ಸದಸ್ಯರ ಚರ್ಚೆಪುಟ:Csarva

ವಿಕಿಪೀಡಿಯ ಇಂದ
Jump to navigation Jump to search
 • ಜ್ಯೋತಿಷ್ಯವು ಸಾಮಾಜಿಕವಾಗಿ ಉತ್ತಮವೆ?
 • ಜ್ಯೋತಿಷ್ಯ ಶಾಸ್ತ್ರವೇ , ಬೇರೆ ಫಲ ಜ್ಯೋತಿಷ್ಯವೇ ಬೇರೆ , ಒಂದನ್ನೊಂದು ತಪ್ಪಾಗಿ ಭಾವಿಸಲಗುತ್ತಿದೆ.
 • ಜ್ಯೋತಿಷ್ಯ ಶಾಸ್ತ್ರವು ಗ್ತ್ರಹಗಳ ಚಲನೆ ಮತ್ತು ತಿಥಿ, ವಾರ, ನಕ್ಷತ್ರ,
 • ಯೋಗ, ಕರಣ ಇವುಗಳ ಲೆಕ್ಕಕ್ಕೆ ಸಂಬಂಧ ಪಟ್ಟಿದೆ .
 • ಫಲ ಜ್ಯೋತಿಷ್ಯವು ಅವುಗಳ ಸ್ಥಾನ ಕಾಲಗತಿಯ ಆಧಾರದ ಮೇಲೆ ಭವಿಷ್ಯವನ್ನು ಹೇಳುವ ಶಾಸ್ತ್ರ.
 • ಈ ಶಾಸ್ತ್ರದಲ್ಲಿ ಒಂಭತ್ತು ಗ್ರಹ ಳನ್ನು ಹೇಳಿದ್ದು ಅವು ಹಳೆಯ ಕಲ್ಪನೆ. ಸೂರ್ಯ ಒಂದು ನಕ್ಷತ್ರ ಪಾಪ ಗ್ರಹ ವೆಂದು ಶಾಸ್ತ್ರ ಹೇಳುತ್ತದೆ.
 • ಆದರೆ ಅದು ಇಡೀ ಜೀವ ಸಂಕುಲಕ್ಕೆ ಆಧಾರ. ಅದು ಬೆಂಕಿಯಂತೆ ಉಗ್ರವಾಗಿರುವುದರಿಂದ ಹಾಗೆ ಶಾಸ್ತ್ರ ಬರೆದಿರಬಹುದು.
 • ರಾಹು, ಮತ್ತು ಕೇತುಗಳು ಗ್ರಹಗಳೇ ಅಲ್ಲ. ಕಾಣುವುದೂ ಇಲ್ಲ. ಅವುಗಳನ್ನು ಛಾಯಾ (ನೆರಳಿನ ) ಗ್ರಹಗಳೆಂದು ಹೇಳಿದೆ.
 • ಮೊದಲು ಫಲ -ಜ್ಯೋತಿಷ್ಯ ಶಾಸ್ತ್ರ ವನ್ನು ಬರೆದ ವರಾಹ ಮಿಹಿರನು ರಾಹು ಕೇತು ಗಳನ್ನು ಗ್ರಹಗಳ ಸಾಲಿಗೆ ಸೇರಿಸಿಲ್ಲ.
 • ನಂತರ ಯಾರೋ ಅದನ್ನು ಸೇರಿಸಿ ಅದಕ್ಕೆ ಫಲಗಳನ್ನು ಬರೆದರು. ಯಾವ ಯಾವ ಗ್ರಹಕ್ಕೆ ಯಾವ ಯಾವ ಫಲ ಎಂಬುದಕ್ಕೆ
 • ಯಾವ ಸಕಾರಣ ವೂ ಇಲ್ಲ . ಆದರೆ ಕುಂಡಲಿಯಲ್ಲಿ (೧೨ ರಾಶಿ ಚಕ್ರದಲ್ಲಿ ) ಗ್ರಹಗಳಿದ್ದಾಗ ಅವುಗಳ ಫಲ ಬಲಾಬಲ ,
 • ಸಂಬಂಧಿತ ಫಲ ಇವುಗಳ ಲೆಕ್ಕಾಚಾರ ಅತ್ಯಂತ ಜಾಣ್ಮೆ ಯಿಂದ ಜೋಡಿಸಲಾಗಿದೆ.
