ್ಷಣೆ ಜವಾಬ್ದಾರಿಯನು ವಾಲ್ಯನಿಗೆ ವಹಿಸಿಕೊಳ್ಳಲು ವಿನಂತಿಸಿ ಕೊಂಡಾಗ ವಾಲ್ಯನು ತಂದೆ ತಾಯಿ ಅಪ್ಪಣೆಮೇರೆಗೆ  ವ್ಯಾಧರಾಜ್ಯದಲ್ಲ್ಲಿ ಕಳ್ಳುಕಾಕರು ನುಸುಳುಕೋರರು ಆಗಾಂತಕರು ಶತ್ರುಗಳು ನುಸುಳುವದನ್ನು ಹೆಗಲಿಗೆ ಕೊಡಲಿ ಕೈಯಲ್ಲಿ ಬಿಲ್ಲುಬಾಣ ಹಿಡಿದು ನಿಷಾಧರಾಜ್ಯದ ಗಡಿ ರಕ್ಷಣೆಗೆ ನಿಂತನು, ಬರುವ  ಕರದಿಂದ ಬದುಕು ಸಾಗಿಸಿದರು. ಮುನಿ ಪ್ರಚೇತಸನು ತನ್ನ ಪೂರ್ವಾಶ್ರಮದ ದೂರದ ಸಂಬಂಧಿ ಹಾಗೂಸಾಮಂತ ರಾಜನ ಮಗಳು ರತ್ನಮಾಲಳನ್ನು ವಾಲ್ಯನಿಗೆ ಮದುವೆ ಮಾಡಲು ಹಿರಿಯರೊಂದಿಗೆ ಚರ್ಚಿಸಿದನು ಹಾಗೂ ಎಲ್ಲರೂ ಬುಡಕಟ್ಟು ಸಂಪ್ರದಾಯದತೆ ಹೋಳಿ ಹುಣ್ಣಿಮೆಯ ಮಾರನೆದಿನ ಮದುವೆ ನೇರವೆರಿಸಿದರು. ವಾಲ್ಯನು ದಾಂಪತ್ಯವನು ಸಂತೋಷದಿಂದ ಕಳೆದನು, ಅವನ ಕರ ವಸೂಲಿ ಗಡಿ ರಕ್ಷಣೆ ಕಾಯಕ ನಿರಾಂತಕವಾಗಿ ಸಾಗಿತ್ತು. ಕಳ್ಳಕಾಕರಿಗೆ ಆಕ್ರಮಣಕಾರರಿಗೆ ಗುಪ್ತಚರರಿಗೆ ಮತ್ತು ನಸುಳುಕೋರರಿಗೆ ವಾಲ್ಯನು ಸಿಂಹಸ್ವಪ್ನವಾಗಿದ್ದನು. ವಾಲ್ಯನನ್ನು ಅಲ್ಲಿಂದ ಬಿಡಿಸಲು ಅವನ ಮೇಲೆ ದರೋಡೆ ಲೂಟಿ ಹಿಂಸಕ, ಇತ್ಯಾದಿ ಆರೋಪಗಳನ್ನು ಹೇರಿ ರಾಜರಿಗೆ ದೂರುಗಳನ್ನು ನೀಡಲಾಗಿತ್ತು ಆದರೆ ವಾಲ್ಯನ ಸತ್ಯ ಸದ್ಗುಣ  ಪರಾಕ್ರಮ ಬಲ್ಲ ರಾಜರು ಇಂತಹ ರೋಪಗಳಿಗೆ ಕಿವಿಗೊಡಲಿಲ್ಲ. ಇದೇ ಸಮಯದಲ್ಲ್ಲಿ  ವಾಲ್ಯನಿಗೆ ಎರಡು ಗಂಡು ಮತ್ತು ಒಂದು ಹೆಣ್ಣು ಸಂತತಿಗಳಾದವು. ಕಾಲದ ಪ್ರಭಾವದಿಂದ ತಂದೆ ತಾಯಿ ಅತೀ ಮುಪ್ಪಿನವರಾದರು, ತಂದೆ ಕುರುಡನಾದ, ತಾಯಿ ಅನಾರೋಗ್ಯದಿಂದ ಬಳಲುತಿದ್ದಳು.

     ಎಂದಿನಂತೆ ವಾಲ್ಯ ಗಡಿಕಾಯಲು ಅರಣ್ಯ-ಮಾರ್ಗಕ್ಕೆ ಹೋದಾಗ ದೂರದಿಂದ ಋಷಿವೇಶದಲ್ಲಿ ಅರಣ್ಯಮಾರ್ಗವಾಗಿ ಬರುವ ಮೂರು ಜನರನ್ನು ಕಂಡನು, ವಾಲ್ಯನು ಅವರನ್ನು ಎಚ್ಚರಿಸಿ ವಿಚಾರಿಸಿದಾಗ ಅವರು ಕೋಸಲ ರಾಜ್ಯದ ಅಯೋಧ್ಯಾನಗರಿ ರಾಜ ದಶರಥರ ಕುಲಗುರು ವಸಿಷ್ಠ ಮತ್ತು ಅವರ ಇವರಿಬ್ಬರು ಶಿಷ್ಯರು ಆಗಿದ್ದರು ಹಾಗೂ ಅವರು ದಂಡಕಾರಣ್ಯ ಜನಪದಗಳತ್ತ ರಾಜರ ಮಂತ್ರಣದ ಮೇರಿಗೆ ಗಡಿದಾಟಿ ಹೊರಟಿರುವ ವಿಷಯವನ್ನು ತಿಳಿದುಕೊಂಡನು. ಅವರನ್ನು