ಸಚಿನ್ ತೆಂಡೂಲ್ಕರ್ ನಿವೃತ್ತಿ ಭಾಷಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

You must add a |reason= parameter to this Cleanup template - replace it with {{Cleanup|reason=<Fill reason here>}}, or remove the Cleanup template.

ಸಚಿನ್ ತೆಂಡೂಲ್ಕರ್

ಸಚಿನ್ ತೆಂಡೂಲ್ಕರ್ ವಿದಾಯದೊಂದಿಗೆ ೧೬ನವೆಂಬರ್,೨೦೧೩ ಶನಿವಾರ ಕ್ರಿಕೆಟ್ ನಲ್ಲಿ ಭವ್ಯ ಯುಗವೊಂದು ಮುಗಿಯಿತು. ಕಳೆದ ೨೪ ವರ್ಷಗಳುದ್ದಕ್ಕೂ ರನ್, ಶತಕ , ದಾಖಲೆಗಳನ್ನೇ ಪೋಣಿಸುತ್ತ ಕ್ರಿಕೇಟ್ ಪ್ರಿಯರ ಪಾಲಿಗೆ ದೇವರೆಂಬ ಖ್ಯಾತಿ ಗಳಿಸಿದ್ದ ಸಚಿನ್ ತಮ್ಮ ಬ್ಯಾಟಿಂಗ್ ಪ್ರದರ್ಶನಕ್ಕೆ ಪೂರ್ಣ ವಿರಾಮ ಹಾಕಿದರು. ವೆಸ್ಟ್ ಇಂಡೀಸ್ ವಿರುದ್ದ ಇನ್ನಿಂಗ್ಸ್ ಮತ್ತು ೧೨೬ ರನ್ ಅಂತರದಿಂದ ಗೆಲ್ಲುವ ಮೂಲಕ ಭಾರತ ತಂಡ ಸಚಿನ್ ಗೆ ವಿದಾಯ ನೀಡಿದ್ದಾರೆ, ಕ್ರಿಕೇಟ್ ಜೀವನದುದ್ದಕ್ಕೂ ಪ್ರೀತಿಸಿ ,ಬೆಂಬಲಿಸಿ, ಬೆನ್ನುತಟ್ಟಿದ ಎಲ್ಲರಿಗೂ ಧನ್ಯವಾದ ಹೇಳುತ್ತಲೇ ಸಚಿನ್ ತಮ್ಮೊಳಗಿನ ಪರಿಪೂರ್ಣ ವ್ಯಕ್ತಿತ್ವ ವನ್ನು ಅನಾವರಣ ಗೊಳಿಸಿದರು.

ಈ ಪಂದ್ಯದಲ್ಲಿ ಸಚಿನ್ ರವರನ್ನು ಬೀಳ್ ಕೊಡಲು ಸಮಾರಂಭವನ್ನು ಏರ್ಪಡಿಸಲಾಗ್ಗಿತ್ತು. ಆ ಸಮಾರಂಭದಲ್ಲಿ ಸಚಿನ್ ಕೈಗೆ ಮೈಕ್ ಕೊಟ್ಟಾಗ ಪ್ರೇಕ್ಷಕರಿಂದ ದೊಡ್ಡ ಹರ್ಷೋದ್ಗಾರ..... ಗೆಳೆಯರೆ ದಯವಿಟ್ಟು ಶಾಂತವಾಗಿರಿ,ಇಲ್ಲವಾದರೆ ನಾನು ಇನ್ನಷ್ಟು ಭಾವುಕನಾಗುತ್ತ್ತೇನೆ! ೨೨ ಯಾರ್ಡ್ಸ್ ನಡುವಿನ ನನ್ನ ೨೪ ವರ್ಷಗಲ ಬದುಕು ಕೊನೆಯಾಗುತ್ತಿರುವುದನ್ನು ನಂಬಲು ಕಷ್ಟ ವಾಗುತ್ತಿದೆ. ನನ್ನ ಜೀವನ ಯಾನದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದವರಿಗೆ ಕೃತಜ್ಞತೆ ಸಲ್ಲಿಸಲು ನಾನು ಈ ಅವಕಾಶ ಬಳಸಿಕೊಳ್ಳುತ್ತೇನೆ.ನಾನು ಧನ್ಯವಾದ ಹೇಳಲೇಬೇಕಾಗಿರುವ ಹೆಸರನ್ನೂ ಪಟ್ಟಿ ಮಾಡಿಕೊಂಡು ಬಂದಿರುವೆ ,ಯಾರ ಹೆಸರನ್ನೂ ಮರೆಯದೆ ಎಲ್ಲರನ್ನೂ ನೆನಪಿಸಿಕೊಳ್ಳಲು ಬಯಸಿರುವೆ. ಭವೋದ್ವೇಗದಿಂದಾಗಿ ಮಾತನಾಡಲು ಸ್ವಲ್ಪ ಕಷ್ಟವಾಗುತ್ತಿದೆ. ಆದರೆ ನಾನು ಮ್ಯಾನೇಜ್ ಮಾಡಬಲ್ಲೆ.

