ಸಂಧ್ಯಾವಂದನೆ ಮಂತ್ರ
ಸಂಧ್ಯಾವಂದನೆ ಬೋಧಾಯನ ಸ್ಮಾರ್ತ ಹವ್ಯಕ ಪದ್ಧತಿ - ಸಂಕ್ಷಿಪ್ತ ರೂಪ[ಬದಲಾಯಿಸಿ]
- ಅಗತ್ಯವಿದ್ದರೆ ತಿದ್ದುಪಡಿಮಾಡಿ ಮತ್ತು ಸೇರಿಸಿಕೊಳ್ಳಿ.
ಪೀಠಿಕೆ :[ಬದಲಾಯಿಸಿ]
- ಸಂಧ್ಯಾವಂದನೆ ಮಾಡುವ ಸಂಪ್ರದಾಯ ಬಹಳ ಪ್ರಾಚೀನ ಕಾಲದಿಂದಲೂ ಇದ್ದಂತೆ ಕಾಣುತ್ತದೆ.
ರಾಮಾಯಣ ಮಹಾಕಾವ್ಯದಲ್ಲಿ ವಿಶ್ವಾಮಿತ್ರ ಋಷಿಯು ಶ್ರೀ ರಾಮನಿಗೆ ಬೆಳಗಾಯಿತು ಏಳು ಸಂಧ್ಯಾ ವಿಧಿಗಳನ್ನು ಮಾಡು ಎಂದು ಎಚ್ಚರಿಸುತ್ತಾನೆ. ಸಂಧ್ಯಾವಂದನೆಗೆ ತ್ರಿಕಾಲವನ್ನು ಅಥವಾ ತ್ರಿಸಂಧ್ಯೆಯನ್ನು ಹೇಳಿದೆ; ಬೆಳಿಗ್ಗೆ, ಮದ್ಯಾಹ್ನ ಮತ್ತು ಸಂಜೆ. ಅದಕ್ಕೆ ತಕ್ಕಂತೆ ಮಂತ್ರಗಳನ್ನೂ ಜೋಡಿಸಿದೆ. ಸಧ್ಯದಲ್ಲಿ ಎರಡು ಕಾಲದಲ್ಲಿ ಮಾತ್ರ ಆಚರಣೆ ಮಾಡುವುದು ರೂಢಿಯಲ್ಲಿರುವುದು - ಬೆಳಗಿನ ಮತ್ತು ಮದ್ಯಾಹ್ನದ ಕ್ರಿಯೆಗಳನ್ನು ಒಟ್ಟಿಗೆ ಸೇರಿಸಿ ಬೆಳಗಿನಲ್ಲಿ ಅಥವಾ ಮಧ್ಯಾಹ್ನ ಆಚರಿಸುವುದು. ಸಂಜೆ ಸೂರ್ಯಾಸ್ತ ಸಮಯದಲ್ಲಿ ಒಮ್ಮೆ ಸಂಧ್ಯಾವಂದನೆ ಮಾಡುವುದು. ಶ್ರೌತ ಸ್ಮಾರ್ತ ಪದ್ದತಿಗಳನ್ನೊಳಗೊಂಡ ಈ ಕ್ರಿಯೆಗಳು ನಿತ್ಯ ಕರ್ಮಗಳಲ್ಲಿ ಸೇರಿದೆ. ಇದನ್ನು ಆಚರಿಸುವುದರಿಂದ ಮನಸ್ಸು ಅಥವಾ ಚಿತ್ತ ಶುದ್ಧಿಯಗುವುದೆಂಬುದು ಶ್ರೀ ಶಂಕರರ ಅಭಿಪ್ರಾಯ. ಈ ಕ್ರಿಯೆ ಮಾಡುವುದರಿಂದ ಪುಣ್ಯವೂ ಇಲ್ಲ ಬಿಡುವುದರಿಂದ ಪಾಪವೂ ಇಲ್ಲ. ಆದರೆ ಬಿಡುವುದರಿಂದ ಕರ್ತವ್ಯ ಲೋಪವಾಗುವುದೆಂದು ಹೇಳಿದೆ. ಈ ಸಂಧ್ಯಾವಂದನಾದಿ ನಿತ್ಯ ಕ್ರಿಯೆಗಳು ಅದರ ಹೆಸರೇ ಹೇಳುವಂತೆ ಭಗವಂತನಿಗೆ ಧನ್ಯವಾದವನ್ನು ಅರ್ಪಿಸುವ ಕ್ರಿಯೆಗಳಾಗಿವೆ.