ಪರೀಕ್ಷಿಸಲು ವಾಲ್ಯನು ಹಲವಾರು ಆಧ್ಯಾತ್ಮಿಕ ಪ್ರಶ್ನೆಗಳನ್ನು ಕೇಳುವನು, ವಸಿಷ್ಠ ಮುನಿ ಮತ್ತು ವಾಲ್ಯರ ನಡುವಿನ ಸಂವಾದವು ಬ್ರಹ್ಮಜ್ಞಾನ ಮೇಲೆ ಕೇಂದ್ರಿಕೃತವಾಗಿತ್ತು. ಮುನಿ ವಸಿಷ್ಠರು ಕರ ವಸೂಲಿ ಮಾಡುವ ಕಾಡ ಬೇಡ ವ್ಯಾಧ ವಾಲ್ಯನ ಜ್ಞಾನ ದಾಹ ಜಿಜ್ಞಾಸೆಯ ಆಳವನ್ನು ತಿಳಿದು ಅವನನ್ನು ಕಾನನ ವಲ್ಲಕಿ, ಜ್ಞಾನ ರತ್ನಾಕರಾ, ಜ್ಞಾನದಾಯಿ ಅಗ್ನಿ ಶರ್ಮ ಎಂದು ಹಾರೈಸುತ ಮುಂದೊAದುದಿನ ಕೋಸಲ ರಾಜ್ಯಕ್ಕೆ ಭೇಟಿ ಮಾಡಲು ವಾಲ್ಯನಿಗೆ ಆಮಂತ್ರಣ ನೀಡಿ ವಸಿಷ್ಠಮುನಿ ಅಲ್ಲಿಂದ ನಿರ್ಗಮಿಸಿದರು. ವಸಿಷ್ಠಮುನಿಯ ಸಂವಾದವು ವಾಲ್ಯನನ್ನು ಆಧ್ಯಾತ್ಮಲೋಕಕ್ಕೆ ಸೇಳೆಯಲು ಪ್ರಾರಂಭಿಸಿತು, ತಾನು ತಪಸ್ಸಿಗೆ ಹೋಗುವ ಮನದಿಚ್ಚೆಯನ್ನು ವಾಲ್ಯನು ತನ್ನ ತಂದೆ ತಾಯಿ ಮಡದಿ ಮತ್ತು ಮಕ್ಕಳ ಮುಂದೆ ಇಟ್ಟಾಗ‘ ಸಾಮಾನ್ಯರ ಬದುಕುಗಿಂತ ಅಸಾಮಾನ್ಯನ ಬದುಕು ಉತ್ತಮ, ಅದು ಸತ್ಯದತ್ತ ಕೊಂಡೊಯ್ಯುವದು’ ಎಂದು ಶುಭಕೋರಿ ಸಮ್ಮತಿ ಧ್ವನಿಯಲಿ ಅವರೆಲ್ಲರೂ ವಾಲ್ಯನಿಗೆ ಬೀಳ್ಕೊಟ್ಟರು.

     ವಾಲ್ಯನು ತನ್ನ ಆಶ್ರಮ ತೊರೆದು ಕ್ರೌಂಚ-ಅರಣ್ಯದಿಂದ ಉತ್ತರದ ತಮಸಾನದಿಯತ್ತ ಬಂದು ಅದರ ದಡದಲ್ಲಿಯೇ ಆಶ್ರಮ ಕಟ್ಟಿಕೊಂಡು ತಪಸ್ಸು ಪ್ರಾರಂಭಿಸಿದನು, ನಿತ್ಯ ತಪ್ಪದೇ ನದಿಯಲ್ಲಿ ಸ್ನಾನ ಮಾಡಿ ಆಶ್ರಮದಲ್ಲಿ ಧ್ಯಾನದಲ್ಲಿ ಮಗ್ನನಾಗಿ ತಪಸ್ಸು ಮಾಡುವದನ್ನು ಕಂಡ ಸಂನ್ಯಾಸಿ ಭರದ್ವಾಜರು ವಾಲ್ಮೀಕಿಯೊಂದಿಗೆ ಪರಿಚಯ ಮಾಡಿಕೊಂಡು ಅವರ ಶಿಷ್ಯನಾಗಿ ಅಲ್ಲಿಯೇ ವಾಸಿಸಿದರು. ಒಂದು ದಿನ ವಾಲ್ಮೀಕಿ ಮತ್ತು ಭರದ್ವಾಜರು ಸ್ನಾನ ಮಾಡಿ ಪೂಜೆ ಮುಗಿಸಿಕೊಂಡು ಆಶ್ರಮದತ್ತ ಮರಳುತಿದ್ದಾಗ ದಾರಿಯಲ್ಲಿ ಅವರ ಸಮಕ್ಷಮದಲ್ಲ್ಲಿ ಸಮಾಗಮ-ಕ್ರಿಯೆಯಲ್ಲಿ ತೊಡಗಿದ್ದ ಗಂಡು ಹೆಣ್ಣು ಕ್ರೌಂಚ ಪಕ್ಷಿಗಳತ್ತ ಒಂದು ಬಾಣ ತೂರಿಬಂದು ಗಂಡು ಕ್ರೌಂಚ ಪಕ್ಷಿಯನ್ನು ಹೊಡೆಯಿತು ಅದನ್ನು ಕಂಡ ಹೆಣ್ಣು-ಕ್ರೌಂಚ ದುಃಖದಿಂದ ಮರಕು ಪಡುವ  ಕ್ರೌಂಚಪಕ್ಷಿ ಪ್ರಲಾಪ ವಾಲ್ಮೀಕಿಯ ಹೃದಯದಲ್ಲ್ಲಿ ದುಃಖದ ಕಿಚ್ಚವನ್ನು ಹಚ್ಚಿತು.

    ಕ್ರೌಂಚಪಕ್ಷಿ ಪ್ರಲಾಪ ದುಃಖಕ್ಕೆ ಪರಿಹಾರ ಹುಡುಕಲು ವಾಲ್ಮೀಕಿಯು ತಮಸಾನದಿ ದಾಟಿ ವಸಿಷ್ಠರಿಗೆ ಭೇಟಿಯಾಗಲು ಅಯೋಧ್ಯೆಗೆ ಬಂದನು. ಬೇಡನಿಂದ ಹತನಾದ ಗಂಡು-ಕ್ರೌಂಚದ ವಿರಹದ ಪ್ರಲಾಪದಲ್ಲಿ ಮರುಕು ಪಡುವ ಹೆಣ್ಣು-ಕ್ರೌಂಚ ಪಕ್ಷಿ ಕಂಡು ತನ್ನ ಮನದಲ್ಲಿ ಅಶಾಂತಿ, ವೈರಾಗ್ಯದ ಅಲೆಗಳು ಎದ್ದಿವೆ ಅದರ ಪರಿಹಾರ ಹುಡುಕಿ ಕೊಂಡು ತಾನು ಬಂದಿರುವದಾಗಿ ವಾಲ್ಮೀಕಿಯು ವಸಿಷ್ಠರಲ್ಲಿ ಪರಿಹಾರ ಅಪೇಕ್ಷಿಸುವ ಮನದಾಳದಿಂದ ಅರುಹಿದನು. ಅದೇ ವೇಳೆಯಲ್ಲಿ ಕಿಶೋರ ರಾಮನು ವೈರಾಗ್ಯ ತಳೆದಿದ್ದರಿಂದ ರಾಜದರಭಾರದಲ್ಲ್ಲಿ ಬಾಲರಾಮ ವಸಿಷ್ಠಮುನಿ ಸುತೀಕ್ಷಣಮುನಿ ವಿಶ್ವಾಮಿತ್ರಮುನಿ ಆಸ್ಥಾನಕವಿ ಚ್ಯವನ ವಿದ್ವಾನ-ಪಂಡಿತರು ಮತ್ತು ಪ್ರಜೆಗಳು ಸೇರಿದ್ದರು, ವಸಿಷ್ಠರು ವಾಲ್ಮೀಕಿಯನ್ನು ಆಹ್ವಾನಿಸಿದರು. ವಾಲ್ಮೀಕಿಯ ‘ಕ್ರೌಂಚ-ಪಕ್ಷಿ ವ್ಯಥೆ ಕಥೆ’ ಕೇಳಿ ಕವಿ ಚ್ಯವನ ಗಾಯತ್ರಿ ಛಂದಸ್ ಶೈಲಿಯಲ್ಲಿ ಪದ್ಯ ರಚಿಸಲು ಪ್ರಯತ್ನ ಮಾಡಿ ವಿಫಲನಾದನು ಅದರೆ ಅದೇ ವೇಳೆ ವಾಲ್ಮೀಕಿಯನ್ನು  ಆ ಪ್ರಸಂಗವನ್ನು ಪದ್ಯರೂಪದಲ್ಲ್ಲಿ ಹೇಳಲು ಕೇಳಿದಾಗ ಅವರು ತಕ್ಷಣ ಹೊಸ ‘ಅನುಷ್ಟುಭ ಛಂದಸ’ ಶೈಲಿಯಲ್ಲಿ “ಮಾನಿಷಾದ ಪ್ರತಿಷ್ಠಾಂತ್ವಮಗಮಃ ಶಾಶ್ವತಿಃ ಸಮಾಃ ಯತ್ ಕ್ರೌಂಚಮಿಥುನಾದೆಕA ಅವಧಿ ಕಾಮಮೋಹಿತಂ” ದ್ವಿಪದಿಯಲ್ಲಿ ರಚಿಸಿ ಹಾಡಿದನು, ಅದು ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿತು ಮತ್ತು ವಾಲ್ಮೀಕಿಯಲ್ಲಿ ಹುದುಗಿದ್ದ ವರಕವಿ ಸಾಮರ್ಥ್ಯವನ್ನು ಪರಿಚಯಿಸಿತು. ಇಪ್ಪತ್ತೆರಡು ದಿನಗಳವರೆಗೆ ನಡೆದ ಆಧ್ಯಾತ್ಮಿಕ ಸಂವಾದದಲ್ಲ್ಲಿ ಹಲವಾರು ಆಧ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಆತ್ಮಜ್ಞಾನ ಆತ್ಮಸಾಕ್ಷಾತಕಾರ, ಪರಮಾತ್ಮ, ದೇಹ, ಸಂಪತ್ತು, ಮನಸ್ಸು, ಅಹಂಕಾರ, ಬಯಕೆ (ಕಾಮ), ಬಾಲ್ಯ, ಯವ್ವನ, ಕಾಮತೃಷೆ, ವೃದಾಪ್ಯ, ಕಾಲ ಮತ್ತು ಮೋಕ್ಷ ಈ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ವಸಿಷ್ಠಮುನಿ ವಾಲ್ಮೀಕಿಮುನಿ ಮತ್ತು ಬಾಲರಾಮ ಇವರ ಮಧ್ಯೆ ಸ್ವಾರಸ್ಯಕರವಾದ ಪ್ರಶ್ನೆಗಳ, ಉತ್ತರಗಳ ಚರ್ಚೆ ನಡೆಯಿತು. ಅಯೋಧ್ಯೆನಗರದ ಎಲ್ಲರೂ ಈ ಚರ್ಚೆಯಿಂದ ಪುನೀತರಾದರು; ಬಾಲರಾಮ ಮತ್ತು ವಾಲ್ಮೀಕಿ ಮುನಿಗಳು ವೈರಾಗ್ಯ ಮುಕ್ತರಾದರು. ವಾಲ್ಮೀಕಿ ಮುನಿಗಳು ಕೆಲವೊಂದು ದಿನ ಅಯೋಧ್ಯೆಯಲ್ಲಿಯೇ ತಂಗಿ ಉತ್ತರಕ್ಕೆ ಹಿಮಾಲಯದತ್ತ ತಪಸ್ಸಿಗಾಗಿ ಹೊರಡಿದರು. ಗಂಡಕಿನದಿ ದಡದ ಚಿತ್ವನಪ್ರದೇಶದಲ್ಲಿ ಆಶ್ರಮ ಕಟ್ಟಿಕೊಂಡು ವಾಲ್ಮೀಕಿ ವಾಸವಾದರು. ಇದೇ ಸಂದರ್ಭದಲ್ಲಿ ಅದೇ ಅರಣ್ಯವಾಸಿಗಳಾದ ಅಭಿ ಮತ್ತು ದೇವನ ಹೆಸರಿನ ಯುವಕರ ಪರಿಚಯವಾಯಿತು, ಅವರು ನಿತ್ಯ ವಾಲ್ಮೀಕಿಜೀಮುನಿಗಳಿಗೆ ಅವರ ಚಟುವಟಿಕೆಗಳಲ್ಲಿ ಸಹಾಯವಾಗುತಿದ್ದರು. ಬಾಲರಾಮ ಮತ್ತು ವಸಿಷ್ಠ ಮುನಿಗಳ ಮಧ್ಯೆ ಅಯೋಧ್ಯೆಯಲ್ಲಿ ನಡೆದ ಸಂವಾದಗಳನ್ನು ಸ್ಮರಿಸಿಕೊಂಡು ಆತ್ಮಜ್ಞಾನದ ಬಗ್ಗೆ ಶ್ಲೋಕಗಳನ್ನು ರಚಿಸಲು ಪ್ರಾರಂಭಿಸಿದರು. ನಿತ್ಯ ಇದೇ ರೀತಿ ಕೆಲವು ವರ್ಷಗಳ ವರೆಗೆ ವಾಲ್ಮೀಕಿ ಮುನಿಗಳಿಂದ ಮೂವತ್ತೆರಡುಸಾವಿರ ಶ್ಲೋಕಗಳ ಮಹಾರಾಮಾಯಣವು ರಚನೆಯಾಯಿತು, ಅವುಗಳನ್ನು ಆರು ಭಾಗಗಳಲ್ಲಿ ವಿಭಜಿಸಲಾಗಿದೆ: ವೈರಾಗ್ಯ, ಸ್ವಾತಂತ್ರ‍್ಯದ ಬಯಕೆ, ಮೂಲ, ಸಂರಕ್ಷಣೆ, ಶಾಂತಚಿತ್ತ ಮತ್ತು ಸ್ವಾತಂತ್ರ‍್ಯ. ಆತ್ಮ-ಸ್ವಾತಂತ್ರ‍್ಯ ಕ್ಷೇತ್ರವನು ಪ್ರವೇಶಿಸಲು ಆತ್ಮ-ನಿಯಂತ್ರಣ ವಿಚಾರ ಸಂತೋಷ ಸತ್ಸಂಘ ಅವುಗಳಲ್ಲಿ ಕನಿಷ್ಠ ದರ ಸ್ನೇಹವಿರಬೇಕು. ಹೀಗೆ ಆತ್ಮ-ಜ್ಞಾನದ ಆಧ್ಯಾತ್ಮದ ಭಂಡಾರವನ್ನೇ ರಚಿಸಿದರು ವಾಲ್ಮೀಕಿ ಮುನಿ, ಅವರ ಈ ಕೃತಿಯೆ ‘ಯೋಗ ವಸಿಷ್ಠ ಅಥವಾ ಮಹಾರಾಮಾಯಣ’, ಅದರ ವಿಚಾರಗಳು ಜನಸಾಮಾನ್ಯರು, ಋಷಿ ಮುನಿಗಳಲ್ಲಿ ಹರಡಿದವು, ವಾಲ್ಮೀಕಿ ಮಹರ್ಷಿಯಾದರು, ಅವರ ಶಿಷ್ಯ ಬಳಗ ದಿನದಿಂದ ದಿನಕ್ಕೆ ಹೆಚ್ಚಿತು, ಮಹರ್ಷಿ ವಾಲ್ಮೀಕಿಯ ಪ್ರಸಿದ್ಧಿಯು ಇಡೀ ಹಿಮಾಲಯ-ಪ್ರದೇಶ ಹಾಗೂ ಅದರ ತೊಪ್ಪಲ-ಪ್ರದೇಶಗಳಲ್ಲೂ ಪಸರಿಸಿತು, ಮಹರ್ಷಿ ವಾಲ್ಮೀಕಿಯು ಒಂದು ಧರ್ಮ ಸಂಸ್ಕೃತಿಯಾಗಿ ಬೆಳೆದರು. ಮಹರ್ಷಿ ವಾಲ್ಮೀಕಿಯ ಬೋಧನೆೆಗಳು ಹಿಮಾಲಯದ ನಾಲ್ಕೂ ದಿಸೆಗಳಲ್ಲಿ ಹರಡಿದವು, ಅವರ ಶಿಷ್ಯಬಳಗ, ಅನುಯಾಯಿಗಳ ಜನಸಾಗರೆ ತುಂಬಿ ಹೋಯಿತು.

  ಕೆಲ ದಿನಗಳ ನಂತರ ಮಹರ್ಷಿ ವಾಲ್ಮೀಕಿಯು ಯಮನೋತ್ರಿಯತ್ತ ಪಯಣ ಬೆಳೆಸಿದರು, ಯಮನೋತ್ರಿ ಪ್ರದೇಶದಲ್ಲಿ ಕೆಲಕಾಲ ತಂಗಿದರು, ಇದೇ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿಯ ಭೇಟಿ ವಿಶ್ವಾಮಿತ್ರ ಮುನಿಗಳೊಂದಿಗೆ ಆಯಿತು. ವಿಶ್ವಾಮಿತ್ರರು ವಾಲ್ಮೀಕಿ ಮುನಿಗೆ ಇಡೀ ದಿನ ದಶರಥರ ವಂಶ, ಪುತ್ರಕಾಮೇಷ್ಠಿ-ಯಜ್ಞ, ಋಷ್ಯಶೃಂಗರ ಆಶಿರ್ವಾದ, ರಾಮನ ಜನ್ಮ ಮತ್ತು ಬಾಲ್ಯ, ರಾಮನಿಂದ ತಾಟಕಾ ಮತ್ತು ರಾಕ್ಷಸರ ವಧೆ, ಅಹಿಲ್ಯಾಳ ಉದ್ಧಾರ ಮತ್ತು ರಾಮನ ಮದುವೆ ಹೀಗೆ ಎಲ್ಲ ಘಟಣೆಗಳನ್ನು ವಿವರಿಸಿದರು. ವಾಲ್ಮೀಕಿ ಯಮನೋತ್ರಿ ಆಶ್ರಮದಿಂದ ಪಶ್ಚಿಮಕ್ಕೆ ಸಾಗುತ್ತ, ಆತ್ಮಜ್ಞಾನ ಬೋಧಿಸುತ್ತ, ನದಿಕೊಳ್ಳ ಪರ್ವತ ತೊಪ್ಪಲ-ಪ್ರದೇಶಗಳನ್ನು ದಾಟುತ ವಿಪಸಾನದಿ ಬಳಿ ಬಂದರು. ವಿಪಸಾನದಿ ದಡದಲ್ಲ್ಲಿ ಆಶ್ರಮ ಮಾಡಿ ವಾಲ್ಮೀಕಿ ಮುನಿ ತಮ್ಮ ತಪಸ್ಸು ಧ್ಯಾನ ಬೋಧನೆ ಕಾರ್ಯಗಳನ್ನು ಮುಂದುವರೆಸಿದರು. ವಾಲ್ಮೀಕಿ ಮುನಿ ದರ್ಶನ ಪಡೆದು ಜನ ಪುನೀತರಾದರು, ಅವರ ಶಿಷ್ಯರ ಬಳಗು ಹೆಚ್ಚಿತು. ಈ ಪ್ರದೇಶದಲ್ಲ್ಲಿಯೇ ಯೋಗವಸಿಷ್ಠದ ಆಧ್ಯಾತ್ಮ ಬೋಧನೆ ಪ್ರಭಾವ ಗಾಢವಾಯಿತು. ಈ ಸ್ಥಳದಲ್ಲ್ಲಿಯೇ ವಾಲ್ಮೀಕಿ ಮುನಿಗೆ ದೈತಾಕಾರದ ಗರುಡಪಕ್ಷಿಯ ಪರಿಚಯವಾಯಿತು.