ತಂದೆ[ಬದಲಾಯಿಸಿ]

ನನ್ನ ಜೀವನದ ಅತ್ಯಂತ ಪ್ರಮುಖ ವ್ಯಕ್ತಿ ನನ್ನ ತಂದೆ (ರಮೇಶ್ ತೆಂಡುಲ್ಕರ್). ೧೯೯೯ ರಲ್ಲಿ ಅವರು ನಿಧನರಾದಾಗಿನಿಂದ ನಾನು ಅವರನ್ನು ಮಿಸ್ಸ್ ಮಾಡಿಕೊಳ್ಳುತ್ತಿರುವೆ.ಅವರ ಮಾರ್ಗದರ್ಶನ ಇಲ್ಲದಿದ್ದರೆ ನಾನಿಂದು ನಿಮ್ಮ ಮುಂದೆ ನಿಂತಿರುತ್ತಿರಲಿಲ್ಲ. ಅವರು ನನಗೆ ೧೧ನೇ ವಯಸ್ಸಿನಲ್ಲೇ ಸ್ವಾತಂತ್ರ ನೀಡಿದರು.'ಕನಸುಗಳನ್ನು ಬೆನ್ನೆಟ್ಟು. ಎಂದೂ ಅಡ್ಡದಾರಿ ಹಿಡಿಯಬೇಡ.ದಾರಿ ಕಠಿಣವಾಗಿರಬಹುದು,ಆದರೆ ಎಂದೂ ಎದೆಗುಂದಬೇಡ' ಎಂದವರು ಹೇಳಿದ್ದರು.ನಾನು ಅವರ ಮಾತನ್ನಷ್ಟೇ ಪಾಲಿಸಿದೆ.ಎಲ್ಲಕ್ಕಿಂತ ಹೆಚ್ಚಾಗಿ ಅವರು ನನಗೆ ಉತ್ತಮ ವ್ಯಕ್ತಿಯಾಗಿರಲು ಸೂಚಿಸಿದ್ದರು.ನಾನದನ್ನು ಪಾಲಿಸುವ ಪ್ರಯತ್ನವನ್ನು ಮುಂದುವರಿಸಿರುವೆ. ಪ್ರತಿ ಬಾರಿ ವಿಶೇಷ ಸಾಧನೆ ಬಳಿಕ ನನ್ನ ಬ್ಯಾಟ್ ನ್ನು ಆಕಾಶದತ್ತ ಪ್ರದರ್ಶಿಸುತ್ತಿದ್ದುದ್ದು ನನ್ನ ತಂದೆಗಾಗಿ.

ತಾಯಿ[ಬದಲಾಯಿಸಿ]

ನನ್ನ ಅಮ್ಮ ಹೇಗೆ ನನ್ನಂಥ ತುಂಟ ಮಗನನ್ನು ನಿಭಾಯಿಸಿದರೆಂದು ಗೊತ್ತಿಲ್ಲ . ನನ್ನನ್ನು ನೋಡಿಕೊಳ್ಳುವುದು ಸುಲಭವಾಗಿರಲಿಲ್ಲ. ಆಕೆಯ ತಾಳ್ಮೆ ಅಪಾರ.ತಾಯಿಯೊಬ್ಬಳಿಗೆ ಮಗನ ಯೋಗಕ್ಷೇಮವೇ ಮುಖ್ಯ.ನನ್ನ ೨೪ ವರ್ಷಗಳ ವೃತ್ತಿ ಜೀವನದಲ್ಲಿ ನನ್ನಮ್ಮ ಪ್ರತೀದಿನ ನನ್ನ ಬಗ್ಗೆಯೇ ಕಾಳಜಿ ಹೊಂದಿದ್ದರು.ನಾನು ಆಟವಾಡಲು ಆರಂಭಿಸಿದ ದಿನದಿಂದಲೂ ಆಕೆ ನನಗಾಗಿ ಪ್ರಾರ್ಥಿಸುತ್ತಾ ಬಂದಿದ್ದಾರೆ. ಅಮ್ಮನ ಪ್ರಾರ್ಥನೆ ಮತ್ತು ಆಶೀರ್ವದವೆ ನನಗೆ ಮೈದಾನಕ್ಕಿಳಿದು ಉತ್ತಮ ನಿರ್ವಹನಣೆ ತೋರಲು ಸಾಮರ್ಥ್ಯ ನೀಡಿದೆ. ಅಮ್ಮನ ಎಲ್ಲಾ ತ್ಯಾಗಗಳಿಗಾಗಿ ನನ್ನ ದೊಡ್ಡ ವಂದನೆ.

ಚಿಕ್ಕಮ್ಮ[ಬದಲಾಯಿಸಿ]

ನನ್ನ ಶಾಲೆ ಮನೆಯಿಂದ ಸಾಕಷ್ಟು ದೂರದಲ್ಲಿದ್ದ ಕಾರಣ ನಾಲ್ಕು ವರ್ಷಗಳ ಕಾಲ ನಾನು ಚಿಕ್ಕಮ್ಮ -ಚಿಕ್ಕಪ್ಪನ ಮನೆಯಲ್ಲಿದ್ದೆ. ಅವರು ನನ್ನನ್ನು ಅವರ ಮಗನಂತೆಯೇ ನೋಡಿಕೊಂಡರು.ದಿನವಿಡೀ ಆಟವಾಡಿ ಸುಸ್ತಾಗಿ ಅರೆನಿದ್ರೆಗೆ ಜಾರಿದ ಬಳಿಕವೂ ಚಿಕ್ಕಮ್ಮ ನನ್ನ ಬಾಯಿಗೆ ತುತ್ತು ತಿನ್ನಿಸುತ್ತಿದ್ದರು. ಇದರಿಂದಾಗಿ ನಾನು ಮರುದಿನ ಮತ್ತೆ ಹೊಸ ಚೈತನ್ಯದಿಂದ ಆಟಕ್ಕಿಳಿಯುತ್ತಿದ್ದೆ. ನಾನು ಆ ದಿನಗಳನ್ನು ಮರೆಯಲಾರೆ. ನಾನವರ ಮಗನಿದ್ದಂತೆ.

