ಸದಸ್ಯರ ಚರ್ಚೆಪುಟ:Dhanyashree

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Dhanyashree


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Sangappadyamani (ಚರ್ಚೆ) ೧೪:೧೮, ೮ ಮಾರ್ಚ್ ೨೦೧೭ (UTC)


ಹವ್ಯಾಸಗಳು ಹಲವು. ಕೆಲವರಿಗೆ ಓದುವ ಹವ್ಯಾಸವಾದರೆ ಇನ್ನು ಕೆಲವರಿಗೆ ಹಳೆ ಲೇಖನಿಗಳನ್ನು ಸಂಗ್ರಹಿಸುವ ಹವ್ಯಾಸ. ಅಂಚೆ ಚೀಟಿ ಸಂಗ್ರಹ, ನಟ ನಟಿಯರ ಚಿತ್ರ ಸಂಗ್ರಹ, antique ಕಾರುಗಳು, ಇಲಿ ಸಾಕುವುದು, ಕ್ಯಾಲ್ಲಿಗ್ರಫಿ, ನಾಣ್ಯಗಳು ಹೀಗೆ ಸಾಗುತ್ತವೆ ಹವ್ಯಾಸಗಳ ಪಟ್ಟಿ. ಈಗಿನ rush rush ಯುಗದಲ್ಲಿ ಕೆಲವರಿಗೆ ಹವ್ಯಾಸಗಳ ಆಸಕ್ತಿ ಕಡಿಮೆಯಾದರೂ ಈಗಲೂ ಬಹಳಷ್ಟು ಜನ ತಮಗೆ ಇಷ್ಟವಾದ ವಿಷಯಗಳ ಮೇಲೆ ಕಾರ್ಯಮಗ್ನರಾಗಿರುತ್ತಾರೆ. ಚಿಕ್ಕವನಿದ್ದಾಗ ನನಗಿತ್ತು ಅಂಚೆಚೀಟಿಗಳ ಸಂಗ್ರಹದ ಗೀಳು. ನನ್ನ ಮಟ್ಟಿಗೆ ಹವ್ಯಾಸ ಸುಲಭವಾಗಿ ಚಟವಾಗಿ ಅಂಟಿ ಕೊಂಡು ಬಿಡುತ್ತದೆ. ರಣ ಬಿಸಿಲಿನಲ್ಲಿ ಬರುವ ಪೋಸ್ಟ್ ಮ್ಯಾನ್ ಹಿಂದೆ ಸುತ್ತಿ ಅಂಚೆ ಚೀಟಿಗಾಗಿ ಮನೆ ಮನೆಗಳಿಗೆ ತೆರಳಿ ಬೇಡುತ್ತಿದ್ದೆ. ಬೆಳಿಗ್ಗೆ ಎದ್ದು ಬ್ಯಾಂಕ್ ಹೊರಗೆ ಬಿಸುಟಿರುವ ಪತ್ರಗಳನ್ನು ಹೆಕ್ಕಿ ಬೇಕಾದ stamps ಕಿತ್ತುವುದು, ನನ್ನದೇ ಆಸಕ್ತಿಯ ಮಿತ್ರರನ್ನು ಮನೆಗೆ ಆಹ್ವಾನಿಸಿ ಅವರ ಸ್ಟಾಂಪ್ಗಳನ್ನು ಕದಿಯುವುದು ಮಜವೋ ಮಜಾ. ಈ ಚಟದ ನಂತರ ಸಿಕ್ಕಿದ್ದು ಹಳೆ ಆಂಗ್ಲ ಸಾಹಿತ್ಯ ಓದುವುದು. D.H.Lawrence, Jane Austen, Somerset maugham, Charles Dickens, palgrave's golden treasury (ಕವಿತೆಗಳು) ಈಗ ಅಂಟಿ ಕೊಂಡಿರುವ, ಮನೆಯಲ್ಲಿ ಮಹಾಭಾರತಕ್ಕೆ ನಾಂದಿ ಹಾಡುತ್ತಿರುವ ಚಟ ಎಂದರೆ ಇಂಟರ್ನೆಟ್. ಅಂತರ್ಜಾಲವೋ, ಮಾಯಾಜಾಲವೋ ಒಟ್ಟಿನಲ್ಲಿ "ಜೇಡನ" ಕಡಿತದ ಸುಖ ಆಗಾಗ ಹೆಂಡತಿಯ ಕಡೆಯಿಂದ friction ಮತ್ತು sniping ಗೆ ದಾರಿ ಮಾಡಿಕೊಟ್ಟಿದ್ದು ನಿಜವೇ. ಒಮ್ಮೆ ನನ್ನ ಒಂದು ವರ್ಷದ ಮಗಳು ನನ್ನ ಲ್ಯಾಪ್ ಟಾಪ್ ಅನ್ನು ನೆಲಕ್ಕೆ ಕೆಡವಿದಾಗ ಅರ್ಧಾಂಗಿ ಕುಣಿದು ಸಂತಸಪಟ್ಟಳು ಲ್ಯಾಪ್ ಟಾಪ್ ಕತೆ ಮುಗಿಯಿತೆಂದು. ಲ್ಯಾಪ್ಟಾಪ್ಗೆ ಏನೂ ಆಗಲಿಲ್ಲ.