    ‘ಮಹಾಮುನಿ ವಾಲ್ಮೀಕಿಯ ಸೇವೆಗೆ ಅವಕಾಶ ಪಡೆದು ಜಟಾಯು ಅವರನ್ನು ಇಡೀ ಭೂಖಂಡದ ದರ್ಶನ ಮಾಡಿಸಿತು, ಪರ್ವತ ಗಿರಿಗಳ ಸಾಲು, ನದಿಕೊಳ್ಳ, ಸರೋವರ, ಜಲಪಾತ, ಅರಣ್ಯ, ಪಶು ಪಕ್ಷಿಗಳ, ಗಿಡಮರಗಳ, ಗಿಡಮೂಲಿಕೆಗಳ, ನಾಗರಿಕತೆಗಳ, ರಾಜ್ಯ ಭೂಪ್ರದೇಶಗಳ ಪರಿಚಯವನ್ನು ನೀಡಿತು. ಕಿಷ್ಕಿಂಧದ ವಾಲಿ ಸುಗ್ರೀವ ಮತ್ತು ಲಂಕೆಯ ರಾವಣನ ಪರಿಚಯವನ್ನೂ ಮಾಡಿಸಿತು. ಇಡೀ ಲಂಕಾರಾಜ್ಯದ ಸೌಂದರ್ಯ ಮತ್ತು ಪುಷ್ಪಕ-ವಿಮಾನ ವಿಕ್ಷೀಸುವನು ಹಾಗೂಕೆಲದಿನ ರಾವಣನ ಅತಿಥಿಯಾಗಿ ಅಲ್ಲಿಯ ಕೆಲವು ಸೂಕ್ಷ್ಮ ಘಟನೆಗಳನ್ನು ತಿಳಿದ ವಾಲ್ಮೀಕಿ ‘ಅಸತ್ಯ, ಸ್ತ್ರೀ-ದೌರ್ಜನ್ಯ ಮತ್ತು ಕ್ರೌರ್ಯ ಯಾವಾಗಲೂ ಪತನಕ್ಕೆ ದಾರಿ, ವಿವೇಕದ ನಿರ್ಧಾರ ಒಳ್ಳೆ ನಡೆ’ ಹಿತವಚನ ನೀಡಿ ರಾವಣನಿಗೆ ವಿದಾಯ ಹೇಳಿದರು. ಅಲ್ಲಿಂದ ವಾಲ್ಮೀಕಿಯು ಜಟಾಯುಯೊಂದಿಗೆ ಚಿತ್ರಕೂಟಕ್ಕೆ ಬಂದು ಅಲ್ಲಿ ಆಶ್ರಮ ಕಟ್ಟಿಕೊಂಡು ತಂಗಿದ್ದ ಸಂದರ್ಭದಲ್ಲಿ ರಾಮ ಲಕ್ಷ್ಮಣ ಮತ್ತು ಸೀತೆ ಅವರ ಗುಡಿಸಲಿಗೆ ಭೇಟಿ ಕೊಟ್ಟು ಅವರ ಆಶ್ರಮದಲ್ಲ್ಲಿ ರಾತ್ರಿ ಕಳೆಯುವರು. ಚಿತ್ರಕೂಟದಲ್ಲ್ಲಿ ವಾಲ್ಮೀಕಿಯು ತಮ್ಮ ಆಶ್ರಮದಿಂದ ಅಲ್ಲಿಯೇ ಹತ್ತಿರವಿದ್ದ ಅತ್ರಿ ಆಶ್ರಮ, ದಂಡಕಾರಣ್ಯದಲ್ಲ್ಲಿದ್ದ ಸುತೀಕ್ಷಣ ಮುನಿ ಆಶ್ರಮ ಮತ್ತು ಅಗಸ್ತ್ಯ ಮುನಿಗಳ ಆಶ್ರಮಗಳಿಗೆ ಭೇಟಿಕೊಟ್ಟರು. ಈ ಎಲ್ಲ ಮುನಿಗಳೊಂದಿಗೆ ಅಲ್ಲಿಯ ಸಮಸ್ಯೆಗಳ ಬಗ್ಗೆ ಚರ್ಚಿಸಿದರು ಹಾಗೂ ಅಗಸ್ತ್ಯರು ರಾಮನ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಾಣುವದಾಗಿ ತಿಳಿಸಿದರು.

   ವಾಲ್ಮೀಕಿ ಮುನಿ ಚಿತ್ರಕೂಟದಿಂದ ಕ್ರೌಂಚಪರ್ವತ ಪ್ರದೇಶದಲ್ಲಿದ್ದ ತನ್ನ ಮೂಲ ಆಶ್ರಮಕ್ಕೆ ಮರಳಿದರು ಮತ್ತು ಮಡದಿ ಮಕ್ಕಳು ಕಂಡು ಸಂತೋಷಪಟ್ಟರು. ಅಲ್ಲಿ ನಿತ್ಯ ತನ್ನ ಕಾರ್ಯಗಳನ್ನು ಮುಗಿಸಿಕೊಂಡು ಒಂದೊAದುದಿನ ಒಂದೊAದು ವಿದ್ಯೆಯನು ಮೊಮ್ಮಕ್ಕಳಿಗೆ ಕಲಿಸುತಿದ್ದರು, ಕೀಟ ಪ್ರಾಣಿ ಪಕ್ಷಿಗಳೊಂದಿಗೆ ಸಂವಾದ ನಡೆಸುವ ಸಂಜ್ಞೆ, ದೈಹಿಕ-ಭಾಷೆ ಮತ್ತು ಧ್ವನಿ ಸಂಕೇತಗಳನ್ನು ಅವರಿಗೆ ಕಲಿಸಿ ಕೊಟ್ಟರು. ಬೇಟೆ ಬಿಲ್ಲುಗಾರಿಕೆ, ಖಡ್ಗ ಕೋಲು-ಪ್ರಹಾರ, ಕುದುರೆ ಆನೆ ಸವಾರಿ, ಪಕ್ಷಿ-ಸವಾರಿ, ವೀಣೆ-ಸಂಗಿತ, ಚಿತ್ರಲಿಪಿ, ಗಿಡಮೂಲಿಕೆ, ಬ್ರಹ್ಮಜ್ಞಾನ, ಹೀಗೆ ಹಲವಾರು ವಿದ್ಯೆಗಳನ್ನು ಕಲಿಸಿದರು. ನಿತ್ಯ ಸಂಧ್ಯಾಕಾಲದಲ್ಲಿ ‘ಯೋಗ ವಸಿಷ್ಠ’ ಆತ್ಮ ಜ್ಞಾನದ ಪಾಠ ಹೇಳುತಿದ್ದರು. ಇದೇ ಸಂದರ್ಭದಲ್ಲ್ಲಿ ಮೊಮ್ಮಕ್ಕಳಿಗೆ ಮತ್ತು ಕುಟುಂಬದ ಇತರರಿಗೂ ಪುರುಷೋತ್ತಮ ರಾಮನ ಬಾಲ್ಯದ ಘಟನೆಗಳನ್ನು ಹೇಳುತಿದ್ದರು. ಮೊಮ್ಮಗಳು ಕುಶಜಳಿಗೆ ವಾಲ್ಮೀಕಿ ಮುನಿ ಹಚ್ಚೆ ಸಾಮಗ್ರಿ ಬಳಸಿ ಚರ್ಮದ ಮೇಲೆ ಚಿತ್ರ-ಲಿಪಿಯಲ್ಲಿ ಬರೆಯುವ ವಿದ್ಯೆ ಕಲಿಸಿದನು. ತಂದೆ ಕೋರಿಕೆ ಮೇರೆಗೆ ಕುಶಜ ಬಾಲಕಾಂಡವನ್ನು ದ್ವಿಪದಿಯಲ್ಲಿ (ಶ್ಲೋಕ) ಚಿತ್ರಲಿಪಿಯಲ್ಲಿ ಬರೆಯಲು ಪ್ರಾರಂಭಿಸಿದಳು, ಹೀಗೆ ವಾಲ್ಮೀಕಿ ರಾಮಾಯಣ ರಚಣೆ ಪ್ರಾರಂಭವಾಯಿತು.