ಹಿರಿಯಣ್ಣ[ಬದಲಾಯಿಸಿ]

ನನ್ನ ಹಿರಿಯ ಅಣ್ಣ ನಿತಿನ್ ಮತ್ತು ಆತನ ಕುಟುಂಬವು ನನಗೆ ಯಾವಾಗಲು ಪ್ರೋತ್ಸಾಹ ತುಂಬಿದ್ದಾರೆ.ನನ್ನ ಹಿರಿಯಣ್ಣ ಹೆಚ್ಚು ಮಾತನಾಡುವವರಲ್ಲ . ಆದರೆ ಒಂದು ಮಾತು ಮಾತ್ರ ಅವರು ಯಾವಗಲು ನನಗೆ ಹೇಳುತ್ತಿರುತ್ತಾರೆ. 'ನೀನು ಏನೇ ಮಾಡಿದರು ಶೇ:೧೦೦ ಮನಸಿಟ್ಟು ಮಾಡುವೆ ಎಂದು ನನಗೆ ಗೊತ್ತು.ನಿನ್ನ ಮೇಲೆ ನನಗೆ ಪೋರ್ಣ ನಂಬಿಕೆ ಮತ್ತು ವಿಶ್ವಾಸವಿದೆ. ಅವರ ಪ್ರೋತ್ಸಾಹ ನನ್ನ ಪಾಲಿಗೆ ಸಾಕಷ್ಟು ಅಮೂಲ್ಯ.

ಅಕ್ಕ[ಬದಲಾಯಿಸಿ]

ನನ್ನ ಅಕ್ಕ ಸವಿತ ಮತ್ತು ಆಕೆಯ ಕುಟುಂಬವು ಭಿನ್ನವಲ್ಲ ನನಗೆ ಮೊದಲ ಕ್ರಿಕೆಟ್ ಬ್ಯಾಟ್ ಉಡುಗೊರೆ ಕೊಟ್ಟವರು ನನ್ನ ಅಕ್ಕ. ಅದೊಂದು ಕಾಶ್ಮೀರಿ ಮರದ ಬ್ಯಾಟ್. ಅಲ್ಲಿಂದಲೇ ನನ್ನ ಪ್ರಯಾಣ ಆರಂಭ ಗೊಂಡಿದ್ದು. ನಾನು ಬ್ಯಾಟಿಂಗ್ ಮಾಡುವಾಗ ಉಪವಾಸ ಮಾಡುವ ಎಷ್ಟೋ ಜನರಲ್ಲಿ ನನ್ನ ಅಕ್ಕ ಕೂಡ ಒಬ್ಬರು.

ಕಿರಿಯಣ್ಣ[ಬದಲಾಯಿಸಿ]

ಅಜಿತ್ ಬಗ್ಗೆ ನಾನೇನು ಹೇಳಲಿ? ನಾವಿಬ್ಬರು ಈ ಕನಸನ್ನು ಜೊತೆಯಾಗಿ ಅನುಭವಿಸಿದ್ದೇವೆ.ಅವರು ನನಗಾಗಿ ತನ್ನ ವೃತ್ತಿ ಜೀವನವನ್ನೆ ತ್ಯಾಗ ಮಾಡಿದ್ದಾರೆ. ನನ್ನಲ್ಲಿದ್ದ ಕ್ರಿಕೆಟ್ ಆಸಕ್ತಿಯನ್ನು ಗುರುತಿಸಿ ಅಚ್ರೇಕರ್ ಸರ್ ಬಳಿಗೆ ನನ್ನ ೧೧ ನೇ ವಯಸ್ಸಿನಲ್ಲೇ ಕರೆದೊಯ್ದಲ್ಲಿಂದ ಎಲ್ಲವು ಆರಂಭಗೊಂಡಿತು.ಅಲ್ಲಿಂದ ಮುಂದೆ ನನ್ನ ಜೀವನವೇ ಬದಲಾಯಿತು. ಶುಕ್ರವಾರ ರಾತ್ರಿಯೂ ಅವರು ನನಗೆ ಕರೆ ಮಾಡಿ ನಾನು ಔಟಾದ ರೀತಿಯ ಬಗ್ಗೆ ಚರ್ಚಿಸಿದರು. ಅದು ನಾವು ಬೆಳೆಸಿಕೊಂಡು ಬಂದಿರುವ ಅಭ್ಯಾಸ. ಬಹುಶಃ ಮುಂದೆ ನಾನು ಆಟವಾಡದಿರುವ ದಿನಗಳಲ್ಲೂ ನಾವಿಬ್ಬರು ತಾಂತ್ರಿಕತೆ ಬಗ್ಗೆ ಚರ್ಚಿಸಬಹುದು.ನಾವು ವಾಗ್ವಾದ ನಡೆಸಿದ್ದೇವೆ ಮತ್ತು ಅಭಿಪ್ರಾಯ ಭೇದ ಬಂದಿದೆ. ಆದರೆ ನಾನು ಜೀವನದಲ್ಲಿ ಇಂಥದ್ದನ್ನೆಲ್ಲ ಪಾಲಸಿಕೊಂಡು ಬಂದಿರದಿದ್ದರೆ ನಾನು ಇಷ್ಟು ಉತ್ತಮ ಕ್ರಿಕೆಟಿಗನಾಗುತ್ತಿರಲಿಲ್ಲ.

ಪತ್ನಿ[ಬದಲಾಯಿಸಿ]

ನನ್ನ ಜೀವನದ ಅತ್ಯಂತ ಸುಂದರವಾದ ಘಟನೆ ಎಂದರೆ ೧೯೯೦ ರಲ್ಲಿ ನಾನು ಅಂಜಲಿಯನ್ನು ಭೇಟಿಯಾಗಿದ್ದು ಅವು ವಿಶೇಷ ವರ್ಷಗಳು.ಮತ್ತು ಈಗಲೂ ಮುಂದುವರಿದಿವೆ ಮತ್ತು ಯಾವಾಗಲೂ ಇದೇ ರೀತಿ ಮುಂದುವರಿಯತ್ತದೆ. ನನಗೆ ಗೊತ್ತಿದೆ ....ಓರ್ವ ವೈದ್ಯೆ ಯಾಗಿ ಅಂಜಲಿಯ ಎದುರು ಬಹುದೊಡ್ಡ ವೃತ್ತಿ ಜೀವನವಿತ್ತು,ಆದರೆ ನಮ್ಮ ಕುಟುಂಬಕ್ಕಾಗಿ ಅಂಜಲಿ ತನ್ನ ಕನಸಿನಿಂದ ಹಿಂದೆ ಸರಿದಳು.'ತಾನೇ ಕುಟುಂಬದ ಎಲ್ಲಾ ಜವಾಬ್ದಾರೆ ಹೊತ್ತುಕೊಂಡು ನಾನು ನಿಶ್ಚಿಂತೆಯಿಂದ ಕ್ರಿಕೆಟ್ ಆಡುವಂತೆ ನೋಡೀಕೊಂಡಳು.' ನನ್ನೆಲ್ಲಾ ಪೂರ್ವ ಮತ್ತು ಹತಾಶೆಗಳನ್ನು ಮತ್ತು ನಾನಾಡಿದ ಎಲ್ಲಾ ಅಸಂಬದ್ದ ಮಾತುಗಳನ್ನು ಸಹಿಸಿ ಕೊಂಡಿದ್ದಕ್ಕೆ ಧನ್ಯವಾದಗಳು.ಅಂಜಲಿ ನನ್ನೆಲ್ಲಾ ಏಳು ಬೀಳುಗಳಲ್ಲಿ ಹೆಗಲು ಕೊಟ್ಟಿದ್ದಾಳೆ. ನನ್ನ ಜೀವನದ ಅತ್ಯುತ್ತಮ ಜೊತೆಯಾಟ ನಿನ್ನೊಂದಿಗೆ ಬಂದಿದೆ.

ಮಕ್ಕಳು[ಬದಲಾಯಿಸಿ]

ನನ್ನ ಜೀವನದ ಎರಡು ಅಮೂಲ್ಯ ವಜ್ರಗಳು ನನ್ನ ಮಕ್ಕಳಾದ ಸಾರ ವತ್ತು ಅರ್ಜುನ್. ಅವರು ಈಗಾಗಲೇ ಬೆಳೆದಿದ್ದಾರೆ.ನನ್ನ ಮಗಳಿಗೆ ೧೬ ವರ್ಷ ಮತ್ತು ನನ್ನ ಮಗನಿಗೆ ೧೪ ವರ್ಷ.ನಾನು ಅವರ ಹುಟ್ಟುಹಬ್ಬ ರಜಾ ದಿನಗಳು ಶಾಲಾ ವಾರ್ಷಿಕೋತ್ಸವ,ಕ್ರೀಡಾ ದಿನಗಳಂತಹ ವಿಶೇಷ ಸಂದರ್ಭಗಳನ್ನು ತಪ್ಪಿಸಿಕೊಂಡಿದ್ದೇನೆ,ನನ್ನನ್ನು ಅರ್ಥ ಮಾಡಿಕೊಂಡಿದಕ್ಕೆ ಧನ್ಯವಾದಗಳು.ನೀವಿಬ್ಬರು ನನ್ನ ಪಾಲಿಗೆ ಎಷ್ಟು ವಿಶೇಷವಾದವರೆಂದರೆ ಅದನ್ನು ವಿವರಿಸಲು ಪದಗಳಿಲ್ಲ.ನಾನು ಮುಂದಿನ ೧೬ ವರ್ಷ ಅಥವಾ ಇನ್ನುಳಿದ ಸಮಯವನ್ನು ನಿಮಗಾಗಿ ಮೀಸಲಿಡುತ್ತೇನೆ.

ಅತ್ತೆ-ಮಾವ[ಬದಲಾಯಿಸಿ]

ನನ್ನ ಅತ್ತೆ-ಮಾವ(ಆನಂದ್ ಮೆಹ್ತಾ,ಅನಾಬೆಲ್)ನನಗೆ ಸಾಕಷ್ಟು ಬೆಂಬಲ,ಪ್ರೀತಿ ಕೊಟ್ಟಿದ್ದಾರೆ. ನಮಗೆ ಯಾವಾಗಲು ಬೆಂಬಲ ನೀಡುವ ಮತ್ತು ಮಾರ್ಗದರ್ಶನ ನೀಡುವ ಕುಟುಂಬವನ್ನು ಹೊಂದುವುದು ಪ್ರಮುಖವಾದುದು(ಜನರಿಂದ ಚಪ್ಪಳೆ). ಅವರು ಮಾಡಿದ ಅತ್ಯಂತ ಪ್ರಮುಖ ಕೆಲಸವೆಂದರೆ ನನಗೆ ತಮ್ಮ ಮಗಳು ಅಂಜಲಿ ಜತೆ ಮದುವೆಯಾಗಲು ಅವಕಾಶ ನೀಡಿದ್ದು....!

ಗೆಳೆಯರು[ಬದಲಾಯಿಸಿ]

