ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Divakara k n

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Divakara k n,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


ಪಾಲಗಿರಿ (talk) ೦೫:೦೦, ೧೩ ನವೆಂಬರ್ ೨೦೧೩ (UTC)


ನೈಷಧ ಚರಿತ್ರೆ

[ಬದಲಾಯಿಸಿ]

ಶ್ರಿ ಗುರುಭ್ಯೊ ನಮಃ ನೈಷಧ ಚರಿತ್ರೆ

ವಾಗ್ದೇವೀಂ ಮನಸಾ ಧ್ಯಾತ್ವಾ ಪಾದಪದ್ಮಂ ಗುರೋಸ್ತಥಾ I ಟೀಕಾ ನೈಷಧಕಾವ್ಯಸ್ಯ ಕ್ರಿಯತೇ "ಛಾತ್ರತೋಷಿಣೀ" II ವಾಗ್ದೇವಿಯನ್ನು ಮನಸ್ಸಿನಲ್ಲಿ ಧ್ಯಾನಿಸಿ, ಗುರುವಿನ ಪಾದಪದ್ಮಗಳಿಗೆ ನಮಸ್ಕರಿಸಿ. ನೈಷಧ ಕಾವ್ಯಕ್ಕೆ ವಿದ್ಯಾರ್ಥಿಗಳ ಸಂತಸಕ್ಕಾಗಿ ಟೀಕೆಯನ್ನು ಬರೆಯುತ್ತಿದ್ದೇನೆ. ನಿಪೀಯ ಯಸ್ಯ ಕ್ಷಿತಿರಕ್ಷಿಣಃ ಕಥಾಂ ತಥಾದ್ರಿಯನ್ತೇ ನ ಬುಧಾಃ ಸುಧಾಮಪಿ I ನಲಃ ಸಿತಛ್ಚತ್ರಿತಕೀರ್ತಿಮಂಡಲಃ ಸ ರಾಶಿರಾಸೀನ್ಮಹಸಾಂ ಮಹೋಜ್ಜ್ವಲಃ II೧II ಯಾವ ಭೂಪತಿಯ ಕಥೆಯನ್ನು ಕೇಳಿ ದೇವತೆಗಳು ಅಮೃತದ ಸವಿಯನ್ನು ಮರೆಯುವರು. ತನ್ನ ರಥದ ಮೇಲಿರುವ ಶ್ವೇತ ಛತ್ರಿಯನ್ನು ತನ್ನ ಯಶಸ್ಸನ್ನಾಗಿ ಹೊಂದಿರುವ ನಳರಾಜನ ಕೀರ್ತಿಯು ಭೂಮಂಡಲದಲ್ಲಿ ಎಲ್ಲಾ ಕಡೆಯೂ ಹರಡಿದೆ. ಇಲ್ಲಿ ಭೂಪತಿ ಎನ್ನುವ ಪದದಿಂದ ದೇವರ ಸ್ಮರಣೆ ಮಾಡಿದ್ದಾರೆ. ರಸೈಃ ಕಥಾ ಯಸ್ಯ ಸುಧಾವಧೀರಣೀ ನಲಃ ಸ ಭೂಜಾನಿರಭೂದ್ ಗುಣಾದ್ಭುತಃ I ಸುವರ್ಣದಣ್ಡೈಕಸಿತಾತಪತ್ರಿತ ಜ್ವಲತ್ಪ್ರತಾಪಾವಲಿ ಕೀರ್ತಿಮಂಡಲಃ II೨II ಯಾವ ಕಥೆಯನ್ನು ಕೇಳಿ ಅಮೃತದ ಸ್ವಾದವು ರುಚಿಸಲಿಲ್ಲವೋ, ಅಂತಹ ಉಜ್ವಲವಾದಂತಹ ಯಶಸ್ಸಿನ ಮಂಡಲದ ಶ್ವೇತ ಛತ್ರಿಗೆ ಸುವರ್ಣದಂಡ ಹೊಂದಿರುವ ನಳ ರಾಜನು ಅದ್ಭುತವಾದ ಗುಣಗಳನು ಹೊಂದಿರುವನು. ಪವಿತ್ರಮತ್ರಾತನುತೇ ಜಗದ್ಯುಗೇ ಸ್ಮೃತಾ ರಸಕ್ಷಾಲನಯೇವ ಯತ್ಕಥಾ I ಕಥಂ ನ ಸಾ ಮದ್ಗಿರಮಾವಿಲಾಮಪಿ ಸ್ವಸೆವಿನೀಮೆವ ಪವಿತ್ರಯಿಷ್ಯತಿ II೩II ಯಾವ ಕಥೆಯನ್ನು ಈಯುಗದಲ್ಲಿಯೂ ಸ್ಮರಣೆ ಮಾಡುವುದರಿಂದ ಈ ಜಗತ್ತನ್ನು ಪವಿತ್ರ ಮಾಡುವಂತ ನೀರಿನಿಂದ ತೊಳೆಯಲಾಗಿದೆಯೋ ದೋಷಪುರ್ಣವಾಗಿದ್ದರೂ, ನನ್ನ ಮಾತುಗಳಲ್ಲಿ ಈಕಥೆಯನ್ನು ಕೇಳುವುದರಿಂದಲೇ ಪವಿತ್ರವಾಗುತ್ತದೆ. ಅಧೀತಿಬೋಧಾಚರಣಪ್ರಚಾರಣೈರ್ದಶಾಶ್ಚತಸ್ರಃ ಪ್ರಣಯನ್ನುಪಾಧಿಭಿಃ I ಚತುರ್ದಶತ್ವಂ ಕೃತವಾನ್ ಕುತಃ ಸ್ವಯಂ ನ ವಿಧ್ಯಾಸು ಚತುರ್ದಶಸ್ವಯಮ್ II೪II ಚತುರ್ದಶ ವಿದ್ಯೆಗಳಲ್ಲಿ ಅಧ್ಯಯನ,ಆಚಾರ, ಜ್ಞಾನ ಪ್ರಚಾರ ಎನ್ನುವ ನಾಲ್ಕು ಅವಸ್ಥೆಗಳನ್ನು ಮಾಡಿ, ಅವುಗಳಿಂದ ಸ್ವಯಂ ಹದಿನಾಲ್ಕನ್ನಾಗಿ ಹೇಗೆ ಮಾಡಿದ ಎನ್ನುವುದು ತಿಳಿಯುತ್ತಿಲ್ಲ. ಇಲ್ಲಿ ಕವಿಯು ಹದಿನಾಲ್ಕು ಎಂದು ಶ್ಲೇಷಾಲಂಕಾರದಲ್ಲಿ ಬಳಸಿದ್ದಾನೆ. ಅಮುಷ್ಯ ವಿದ್ಯಾ ರಸನಾಗ್ರನರ್ತಕೀ ತ್ರಯೀವ ನೀತಾಙ್ಗಗುಣೇನ ವಿಸ್ತರಮ್ I ಆಗಾಹತಾಷ್ಟಾದಶತಾಂ ಜಿಗೀಷಯಾ ನವದ್ವಯದ್ವೀಪಪೃಥಗ್ಜಯಶ್ರಿಯಾಮ್ II೫II ನಳರಾಜನ ನಾಲಿಗೆ ಮೇಲೆ ನರ್ತನ ಮಾಡುತ್ತಿರುವ ವಿದ್ಯೆಯು, ಅವನ ಅಂಗದ ಗಣನೆಯಿಂದ[ಹದಿನಾಲ್ಕು ವಿದ್ಯೆ ಮತ್ತು ಆಯುರ್ವೇದ, ಧನುರ್ವೇದ, ಗಾಂಧರ್ವ ಮತ್ತ್ತುಅರ್ಥಶಾಸ್ತ್ರ ಸೇರಿ ಹದಿನೆಂಟು ವಿದ್ಯೆ] ವಿಸ್ತಾರವಾಗಿ ವೇದ ಮಾತೆಯ ಹದಿನೆಂಟು ದ್ವೀಪಗಳನ್ನು [ವಿದ್ಯೆ]ಬೇರೆ ಬೇರೆ ಮಾಡಿ ವಿಜಯಲಕ್ಷ್ಮಿಯನ್ನು ಪಡೆಯ ಬೇಕೆಂಬ ಇಚ್ಛೆಯಿಂದ ಹದಿನೆಂಟನ್ನು ಎಂಬತ್ತು ಮಾಡಿದನು. ದಿಗೀಶವೃನ್ದಾಂಶವಿಭೂತಿರೀಶಿತಾ ದಿಶಾಂ ಸ ಕಾಮಪ್ರಸರಾವರೋಧಿನೀಮ್ I ಬಭಾರ ಶಾಸ್ತ್ರಾಣಿ ದೃಶಂ ದ್ವಯಾಧಿಕಾಂ ನಿಜತ್ರಿನೇತ್ರಾವತರತ್ವಬೋಧಿಕಾಮ್ II೬II ದಿಕ್ಕುಪಾಲಕರ ಸಮೂಹ ಅಂಶದಿಂದ ಉತ್ಪನ್ನವಾದ, ದಿಕ್ಕುಗಳ ಒಡೆಯ ಅವನನ್ನು[ನಳ] ಮಹೇಶ್ವರನ ಅವತಾರದಂತೆ ಎರಡು ಕಣ್ಣುಗಳಿಗಿಂತ ಹೆಚ್ಚು [ಮುರನೇ] ಕಣ್ಣಿನ ರೂಪದಲ್ಲಿ ಎಲ್ಲಾ ಶಾಸ್ತ್ರಗಳನ್ನು ಧರಿಸಿಕೊಂಡಿದ್ದನು. ಪದೈಶ್ಚತುರ್ಭಿಃ ಸುಕೃತೇ ಸ್ಥಿರೀಕೃತೇ ಕೃತೆsಮುನಾ ಕೇ ನ ತಪಃ ಪ್ರಪೆದಿರೇ I ಭುವಂ ಯದೆಕಾಙ್`ಘ್ರಿಕನಿಷ್ಠಯಾ ಸ್ಪೃಶನ್ ದಧಾವಧರ್ಮೋsಪಿ ಕೃಶಸ್ತಪಸ್ವಿತಾಮ್ II೭II ಕೃತ ಯುಗದಲ್ಲಿ[ಸತ್ಯಯುಗ] ಧರ್ಮವು ನಾಲ್ಕು ಪಾದದಲ್ಲಿ ನಿಂತಿತ್ತು. ಹಾಗೆಯೇ ನಳನ ಆಡಳಿತದಲ್ಲಿ ಧರ್ಮವು ನಾಲ್ಕು ಪಾದಗಳಲ್ಲಿ ನಿಂತಿದ್ದರಿಂದ, ಅಧರ್ಮವು ದುರ್ಬಲವಾದುದ್ದರಿಂದ, ಸ್ಥಳ ಪಡೆಯಬೇಕೆಂಬ ಇಚ್ಛೆಯಿಂದ ತಪಸ್ವಿಯಾಗಿ ಒಂದು ಪಾದದಲ್ಲಿ ನಿಲಲ್ಲು ಪೃಥ್ವಿಯ ಮೇಲೆ ಪ್ರಯತ್ನ ಪಡುತಿತ್ತು. ಯದಸ್ಯ ಯಾತ್ರಾಸು ಬಲೋದ್ಧತಂ ರಜಃ ಸ್ಫುರತ್`ಪ್ರತಾಪಾನಲಧೂಮಮಞ್ಜಿಮ I ತದೇವ ಗತ್ವಾ ಪತಿತಂ ಸುಧಾಂಬುಧೌ ದಧಾತಿ ಪಙ್ಕೀಮವದಙ್ಕತಾಂ ವಿಧೌ II೮II ನಳರಾಜನ ವಿಜಯ ಯಾತ್ರೆಯು ಹೊಳೆಯುತ್ತಿರುವ ಪ್ರತಾಪ ರೂಪದ ಅಗ್ನಿ ಜ್ವಾಲೆಯಾಗಿ ಪ್ರಜ್ವಲಿಸುತಿತ್ತು. ಅಗ್ನಿ ಜ್ವಾಲೆಯಿಂದ ಏಳುವ ದೂಳು ಮನೋಹರವಾಗಿತ್ತು. ಸೇನೆಯು ಹೊರಡುವಾಗ ದಾರಿಯಲ್ಲಿ ಏಳುವ ದೂಳು ಕ್ಷೀರಸಾಗರದಲ್ಲಿ ಬಿದ್ದು ಅದೇ ಚಂದ್ರನಲ್ಲಿರುವ ಕಳಂಕದ ಹಾಗೆ ತೋರುತ್ತಿತ್ತು. ಸ್ಫುರದ್`ಧನುರ್ನಿಃಸ್ವನತದ್`ಧನಾಶುಗಪ್ರಗಲ್ಭವೃಷ್ಟಿವ್ಯಯಿತಸ್ಯ ಸಙ್ಗರೇ I ನಿಜಸ್ಯ ತೇಜಃಶಿಖಿನಃ ಪರಶ್ಶತಾ ವಿತೇನುರಿಙ್ಗಾಲಮಿವಾಯಶಃ ಪರೇ II೯II ಆಕಾಶದಲ್ಲಿರುವ ಮೋಡಗಳು ಒಂದಕ್ಕೊಂದು ಡಿಕ್ಕಿ ಹೊಡೆದಾಗ ಉಂಟಾಗುವ ಶಬ್ದದ ಹಾಗೆ, ಶೋಭಿಸುತ್ತಿರುವ ನಳನ ಇಂದ್ರಧನಸ್ಸಿಗೆ ಸಹಸ್ರಾರು ಶತ್ರು ಸೈನಿಕರ ಸಹಸ್ರಾರು ತಲೆಗೆ ಡಿಕ್ಕಿ ಹೋಡೆಯಿತು. ಜೋರಾದ ಮಳೆಯಿಂದ ಅಗ್ನಿರೂಪದ ಪ್ರತಾಪವು[ಯಶಸ್ಸು] ಕ್ಷೀಣವಾಗ ತೊಡಗಿತು. ಅನಲ್ಪದಗ್ಧಾರಿಪುರಾನಲೋಜ್ಜ್ವಲೈರ್ನಿಜಪ್ರತಾಪೈರ್ಬಲಯಞ್ಜ್ವಲದ್ಭುವಃ I ಪ್ರದಕ್ಷಿಣೀಕೃತ್ಯ ಜಯಾಯ ಸೃಷ್ಟಯಾ ರರಾಜ ನೀರಾಜನಯಾ ಸ ರಾಜಘಃ II೧೦II ಶತ್ರು ರಾಜರನ್ನು ಸಂಹಾರ ಮಾಡುವ [ನಳ]ರಾಜನು ಬಹಳಷ್ಟು ಶತ್ರುದೇಶವನ್ನು ನಾಶ ಮಾಡುತ್ತಾ, ತನ್ನ ಪ್ರತಾಪ ರೂಪದ ಅಗ್ನಿ ಜ್ವಾಲೆಯಿಂದ ಇಡೀ ಭೂಮಂಡಲವೇ ಶೋಭಾಯಮಾನವಾಗಿ ಬೆಳಗುತ್ತಿತ್ತು. ಎಲ್ಲಾ ದಿಕ್ಕುಗಳಲ್ಲಿಯು ಸುತ್ತಿ ವಿಜಯಲಕ್ಷ್ಮಿಗೆ [ಪುರೊಹಿತರು ಮತ್ತ್ತು ಪುರಜನರು] ಮಾಡುವ ಆರತಿಯಿಂದ ಶೋಭಿಸುತ್ತಿದ್ದಳು. ನಿವಾರಿತಾಸ್ತೇನ ಮಹೋತಲೇsಖಿಲೇ ನಿರೀತಿಭಾವಂ ಗಮಿತೇsತಿವೃಷ್ಟಯಃ I ನ ತಸ್ಯಜುರ್ನೂನಮನನ್ಯವಿಶ್ರಮಾಃ ಪ್ರತೀಪಭೂಪಾಲಮೃಗೀದೃಶಾಂ ದೃಶಃ II೧೧II ರಾಜನಿಂದ ಇಡೀ ಭೂಮಂಡಲವೇ ಸಮೃದ್ಧಿಯಿಂದ ತುಂಬಿರಲು ಅತಿ ವೃಷ್ಟಿಯು ಬೇರೆ ಜಾಗದಲ್ಲಿ ಆಶ್ರಯ ಪಡೆಯಿತು. ಅದು ಶತ್ರುರಾಜರ ಜಿಂಕೆ ಕಣ್ಣುಳ್ಳವರ[ರಾಣಿ] ಕಣ್ಣಲ್ಲಿ ಆಶ್ರಯ ಪಡೆಯಿತು. ಸಿತಾಂಶುವರ್ಣೈರ್ವಯತಿ ಸ್ಮ ತದ್ಗುಣೈರ್ಮಹಾಸಿವೇಮ್ನಃ ಸಹಕೃತ್ವರೀ ಭಹುಮ್ I ದಿಗಙ್ಗನಾಙ್ಗಾವರಣಂ ರಣಾಙ್ಗಣೇ ಯಶಃಪಟಂ ತದ್ಭಟಚಾತುರೀತುರೀ II೧೨II ವಿಶಾಲ ಖಡ್ಗ ರೂಪದ ನಳನ ಸೈನಿಕರು ರಣ ರಂಗದಲ್ಲಿ ಚತುರತೆಯಿಂದ ಶೋಭಿಸುತ್ತಿದ್ದರು. ಚಂದ್ರನ ಕಾಂತಿಯ ಹಾಗೆ ನಳನ ಗುಣ[ಶೌರ್ಯ] ರೂಪದ [ತಂತು] ಗುಣದಿಂದ ದಿಕ್ಕುಗಳೆಂಬ ಸುಂದರಾಂಗಿಯರ ದೇಹವನ್ನು ಮುಚ್ಚುವ ವಿಶಾಲವಾದ ಯಶಸ್ಸೆನ್ನುವ ಬಟ್ಟೆಯನ್ನು ನೇಯುತ್ತಿತ್ತು. ಪ್ರತೀಪಭೂಪೈರಿವ ಕಿಂ ತತೋ ಭಿಯಾ ವಿರುದ್ಧಧರ್ಮೈರಪಿ ಭೇತ್ತೃತೋಜ್ಝಿತಾ I ಅಮಿತ್ರಜಿನ್ಮಿತ್ರಜಿದೋಜಸಾ ಸ ಯದ್ವಿಚಾರದೃಕ್ಚಾರದೃಗಪ್ಯವರ್ತತ II೧೩II ವಿರೋಧಿರಾಜರು ನಳನಿಗೆ ಹೆದರುವ ಹಾಗೆ ಅಧರ್ಮವು ನಳನಿಗೆ ಹೆದರಿ ಅಧರ್ಮವನ್ನು ಬಿಟ್ಟಿದೇಯಾ?.[ಅವನ ಆಡಳಿತದಲ್ಲಿ ಎಲ್ಲೆಡೆ ಧರ್ಮವೇ ಹರಡಿತು] ಏಕೆಂದರೆ ನಳನ ತೇಜಸ್ಸು ಶತ್ರುಗಳನ್ನು ಗೆಲ್ಲುವ ಹಾಗೆ ಮಿತ್ರರನ್ನು ಗೆದ್ದಿತ್ತು. ತದೋಜಸಸ್ತದ್ಯಶಸಃ ಸ್ಥಿತಾವಿಮೌ ವೃಥೇತಿ ಚಿತ್ತೇ ಕುರುತೇ ಯದಾ ಯದಾ I ತನೋತಿ ಭಾನೋಃ ಪರಿವೇಷಕೈತವಾತ್ತದಾ ವಿಧಿಃ ಕುಂಡಲನಾಂ ವಿಧೋರಪಿ II೧೪II ನಳನ ತೇಜಸ್ಸು ಮತ್ತು ಯಶಸ್ಸುಇರುವಾಗ ಸೂರ್ಯ ಮತ್ತು ಚಂದ್ರರು ಬೇಡವಾಗಿತ್ತು. ಎಂದು ಬ್ರಹ್ಮನು ಆಗ ಆಗ ಯೋಚನೆ ಮಾಡುತ್ತಾನೆಯೋ ಆಗ ಅವು ಮಂಡಲದಲ್ಲಿ ಸುತ್ತುವಾಗ [ಸೂರ್ಯ ಮತ್ತು ಚಂದ್ರ]ಅವುಗಳಿಗೆ ಗೋಲಾಕಾರವನ್ನು ಉಂಟು ಮಾಡುತ್ತಾನೆ. ಅಯಂ ದರಿದ್ರೋ ಭವಿತೇತಿ ವೈಧಸೀಂ ಲಿಪಿಂ ಲಲಾಟೇsರ್ಥಿಜನಸ್ಯ ಜಾಗ್ರತೀಮ್ I ಮೃಷಾ ನ ಚಕ್ರೇsಲ್ಪಿತಕಲ್ಪಪಾದಪಃ ಪ್ರಣೀಯ ದಾರಿದ್ರ್ಯದರಿದ್ರತಾಂ ನಲಃ II೧೫II ಕಲ್ಪವೃಕ್ಷವು ಬೇಡಿದವರಿಗೆ ಬೇಡಿದ್ದನ್ನು ಮಾತ್ರ ಕೋಡುತ್ತದೆ. ಆದರೆ ನಳನು ಬೇಡುವ ಮೊದಲೇ ಜನರಿಗೆ ಬೇಕಾದುದನ್ನು ನೀಡುತ್ತಾ ಇದ್ದನು. ಕಲ್ಪವೃಕ್ಷವು ಅವನ ಮುಂದೆ ತಿರಸ್ಕೃತವಾಯಿತು. ಅವನ ಆಡಳಿತದಲ್ಲಿ ದರಿದ್ರಕ್ಕೇ ದಾರಿದ್ರ್ಯ ಉಂಟಾಯಿತು. ವಿಭಜ್ಯ ಮೇರುರ್ನ ಯದರ್ಥಿಸಾತ್ಕೃತೋ ನ ಸಿನ್ಧುರುತ್ಸರ್ಗಜಲವ್ಯಯೈರ್ಮರುಃ I ಅಮಾನಿ ತತ್ತೇನ ನಿಜಾಯಶೋಯುಗಂ ದ್ವಿಫಾಲಬದ್ಧಾಶ್ಚಿಕುರಾಃ ಶಿರಃ ಸ್ಥಿತಮ್ II೧೬II ಸುಮೇರು ಪರ್ವತವನ್ನು ತುಂಡು ತುಂಡಾಗಿ ಮಾಡಿ ಯಾಚಕರಿಗೆ ದಾನ ಮಾಡಲಾಗಲಿಲ್ಲ, ಸಮುದ್ರದ ನೀರನ್ನು ಖಾಲಿ ಮಾಡಿ ಮರಭೂಮಿಯಾಗಿ ಮಾಡಲಾಗಲಿಲ್ಲ. ಸುಮೇರು ಪರ್ವತ ಮತ್ತು ಸಮುದ್ರಗಳೆರಡು ತನ್ನ ಅಪಯಶಸ್ಸು ಎಂದು ತಿಳಿದು ಎರಡನ್ನು ತನ್ನ ತಲೆಯಲ್ಲಿ ಧರಿಸಿದನು. ಏಕೆಂದರೆ ನಳನ ತಲೆ ಕೂದಲನ್ನು ಎರಡು ಭಾಗವಾಗಿ ಮಾಡಿದನು. ಅಜಸ್ರಮಭ್ಯಾಸಮುಪೇಯುಷಾ ಸಮಂ ಮುದೈವ ದೇವಃ ಕವಿನಾ ಬುಧೇನ ಚ I ದಧೌ ಪಟೀಯಾನ್ ಸಮಯಂ ನಯನ್ನಯಂ ದಿನೇಶ್ವರಶ್ರೀರುದಯಂ ದಿನೇ ದಿನೆ II೧೭II ಸಹಸ್ರಾರು ಕಿರಣಗಳನ್ನು ಹೊಂದಿರುವ ಸೂರ್ಯನ ಅತ್ಯಂತ ಸಾಮಿಪ್ಯದಲ್ಲಿರುವ [ಶುಕ್ರ ಮತ್ತು ಬುಧ] ಗ್ರಹಗಳ ಜೊತೆಯಲ್ಲಿ ಪ್ರಸನ್ನತೆಯಿಂದ, ಸ್ನೇಹದಿಂದ ಸಮಯ ನಿರ್ಮಾಣ[ಶಾಸ್ತ್ರ ಚರ್ಚೆ]ದಲ್ಲಿ ಪ್ರತಿದಿನ ಉದಯಿಸುತ್ತಿದ್ದನು. ಹಾಗೆಯೇ ಸೂರ್ಯನಕಾಂತಿಯಿಂದ ಕೂಡಿರುವ ನಳರಾಜನು ನಿರಂತರವಾಗಿ ಕವಿಗಳ [ಕಾವ್ಯ] ಮತ್ತು