    ಮಹರ್ಷಿ ವಾಲ್ಮೀಕಿ, ಮಡದಿ ರತ್ನಮಾಲ, ಮೊಮ್ಮಕ್ಕಳು ಕುಶಜ ಮತ್ತು ಗೋತಮಿ ಕ್ರೌಂಚಾರಣ್ಯದಿAದ ಚಿತ್ರಕೂಟದತ್ತ ಪಯಣಿಸಿದರು, ಚಿತ್ರಕೂಟದಲ್ಲ್ಲಿ ರಾಮ ಲಕ್ಷ್ಮಣ ಮತ್ತು ಸೀತೆ ವಾಸಿಸುವದನ್ನು ಕಂಡು ಸಂತೋಷಪಟ್ಟರು, ಅವರ ಒಡನಾಡಿಯಾದರು.

   ಚಿತ್ರಕೂಟದಲ್ಲ್ಲಿ ಮಹರ್ಷಿ, ವಾಲ್ಮೀಕಿಯು ಅವರ ಮಡದಿ ಮೊಮ್ಮಕ್ಕಳೊಂದಿಗೆ ಕೆಲವು ದಿನ ಆಶ್ರಮದಲ್ಲ್ಲಿದ್ದು ಅಲ್ಲಿಂದ ಗೋಮತಿ ನದಿಯತ್ತ ಪ್ರಯಾಣ ಬೆಳೆಸಿದರು. ದಾರಿಯಲಿ ಯಮುನಾ ಗಂಗಾ ನದಿಗಳನ್ನು ದಾಟಿ ಅಲ್ಲಿದ್ದ ತಮ್ಮ ಆಶ್ರಮದಲ್ಲ್ಲಿ (ಕಾನ್ಪುರ ಹತ್ತಿರ) ಕೆಲದಿನ ತಂಗಿ ಉತ್ತರದತ್ತ ಪಯಣ ಮಾಡುತ್ತ ಗೋಮತಿ ನದಿ (ಇಂದಿನ ಲಖನೌ ಹತ್ತಿರ) ತಲುಪಿದರು. ಭರತನು ಮಹರ್ಷಿ ವಾಲ್ಮೀಕಿ ಮತ್ತು ಅವರ ಮಡದಿ ಮೊಮ್ಮಕ್ಕಳನ್ನು ನಂದಿಗ್ರಾಮಕ್ಕೆ ಸ್ವಾಗತಿಸಿದರು. ಅಲ್ಲಿಂದ ವಾಲ್ಮೀಕಿಯು ಮಡದಿ ಮೊಮ್ಮಕ್ಕಳಿಗೆ ತನ್ನ ಅನುಭವ ಚರಿತೆ ಹೇಳುತ್ತ ಚಿತ್ವನದತ್ತ ಸಾಗಿದರು. ಚಿತ್ವನಾಶ್ರಮದಲ್ಲ್ಲಿ ಕೆಲಕಾಲ ಉಳಿದು ಮೊಮ್ಮಕ್ಕಳಾದ ಕುಶಜ ಮತ್ತು ಗೋಮತಿಯರನ್ನು ತನ್ನ ಶಿಷ್ಯಂದಿರಾದ ಅಭಿ ಮತ್ತು ದೇವನ ಅವರಿಗೆ ವಿವಾಹ ಮಾಡಿಕೊಟ್ಟರು.

  ಚಿತ್ವನಾಶ್ರದಿಂದ ವಾಲ್ಮೀಕಿ ಮುನಿಯು ಮಡದಿಯೊಂದಗೆ ವಿಪಸಾನದಿ ಆಶ್ರಮಕ್ಕೆ ನಡೆದರು, ಅವರೊಂದಿಗೆ ಕುಶಜ ಮತ್ತು ಅವಳ ಪತಿ ಅಭಿಯೂ. ವಿಪಸಾನದಿ ಆಶ್ರಮದಲ್ಲ್ಲಿ ಬಹು ಋತುಗಳವರಗೆ ವಾಸವಾಗಿದ್ದರು ಹಾಗೂ ಅಲ್ಲಿಯೇ ಬಾಲಕಾಂಡ ಮತ್ತು ಅಯೋಧ್ಯಾಕಾಂಡಗಳು ವಾಲ್ಮೀಕಿಯಿಂದ ರಚಣೆಯಾದವು. ಅಲ್ಲಿಂದ ಕೈಕೆಯಿರಾಜ್ಯ ಒಳಗೊಂಡು ವಿಪಸಾನದಿ ಸುತ್ತ ಮುತ್ತಣ ಪ್ರದೇಶಗಳನ್ನು ಸುತ್ತಿ ತಮ್ಮ ಆಧ್ಯಾತ್ಮದ ಕಂಪನ ಬೀರಿದರು, ವಾಲ್ಮೀಕಿ ಮುನಿಯ ಶಿಷ್ಯರ ಸಾಗರವೇ ಬೆಳೆಯಿತು, ಅದು ವಾಲ್ಮೀಕಿ-ಧರ್ಮ ಭೂಮಿಯಾಯಿತು. ವಿಪಸಾನದಿ ಆಶ್ರಮವನ್ನು ಶಿಷ್ಯರಿಗೆ ಒಪ್ಪಿಸಿ ವಾಲ್ಮೀಕಿಮುನಿಯು ಪುನಃ ಮಡದಿ ಮೊಮ್ಮಗಳೊಂದಿಗೆ ಚಿತ್ವನಾಶ್ರಮಕ್ಕೆ ಹಿಂದಿರುಗಿದರು. ಅಲ್ಲಿಯೇ ಬಹುಕಾಲ ತಂಗಿದರು.

