ಸದಸ್ಯರ ಚರ್ಚೆಪುಟ:B.m.amarwadi
ವಿಷಯ ಸೇರಿಸಿಕನ್ನಡ ನಾಡಿನ ಧೀಮಂತಿಕೆಯನ್ನು, ಸಿರಿತನವನ್ನು, ಸಾಮಾಜಿಕ ತತ್ವವನ್ನು ಮನುಕುಲಕ್ಕೆ ಪರಿಚಯಿಸಿರುವಂತಹ ದಾಸ ಪರಂಪರೆಯ ವೈಚಾರಿಕ ಸಂತ ಕನಕದಾಸರನ್ನ ಇಂದು ಒಂದೇ ಜಾತಿ ಅಥವಾ ಸಿದ್ದಾಂತದ ಪ್ರತಿಪಾದಕರೆಂದು ಬಿಂಬಿಸುತ್ತಿರುವುದು ನಮ್ಮ ಸಂಕುಚೀತ ಭಾವಕ್ಕೆ ಹೀಡಿದ ಕನ್ನಡಿಯಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಕನಕದಾಸರು ಜಾತಿ, ಧರ್ಮದ ವ್ಯಾಮೋಹದಿಂದ ಹೊರಬಂದು ಇಡಿ ಜನಸಮೂಹಕ್ಕೆ, ಸಾರ್ವಜನಿಕ ವಲಯಕ್ಕೆ ಬೇಕಾದ ಅತ್ಯಮೂಲ್ಯ ಸಂದೇಶಗಳು ನೀಡಿರುವುದು ಕಂಡು ಕಾಣದಂತೆ ಬದುಕುತ್ತಿರುವುದು ನಮ್ಮ ದುರಾದೃಶ್ಟವೆಂದೆನ್ನಬಹುದು. ಕನಕದಾಸರು ವೈಷ್ಣವರು ಅವರು ಮಧ್ವ ಸಿದ್ದಾಂತದ ಪ್ರತಿಪಾದಕರು ಎಂದು ಪೇಜಾವರ ಶ್ರೀಗಳು ಹೇಳುತ್ತಿರುವುದು ವಿಷಾದನಿಯ. ಆಯಾ ಜನ ಸಮೂಹದ ಆಸೆ ಅಭಿಲಾಶೆಗಳನ್ನು ಯೋಚಿಸದೆ ಅವರ ಭಾವನೆಗಳು ಅರ್ಥೈಸಿಕೊಳ್ಳದೆ ಎಲ್ಲಕ್ಕೂ ಮುಖ್ಯವಾಗಿ ಆ ವೈಚಾರಿಕ ಸಂತನ (ಕನಕದಾಸರ) ದೂರದೃಷ್ಟಿ, ಸಾಮಾಜಿಕ ಅಂತ:ಕರಣ, ಮಾನವೀಯತೆಯ ಪರ ಕಾಳಜಿ, ಸಮಾನತೆಯ ಭಾವ, ನೈತಿಕತೆಯ ಬಲ ಇವೆಲ್ಲವುಗಳು ಅರಿಯದೆ ಕನಕದಾಸರನ್ನ ನಿರ್ದಿಷ್ಟರನ್ನಾಗಿಸುತ್ತಿರುವುದು ದ್ರೋಹವೆ ಸೈ. ಎಲ್ಲ ಬಲ್ಲವರಾದ ಪೇಜಾವರ ಶ್ರೀಗಳು ಸಿದ್ದಾಂತ ಹಾಗೂ ಸಂಪ್ರದಾಯ ಪ್ರೀಯರೆಂಬಂತೆ ವರ್ತಿಸುತ್ತಿರುವುದು ಕೂಡ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದೆ. ಕನಕದಾಸರು ತಾನು ರಚಿಸಿರುವಂತಹ ಸಾಹಿತ್ಯದಲ್ಲಿ ಯಾವುದೆ ಒಂದು ಸಿದ್ದಾಂತಕ್ಕೆ, ಸಂಪ್ರದಾಯಕ್ಕೆ ಬೆಲೆ ಕೋಡದೆ ವಿಶಾಲತೆಯ ಪ್ರತೀಕವಾದ ಮಹತ್ವದ ವಿಚಾರಗಳು ಸಾರಿರುವುದು ಅವರ ವ್ಯಕ್ತಿತ್ವದ ಕೈಗನ್ನಡಿಯಾಗಿದೆ. ವೈಷ್ಣವ ಸಂಪ್ರದಾಯರುಗಳಂತೆ ಹರಿಯನ್ನೆ ಸ್ತುತಿಸದೆ ಹರನನ್ನ ಸ್ತುತಿಸಿರುವಂತಹದು ಕಾಣಬಹುದಾಗಿದೆ ಹಾಗೂ ವೀಶೆಷವಾಗಿ ಹರ ಮತ್ತು ಹರಿಯ ಮಧ್ಯದಲ್ಲಿನ ವ್ಯತ್ಯಾಸವು