- ಸಂಧ್ಯಾವಂದನೆಯಲ್ಲಿ ಗಾಯತ್ರೀ ಜಪ ಬಹಳ ಮುಖ್ಯವಾದುದರಿಂದ ಸರಳವಾದ ಜಪಯೋಗ ವಾಗಿ ಉಪನಯನ ನಂತರ ಪ್ರತಿಯೊಬ್ಬರೂ ಅಭ್ಯಾಸ ಮಾಡಬೇಕೆಂದು ವಿಧಿಸಿರುವಂತೆ ಕಾಣುತ್ತದೆ.. ಆದರೆ ಕ್ರಮೇಣ ಅದನ್ನು ವಿಸ್ತರಿಸಿದ, ಸಂಧ್ಯಾವಂದನ ಪೂರ್ಣಪಾಠ ದಲ್ಲಿ ಹೆಚ್ಚು ತಾಂತ್ರಿಕ ವಿಧಿಗಳಿದ್ದು ಗಾಯತ್ರೀ ಉಪಾಸನಾ ವಿಧಿಯನ್ನು ಹೇಳಿದೆ. ಆದ್ದರಿಂದ ಪೂರ್ಣ ಸಂದ್ಯಾವಂದನೆ ಮಾಡುವವರು ಸರಿಯಾದ ಮಾರ್ಗದರ್ಶನ ಪಡೆದು ಸ್ವಲ್ಪವೂ ತಪ್ಪಿಲ್ಲದಂತೆ ಲೋಪವಾಗದಂತೆ ಮಾಡಬೇಕು.
- (ಉತ್ತರ ಅಥವಾ ಪೂರ್ವಾಭಿಮುಖವಾಗಿ ಕುಳಿತುಕೊಳ್ಳಬೇಕು ; ಮಣೆ ಅಥವಾ ಚಾಪೆಯ ಮೇಲೆ ಕುಳಿತು ಕೈ ಮುಗಿದುಕೊಂಡು ಪ್ರಾರ್ಥನೆ ಮಾಡಬೇಕು. ಬೆನ್ನು ಕುತ್ತಿಗೆ ನೇರವಾಗಿರುವಂತೆ ಸ್ವಸ್ತಿಕಾಸನ ಅಥವಾ ಸುಖಾಸನ ದಲ್ಲಿ ಕುಳಿತು ಸಂಧ್ಯಾವಂದನೆ ಮಾಡಬೇಕು, ಕೈ ಕಾಲು ತೊಳೆದು, ದೇಹ ಶುದ್ಧಿ ಮನಸ್ಸು ಶುದ್ಧಿ ಇರಬೇಕು ) ಸಂಧ್ಯಾವಂದನೆ;- ಹವ್ಯಕರು ಅನುಸರಿದುವ ಬೋಧಾಯನ ಪದ್ಧತಿಯ ಸಂಧ್ಯಾವಂದನೆಯಲ್ಲಿ ಮುಖ್ಯವಾಗಿ ಈ ಹದಿನಾಲ್ಕು ಕ್ರಿಯೆಗಳಿವೆ:-
- ೧. ಆಚಮನ ; . ೨. ಮಂತ್ರ ಸ್ನಾನ ; ೩. ಭಸ್ಮಧಾರಣ ; ೪. ಸಂಕಲ್ಪ ; ೫. ಮಾರ್ಜನ (ಸ್ನಾನ- ಮಂತ್ರಸ್ನಾನ)) ;೬. ಜಲ ಪ್ರಾಶನ ( ದುರಿತ ನಿವಾರಣ) ; ೭. ಪುನಃ ಮಾರ್ಜನ ; ೮. ಅರ್ಘ್ಯ ಪ್ರದಾನ; ೯. ಗಾಯತ್ರೀ ಜಪ; ೧೦. ಸೂರ್ಯ ಉಪಸ್ಥಾನ (ಸೂರ್ಯನ ಬೀಳ್ಕೊಡಿಗೆ ವಂದನೆ) ೧೧. ಅಭಿವಾದನ ; ೧೨. ಅಷ್ಟಾಕ್ಷರೀ ಜಪ ; ೧೩. ಪಂಚಾಕ್ಷರೀ ಜಪ; ೧೪. ಭಗವದರ್ಪಣ. {ಉಪಸ್ಥಾನದ (ವೇದ) ಮಂತ್ರಗಳನ್ನು ಸಂಕ್ಷಿಪ್ತ ಸಂಧ್ಯಾವಂದನೆ ಯಲ್ಲಿ ಕೊಟ್ಟಿಲ್ಲ. ಅದನ್ನು ಈಗ ಹೇಳುವುದು ಕಡಿಮೆ. ಆಗತ್ಯವಿದ್ದಲ್ಲಿ ಪೂರ್ಣಸಂಧ್ಯಾವಂದನೆ ಯ ಪಾಠದಿಂದ ತೆಗೆದುಕೊಳ್ಳಬಹುದು. ಅಥವಾ ಮೂರೂ ಹೊತ್ತಿನ ಉಪಸ್ಥಾನದ ಕ್ರಿಯೆ ಸೇರಿಸಿ ಓಂ ಸೂರ್ಯಾಯ ನಮಃ; ಓಂ ಮಿತ್ರಾಯ ನಮಃ; ಓಂ ವರುಣಾಯ ನಮಃ || ಎಂದು ಹೇಳಿ ನಮಸ್ಕರಿಸಬಹುದು}
||ಶ್ರೀರಸ್ತು|| ಪ್ರಾರ್ಥನೆ :-[ಬದಲಾಯಿಸಿ]
- ವಂದೇ ವಿಘ್ನೇಶ್ವರಂ ದೇವಂ ಸರ್ವ ವಿಘ್ನಾಧಿದೈವತಂ |
- ಅಂತರಾಯ ನಿವೃತ್ಯರ್ಥಂ ತಂ ನಮಾಮಿ ಗಜಾನನಂ ||
- ಗುರುರ್ಬ್ರಹ್ಮ ಗುರುರ್ವಿಷ್ಣುಃ ಗುರರ್ದೇವೋ ಮಹೇಶ್ವರಃ |
- ಗುರುಸ್ಸಾ ಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ||
- (ಕುಲ ದೇವತಾಭ್ಯೋ ನಮಃ - ಕುಲದೇವತೆಯನ್ನು/ಗಳನ್ನು ಸ್ಮರಿಸು ;
ಉದಾ:) ಶ್ರೀ ಲಕ್ಷ್ಮಿ ನಾರಾಯಣಾಭ್ಯಾಂ ನಮಃ | ಶ್ರಿಲಕ್ಷ್ಮಿನಾರಾಯಣಾಯನಮಃ) (೧ ಲಕ್ಷ್ಮಿ ಮತ್ತು ನಾರಾಯಣ ಇಬ್ಬರಿಗೂ ನಮಸ್ಕಾರ - ೨. ಲಕ್ಷ್ಮಿಸಹಿತನಾದ ನಾರಾಯಣನಿಗೆ ಒಬ್ಬನಿಗೇ ನಮಸ್ಕಾರ ಯಾವುದಾದರೂ ಒಂದು ಕ್ರಮ ಅನುಸರಿಸ ಬೇಕು) (ಶ್ರೀ ಲಕ್ಷ್ಮಿ ನಾರಾಯಣಾಭ್ಯಾಂ ನಮಃ || ಶ್ರೀ ಲಕ್ಷ್ಮಿವೆಂಕಟರಮಣಾಯ ನಮಃ |) (ಇಷ್ಟ ದೇವತಾಭ್ಯೋ ನಮಃ - ತನಗೆ ಪ್ರೀತಿಯುಳ್ಳ ದೇವರನ್ನು ಮತ್ತು ಗುರುಗಳನ್ನು ನೆನೆಯುವುದು, ನಮಿಸುವುದು ಉದಾ;) ಶ್ರೀ ರಾಮಚಂದ್ರಾಯ ನಮಃ |ಶ್ರೀ ಕೃಷ್ಣಪರಮಾತ್ಮನೇ ನಮಃ || ಶ್ರೀ ಶಂಕರ ಭಗವತ್ಪಾದ ಗುರವೇ ನಮಃ| ಶ್ರೀ ಶಾರದಾಂಬಾಯೈ ನಮಃ |
- (ಪುನಃ ಗಣಪತಿಯ ವಂದನೆಯಿಂದ ಸಂಧ್ಯಾವಂದನೆ ಪ್ರಾರಂಭ) :-
ವಂದೇ ವಿಘ್ನೇಶ್ವರಂ ದೇವಂ ಸರ್ವ ವಿಘ್ನಾಧಿದೈವತಂ | ಅಂತರಾಯ ನಿವೃತ್ಯರ್ಥಂ ತಂ ನಮಾಮಿ ಗಜಾನನಂ | '
ಆಚಮ್ಯ -'[ಬದಲಾಯಿಸಿ]
ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ | ಓಂ ಸಾಮ ವೇದಾಯ ಸ್ವಾಹಾ | (ಬಲಗೈ ಅನಾಮಿಕಕ್ಕೆ ಹೆಬ್ಬೆರಳು ಸೇರಿಸಿ ಅಂಗೈ ಮಧ್ಯಕ್ಕೆ ೧ ಚಮಚ ನೀರು ಹಾಕಿಕೊಂಡು ಪ್ರತಿ ಮಂತ್ರಕ್ಕೂ ೧ ಬಾರಿಯಂತೆ ತುಟಿಗೆ ತಾಗಿಸಿ ಎಂಜಲಾಗದಂತೆ ಕುಡಿಯುವುದು - ಸ್ಮಾರ್ಥ ಸಂಪ್ರದಾಯದಲ್ಲಿ ಆಚಮನಕ್ಕೆ ೧ ಓಂ ಕೇಶವಾಯ ಸ್ವಾಹಾ ೨.ಓಂ ನಾರಾಯಣ ಸ್ವಾಹಾ ೩.ಓಂ ಮಾಧವಾಯ ಸ್ವಾಹಾ, ಅಥವಾ ೧. ಓಂ ಅಚ್ಯುತಾಯ ನಮಃ,೨. ಓಂ ಅನಂತಾಯ ನಮಃ. ೩. ಓಂ ಗೋವಿಂದಾಯ ನಮಃ. ಎಂದು ಹೇಳಿ ಆಚಮನ ಮಾಡುವುದು ಸಂಪ್ರದಾಯ.)- ಇದು ಒಂದು ಸುತ್ತು ಆಚಮನ-ತ್ರಿರಾಚಮ್ಯ - ಪ್ರತಿ ಕ್ರಿಯೆಯ ವಚನವನ್ನು ಹೇಳಿಕೊಂಡು ಕ್ರಿಯೆ ಮಾಡಬೇಕು ; ಆವರಣದಲ್ಲಿರುವುದು ಸೂಚನೆ.