ಕಳೆದ ೨೪ ವರ್ಷಗಳಲ್ಲಿ ನಾನು ಭಾರತ ತಂಡದ ಪರ ಆಡುವಾಗ ಹಲವು ಹೊಸ ಗೆಳೆಯರನ್ನು ಸಂಪಾದಿಸಿದ್ದೇನೆ.ಆದರೆ ಅದಕ್ಕೆಮುನ್ನ ಬಾಲ್ಯದಿಂದಲು ನಾನು ಗೆಳೆಯರನ್ನು ಹೊಂದಿದ್ದೆ.ಅವರೆಲ್ಲರ ಕೊಡುಗೆ ಅಪಾರ. ನೆಟ್ಸ್ ನಲ್ಲಿ ಬೌಲಿಂಗ್ ಮಾಡಲು ಕರೆದಾಗಲೆಲ್ಲ ಅವರು ತಮ್ಮ ಕೆಲಸವನ್ನು ಬದಿಗಿಟ್ಟು ಬಂದು ನನಗೆ ನೆರವಾಗಿದ್ದಾರೆ. ರಜಾದಿನಗಳನ್ನು ನನ್ನ್ನೊಂದಿಗೆ ಕಳೆದಿರುವುದು ಮಾತ್ರವಲ್ಲದೆ, ಕ್ರಿಕೇಟ್ ಬಗ್ಗೆ ನನ್ನೊಂದಿಗೆ ಚರ್ಚಿಸಿದ್ದಾರೆ. ನಾನು ಮಾನಸಿಕ ಒತ್ತಡಕ್ಕೊಳಗಾದಾಗ ಅಥವಾ ಉತ್ತಮ ನಿರ್ವಹಣೆಗಾಗಿ ವಿಶ್ಲೇಷಣೆ ಬಯಸಿದಾಗ ನನಗೆ ನೆರವಾಗಿದ್ದಾರೆ. ನಾನು ಗಾಯಗೊಂಡಿದ್ದ ದಿನಗಳಲ್ಲಿ ನನಗೆ ನಿದ್ದೆ ಬರುತ್ತಿರಲಿಲ್ಲ ಮತ್ತು ನನ್ನ ವೃತ್ತಿಜೀವನ ಮುಗಿದು ಹೋಯಿತೆಂದು ಚಿಂತಿತನಾಗಿದ್ದೆ. ಆದರೆ ನನ್ನ ಗೆಳೆಯರು ಮುಂಜಾನೆ ೩ ಗಂಟೆಗೂ ನನ್ನ ಜತೆ ಡ್ರೈವ್ ಗೆ ಬಂದು ನನ್ನ ವೃತ್ತಿಜೀವನ ಮುಗಿದಿಲ್ಲ ಎಂಬ ಭರವಸೆಯ ಮಾತುಗಳನ್ನಾಡುತ್ತಿದ್ದರು. ಆ ಗೆಳೆಯರ ಹೊರತಾಗಿ ನನ್ನ ಜೀವನ ಅಪೂರ್ಣ.

ಕೋಚ್ ಅಚ್ರೇಕರ್[ಬದಲಾಯಿಸಿ]

ನನಗೆ ೧೧ ವರ್ಷವಾಗಿದ್ದಾಗ ನನ್ನ ಕ್ರಿಕೇಟ್ ಜೀವನ ಆರಂಭವಾಯಿತು. ನನ್ನ ಅಣ್ಣ ಅಜಿತ್ ಅಚ್ರೇಕರ್ ಸರ್ ಬಳಿಗೆ ನನ್ನನ್ನು ಕರೆದೊಯ್ದಿದ್ದು.ಜೀವನದ ಟರ್ನಿಂಗ್ ಪಾಯಿಂಟ್.ನಾನಿಲ್ಲಿ ಅವರನ್ನು ಸ್ಟ್ಯಾಂಡ್ನಲ್ಲಿ ನೋಡಿ ಅಪಾರ ಖುಷಿ ಪಟ್ಟೆ. ಸಾಮಾನ್ಯವಾಗಿ ಅವರು ಟಿವಿ ಮುಂದೆ ಕುಳಿತು ನಾನು ಆಡುವ ಪಂದ್ಯಗಳನ್ನು ನೋಡುತ್ತಾರೆ. ನನಗೆ ೧೧/೧೨ ವರ್ಷವಾಗಿದ್ದ ದಿನಗಳಲ್ಲಿ ಅವರ ಸ್ಕೋಟರ್ ಮೇಲೆ ಕುಳಿತು ಸವಾರಿ ನಡೆಸುತ್ತಿದ್ದೆ ಮತ್ತು ಒಂದೇ ದಿನದಲ್ಲಿ ಕೆಲ ಅಭ್ಯಾಸ ಪಂದ್ಯಗಳನ್ನು ಆಡುತ್ತಿದ್ದೆ. ಶಿವಾಜಿ ಪಾರ್ಕ್ನಲ್ಲಿ ಒಂದು ಇನ್ನಿಂಗ್ಸ್ ನ ಅರ್ಧ ಭಾಗ ಆಡಿದರೆ , ಉಳಿದರ್ಧವನ್ನು ಅಜದ್ ಮೈದಾನದ ಮತ್ತೊಂದು ಪಂದ್ಯದಲ್ಲಿ ಆಡುತ್ತಿದೆ. ನನಗೆ ಮೈಆಚ್ ಪ್ರಾಕ್ಟೀಸ್ ಸಿಗಬೇಕೆಂದು ಅವರು ನನ್ನನ್ನು ಮುಂಬಯಿನಲ್ಲೆಡೆ ಕರೆದೊಯ್ಯುತ್ತಿದ್ದರು. ಇನ್ನು ತಮಾಷೆಯಾಗಿ ಹೇಳುವುದಿದ್ದರೆ, ಕಳೆದ ೨೯ ವರ್ಷಗಳಲ್ಲಿ ನಾನು 'ಉತ್ತಮವಾಗಿ ಆಡಿದ್ದೇನೆ'ಎಂದು ಸರ್ ಏಂದೂ ಹೇಳಿಲ್ಲ. ಯಾಕೆಂದರೆ ನಾನು ಇನ್ನು ಯಾವುದೇ ಪಂದ್ಯ ಆಡುವುದಿಲ್ಲ. ನನ್ನ ಜೀವನದಲ್ಲಿ ನಿಮ್ಮ ಕೊಡೂಗೆ ಅಪಾರ.ಹೀಗಾಗಿ ಧನ್ಯವಾದಗಳು.