ವಿದ್ವಾಂಸರ ಜೊತೆಯಲ್ಲಿ ಶಾಸ್ತ್ರಚರ್ಚೆಯನ್ನು ಮಾಡುತ್ತಾ ಪ್ರಸನ್ನನಾಗಿ ದಿನದ ಸಮಯವನ್ನು ದೇಶದ ಅಭ್ಯುದಯಕ್ಕಾಗಿ ಬಳಸುತ್ತಿದ್ದನು. ಅಧೋವಿಧಾನಾತ್ ಕಮಲಪ್ರವಾಲಯೋಃ ಶಿರಃಸು ದಾನಾದಖಿಲಕ್ಷಮಾಭುಜಾಮ್ I ಪುರೇದಮೂರ್ಧ್ವಂ ಭವತೀತಿ ವೇಧಸಾ ಪದಂ ಕಿಮಸ್ಯಾಙ್ಕಿತಮೂರ್ಧ್ವರೇಖಯಾ II೧೮II ಕಮಲ ಮತ್ತು ಕಿಸಲಯ[ಚಿಗುರಿದ ಎಲೆ] ಬಾಡಿದಾಗ ಬಾಗುವುದಕ್ಕಿಂತ್ತ ಹೆಚ್ಚಾಗಿ ಶತ್ರುರಾಜರ ತಲೆಯು ಬಾಗಿರುತ್ತಿತ್ತು. ಅದಕ್ಕಾಗಿಯೇ ಬ್ರಹ್ಮನು ನಳ ರಾಜನ ಪಾದದಲ್ಲಿ ಒಂದು ಊರ್ಧ್ವರೇಖೆಯ ಚಿಹ್ನೆಯನ್ನು ಮಾಡಿದ್ದಾನೆಯೇ? ಜಗಜ್ಜಯಂ ತೇನ ಚ ಕೋಶಮಕ್ಷಯಂ ಪ್ರಣೀತವಾಞ್ಶೈಶವಶೇಷವಾನಯಮ್ I ಸಖಾ ರತೀಶಸ್ಯ ಋತುರ್ಯಥಾ ವನಂ ವಪುಸ್ತಥಾಲಿಙ್ಗದಥಾಸ್ಯ ಯೌವನಮ್ II೧೯II ಬಾಲ್ಯಾವಸ್ಥೆಯಿಂದ ಯೌವನಾವಸ್ಥೆಗೆ ಬರುವ ವೇಳೆಯ ಒಳಗೆ ವಿಜಯವನ್ನು ಸಾಧಿಸಿ ತನ್ನ ರಾಜ್ಯದ ಕೋಶವನ್ನು ಅಕ್ಷಯ ಪಾತ್ರೆಯನ್ನಾಗಿ ಮಾಡಿದನು. ಯೌವನ ಅವಸ್ಥೆಯ ಅವನ ಶರೀರವನ್ನು ಆಲಿಂಗನ ಮಾಡಿ ಕೂಡಿತ್ತು, ಹೇಗೆಂದರೆ ಮನ್ಮಥನ ಮಿತ್ರ ವಸಂತನ ಆಗಮನದಿಂದ ಕಾಡು ಶೋಭಿಸುವ ಹಾಗೆ ನಳನು ಶೋಭಿಸುತ್ತಿದ್ದನು. ಅಧಾರಿ ಪದ್ಮೇಷು ತದಙಿ`ಘ್ರಣಾ ಘೃಣಾ ಕ್ವ ತ್ತಚ್ಛಯಚ್ಛಾಯಲವೊsಪಿ ಪಲ್ಲವೇ I ತದಾಸ್ಯದಾಸ್ಯೇsಪಿ ಗತೋsಧಿಕಾರಿತಾಂ ನ ಶಾರದಃ ಪಾರ್ವಿಕ ಶರ್ವರೀಶ್ವರಃ II೨೦II ನಳನ ಪಾದದ ಮೃದುತ್ವವು ಕಮಲದ ಮೃದುತ್ವವನ್ನು ತಿರಸ್ಕರಿಸಿತ್ತು, ಹೂಸದಾಗಿ ಚಿಗುರಿದ ಎಲೆಯ ಕಾಂತಿಯು ನಳನ ಕೈ ಕಾಂತಿಯ ಒಂದು ಭಾಗವನ್ನು ಪಡೆದಿತ್ತು ಮತ್ತು ಶರತ್ ಋತುವಿನ ಪೂರ್ಣಚಂದ್ರನ ಕಾಂತಿಯು ನಳನ ಮುಖದ ದಾಸತ್ವವನ್ನು ಪಡೆದಿತ್ತು. [ಹೂ, ಚಿಗುರೆಲೆ ಮತ್ತು ಪೂರ್ಣಚಂದ್ರನನ್ನು ಕ್ರಮವಾಗಿ ತಿರಸ್ಕರಿಸಿದ್ದಾರೆ.] ಕಿಮಸ್ಯ ಲೋಮ್ನಾಂ ಕಪಟೇನ ಕೋಟಿಭಿರ್ವಿಧಿರ್ನ ಲೇಖಾಭಿರಜೀಗಣದ್ ಗುಣಾನ್ I ನ ರೋಮಕೂಪೌಘಮಿಷಾಜ್ಜತ್ಕೃತಾ ಕೃತಾಶ್ಚ ಕಿಂ ದೂಷಣಶೂನ್ಯಬಿನ್ದವಃ II೨೧II ಸಾವಿರಾರು [ರೇಖೆಗಳ] ನಳನ ಗುಣಗಳನ್ನು ಬ್ರಹ್ಮನು ಕೂದಲಿನ ರೂಪದಲ್ಲಿ ತುಂಬಿದ್ದನು. ಕೂದಲನ್ನು ಲೆಕ್ಕ ಹಾಕಲು ಸಾಧ್ಯವೇ?, ಕೂದಲುಗಳ[ಗುಣ] ಸಮೂಹದಲ್ಲಿ ದೋಷ ಎಂಬ ಪದಕ್ಕೆ ಅಭಾವ ಬಂದಿತ್ತು. ಅಮೂಷ್ಯ ದೋರ್ಭ್ಯಾಮರಿದುರ್ಗಲುಣ್ಠನೇ ಧ್ರುವಂ ಗೃಹಿತಾರ್ಗಲದೀರ್ಘಪೀನತಾ I ಉರಃಶ್ರಿಯಾ ತತ್ರ ಚ ಗೋಪುರಸ್ಫುರತ್ಕಪಾಟದುರ್ಧರ್ಷತಿರಃ ಪ್ರಸಾರಿತಾ II೨೨II ನಳನ ಭುಜ ಪರಾಕ್ರಮದಿಂದ ಶತ್ರುಗಳ ಅಭೇದವಾದ ಕೋಟೆಯನ್ನು ನಾಶ ಮಾಡಿದನು. ಗೆದ್ದ ರಾಜನ ಸೈನಿಕರು ಸೋತವರನ್ನು ಲೂಟಿ ಮಾಡುವುದು ಸಹಜ, ಅವನು[ನಳ] ಕೋಟೆಯ ಉದ್ದ, ಅಗಲವನ್ನು ಲೂಟಿ ಮಾಡಿ ತನ್ನ ಭುಜಗಳಲ್ಲಿ ಧರಿಸಿದನು. ಪುರದ್ವಾರದ ಧೃಡತೆ ಮತ್ತು ವಿಶಾಲತೆಯ ಕಾಂತಿಯನ್ನು ತನ್ನ ವಕ್ಷಃಸ್ಥಳದಲ್ಲಿ ಹೊಂದಿದನು. ಸ್ವಕೇಲಿಲೇಶಸ್ಮಿತನಿನ್ದಿತೇನ್ದುನೋ ನಿಜಾಂಶದೃಕ್ತಾರ್ಜಿತಪದ್ಮಸಂಪದಃ I ಅತದ್`ದ್ವಯೀಜಿತ್ವರಸುನ್ದರಾನ್ತರೇ ನ ತನ್ಮುಖಸ್ಯ ಪ್ರತಿಮಾ ಚರಾಚರೇ II೨೩II ತನ್ನ ವಿಲಾಸದ ಒಂದು ಅಂಶವಾದ [ನಳ] ಮಂದಹಾಸವು ಚಂದ್ರನ ಕಾಂತಿಯನ್ನು ತಿರಸ್ಕಾರ ಮಾಡುವಂತಿತ್ತು. ತನ್ನ ರೂಪದ ಒಂದು ಅಂಶವನ್ನು ಕಣ್ಣುಗಳೆರಡು ಕಮಲದ ಸೌಂದರ್ಯವನ್ನು ಕೆಳಮಟ್ಟಕ್ಕೆ ಮಾಡಿತ್ತು. ಅವನ ಮುಖಕ್ಕೆ ಸಮಾನ, ಅವೆರಡನ್ನು [ಕಮಲ ಮತ್ತು ಚಂದ್ರ] ಗೆಲ್ಲುವ ಬೇರೆ ಸುಂದರ [ಪದಾರ್ಥ] ಈ ಚರಾಚರಾತ್ಮಕ ಸಂಸಾರದಲ್ಲಿ ಯಾವುದಾದರು ಇದೆಯಾ. ಸರೋರುಹಂ ತಸ್ಯ ದೃಶೈವ ನಿರ್ಜಿತಂ ಜಿತಾಃ ಸ್ಮಿತೇನೈವ ವಿಧೋರಪಿ ಶ್ರಿಯಃ I ಕುತಃ ಪರಂ ಭವ್ಯಮಹೋ ಮಹೀಯಸೀ ತದಾನನಸ್ಯೋಪಮಿತೌ ದರಿದ್ರತಾ II೨೪II ನಳನ ಕಣ್ಣುಗಳು ಇಂದೀವರ ಪುಷ್ಪವನ್ನು ಸೋಲಿಸಿತ್ತು. ಅವನ ಮಂದಹಾಸವು ಚಂದ್ರನ ಕಾಂತಿಯನ್ನು ಗೆದ್ದಿತ್ತು. ಹೀಗಿರುವಾಗ[ಇವೆರಡಕ್ಕಿಂತ] ಮಿಗಿಲಾದ ಸೌಂದರ್ಯ ಎಲ್ಲಿದೆ? ಅದ್ದರಿಂದ ಅವನ ಮುಖಕ್ಕೆ ಸಮನಾದ ಬೇರೆ ಯಾವುದು ಇಲ್ಲ ಎನ್ನುವುದು ಸಿದ್ದವಾಗಿತ್ತು. ಇದು ಆಶ್ಚರ್ಯದ ಸಂಗತಿ. ಸ್ವವಾಲಭಾರಸ್ಯ ತದುಕ್ತಮಾಙ್ಗಜೈಃ ಸಮಂ ಚಮರ್ಯೇವ ತುಲಾಭಿಲಾಷಿಣಃ I ಅನಾಗಸೇ ಶಂಸತಿ ಬಾಲಚಾಪಲಂ ಪುನಃ ಪುನಃ ಪುಚ್ಛವಿಲೋಲನಚ್ಛಲಾತ್ II೨೫II ಚಮರಿ ಮೃಗದ ಕೂದಲು ನಳನ ಕೂದಲಿಗೆ ಸಮವಾಗಲು ಬಯಸಿತ್ತು. ಆದರೆ ಚಮರಿ ಮೃಗವು ಅಪರಾಧ ಭಾವವನ್ನು ಹೊಂದಿ ತನ್ನ ಬಾಲವನ್ನು ಆ ಕಡೆ ಈಕಡೆ ಆಡಿಸುತ್ತಿತ್ತು. ಮಹೀಭೃತಸ್ಯ ಚ ಮನ್ಮಥಶ್ರಿಯಾ ನಿಜಸ್ಯ ಚಿತ್ತಸ್ಯ ಚ ತಂ ಪ್ರತೀಚ್ಛಯಾ I ದ್ವಿಧಾ ನೃಪೇ ತತ್ರ ಜಗತ್ತ್ರಯೀಭುವಾಂ ನತಭ್ರುವಾಂ ಮನ್ಮಥವಿಭ್ರಮೋsಭವತ್ II೨೬II ನಳ ರಾಜನ ಕಾಂತಿ ಮತ್ತು ರೂಪದ ಕಾರಣ ಮತ್ತು ಅವನ ಮೇಲಿರುವ ಆಸೆಯಿಂದ[ಪ್ರೀತಿ] ಮೂರು ಲೋಕದ ಸುಂದರಿಯರು ಎರಡು ರೀತಿಯಲ್ಲಿ ಭ್ರಾಂತಿ [ಭ್ರಮೆ,ಮನಸ್ಸಿನ ವಿಕಾರ]ಹೊಂದಿದ್ದರು. ನಿಮೀಲನಭ್ರಂಶಜುಷಾ ದೃಶಾ ಭೃಶಂ ನಿಪೀಯ ತಂ ಯಸ್ತ್ರಿದಶೀಭಿರರ್ಜಿತಃ I ಅಮೂಸ್ತಮಭ್ಯಾಸಭರಂ ವಿವೃಣ್ವತೇ ನಿಮೇಷನಿಃಸ್ವೈರಧುನಾsಪಿ ಲೋಚನೈಃ II೨೭II ದೇವಾಂಗನೆಯರು ಕಣ್ಣು ಮಿಟುಕಿಸದೆ ಹಾಗೆಯೇ ಇರುತ್ತಿದ್ದರು. ಅವರು ಕಣ್ಣು ಮಿಟಕಿಸದೆ ಹಾಗೆಯೇ ನಳನನ್ನೇ ಚೆನ್ನಾಗಿ ನೋಡುವ ಅಭ್ಯಾಸ ಮಾಡಿಕೊಂಡಿದ್ದರು, ಅವರು ಈಗಲೂ ಕಣ್ಣು ಮಿಟಕಿಸದೆ ಒಂದು ಕ್ಷಣ ಕಾಲವು ವ್ಯರ್ಥ ಮಾಡದೆ ಹಾಗೆಯೇ ಅಭ್ಯಾಸ ಮುದುವರೆಸುತ್ತಿದ್ದಾರೆ. ಅದಸ್ತದಾಕರ್ಣಿ ಫಲಾಡ್ಯಜೀವಿತಂ ದೃಶೋರ್ದ್ವಯಂ ನಸ್ತದವೀಕ್ಷಿ ಚಾಫಲಮ್ I ಇತಿ ಸ್ಮ ಚಕ್ಷುಃಶ್ರವಸಾಂ ಪ್ರಿಯಾ ನಲೇ ಸ್ತುವನ್ತಿ ನಿನ್ದನ್ತಿ ಹೃದಾ ತದಾತ್ಮನಃ II೨೮II ನಾಗ ಕನ್ಯೆಯರು ತಮ್ಮ ಎರಡೂ ಕಣ್ಣುಗಳಿಂದ ನಳನ ಗುಣಗಳನ್ನು ಕೇಳಿ ತಮ್ಮ ಜೀವನ ಸಾರ್ಥಕವಾಯಿತೆಂದು, ಅವನನ್ನು ನೋಡದೆ ಇರುವುದರಿಂದ ತಮ್ಮ ಜೀವನ ವ್ಯರ್ಥವಾಯಿತೆಂದು. ತಮ್ಮನ್ನು ತಾವೆ ನಿಂದಿಸಿಕೊಂಡರು ಹಾಗೆಯೇ ಪ್ರಶಂಸಿಸಿಕೊಂಡರು. ವಿಲೋಕಯನ್ತೀಭಿರಜಸ್ರಭಾವನಾಬಲಾದಮ್ಮುಂ ನೇತ್ರ ನಿಮೀಲನೇಷ್ವಪಿ I ಅಲಮ್ಭಿ ಮರ್ತ್ಯಾಭಿರಮುಷ್ಯ ದರ್ಶನೇ ನ ವಿಘ್ನಲೇಶೋsಪಿ ನಿಮೇಷನಿರ್ಮಿತಃ II೨೯II ನಿರಂತರವಾಗಿ ಅವನ ಧ್ಯಾನದಲ್ಲೇ ಇರುವ ಸ್ತ್ರೀಯರಿಗೆ ಕಣ್ಣು ಮುಚ್ಚಿದರೂ ಅವನೇ ಕಾಣುವುದರಿಂದ ಒಂದು ಕ್ಷಣವೂ ವ್ಯರ್ಥವಾಗುತ್ತಿರಲ್ಲವಲ್ಲಾ. ಕಣ್ಣು ಮಿಟುಕಿಸಿದಾಗ ಒಂದು ಕ್ಷಣ ವಿಘ್ನವಾಯಿತೆಂದು ಅನ್ನಿಸುತ್ತಿರಲಿಲ್ಲ. ನ ಕಾ ನಿಶಿ ಸ್ವಪ್ನಗತಂ ದದರ್ಶ ತಂ ಜಗಾದ ಗೋತ್ರಸ್ಖಲಿತೇ ಚ ಕಾ ನ ತಮ್ I ತದಾತ್ಮತಾಧ್ಯಾತಧವಾ ರತೇ ಚ ಕಾ ಚಕಾರ ವಾ ನ ಸ್ವಮನೊಭವೋದ್ಭವಮ್ II೩೦II ಯಾವ ಸ್ತ್ರೀಯರು ರಾತ್ರಿ ಕನಸಿನಲ್ಲಿ ನಳನನ್ನು ನೋಡದೆ ಇರುತ್ತಿದ್ದರು? ಯಾವ ಸ್ತ್ರೀಯರು ಉಚ್ಛಾರಣೆ ಮಾಡುವಾಗ ನಳನ ಹೆಸರನ್ನು ಮರೆಯದೆ ಇರುತ್ತಿದ್ದರು? ಯಾವ ಸ್ತ್ರೀಯರು ತಮ್ಮ ಪತಿಯ ಒಡನಾಟದಲ್ಲಿಯೂ[ರಾಸಕ್ರೀಡೆ] ನಳನನ್ನೇ ಕಾಣದಿರುತ್ತಿದ್ದರು? ಶ್ರಿಯಾಸ್ಯ ಯೋಗ್ಯಾಹಮಿತಿ ಸ್ವಮೀಕ್ಷಿತುಂ ಕರೇ ತಮಾಲೋಕ್ಯ ಸುರೂಪಯಾ ಧೃತಃ I ವಿಹಾಯ ಭೈಮೀಮಪದರ್ಪಯಾ ಕಯಾ ನ ದರ್ಪಣಃ ಶ್ವಾಸಮಲೀಮಸಃ ಕೃತಃ II೩೧II ನಳನನ್ನು ನೋಡಿ "ಸೌಂದರ್ಯದಲ್ಲಿ ಅವನ ಸಮನಾದ ಸೌಂದರ್ಯ ತಮಗಿದೆಯೇ?" ಎಂದು ಯೋಚಿಸುತ್ತಾ ದರ್ಪಣವನ್ನು ಕೈಯಲ್ಲಿ ಹಿಡಿದ ದರ್ಪಣಸುಂದರಿ [ದಮಯಂತಿ]ಯನ್ನು ಬಿಟ್ಟು, ಬೇರೆ ಯಾವ ಸುಂದರಿಯರು[ಸೌಂದರ್ಯ] ಅಭಿಮಾನ ಕಳೆದುಕೊಂಡು ನಿಃಶ್ವಾಸದಿಂದ ಮಲಿನ ಮಾಡದೆ ಇರುತ್ತಿದ್ದರು? ಯಥೋಹ್ಯಮಾನಃ ಖಲು ಭೋಗಭೋಜಿನಾ ಪ್ರಸಹ್ಯವೈರೋಚನಿಜಸ್ಯ ಪತ್ತನಮ್ I ವಿದರ್ಭಜಾಯಾ ಮದನಸ್ತಥಾ ಮನೋ ನಲಾವರುದ್ಧಂ ವಯಸೈವ ವೇಶಿತಃ II೩೨II ಹಾವನ್ನು ಹಿಡಿದು ತಿನ್ನುವ ಭೋಗಭೋಜಿ[ಗರುಡ]ಯ ಮುಖಾಂತರ ಮದನ ನನ್ನು[ಪ್ರದ್ಯುಮ್ನ] ಅಪಹರಿಸಿ ಅನಲ[ಅಗ್ನಿ]ದಿಂದ ಆವರಿಸಿರುವ ಬಾಣಾಸುರನ ನಗರ ಶೋಣಿತಪುರದ ಕೋಟೆಯಲ್ಲಿ ಕಾಯುತ್ತಿರುವಾಗ, ಭೋಗಭೋಜಿ[ಸುಖವಾಗಿರುವವರು]ಯ ಮುಖಾಂತರ ತಿಳಿದುಕೊಂಡು ಅವರು[ಯೌವನ] ಬಲವಂತವಾಗಿ ಪ್ರವೇಶಿಸಿದ ಹಾಗೆ ಮದನ[ಮನ್ನಸ್ಸು ಚಂಚಲಗೊಂಡ] ನಲನಿಂದ ಆವರಿಸಲ್ಪಟ್ಟ ದಮಯಂತಿಯ ಮನಸ್ಸನ್ನು ಪ್ರವೇಶ ಮಾಡಿತು. ನೃಪೇsನುರೂಪೇ ನಿಜರೂಪಸಂಪದಾಂ ದಿದೇಶ ತಸ್ಮಿನ್ ಬಹುಶಃ ಶ್ರುತಿಂ ಗತೇ I ವಿಶಿಷ್ಯ ಸಾ ಭೀಮನರೇಂದ್ರನನ್ದನಾ ಮನೋಭವಾಶೈಕವಶಂವದಂ ಮನಃ II೩೩II ಭೀಮರಾಜನ ಮಗಳು [ದಮಯಂತಿ] ಪುನಃ ಪುನಃ ಕೇಳುವುದರಿಂದ, ಮತ್ತು ತನ್ನ ಸೌಂದರ್ಯಕ್ಕೆ ಅನುರೂಪನಾದ[ಯೋಗ್ಯ] ರಾಜ[ನಳ] ನಲ್ಲಿ ಮನ್ಮಥನ ಆಸೆಗೆ ಅಧೀನಳಾದಳು. ಅವಳ ಮನಸ್ಸಿನಲ್ಲಿ ಅವನ ಬಗ್ಗೆ ಹೆಚ್ಚು ಆಸಕ್ತಿ ಮೂಡಿತು. ಉಪಾಸನಾಮೇತ್ಯ ಪಿತುಃ ಸ್ಮ ರಜ್ಯತೇ ದಿನೇ ದಿನೇ ಸಾವಸರೇಷು ವನ್ದಿನಾಮ್ I ಪಠತ್ಸು ತೇಷು ಪ್ರತಿ ಭೂಪತೀನಲಂ ವಿನಿದ್ರರೋಮಾಜನಿ ಶೃಣ್ವತೋ ನಲಮ್ II೩೪II ಪ್ರತಿದಿನ ತನ್ನ ತಂದೆಯ ಜೊತೆಯಲ್ಲಿ ಬರುತ್ತಿದ್ದ ದಮಯಂತಿಯು ಸ್ತುತಿ ಪಾಠಕರ ಮೇಲೆ ಆಸಕ್ತಿವಹಿಸಿದಳು. ರಾಜರ ವಿಷಯವನ್ನು ಹೇಳುವಾಗ, ಅದರಲ್ಲಿಯು ನಳನ ಶೌರ್ಯ ಮತ್ತು ವಿಶೇಷ ಗುಣಗಳನ್ನು ಹೇಳುವಾಗ ಹೆಚ್ಚು ಆಸಕ್ತಿಯಿಂದ ಕೇಳುತ್ತಾ ರೋಮಾಂಚನಗೊಳುತ್ತಿದ್ದಳು. ಕಥಾಪ್ರಸಙ್ಗೇಷು ಮಿಥಃ ಸಖೀಮುಖಾತ್ ತೃಣೇsಪಿ ತನ್ವ್ಯಾ ನಲನಾಮನಿ ಶ್ರುತೇ I ದ್ರುತಂ ವಿಧೂಯಾನ್ಯದಭೂಯತಾನಯಾ ಮುದಾ ತದಾಕರ್ಣನಸಜ್ಜಕರ್ಣಯಾ II೩೫II ಸಖಿಯರು ಪರಸ್ಪರ ಮಾತನಾಡುವಾಗ ಒಂದು ಹುಲ್ಲುಕಡ್ಡಿಯಷ್ಟು ನಳನ ವಿಷಯ ಕೇಳಿಸಿದರೂ ತತ್`ಕ್ಷಣವೇ ಬೇರೆ ಕೆಲಸ ಅಥವಾ ಮಾತು ಬಿಟ್ಟ ಸಂತೋಷದಿಂದ ಆ ಮಾತುಗಳನ್ನು ಕಿವಿ ದೊಡ್ಡದು ಮಾಡಿ ಕೇಳುತ್ತಿದ್ದಳು. ಸ್ಮರಾತ್ಪರಾಸೋರನಿಮೇಷಲೋಚನಾದ್ ಬಿಭೇಮಿ ತದ್ಭಿನ್ನಮುದಾಹರೇತಿ ಸಾ I ಜನೇನ ಯೂನಃ ಸ್ತುವತಾ ತದಾಸ್ಪದೇ ನಿದರ್ಶನಂ ನೈಷಧಮಭ್ಯಷೇಚಯತ್ II೩೬II "ಸತ್ತಿರುವ, ಕಣ್ಣನ್ನು ಮಿಟಕಿಸದೆ ಇರುವ ಮನ್ಮಥನಿಗೆ ಹೆದರುವೆನೇ, ಎನ್ನುವ ಹಾಗೆ" ಬೇರೆ ಬೇರೆ ರಾಜಕುಮಾರರ ಪ್ರಶಂಸೆ ಮಾಡುತ್ತಾ ಸಖಿಯರಲ್ಲಿ ಹೇಳುತ್ತಿದ್ದ ಬೇರೆ ಯುವಕರಲ್ಲಿಯು ನಳನನ್ನೇ ಊಹಿಸಿಕೊಳುತ್ತಾ, ಅವನ ಬಗ್ಗೆ ಯೋಚಿಸುತ್ತಿದ್ದಳು. ನಲಸ್ಯ ಪೃಷ್ಟಾ ನಿಷಧಾಗತಾ ಗುಣಾನ್ ಮಿಷೇಣ ದೂತದ್ವಿಜವನ್ದಿಚಾರಣಾಃ I ನಿಪೀಯ ತತ್ಕೀರ್ತಿಕಥಾಮಥಾನಯಾ ಚಿರಾಯ ತಸ್ಥೆ ವಿಮನಾಯಮಾನಯ II೩೭II ನಿಷಧ ದೇಶದಿಂದ ಬಂದಂತ ದೂತರು, ಬ್ರಾಹ್ಮಣರು, ಸ್ತುತಿ ಪಾಠಕರು ಮುಂತಾದವರು ಯಾರೇ ಆಗಲಿ ನಳನ ವಿಶೇಷ ಗುಣಗಳಿಗೆ ಸಂಬಂಧ [ದಮಯಂತಿಯ] ಕೇಳುತ್ತಿದ್ದಳು, ಅನಂತರ ಅವರು ಹೇಳಿದ ವಿಷಯಗಳನ್ನು ಯೋಚಿಸುತ್ತಾ ಅನ್ಯಮನಸ್ಕಳಾಗಿ ನಿಂತಿರುತ್ತಿದ್ದಳು. ಪ್ರಿಯ ಪ್ರಿಯಾಂ ಚ ತ್ರಿಜಗಜ್ಜಯಶ್ರಿಯೌ ಲಿಖಾಧಿಲೀಲಾಗೃಹಭಿತ್ತಿ ಕಾವಪಿ I ಇತಿ ಸ್ಮ ಸಾ ಕಾರುವರೇಣ ಲೇಖಿತಂ ನಲಸ್ಯ ಚ ಸ್ವಸ್ಯ ಚ ಸಖ್ಯಮೀಕ್ಷತೇ II೩೮II ದಮಯಂತಿಯು ಚಾತುರ್ಯತೆಯಿಂದ "ತನ್ನ ಕ್ರೀಡಾಗೃಹದ ಗೋಡೆಯ ಮೇಲೆ ಮೂರು ಲೋಕವನ್ನು ಸೋಲಿಸುವಂತ, ಸುಂದರವಾದ ಪ್ರಿಯ ಮತ್ತು ಪ್ರೇಯಸಿಯ ಚಿತ್ರವನ್ನು ಬಿಡಿಸಿ" ಎಂದು ಚತುರ ಕಲಾಕಾರರಿಗೆ ಆಙ್ಞೆ ಮಾಡಿದಳು. ಅವರು ಬಿಡಿಸಿದ ಚಿತ್ರದಲ್ಲಿ ತನ್ನ ಮತ್ತು ನಳನನ್ನು ಸಾಮ್ಯತೆಯನ್ನು ನೋಡುತ್ತಿದ್ದಳು. ಮನೋರಥೇನ ಸ್ವಪತೀಕೃತಂ ನಲಂ ನಿಶಿ ಕ್ವ ಸಾ ನ ಸ್ವಪತೀ ಸ್ಮ ಪಶ್ಯತಿ I ಅದೃಷ್ಟಮಪ್ಯರ್ಥಮದೃಷ್ಟವೈಮವಾತ್ ಕರೋತಿ ಸುಪ್ತಿರ್ಜನದರ್ಶನಾತಿಥಿಮ್ II೩೯II ರಾತ್ರಿ ಹೋತ್ತು ನಿದ್ದೆಯಲ್ಲಿ ದಮಯಂತಿಯು ಇಚ್ಛೆಯಿಂದ ತನ್ನ ಪತಿಯೆಂದು ತಿಳಿದು ನಳನನ್ನು ಯಾವ ರಾತ್ರಿ ನೋಡದೆ ಇರುತ್ತಿದ್ದಳು? ಸ್ವಪ್ನವು ಹಿಂದಿನ ಜನ್ಮದ ಕರ್ಮದ ಪ್ರಭಾವದಿಂದ ನೋಡದೆ ಇರುವ ವಸ್ತುಗಳೂ ದೃಷ್ಟಿಗೋಚರವಾಗುತ್ತದೆ. ನಿಮೀಲಿತಾದಕ್ಷಿಯುಗಾಚ್ಚ ನಿದ್ರಯಾ ಹೃದೋsಪಿ ಬಾಹ್ಯೇನ್ದ್ರಿಯಮೌನಮುದ್ರಿತಾತ್ I ಅದಶ್ರಿ ಸಂಗೋಪ್ಯ ಕದಾಪ್ಯವೀಕ್ಷಿತೋ ರಹಸ್ಯಮಸ್ಯಾಃ ಸ ಮಹನ್ಮಹೀಪತಿಃ II೪೦II ಮುಚ್ಚಿದ ಎರಡು ಕಣ್ಣುಗಳು, ಮೌನವಾಗಿರುವ [ಸುಪ್ತಾವಸ್ಥೆ] ಇಂದ್ರಿಯಗಳು, ನಿದ್ರಾವಸ್ಥೆಯಲ್ಲಿರುವ ದಮಯಂತಿಗೆ ಹಿಂದೆ ಎಂದೂ ಕಾಣದಂತಹ ನಳ ರಾಜನ ಸುಂದರವಾದ ರೂಪವು ಕಾಣಿಸಿತು. ಅಹೋ ಅಹೋಭಿರ್ಮಹಿಮಾ ಹಿಮಾಗಮೇsಪ್ಯಮಿಪ್ರಪೇದೇ ಪ್ರತಿ ತಾಂ ಸ್ಮರಾದ್ರಿತಾಮ್ I ತಪರ್ತುಪೂರ್ತಾವಪಿ ಮೇದಸಾಂ ಭರಾ ವಿಭಾವರೀಮಿರ್ಬಿಮರಾಂಬಭೂವಿರೇ II೪೧II ಆಶ್ಚರ್ಯದ ವಿಷಯವೆಂದರೆ ದಮಯಂತಿಗೆ ಚಳಿಗಾಲದಲ್ಲಿ[ಹೇಮಂತ ಋತು] ಹಗಲು ದೊಡ್ಡದಾಗಿಯೂ, ಬೇಸಿಗೆ ಕಾಲದಲ್ಲಿ [ವಸಂತ ಋತು] ರಾತ್ರಿಯು ದೊಡ್ಡದಾಗಿಯೂ ಇರುತ್ತಿತ್ತು, ಏಕೆಂದರೆ ದಮಯಂತಿಯು ಸದಾಕಾಲ ನಳನ ಧ್ಯಾನದಲ್ಲೇ ಇರುವುದರಿಂದ ಅವಳಿಗೆ ಹಾಗೆ ತೋರುತ್ತಿತ್ತು. ಸ್ವಕಾನ್ತಿಕೀರ್ತಿವ್ರಜಮೌಕ್ತಿಕಸ್ರಜಃ ಶ್ರಯನ್ತಮನ್ತರ್ಘಟನಾಗುಣಶ್ರಿಯಮ್ I ಕದಾಚಿದಸ್ಯಾ ಯುವಧೈರ್ಯಲೋಪಿನಂ ನಲೋsಪಿ ಲೋಕಾದಶೃಣೋದ್ ಗುಣೋತ್ಕರಮ್ II೪೨II ಅದೇ ವೇಳೆಯಲ್ಲಿ ನಳನಿಗೂ ಸಾಮಾನ್ಯ ಯುವಕರಲ್ಲಿ ಆಗುವಂತಹ ಮನಸ್ಸಿನ ಚಂಚಲತೆಯು ಪ್ರಾರಂಭವಾಯಿತು. ಅವನ ಧೈರ್ಯ, ಯಶಸ್ಸನ್ನು ದುರ್ಬಲಗೊಳಿಸುವಂತಾಯಿತು. ಯಶಸ್ಸು ಎಂಬ ಮುತ್ತಿನ ಹಾರದ ಹಾರವು ಸಡಿಲಗೊಂಡಿತ್ತು, ನಳನು ದಮಯಂತಿಯ ಗುಣದ ಬಗ್ಗೆ ಬೇರೆಯವರಿಂದ ಕೇಳಿದ್ದನು. ತಮೇವ ಲಬ್ದ್ವಾವಸರಂ ತತಃ ಸ್ಮರಃ ಶರೀರಶೋಭಾಜಯಜಾತಮತ್ಸರಃ I ಅಮೋಘಶಕ್ತ್ಯಾ ನಿಜಯೇವ ಮೂರ್ತಯಾ ತಯಾ ವಿನಿರ್ಜೇತುಮಿಯೇಷ ನೈಷಧಮ್ II೪೩II ಅನಂತರ ಅವನ ಶರೀರದ ಶೋಭೆಯಿಂದ ಪರಾಜಯ ಹೊಂದಿದ ಮನ್ಮಥನು ಅಸೂಯೆಯಿಂದ ಅವನ ಮೇಲೆ ವಿಜಯ ಸಾದಿಸಲು ಅವಸರಕ್ಕಾಗಿ ಕಾಯುತ್ತಿದ್ದನು.ದಮಯಂತಿಯ ಮುಖಾಂತರ ಮನ್ಮಥನಿಗೆ ಅವಸರ ಸಿಕ್ಕಾಗ ಅವನ[ನಳ] ಮೇಲೆ ತನ್ನ ಸಾರ್ಮಥ್ಯವನ್ನೆಲ್ಲ ಪ್ರಯೋಗಿಸಿ ಅವನ ಮನಸ್ಸನ್ನು ಚಂಚಲವಾಗುವಂತೆ ಮಾಡಿದ್ದನು. ಅಕಾರಿ ತೇನ ಶ್ರವಣಾತಿಥಿರ್ಗುಣಃ ಕ್ಷಮಾಭುಜಾ ಭೀಮನೃಪಾತ್ಮಜಾಲಯಃ I ತದುಚ್ಚಧೈರ್ಯವ್ಯಯಸಂಹಿತೇಷುಣಾ ಸ್ಮರೇಣ ಚ ಸ್ವಾತ್ಮಶರಾಸನಾಶ್ರಯಃ II೪೪II ರಾಜ ಭೀಮನ ಮಗಳಾದ ದಮಯಂತಿಯಲ್ಲಿರುವ ಗುಣ, ಸೌಂದರ್ಯವು ನಳನ ಮನಸ್ಸಿನಲ್ಲಿ ಮನೆ ಮಾಡಿತು. ಅವನ ಧೈರ್ಯ ನಾಶಗೊಳಿಸಲು, ಕಾಮದೇವನು ತನ್ನ ಕೈಯಲ್ಲಿ ಸುಂದರವಾದ ಧನುಸ್ಸಿಗೆ ಬಾಣವನ್ನು ಹೂಡಿ ಅದನ್ನು ಎಳೆದು ನಳನನ್ನು ತನ್ನ ಅತಿಥಿಯನ್ನಾಗಿ ಮಾಡಿಕೊಂಡನು. ಅಮುಷ್ಯ ಧೀರಸ್ಯ ಜಯಾಯ ಸಾಹಸಿ ತದಾ ಖಲು ಜ್ಯಾಂ ವಿಶಿಖೈಃ ಸನಾಥಯನ್ I ನಿಮಜ್ಜಯಾಮಾಸ ಯಶಾಂಸಿ ಸಂಶಯೇ ಸ್ಮರಸ್ತ್ರಿಲೋಕೀವಿಜಯಾರ್ಜಿತಾನ್ಯಪಿ II೪೫ II ಸಾಹಸಿ ಕಾಮದೇವನು ಧೀರ ನಳನನ್ನು ಗೆಲ್ಲಲ್ಲು ಧನುಸ್ಸಿಗೆ ಬಾಣಗಳನ್ನು ಹೂಡಿದನು,ಮೂರು ಲೋಕಗಳನ್ನು ಗೆದ್ದು ಸಾಧಿಸಿ ಪಡೆದಂತಹ ಯಶಸ್ಸಿನ ಬಗ್ಗೆ ಸಂಶಯ ಪಡುವಂತಾಯಿತು. ಅನೇನ ಭೈಮೀಂ ಘಟಯಿಷ್ಯತಸ್ತಥಾ ವಿಧೇರವನ್ಧ್ಯೆಚ್ಛತಯಾ ವ್ಯಲಾಸಿ ತತ್ I ಅಭೇದಿ ತತ್ತಾದೃಗನಙ್ಗಮಾರ್ಗಣೈರ್ಯದಸ್ಯ ಪೌಷ್ಪೈರಪಿ ಧೈರ್ಯಕಞ್ಚುಕಮ್ II೪೬II ಮನ್ಮಥನ ಹೂ ಬಾಣದಿಂದ ನಳನ ಧೈರ್ಯವೆಂಬ ಕವಚವು ಒಡೆದು ದಮಯಂತಿಯಲ್ಲಿ ಹೆಚ್ಚು ಆಸಕ್ತಿಯು ತೋರುವಂತಾಯಿತು. ವಿಧಾತನು ನಳ ಮತ್ತು ದಮಯಂತಿಯರನ್ನು ಒಂದು ಮಾಡಲು ಇಚ್ಚಿಸಿದಾಗ ಅದನ್ನು ವಿಫಲ ಮಾಡಲು ಯಾರಿಗೂ ಸಾಧ್ಯವಿಲ್ಲ. ಕಿಮನ್ಯದಧ್ಯಾಪಿ ಯದಸ್ತ್ರತಾಪಿತಃ ಪಿತಾಮಹೋ ವಾರಿಜಮಾಶ್ರಯತ್ಯಹೋ I ಸ್ಮರಂ ತನುಚ್ಛಾಯತಯಾ ತಮಾತ್ಮನಃ ಶಶಾಕ ಶಙ್ಕೇ ಸ ನ ಲಙ್ಘಿತುಂ ನಲಃ II೪೭II ಮತ್ತೆ ಹೇಳುವುದೇನಿದೆ? ಯಾರ ಬಾಣಗಳಿಗೆ ಬಲಿಯಾದಂತಹ[ಯುವಕರು,ವೃದ್ಧರು] ವಿರಹ ವೇದನೆಯನ್ನು ನೋಡಲಾರದೆ ಬ್ರಹ್ಮನು ಅಂದಿನಿಂದ ಇಂದಿನವರೆಗೆ ಕಮಲವನ್ನು ಆಶ್ರಯಿಸಿ ಅಲ್ಲಿಯೇ ಕುಳಿತಿದ್ದಾನೆ. [ಬ್ರಹ್ಮದೇವರು ಸದಾ ಕಮಲಾಸನದಲ್ಲಿ ಕುಳಿತು ಕೊಳ್ಳುವುದರಿಂದ, ಬ್ರಹ್ಮದೇವರು ವಿರಹ ವೇದನೆಯನ್ನು ತಾಳಲಾರದೆ ಕಮಲಾಸನದಲ್ಲಿ ಕುಳಿತ್ತಿದ್ದಾರೆ ಎಂದು ಕವಿಯು ಊಹೆ ಮಾಡಿದ್ದಾನೆ] ಹೀಗಿರುವಾಗ ಮನ್ಮಥನ ಬಾಣಕ್ಕೆ ಬಲಿಯಾದ ನಳಮಹಾರಾಜನ ದೇಹದ ಕಾಂತಿಯು ಸ್ವಲ್ಪ ಕುಗ್ಗಿದ ಕಾರಣ ಗೆಲ್ಲಲು ಸಾಧ್ಯವಾಗಲಿಲ್ಲ. ಉರೋಭುವಾ ಕುಮ್ಭಯುಗೇನ ಜೃಮ್ಭಿತಂ ನವೋಪಹಾರೇಣ ವಯಸ್ಕೃತೇನ ಕಿಮ್ I ತ್ರಪಾಸರಿದ್ ದುರ್ಗಮಪಿ ಪ್ರತೀರ್ಯ ಸಾ ನಲಸ್ಯ ತನ್ವೀ ಹೃದಯಂ ವಿವೇಶ ಯತ್ II೪೮II ಸುಂದರಳೂ, ನಾಚಿಕೆ ಸ್ವಭಾವದವಳಾದ ದಮಯಂತಿಯು ಕಷ್ಟಕರವಾದ ನದಿಯನ್ನು ದಾಟಿ ನಳನ ಹೃದಯವನ್ನು ಪ್ರವೇಶಿಸಿದಳು. ತನ್ನ ತಾರುಣ್ಯದ ಸೊಭಗಿನಿಂದ ಹೊಸ ಕೊಡುಗೆಯಾಗಿ ವಕ್ಷಃಸ್ಥಳದ ಮೇಲೆ ಇರುವ ಕಲಶಗಳೆರಡು ಈ ಕೆಲಸ ಮಾಡಿದ್ದವು. ಅಪಹ್ನುವಾನಸ್ಯ ಜನಾಯ ಯನ್ನಿಜಾಮಧೀರತಾಮಸ್ಯ ಕೃತಂ ಮನೋಭುವಾ I ಅಬೋಧಿ ತಜ್ಜಾಗರದುಃಖಸಾಕ್ಷಿಣೀ ನಿಶಾ ಚ ಶಯ್ಯಾ ಚ ಶಶಾಙ್ಕಕೋಮಲಾ II೪೯II ಜನರಲ್ಲಿ ತನ್ನ ಮನಸ್ಸಿನ ಚಂಚಲತೆಯನ್ನು ಬಚ್ಚಿಡಲು ನಳನು ಪ್ರಯತ್ನ ಪಟ್ಟನು. ಚಂದ್ರನಲ್ಲಿರವ, ಮೊಲದ ಚಿಹ್ನೆಯನ್ನು ಮುಚ್ಚಿಡಲು ಸಾಧವಿಲ್ಲವೋ, ಹಾಗೆಯೇ ಕೋಮಲವಾದ ಹಾಸಿಗೆಯಲ್ಲಿ ಮಲಗಿದರೂ ನಿದ್ರೆಯಿಲ್ಲದೆ ವಿರಹದಿಂದ ಕಳೆದ ರಾತ್ರಿಗಳಿಗೆ ಚಂದ್ರನಲ್ಲಿರುವ ಮೊಲದ ಚಿಹ್ನೆಯೇ ಸಾಕ್ಷಿಯಾಗಿತ್ತು. ಸ್ಮರೋಪತಪ್ತೋsಪಿ ಭೃಶಂ ನ ಸ ಪ್ರಭುರ್ವಿದರ್ಭರಾಜ ತನಯಾಮಯಾಚತ್ I ತ್ಯಜನ್ತ್ಯಸೂನ್ ಶರ್ಮ ಚ ಮಾನಿನೋ ವರಂ ತ್ಯಜನ್ತಿ ನ ತ್ವೆಕಮಯಾಚಿತವ್ರತಮ್ II೫೦II ಮನ್ಮಥನಿಂದ ಪೀಡಿತನಾಗಿದ್ದ ನಳನು ತನ್ನ ವಿರಹವನ್ನು ಸಹಿಸಿಕೊಂಡನು. ಅವನು ವಿದರ್ಭರಾಜನಾದ ಭೀಮನಲ್ಲಿ ದಮಯಂತಿಯನ್ನು ಯಾಚಿಸಲಿಲ್ಲ, ಆತ್ಮಾಭಿಮಾನವುಳ್ಳವರು ತಮ್ಮ ಸುಖ ಮತ್ತು ಪ್ರಾಣವನ್ನು ತ್ಯಜಿಸಲು ಇಷ್ಟ ಪಡುವರೇ ಹೊರತು ಯಾಚನೆ ಮಾಡುವಂತಹ ವೃತ್ತಿ ಮಾಡುವುದಿಲ್ಲ. ಮೃಷಾವಿಷಾದಾಭಿನಯಾದಯಂ ಕ್ವಚಿಜ್ಜುಗೋಪ ನಿಃಶ್ವಾಸತತಿಂ ವಿಯೋಗಜಾಮ್ I ವಿಲೇಪನಸ್ಯಾಧಿಕಚಂದ್ರಭಾಗತಾವಿಭಾವನಾಚಾಪಲಲಾಪ ಪಾಣ್ಡುತಾಮ್ II೫೧II ನಳನು ಯಾವುದೇ ವಸ್ತುಗಳಲ್ಲಿ ಸುಮ್ಮ ಸುಮ್ಮನೆ ಅದು ಸರಿ ಇಲ್ಲವೆಂದು ಹೇಳುತ್ತಾ, ತನ್ನ ವಿರಹ ವೇದನೆಯನ್ನು ಬಚ್ಚಿಡಲು ಪ್ರಯತ್ನಿಸುತ್ತಾನೆ. ಚಂದನದಲ್ಲಿ ಕರ್ಪೂರದ ಭಾಗ ಹೆಚ್ಚಾದುದರಿಂದ ಚಂದನ ಲೇಪನದಿಂದ ಮುಖ ಬಿಳುಪಾಯಿತೆಂದು ಹೇಳುತ್ತಿದ್ದನು. ಶಶಾಕ ನಿನ್ಹೋತುಮಯೇನ ತತ್ಪ್ರಿಯಾಮಯಂ ಬಭಾಷೇ ಯದಲೀಕವೀಕ್ಷಿತಾಮ್ I ಸಮಾಜ ಎವಾಲಪಿತಾಸು ಬೈಣಿಕೈರ್ಮುಮೂರ್ಚ್ಛ ಯತ್ಪಞ್ಚಮಮೂರ್ಚ್ಛನಾಸು ಚ II೫೨II ನಳನು ದಮಯಂತಿಯು ಇಲ್ಲದಿದ್ದರೂ ಇರುವಳೆಂದು ತಿಳಿದು ಮಾತನಾಡುತ್ತಾನೆ. ವೀಣಾವಾದಿಗಳಲ್ಲಿ ಪಂಚಮ ಸ್ವರದ ಆರೋಹಣ ಅವರೋಹಣ ನುಡಿಸಲು ಹೇಳಿ, ಕೇಳುತ್ತಾ ಸಭೆಯಲ್ಲಿ ಮೂರ್ಛೆ ಹೋಗುತ್ತಾನೆ. ಇದನ್ನು ಅವನು ಭಾಗ್ಯದಿಂದ ಯಾರಿಗೂ ತಿಳಿಯದಂತೆ ಮುಚ್ಚಿಡುತ್ತಿದ್ದನು. ಅವಾಪ ಸಾಪತ್ರಪತಾಂ ಸ ಭೂಪತಿರ್ಜಿತೇನ್ದ್ರಿಯಾಣಾಂ ಧುರಿ ಕೀರ್ತಿತಸ್ಥಿತಿಃ I ಅಸಂವರೇ ಶಮ್ಬರವೈರಿವಿಕ್ರಮೇ ಕ್ರಮೇಣ ತತ್ರ ಸ್ಫುಟತಾಮುಪೇಯುಷಿ II೫೩II ಇಂದ್ರಿಯಗಳನ್ನು ಗೆದ್ದವರಲ್ಲಿ ಮೊದಲ ಸ್ಥಾನ ಪಡೆದ ರಾಜ ನಳನು ತನ್ನ ವೇದನೆಯನ್ನು ಬಚ್ಚಿಡಲು ಆಗದೆ, ಸಭೆಯಲ್ಲಿ ಅದು ಕ್ರಮವಾಗಿ ಪ್ರಕಟಗೊಂಡಾಗ ನಾಚಿಕೆಯಿಂದ ತಲೆ ಬಗ್ಗಿಸಿ ಕುಳತು ಕೋಳ್ಳುತ್ತಾನೆ. ಅಲಂ ನಲಂ ರೋದ್ಧುಮಮೀ ಕಿಲಾಭವನ್ಗುಣಾ ವಿವೇಕಪ್ರಮುಖಾ ನ ಚಾಪಲಮ್ I ಸ್ಮರ ಸಃ ರತ್ಯಾಮನಿದ್ಧಮೇವ ಸೃಜತ್ಯಯಂ ಸರ್ಗನಿಸರ್ಗ ಈದೃಶಃ II೫೪II ವಿವೇಕ, ಧೈರ್ಯ ಮುಂತಾದ ಒಳ್ಳೆಯ ಗುಣಗಳಿದ್ದರೂ ಅವನ [ನಳ] ಮನಸ್ಸಿನ ಚಂಚಲತೆಯನ್ನು ತಡೆಯಲಾಗದೆ ಹೋದವು. ಅವನ ಮನಸ್ಸಿನಲ್ಲಿ ಮೂಡಿದ ಅನುರಾಗವು ತನ್ನ ಕೆಲಸ [ಮನುಷ್ಯನನ್ನು] ಮಾಡುವುದು ಸೃಷ್ಠಿಯ ಸಹಜ ಸ್ವಭಾವ. ಅನಙ್ಗಚಿನ್ಹಂ ಸ ಬಿನಾ ಶಶಾಕ ನೋ ಯದಾಸಿತುಂ ಸಂಸದಿ ಯತ್ನವಾನಪಿ I ಕ್ಷಣಂ ತದಾರಾಮವಿಹಾರಕೈತವಾನ್ನಿಷೇವಿತು ದೇಶಮಿಯೇಷ ನಿರ್ಜನಮ್ II೫೫II ನಳ ಎಷ್ಟೇ ಪ್ರಯತ್ನ ಪಟ್ಟರು