ಮಂತ್ರ ಸ್ನಾನ -ಅಂತರಂಗ ಬಹಿರಂಗ ಶುದ್ಧಿ :[ಬದಲಾಯಿಸಿ]
- ಓಂ ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
- ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
- || ಇತಿ ಹರಿಸ್ಮರಣಂ ಕೃತ್ವಾ|| ಅಚ್ಯುತಾನಮಃ | ಅಚ್ಯುತಾನಮಃ || ಅನಂತಾಯ ನಮಃ | ಅನಂತಾಯ ನಮಃ || ಗೋವಿಂದಾಯ ನಮಃ | ಗೋವಿಂದಾಯ ನಮಃ || ವಿಷ್ಣವೇ ನಮಃ | ವಿಷ್ಣವೇ ನಮಃ || ವಿಷ್ಣೋ ವಿಷ್ಣೋ ಸ್ಮರನ್ || (ಅನಾಮಿಕದಿಂದ ನೀರು ಮುಟ್ಟಿಕೊಂಡು ಕಣ್ಣಿನ ರೆಪ್ಪೆಯನ್ನು ನಾದಿಕೊಳ್ಳುತ್ತಾ ಹರಿಸ್ಮರಣೆ ಮಾಡುವುದು; ಪ್ರತಿ ಸಾರಿ ಹರಿ ಸ್ಮರಣೆ ಮಾಡುವಾಗಲೂ ಹೀಗೆ ಮಾಡಬೇಕು )
ತ್ರಿರಾಚಮ್ಯ : (ಮೇಲಿನಂತೆ).
ಅಥ ಭಸ್ಮ ಧಾರಣಂ : (ಭಸ್ಮ ಧರಿಸುವ ಮಂತ್ರ - ಕ್ರಿಯೆಯ ಮಂತ್ರಗಳನ್ನೂ ಹೇಳಿಕೊಳ್ಳಬೇಕು.).[ಬದಲಾಯಿಸಿ]
- || ಭಸ್ಮಂ ಗ್ರಹೀತ್ವಾ || (ಬಲ ಹೆಬ್ಬೆರಳು, ಮಧ್ಯ ಬೆರಳು, ಅನಾಮಿಕ ಬೆರಳುಗಳಲ್ಲಿ ೧ ಚಿಟಿಕೆ ಭಸ್ಮವನ್ನು
ತೆಗೆದುಕೊಂಡು, ಎಡ ಅಂಗೈ ಮಧ್ಯದಲ್ಲಿ ಇಟ್ಟುಕೊಂಡು, ಈಕೆಳಗಿನ ರುದ್ರ ಗಾಯತ್ರೀ ಮತ್ತು ಮೃತ್ಯಂಜಯ ಮಂತ್ರದಿಂದ ಅಭಿಮಂತ್ರಿಸಬೇಕು)
- ಓಂ ತತ್ಪುರುಷಾಯ ವಿದ್ಮಹೇ | ಮಹಾದೇವಾಯ ಧೀಮಹಿ | ತನ್ನೋ ರುದ್ರಃ ಪ್ರಚೋದಯಾತ್||
- ಓಂ ತ್ರ್ಯಂಬಕಂ ಯಜಾಮಹೇ ಸುಗಂಧಿಂ ಪುಷ್ಟಿ ವರ್ಧನಂ || ಊರ್ವಾರುಕಮಿವ ಬಂಧನಾನ್ಮ
ತ್ಯೊ ರ್ಮುಕ್ಷೀಯ ಮಾ ಮೃತಾತ್ || (ಬಂಧನಾತ್ ಮೃತ್ಯೋರ್ ಮುಕ್ಷೀಯ)
