ಸಖಿ ಕಂಧೇಯಿ
ಸಖಿ ಕಂಧೇಯಿ ( ಸಖಿ ಕುಂಧೇಯಿ , ಸಖಿ ನಟ ಎಂದೂ ಕರೆಯುತ್ತಾರೆ ) ಭಾರತದ ಒಡಿಶಾ ರಾಜ್ಯದಲ್ಲಿ[೧][೨] , ವಿಶೇಷವಾಗಿ ಒಡಿಶಾದ ಜನಪ್ರಿಯವಾಗಿರುವ ಒಂದು ಸ್ಟ್ರಿಂಗ್ ಬೊಂಬೆಯಾಟ ಪ್ರದರ್ಶನವಾಗಿದೆ. ಕೇಂದ್ರಪಾರದಲ್ಲಿರುವ ಮತ್ತು ಸುತ್ತಮುತ್ತಲಿನ ಸ್ಥಳೀಯ ಕಲಾವಿದರು ಈ ಪ್ರಕಾರದ ಕಲೆಯನ್ನು ಪ್ರದರ್ಶಿಸುತ್ತಾರೆ. ಬೊಂಬೆಯಾಟಗಾರರು ಸಾಮಾನ್ಯವಾಗಿ ಗುಂಪುಗಳನ್ನು ರಚಿಸುತ್ತಾರೆ ಮತ್ತು ಪ್ರದರ್ಶನಗಳಿಗಾಗಿ ಹಳ್ಳಿಯಿಂದ ಹಳ್ಳಿಗೆ ಪ್ರಯಾಣಿಸುತ್ತಾರೆ. ಮರದ ಗೊಂಬೆಗಳನ್ನು ತಂತಿಗಳಿಗೆ ಕಟ್ಟಲಾಗುತ್ತದೆ, ಇವು ತಂತಿಗಳನ್ನು ಎಳೆಯುವ ಮತ್ತು ಬಿಡುವ ಮೂಲಕ ನಿಯಂತ್ರಿಸಲ್ಪಡುತ್ತವೆ. ತಂತಿಗಳನ್ನು ಎಳೆಯುವ ಮೂಲಕ ಪುರಾಣಗಳು ಮತ್ತು ಆಧುನಿಕ ಸಾಮಾಜಿಕ ಜೀವನದ ಕಥೆಗಳನ್ನು ವಿಭಿನ್ನ ರೀತಿಯಲ್ಲಿ ಅಭಿವ್ಯಕ್ತಿಸಲಾಗುತ್ತದೆ [೩]. ಹಿನ್ನಲೆ ದ್ವನಿಯ ಮೂಲಕ ಸಂಗೀತ ಮತ್ತು ಕಥೆಯ ನಿರೂಪಣೆ ಮಾಡಲಾಗುತ್ತದೆ.[೪][೫][೬][೭] ಸಖಿ ಕಂಧೇಯಿಯನ್ನು ನಶಿಸುತ್ತಿರುವ ಕಲಾ ಪ್ರಕಾರವೆಂದು ಪರಿಗಣಿಸಿ, ಒಡಿಶಾ ಸಂಗೀತ ನಾಟಕ ಅಕಾಡೆಮಿ ಅದನ್ನು ಜನಪ್ರಿಯಗೊಳಿಸಲು ಮತ್ತು ಪುನರುಜ್ಜೀವನಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ[೮]. ಬೆರಳೆಣಿಕೆಯಷ್ಟು ಬೊಂಬೆಯಾಟಗಾರರು ಕೂಡಾ ಕಲಾ ಪ್ರಕಾರವನ್ನು ಪುನರುಜ್ಜೀವನಗೊಳಿಸಲು ಉಪಕ್ರಮಗಳನ್ನು ಕೈಗೊಂಡಿದ್ದಾರೆ[೯].