ಎಂಸಿಎ[ಬದಲಾಯಿಸಿ]

ಮುಂಬಯಿ ಪರ ನನ್ನ ಆಟ ಇದೇ ಕ್ರೀಡಾಂಗಣದಲ್ಲಿ ಆರಂಭಗೊಂಡಿತು.ಮುಂಬಯಿ ಕ್ರಿಕೇಟ್ ಸಂಸ್ಥೆ(ಎಂಸಿಎ) ನನಗೆ ಆಪ್ತವಾದುದು.ಬೆಳಗಿನ ಜಾವ ೪ ಗಂಟೆಗೆ ನ್ಯೂಜಿಲ್ಯಾಂಡ್ ನಿಂದ ಆಗಮಿಸಿದ ಬಳಿಕ ೮ ಗಂಟೆಗೆ ಇಲ್ಲಿಗೆ ಪಂದ್ಯ ಆಡಲು ಬಂದ ದಿನ ನನಗೆ ನೆನಪಿದೆ. ನನ್ನನ್ನು ಆಗ ಯಾರು ಆಡುವಂತೆ ಬಲವಂತ ಮಾಡಿರಲಿಲ್ಲ. ಬದಲಿಗೆ ಮುಂಬಯಿ ಕ್ರಿಕೇಟ್ ಮೇಲಿನ ಪ್ರೀತಿಯೇ ಕಾರಣವಾಗಿತ್ತು. ತಮ್ಮ ತಂಡದೊಂದಿಗೆ ನನ್ನ ಬಗ್ಗೆ ಕಾಳಜಿ ವಹಿಸಿದ್ದಕ್ಕೆ ಮತ್ತು ನನ್ನ ಕ್ರಿಕೇಟ್ ಮೇಲೆ ಗಮನ ಹರಿಸಿದ್ದಕ್ಕಾಗಿ ಎಂಸಿಎ ಅಧ್ಯಕ್ಷರಿಗೆ ಧನ್ಯವಾದಗಳು.

ಬಿಸಿಸಿಐ[ಬದಲಾಯಿಸಿ]

ಭಾರತ ತಂಡ ಪ್ರತಿನಿಧಿಸುವುದೇ ಒಂದು ಕನಸಾಗಿತ್ತು.ಅಂತರಾಷ್ಟ್ರೀಯ ಕ್ರಿಕೇಟ್ ಗೆ ಪಾದಾರ್ಪಣೆ ಮಾಡಿದ ದಿನದಿಂದಲೇ ಬಿಸಿಸಿಐ ಜೊತೆಗಿನ ಸಂಭಂಧ ವೃದ್ಧಿಸಿತು. ನನ್ನ ಪ್ರತಿಭೆಗೆ ಸೂಕ್ತ ಬೆಂಬಲವೂ ಸಿಕ್ಕಿತು.೧೬ನೇ ವಯಸಿನಲ್ಲಿದ್ದಾಗ ನನ್ನನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿ ಅವಕಾಶ ಕಲ್ಪಿಸಿದ್ದು ನನ್ನ ವ್ರುತ್ತಿ ಜೀವನದ ಪ್ರಮುಖ ಹೆಜ್ಜೆ. ಅಂದಿನಿಂದ ಈ ವರೆಗಿನ ಆಯ್ಕೆ ಸಮಿತಿಯ ಎಲ್ಲಾ ಸದಸ್ಯರಿಗೆ ಧನ್ಯವಾದ. ಬಿಸಿಸಿಐ ಕೂಡ ಎಲ್ಲಾ ಸಂದರ್ಭಗಳಲ್ಲಿ ನನ್ನ ಅಭಿಪ್ರಾಯ ವ್ಯಕ್ತಪಡಿಸಲು ಸ್ವಾತಂತ್ರ್ಯ ನೀಡಿದ್ದನ್ನು ಈ ಕ್ಷಣದಲ್ಲಿ ಸ್ಮರಿಸಿಕೊಳ್ಳುತ್ತೇನೆ. ನಾನು ಗಾಯಾಳುವಾದಾಗ ಚೇತರಿಸಿಕೊಳ್ಳಲು ನೆರವಾದ ಸಂದರ್ಭಗಳನ್ನು ಸ್ಮರಿಸಿಕೊಳ್ಳುತೇನೆ . ಸಹಕರಿಸಿದ ಎಲ್ಲರಿಗೂ ಕೃತಜ್ಞ

ಹಿರಿಯ ಆಟಗಾರರು[ಬದಲಾಯಿಸಿ]

೨೪ ವರ್ಷಗಳ ಸುದೀರ್ಘ ವೃತ್ತಿ ಜೀವನ ನನ್ನ ಪಾಲಿಗೆ ವಿಶೇಷ. ಈ ವೇಳೆಯಲ್ಲಿ ಅನೇಕ ಹಿರಿಯ ಕ್ರಿಕೇಟಿಗರ ಜೊತೆ ಆಡುವ ಅವಕಾಶ ನನಗೆ ಸಿಕ್ಕಿದೆ. ಅವರಿಂದ ಸ್ಪೂರ್ತಿಯನ್ನೂ ಪಡೆದುಕೊಂಡಿದ್ದೇನೆ. ಸನ್ಮಾರ್ಗದಲ್ಲಿ ಕ್ರಿಕೇಟ್ ಸಾಧನೆಗೆ ದಾರಿ ತೋರಿದವರಿಗೆ ಥ್ಯಾಂಕ್ಸ್.

ಸಹ ಆಟ ಗಾರರು[ಬದಲಾಯಿಸಿ]