      ಒಂದು ದಿನ ವಾಲ್ಮೀಕಿ ಮುನಿಯು ತಮ್ಮ ಆಶ್ರಮಕ್ಕೆ ಮರಳುವಾಗ ಅರಣ್ಯದಲ್ಲ್ಲಿ ಪೂರ್ಣ ಗರ್ಭೀಣಿ ಸೀತೆಯನ್ನು ಕಂಡು ಅವಳನ್ನು ತನ್ನ ಆಶ್ರಮಕ್ಕೆ ಕರೆದು ತರುತ್ತಾನೆ, ತವರು ಮನೆಗೆ ಹೆರಿಗೆಗೆ ಬರುವ ಹೆಣ್ಣುಮಗಳಂತೆ ಸೀತೆಯನ್ನು ಮುನಿಮಾತೆಯು ಬರಮಾಡಿಕೊಂಡಳು, ಸೀತೆಯೊಂದಿಗೆ ಅವರು ಆಶ್ರದಲ್ಲ್ಲಿದದ್ದು ಅವರ ಭಾಗ್ಯವೆಂದು ಸಂತೋಷಪಟ್ಟರು. ಸೀತೆಯು ಅವಳಿ ಜವಳಿ ಗಂಡುಮಕ್ಕಳಿಗೆ ಜನ್ಮನೀಡಿದಳು, ಅವುಗಳಿಗೆ ಲವ ಕುಶ ಎಂದು ಆಶ್ರಮವಾಸಿಗಳು ನಾಮಕರಣ ಮಾಡಿದರು, ಮಕ್ಕಳು ವಾಲ್ಮೀಕಿ ಮುನಿ ಆಶ್ರಮದಲ್ಲ್ಲಿ ಮುದ್ದಾಗಿ ಬೆಳೆದರು, ಲವ ಕುಶ ಬಾಲಕರಿಗೆ ಮಹರ್ಷಿ ವಾಲ್ಮೀಕಿಯು ಏಕತಾರಾ, ದ್ವೀತಾರಾ ವೀಣೆ, ಬಿಲ್ಲು-ವಿದ್ಯೆ, ಮುಂತಾದ ವಿದ್ಯೆಗಳನ್ನು ಕಲಿಸಿದರು, ಅದೇ ಸಂದರ್ಬದಲ್ಲ್ಲಿ ಸೀತೆಯೊಂದಿಗೆ ರಾಮನ ಮತ್ತು ಅವಳ ಬದುಕಿನ ಘಟನೆಗಳನ್ನು ಚರ್ಚೆ ಮಾಡಿ ‘ಮಹಾಕಾವ್ಯ ರಾಮಾಯಣ’ ವನ್ನು ಲೋಕಗೀತೆ ರೂಪದಲ್ಲ್ಲಿ ಕಟ್ಟಿ ತಾವು ಹಾಡುವದರೊಂದಗೆ ಲವ ಕುಶರರಿಗೂ ಕಲಿಸಿದರು. ಅಯೋಧ್ಯೆಯಲ್ಲಿ ರಾಮ ಅಶ್ವಮೇಧ-ಯಜ್ಞ ಮಾಡುತಿರುವದನ್ನು ತಿಳಿದು ರಾಮನ ಮಂತ್ರಣಮೇರೆಗೆ ಲವಕುಶರೊಂದಿಗೆ ವಾಲ್ಮೀಕಿ ಮುನಿಯು ಅಯೋಧ್ಯೆಗೆ ಭೇಟಿ ಕೊಡುವನು ಹಾಗೂ ಆ ಸಂದರ್ಭದ ರಾಮನ ದರಭಾರದಲ್ಲ್ಲಿ ತನ್ನ ಶಿಷ್ಯ ಲವ ಕುಶರಿಗೆ ರಾಮಕಥಾ ಲೋಕಗೀತೆ ಹಾಡಲು ಹೇಳುವನು. ಲವ ಕುಶರು ರಾಮನ ಜನ್ಮದಿಂದ ಶುರುಮಾಡಿ ಸೀತೆಯನ್ನು ಅರಣ್ಯಕ್ಕೆ ಕಳಿಸುವ ಮತ್ತು ಅಯೋಧ್ಯೆಯಲ್ಲಿ ರಾಮನ ರಾಜ್ಯದ ಕ್ಷಣದ ಅವಧಿಯವರೆಗಿನ ರಾಮನ ಚರಿತೆಯ ಲೋಕಗೀತೆಯನ್ನು ಇಂಚರಧ್ವನಿಯಲಿ ಹಾಡುವರು, ಸಂತೋಷದಿಂದ ರಾಮನು ಮತ್ತು ಅಲ್ಲಿ ನೆರೆದವರು ಹಾಡುವ ಬಾಲಕರ ಪರಿಚಯ ಕೇಳಿದಾಗ ಸ್ವತಃ ವಾಲ್ಮೀಕಿಯು ತನ್ನ ತಪಸ್ಸಿನ ಬಲದ ಮೇಲೆ ಪ್ರಮಾಣ ಮಾಡಿ ಲವ ಕುಶ ಇಬ್ಬರೂ ರಾಮನ ಮಕ್ಕಳೆಂದು ಹೇಳುವರು. ರಾಮ ಮತ್ತು ಅಯೋಧ್ಯಾವಾಸಿಗಳು ಸಂತೋಷದಿಂದ ಲವ ಕುಶರನ್ನು ಅಪ್ಪಿಕೊಂಡು ಸೀತೆಯನ್ನು ವಾಪಸ ಅಯೋಧ್ಯೆಗೆ ಕರೆದು ತರಲು ವಾಲ್ಮೀಕಿ ಮುನಿಯೊಂದಿಗೆ ಚಿತ್ವನಾಶ್ರಮಕ್ಕೆ ನಡೆದರು. ವಾಲ್ಮೀಕಿ ಮುನಿ, ಲವಕುಶರೊಂದಿಗೆ  ರಾಮ ಮತ್ತು ಅಯೋಧ್ಯೆ ವಾಸಿಗಳು