- ಅಗ್ನಿರಿತಿ ಭಸ್ಮ | (ಹಣೆಗೆ- ಮಧ್ಯ ಬೆರಳು ಅನಾಮಿಕ ಬೆರಳುಗಳಿಂದ ಹಣೆಯ ಎಡ ಭಾಗದಿಂದ ಬಲ ಭಾಗದ ವರೆಗೆ ಮಧ್ಯ ಸ್ವಲ್ಪ ಜಾಗ ಬಿಟ್ಟು ಬರಳಿನಿಂದ ಎಳೆದು ಹಚ್ಚಿ, ಹೆಬ್ಬೆರಳಿಗೆ ಹಚ್ಚಿರುವ ಭಸ್ಮದಿಂದ ಅವೆರಡರ ಮಧ್ಯದಲ್ಲಿ ಬಲದಿಂದ ಎಡಕ್ಕೆ ಎಳೆದು ಹಚ್ಚಬೇಕು -ತ್ರಿಪುಂಡ್ರ ಭಸ್ಮ ಧಾರಣ.). ವಾಯುರಿತಿಭಸ್ಮ | (ಎರಡೂ ಭುಜಗಳಿಗೆ, ಮುಂಗೈ ಮತ್ತು ಮಧ್ಯ ತೋಳಿಗೆ), ಜಲಮಿತಿಭಸ್ಮ | (ಹೊಟ್ಟೆಗೆ ಎರಡೂ ಕೈಗಳಿಂದ), ವ್ಯೋಮೇತಿ ಭಸ್ಮ || (ತೊಡೆ ಕಾಲು, ಬೆನ್ನು) ಸರ್ವಗುಂ ಹವಾ ಯಿದಂ ಭಸ್ಮ|| (ದೇಹದ ಇತರೆ ಭಾಗಗಳಿಗೆ), ಮನ ಏತಾನಿ ಚಕ್ಷು ಗುಂಷಿ ಭಸ್ಮಾನಿ || (ಕಣ್ಣಿನರೆಪ್ಪೆ ಮತ್ತು ಇತರೆ ಭಾಗಗಳಿಗೆ ), ಇತಿ ಧಾರಯೇತ್ || (ಧರಿಸಿಯಾಯಿತು)
ಸಂಕಲ್ಪ ;[ಬದಲಾಯಿಸಿ]
- ವಿಷ್ಣೋ ವಿಷ್ಣೋ ರಾಜ್ಞಯಾ ಪ್ರವರ್ತಮಾನಸ್ಯ ಆದ್ಯ ಬ್ರಹ್ಮಣಃ ,
ದ್ವಿತೀಯ ಪರಾರ್ಧೇ, ಶ್ರೀಹರೇಃ, ಶ್ವೇತ ವರಾಹ ಕಲ್ಪೇ, ವೈವಸ್ವತ ಮನ್ವಂತರೇ, ಕಲಿಯುಗೇ,ಪ್ರಥಮ ಪಾದೇ, ಜಂಬೂ ದ್ವೀಪೇ, ಭರತ ಖಂಡೇ, ಭಾರತ ವರ್ಷೇ, ಶ್ರೀಮದ್ ಗೋದಾವರ್ಯಾಂ, ದಕ್ಷಿಣ ತೀರೇ, ಗೋಕರ್ಣ ಮಂಡಲೇ, ಗೋ ರಾಷ್ಟ್ರ ದೇಶೇ, ಭಾಸ್ಕರ ಕ್ಷೇತ್ರೇ, ಸಹ್ಯ ಪರ್ವತೇ, ಶಾಲಿವಾಹನ ಶಕಾಬ್ಧೇ, ಅಸ್ಮಿನ್ ವರ್ತಮಾನ ಕಾಲೇ, ವ್ಯವಹಾರಿಕೇ, --- ನಾಮ ಸಂವತ್ಸರೇ, ---ಅಯನೇ, ---ಋತೌ, ---ಮಾಸೇ, ---ಪಕ್ಷೇ, ---ತಿಥೌ, ---ವಾಸರೇ(ವಾರೇ), ಶುಭ ಯೋಗ, ಶುಭ ಕರಣ, ಏವಂ ಗುಣ ವಿಶೇಷಣ ವಿಶಿಷ್ಟಾಯಾಂ, ಪುಣ್ಯಯಾಂ ಪುಣ್ಯ ಕಾಲೇ , ಮಮೋಪಾತ್ತ ದುರಿತ ಕ್ಷಯ ದ್ವಾರಾ, ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪ್ರಾತರ್ / ಮಧ್ಯಾಹ್ನ /ಸಾಯಂ ಸಂಧ್ಯಾಮುಪಾಸ್ಯೆ || (ನೀರು ಬಿಡುವುದು) |ಇತಿಸಂಕಲ್ಪ್ಯ | (ಪ್ರಾತರ್ ಮಧ್ಯಾಹ್ನ ಎರಡೂ ಹೊತ್ತಿನದನ್ನು ಒಟ್ಟಿಗೇ ಮಾಡುವುದು ರೂಢಿ)
