ಸದಸ್ಯರ ಚರ್ಚೆಪುಟ:Annet Lopes/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

"ಹೊಸ ಕನ್ನಡಕ್ಕೆ ದಕ್ಷಿಣ ಕನ್ನಡದ ಗುರುಜನರು ಮೂವರು. ಕಿರುಗವನದ, ಕಿರುಗತೆಗಳ ಕೊಡಾಟದ ಪಂಜೆಯವರು; ದೇಶವಿದೇಶ ಕಾವ್ಯಮಾರ್ಗ ಮಹಾರಥಿಕ, ಸಂಶೋಧಕಮನೋರಾಜಕ ಪೈಯವರು; ಕನ್ನಡದ ಶಬ್ದಭಂಡಾರಿ ಹಳೆಗನ್ನಡ ಕಾವ್ಯಾರಣ್ಯ ಕೇಸರಿ, ಪ್ರೌಢ ವಿದ್ಯಾರ್ಥಿ ಮನೋಹಾರಿ ಮುಳಿಯರವರು...." ಹೀಗೆಂದು ದಕ್ಷಿಣ ಕನ್ನಡದ ಇನ್ನೊಬ್ಬ ಹಿರಿಯ ಸಾಹಿತಿ ಸೇಡಿಯಾಪು ಕ್ರಷ್ಣ ಭಟ್ಟರು ವರ್ಣಿಸಿದ್ದಾರೆ. ಇದು ಹರಿದು ಹಂಚಾಗಿದ್ದ ಕನ್ನಡನಾಡು ಒಂದೇ ಬಾವುಟದ ಅಡಿಯಲ್ಲಿ ಒಂದುಗೂಡುವುದಕ್ಕಿಂತ ಹಿಂದಿನ ಮಾತು. ಈಗ ಘಟ್ಟಗಳನ್ನು, ನದಿಗಳನ್ನೂ ದಾಟಿ ನಾಡು ಬೆಳೆದಿದೆ. ಸೇಡಿಯಾಪು ಬಣ್ಣಿಸಿದ ಆ 'ಮೂವರು' ದಕ್ಷಿಣ ಕನ್ನಡಕ್ಕೆ ಮಾತ್ರಮಲ್ಲ, ಅಖಿಲ ಕರ್ನಾಟಕದ ಗುರುಜನರಲ್ಲಿ ಸಹ ಪಾಂಕ್ತಿಕರೂ ಸಾಮಾನ್ಯರೂ ಆಗಿದ್ದಾರೆ. ಮೂವರಲ್ಲಿ ಮೊದಲಿಗರಾದ ಪಂಜೆ ಮಂಗೇಶರಾಯರು ತಮ್ಮ 'ಕಿರುಗತೆ-ಕಿರುಗವನಗಳ' ಮೂಲಕ ಹೊಸಸಾಹಿತ್ಯದ ಹರಿಕಾರರಲ್ಲಿ ಒಬ್ಬರೆಂದು ಚಿರಸ್ಮರಣೀಯರು. ಉತ್ತಮ ಸಾಹಿತ್ಯ ರಸಿಕರೆಂದೂ, ಉದಾರ ಹೃದಯ ಸಾಹಿತ್ಯದ ಪೋಷಕರೆಂದೂ, ಆದರ್ಶ ಅಧ್ಯಾಪಕರೆಂದೂ, ಶಿಶುಸಾಹಿತ್ಯದ ಅದ್ವಿತೀಯ ಸೃಷ್ಟಿಕರ್ತ ಪುರಸ್ಕರ್ತರೆಂದೂ ಪ್ರಸಿದ್ದರು. ಸೌಜನ್ಯ- ಸೌಹಾರ್ದಗಳ ಮೂರ್ತಿಮತ್ ರೂಪವಾಗಿ ಮೆರೆದ ಪಂಜೆಯವರು ಮರೆಯಾಗಿ ನಾಲ್ಕು ದಶಕಗಳೇ ಸಂದು ಹೋದುವು. ಅವರು ಜನಿಸಿ, ಒಂದು ಶತಕದ ಮೇಲೆ ಮತ್ತೊಂದು ದಶಕವೂ ಸರಿದು ಹೋಯಿತು.

ರಾಮಪ್ಪಯ್ಯ ಮತ್ತು ಶಾಂತಾದುರ್ಗಾ ಅಥವಾ. ಸೀತಮ್ಮ ಎಂಬ ಸಾರಸ್ವತ ದಂಪತಿಗಳ ದ್ವಿತೀಯ ಪುತ್ರನಾಗಿ ಮಂಗೇಶರಾಯರು ೧೮೭೪ನೆಯ ಫೆಬ್ರವರಿ ೨೨ರಂದು ಬಂಟವಾಳದಲ್ಲಿ ಜನಿಸಿದರು. ಅವರ ಪೂರ್ವಿಕರು ಮೂಲತಃ ಪುತ್ತೂರಿಗೆ ಸಮೀಪದ 'ಪಂಜ'ದವರಾಗಿದ್ದು ಅನಂತರ ಬಂಟವಾಳದಲ್ಲಿ ನೆಲೆನಿಂತರು. ಆದರೂ ಆ ಮನೆತನಕ್ಕೆ 'ಪಂಜೆ' ಎಂಬ ಊರ ಹೆಸರು ಅಂಟಿಕೊಂಡಿತು.ಅವರು ಗಿರಿಜಾಬಾಯಿಗೆ ವಿವಾಹವಾದರು. ಪಂಜೆಯವರು ಇತಿಹಾಸ ಅರ್ಥಶಾಸ್ತ್ರಗಳನ್ನು ಆರಿಸಿಕೊಂಡು ಮಂಗಳೂರಿನ ಎಲೋಸಿಯಸ್ ಕಾಲೇಜಿನಲ್ಲಿ ವ್ಯಾಸಂಗವನ್ನು ಮುಂದುವರಿಸಿದರು.೧೮೯೫ರಲ್ಲಿ ಇಂಗ್ಲಿಷ್, ಕನ್ನಡ ಪರೀಕ್ಷೆಗಳಲ್ಲೂ ೧೯೦೦ರಲ್ಲಿ ಐಚ್ಛಿಕ ವಿಷಯಗಳಲ್ಲೂ ಅವರು ಉಷಯಗಳಲ್ಲೂ ಅವರು ಉತ್ತೀರ್ಣರಾದರು.

ಪಂಜೆಯವರು ಬಿ.ಎ ಅಧ್ಯಯನ ಪೂರ್ಣಗೊಳಿಸಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಕನ್ನಡ ಪಂಡಿತರಾಗಿ ಸೇವೆಸಲ್ಲಿಸಿದರು. ಪಂಜೆಯವರ ಸಾಹಿತ್ಯ ಜೀವನ ಆರಂಭವಾದದ್ದು ಮಂಗಳೂರಿನ 'ಸತ್ಯ ದೀಪಿಕ ಎಂಬುದು ಶ್ರೀ. ಎಂ. ಗೋವಿಂದಪೈಯವರ ಹೇಳಿಕೆ. ಅಂಥ ಸಂಸ್ಥೆಯೊಂದಿಗೆ ಪಂಜೆಯವರು ಸಂಪರ್ಕವಾದದ್ದು ಕನ್ನಡದ ಪುಣ್ಯವೆಂದೇ ಹೇಳಬೇಕು. ಪಂಜೆಯವರು 'ಸುವಾಸಿನಿ' ಸಾಹಿತ್ಯ ಸೃಷ್ಟಿಗೆ ಆಶ್ರಯವನ್ನು ನೀಡಿದರು.೧೯೨೧ರಲ್ಲಿ, ಮಂಗಳೂರಿನ ಕೊಡಿಯಾಲ ಬೈಲಿನಲ್ಲಿ 'ಬಾಲ ಸಾಹಿತ್ಯ ಮಂಡಲ'ವನ್ನು ಸ್ಥಾಪಿಸಿದರು. 'ಗುಡುಗುಡು ಗಮ್ಮಟದೇವರು', 'ಹೇನು ಸತ್ತು ಕಾಗೆ ಬಡವಾಯಿತು', 'ಮೇಣಸಿನ ಕಾಳಪ್ಪ','ಇಲಿಗಳ ಥಕ ಥೈ', ಇವು ಕೆಲವು ಕಥೆಗಳು.ತೂಗುವೆ ತೆಟ್ಟಿಲು, ಸಂಜೆಯ ಹಾಡು, ಕೆಡೆಕಂಜಿ ಇವುಗಳು ಸ್ವಲ್ಪ ದೀರ್ಘವಾಗಿರುವ ಕಥನಕವನಗಳು.ಶಿಶುಗೀತ, ಕಥನವನಗಳ ಜೊತೆಗೆ ಪಂಜೆಯವರು ಬರೆದ ಕೆಲವು ಪ್ರೌಢ ಕವಿತೆಗಳೂ ಇವೆ. ವೃತ್ತ, ತಾಳವೃತ್ತ, ಷಟ್ಪದಿ ಇವುಗಳು ವರ್ಣನಾತ್ಮಕವಾದವು.ರಸಿಕತೆಯೆಂಬುದು ಪಂಜೆಯವರ ಜೊತೆಯಲ್ಲೇ ಹುಟ್ಟಿಬಂದ ಗುಣ ವಿಶೇಷ.