ಬೊಂಬೆ ಪ್ರದರ್ಶನ ನಿರ್ವಾಹಕರಿಂದ ಬರುವ ಆರ್ಡರ್‌ಗಳ ಮೇರೆಗೆ ನಾನು ಮರದ ಬೊಂಬೆಗಳನ್ನು ಕೆತ್ತುತ್ತೇನೆ. ನಾನು ಪ್ರದರ್ಶನಗಳನ್ನು ಪ್ರದರ್ಶಿಸುವ ಮೂಲಕ ಗಳಿಸುವ ಹಣದ ಜೊತೆಗೆ, ನಾನು ತಯಾರಿಸುವ ಗೊಂಬೆಗಳು ಹಣವನ್ನು ಗಳಿಸುತ್ತವೆ.
- ಫಕೀರ್ ಸಿಂಗ್, ಪಾಲಕಾನದ ಬೊಂಬೆಯಾಟಗಾರ
ಬೊಂಬೆಗಳು
[ಬದಲಾಯಿಸಿ]ಸಖಿ ಕಂಧೇಯಿಯಲ್ಲಿ ಮರದ ಬೊಂಬೆಗಳನ್ನು ಬಳಸಲಾಗುತ್ತದೆ. ಇವು ಮೂರು ತುಂಡುಗಳನ್ನು ಹೊಂದಿರುತ್ತವೆ; ತಲೆ ಮತ್ತು ಎರಡು ಕೈಗಳು ಮಣಿಕಟ್ಟುಗಳನ್ನು ಹೊಂದಿದ್ದು, ಬೆರಳುಗಳನ್ನು ಸೇರಿಸಲು ರಂಧ್ರವಿರುತ್ತದೆ. ಮೂರು ತುಂಡುಗಳನ್ನು ಒಟ್ಟಿಗೆ ಜೋಡಿಸಲಾಗುತ್ತದೆ ಮತ್ತು ಉದ್ದ ತೋಳಿನ ಉಡುಪುಗಳನ್ನು ದೇಹಗಳನ್ನು ಮುಚ್ಚಲು ಬಳಸಲಾಗುತ್ತದೆ. ಕಥೆಯ ನಿರೂಪಣೆಗಳ ಆಧಾರದ ಮೇಲೆ ಲಯಬದ್ಧ ಸನ್ನೆಯನ್ನು ನೀಡಲು ಹೆಬ್ಬೆರಳು, ಕೈಕಾಲುಗಳು ಮತ್ತು ಇತರ ದೇಹದ ಭಾಗಗಳಿಗೆ ದಾರಗಳನ್ನು ಜೋಡಿಸಲಾಗುತ್ತದೆ.ದಾರ ಎಳೆಯುವುದು ಮತ್ತು ಬಿಡುಗಡೆ ಮಾಡುವ ಮೂಲಕ ಚಲನೆಕೊಡಲಾಗುತ್ತದೆ.[೧೦][೧೧]
ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಆಕರ್ಷಕ ಮನರಂಜನಾ ಸಾಧನಗಳು ದಿನದ 24 ಗಂಟೆಯೂ ಸಿಡಿಯುತ್ತಿರುವಾಗ, ಕಲೆಯನ್ನು ಜೀವಂತವಾಗಿಡುವುದು ಕಠಿಣ ಹೋರಾಟವಾಗಿದೆ. ಹಾಗಾದರೆ, ಈ ಬೆರಳೆಣಿಕೆಯಷ್ಟು ಕಲಾವಿದರು ಪ್ರಾಚೀನ ಸಾಂಪ್ರದಾಯಿಕ ಕಲೆಯನ್ನು ಭವಿಷ್ಯದ ಪೀಳಿಗೆಗೆ ಎಷ್ಟು ಕಾಲ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂಬುದು ಪ್ರಶ್ನೆ.
— ಬಾಸುದೇಬ್ ದಾಸ್, ಸೂತ್ರದ ಬೊಂಬೆಯಾಟ ಸಂಶೋಧಕ
ಸಹ ನೋಡಿ
[ಬದಲಾಯಿಸಿ]- ಚಾದರ್ ಬದರ್ , ಭಾರತದ ಸಂತಾಲ್ ಜನರ ಬೊಂಬೆ ಕಲೆ
- ಗೋಪಾಲೀಲಾ , ಭಾರತದ ಒಡಿಶಾ ರಾಜ್ಯದ ಬೊಂಬೆ ಕಲೆ.
