ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Devarajnaik7

Page contents not supported in other languages.
ವಿಷಯ ಸೇರಿಸಿ
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Devarajnaik7


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-- ಕನ್ನಡ ವಿಕಿ ಸಮುದಾಯ (ಚರ್ಚೆ) ೧೦:೫೧, ೨೦ ಅಕ್ಟೋಬರ್ ೨೦೧೮ (UTC)

ಸುದ್ದಿ ಕನ್ನಡ ನ್ಯೂಸ್ ಪೋರ್ಟಲ್

[ಬದಲಾಯಿಸಿ]


ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳು ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ಬರುವ ಮುನ್ನ ಸಾಮಾಜಿಕ ಜಾಲತಾಣಗಳಲ್ಲಿ ನಿಮಿಷದಲ್ಲಿ ಹರಿದಾಡಿ ಸದ್ದು ಮಾಡಿಬಿಡುತ್ತೆ. ಈ ಸಾಮಾಜಿಕ ಜಾಲತಾಣಗಳ ‘ರೆಕ್ಕೆ ಪುಕ್ಕ’ವಿಲ್ಲದ ಸುದ್ದಿಗಳನ್ನು ಇಷ್ಟೇ ವೇಗದಲ್ಲಿ ಪರಾಮರ್ಶಿಸಿ ನೀಡಲು ಅಂತರಜಾಲ ಪತ್ರಿಕೆ (ವೆಬ್‌ ನ್ಯೂಸ್) ಕೂಡ ಹುಟ್ಟಿಕೊಂಡು ಸುಮಾರು ವರ್ಷಗಳೆ ಕಳೆದಿವೆ.

ಈಗಾಗಲೇ ಸಾವಿರಾರು ವೆಬ್‌ ನ್ಯೂಸ್‌ ತಾಣಗಳು ಕಾರ್ಯಾಚರಿಸುತ್ತಿವೆ. ಹತ್ತು– ಹಲವು ವಿಭಾಗಗಳ ಸುದ್ದಿಗಳನ್ನು, ಮನೋರಂಜನೆಗಳನ್ನು ಅವು ನೀಡುತ್ತಿವೆ. ಇದರ ನಡುವೆ, ಉತ್ತರ ಕನ್ನಡ ಜಿಲ್ಲೆಯ ಜನರಿಗೂ ಸ್ಥಳೀಯ ವಿದ್ಯಮಾನಗಳು ಕ್ಷಣದಲ್ಲಿ ಹಾಗೂ ನಿಖರವಾಗಿ ಸಿಗುವಂತೆ ಮಾಡಲು ‘ಸುದ್ದಿ ಕನ್ನಡ’ ಕಾರ್ಯಾಚರಿಸುತ್ತಿದೆ.

ಸುದ್ದಿ ಕನ್ನಡ ನ್ಯೂಸ್ ಪೋರ್ಟಲ್ ಜು.1ರಂದು ಪತ್ರಿಕಾ ದಿನಾಚರಣೆಯ ಸಂದರ್ಭದಲ್ಲಿ ಕಾರವಾರದಲ್ಲಿ ಅಧಿಕೃತವಾಗಿ ಪ್ರಾರಂಭಗೊಂಡಿತು. 2016ರಲ್ಲಿ ಭಟ್ಕಳ ಮೂಲದ ಯುವ ಪತ್ರಕರ್ತ ದೇವರಾಜ ನಾಯ್ಕ ಅವರ ಸಂಪಾದಕತ್ವದಲ್ಲಿ ಕ್ರಿಯೇಟಿವ್ ಮೈಂಡ್ ಕ್ರಿಯೇಷನ್ ಮೂಲಕ ಯುವಾಗ್ನಿ ನ್ಯೂಸ್ ಹೆಸರಿನಲ್ಲಿ ತಾಣವೊಂದು ಕಾರ್ಯಾರಂಭ ಮಾಡಿ, ಕೆಲವೇ ದಿನಗಳಲ್ಲಿ ಜನಪ್ರಿಯಗೊಂಡಿತ್ತು. ಅಂಗೈಯಲ್ಲಿ ತಕ್ಷಣದ ಸುದ್ದಿ ನೀಡುವ ಮೂಲಕ ಜಿಲ್ಲೆಯಲ್ಲಿ ಮನೆಮಾತಾಗಿತ್ತು. ಆದರೆ, ತಾಂತ್ರಿಕ ಕಾರಣಗಳಿಂದಾಗಿ ಅದು ಒಂದೇ ವರ್ಷದಲ್ಲಿ ಮರೆಯಾಯಿತು.

ಆದರೆ, 2018ರಲ್ಲಿ ಮತ್ತೆ ದೇವರಾಜ ನಾಯ್ಕ ಅವರ ಸಂಪಾದಕತ್ವದಲ್ಲೇ ಮತ್ತೆ ಸುದ್ದಿ ಕನ್ನಡ ಹೆಸರಿನಲ್ಲಿ ತಾಣವು ಕಾರ್ಯಾರಂಭಿಸಿದೆ. ಪ್ರಸ್ತುತ ಪ್ರತಿ ತಿಂಗಳು ಒಂದೂವರೆ ಲಕ್ಷ ಓದುಗರನ್ನು ಸಂಪಾದಿಸುತ್ತಿರುವ ಸುದ್ದಿ ಕನ್ನಡವು, ಜಿಲ್ಲಾ ಸುದ್ದಿಗಳು ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಹಳಿಯಾಳ, ಮುಂಡಗೋಡ, ಜೊಯಿಡಾ, ದಾಂಡೇಲಿ, ಯಲ್ಲಾಪುರ ತಾಲೂಕಿನ ಸ್ಥಳೀಯ ಸುದ್ದಿಗಳು, ಹೊರ ಜಿಲ್ಲೆಗಳ ಸುದ್ದಿಗಳು, ಉದ್ಯೋಗ, ಸಿನಿಮಾ, ಕ್ರೀಡಾ ಮಾಹಿತಿಗಳು, 18+ ಎಂಬ ಲೈಂಗಿಕ ಆರೋಗ್ಯದ ಸಲಹೆಗಳನ್ನು ನೀಡುತ್ತಿದೆ. ಇದರೊಂದಿಗೆ, ರಾಶಿ ಭವಿಷ್ಯವನ್ನು ಒಂದು ದಿನ ಮುಂಚೆ ಹಾಗೂ ಅದೇ ದಿನ ಬೆಳಿಗ್ಗೆ ಎರಡು ಹೊತ್ತು ಪ್ರಕಟಿಸುತ್ತಿದೆ.

ಪ್ರಸ್ತುತ ಸುದ್ದಿ ಕನ್ನಡವನ್ನು ಫೇಸ್ಬುಕ್, ಟ್ವಿಟರ್‌ಗಳಲ್ಲಿಯೂ ಕಾಣಬಹುದಾಗಿದೆ. ಈ ಪೋರ್ಟಲ್‌ನ ಮೊ.ಸಂ: 7406756340 ಹಾಗೂ ವಾಟ್ಸ್ಆ್ಯಪ್ ಸಂಖ್ಯೆ: 8217067607 ಆಗಿದೆ. ಉಲ್ಲೇಖ: Suddi Kannada News Portal