 • ಅದರಂತೆ ನಿಖರವಾಗಿ ಯಾವುದನ್ನೂ ಹೇಳಲು ಅಸಾಧ್ಯ . ಕೆಲವರಿಗೆ ಜನ್ಮತಃ ಭವಿಷ್ಯವನ್ನು ಇಣುಕಿ ನೋಡುವ ಶಕ್ತಿ ಇರುತ್ತದೆ.
 • ಉದಾಹರಣೆಗೆ ಯಶಸ್ವಿ ಉದ್ಯಮಿ . ಅಂಥವರು ಜ್ಯೋತಿಷ್ಯ ಶಾಸ್ತ್ರ ಕಲಿತು ಹೇಳಿದರೆ ಬಹಳಷ್ಟು ನಿಜ ಆಗಿರುವುದುಂಟು.
 • ಆ ಶಾಸ್ತ್ರಕಾರನೇ "ಈಶಾಸ್ತ್ರ ದಲ್ಲಿ ಕೇವಲ ಶೇಕಡಾ ೫೦ ರ ಷ್ಟು ನಿಜ ಆಗಬಹುದು; ನಿಜ ಭವಿಷ್ಯವು ಆ ಸೃಷ್ಟಿ ಕರ್ತಬ್ರಹ್ಮನಿಗೇ ಗೊತ್ತು"
 • ಎಂದು ಬರೆದಿದ್ದಾನೆ. ವರಾಹಮಿಹಿರನ ಕಾಲದಿಂದ ಭಾಸ್ಕರಾಚಾರ್ಯರ ಕಾಲದ ವರೆಗೆ
 • ಆದ ಗಣಿತದ ತಪ್ಪನ್ನು ಭಾಸ್ಕರಾಚಾರ್ಯರು ಸರಿಪಡಿಸಿದರು. ನಂತರ ಆದ ತಪ್ಪನ್ನು ಯಾರೂ ಸರಿ ಪಡಿಸಿಲ್ಲ.
 • ಅದಕ್ಕಾಗಿ ಪಂಚಾಂಗದಲ್ಲಿ , ಸೂರ್ಯ ಸಿದ್ಧಾಂತ , ದೃಗ್ಗಣಿತ್, ಸಾಯನ, ನಿರಯನ,
 • ಮುಂತಾಗಿ ಬಗೆಬಗೆಯ ಲೆಕ್ಕಾಚಾರದ ಪುಟಗಳನ್ನು ಸೇರಿಸಿದ್ದಾರೆ ಎಲ್ಲಾ ಅತಿ ಜಾಣ್ಮೆಯ ಊಹಾತ್ಮ್ಕಕ.
 • ಅದರ ಆಳವನ್ನು ತಿಳಿಯುವುದು ಸುಲಭವಲ್ಲ. ಮುಂತಾಗಿ ಬಗೆಬಗೆಯ ಲೆಕ್ಕಾಚಾರದ ಪುಟಗಳನ್ನು ಸೇರಿಸಿದ್ದಾರೆ. ಎಲ್ಲಾ ಅತಿ ಜಾಣ್ಮೆಯ ಊಹಾತ್ಮ್ಕಕ.
 • ಅದರ ಆಳವನ್ನು ತಿಳಿಯುವುದು ಸುಲಭವಲ್ಲ..
 • ಇದಕ್ಕಾಗಿ ಪ್ರತ್ಯೇಕ ಲೇಖನದ ಅವಶ್ಯಕತೆ ಇದೆ. ವಿಕಿ ಯಲ್ಲಿ ಅದಕ್ಕೆ ಅವಕಾಶ ವಿದೆಯೇ? ಇದ್ದರೆ ಬರೆಯುತ್ತೇನೆ.
 • ಬಿ.ಎಸ್. ಚಂದ್ರಶೇಖರ -೨೩-೫-೨೦೧೨/ ೨೩.೫೪.

ಜ್ಯೋತಿಷ್ಯ

ನೋಡಿ[ಬದಲಾಯಿಸಿ]


ಜ್ಯೋತಿಷ್ಯ ಮತ್ತು ವಿಜ್ಞಾನ ವಿಷಯ ವನ್ನು ತುಂಬಿದ್ದೇನೆ.. ಪರಿಶೀಲಿಸಿ. ಈಗ ಟಿ.ವಿ.ಯಲ್ಲಿ ಬರುತ್ತಿರುವ ಭವಿಷ್ಯ ಸಲಹೆಗಳು ಸಮೂಹ ಸನ್ನಿ ಗೆ ಸೇರಿದೆ ಎಂದು ನನ್ನ ನಂಬುಗೆ..: ಬಿ.ಎಸ್. ಚಂದ್ರಶೇಖರ ೨೩-೫-೨೦೧೨/ ೨೩.೫೪.