- ಕತ್ಪುತ್ಲಿ (ಗೊಂಬೆಯಾಟ) , ಭಾರತದ ರಾಜಸ್ಥಾನ ರಾಜ್ಯದ ಬೊಂಬೆ ಕಲೆ
- ನೊಕ್ಕುವಿದ್ಯಾ ಪಾವಕಳಿ , ಭಾರತದ ಕೇರಳ ರಾಜ್ಯದ ಬೊಂಬೆ ಕಲೆ
- ರಬನ ಛಾಯಾ , ಭಾರತದ ಒಡಿಶಾ ರಾಜ್ಯದ ನೆರಳು ಬೊಂಬೆ ಕಲೆ.
- ನೆರಳು ನಾಟಕ , ಭಾರತದಲ್ಲಿ ಮೊದಲ ಸಹಸ್ರಮಾನ BCE ಯಲ್ಲಿ ಹುಟ್ಟಿಕೊಂಡ ನೆರಳು ಬೊಂಬೆ ಕಲೆ.
- ತೋಲ್ಪವಕೂತ್ತು , ಭಾರತದ ಕೇರಳ ಮತ್ತು ತಮಿಳುನಾಡು ರಾಜ್ಯಗಳ ನೆರಳು ಬೊಂಬೆ ಕಲೆ.
- ತೊಲು ಬೊಮ್ಮಲತಾ , ಭಾರತದ ಆಂಧ್ರಪ್ರದೇಶ ರಾಜ್ಯದ ನೆರಳು ಬೊಂಬೆ ಕಲೆ
- ತೊಗಲುಗೊಂಬೆಯಾಟ , ಭಾರತದ ಕರ್ನಾಟಕ ರಾಜ್ಯದ ನೆರಳು ಬೊಂಬೆಯಾಟ
- ವಯಾಂಗ್ , ಭಾರತೀಯ ಬೊಂಬೆಯಾಟದಿಂದ ಪ್ರೇರಿತವಾದ ಇಂಡೋನೇಷ್ಯಾದ ಬೊಂಬೆ ಕಲೆ.
ಉಲ್ಲೇಖಗಳು
[ಬದಲಾಯಿಸಿ]- ↑ Communication and the Traditional Media: Papers and Proceedings of Seminar. Indian Institute of Mass Communication. 1981.
- ↑ Mukherjee, Anusua (2017-11-25). "Puppetry in Odisha: who is pulling the strings?". The Hindu (in Indian English). ISSN 0971-751X. Retrieved 2021-01-13.
- ↑ Cultural Heritage of Orissa: Justice Sri Harihar Mahapatra Felicitation Volume. Institute of Oriental and Orissan Studies. 1993.
- ↑ "String puppetry – A dying art form". The Indian Express. 26 February 2014. Retrieved 27 February 2014.
- ↑ "A dying art form". 26 February 2014. Retrieved 27 February 2014.
- ↑ "String puppetry – A dying art form". OTV. 25 February 2014. Archived from the original on 3 March 2014. Retrieved 27 February 2014.
- ↑ "String puppetry: A dying art form". The Jagran. 25 February 2014. Archived from the original on 1 April 2014. Retrieved 27 February 2014.
- ↑ Singha, Minati (25 March 2011). "Dying art forms find a stage in city". The Times of India. Retrieved 27 February 2014.
- ↑ "String puppetry – A dying art form". Press Trust of India. 25 February 2014. Retrieved 27 February 2014.
- ↑ Kala Vikash Kendra, Cuttack (1985). Journal.
- ↑ Sunil Kothari; Ranjita Karlekar (1989). Damaru, Essays on the Theatre & Theatre Crafts of Eastern India. Council and the Centre.