ಬಚ್ಚಿಡಲಾಗದೆ, ಅವನ ಮುಖದಲ್ಲಾಗುತ್ತಿದ್ದ ಬದಲಾವಣೆಯನ್ನು ಬೇರೆಯವರಿಗೆ ತೋರಿಸಲು ಇಷ್ಟ ಪಡದೆ, ಸಭೆಯಲ್ಲಿ ಕುಳಿತು ಕೋಳ್ಳಲಾಗದೆ, ಉದ್ಯಾನದಲ್ಲಿ ವಿಹಾರಕ್ಕಾಗಿ ಹೋಗುವ ಉದ್ದೇಶದಿಂದ ನಿರ್ಜನ ಸ್ಥಳದಲ್ಲಿ ವಾಯುಸೇವನೆಗೆ ಹೋಗಲು ಇಷ್ಟಪಟ್ಟನು. ಅಥ ಶ್ರಿಯಾ ಭರ್ತ್ಸಿತಮತ್ಸ್ಯಲಾಞ್ಛನಃ ಸಮಂ ವಯಸ್ಯೈಃ ಸ್ವರಹಸ್ಯವೇದಿಮಿಃ I ಪುರೋಪಕಣ್ಠೋಪವನಂ ಕಿಲೇಕ್ಷಿತಾ ದಿದೇಶ ಯಾನಾಯ ನಿದೇಶಕಾರಿಣಃ II೫೬II ಅನಂತರ ಅವಳ[ಸೌಂದರ್ಯ] ಗುಣಗಳಿಂದ ಚಂಚಲಗೊಂಡ ನಳನು ತನ್ನ ರಹಸ್ಯ ತಿಳಿದಿರುವ ಅಪ್ತಮಿತ್ರರ ಜೊತೆಯಲ್ಲಿ ನಗರದ ಹತ್ತಿರವಿರುವ ಉದ್ಯಾನಕ್ಕೆ ವಿಹಾರಕ್ಕೆ ಹೋಗಲು ರಥವನ್ನು ತರಲು ಸಾರಥಿಗೆ ಹೇಳುತ್ತಾನೆ. ಅಮೀ ತತಸ್ತಸ್ಯ ವಿಭೂಷಿತಂ ಸಿತಂ ಜವೇsಪಿ ಮಾನೇsಪಿ ಚ ಪೌರುಷಾಧಿಕಮ್ I ಉಪಾಹರನ್ನಶ್ವಮಜಸ್ರಚಞ್ಚಲೈಃ ಖುರಾಞ್ಚಲೈಃ ಕ್ಷೋದಿತಮನ್ದುರೋದರಮ್ II೫೭II ಅನಂತರ ಸಾರಥಿಯು ಸುಂದರವಾಗಿ ಅಲಂಕಾರ ಮಾಡಲ್ಪಟ್ಟ ರಥವನ್ನು ತಂದು ಮುಂದೆ ನಿಲ್ಲಿಸಿದ್ದನು. ಆ ರಥದ ಶ್ವೇತ ಕುದುರೆಯು ವೇಗದಲ್ಲಿ ಮನುಷ್ಯನಿಗಿಂತ ಬಲಿಷ್ಠವಾಗಿತ್ತು. ಮನುಷ್ಯನ ಎತ್ತರಕ್ಕಿಂತ್ತ ಎರಡರಷ್ಟು ಇತ್ತು, ನಿರಂತರವಾಗಿ ಚಂಚಲತೆಯಿಂದ ಕೂಡಿತ್ತು, ಗಂಭೀರವಾಗಿ ರಾಜನ ಮುಂದೆ ನಿಂತ್ತಿತ್ತು. ಅಥಾನ್ತರೇಣಾವಟುಗಾಮಿನಾಧ್ವನಾ ನಿಶೀಥಿನೀನಾಥಮಹಃ ಸಹೋದರೈಃ I ನಿಗಾಲಗಾದ್ದೇವಮಣೇರಿವೋತ್ಥಿತೈರ್ವಿರಾಜಿತಂ ಕೇಸರಕೇಶರಶ್ಮಿಭಿಃ II೫೮II ಅನಂತರ ನಳನು ಕುದುರೆಯನ್ನು ಹತ್ತಿದನು. ಆ ಶ್ವೇತ ಕುದುರೆಯ ಕತ್ತಿನ ಭಾಗದಲ್ಲಿದ್ದ ನೀಳವಾದ ಕೂದಲು ಕೌಸ್ತುಭ ಮಣಿಯಿಂದ ಹೊರ ಸೂಸುವ ಕಾಂತಿ, ಚಂದ್ರನ ಕಿರಣದ ಕಾಂತಿಗೆ ಸಮಾನವಾದ ಕೇಸರ ರೂಪದ ನೀಳವಾದ ಕೂದಲಿನಿಂದ ಶೋಭಾಯಮಾನವಾಗಿ ಕಾಣುತ್ತಿತ್ತು. ಅಜಸ್ರಭೂಮಿತಟಕುಟ್ಟನೋತ್ಥಿತೈರುಪಾಸ್ಯಮಾನಂ ಚರಣೇಷು ರೇಣುಭಿಃ I ರಯಪ್ರಕರ್ಕ್ಷಾಧ್ಯಯನಾರ್ಥಮಾಗತೈರ್ಜನಸ್ಯ ಚೇತೋಭಿರಿವಾಣಿಮಾಙ್ಕಿತೈಃ II೫೯II ಸತತವಾಗಿ ಭೂಮಿಗೆ ಸ್ಪರ್ಶವಾಗುತ್ತಿದ್ದರಿಂದ ಧೂಳು ಏಳುತ್ತಿತ್ತು. ಆ ಧೂಳಿನಲ್ಲಿದ ಸೂಕ್ಷ್ಮಕಣಗಳಿಂದ ಅದರ ವೇಗವನ್ನು ಗುರುತಿಸಬಹುದಾಗಿತ್ತು. ಧೂಳಿನಲ್ಲಿದ್ದ ಸೂಕ್ಷ್ಮಕಣಗಳು ವೇಗವನ್ನು ಕಲಿಯುವವರಿಗೆ ಕಲಿಸುವ ಉದ್ದೇಶದಿಂದ ಬರುತ್ತಿರುವ ಹಾಗೆ ವೇಗವಾಗಿ ಮೇಲೆ ಏಳುತ್ತಿತ್ತು. ಚಲಾಚಲಪ್ರೋಥತಯಾ ಮಹೀಭೃತೇ ಸ್ವವೇಗದರ್ಪಾನಿವ ವಕ್ತುಮುತ್ಸುಕಮ್ I ಅಲಂ ಗಿರಾ ವೇದ ಕಿಲಾಯಮಾಶಯಂ ಸ್ವಯಂ ಹಯಸ್ಯೆತಿ ಚ ಮೌನಮಾಸ್ಥಿತಮ್ II೬೦II ರಾಜನು ಕುದುರೆಯ ಲಗಾಮನ್ನು ಒಂದೆ ಸಮನೇ ಎಳೆಯುತ್ತಿದ್ದರಿಂದ ಕುದುರೆಗಳು ವೇಗದ ದರ್ಪವನ್ನು ತೋರಿಸುವ ಉತ್ಸಾಹದಿಂದ ಓಡುತ್ತಿದ್ದವು, ಆದರೆ ಅವು "ರಾಜನು ತಮ್ಮ ಮನಸ್ಸಿನ ಭಾವನೆಯನ್ನು ಸ್ಪಷ್ಟವಾಗಿ ತಾನೆ ತಿಳಿದು ಕೊಂಡಿದ್ದಾನೆ" ಎಂದು ಯೋಚಿಸಿ ಸುಮ್ಮನೆ ವೇಗವಾಗಿ ಓಡುತ್ತಿದ್ದವು. ಮಹಾರಥಸ್ಯಾಧ್ವನಿ ಚಕ್ರವರ್ತಿನಃ ಪರಾನಪೇಕ್ಷೋದ್ವಹನಾಧ್ಯಶಃ ಸಿತಮ್ I ರದಾವದಾತಾಂಶುಮಿಷಾದನೀದೃಶಾಂ ಹಸನ್ತಮನ್ತರ್ಬಲಭರ್ವತಾಂ ರವೇಃ II೬೧II ರಾಜ ನಳನ ಮಾರ್ಗದಲ್ಲಿ ಬೇರೆಯವರ[ಕುದುರೆಗಳ] ಅವಶ್ಯಕತೆ ಇಲ್ಲದೇ ಅವನ ಜೊತೆಯಲ್ಲಿ ಮುಂದೆ ಸಾಗುತ್ತಿತ್ತು. ಅವನ ಯಶಸ್ಸೆಂಬ ಬಿಳಿ ಛತ್ರಿಯು ರಾಜನ ಜೋತೆಯಲ್ಲಿ ಮುಂದೆ ಸಾಗುತ್ತಿತ್ತು. ಮಹಾರಥಿಯಾದ ರಾಜ ನಳನು ಸೂರ್ಯನ ಮಾರ್ಗದಲ್ಲಿ[ಆಕಾಶ] ಸಾಗುವ ಹಾಗೆ ಕರೆದು ಕೊಂಡು ಹೋಗದ ಕಾರಣ ಬಿಳಿಯಾಗದ ತಮ್ಮ ಕೂದಲುಗಳ ಮೇಲೆ ಹಲ್ಲಿನ ನಿರ್ಮಲವಾದ ಕಾಂತಿ ಬಿದ್ದು, ಅವು ಮುಗುಳುನಗೆ ನಗುತ್ತಿವೆ ಎನ್ನುವಂತಿತ್ತು. ಸಿತತ್ವಿಷಶ್ಚಞ್ಚಲತಾಮುಪೇಯುಷೋ ಮಿಷೇಣ ಪುಚ್ಛಸ್ಯ ಚ ಕೇಸರಸ್ಯ ಚ I ಸ್ಫುಟ ಚಲಚ್ಚಾಮರಯುಗ್ಮಚಿನ್ಹೈರನಿನ್ಹುವಾನಂ ನಿಜವಾಜಿರಾಜತಾಮ್ II೬೨II ಓಡುತ್ತಿದ್ದ ಕುದುರೆಗಳ ಕತ್ತಿನಲ್ಲಿದ್ದ ಕೂದಲು ಆ ಕಡೆ ಈ ಕಡೆ ಅಲ್ಲಾಡುತ್ತಿತ್ತು. ಹಿಂದೆ ಬಾಲವು ಆ ಕಡೆ ಈ ಕಡೆ ಅಲ್ಲಾಡುತ್ತಿತ್ತು. ಇವೆರಡು ಚಾಮರವನ್ನು ಬೀಸುವ ಸಂಕೇತದಿಂದ ತಮ್ಮೊಳಗೆ ವಾಜಿರಾಜತ್ವವನ್ನು ಪ್ರಕಟಪಡಿಸುತಿತ್ತು. ಅಪಿ ದ್ವಿಜಿಹ್ನಾಭ್ಯವಹಾರಪೌರುಷೆ ಮುಖಾನುಷಕ್ತಾಯತವಲ್ಗುವಲ್ಗಯಾ I ಉಪೇಯಿವಾಂಸಂ ಪ್ರತಿಮಲ್ಲತಾಂ ರಯಸ್ಮಯೇ ಜಿತಸ್ಯ ಪ್ರಸಭಂ ಗರುತ್ಮತಃ II೬೩II ವೇಗದಲ್ಲಿ ಅಭಿಮಾನವಳ್ಳ ಗರುಡನು ಹಾವನ್ನು ಬೇಟೆಯಾಡಲು, ಹಾವಿಗಿಂತ ವೇಗವಾಗಿ ಹಾರುತ್ತದೆ. ಹಾಗೆಯೇ ವೇಗದಲ್ಲಿ ಅಭಿಮಾನವುಳ್ಳ ಕುದುರೆಯು ಗರುಡನನ್ನೇ ಸೋಲಿಸುವಂತೆ ತೋರುತ್ತಿತ್ತು. ಮುಖದಲ್ಲಿದ್ದ ಉದ್ದ ಮತ್ತು ಸುಂದರವಾದ ಲಗಾಮಿನ ಜೊತೆಯಲ್ಲಿ ಪ್ರತಿಸ್ಪರ್ಧಿಯಾಗಿತ್ತು. ಸ ಸಿನ್ಧುಜಂ ಶೀತಮಹ ಸಹೋದರಂ ಹರನ್ತಮುಚ್ಚೈಃಶ್ರವಸಃ ಶ್ರಿಯಂ ಹಯಮ್ I ಜಿತಾಖಿಲಕ್ಷ್ಮಾಭೃದನಲ್ಪಲೋಚನಸ್ತಮಾರುರೋಹ ಕ್ಷಿತಿಪಾಕಶಾಸನಃ II೬೪II ಅನೇಕ ರಾಜರನ್ನು ಗೆದ್ದು ರಾಜ್ಯವನ್ನು ವಿಸ್ತಾರಗೊಳಿಸಿದ, ವಿಶಾಲವಾದ ಕಣ್ಣುಳ್ಳ ನಳನು ಪೃಥ್ವಿಯಲ್ಲಿರುವ ಎಲ್ಲಾ ರಾಜರನ್ನು [ಪರ್ವತ] ಗೆದ್ದ ಮತ್ತು [ಅನೇಕ ಕಣ್ಣು]ಸಹಸ್ರಾಕ್ಷನಾಗಿರುವ ಇಂದ್ರನ ಸಿಂಧುವಿನಲ್ಲಿ[ದೇಶ] ಹುಟ್ಟಿದ ಚಂದ್ರನ ಸಹೋದರ [ಸಮನಾದ] ಕುದುರೆಗಳ ಉನ್ನತ ಸ್ಥಾನದಲ್ಲಿರುವ, ಸಿಂಧುವಿನಲ್ಲಿ [ಸಮುದ್ರ ಮಥನ] ಹುಟ್ಟಿದ ಚಂದ್ರನ ಸಹೋದರ ಉಚೈಃಶ್ರವದ ಕಾಂತಿಯನ್ನು ಅಪಹರಿಸಿತು. ನಿಜಾ ಮಯೂಖಾ ಇವ ತೀಕ್ಷ್ಣ ದೀಧಿತಿಂ ಸ್ಫುಟಾರವಿನ್ದಾಙ್ಕಿತಪಾಣಿಪಙ್ಕಜಮ್ I ತಮಶ್ವವಾರಾ ಜವನಾಶ್ವಯಾಯಿನಂ ಪ್ರಕಾಶರೂಪಾ ಮನುಜೇಶಮನ್ವಯುಃ II೬೫ II ಪ್ರಕಾಶದಿಂದ ಕೂಡಿರುವ, ಕಮಲದ ಚಿನ್ಹೆಯಿರುವ, ಕಮಲದ ಕೈಗಳಿಂದ ವೇಗವಾಗಿ ಕುದುರೆಗಳನ್ನು ಓಡಿಸುತ್ತಿರುವ ರಾಜ ಮುಂದೆ ಸಾಗುತ್ತಿದ್ದರೆ, ಅವನ ಯಶಸ್ಸೆಂಬ ಕಿರಣಗಳು ಹಿಂದೆ ಸಾಗುತ್ತಿತ್ತು. ಹೇಗೆಂದರೆ ಸೂರ್ಯೋದಯಕಾಲದಲ್ಲಿ ಸೂರ್ಯ ತನ್ನ ರಥದಲ್ಲಿ ಮುಂದೆ ಸಾಗುತ್ತಿದ್ದರೆ, ಅವನ ರಥದ ಹಿಂದೆ ಪ್ರಕರವಾದ ಕಿರಣಗಳು ಎಲ್ಲೆಡೆ ಹರಡುವಂತೆ. [ರಾಜನಳನನ್ನು ಸೂರ್ಯನಿಗೆ ಹೋಲಿಸಲಾಗಿದೆ] ಚಲನ್ನಲಂಕೃತ್ಯ ಮಹಾರಯಂ ಹಯಂ ಸ ವಾಹವಾಹೋಚಿತವೇಷಪೇಶಲಃ I ಪ್ರಮೋದನಿಃಸ್ಪನ್ದತರಾಕ್ಷಿಪಕ್ಷ್ಮಭಿರ್ವ್ಯಲೋಕಿ ಲೋಕೈರ್ನಗರಾಲಯೈರ್ನಲಃ II೬೬II ಕುದುರೆಯನ್ನು ಓಡಿಸಲು ಯೋಗ್ಯವಾದ ಉಡುಪನ್ನು ಧರಿಸಿದ ರಾಜನು ಸುಂದರವಾಗಿ ಅಲಂಕಾರಗೊಡ ಕುದುರೆಗಳುಳ್ಳ ರಥದಲ್ಲಿ ವೇಗವಾಗಿ ಹೋಗುತ್ತಿರಲು ರಸ್ತೆಯ ಆ ಕಡೆ ಈ ಕಡೆ ನಿಂತ ಜನರು ಕಣ್ಣು ಮಿಟುಕಿಸದೆ ಸಂತೋಷದಿಂದ ನೋಡುತಿದ್ದರು. ಕ್ಷಣಾದಥೈಷ ಕ್ಷಣದಾಪತಿಪ್ರಮಃ ಪ್ರಭಞ್ಜನಾಧ್ಯೆಯಜವೇನ ವಾಜಿನಾ I ಸಹೈವ ತಾಮಿರ್ಜನದೃಷ್ಟಿವೃಷ್ಟಿಭಿರ್ ಬಹಿಃ ಪುರೋsಭೂತ್ಪುರುಹೂತಪೌರುಷಃ II೬೭II ಅನಂತರ ಚಂದ್ರನ ಕಾಂತಿ ಮತ್ತು ಇಂದ್ರನ ಶಕ್ತಿಯನ್ನು ಪಡೆದ ರಾಜನು ವಾಯುದೇವನಿಗೆ ಪಾಠ ಹೇಳುವ ರೀತಿಯಲ್ಲಿ ವೇಗವಾಗಿ ನಗರದಿಂದ ಹೊರಗೆ ನಡೆದನು. ಆ ಕಡೆ ಈ ಕಡೆ ನಿಂತವರ ದೃಷ್ಟಿಯಿಂದ ಮಾಯವಾದನು. ತತಃ ಪ್ರತೀಚ್ಛ ಪ್ರಹರೇತಿಮಾಷಿಣೀ ಪರಸ್ಪರೋಲ್ಲಾಸಿತಶಲ್ಯಪಲ್ಲವೈಃ I ಮೃಷಾಮೃಧಂ ಸಾದಿಬಲೇ ಕುತೂಹಲಾನ್ನಲಸ್ಯ ನಾಸೀರಹತೇ ವಿತೇನತು II೬೮II ಆ ವೇಗವು ಒಂದು ಕಾಲ್ಪನಿಕ ಯುದ್ಧದ ಕಲ್ಪನೆಯನ್ನು ಮಾಡುವಂತ್ತಿತ್ತು. ಸೇನೆಯ ಮುಂದಿನ ಭಾಗದಲ್ಲಿದ್ದ ರಾಜನ ಸೈನಿಕರು "ಅವರನ್ನು ಹಿಡಿಯಿರಿ", ಅವರನ್ನು ಹೊಡೆಯಿರಿ" ಎಂದು ಕೂಗಿಕೊಳ್ಳುವಂತೆ ತೋರುತ್ತಿತ್ತು. ರಾಜನ ಕುದುರೆಗಳು ಉತ್ಸಾಹದಿಂದ ಓಡುತ್ತಿದ್ದವು. ಪ್ರಯಾತುಮಸ್ಮಾಕಮಿಯಂ ಕಿಯತ್ಪದಂ ಧರಾ ತದಮ್ಮೋಧಿರಪಿ ಸ್ಥಲಾಯತಾಮ್ I ಇತೀವ ವಾಹೈರ್ನಿಜವೇಗದರ್ಪಿತೈಃ ಪಯೋಧಿರೋಧಕ್ಷಮಮುದ್ಧತಂ ರಜಃ II೬೯II "ಈ ಪೃಥ್ವಿಯನ್ನು ನಾವು ಎಷ್ಟು ಹೆಜ್ಜೆಗಳಲ್ಲಿ ಜಿಗಿಯಬಹುದು?, [ಬಹಳ ಕಡಿಮೆ] ಆದುದರಿಂದ ಸಮುದ್ರದಲ್ಲಿಯು ಸ್ಥಳ ಬೇಕು"ಎನ್ನುವ ಭಾವನೆಯನ್ನು ಹೊಂದಿದ್ದ ಕುದುರೆಗಳು ಅಭಿಮಾನದಿಂದ ವೇಗವಾಗಿ ಓಡುತ್ತಿದ್ದವು. ಕುದುರೆಗಳ ಪಾದದಿಂದ ಎದ್ದ ಧೂಳು ಆಕಾಶವನ್ನು ಮುಟ್ಟಿತ್ತು. ಹರೇರ್ಥದಕ್ರಾಮಿ ಪದೈಕಕೇನ ಖಂ ಪದೈಶ್ಚತುರ್ಭಿಃ ಕ್ರಮಣೇsಪಿ ತಸ್ಯ ನಃ I ತ್ರಪಾ ಹರೀಣಾಮಿ ತ ನಮ್ರಿತಾನನೈರ್ನ್ಯವರ್ತಿ ತೈರರ್ಧನಭಃಕೃತಕ್ರಮೈಃ II೭೦II ಹರಿಯ ತನ್ನ ಒಂದು ಪಾದದಲ್ಲಿ ಪೃಥ್ವಿಯನ್ನು ದಾಟಿದನು, ಅದನು ನಾಲ್ಕು ಪಾದಗಳಲ್ಲಿ ದಾಟಿದರೂ ನಾವು ಹರಿಗೆ[ಕುದುರೆ,ವಿಷ್ಣು] ಸಮಾನವಾಗುವುದಿಲ್ಲ ಎನ್ನುವ ವಿಚಾರದಿಂದ ನಾಚಿಕೆಯಿಂದ ತಲೆ ಬಾಗಿಸಿ, ಆಕಾಶದ ಕಡೆ ನೋಡುತ್ತಾ ಮುಂದೆ ಸಾಗುತ್ತಿದ್ದವು. ಚಮೂಚರಾಸ್ತಸ್ಯ ನೃಪಸ್ಯ ಸಾದಿನೋ ಜಿನೋಕ್ತಿಷು ಶ್ರಾದ್ಧತಯೇವ ಸೈನ್ಧವಾಃ I ವಿಹಾರದೇಶಂ ತಮವಾಪ್ಯ ಮಣ್ಡಲೀಮಕಾರಯನ್ಭೂರಿ ತುರಙ್ಗಮಾನಪಿ II೭೧II ಬುದ್ಧನ ಉಪದೇಶಗಳನ್ನು ಕೇಳಿ ಅವರು ಹೇಳಿದ ರೀತಿಯಲ್ಲಿ ಸಿಂಧುವಿನ ಬೌಧಭಿಕ್ಷುಗಳು ವಿಹಾರದೇಶ[ಸುಗತಾಲಯ] ದಲ್ಲಿ ನಡೆದುಕೊಳ್ಳುತ್ತಿದ್ದರು. ಹಾಗೆಯೇ ನಳನ ಹಿಂದೆ ಬರುತ್ತಿದ್ದ ಕೆಲವು ಅಶ್ವಾರೋಹಿ ಸೈನಿಕರು ವಿಹಾರ ದೇಶ[ಉದ್ಯಾನ]ದ ಬಳಿ ವೃತ್ತಾಕಾರದಲ್ಲಿ ತಮ್ಮ ಕುದುರೆಗಳನು ನಿಲ್ಲಿಸಿದರು. ದ್ವಿಷದ್ಭಿರೇವಾಸ್ಯ ವಿಲಙ್ಘಿತಾ ದಿಶೋ ಯಶೋಮಿರೆವಾಬ್ಧಿರಕಾರಿ ಗೋಷ್ಪದಮ್I ಇತೀವ ಧಾರಾಮವಧೀರ್ಯ ಮಣ್ಡಲೀಕ್ರಿಯಾಶ್ರಿಯಾಮಣ್ಡಿ ತುರಙ್ಗಮೈಃ ಸ್ಥಲೀ II೭೨II ದಿಕ್ಕುಗಳಲ್ಲಿ ನಳನ ಶತ್ರುರಾಜರು ಓಡಿ ಹೋದರು ಮತ್ತು ಸಮುದ್ರದವರೆಗೆ ಯಶಸ್ಸನ್ನು ಹರಡಿದ ಅಭಿಮಾನವುಳ್ಳ ರಾಜನ ಕುದುರೆಗಳು ಚಲನೆಯ ಹಲವಾರು ವಿಧಗಳನ್ನು ತಿಳಿದಿದ್ದರು. ಆ ಕುದುರೆಗಳು ಎಲ್ಲಾ ವಿಧವನ್ನು ಬಿಟ್ಟು ವೃತ್ತಾಕಾರದಲ್ಲಿ ಸುತ್ತುತ್ತಾ ಆ ಕ್ರಿಯೆಯ ರಮಣೀಯತೆಯನ್ನು [ವಿಹಾರ]ಸ್ಥಳದಲ್ಲಿ ಶೋಭಾಯಮಾನವಾಗಿ ಮಾಡುತ್ತಿತ್ತು. ಅಚೀಕರಚ್ಚಾರು ಹಯೇನ ಭ್ರಮೀರ್ನಿಜಾತಪತ್ರಸ್ಯ ತಲಸ್ಥಲೇ ನಲಃ I ಮರುತ್ಕಿಮಧ್ಯಾಪಿ ನ ತಾಸು ಶಿಕ್ಷತೇ ವಿತಸ್ಯ ವಾತ್ಯಾ ವಾತ್ಯಾಮಯಚಕ್ರಙ್ಮಕ್ರಮಾನ್ II೭೩II ನಳನು ತನ್ನ ಶ್ವೇತ ಛತ್ರಿಯ ಕೆಳಗೆ ತನ್ನ ಕುದುರೆಗಳನ್ನು ಮಂಡಲಾಕಾರದಲ್ಲಿ ಓಡಿಸುತ್ತಿದ್ದನು. ಹಾಗೆ ಓಡಿಸುವಾಗ ಉಂಟಾದ ಗಾಳಿಯು, ಪ್ರಳಯ ಕಾಲದಲ್ಲಿ ಏಳುವ ಸುಂಟರ ಗಾಳಿಗೆ ಶಿಕ್ಷಣ ಕೊಡುವ ಹಾಗೆ ಕಾಣಿಸುತ್ತಿತ್ತು. ವಿವೇಶ ಗತ್ವಾ ಸ ವಿಲಾಸಕಾನನಂ ತತಃ ಕ್ಷಣಾತ್`ಕ್ಷೋಣಿಪತಿರ್ಧೃತೀಚ್ಛಯಾ I ಪ್ರವಾಲರಾಗಚ್ಛುರಿತಂ ಸುಷುಪ್ಸಯಾ ಹರಿರ್ಧನಚ್ಛಾಯಮಿವಾಮ್ಭಸಾಂ ನಿಧಿಮ್ II೭೪II ಅನಂತರ ರಾಜ ನಳನು ಒಂದು ಕ್ಷಣಕಾಲ ಧೈರ್ಯವನ್ನು ತಂದು ಕೊಂಡನು. ಆಗ ತಾನೆ ಅರಳಿದ, ಸುವಾಸನೆ ಭರಿತವಾದ,ಸುಂದರವಾದ ಹೂವುಗಳಿಂದ ಶೋಭಾಯಮಾನವಾಗಿ ಕಂಗೊಳಿಸುತ್ತಿರುವ, ದಟ್ಟವಾದ ನೆರಳಿರುವ ಕಾಡಿನೊಳಗೆ ಪ್ರವೇಶಿಸಿದನು. ಆಕಾಶದಲ್ಲಿರುವ ನೀಲಿ ಮೇಘದ ಕಾಂತಿಯನ್ನು ಹೊಂದಿರುವ, ಚಿಗುರೆಲೆಯ ದಟ್ಟವಾದ ನೆರಳನ್ನು ಹೊಂದಿರುವ ಕ್ಷೀರಸಾಗರವನ್ನು ಮಹಾವಿಷ್ಣು ವಿಶ್ರಾಂತಿಗಾಗಿ ಪ್ರವೇಶಿಸಿದ ಹಾಗೆ ಇತ್ತು. ವನಾನ್ತಪರ್ಯನ್ತಮುಪೇತ್ಯ ಸಸ್ಪೃಹಂ ಕ್ರಮೇಣ ತಸ್ಮಿನ್ನವತೀರ್ಣದೃಕ್ಪಥೇ I ನ್ಯವರ್ತಿ ದೃಷ್ಟಿಪ್ರಕರೈಃ ಪುರೌಕಸಾಮನುಬ್ರಜದ್ಬಂಧುಸಮಾಜಬಂಧುಭಿಃ II೭೫II ತಮ್ಮ ಜೊತೆಯಲ್ಲಿ ಇದ್ದ ಬಂಧು ಬಾಂಧವರು ಊರಿಗೆ ಹೊರಟರೆ, ಅವರು ತಮ್ಮ ಕಣ್ಣಿನ ದೃಷ್ಟಿಯಿಂದ ದೂರ ಸರಿಯುವವರೆಗೆ ಅಲ್ಲಿಯೇ ನೋಡುತ್ತಾ ನಿಂತಿದ್ದು. ನಂತರ ಅವರು ತಮ್ಮ ಮನೆಗಳಿಗೆ ಹೊಗುವ ಹಾಗೆ ನಗರ ವಾಸಿಗಳು ರಾಜ ನಳನು ಹೋಗುವವರೆಗೆ ದಾರಿಯಲ್ಲೇ ಇದ್ದು ತಮ್ಮ ವಾಸಸ್ಥಾನಕ್ಕೆ ತೆರಳಿದರು. ತತಃ ಪ್ರಸೂನೇ ಚ ಫಲೇ ಚ ಮಞ್ಜುಲೇ ಸ ಸಮ್ಮುಖಸ್ಥಾಙ್ಗುಲಿನಾ ಜನಾಧಿಪಃ I ನಿವೇಧ್ಯಮಾನಂ ವನಪಾಲಪಾಣಿನಾ ವ್ಯಲೋಕಯತ್ಕಾನನ ಕಾಮನೀಯಕಮ್ II೭೬II ಅನಂತರ ಮಾಲಿಯಿಂದ ತೋರಿಸಿದ ಹಾದಿಯಲ್ಲಿ ಮುಂದೆ ಸಾಗುತ್ತಾ ರಾಜನು ಅಲ್ಲಿ ಸುಂದರವಾಗಿ ಅರಳಿರುವ ಹೂ ಮತ್ತು ಫಲಭರಿತವಾದ ವೃಕ್ಷಗಳನ್ನು ನೋಡುತ್ತಾ, ಕಾಡಿನ ಸೌಂದರ್ಯವನ್ನು ಸವಿದನು ಫಲಾನಿ ಪುಷ್ಪಾಣಿ ಚ ಪಲ್ಲವೇ ಕರೇ ವಯೋsತಿಪಾತೋದ್ಗತವಾತವೇಪಿತೇ I ಸ್ಥಿತೈಃ ಸಮಾದಾಯ ಮಹರ್ಷಿವಾರ್ಧಕಾದ್ ವನೇ ತದಾತಿಥ್ಯಮಶಿಕ್ಷಿ ಶಾಖಿಭಿಃ II೭೭II ಮರದ ಮೇಲೆ ಕುಳಿತಿದ್ದ ಪಕ್ಷಿಗಳು ಹಾರಿದ್ದರಿಂದ ಉಂಟಾದ ಗಾಳಿಯಿಂದ ಮರಗಳಿಗೆ ಹಬ್ಬಿ ಕೊಂಡಿದ್ದ ಬಳ್ಳಿಗಳು ಅಲುಗಾಡಲು ಪ್ರಾರಂಭಿಸಿದವು.ಕಾಡಿನಲ್ಲಿ ವಾಸಮಾಡುವ ಋಷಿ, ಮುನಿಗಳು ಕಾಡಿನಲ್ಲಿರುವ ಹಣ್ಣುಗಳನ್ನು ತಿಂದು ಜೀವಿಸುತ್ತಾರೆ. ಅಂತಹ ಮಹರ್ಷಿಗಳಿಂದ ಆ ಬಳ್ಳಿಗಳು [ನಳನಿಗೆ] ಅತಿಥಿ ಸತ್ಕಾರವನ್ನು ಹೇಗೆ ಮಾಡಬೇಕು ಎನ್ನುವ ವಿದ್ಯೆಯನ್ನು ಕಲಿತಂತೆ ತೋರುತ್ತಿತ್ತು. ವಿನಿದ್ರಪತ್ರಾಲಿಗತಾಲಿಕೈತವಾನ್ ಮೃಗಾಙ್ಕಚೂಡಾಮಣಿವರ್ಜನಾರ್ಜಿತಮ್ I ದಧಾನಮಾಶಾಸು ಚರಿಷ್ಣು ದುರ್ಯಶಃ ಸ ಕೌತುಕೀ ತತ್ರ ದದರ್ಶ ಕೇತಕಮ್ II೭೮II ಸಾಲಾಗಿ ಅರಳಿರುವ ಹೂವಿನ ಮೇಲೆ ಕುಳಿತಿರುವ ಭ್ರಮರಗಳನ್ನು ಕುತೂಹಲದಿಂದ ನಳನು ನೋಡಿದನು. ಮಹಾದೇವನಿಂದ ವರ್ಜಿತವಾದ, ದಿಕ್ಕುಗಳಲ್ಲಿ ಹರಡಿರುವ ಅವಶ್ಯಕತೆಗೆ ಅನುಗುಣವಾಗಿ ಸಿಗುವ ಕೇತಕೀ[ಕೇದಗಿ] ಹೂಗಳನ್ನು ನೋಡಿದನು. ವಿಯೋಗಭಾಜಾಂ ಹೃದಿ ಕಣ್ಟಕೈಃ ಕಟುರ್ನಿಧೀಯಸೇ ಕರ್ಣಿಶರಃಸ್ಮರೇಣ ಯತ್ I ತತೋ ದುರಾಕರ್ಷತಯಾ ತದನ್ತಕೃದ್ ವಿಗೀಯಸೇ ಮನ್ಮಥದೇಹದಾಹಿನಾ II೭೯II ಮನ್ಮಥನ ಮುಖಾಂತರ ವಿರಹಿಗಳ ಹೃದಯಕ್ಕೆ ಮುಳ್ಳಿಗಿಂತಲೂ ಚೂಪಾದ ಹೂ ಬಾಣವು ತಾಗಿ ವಿರಹಿಗಳಲ್ಲಿ ವಿರಹ ವೇದನೆಯು ಹೆಚ್ಚುತ್ತದೆ, ಮುಳ್ಳು ತಾಗಿದಾಗ ಆಗುವ ವೇದನೆಗಿಂತಲೂ, ಆ ಮುಳ್ಳನ್ನು ಹೊರಗೆ ತೆಗೆಯುವಾಗ [ವಿರಹಿಗಳಿಗೆ] ಪ್ರಾಣ ಹೋಗುವಷ್ಟು ವೇದನೆಯಾಗುತ್ತದೆ. ಕಾಮದೇವನ ದೇಹವನ್ನು ಭಸ್ಮ ಮಾಡಿದವನಿಗೆ [ಮಹಾದೇವ] ಇದು ನಿಂದನೆಯೇ ಆಗಿದೆ. ತ್ವದಗ್ರಸೂಚ್ಯಾ ಸಚಿವೇನ ಕಾಮಿನೋರ್ಮನೋಭವಃ ಸೀವ್ಯತಿ ದುರ್ಯಶಃಪಟೌ I ಸ್ಫುಟಂ ಸ ಪತ್ರೈಃ ಕರಪತ್ರಮೂರ್ತಿಬಿರ್ ವಿಯೋಗಿಹೃದ್ದಾರುಣಿ ದಾರುಣಾಯತೇ II೮೦II ಮನ್ಮಥನು ಕೇತಕಿ ಪುಷ್ಪವನ್ನು ದಾರವನ್ನಾಗಿ ಮಾಡಿಕೊಂಡು, ನಾಯಕ ಮತ್ತು ನಾಯಕಿಯರಲ್ಲಿ ಅಪವಾದ ಎನ್ನುವ ಬಟ್ಟೆಯನ್ನು ಹೊಲೆಯುತ್ತಾನೆ. ವಿರಹಿ ಮತ್ತು ವಿರಹಿಣಿಯರ ಹೃದಯವೆಂಬ ಬಟ್ಟೆಯ ಮೇಲೆ ಕಾಮದೇವನು ಶುದ್ಧವಾದ ಪ್ರೇಮವೆಂಬ ದಾರದಿಂದ ವಿಯೋಗವೆಂಬ ಹೊಲಿಗೆ ಹಾಕುತ್ತಾನೆ. ಧನುರ್ಮಧುಸ್ವಿನ್ನಕರೋsಪಿ ಭೀಮಜಾಪರ ಪರಾಗೈಸ್ತವ ಧೂಲಿಹಸ್ತಯನ್ I ಪ್ರಸೂನಧನ್ವಾ ಶರಸಾತ್ಕರೋತಿ ಮಾಮಿತಿ ಕ್ರುಧಾಕ್ರುಶ್ಯತ ತೇನ ಕೇತಕಮ್ II೮೧II "ಹೇ ಹೂವೇ, ಧನುಸ್ಸಿನಲ್ಲಿರುವ ಅರಳಿದ ಹೂಗಳಲ್ಲಿರುವ ಪರಾಗವು ಕೈಗೆ ಸೊಂಕಿ ಕೈ ಒದ್ದೆಯಾಯಿತು. ಅಂತಹ ಕೈಯಿಂದ ಭೀಮನ ಮಗಳಾದ ದಮಯಂತಿಯಲ್ಲಿ ಆಸಕ್ತಿಯುಳ್ಳ ನನ್ನ ಮೇಲೆ ಬಾಣವನ್ನು ಹೊಡೆದು ನಿನ್ನ ಅಧೀನವಾಗುವಂತೆ ಮಾಡಿಕೊಂಡೆ" ಎಂದು ನಳನು ಕೇತಕಿ ಹೂವನ್ನು ನಿಂದಿಸುತ್ತಾನೆ. ವಿಧರ್ಭಸುಭ್ರೂಸ್ತನತುಙ್ಗತಾಪ್ತಯೇ ಘಟಾನಿವಾಪಶ್ಯದಲಂ ತಪಸ್ಯತಃ I ಫಲಾನಿ ಧೂಮಸ್ಯ ಧಯಾನಧೋಮುಖಾನ್ ಸ ದಾಡಿಮೇ ದೋಹದಧೂಪಿನಿ ದ್ರುಮೇ II೮೨II ನಳನು ಬಿಸಿಲಿನಲ್ಲಿ ಮರದಲ್ಲಿ ನೇತಾಡುತ್ತಿರುವ ದಾಳಿಂಬೆ ಹಣ್ಣುಗಳ ಮರವನ್ನು ನೋಡಿದನು. ಆ ದಾಳಿಂಬೆ ಹಣ್ಣು ವಿದರ್ಭದೇಶದ ದಮಯಂತಿಯ ಸ್ತನಗಳ ಉನ್ನತಿಯನ್ನು ಪಡೆಯಲು ಅತ್ಯಧಿಕ ತಪಸ್ಸು ಮಾಡುತ್ತಾ, ಬಿಸಿಲಿನ ಹಬೆಯನ್ನು ಕುಡಿಯುತ್ತಾ, ಕೆಳಗೆ ಮುಖಮಾಡಿ ನಿಂತ ಕಳಸದ ಹಾಗೆ ಕಾಣುತ್ತಿತ್ತು. ವಿಯೋಗಿನಿಮೈಕ್ಷತ ದಾಡಿಮೀಮಸೌ ಪ್ರಿಯಸ್ಮೃತೇಃ ಸ್ಪಷ್ಟಮುದೀತಕಣ್ಟಕಾಮ್ I ಫಲಸ್ತನಸ್ಥಾನವಿದೀರ್ಣರಾಗಿಹೃದ್ವಿಶಚ್ಛುಕಾಸ್ಯ ಸ್ಮರಕಿಂಶುಕಾಶುಗಾಮ್ II೮೩II ದಾಳಿಂಬೆ ಹಣ್ಣಿನ ಮೇಲೆ ಕುಳಿತಿದ್ದ ಪಕ್ಷಿಯು ತನ್ನ ಕೆಂಪಾದ ಕೊಕ್ಕಿನಿಂದ ಕುಕ್ಕುತ್ತಾ ಹಣ್ಣಿನಲ್ಲಿದ್ದ ಮುಳ್ಳನ್ನು ಬೇರ್ಪಡಿಸಿ,ಹಣ್ಣಿನ ಸಿಪ್ಪೆಯನ್ನು ಬೇರ್ಪಡಿಸಿ ಒಂದೊಂದೆ ಬೀಜವನ್ನು ತಿನ್ನಲು ಪ್ರಾರಂಬಿಸಿತು.ಆ ಕೆಂಪು ಭಾಗವು ಮನ್ಮಥನು ಹಿಡಿಯುವ ಪಲಾಶಪುಷ್ಪಬಾಣದ ಹಾಗೆ ಕಾಣುತ್ತಿತ್ತು. ಸ್ಮರಾರ್ಧಚಂದ್ರೇಷುನಿಭೇ ಕ್ರಶೀಯಸಾಂ ಸ್ಫುಟಂ ಪಲಾಶೇsಧ್ವಜುಷಾಂ ಪಲಾಶನಾತ್ I ಸ ವೃನ್ತಮಾಲೋಕತ ಖಣ್ಡಮನ್ವಿತ ವಿಯೋಗಹೃತ್ಖಣ್ಡಿನಿ ಕಾಲಖಣ್ಡಜಮ್ II೮೪II ನಳನು ಮನ್ಮಥನ ಅರ್ಧ ಚಂದ್ರಾಕಾರದ ಬಾಣಕ್ಕೆ ಸಮಾನವಾದ, ವಿರಹಿಗಳ ಹೃದಯವನ್ನು ಭೇದಿಸಿ [ಮಾಂಸದ]ಪಲದ ತುಂಡುಗಳನು ತಿನ್ನುತ್ತಿರುವ ಕಾರಣ ಆ ಹೂವಿಗೆ ಪಲಾಶಪುಷ್ಪ ಎಂದು ಹೆಸರು ಬಂದಿದೆ. ಅಂತಹ ಕೆಂಪಾದ ತುಂಡುಗಳು[ಹೂ] ಕೆಳಗೆ ಬಿದ್ದಿರುವುದನ್ನು ನೋಡಿದನು. ನವಾ ಲತಾ ಗನ್ಧವಹೇನ ಚುಮ್ಬಿತಾ ಕರಮ್ಬಿತಾಙ್ಗೀ ಮಕರನ್ದಶೀಕರೈಃ I ದೃಶಾ ನೃಪೇಣ ಸ್ಮಿತಶೋಭಿಕುಡ್ಮಲಾ ದರಾದರಾಭ್ಯಾಮ್ ದರಕಮ್ಪಿನೀ ಪಪೇ II೮೫II ಗಾಳಿಯಿಂದ ಚುಂಬಿಸಲ್ಪಡುವ ಹೂಗಳ ಪರಾಗವು ನಳನ ದೇಹಕ್ಕೆ ತಾಗಿತ್ತು. ಆಗ ತಾನೆ ಅರಳಿದ ಹೂಗಳಿಂದ ಶೋಭಾಯಮಾನವಾಗಿರುವ ಬಳ್ಳಿಗಳು ಗಾಳಿಗೆ ಬಳಕುತ್ತಿರಲು ರಾಜ ನಳನು ಭಯ ಮತ್ತು ಆದರದಿಂದ ನೋಡಿದನು. ವಿಚಿನ್ವತೀಃ ಪಾನ್ಥಪತಙ್ಗಹಿಂಸನೈರಪುಣ್ಯಕರ್ಮಾಣ್ಯಲಿಕಜ್ಜಲಚ್ಛಲಾತ್ I ವ್ಯಲೋಕಯಚ್ಚಮ್ಪಕಕೋರಕಾವಲೀಃ ಸ ಶಮ್ವರಾರೇರ್ವಲಿದೀಪಿಕಾ ಇವ II೮೬II ನಳನು ಹೂಗಳ ಮೇಲೆ ಹರಾಡುತ್ತಿರುವ ಪತಂಗಗಳಿಂದ ಮರಣ ಹೊಂದಲ್ಪಟ್ಟ ದುಂಬಿ ಎನ್ನುವ ಕಾಡಿಗೆ ಸುರಿಸುತ್ತಿರುವ ಚಂಪಕ ಹೂಗಳ ಸಮೂಹವನ್ನು ನೋಡಿದನು, ಆ ಹೂಗಳು ಹೇಗಿದ್ದವೆಂದರೆ ಕಾಮದೇವನ ಪೂಜೆಗಾಗಿ ಹೊತ್ತಿಸಿದ್ದ ದೀಪದ ಹಾಗಿತ್ತು. ಅಮನ್ಯತಾಸೌ ಕುಸುಮೇಷು ಗರ್ಭಗಂ ಪರಾಗಮನ್ಧಙ್ಕರಣಂ ವಿಯೋಗಿನಾಮ್ I ಸ್ಮರೇಣ ಮುಕ್ತೇಷು ಪುರಾ ಪುರಾರಯೇ ತದಙ್ಗಭಸ್ಮೇವ ಶರೇಷು ಸಙ್ಗತಮ್ II೮೭II ನಳನು ಹೂಗಳ ಒಳಗೆ ಇರುವ ವಿರಹಿಗಳನ್ನು ಕುರುಡು ಮಾಡುವಂತಹ ಪರಾಗವನ್ನು ಪ್ರಾಚೀನಕಾಲದಲ್ಲಿ ಮನ್ಮಥನಿಂದ ಮಹಾದೇವನ ಮೇಲೆ ಬಿಟ್ಟ ಬಾಣಕ್ಕೆಅಂಟಿಕೊಂಡಿರುವ [ಮಹಾದೇವನ] ಶರೀರದ ಭಸ್ಮ ಎಂದು ತಿಳಿದಿದ್ದನು. ಪಿಕಾದ್ವನೇ ಶೃಣ್ವತಿ ಭೃಙ್ಗಹುಙ್ ಕೃತೈರ್ದಶಾಮುದಞ್ಚತ್ಕರುಣೇ ವಿಯೋಗಿನಾಮ್ I ಅನಾಸ್ಥಯಾ ಸೂನಕರಪ್ರಸಾರಿಣೀಂ ದದರ್ಶ ದೂನಸ್ಸ್ಥಲಪದ್ಮಿನೀಂ ನಲಃ II೮೮II ವೇದನೆಯಲ್ಲಿರುವ ನಳನು ಆಗ ತಾನೆ ಅರಳಿರುವ ಹೂಗಳನ್ನು ಹೊಂದಿರುವ ಮರವನ್ನು ಕರುಣೆಯಿಂದ ನೋಡಿದನು. ಕೋಗಿಲೆ ಮತ್ತು ದುಂಬಿಗಳು ಮಾಡುವ ಮಧುರವಾದ ಝೇಂಕಾರ ನಾದದಿಂದ ವಿರಹಿ ಮತ್ತು ವಿರಹಿಣಿಯರಲ್ಲಿ ಉಂಟಾಗುವ ವಿರಹ ವೇದನೆಯ ದುಃಸ್ಥಿತಿಯನ್ನು ನೆನೆದು ಇಷ್ಟವಿಲ್ಲದಿದ್ದರೂ ಅರಳಿರುವ ಕಮಲವನ್ನು ನೋಡುತ್ತಾ ನಿಂತನು. ರಸಾಲಸಾಲಃ ಸಮದೃಶ್ಯತಾಮುನಾ ಸ್ಪುರದ್ ದ್ವಿರೇಫಾರವರೋಷಹುಙ್ಕೃತಿಃ I ಸಮೀರಲೌಲೈರ್ಮುಕುರ್ಲೈವಿಯೋಗಿನೇ ಜನಾಯ ದಿತ್ಸನ್ನಿವ ತರ್ಜನಾಭಿಯಮ್ II೮೯II ಅಲ್ಲಿಯೇ ಮೇಲೆ ಸುತ್ತುತ್ತಾ ಧ್ವನಿ ಮಾಡುತ್ತಿರುವ ದುಂಬಿಗಳು ಕೋಪದಿಂದ ಕೂಗಾಡುತ್ತಿರುವ ಹಾಗೆ, ಗಾಳಿಯಿಂದ ಅಲುಗಾಡುತ್ತಿರುವ ಬಳ್ಳಿಗಳು [ಬೆರಳಿನ ರೂಪ ಧರಿಸಿ] ವಿರಹಿ ಜನರನ್ನು ನಿಂದಿಸುತ್ತಿದೆ ಎನ್ನುವ ಭಯ ಹುಟ್ಟಿಸುವ ಮಾವಿನ ಹಣ್ಣಿನ ಮರವನ್ನು ನೋಡಿದ್ದನು. ದಿನೇ ದಿನೇ ತ್ವಂ ತನುರೇಧಿ ರೇsಧಿಕಂ ಪುನಃ ಪುನರ್ಮೂರ್ಚ್ಛ ಚ ತಾಪಮೃಚ್ಛ ಚ I ಇತೀವ ಪಾನ್ಥಾಞ್ಶಪತಃ ಪಿಕಾನ್ ದ್ವಿಜಾನ್ ಸಖೇದಮೈಕ್ಷಿಷ್ಟ ಸ ಲೋಹಿತೇಕ್ಷಣಾನ್ II೯೦II "ಹೇ, [ವಿರಹಿ] ನೀನು ದಿನ ಪ್ರತಿದಿನ ಹೆಚ್ಚು ಕೃಶವಾಗು, ಮತ್ತೆ ಮತ್ತೆ ರ್ಮೂಚ್ಛೆ ಹೊಂದು, ನಿನ್ನ ವಿರಹ ಹೆಚ್ಚುತ್ತಾ ಇರಲಿ" ಎಂದು [ವಿರಹಿಗಳಿಗೆ] ಶಾಪ ಕೊಡುವ ಕೆಂಪು ಕೆಂಪು ಕಣ್ಣುಳ್ಳ ಕೋಗಿಲೆಯನ್ನು ನಳನು ದುಃಖದಿಂದ ನೋಡಿದನು. ಅಲಿಸ್ರಜಾ ಕುಡೂಮಲಮುಚ್ಚಶೇಖರಂ ನಿಪೀಯ ಚಾಮ್ಪೇಯಮಧೀರಯಾ ಧಿಯಾ I ಸ ಧೂಮಕೇತುಂ ವಿಪದೇ ವಿಯೋಗಿನಾಮುದೀತಮಾತಙ್ಕಿತವಾನಶಙ್ಕತ II೯೧II [ದೀಪದಜ್ವಾಲೆಗೆ ಸಮಾನವಾದ] ಚಂಪಕಮಾಲೆ, ಕಡುಮಾಲೆಯ ಅಗ್ರಭಾಗದಲ್ಲಿರುವ ಭ್ರಮರಗಳ ಸಾಲನ್ನು ವಿರಹವೇದನೆ ತುಂಬಿರುವ ಮನದಿಂದ ನೋಡಿ ಶಂಕೆ ಪಟ್ಟನು. ರಾಜ[ನಳ]ನ ಮನಸ್ಸಿನಲ್ಲಿ ವಿಯೋಗಿ ಮತ್ತು ವಿಯೋಗಿನಿಯರ ವಿನಾಶಕಾಗಿ ಉತ್ಪತ್ತಿಯಾದ ಧೂಮಕೇತು ಎಂದು. ಗಲತ್ಪರಾಗಂ ಭ್ರಮಿಮಙ್ಗಿಭಿಃ ಪತತ್ಪ್ರಸಕ್ತಭೃಙ್ಗಾವಲಿ ನಾಗಕೇಸರಮ್ I ಸ ಮಾರನಾರಾಚನಿಘರ್ಷಣಸ್ಖಲಜ್`ಜ್ವಲತ್ಕಣಂ ಶಾಣಮಿವ ವ್ಯಲೋಕಯತ್ II೯೨II ನಳನು ನಾಗಕೇಸರ ಹೂವಿನಲ್ಲಿಂದ ಮಕರಂದಕ್ಕಾಗಿ ಮೇಲೆ ಸುತ್ತುತ್ತಿದ್ದ ದುಂಬಿಗಳ ಸಮೂಹ, ಅದರ ಮೇಲೆ ಕುಳಿತ ಮಕರಂದವನ್ನು ಹೀರುತ್ತಿದ್ದ [ನಾನಾಪ್ರಕಾರದ] ದುಂಬಿಗಳು ಅದರ ಮೇಲೆ ಕುಳಿತುಕೊಳ್ಳಲು ಮುಂದೆ ನುಗ್ಗುತ್ತಿದ್ದ, ದುಂಬಿಗಳ ಸಮೂಹವನ್ನು ನೋಡಿದನು. ಮನ್ಮಥನು ಬಾಣದ ಅಗ್ರಭಾಗವನ್ನು ಚೂಪು ಮಾಡುವಾಗ ಸಂಘರ್ಷಣೆಯಿಂದ ಹೊರಗೆ ಬರುತ್ತಿರುವ ಅಗ್ನಿ ಕಣಗಳೆಂದು ತಿಳಿದನು. ತದಙ್ಗಮುದ್ದಿಶ್ಯ ಸುಗನ್ಧಿ ಪಾತುಕಾಃ ಶಿಲೀಮುಖಾಲೀಃ ಕುಸುಮಾದ್ ಗುಣಸ್ಪೃಶಃ I ಸ್ವಚಾಪದುರ್ನಿರ್ಗತಮಾರ್ಗಣಭ್ರಮಾತ್ ಸ್ಮರಃ ಸ್ವನನ್ತೀರವಲೋಕ್ಯ ಲಜ್ಜಿತಃ II೯೩II ತಂಪಾದ ಗಾಳಿಯು ಬೀಸುವಾಗ ಅದರಲ್ಲಿ ಬರುವ ಪರಾಗವು ನಳನ ದೇಹಕ್ಕೆ ತಾಗಿ, ಅವನ ದೇಹವು ಸುಗಂಧ ಭರಿತವಾಗಿರುವ ಕಾರಣ ದುಂಬಿಗಳ ಸಮೂಹವು ಝೇಂಕಾರ ಮಾಡುತ್ತಾ ಅವನ ಸುತ್ತಲೂ ಸುತ್ತುತ್ತಿತ್ತು. ಇದನ್ನು ಕಂಡ ಮನ್ಮಥನು ತನ್ನ ಧನುಸ್ಸಿಗೆ ಹೂಡುವ ಹೂಬಾಣವೆಂದು ಭ್ರಾಂತಿಗೊಂಡನು, ಬಾಣವಲ್ಲವೆಂಬ ಸತ್ಯಾಂಶ ತಿಳಿದಾಗ ಲಜ್ಜೆಯಿಂದ ತಲೆ ತಗ್ಗಿಸಿದನು. ಮರುಲ್ಲಲತ್ಪಲ್ಲವಕಣ್ಟಕೈಃ ಕ್ಷತಂ ಸಮುಚ್ಚಲಚ್ಚನ್ದನಸಾರಸೌರಭಮ್ I ಸ ವಾರನಾರೀಕುಚಸಞ್ಚಿತೋಪಮಂ ದದರ್ಶ ಮಾಲೂರಫಲಂ ಪಚೇಲಿಮಮ್ II೯೪II ಗಾಳಿಯು ಬೀಸುತ್ತಿರುವಾಗ ಮುಳ್ಳುಗಳಿಗೆ ತಾಗಿ ಹಾಳಾದಂತಹ ಹೂಗಳಿಂದ ಬಂದಂತಹ ಸುವಾಸನೆಯು, ವಿಟಸ್ತ್ರೀಯರು [ವೇಶ್ಯೆ] ಲೇಪಿಸಿಕೊಂಡಂತಹ ಚಂದನದ ಸುಗಂಧಕ್ಕೆ ಸಮಾನವಾಗಿತ್ತು. ಅವರ ಸ್ತನಗಳಿಗೆ ಸಮಾನವಾಗಿರುವ, ಗಾಳಿಯಲ್ಲಿ ಅಲುಗಾಡುತ್ತಿರುವ, ಮುಳ್ಳಿನಿಂದ ಕ್ಷತಿಗೊಂಡ, ಹಣ್ಣಾದ, ಸುಗಂಧಭರಿತವಾದ ಬಿಲ್ವ ಹಣ್ಣನ್ನು ನೋಡಿದನು. ಯುವದ್ವಯೀಚಿತ್ತನಿಮಜ್ಜನೋಚಿತಪ್ರಸೂನಶೂನ್ಯೇತರಗರ್ಭಗಹ್ವರಮ್ I ಸ್ಮರೇಷುಧೀಕೃತ್ಯ ಧಿಯಾ ಭಯಾನ್ಧಯಾ ಸ ಪಾಟಲಾಯಾಃ ಸ್ತಬಕಂ ಪ್ರಕಮ್ಪಿತಃ II೯೫II ಯುವಕ,ಯುವತಿಯರ ಜೋಡಿಯ ಮನಸ್ಸನ್ನು ವಿಕಾರಗೊಳಿಸುವಲ್ಲಿ ಸಕ್ಷಮವಾಗಿರುವ ಹಣ್ಣುಗಳಿಂದ ತುಂಬಿರುವ ಪಾಟಲ ವೃಕ್ಷದ ಹಣ್ಣಿನಗೊಂಚ್ಚಲನ್ನು ಭಯದಿಂದ ಭ್ರಮೆಗೋಡ ಬುದ್ಧಿಯಿಂದ ಕಾಮದೇವನ ಬಾಣದ ಬತ್ತಳಿಕೆ ಎಂದು ತಿಳಿದನು. ಮುನಿದ್ರುಮಃ ಕೋರಕಿತಃ ಶಿತಿಧ್ಯುತಿರ್ವನೇsಮುನಾಮನ್ಯತ ಸಿಂಹಿಕಾಸುತಃ I ತಮಿಸ್ರಪಕ್ಷತ್ರುಟಿಕೂಟಭಕ್ಷಿತಂ ಕಲಾಕಲಾಪಂ ಕಿಲ ವೈಧವಂ ವಮನ್ II೯೬II ನಳನ ಶ್ವೇತ ವರ್ಣದ ಹೂವುಗಳನ್ನು, ಹಚ್ಚಹಸಿರಿನ ಎಲೆಗಳಿರುವ ಅಗಸ್ತ್ಯ ವೃಕ್ಷವನ್ನುನೋಡಿದನು. ಹಚ್ಚಹಸಿರು ಎಲೆ ಇರುವ ಕಾರಣ ಮರದಿಂದ ಕಾಡಿಗೆ ಕಾಂತಿ ಹೊರಬರುತ್ತಿತ್ತು. ಅದು ಕೃಷ್ಣಪಕ್ಷದಲ್ಲಿ ಚಂದ್ರನ ಕಲೆಯನ್ನು ತಿನ್ನುವ ರಾಹು ಮತ್ತೆ ಅದನ್ನು ಹೊರಗೆ ಬಿಡುವಂತಿತ್ತು. ಪುರಾಹಠಾಕ್ಷಿಪ್ತತುಷಾರಪಾಣ್ಡುರಚ್ಛದಾವೃತೇರ್ವೀರುಧಿ ಬದ್ಧವಿಭ್ರಮಾಃ I ಮಿಲನ್ನಿಮೀಲಂ ಸಸೃಜುರ್ವಿಲೋಕಿತಾ ನಭಸ್ವತಸ್ತಂ ಕುಸುಮೇಷು ಕೇಲಯಃ II೯೭II ತಂಪಾದ ಗಾಳಿಯು ಬೀಸಿದಾಗ ಲತೆಗಳು, ಬಳ್ಳಿಗಳಲ್ಲಿದ್ದ ಹೂಗಳು ಕೈಬೀಸಿ ಕರೆಯುತ್ತಿರುವಂತೆ [ದಮಯಂತಿ] ಕಾಣುತ್ತಿದ್ದರಿಂದ ಅದನ್ನು ನೋಡುತ್ತಾ ಹಾಗೆಯೇ ಕಣ್ಣನ್ನು ಮುಚ್ಚಿಕೊಂಡನು.[ಗಾಳಿಯನ್ನು ನಾಯಕನಿಗೆ, ಬಳ್ಳಿಗಳ್ಳನ್ನು ನಾಯಕಿಗೆ ಹೋಲಿಸಲಾಗಿದೆ] ಗತಾ ಯದುತ್ಸಙ್ಗತಲೇ ವಿಶಾಲತಾಂ ದ್ರುಮಾಃ ಶಿರೋಭಿಃ ಫಲಗೌರವೇಣ ತಾಮ್ I ಕಥಂ ನ ಧಾತ್ರೀಮತಿಮಾತ್ರನಾಮಿತೈಃ ಸ ವನ್ದಮಾನಾನಭಿನನ್ದತಿ ಸ್ಮ ತಾನ್ II೯೮II ಭೂದೇವಿಯ ಮಡಿಲಲ್ಲಿ ಬೆಳೆದ ವೃಕ್ಷಗಳು ಹೂ,ಹಣ್ಣುಗಳಿಂದ ತುಂಬಿದ್ದವು. ಹಣ್ಣುಗಳ ಭಾರಕ್ಕೆ ಬಾಗಿ ಆಶ್ರಯ ನೀಡಿದ ಭೂದೇವಿಗೆ ಹೃದಯಪುರ್ವಕ ನಮನ ಅರ್ಪಿಸುವಂತೆ ಕಾಣುತ್ತಿತ್ತು. ಇದನ್ನು ನೋಡಿದ ರಾಜ ಪ್ರಶಂಸೆಯನ್ನು ಮಾಡಿದಿರುವನೇ? ನೃಪಾಯ ತಸ್ಮೈ ಹಿಮಿತಂ ವನಾನಿಲೈಃ ಸುಧೀಕೃತಂ ಪುಷ್ಪರಸೈರಹರ್ಮಹಃ I ವಿನಿರ್ಮಿತಂ ಕೇತಕರೇಣುಭಿಃ ಸಿತಂ ವಿಯೋಗಿನೇsದತ್ತ ನ ಕೌಮುದೀಮುದಃ II೯೯II ಕಾಡಿನಲ್ಲಿ ಶೀತಲವಾದ, ಸುಗಂಧ ಭರಿತಗಾಳಿಯು ಬೀಸುತ್ತಿತ್ತು. ಹೂಗಳ ಪರಾಗದಿಂದ ಎಲ್ಲಾ ಕಡೆಯಲ್ಲೂ ಬಿಳಿಯಾಗಿತ್ತು. ಹಗಲಿನಲ್ಲೂ ರಾತ್ರಿಯ ಚಂದ್ರನ ಕಾಂತಿಯನ್ನು ಹರಡಿತ್ತು. ಇದರಿಂದಲೂ ವಿರಹಿ ನಳನಿಗೆ ಹೆಚ್ಚು ಆನಂದವನ್ನು ಕೊಡಲು ಸಾಧ್ಯವಾಗಲಿಲ್ಲ. ಅಯೋಗಭಾಜೋsಪಿ ನೃಪಸ್ಯ ಪಶ್ಯತಾ ತದೇವ ಸಾಕ್ಷಾದಮೃತಾಂಶುಮಾನನಮ್ I ಪಿಕೇನ ರೋಷಾರುಣಚಕ್ಷುಷಾ ಮುಹುಃ ಕುಹೂರುತಾಹೂಯತ ಚಂದ್ರವೈರಿಣೀ II೧೦೦II ದಮಯಂತಿಯ ವಿಯೋಗದಲ್ಲಿರುವ ನಳನ ಮುಖದಲ್ಲಿ ಸಾಕ್ಷಾತ್ ಚಂದ್ರನೇ ಕಾಣುತ್ತಿದ್ದರೂ, ಕ್ರೋಧದಿಂದ ಕೆಂಪು ಕೆಂಪಾದ ಕಣ್ಣುಗಳಿರುವ ಕೋಗಿಲೆಯು ಮಧುರವಾಗಿ ಕುಹು ಕುಹು ಎಂದು ಕೂಗುತ್ತಿದ್ದರೆ. ಆ ಕೋಗಿಲೆಯ ಕುಹುನಾದ ಚಂದ್ರನ ವೈರಿ ಎನ್ನಿಸಿಕೊಂಡಿತ್ತು. ಅಶೋಕಮರ್ಥಾನ್ವಿತನಾಮತಾಶಯಾ ಗತಾಞ್ಶರಣ್ಯ ಗೃಹಶೋಚಿನೋsಧ್ವಗಾನ್ I ಅಮನ್ಯತಾವನ್ತಮಿವೈಷ ಪಲ್ಲವೈಃ ಪ್ರತೀಷ್ಟಕಾಮುಜ್ಜ್ವಲದಸ್ರಜಾಲಕಮ್ II೧೦೧II ವ್ಯಾಪಾರಕ್ಕೆಂದು ಬೇರೆ ಊರುಗಳಿಗೆ ಹೋದ ವ್ಯಾಪಾರಿಗಳಲ್ಲಿ ಕಾಮದೇವನ ಬಾಣದಿಂದ ಉಂಟಾಗುವ [ಪತ್ನಿಯ ನೆನಪು] ವಿರಹವೇದನೆಯಿಂದ ಬಂದ ಕಣ್ಣೀರಿನ ಧಾರೆಯನ್ನು ತಡೆಯಲು ಅಶೋಕ ವೃಕ್ಷದಲ್ಲಿ ಆಶ್ರಯ ಪಡೆದರು. ವ್ಯಾಪಾರಿಗಳಿಗೆ ಆಶ್ರಯ ನೀಡಿದ ವೃಕ್ಷ ತನ್ನ ಹೆಸರನ್ನು ಸಾರ್ಥಕ ಮಾಡಿ ಕೊಂಡಿತು. ಅಂತಹ ಅಶೋಕ [ನ ಶೋಕಃ ಅಶೋಕಃ= ಶೋಕವನ್ನು ನಿವಾರಣೆಮಾಡುವ] ವೃಕ್ಷವನ್ನು ನಳನು ನೋಡಿದನು. ವಿಲಾಸವಾಪೀತಟವೀಚಿವಾದನಾತ್ ಪಿಕಾಲಿಗೀತೇಃ ಶಿಖಿಲಾಸ್ಯಲಾಘವಾತ್ I ವನೇsಪಿ ತೌರ್ಯತ್ರಿಕಮಾರರಾಧ ತಂ ಕ್ವ ಭೋಗಮಾಪ್ನೋತಿ ನ ಭಾಗ್ಯಭಾಗ್ಜನಃ II೧೦೨II ವಿಲಾಸಕ್ಕಾಗಿ ಕೊಳದ ತೀರದಲ್ಲಿ ಅಲೆಗಳ ನಾದ, ನವ್ಯಕೋಗಿಲೆಗಳ ಸಮೂಹಗಾನ, ನವಿಲಿನ ನೃತ್ಯ ನಿಪುಣತೆಯ ಸಂಗೀತ ಸಭೆಯು ರಾಜನಿಗೆ ಸೇವೆ ಮಾಡುತ್ತಿತ್ತು. ಭಾಗ್ಯಶಾಲಿ ವ್ಯಕ್ತಿ ಎಲ್ಲಾ ಕಡೆಯಲ್ಲೂ ಸೇವೆಯನ್ನು ಪಡೆಯುತ್ತಾನೆ. ತದರ್ಥಮಧ್ಯಾಪ್ಯ ಜನೇನ ತದ್ವನೇ ಶುಕಾ ವಿಮುಕ್ತಾಃ ಪಟವಸ್ತಮಸ್ತುವನ್ I ಸ್ವರಾಮೃತೇನೋಪಜಗುಶ್ಚ ಸಾರಿಕಾಸ್ತಥೈವ ತತ್ಪೌರುಷಗಾಯನೀಕೃತಃ II೧೦೩II ಸ್ತುತಿಪಾಠಕರಿಂದ ರಾಜನಳನ ಸ್ತುತಿಯನ್ನು ಕಲಿಸಿ ಕಾಡಿನಲ್ಲಿ ಬಿಟ್ಟಂತಹ ಪಾರಿವಾಳಗಳು, ಕಾಡಿನಲ್ಲಿಯು ತಮ್ಮ ಚತುರತೆಯಿಂದ ಪಾರಿವಾಳಗಳು ರಾಜನ ಸ್ತುತಿ ಮಾಡುತ್ತಿದ್ದವು. ಮೈನಾಕ ಪಕ್ಷಿಗಳು ನಳನ ಶೌರ್ಯ,ಪರಾಕ್ರಮದ ವರ್ಣನೆಯನ್ನು ತಮ್ಮ ಅಮೃತ ಸ್ವರದಲ್ಲಿ ಗಾಯನ ಮಾಡುತ್ತಿದ್ದವು. ಇತೀಷ್ಟಗನ್ದಾಡ್ಯಮಟನ್ನಸೌ ವನಂ ಪಿಕೋಪಗೀತೋsಪಿ ಶುಕಸ್ತುತೋsಪಿ ಚ I ಅಚಿನ್ದತಾಮೋದಭರಂ ಬಹಿಶ್ಚರಂ ವಿದರ್ಭಸುಭ್ರೂವಿರಹೇಣ ನಾನ್ತರಮ್ II೧೦೪II ಈರೀತಿಯಾಗಿ ಕಾಡಿನಲ್ಲಿ ಸುಗಂಧ ಭರಿತವಾದ ಗಾಳಿಯು ಬೀಸುತ್ತಿರುವಾಗ, ರಾಜನು ಸುತ್ತಾಡುತ್ತಾ ಕೋಗಿಲೆಗಳ ಮಧುರ ಗಾನವನ್ನು ಕೇಳುತ್ತಾ, ಪಾರಿವಾಳಗಳಿಂದ ತನ್ನ ಸ್ತುತಿಯನ್ನು ಕೇಳುತ್ತಾ, ಹೊರಗೆ ಅತ್ಯಧಿಕ ಆನಂದವನ್ನು ಪಡುತ್ತಿದ್ದರೂ, ಒಳಗೆ ವಿದರ್ಭದೇಶದ ಸುಂದರಿ ದಮಯಂತಿಯ ವಿರಹದಿಂದ ಅತ್ಯಧಿಕವಾದ ಆನಂದವನ್ನು ಪಡೆಯುತ್ತಿರಲಿಲ್ಲ. ಕರೇಣ ಮೀನಂ ನಿಜಕೇತನಂ ದಧದ್ ದ್ರುಮಾಲಬಾಲಾಮ್ಬುನಿವೇಶಶಙ್ಕಯಾ I ವ್ಯತರ್ಕಿ ಸರ್ವರ್ತುಘನೇ ವನೇ ಮಧುಂ ಸ ಮಿತ್ರಮತ್ರಾನುಸರನ್ನಿವ ಸ್ಮರಃ II೧೦೫II ನಳನು ತನ್ನ ಧ್ವಜದ ಚಿಹ್ನೆಯಾದ ಮತ್ಸ್ಯವನ್ನು ಬಲೆಯಲ್ಲಿ ಹಿಡಿಯುವರೋ ಎನ್ನುವ ಶಂಕೆಯಿಂದ ತನ್ನ ಕೈಯಲ್ಲಿಯೇ ಹಿಡಿಯಲ್ಪಟ್ಟು, ಎಲ್ಲಾ ಋತುಗಳಿಂದ ಪರಿಪುರ್ಣವಾದ ವನದಲ್ಲಿ ತನ್ನ ಮಿತ್ರ[ವಸಂತ]ನನ್ನು ಹುಡುಕುವ ಮದನನ ಹಾಗೆ ಕಾಣುತ್ತಿದ್ದನು. ಲತಾಬಲಾಲಾಸ್ಯಕಲಾಗುರುಸ್ತರುಪ್ರಸೂನಗನ್ಧೋತ್ಕರಪಶ್ಯತೋಹರಃ I ಅಸೇವತಾಮುಂ ಮಧುಗನ್ಧವಾರಿಣಿ ಪ್ರಣೀತಲೀಲಾಪ್ಲವನೋ ವನಾನಿಲಃ II೧೦೬II ಲತೆ ಎನ್ನುವ ನಾಯಕಿಯ ನೃತ್ಯ ಕಲೆಯ ಗುರು, ಎಲ್ಲೆಲ್ಲೂ ಸುಗಂಧ ಭರಿತವಾದ ಹೂ, ಹಣ್ಣುಗಳಿಂದ ತುಂಬಿರುವ ಮರಗಳು, ತಂಪಾದ ಸುಗಂಧ ಭರಿತವಾದ ನೀರಿನಿಂದ ತುಂಬಿಹರಿಯುವ ನದಿ, ಹೂಗಳ ಮಕರಂದವನ್ನು ಹೀರಿಕೊಂಡು ಸವಿಲಾಸ ಸ್ನಾನ ಮಾಡಿಸುವ ತಂಪಾದಗಾಳಿಯು ರಾಜ ನಳನ ಸೇವೆ ಮಾಡುತ್ತಿತ್ತು. ಅಥ ಸ್ವಮಾದಾಯ ಭಯೇನ ಮನ್ಥನಾಚ್ಚಿರತ್ನರತ್ನಾಧಿಕಮುಚ್ಚಿತಂ ಚಿರಾತ್ I ನಿಲೀಯ ತಸ್ಮಿನ್ನಿವಸನ್ನಪಾಂನಿಧಿರ್ವನೇ ತಡಾಹೋ ದದೃಶೇsವನೀಭುಜಾ II೧೦೭II ಅನಂತರ ರಾಜನು ಸುಂದರವಾದ ಕೊಳವನ್ನು ನೋಡಿದನು. ಆ ಕೊಳವು ಸಮುದ್ರ ಮಂಥನಕಾಲದಲ್ಲಿ ಹೆದರಿ ತನ್ನಲ್ಲಿದ್ದ ಬಚ್ಚಿಟ್ಟು ಕೊಂಡಿದ್ದ ರತ್ನಗಳಿಗಿಂತ [ಹೆಚ್ಚು]ಅಧಿಕವಾದ ಹಣವನ್ನು ತಂದು ಕಾಡಿನಲ್ಲಿ ಬಚ್ಚಿಟ್ಟುಕೊಂಡ ಸಮುದ್ರದ ಹಾಗೆ ಕಾಣುತ್ತಿತ್ತು. ಪಯೋನಿಲೀನಾಭ್ರಮುಕಾಮುಕಾವಲೀರದಾನನನ್ತೋರಗಪುಚ್ಛಸುಚ್ಛವೀನ್ I ಜಲಾರ್ಧರುದ್ಧಸ್ಯ ತಟಾನ್ತಭೂಮಿದೋ ಮೃಣಾಲಜಾಲಸ್ಯ ನಿಮಾತ್ ಬಭಾರ ಯಃ II೧೦೮II ಕೊಳವು ಭೂಮಿಯ ಕೆಲವು ಭಾಗವನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿತು. ಕೊಳದ ತೀರದ ಭೂಭಾಗವು ಸ್ವಲ್ಪ ಮೇಲೆ ಬಂದಂತೆ ಕಾಣುತ್ತಿತ್ತು. ಅದು ತಾವರೆ ಹೂವಿನ ದಟ್ಟಿನ ಸಮೂಹದ ಹಾಗೆ,ನಾಗರ ಹಾವಿನ ಬಾಲದ ಕಾಂತಿಯ ಹಾಗೆ, ನೀರಿನಲ್ಲಿ ಬಚ್ಚಿಟ್ಟುಕೊಂಡ ಐರಾವತಗಳ ದಂತದ ಕಾಂತಿಯನ್ನು ಹೊಂದಿತ್ತು. ತಟಾನ್ತವಿಶ್ರಾನ್ತತುರಙ್ಗಮಚ್ಛಟಾ-ಸ್ಫುಟಾನುಬಿಮ್ಬೋದಯಚುಮ್ಬನೇನ ಯಃ I