ರಾಹುಲ್ ದ್ರಾವಿಡ್,ವಿ ವಿ ಎಸ್ ಲಕ್ಷ್ಮಣ್,ಸೌರವ್ ಗಂಗೂಲಿಮತ್ತು ಅನಿಲ್ ಕುಂಬ್ಳೆ ಸೇರಿದಂತೆ ತಂಡದ ಸದಸ್ಯರೆಲ್ಲರೂ ನನ್ನ ಮನೆಯ ಸದಸ್ಯರಿದ್ದಂತೆ. ನಿಮ್ಮೊಂದಿಗೆ ಅನೇಕ ಮಧುರ ಕ್ಷಣಗಳನ್ನು ಕಳೆದಿದ್ದೇನೆ.ಡ್ರೆಸ್ಸಿಂಗ್ ರೂಂನಲ್ಲಿ ನಿಮ್ಮೊಂದಿಗೆ ಅನೇಕ ಮಧುರ ಕ್ಷಣಗಲಳನ್ನು ಕಳೆದಿದ್ದೇನೆ. ನಿಮ್ಮೊಂದಿಗೆ ಕಳೆದ ಕ್ಷಣಗಳನ್ನು ಎಂದೆಂದೂ ಮರೆಯುಲಾರೆ. ಅನೇಕ ತರಬೇತುದಾರರಿಂದ ಅನೇಕ ವಿಚಾರಗಳನ್ನೂ ತಿಳಿದುಕೊಂಡಿದ್ದೇನೆ. ಧೋನಿ ಅವರಿಂದ ಟೆಸ್ಟ್ ಕ್ಯಾಪ್ ಪಡೆದುಕೊಂಡ ಕ್ಷಣದಲ್ಲೇ ತಂಡಕ್ಕೊಂದು ಸಂದೇಶ ನೀಡಿದ್ದೇನೆ. ಈಗಲೂ ಅದನ್ನೇ ಹೇಳಲಿಚ್ಚಿಸುತ್ತೇನೆ. ನಾವೆಲ್ಲರೂ ಭಾರತೀಯ ಕ್ರಿಕೇಟ್ ನ ಬ್ಃಗವಷ್ಟೇ. ದೇಷಕ್ಕಾಗಿ ಎಲ್ಲರೂ ದುಡಿಯೋಣ.

ಟೀಂ ಇಂಡಿಯ[ಬದಲಾಯಿಸಿ]

ತಂಡದ ಸದಸ್ಯರೆಲ್ಲರೂ ಸೇರಿ ದೇಶಕ್ಕಾಗಿ ಮೌಲ್ಯಗಳನ್ನು ಉಳಿಸಿಕೊಂಡು ಸನ್ಮಾರ್ಗದಲ್ಲಿ ಆಡುತ್ತಾರೆನ್ನುವ ಆತ್ಮವಿಶ್ವಾಸ ನನಗಿದೆ.ಉತ್ತಮ ಕ್ರಿಕೇಟ್ ಉಳಿಸಿಕೊಂಡು ಬೆಳೆಸುವ ಜವಾಬ್ದಾರಿ ನಿಮ್ಮ ಮೇಲಿದೆ. ಹಾಗೇ ಪ್ರತಿ ಕಾಲಘಟ್ಟದ ಯುವಕರ ಮೇಲೂ ಈ ಜವಾಬ್ದಾರಿ ಇದ್ದೇ ಇರುತ್ತದೆ.ನಿಮಗೆಲ್ಲ ಶುಭವಾಗಲಿ.

ವೈದ್ಯರು, ಫಿಸಿಯೋ[ಬದಲಾಯಿಸಿ]

ನನ್ನ ಫಿಟ್ ನೆಸ್ ಕಾಪಾಡಿಕೊಳ್ಳಲು ಸಹಕರಿಸಿದ ವೈದ್ಯರುಗಳಿಗೆ, ಫಿಸಿಯೊಗಳಿಗೆ, ಟ್ರೇನರ್ಗಳಿಗೆ ಥ್ಯಾಂಕ್ಸ್. ನಿಮ್ಮ ವಿಶೇಷವಾದ ಸಹಕಾರವಿಲ್ಲದೇ ನನ್ನಿಂದ ಈ ಸಾಧನೆ ಮಾಡಲು ಸಾಧವಾಗುತ್ತಿರಲಿಲ್ಲ.

ಮ್ಯಾನೇಜರ್[ಬದಲಾಯಿಸಿ]

ಆತ್ಮೀಯ ಸ್ನೇಹಿತರೇ, ನನ್ನ ಮೊದಲ ಮ್ಯಾನೆಜರ್ ಮಾರ್ಕ್ ಮಸ್ಕೇರೆನಾಸ್ . ೨೦೦೧ರಲ್ಲಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದರು. ಅವರು ಕ್ರಿಕೇಟ್ ನ ಗ್ರೇಟ್ ವೆಲ್ ವಿಷರ್. ಅದರಲ್ಲೂ ಭಾರತೀಯ ಕ್ರಿಕೇಟ್ ಎಂದರೆ ಪಂಚಪ್ರಾಣವಾಗಿತ್ತು. ಅದು ಅವರ ಪ್ಯಾಷನ್ ಆಗಿತ್ತು. ದೇಶಕ್ಕಾಗಿ ನಾನು ಯಾವ ಸಂದರ್ಭದಲ್ಲಿ ಹೇಗೆ ಆಡಬೇಕೆನ್ನುವುದನ್ನು ಬಹಳ ಸೂಕ್ಷ್ಮವಾಗಿ ವಿವರಿಸುತ್ತಿದ್ದರು. ನನ್ನಿಂದ ಯಾವ ಸಂದರ್ಭದಲ್ಲಿ ಯಾವ ಸಂದೇಶ ಹೇಗೆಬೇಕೆನ್ನುವುದನ್ನು ಸೊಗಸಾಗಿ ವಿವರಿಸುತ್ತಿದ್ದರು. ಇಂದು ನಾನು ಅವರನ್ನು ಕಳೆದುಕೊಂಡಿದ್ದೇನೆ. ಆದರು ಅವರನ್ನು ಸ್ಮರಿಸಿಕೊಳ್ಳುವುದು ನನ್ನ ಕರ್ತವ್ಯ. ಈಗ ನನ್ನ ಮ್ಯಾನೇಜ್ ಮೆಂಟ್ ಡಬ್ಲಿಯು ಎಸ್ ಜಿ. ಮಾರ್ಕ್ ಏನೆಲ್ಲ ಮಾಡುತ್ತಿದ್ದರೋ ಆ ಎಲ್ಲಾ ಕೆಲಸಗಳನ್ನು ಈಗ ಇವರಿಂದ ಮಾಡಿಸಿಕೊಳ್ಳುತ್ತಿದ್ದೇನೆ. ಕಳೆದ ೧೪ ವರ್ಷಗಳಿಂದ ವಿನೋದ್ ನಾಯ್ಡು ನನ್ನ ಮ್ಯಾನೇಜರ್ ಆಗಿದ್ದಾರೆ. ನನ್ನ ಕುಟುಂಬಕ್ಕೂ ಹತ್ತಿರದ ವ್ಯಕ್ತಿ. ನನ್ನ ಕೆಲಸಕ್ಕಾಗಿ ಅವರ ಕುಟುಂಬದ ಅನೇಕ ಸಮಯವನ್ನು ವ್ಯಯಿಸಿದ್ದಾರೆ. ಅವರಿಗೂ ಥ್ಯಾಂಕ್ಸ್.