ಬರುವದನ್ನು ದೂರದಿಂದ ಕಂಡ ಸೀತೆಗೆ ಸಂತೋಷದೊAದಿಗೆ ದುಃಖವೂ ಅಯಿತು, ಸೀತೆಯನ್ನು ಕರೆಯುತ್ತಾ ರಾಮ ಬರುತಿದ್ದ ಸಮಯದಲ್ಲ್ಲಿ ಭೂಕಂಪನದಿAದ ಭೂಸ್ಖಲದಿಂದಾಗಿ ಸೀತೆ ಭೂವಡಲು ಸೇರಿದಳು, ಎಲ್ಲರೂ ದುಃಖ ಪಟ್ಟರು, ವಾಲ್ಮೀಕಿ ಮುನಿ ರಾಮನಿಗೆ ಸಾಂತ್ವನÀ ಹೇಳಿ ಲವ ಕುಶರೊಂದಿಗೆ ಅಯೋಧ್ಯಗೆ ಬೀಳ್ಕೊಟ್ಟನು. ರಾಮನ ಆಳ್ವಿಕೆ ಬಗ್ಗೆ ತಿಳಿಯುತ ವಾಲ್ಮೀಕಿ ಮುನಿ ರಾಮನ ಜಲಸಮಾಧಿವರೆಗೆ ಅಲ್ಲಿಯೇ ಚಿತ್ವನದಲ್ಲ್ಲಿ ಕಾಲ ಕಳೆದರು, ಮೊದಲು ಮಡದಿ ರತ್ನಮಾಲಳ ಧೈವಾಧೀನದಿಂದ ದುಃಖಿತರಾದ ವಾಲ್ಮೀಕಿ ಮುನಿ ಕೆಲವೇ ಋತುಗಳಲ್ಲಿ ಚಿತ್ವನಾಶ್ರದಲ್ಲ್ಲಿಯೇ ದೈವಾಧೀನರಾದರು. ರಾಮನ ಮಕ್ಕಳ ಪಟ್ಟಾಭೀಷೆಕ ಮತ್ತು ಅವರ ಆಡಳಿತದ ಘಟನೆಗಳನ್ನು ಸೇರಿಸಿ ಕುಶಜಾ ‘ವಾಲ್ಮೀಕಿಯ ಮಹಾಕಾವ್ಯ ರಾಮಾಯಣ’ವನ್ನು ಪೂರ್ಣಗೊಳಿಸಿದಳು.

ಒಟ್ಟಿನಲ್ಲಿ, ವ್ಯಾಧ>ಬೇಡಕುಲದಲ್ಲ್ಲಿ  ಹುಟ್ಟಿದ   ಪ್ರಚೇತಸ ಮುನಿ  ಮತ್ತು  ಅನುತಾದೇವಿ  ದಂಪತಿಗಳಿಗೆ  ಹತ್ತನೆಯ   ಪುತ್ರನಾಗಿ  ಜನಸಿದ  ವಾಲ್ಮೀಕಿ  ಬಾಲ್ಯದಿಂದಲೆ  ಪಾಲಕರಿಂದ  ಉತ್ತಮ ಸಂಸ್ಕಾರ ಪಡೆದು, ವರಕವಿ  ಕಾನನ  ಕೋಗಿಲೆಯಾಗಿ  ಬೆಳೆದು  ತನ್ನ ಅನುಭವ ಮತ್ತು ಸೀತೆಯಿಂದ  ರಾಮನ ಬದುಕಿನ ಘಟನೆಗಳನ್ನು ತಿಳಿದು  ‘ರಾಮಾಯಣ’  ಹೆಸರಿನ  ಲೋಕಗೀತೆ  ಕಟ್ಟಿಹಾಡಿ,  ಶಿಷ್ಯರಾದ  ಲವ  ಕುಶರಿಂದಲೂ ಅದನ್ನು ಹಾಡಿಸಿ  ಭರತ  ಖಂಡಕ್ಕೆ  ಪ್ರಥಮ  ಮಹಾಕಾವ್ಯ  ನೀಡಿದರು. ವಾಲ್ಮೀಕಿ ಮುನಿಯ ಆಧ್ಯಾತ್ಮ ತತ್ವಜ್ಞಾನ ಮತ್ತು ಮಾನವೀಯ ಚಿಂತನೆಗಳ ಆಧಾರದ ಮೇಲೆ ಕಾಲಾಂತರದಲ್ಲ್ಲಿ  ಸಿಂಧು-ಗAಗಾ ನದಿ ಸಮಾಜ-ಸಂಸ್ಕೃತಿ-ಧರ್ಮ  ಮಹಾನ ಪರಂಪರೆ ಕಾಣಿಸಿಕೊಂಡು ಬೆಳೆಯಿತು.  ಹಲವಾರು ಚಿಂತನೆಗಳ ಪ್ರಥಮಗಳ ಪ್ರಥಮ, ಹಲವು ಶಾಸ್ತ್ರ ವಿದ್ಯೆ ಕಲೆಗಳ ಪಿತಾಮಹ, ಸ್ತ್ರೀ ಮತ್ತು ದಮನಿತರ ಪ್ರಪ್ರಥಮ ಧ್ವನಿ ಮಹಾಕವಿ ವಾಲ್ಮೀಕಿಯ ಜೀವನಗಾಥೆಯೇ ಹಲವಾರು ಊಹಾ-ಪೊಹೆ ತಾರ್ಕಿಕ ಕಥೆಗಳ ಹುತ್ತಿನಿಂದ ಮುತ್ತಲ್ಪಟ್ಟಿದ್ದರೂ ಅವರ ಕೃತಿಗಳಿಂದಲೇ ಅವರ ನಿಜ ಜೀವನ ಕಥೆ ಅನಾವರಣವಾಗುವದು. 2405:201:D042:68B0:BD09:B42E:CA25:C6D9 ೧೦:೪೩, ೧೦ ಆಗಸ್ಟ್ ೨೦೨೪ (IST)Reply