ಬಭೌ ಚಲದ್ವೀಚಿಕಶಾನ್ತಶಾತನೈಃ ಸಹಸ್ರಮುಚ್ಚೈಃ ಶ್ರವಸಾಮಿವಾಶ್ರಯನ್ II೧೦೯II ಕೊಳದ ಬಳಿಯಲ್ಲಿ ವಿಶ್ರಾಂತಿಗಾಗಿ ನಿಂತ ಕುದುರೆಗಳ ಸಾಲಿನ ಪ್ರತಿಬಿಂಬವು ನೀರಿನಲ್ಲಿ ಕಾಣುತ್ತಿತ್ತು. ನೀರಿನ ಅಲೆಗಳ ಏರಿಳಿತವು ಚಾಟಿ ಎಟ್ಟನ್ನು ತಿಂದ ಸಾವಿರಾರು ಉಚ್ಚೈಃಶ್ರವಗಳು ನೀರಿನ ಒಳಗಡೆ ಓಡುತ್ತಿರುವಂತೆ ಕಾಣುತ್ತಿತ್ತು. ಸಿತಾಮ್ಬುಜಾನಾಂ ನಿವಹಸ್ಯ ಯಶ್ಛಲಾದ ಬಭಾವಲಿಶ್ಯಾಮಲಿತೋದರಶ್ರಿಯಾಮ್ I ತಮಃ ಸಮಚ್ಛಾಯಕಲಙ್ಕಸಙ್ಕುಲಂ ಕುಲ ಸುಧಾಂಶೋರ್ಬಹಲಂ ವಹನ್ ಬಹು II೧೧೦II ಭ್ರಮರಗಳು ಕುಳಿತಿದ್ದ ಕಾರಣ ಶ್ವೇತ ಕಮಲಗಳ ಸಮೂಹದ ಮಧ್ಯಭಾಗವು ಅಂಧಕಾರದ ಕಾಂತಿಯನ್ನು ಪಡೆದಿತ್ತು. ಆ ಅಂಧಕಾರವು ಕಲಂಕದಿಂದ ಕೂಡಿರುವ ಚಂದ್ರನು ಮೋಡಗಳ ಸಮೂಹವನ್ನು ಧರಿಸಿ ಕೊಂಡು ಶೋಭಿಸುತ್ತಿತ್ತು. ರಥಾಙ್ಗಭಾಜಾ ಕಮಲಾನುಷಙ್ಗಿಣಾ ಶಿಲೀಮುಖಸ್ತೋಮಸಖೇನ ಶಾರ್ಙ್ಗಿಣಾ I ಸರೋಜಿನೀಸ್ತಮ್ಬಕದಮ್ಬಕೈತವಾನ್ಮೃಣಾಲಶೇಷಾಹಿಭುವಾನ್ವಯಾಯಿ ಯಃ II೧೧೧II ಕೊಳವು ಹಂಸಗಳಿಂದ ಕೂಡಿದ್ದು, ಕಮಲಗಳಿಂದ ಶೋಭಿಸುತ್ತಾ, ಭ್ರಮರಗಳ ಸಮೂಹದ ಜೊತೆಯಲ್ಲಿ ಶೇಷನಾಗರಹಾವಿನ ಹಾಗೆ ಕಮಲದ ನಾಳದ ಸಮೂಹವು ಮೃದುತ್ವವನ್ನು ಹೊಂದಿತು. ಅದು ಲಕ್ಷ್ಮೀ ಸಮೇತನಾದ ಮಹಾವಿಷ್ಣು ವಿಶ್ರಾಂತಿ ಪಡೆಯವ ಶೇಷಶಯನದ ಸಮಾನತೆಯನ್ನು ಪಡೆದಿತ್ತು. ತರಙ್ಗಿಣೀರಙ್ಕಜುಷಃ ಸ್ವವಲ್ಲಭಾಸ್ತರಙ್ಗರೇಖಾ ಬಿಭರಾಮ್ಬಭೂವ ಯಃ I ದರೋದ್ಗತೈಃ ಕೋಕನದೌಘಕೋರಕೈರ್ಧೃತಪ್ರವಾಲಾಙ್ಕುರಸಂಚಯಶ್ಚ ಯಃ II೧೧೨II ಕೊಳದ ತೀರದಲ್ಲಿ ಬರುವ ಅಲೆಗಳನ್ನು ಮಾಲೆಯನ್ನಾಗಿ ಮಾಡಿ ತನ್ನ ಪ್ರಿಯತಮ ನದಿಗೆ ಹಾಕುವ ಇಚ್ಚೆಯಿಂದ ಬರುವಂತೆ ಕಾಣುತ್ತಿತ್ತು. ಕೊಳದ ಮೇಲ್ ಭಾಗಕ್ಕೆ ಬಂದ ಕೆಂಪು ಕಮಲದ ಸಮೂಹದ ಮೇಲೆ ಕುಳಿತ ದುಂಬಿಯು ಪ್ರೀತಿಯ ಅಂಕುರದ ಹಾಗೆ ಕಾಣುತ್ತಿತ್ತು. ಮಹೀಯಸಃ ಪಙ್ಕಜಮಣ್ಡಲಸ್ಯ ಯಶ್ಛಾಲೇನ ಗೌರಸ್ಯ ಚ ಮೇಚಕಸ್ಯ ಚ I ನಲೇನ ಮೆನೇ ಸಲಿಲೇ ನಿಲೀನಯೋಸ್ತ್ವಿಷ ವಿಮುಞ್ಚನ್ ವಿಘುಕಾಲಕೂಟಯೋಃ II೧೧೩II ಕೊಳದಲ್ಲಿದ್ದ ನೀಲಿ ಕಮಲಗಳ ಮತ್ತು ಬಿಳಿ ಕಮಲಗಳ ಸಮೂಹದ ನಾಳವು ನೀರಿನಲ್ಲಿ ಬಚ್ಚಿಟ್ಟುಕೊಂಡ ಚಂದ್ರ ಮತ್ತು ಕಾಲಕೂಟ ವಿಷದ ಕಾಂತಿಯನ್ನು ಹೊರಗೆ ಬಿಡುತ್ತಿದೆ ಎಂದು ತಿಳಿದನು. ಚಲೀಕೃತಾ ಯತ್ರ ತರಙ್ಗರಿಙ್ಗಣೈರಬಾಲಶೈವಾಲಲತಾಪರಮ್ಪರಾಃ I ಧ್ರುವಂ ದಘುರ್ವಾಡವಹವ್ಯವಾಡವಸ್ಥಿತಿಪ್ರರೋಹತ್ತಮಭೂಮಧೂಮತಾಮ್ II೧೧೪II ಕೊಳದ ತೀರದಲ್ಲಿ ಸತತವಾಗಿ ಅಲೆಗಳು ಏಳುವುದರಿಂದ ನೀರಿನಲ್ಲಿದ್ದ ಹೂ ಬಳ್ಳಿಗಳು ಅಲುಗಾಡುತ್ತಿದ್ದವು. ಕೊಳದೊಳಗೆ ಬಚ್ಚಿಟ್ಟುಕೊಂಡ ಜ್ವಾಲಾಮುಖಿಯಿಂದ ಅಧಿಕವಾಗಿ ಹೊರಗೆ ಬರುವ ಹೊಗೆಯು ನೀರಿನಿಂದ ಮೇಲೆ ಬಂದು ಅಲೆಯಾಗಿ ತೀರಕ್ಕೆ ಬರುತ್ತಿರುವಂತ್ತಿತ್ತ್ತ್ತು. ಪ್ರಕಾಮಮಾದಿತ್ಯಮವಾಪ್ಯ ಕಣ್ಟಕೈಃ ಕರಮ್ಬಿತಾಮೋದಭರಂ ವಿವೃಣ್ವತೀ I ಧೃತಸ್ಫುಟಶ್ರೀಗೃಹವಿಗ್ರಹಾ ದಿವಾ ಸರೋಜಿನೀ ಯತ್ಪ್ರಭವಾಪ್ಸರಾಯಿತಾ II೧೧೫II ಆದಿತ್ಯನ [ಸೂರ್ಯ] ಪ್ರಕಾಶವನ್ನು ಪಡೆದ ಮುಳ್ಳಿನ ಜೊತೆಯಿರುವ ಹೂಗಳು ಎಲ್ಲೆಡೆ ಸುಗಂಧವನ್ನು ಹರಡುತ್ತದೆ. ಹಗಲಿನಲ್ಲಿ ಹರಡುವ ಕಮಲದ ಶರೀರ ರೂಪವನ್ನು ಧರಿಸಿರುವ[ಕೊಳ] ಕಮಲಿನಿಯರು ಅತ್ಯಧಿಕವಾಗಿ ಕಾಮವಿಕಾರವನ್ನು ಹೊಂದಿರುವ ಆದಿತ್ಯ[ಇಂದ್ರ] ನನ್ನು ಪಡೆದು ಮುಳ್ಳುಗಳಿಂದ [ರೋಮಾಞ್ಚನ] ಕೂಡಿರುವ, ಆನಂದದ[ಹರ್ಷ] ಅತಿಶಯವನ್ನು ಪ್ರಕಟಪಡಿಸುತ್ತಿರುವ ಅಪ್ಸರೆಯರ ಸಮಾನವಾಗಿತ್ತು. ಅಂತಹ ಅಸಾಧಾರಣ ಸೌಂದರ್ಯದ ಶರೀರವನ್ನು ಹೊಂದಿರುವವರನ್ನು ಸ್ವರ್ಗಲೋಕವು ಧರಿಸಿದೆ. ಯದಮ್ಬುಪೂರಪ್ರತಿಬಿಮ್ಬಿತಾಯತಿರ್ಮರುತ್ತರಙ್ಗೈಸ್ತರಲಸ್ತಟದ್ರುಮಃ I ನಿಮಜ್ಯ ಮೈನಾಕಮಹೀಭೃತಃ ಸತಸ್ತತಾನ ಪಕ್ಷಾನ್ಧುವತಃ ಸಪಕ್ಷತಾಮ್ II೧೧೬II ಕೊಳದ ತೀರದಲ್ಲಿ ಬೆಳೆದ ಮರಗಳ ನೆರಳು ನೀರಿನ ಮೇಲೆ ಬೀಳುವುದು. ಕೊಳದ ತೀರದಲ್ಲಿ ಅಲೆಗಳ ಏರಿಳಿತವಿರುವುದರಿಂದ ಪ್ರತಿಬಿಂಬವು ಅಲುಗಾಡುವಂತೆ ತೋರುತ್ತದೆ. ಪ್ರಾಚೀನಕಾಲದಲ್ಲಿ ಮೈನಾಕ ಪರ್ವತವು ಇಂದ್ರನಿಗೆ ಹೆದರಿ ಸಮುದ್ರದಲ್ಲಿ ಬಚ್ಚಿಟ್ಟುಕೊಂಡಿತ್ತು, ಅದು ನೀರಿನಲ್ಲಿ ತನ್ನ ರೆಕ್ಕೆಗಳನ್ನು ಅಲ್ಲುಗಾಡಿಸಿದಾಗ ಕೊಳದ ತೀರದಲ್ಲಿ ಕಾಣುವ ಪ್ರತಿಬಿಂಬದ ಏರಿಳಿತಕ್ಕೆ ಸಮಾನವಾಗಿ ಕಾಣುತ್ತಿತ್ತು. ಪಯೋಧಿಲಕ್ಷ್ಮೀಮುಷಿ ಕೇಲಿಪಲ್ವಲೇ ರಿರಂಸುಹಂಸೀಕಲನಾದಸಾದರಮ್ I ಸ ತತ್ರ ಚಿತ್ರಂ ವಿಚರನ್ತಮನ್ತಿಕೇ ಹಿರಣ್ಮಯಂ ಹಂಸಮಂಭೋಧಿ ನೈಷಧಃ II೧೧೭II ಪ್ರಿಯಾಸು ಬಾಲಾಸು ರತಿಕ್ಷಮಾಸು ಚ ದ್ವಿಪತ್ರಿತಂ ಪಲ್ಲವಿತಂ ಚ ಬಿಭ್ರತಮ್ I ಸ್ಮರಾರ್ಜಿತಂ ರಾಗಮಹೀರುಹಾಙ್ಕುರಂ ಮಿಷೇಣ ಚಞ್ಚ್`ವೋಶ್ಚರಣದ್ವಯಸ್ಯ ಚ II೧೧೮II ನಿಷಧದೇಶದ ರಾಜ ನಳನು ಸಮುದ್ರದ ಶೋಭೆಯನ್ನು ಅಪಹರಿಸಿದ ಸರೋವರದ ರಮಣೀಯತೆಯನ್ನು ನೋಡುತ್ತಿದ್ದನು. ಸರೋವರದಲ್ಲಿ ಹಂಸಪಕ್ಷಿಗಳು ನೀರಿನಲ್ಲಿ ಈಜುತ್ತಾ, ಜಲಕ್ರೀಡೆ ಆಡುತ್ತಿದ್ದವು.ನೀರಿನಲ್ಲಿ ಆಡುತ್ತಾ, ಒಂದರ ಮೇಲೊಂದು ಹಾರುತ್ತಾ, ಕೊಕ್ಕಿನಿಂದ ತಿಂಡಿಯನ್ನು ತಿನಿಸುತ್ತಾ, ಸರಸಸಲ್ಲಾಪದಲ್ಲಿ ತೊಡಗಿದ್ದವು. ಜಲಕ್ರೀಡೆಯಿಂದ ಆಯಾಸಗೊಂಡ ಪಕ್ಷಿಗಳು ತಲೆಯನ್ನು ಬಗ್ಗಿಸಿ ತಮ್ಮ ರೆಕ್ಕೆಗಳಲ್ಲಿ ತಮ್ಮ ಕತ್ತನ್ನು ಮುಚಿಟ್ಟುಕೊಂಡು ವಿಶ್ರಾಂತಿ ಪಡೆಯುತ್ತಿದ್ದವು. ಇವುಗಳಲ್ಲಿ ಚಿನ್ನದ ಬಣ್ಣ ಹೊಂದಿದ್ದ ಒಂದು ಪಕ್ಷಿಯು ಅತ್ಯಂತ ರಮಣೀಯವಾಗಿತ್ತು. ಅದು ರಾಜನನ್ನು ತನ್ನ ಕಡೆ ಆರ್ಕಷಿಸಿತ್ತು. ಅದು ತನ್ನ ಕತ್ತನ್ನು ಬಗ್ಗಿಸಿ ರೆಕ್ಕೆಗಳಲ್ಲಿ ಮುಚಿಟ್ಟುಕೊಂಡಿತ್ತು. ಮಹೀಮಹೇನ್`ದ್ರಸ್ತಮವೆಕ್ಷ್ಯ ಸ ಕ್ಷಣಂ ಶಕುನ್ತಮೇಕಾನ್ತಮನೋವಿನೋದಿನಮ್ I ಪ್ರಿಯಾವಿಯೋಗಾದ್ವಿಧುರೋsಪಿ ನಿರ್ಭರಂ ಕುತೂಹಲಾಕ್ರಾನ್ತಮನಾ ಮನಾಗಭೂತ II೧೧೯II ಭೂಲೋಕದ ಇಂದ್ರ[ನಳ]ನು ಅತ್ಯಂತ ಸುಂದರವಾದ ಈ ಪಕ್ಷಿಯನ್ನು ನೋಡಿ, ಒಂದು ಕ್ಷಣದಲ್ಲಿ ಅದರ ಕಡೆ ಆರ್ಕಷಿಸಲ್ಪಟ್ಟು ತನ್ನ ಪ್ರೇಯಸಿಯ ವಿಯೋಗವನ್ನು ಮರೆತು ಕುತೂಹಲದಿಂದ ಅದನ್ನೇ ನೋಡುತ್ತಾ ನಿಂತನು. ಅವಶ್ಯಭವ್ಯೇಷ್ವನವಗ್ರಹಗ್ರಹಾ ಯಯಾ ದಶಾ ಧಾವತಿ ವೇಧಸಃ ಸ್ಪೃಹಾ I ತೃಣೇನ ವಾತ್ಯೇವ ತಯಾನುಗಮ್ಯತೇ ಜನಸ್ಯ ಚಿತ್ತೇನ ಭೃಶಾವಶಾತ್ಮನಾ II೧೨೦II ಅತ್ಯಂತ ಮನೋಹರವಾದ ಹಂಸ ಪಕ್ಷಿ, ಬ್ರಹ್ಮನ ಇಚ್ಛೆಯಂತೆ ನಳನ ಮನಸ್ಸನ್ನು ತನ್ನ ಕಡೆಗೆ ಆರ್ಕಷಿಸಿತು. ನಳನು ತನ್ನ ಮನಸ್ಸನು ನಿಯಂತ್ರಿಸಲಾಗಲಿಲ್ಲ. ಅವನ ಮನಸ್ಸಿನಲ್ಲಿಂದ ದಮಯಂತಿಯ ವಿಯೋಗವೇದನೆಯನ್ನು ಮರೆತು ಆ ಪಕ್ಷಿಯನ್ನೇ ನೋಡುತ್ತಾ ನಿಂತನು. ಬಿರುಗಾಳಿಗೆ ಸಿಲುಕಿದ ಒಂದು ಹುಲ್ಲುಕಡ್ಡಿಯು ವಿವಶವಾಗಿ ಅದರ ಹಿಂದೆಯೇ ಹೋಗುವಂತೆ. ಅಥಾವಲಮ್ಬ್ಯ ಕ್ಷಣಮೇಕಪಾದಿಕಾಂ ತದಾ ನಿದದ್ರಾವುಪಪಲ್ವಲಂ ಖಗಃ I ಸ ತಿರ್ಯಗಾವರ್ಜಿತಕನ್ಧರಃ ಶಿರಃ ಪಿಧಾಯ ಪಕ್ಷೇಣ ರತಿಕ್ಲಮಾಲಸಃ II೧೨೧II ಆ ಪಕ್ಷಿಯು ರತಿಕ್ರೀಡೆಯಿಂದ ಆಯಾಸಗೊಂಡು ವಿಶ್ರಾಂತಿಗಾಗಿ ತನ್ನ ಕತ್ತನ್ನು ತಿರುಗಿಸಿ ಕೆಳಗೆ ಬಗ್ಗಿಸಿ ರೆಕ್ಕೆಗಳ ಮಧ್ಯದಲ್ಲಿ ಮುಚ್ಚಿಟ್ಟುಕೊಂಡು ಒಂದೇಕಾಲಿನಲ್ಲಿ ನಿಂತಿತ್ತು. ಅದು ಸರೋವರದ ತೀರದಲ್ಲಿ ನಿದ್ರೆ ಮಾಡುತ್ತಿತ್ತು. ಸನಾಲಮಾತ್ಮಾನನನಿರ್ಜಿತಪ್ರಭಂ ಹ್ರಿಯಾ ನತ ಕಾಞ್ಚನಮಮ್ಬುಜನ್ಮ ಕಿಮ್ I ಅಬುದ್ಧ ತಂ ವಿದ್ರುಮದಣ್ಡಮಣ್ಡಿತಂ ಸ ಪೀತಮಮ್ಭಃಪ್ರಭುಚಾಮರಂ ನು ಕಿಮ್ II೧೨೨II " ನನ್ನ ಮುಖದ ಸೌಂದರ್ಯವನ್ನು ಅಪಹರಿಸಿದೆ ಎನ್ನುವ ಕಾರಣ ನಾಚಿಕೆಯಿಂದ ತಲೆಯನ್ನು ತಗಿಸಿದ, ನಾಲದಂಡದ ಸಹಿತ ಸ್ವರ್ಣದ ಕಮಲವೊ ? ಅಥವಾ ಸ್ವರ್ಣದಂಡ ಸಹಿತವಾದ ಪೀತವರ್ಣದ ಜಲಾಧಿಪತಿಯ [ವರುಣ] ಚಾಮರವೊ ?" ಎಂದು ನಳಮಹಾರಾಜನು ಹಂಸವನ್ನು ನೋಡಿ ಭ್ರಮೆಗೊಂಡನು. ಕೃತಾವರೋಹಸ್ಯ ಹಯಾದುಪಾನಹೌ ತತಃ ಪದೇ ರೇಜತುರಸ್ಯ ಬಿಭ್ರತೀ I ತಯೋಃ ಪ್ರವಾಲೈರ್ವನಯೋಸ್ತಥಾಮ್ಬುಜೈನ್ರಿಯೋದ್ಧುಕಾಮೇ ಕಿಮು ಬದ್ಧವಮ್ರಣೀ II೧೨೩II ಅನಂತರ ರಾಜನಳನು ನಿಧಾನವಾಗಿ ಕುದುರೆಯಿಂದ ಕೆಳಗೆ ಇಳಿದನು. ಅವನ ಎರಡು ಕಾಲುಗಳಿಗೆ ಪಾದರಕ್ಷೆ ತೊಡಸಿದಾಗಿತ್ತು, ಅದು ಮುಂದೆ ನಡೆಯವ [ಕಾಲ್ಪನಿಕ] ಯುದ್ದಕ್ಕೆ ಸಿದ್ಧತೆಯಾಗಿತ್ತು. [ಕಾಡು,ನೀರು] ಕಮಲ ಮತ್ತು ಪಲ್ಲವ[ಚಿಗುರೆಲೆ] ಜೊತೆಯಲ್ಲಿ ಯುದ್ಧ ಮಾಡಲು ಇಚ್ಛೆಪಟ್ಟು ರಕ್ಷಾಕವಚ ಧರಿಸಿದನ್ನು. ವಿಧಾಯ ಮೂರ್ತಿಂ ಕಪಟೇನ ವಾಮನೀಂ ಸ್ವಯಂ ಬಲಿಧ್ವಂಸಿವಿಡಮ್ಬಿನೀಮಯಮ್ I ಉಪೆತಪಾರ್ಶ್ವಶ್ಚರಣೇನ ಮೌನಿನಾ ನೃಪಃ ಪತಙ್ಗಂ ಸಮಧತ್ತ ಪಾಣಿನಾ II೧೨೪II ರಾಜನು ತನ್ನ ಶರೀರವನ್ನು ವಾಮನಾವತಾರದ ವಿಷ್ಣುವಿನ ಹಾಗೆ ದೇಹವನ್ನು ಚಿಕ್ಕದಾಗಿ ಮಾಡಿ, ನಿಧಾನವಾಗಿ ಹೆಜ್ಜೆಯನ್ನು ಇಡುತ್ತಾ ಹೋಗಿ ತನ್ನ ಎರಡು ಕೈಗಳಿಂದ ಆ ಪಕ್ಷಿಯನ್ನು ಹಿಡಿದು ಕೊಂಡನು ತದಾತ್ತಮಾತ್ಮಾನಮವೇತ್ಯ ಸಂಭ್ರಮಾತ್ ಪುನಃ ಪುನಃ ಪ್ರಾಯಸದುತ್ಪ್ಲವಾಯ ಸಃ I ಗತೋ ವಿರತ್ಯೋಡ್ಡಯನೇ ನಿರಾಶತಾಂ ಕರೌ ನಿರೋದ್ಧುರ್ದಶತಿ ಸ್ಮ ಕೇವಲಮ್ II೧೨೫II ಹಂಸಪಕ್ಷಿಯು ತನ್ನನ್ನು ಹಿಡಿದು ಕೊಂಡಿದ್ದಾರೆಂದು ತಿಳಿದ ಕೊಡಲೆ, ಭಯದಿಂದ ಮೇಲೆ ಹಾರಲು ಪುನಃ ಪುನಃ ಪ್ರಯತ್ನಿಸಿತು. ಅದು ಸಾಧ್ಯವಾಗದಿದ್ದಾಗ ಅಳುತ್ತಾ ತನ್ನನ್ನು ಹಿಡಿದು ಕೊಂಡಿದ್ದ ರಾಜನ ಕೈಯನ್ನು ಕೊಕ್ಕಿನಿಂದ ಕೊಕ್ಕಲು ಪ್ರಾರಂಭಿಸಿತು. ಸಸಂಭ್ರಮೊತ್ಪಾತಿಪತತ್ಕುಲಾಕುಲಂ ಸರಃ ಪ್ರಪಧ್ಯೋತ್ಕತಯಾನುಕಮ್ಪ್ರತಾಮ್ I ತಮೂರ್ಮಿಲೋಲೈಃ ಪತಗಗ್ರಹಾನ್ನೃಪಂ ನ್ಯವಾರಯದ್ ವಾರಿರುಹೈಃ ಕರೈರಿವ II೧೨೬II ಭಯದಿಂದ ಎಲ್ಲಾ ಪಕ್ಷಿಗಳು ಮೇಲೆ ಹಾರಿದ ಕಾರಣ ಸರೋವರದಲ್ಲಿ ದುಃಖದ ವಾತಾವರಣ ಉಂಟಾಯಿತು. ಮೇಲೆ ಹಾರಲು ರೆಕ್ಕೆಗಳನ್ನು ಆಡಿಸಿದಾಗ ಅದು ಕಮಲದ ಮೇಲೆ ಆಡಿ ಕಮಲವು ಚೆಲ್ಲಾಪಿಲ್ಲಿಯಾಯಿತು. ಅಲುಗಾಡುತ್ತಿರುವ ಅಲೆಗಳ ರೂಪದ ಕೈಗಳಿಂದ ರಾಜ ಹಿಡಿದಿರುವ ಪಕ್ಷಿಯನ್ನು ಬಿಡಿಸುವಂತೆ ತೋರುತ್ತಿತ್ತು. ಪತತ್ರಿಣಾ ತದ್ರುಚಿರೇಣ ವಞ್ಚಿತಂ ಶ್ರಿಯಃ ಪ್ರಯನ್ತ್ಯಾಃ ಪ್ರವಿಹಾಯ ಪಲ್ವಲಮ್ I ಚಲತ್ಪದಾಂಭೋರುಹನೂಪುರೋಪಮಾ ಚುಕೂಜ ಕೂಲೇ ಕಲಹಂಸಮಣ್ಡಲೀ II೧೨೭II ಸುಂದರವಾದ ಹಂಸಪಕ್ಷಿಗಳಿಂದ ವಂಚಿತವಾದ ಸರೋವರವನ್ನು ಬಿಟ್ಟು ಹೋಗುತ್ತಿರುವ ಶ್ರೀ[ಲಕ್ಷ್ಮಿ, ಶೋಭೆ], ಕಮಲವಾಸಿಯಾದ ಲಕ್ಷ್ಮಿಯು ಕಮಲವನ್ನು ಬಿಟ್ಟು ಹೋಗುವಾಗ ಕಾಲಿನ ಗೆಜ್ಜೆಯ ಶಬ್ದಕ್ಕೆ ಸಮಾನ ರಾಜಹಂಸಗಳು ಕಲರವ ಮಾಡುತ್ತ್ತಾ ಮೇಲೆ ಹಾರಿ ಮಂಡಲಾಕಾರದಲ್ಲಿ ಸುತ್ತುತ್ತಿದವು. ನ ವಾಸಯೋಗ್ಯಾ ವಸುಧೇಯಮೀದೃಶಸ್`ತ್ವಮಙ್ಗ ಯಸ್ಯಾಃ ಪತಿರುಜ್ಜಿತಸ್ಥಿತಿಃ I ಇತಿ ಪ್ರಹಾಯ ಕ್ಷಿತಿಮಾಶ್ರಿತಾ ನಭಃ ಖಗಾಸ್ತಮಾಚುಕ್ರುಶುರಾರವೈಃ ಖಲು II೧೨೮II "ಭೂಮಿಯ ಮರ್ಯಾದೆಯನ್ನು ಭಂಗ ಮಾಡಿದ ಭೂಪತಿಯೇ, ನೀನು ಈ ಭೂಮಿಯಲ್ಲಿ ವಾಸಿಸಲು ಯೋಗ್ಯವಲ್ಲ ?" ಈ ರೀತಿ ಭೂಮಿಯಿಂದ ಆಕಾಶದ ಕಡೆಗೆ ಹಾರಿದ ಪಕ್ಷಿಗಳ ಕುಹು ಕುಹು ಕೂಗು ರಾಜನಿಗೆ ಧಿಕ್ಕಾರ ಹೇಳುತ್ತಿತ್ತು. ನ ಜಾತರೂಪಚ್ಛದಜಾತರೂಪತಾ ದ್ವಿಜಸ್ಯ ದೃಷ್ಟೇಯಮಿತಿ ಸ್ತುವನ್ಮುಹುಃ I ಅವಾದಿ ತೇನಾಥ ಸ ಮಾನಸೌಕಸಾ ಜನಾಧಿನಾಥಃ ಕರಪಞ್ಜರಸ್ಪೃಶಾ II೧೨೯II ಅನಂತರ "ಪಕ್ಷಿಯ ಚಿನ್ನದ ವರ್ಣದಿಂದ ಉಂಟಾದ ಸೌಂದರ್ಯವನ್ನು ಎಂದೂ ನೋಡಿಲ್ಲ ?"