ಮಾಧ್ಯಮ , ಛಾಯಾಗ್ರಾಹಕರು[ಬದಲಾಯಿಸಿ]

ನನ್ನ ಶಾಲಾ ದಿನಗಳಿಂದ ನಾನು ಉತ್ತಮ ಪ್ರದರ್ಶನ ನೀಡಿದಾಗಲೆಲ್ಲ ಬೆನ್ನು ತಟ್ಟಿ ಈ ಕ್ಷಣದ ವರೆಗೂ ಪ್ರೋತ್ಸಾಹಿಸುತ್ತ ಬಂದ ಮಾಧ್ಯಮಗಳಿಗೂ ಥ್ಯಾಂಕ್ಸ್. ಇನ್ನು ನನ್ನೆಲ್ಲಾ ಆಟಗಳಿಗೆ ಸಾಕ್ಷಿಯಾದ ಎಲ್ಲಾ ಛಾಯಾಗ್ರಾಹಕರಿಗೂ ಥ್ಯಾಂಕ್ಸ್ ಸೋ ಮಚ್.

ಅಭಿಮಾನಿಗಳು[ಬದಲಾಯಿಸಿ]

ನನಗೆ ಗೊತ್ತು ಈ ಸಂದರ್ಭದಲ್ಲಿ ನನ್ನ ಭಾಷಣ ಬಹಳ ಸುದೀರ್ಘವಾಗುತ್ತಿದೆ ಎಂದು. ಆದರೆ ಕಡೆಯದಾಗಿ ಒಂದು ಮಾತನ್ನು ಹೇಳಲು ಇಷ್ಟ ಪಡುತ್ತೇನೆ. ನಾನು ೦ ರನ್ ಗೆ ಔಟಾದಾಗಲೂ ಸಹಿಸಿಕೊಂಡು, ೧೦೦ ರನ್ ಮಾಡಿದಾಗ ಶ್ಲಾಘಿಸಿದ ನನ್ನೆಲ್ಲಾ ಕ್ರಿಕೇಟ್ ಅಭಿಮಾನಿಗಳಿಗೆ ಅಭಾರಿಯಾಗಿದ್ದೇನೆ. ನಿಮ್ಮ ಬೆಂಬಲವೇ ಈ ಸಾಧನೆಗೆ ಪ್ರಮುಖ ಕಾರಣ. ನನ್ನ ಯಶಸ್ಸಿಗಾಗಿ ಅನೇಕರು ದೇವರಲ್ಲಿ ಪ್ರಾರ್ಥಿಸುತ್ತಾರೆ, ನನ್ನ ಪರ ಧ್ವನಿ ಎತ್ತುತ್ತಾರೆ, ನನ್ನ ಮೇಲೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುತ್ತಾರೆ. ನನ್ನ ಸಾಧನೆಯ ಹಿಂದೆ ಅವರೆಲ್ಲರ ಪಾತ್ರವಿದೆ.ನಿಮ್ಮೆಲ್ಲರ ಪ್ರೀತಿಗೆ ಚಿರ ಋಣಿಯಾಗಿದ್ದೇನೆ. ನೀವೆಲ್ಲರೂ ನನ್ನ ನೆನಪುಗಳಿಂದ ದೂರ ಉಳಿಯಲು ಸಾಧ್ಯವಿಲ್ಲ. ಅದರಲ್ಲೂ ನಿಮ್ಮ 'ಸಚಿನ್ ಸಚಿನ್' ಉದ್ಗಾರ ಉಸಿರಿರೊವರೆಗೂ ನನ್ನ ಕಿವಿಯಲ್ಲಿ ಅನುರಣಿಸುತ್ತಲೇ ಇರುತ್ತದೆ. ಯಾರನ್ನಾದರು ಸ್ಮರಿಸಲು ಮರೆತಲ್ಲಿ ಕ್ಷಮಿಸಿ.ನನ್ನ ಅರ್ಥಮಾಡಿಕೊಳ್ಳುರ್ರೀರಿ ಎಂದು ಭಾವಿದ್ದೇನೆ.

ಆಧಾರ[ಬದಲಾಯಿಸಿ]

  1. [೧]
  2. [೨]
  3. [೩]
  4. [೪]
  5. [೫]

ಉಲ್ಲೇಖ[ಬದಲಾಯಿಸಿ]

  1. ಸಚಿನ್ ನಿವೃತ್ತಿ ಭಾಷಣ -ಇಂಗ್ಲೀಷಿನಲ್ಲಿ http://sports.ndtv.com/cricket/sachin/news/217029-sachin-tendulkar-retires-after-200th-test-his-full-speech-after-the-wankhede-match Archived 2014-01-05 ವೇಬ್ಯಾಕ್ ಮೆಷಿನ್ ನಲ್ಲಿ.
  2. http://indiatoday.intoday.in/story/sachin-tendulkar-india-vs-west-indies-wankhede-stadium-mumbai-test-match/1/324670.html
  3. https://www.youtube.com/watch?v=CfCBWUkWzXM
  4. http://tvaraj.com/2013/11/15/sachin-tendulkars-200th-and-final-test-match-of-his-career/
  5. http://www.espncricinfo.com/india/content/player/35320.html