ಮಾರ್ಜನಂ[ಬದಲಾಯಿಸಿ]
- ||ಅಥ ನವ ಮಾರ್ಜನಂ ಕುರ್ಯಾತ್ ||
- ಓಂ ಆಪೋಹಿಷ್ಠಾ ಮಯೋ ಭುವಃ|
- ತಾನ ಊರ್ಜೆ ದದಾತನ || ಓಂ ಮಹೇರಣಾಯ ಚಕ್ಷಸೇ |
- ಯೋವಃ ಶಿವತಮೋ ರಸಃ|| ಓಂ ತಸ್ಯ ಭಾಜಯತೇ ಹನಃ|
- ಉಶತೀರಿವ ಮಾತರಃ | ಓಂ ತಸ್ಮಾ ಅರಂಗ ಮಾಮವಃ|
- ಯಸ್ಯ ಕ್ಷಯಾಯ ಜಿನ್ವಥಃ | ಓಂ ಆಪೋ ಜನಯ ಥಾ ಚ ನಃ||
- ( ಇದೇ ರೀತಿ ಮುಂದೆ ಮೇಲೆ ಗೀಟು ಉಳ್ಳ ಉದಾತ್ತ ಅಕ್ಷರಗಳನ್ನು ಗೀಟಿಗೆ ಬದಲಾಗಿ ಎದ್ದ (ದಪ್ಪ) ಅಕ್ಷರಗಳಾಗಿ ಬರೆದಿದೆ ; ಅನುದಾತ್ತಕ್ಕೆ ಕೆಳಗೆ ಗೀಟು ಹಾಕಿದೆ. ಕೆಲವರು ಪ್ರಾರಂಭದಲ್ಲಿ ಮಾತ್ರ ಓಂ ಕಾರ ಬಳಸುತ್ತಾರೆ )
( ಎಡ ಕೈಯಲ್ಲಿ ಸೌಟು-ನೀರು ಇಟ್ಟು ಕೊಂಡು ಬಲ ಅನಾಮಿಕದಿಂದ ಆ ನೀರನ್ನು ಪಾದದಿಂದ ನೆತ್ತಿಯವರೆಗೂ ಚಿಮಸಿಕೊಳ್ಳುತ್ತಾ ಮೂರು ಬಾರಿ ಹೇಳಿದರೆ ೯ ಮಾರ್ಜನ -ಸ್ನಾನವಾಗುವುದು. ಅನಿವಾರ್ಯದಲ್ಲಿ ಒಂದು ಬಾರಿ ಹೇಳಿದರೂ ಸಾಕು) (ಇತಿ ಮಾರ್ಜಯಿತ್ವಾ)
ಜಲ ಪ್ರಾಶನ ( ದುರಿತ ನಿವಾರಣ) ;[ಬದಲಾಯಿಸಿ]
- (ಆಪೋಶನ ಮುದ್ರೆ ಯಲ್ಲಿ ಬಲ ಅಂಗೈಯಲ್ಲಿ ಒಂದು
ಸೌಟು ನೀರು ಇಟ್ಟು ಕೊಂಡು ಎಡದ ಅಂಗೈಯಿಂದ ಮುಚ್ಚಿಕೊಂಡು, ಈ ಕೆಳಗಿನ ಮಂತ್ರ ಹೇಳಿ ನಂತರ ಕುಡಿಯುವುದು.) (ಬೆಳಗಿನ ಸಂಧ್ಯಾವಂದನೆಗೆ :) ಅಥ ಪ್ರಾಥಃ ||ಅಥ ಜಲಮಾದಾಯ||