ಈ ರೀತಿಯಾಗಿ ಮತ್ತೆ ಮತ್ತೆ ನೋಡುತ್ತಾ ಪ್ರಶಂಸೆ ಮಾಡುತ್ತಾ ರಾಜನು ತನ್ನ ಕೈಗಳೆಂಬ ಪಂಜರದಲ್ಲಿ ಹಂಸ ಪಕ್ಷಿಯನ್ನು ಬಂದಿಸಿದನು. ಧಿಗಸ್ತು ತೃಷ್ಣಾತರಲಂ ಭವನ್ಮನಃ ಸಮೀಕ್ಷ್ಯ ಪಕ್ಷಾನ್ಮಮ ಹೇಮಜನ್ಮನಃ I ತವಾರ್ಣವಸ್ಯೆವ ತುಷಾರಸೀಕರೈರ್ಮವೇದಮೀಭಿಃ ಕಮಲೋದಯಃ ಕಿಯಾನ್ II೧೩೦II "ಹೇ ರಾಜ ಸುವರ್ಣದ ನನ್ನ ರೆಕ್ಕೆಗಳನ್ನು ನೋಡಿ ದುರಾಸೆಯಿಂದ ಚಂಚಲಗೊಂಡ ನಿಮ್ಮ ಮನಸ್ಸಿಗೆ ಧಿಕ್ಕಾರವಿರಲಿ, ಸಮುದ್ರದಂತೆ ಬಂಡಾರವಿರುವ ನಿನಗೆ ನನ್ನ ರೆಕ್ಕೆಗಳಿಂದ ನಿನ್ನ ರಾಜ್ಯ ಲಕ್ಷ್ಮಿಯು ಅಭಿವೃದ್ಧಿ ಹೊಂದಲು ಸಾಧ್ಯವೇ ?". ನ ಕೆವಲಂ ಪ್ರಾಣಿವಧೋ ವಧೋ ಮಮ ತ್ವದೀಕ್ಷಣಾದ್ವಿಶ್ವಸಿತಾನ್ತರಾತ್ಮನಃ I ವಿಗರ್ಹಿತಂ ಧರ್ಮಧನೈರ್ನಿರ್ವಹಣಂ ವಿಶಿಷ್ಯ ವಿಶ್ವಾಸಜುಷಾಂ ದ್ವಿಷಾಮಪಿ II೧೩೧II " ಹೇ" ರಾಜ, ನಿನ್ನನ್ನು ನೋಡಿದರೆ ನನ್ನ ಮನಸ್ಸಿಗೆ ಪೂರ್ಣ ವಿಶ್ವಾಸವಾಗುತ್ತಿದೆ. ನನ್ನ ವಧೆ ಕೇವಲ ಪ್ರಾಣಿ, ಪಕ್ಷಿವಧೆ ಮಾತ್ರವಲ್ಲ. ಅದು ಧರ್ಮಶಾಸ್ತ್ರ ವಿರುದ್ಧವೂ ಆಗಿದೆ, ವಧೆ ಮಾಡುವ ನಿನ್ನ ಹವ್ಯಾಸ ನಿಂದನೆಗೆ ಪಾತ್ರವಾಗುತ್ತದೆ. ಪದೇ ಪದೇ ಸನ್ತಿ ಭಟಾ ರಣೋದ್ಭಟಾ ನ ತೇಷು ಹಿಂಸಾರಸ ಎಷ ಪೂರ್ಯತೇ I ಧಿಗೀದೃಶಂ ತೇ ನೃಪತೇಃ ಕುವಿಕ್ರಮಂ ಕೃಪಾಶ್ರಯೇ ಯಃ ಕೃಪಣೇ ಪತತ್ರಿಣಿ II೧೩೨II ವಿಜಯ ಯಾತ್ರೆಯಲ್ಲಿ ಬೇರೆ ಬೇರೆ ದೇಶಗಳಲ್ಲಿ ನಿಂತು ಯುದ್ಧ ಮಾಡಿ ಶತ್ರು ದೇಶದ ಸೈನಿಕರನ್ನು ಸಂಹಾರ ಮಾಡಿ ನಿನ್ನ ಆಸೆಯನ್ನು ಏತಕ್ಕೆ ಈಡೇರಿಸಿಕೊಳ್ಳಬಾರದು?. ನಿನ್ನ ಕೆಟ್ಟ ಶೌರ್ಯಕ್ಕೆ ಧಿಕ್ಕಾರವಿರಲಿ? ದಯಾ ಪಾತ್ರಗೊಳಗಾದ ದೀನಪಕ್ಷಿಯ ಮೇಲೆ ಶೌರ್ಯ ಪ್ರದರ್ಶಿಸುವುದು ಸರಿಯಲ್ಲ. ಫಲೇನ ಮೂಲೇನ ಚ ವಾರಿಭೂರುಹಾಂ ಮುನೇರಿವೇತ್ಥಂ ಮಮ ಯಸ್ಯ ವೃತ್ತಯಃ I ತ್ವಯಾದ್ಯ ತಸ್ಮಿನ್ನಪಿ ದಣ್ಡಧಾರಿಣಾ ಕಥಂ ನ ಪತ್ಯಾ ಧರಣೀ ಹೃಣೀಯತೇ II೧೩೩II ಕಮಲ ಮತ್ತು ವೃಕ್ಷಗಳಲ್ಲಿ ಬೆಳೆಯುವ ಹಣ್ಣು, ಗಡ್ಡೆಗೆಣಸುಗಳನ್ನು ತಿನ್ನುತ್ತಾ, ಋಷಿ, ಮುನಿಗಳ ಸಮಾನ ಜೀವನ ನಿರ್ವಹಣೆ ಮಾಡುತ್ತೇವೆ. ಅಂತಹ ನಮ್ಮನ್ನು ಸಂಹರಿಸುವುದು ಸರಿಯೇ ? ನಿನ್ನಂತಹ ರಾಜ ಪೃಥ್ವಿಯಲ್ಲಿ ವಾಸಿಸುವುದರಿಂದ ಪೃಥ್ವಿಗೆ ನಾಚಿಕೆಯಾಗುತ್ತಿಲ್ಲವೇ ?. ಇತೀದೃಶೈಸ್ತಂ ವಿರಚಯ್ಯ ವಾಙ್ಮಯೈಃ ಸಚಿತ್ರವೈಲಕ್ಷ್ಯಕೃಪಂ ನೃಪಂ ಖಗಃ I ದಯಾಸಮುದ್ರೇ ಸ ತದಾಶಯೇsತಿಥೀಚಕಾರ ಕಾರುಣ್ಯರಸಾಪಗಾ ಗಿರಃ II೧೩೪II ಈ ರೀತಿಯಾಗಿ ನಾನಾ ವಿಧವಾದ ಮಾತುಗಳಿಂದ ರಾಜನ ಮನದಲ್ಲಿ ಆಶ್ಚರ್ಯ, ನಾಚಿಕೆ ಮತ್ತು ದಯೆ ಉಂಟಾಗುವಂತೆ ಹಂಸವು ಮಾಡಿತು. ರಾಜನ ಸಮುದ್ರ ರೂಪದ ಹೃದಯದಲ್ಲಿ ವಾಣೀರೂಪದ [ಮಾತು]ಕರುಣಾರಸದ ನದಿಯು ಪ್ರವೇಶಿಸುವಂತೆ ಮಾಡಿತು.[ಹಂಸವು ಮೃದುವಾದ ಮಾತುಗಳಿಂದ ಕರುಣಾರಸ ಉತ್ಪತ್ತಿ ಮಾಡಿತು] ಮದೇಕಪುತ್ರಾ ಜನನೀ ಜರಾತುರಾ ನವಪ್ರಸೂತಿರ್ವರಟಾ ತಪಸ್ವಿನೀ I ಗತಿಸ್ತಯೋರೇಷ ಜನಸ್ತಮರ್ದಯನ್ನಹೋ ವಿಧೇ ತ್ವಾಂ ಕರುಣಾ ರುಣದ್ಧಿ ನ II೧೩೫II ವಯಸ್ಸಾದ ನನ್ನ ತಾಯಿಗೆ ನಾನು ಒಬ್ಬನೇ ಮಗ, ನನ್ನ ಹೆಂಡತಿಗೆ ಈಗ ತಾನೆ ಮಗುವಾಗಿದೆ. ಅವರಿಬ್ಬರಿಗೂ ನಾನೊಬ್ಬನೇ ಆಧಾರ, ಅಂತಹ ನನಗೆ ವಿಧಿಯು ಈ ರೀತಿಯಾಗಿ ಬರೆದಿದೆ. ನಿನಗೆ ದಯೆ ಇಲ್ಲವೇ, ಇದು ಎಂತಹ ಆಶ್ಚರ್ಯದ ಸಂಗತಿ. ಮುಹೂರ್ತಮಾತ್ರಂ ಭವನಿನ್ದಯಾ ದಯಾಸಖಾಃ ಸಖಾಯಃ ಸ್ರವದಶ್ರವೋ ಮಮ I ನಿವೃತ್ತಿಮೇಷ್ಯನ್ತಿ ಪರಂ ದುರುತ್ತರಂ ತ್ವಯೈವ ಮಾತಃ ಸುತಶೋಕಸಾಗರಃ II೧೩೬II ನನ್ನ ಮಿತ್ರರು ದಯೆಯಿಂದ ಕೆಲವು ದಿನಗಳು ಕಣ್ಣೀರು ಸುರಿಸುತ್ತಾ, ಈ ಲೋಕವನ್ನು ನಿಂದನೆ ಮಾಡುತ್ತಾ, ಸ್ವಲ್ಪ ದಿನಗಳ ಅನಂತರ ಮರೆತು ಬಿಡುತ್ತಾರೆ. ಆದರೆ ನನ್ನ ತಾಯಿ? ಪುತ್ರ ವಿಯೋಗ ಶೋಕಸಾಗರವನ್ನು ದಾಟಲು ಎಷ್ಟು ಕಷ್ಟ ಪಡಬೇಕು? ಮದರ್ಥಸನ್ದೇಶಮೃಣಾಲಮನ್ಥರಃ ಪ್ರಿಯಃ ಕಿಯದ್ದೂರ ಇತಿ ತ್ವಯೋದಿತೇ I ವಿಲೋಕಯನ್ತ್ಯಾ ರುದತೋsಥ ಪಕ್ಷಿಣಃ ಪ್ರಿಯೇ ಸ ಕಿದೃಗ್ಭವಿತಾ ತವ ಕ್ಷಣಃ II೧೩೭II "ಪ್ರಿಯೆ, ನನ್ನ ಸಂದೇಶ ಮತ್ತು ಅಲಸ್ಯ [ಮರಣ] ದ ವಿಷಯ ತಿಳಿದುಕೊಳ್ಳಲು ಎಷ್ಟು ಹೊತ್ತು ಕಾಯಬೇಕು? ನನ್ನ ವಿಷಯವನ್ನು ಮಿತ್ರರಿಂದ ತಿಳಿದು ಅಳುತ್ತಿರುವ ಅವರ ಮುಖವನ್ನು ನೋಡುತ್ತಾ ಹೇಗೆ ಸಹಿಸಿಕೊಳ್ಳುವೆ?" ಎಂದು ತಿಳಿದಿಲ್ಲ. ಕಥಂ ವಿಧಾತರ್ಮಯಿ ಪಾಣಿಪಙ್ಕಜಾತ್ತವ ಪ್ರಿಯಾಶೈತ್ಯಮೃದುತ್ವಶಿಲ್ಪಿನಃ I ವಿಯೋಕ್ಷ್ಯಸೇ ವಲ್ಲಭಯೇತಿ ನಿರ್ಗತಾ ಲಿಪಿರ್ಲಲಾಟನ್ತಪನಿಷ್ಠುರಾಕ್ಷರಾಃ II೧೩೮II ಹೇ, ವಿಧಾತ ಪ್ರಿಯವಾದ, ಕೋಮಲವಾದ, ತಂಪಾದ ನಿನ್ನ ಕೈಗಳಿಂದ ನನ್ನ ವಿಷಯದಲ್ಲಿ "ನಿನ್ನ ಪ್ರಿಯತಮನಿಂದ ನಿನಗೆ ವಿಯೋಗ" ಎಂದು ಈ ರೀತಿಯಾಗಿ ನನ್ನ ಹಣೆಮೇಲೆ ಕಠೋರ ಅಕ್ಷರಗಳಿಂದ ಏತಕ್ಕೆ ಬರೆದೆ?. ಅಯಿ ಸ್ವಯೂಥ್ಯೈರಶನಿಕ್ಷತೋಪಮಂ ಮಮಾದ್ಯ ವೃತ್ತಾನ್ತಮಿಮಂ ವತೋದಿತಾ I ಮುಖಾನಿ ಲೋಲಾಕ್ಷಿ ದಿಶಾಮಸಂಶಯಂ ದಶಾಪಿ ಶೂನ್ಯಾನಿ ವಿಲೋಕಯಿಷ್ಯಸಿ II೧೩೯II ಹೇ! ಜಿಂಕೆ ಕಣ್ಣುಳ್ಳವಳೆ, ನನ್ನ ಮಿತ್ರರಿಂದ [ಹಂಸ ಸಮುಹ] ವಜ್ರಾಘಾತಕ್ಕೆ ಸಮಾನವಾದ [ಮೃತ್ಯ] ವೃತ್ತಾಂತವನ್ನು ಕೇಳಿ ಹತ್ತು ದಿಕ್ಕುಗಳಿಗು ಶೂನ್ಯವಾಗಿ ಮುಖ ಮಾಡಿ ನೋಡುವೆ ಇದು ದುಃಖದ ವಿಷಯ. ಮಮೈವ ಶೋಕೇನ ವಿದೀರ್ಣವಕ್ಷಸಾ ತ್ವಯಾ ವಿಚಿತ್ರಾಙ್ಗಿ ವಿಪದ್ಯತೇ ಯದಿ I ತದಾಸ್ಮಿ ದೈವೇನ ಹತೋsಪಿ ಹಾ ಹತಃ ಸ್ಫುಟಂ ಯತಸ್ತೇ ಶಿಶವಃ ಪರಾಸವಃ II೧೪೦II ಹೇ! ವಿಚಿತ್ರಾಙ್ಗಿ,[ರಕ್ತ ವರ್ಣದ ಕೊಕ್ಕು,ಶ್ವೇತ ವರ್ಣದ ದೇಹ] ನನ್ನ ಮರಣದ ವಾರ್ತೆಯನ್ನು ಕೇಳಿ ನಿನ್ನ ಹೃದಯ ಚೂರು ಚೂರಾಗಿ ಒಡೆದು, ನೀನು ಮರಣ ಹೊಂದಿದರೆ? ದೇವರೆ! ನಾನು ಮರಣ ಹೂಂದಿ, ನನ್ನ ಮಡದಿ ನೀನು ಮೃತಳಾದರೆ, ನಮ್ಮ ಮಗುವು ನಿಶ್ಚಯವಾಗಿ ಮರಣ ಹೊಂದುತ್ತದೆ. ತವಾಪಿ ಹಾ ಹಾ ವಿರಹಾತ್ ಕ್ಷುಧಾಕುಲಾಃ ಕುಲಾಯಕೂಲೇಷು ವಿಲುಠ್ಯ ತೇಷು ತೇ I ಚಿರೇಣ ಲಬ್ಧಾ ಬಹುಭಿರ್ಮನೋರಥೈರ್ಗತಾಃ ಕ್ಷಣೇನಾಸ್ಫುಟಿತೇಕ್ಷಣಾ ಮಮ II೧೪೧II ಹಾ! ಹಾ! ಬಹಳ ದಿನಗಳ ನಂತರ ನನ್ನ ಆಸೆಯು ನೆರವೇರಿ ಮಗು ಜನಿಸಿದೆ, ನಮ್ಮ ಮಗು ಇದುವರೆಗೂ ಕಣ್ಣು ತೆರೆದಿಲ್ಲ. ನನ್ನ ನಿನ್ನ ವಿಯೋಗದ ಕಾರಣ ಹಸಿವಿನಿಂದ ಚಡಪಡಿಸುತ್ತಾ ಗೂಡಿನಲ್ಲಿ ಅತಿ ಶೀಘ್ರವಾಗಿ ಮರಣ ಹೊಂದುತ್ತದೆ. ಸುತಾಃ ಕಮಾಹೂಯ ಚುಙ್ಕೃತೈರ್ವಿಧಾಯ ಕಂಪ್ರಾಣಿ ಮುಖಾನಿ ಕಂ ಪ್ರತಿ I ಕಥಾಸು ಶಿಪ್ಯಧ್ವಮಿತಿ ಪ್ರಮೀಲ್ಯ ಸ ಸ್ರುತಸ್ಯ ಸೇಕಾದ್ ಬುಬುಧೇ ನೃಪಾಶ್ರುಣಃ II೧೪೨II ಮಗು, ಎಷ್ಟು ಹೋತ್ತು ಚುವ್ ಚುವ್ ಎಂದು ಶಬ್ಧ ಮಾಡುತ್ತಾ, ಯಾರನ್ನು ಕರೆಯುತ್ತದೆ? ಯಾರ ಕಡೆಗೆ ಮುಖ ತಿರುಗಿಸುತ್ತದೆ? [ಗೂಡಿನ ಮಧ್ಯ ಭಾಗಕ್ಕೆ ಓಡಿ ಬರುತ್ತದೆ] ಯಾರು ಆಹಾರ ತಿನ್ನಿಸುತ್ತಾರೆ? ಈರೀತಿಯಾಗಿ ಹೇಳುತ್ತಾ ಹಂಸಪಕ್ಷಿ ಮೂರ್ಛೆ ಹೊಂದಿತು. ರಾಜನ ಕಣ್ಣುಗಳಿಂದ ಬಂದಂತಹ ಕಣ್ಣೀರಿನ ಹನಿಯು ಅದರ ಮೇಲೆ ಬಿದ್ದು ಮತ್ತೆ ಎಚ್ಚರಗೊಂಡಿತು. ಇತ್ಥಮಮುಂ ಬಿಲಪನ್ತಮಮುಞ್ಚದ್ ದೀನದಯಾಲುತಯಾವನಿಪಾಲಃ I ರೂಪಮದರ್ಶಿ ಧೃತೋsಸಿ ಯದರ್ಥ ಗಚ್ಛ ಯಥೇಚ್ಛಮಥೇತ್ಯಮಿಧಾಯ II೧೪೩II ದೀನರ ಮೇಲೆ ದಯೆ ಇರುವ ರಾಜ [ನಳ]ಕರುಣೆಯಿಂದ ನೋಡಿದನು "ನಿನ್ನ ಸೌಂದರ್ಯವನ್ನು ಇಲ್ಲಿಯವರೆಗೆ ನೋಡಿದ್ದೇನೆ, ಇನ್ನು ನಿನಗೆ ಇಷ್ಟ ಬಂದ ಕಡೆಗೆ ಹೋಗ ಬಹುದು" ಎನ್ನುವ ರೀತಿಯಲ್ಲಿ ರಾಜನು ತನ್ನ ಕೈಗಳನ್ನು ಸಿಡಿಲ ಮಾಡಿ ಹಂಸಪಕ್ಷಿಯನ್ನು ಹಾರಿ ಹೋಗು ಎಂದು ಮೇಲಕ್ಕೆ ಬಿಟ್ಟನು. ಆನನ್ದಜಾಶ್ರುಭಿರನುಸ್ರಿಯಮಾಣಮಾರ್ಗನ್ ಪ್ರಾಕ್ಶೋಕನಿರ್ಗಮಿತಮೆವ ಪಯಃಪ್ರವಾಹಾನ್ I ಚಕ್ರೇ ಸ ಚಕ್ರನಿಭಚಙ್ಕ್ರಮಣಚ್ಛಲೇನ ನೀರಾಜನಾಂ ಜನಯತಾಂ ನಿಜಬಾನ್ಧವಾನಾಮ್ II೧೪೪II ಮೇಲಕ್ಕೆ ಹಾರಿದ ಹಂಸವು ಚಕ್ರಾಕಾರದಲ್ಲಿ ಮತ್ತೆ ಮತ್ತೆ ಸುತ್ತುತಿತ್ತು.ಅದು ರಾಜನಿಗೆ ಆರತಿ ಮಾಡುವಂತ್ತಿತ್ತು. ತನ್ನ ಮಿತ್ರರು, ಬಂಧುಗಳು ಶೋಕದಿಂದ ಕಣ್ಣೀರು ಸುರಿಸುತ್ತಾ ಹೊದ ಮಾರ್ಗದಲ್ಲೇ, ಈಗ ಹರ್ಷದ ಕಣ್ಣೀರು ಸುರಿಸುತ್ತಾ ಹಾರಿಹೋಯಿತು. ಶ್ರೀಹರ್ಷ ಕವಿರಾಜರಾಜಿಮುಕುಟಾಲಙ್ಕಾರಹೀರಃ ಸುತಂ ಶ್ರೀಹೀರ ಸುಷುವೇ ಜಿತೇನ್ದ್ರಿಯಚಯಂ ಮಾಮಲ್ಲದೇವೀ ಚ ಯಮ್ I ತಚ್ಚಿನ್ತಾಮಣಿಮನ್ತ್ರಚಿನ್ತನಫಲೇ ಶೃಙ್ಗಾರಭಙ್ಗ್ಯಾ ಮಹಾ ಕಾವ್ಯೇ ಚಾರುಣಿ ನೈಷಧೀಯಚರಿತೇ ಸರ್ಗೋsಯಮಾದಿರ್ಗತಃ II೧೪೫II ಶ್ರೇಷ್ಠ ಕವಿ ಸಮೂಹದ ಮುಕುಟ ಮಣಿಯಂತೆ ಭೂಷಣವಾದ ಶ್ರೀಹೀರ ಮತ್ತು ಮಾಮಲ್ಲ ದೇವಿಯ ಇಂದ್ರಿಯಗಳನ್ನು ಗೆದ್ದಂತಹ ಶ್ರೀಹರ್ಷನಿಗೆ ಜನ್ಮ ನೀಡಿದರು. ಅವರ ಚಿಂತಾಮಣಿ ಮಂತ್ರದ ಚಿಂತನಫಲವಾದ, ಶೃಂಗಾರ ರಸವನ್ನು ಸುಂದರ ಮಾಡುವ ನೈಷಧೀಯ ಚರಿತೆ ಮಹಾಕಾವ್ಯದ ಪ್ರಥಮ ಸರ್ಗವು ಮುಕ್ತಾಯವಾಯಿತು.