ದೂರ ಸರಿಸಿ “ದೇವನೊಬ್ಬ ನಾಮ ಹಲವು” ಎಂಬ ಸಾರ್ವಕಾಲಿಕ ಸತ್ಯವನ್ನು ಅವರು ಪ್ರತಿಪಾದಿಸಿದ್ದಾರೆ. ಕಾಲಿಗೆ ಗೆಜ್ಜೆ ಕಟ್ಟಿ ಲಜ್ಜೆ ಬಿಟ್ಟು ಇನ್ನುಳಿದ ದಾಸರಂತೆ ಜನರ ಮನೆ-ಮನೆಗೆ ತೇರಳಿ ನೈತಿಕ ಬಲವನ್ನು ನೀಡುವ ಜೋತೆಗೆ ಜನರ ಮನದಲ್ಲಿ ಆಳವಾಗಿ ಬೇರೂರಿರುವ ಕಂದಾಚಾರಗಳು, ಅನೀಷ್ಟ ಪದ್ದತಿಗಳು, ಅಸಮಾನತೆಯನ್ನು ಬಯಲಿಗೆಳೆದಿದ್ದಾರೆ. ವೀಶೆಷವಾಗಿ ನಾವುಗಳು ಗಮನಿಸಬೇಕಾದ ವಿಷಯವೆನೆಂದರೆ ಸಂಪ್ರದಾಯ, ಸಿದ್ದಾಂತಗಳಿಗಿಂತ ಬಹುಮುಖ್ಯವಾಗಿ ವ್ಯಕ್ತಿತ್ವ ಹಾಗೂ ವಿಚಾರಗಳನ್ನು ಅಪ್ಪಿಕೊಳ್ಳಬೇಕು. ಆ ಒಂದು ಕಾರಣದಿಂದಾಗಿ “ತೀಲಕವಿಟ್ಟರೆ ಸ್ವರ್ಗವು ಸೀಗದು ವಿಭೂತಿ ಹಚ್ಚಿದರೆ ಕೈಲಾಸ ಬರದು” ಎಂಬುದು ಉಲ್ಲೇಖನಿಯ. ಯಾವತ್ತು ಸಂಪ್ರದಾಯವೆಂಬುದು ಸಮಾಜದ ಉನ್ನತಿಯನ್ನು ಬಯಸಬೇಕೆ ಹೊರತು ಅವನತಿಯಲ್ಲ. ಅಷ್ಟ ಮಠಗಳಲ್ಲಿ ಕುರುಬರಾಗಲಿ, ಅನ್ಯ ಕುಲದವರಾಗಲಿ ಪೂಜೆ ಮಾಡಲು ನಾನು ಒಪ್ಪುವುದಿಲ್ಲವೆಂದು ಹೇಳಿಕೆ ನೀಡಿರುವ ಪೇಜಾವರ ಶ್ರೀಗಳು ಕೃಷ್ಣನನ್ನು ಕನಕನ ದೃಷ್ಠಿಯಿಂದ ನೋಡದಿರುವುದು ವಿಪರ್ಯಾಸವೆಂದೆ ಹೇಳಬಹುದು. “ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ? ನಿತ್ಯ ಜ್ಞಾನಿಯಾದ ಮೇಲೆ ಚಿಂತೆಯಾತಕೆ?” ಎಂಬ ವಾಣಿ ವೈಚಾರಿಕ ಚಿಂತನೆಗೆ ಇಂಬು ನೀಡುವಂತಿದ್ದರೆ. “ಬೆಟ್ಟದ ತುದಿಯಲ್ಲಿ ಹುಟ್ಟಿದ ವೃಕ್ಷಕ್ಕೆ ಕಟ್ಟೆಯನು ಕಟ್ಟಿ ನೀರೆರೆದವರು ಯಾರೋ?” ಎಂಬ ನುಡಿಯು ಈ ಅಷ್ಠ ಮಠ ಪೂಜೆಯ ಅವಶ್ಯಕತೆಗಿಂತ ನಿಸರ್ಗಮಾತೆಯನ್ನು ಆರಾಧಿಸುವುದು ಲೇಸು ಎಂಬಂತಿದೆ…..
Start a discussion with B.m.amarwadi
Talk pages are where people discuss how to make content on ವಿಕಿಪೀಡಿಯ the best that it can be. Start a new discussion to connect and collaborate with B.m.amarwadi. What you say here will be public for others to see.