- ಓಂ ಸೂರ್ಯಶ್ಚ ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯುಕೃತೇಭ್ಯಃ|
- ಪಾಪೇಭ್ಯೋ ರಕ್ಷಂತಾಂ|| ಯದ್ರಾತ್ರಿಯಾ ಪಾಪಮಕಾರ್ಷಂ |
- ಮನಸಾ ವಾಚಾ ಹಸ್ತಾಭ್ಯಾಂ | ಪದ್ಭ್ಯಾಮುದರೇಣ ಶಿಶ್ನಾ| ರಾತ್ರಿಸ್ತದವಲಂಪತು |
- ಯತ್ಕಿಂಚ ದುರಿತಂ ಮಯಿ| ಇದಮಹಂ ಮಾಮಮೃತಯೋನೌ
- ಸೂರ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ|| ಇತಿ ಆಪಃ ಪೀತ್ವಾ ||
- (ಅಂಗೈಯಲ್ಲಿದ್ದ ನೀರನ್ನು ಆಪೋಶನದಂತೆ ಕುಡಿಯುದು)
(ಮಧ್ಯಾಹ್ನದ ಸಂಧ್ಯಾವಂದನೆಗೆ ):[ಬದಲಾಯಿಸಿ]
- ಅಥ ಮಧ್ಯಾಹ್ನೇ||
- ಓಂ ಆಪಃ ಪುನಂತು ಪೃಥಿವೀಂ ಪೃಥಿವೀ ಪೂತಾ ಪುನಾತುಮಾಂ |
- ಪುನಂತು ಬ್ರಹ್ಮಣಸ್ಪ್ರತಿರ್ಬ್ರಹ್ಮ ಪೂತಾ ಪುನಾತುಮಾಂ ||
- ಯದುಚ್ಛಿಷ್ಠ ಮಭೋಜ್ಯಂ ಯದ್ವಾ ದುಶ್ಚರಿತಂ ಮಮ |
- ಸರ್ವ ಪುನಂತು ಮಾಮಾಪೋ ಸತಾಂ ಚ ಪ್ರತಿಗ್ರಹ ಗುಸ್ವಾಹ ||
- (ಅಂಗೈಯಲ್ಲಿದ್ದ ಮಂತ್ರಿಸಿದ ನೀರನ್ನು ಆಪೋಶನದಂತೆ ಕುಡಿಯುದು )
(ಸಾಯಂ ಸಂಧ್ಯಾವಂದನೆಗೆ) :[ಬದಲಾಯಿಸಿ]
- ಅಥ ಸಾಯಂ ಕಾಲೇ||
- ಓಂ ಅ ಗ್ನಿ ಶ್ಚ ಮಾಮನ್ಯುಶ್ಚ ಮನ್ಯು ಪತಯಶ್ಚ ಮನ್ಯು ಕೃತೇಭ್ಯಃ|
- ಪಾಪೇಭ್ಯೋ ರಕ್ಷಂತಾಂ||
- ಯದಹ್ನಾ ಪಾಪಮಕಾರ್ಷಂ | ಮನಸಾ ವಾಚಾ ಹಸ್ತಾಭ್ಯಾಂ |
- ಪದ್ಭ್ಯಾಮುದರೇಣ ಶಿಶ್ನಾ| ಅಹಸ್ತದವಲಂಪತು | ಯತ್ಕಿಂಚ ದುರಿತಂ ಮಯಿ|
- ಇದಮಹಂ ಮಾಮಮೃತಯೋನೌ ಸತ್ಯೋ ಜ್ಯೋತಿಷಿ ಜುಹೋಮಿ ಸ್ವಾಹಾ||
- ಇತಿ ಆಪಃ ಪೀತ್ವಾ || (ಅಂಗೈಯಲ್ಲಿದ್ದ ಮಂತ್ರಿಸಿದ ನೀರನ್ನು ಆಪೋಶನದಂತೆ ಕುಡಿಯುದು
ಪುನಃ ಮಾರ್ಜನ[ಬದಲಾಯಿಸಿ]
- (೩೨ ಮಂತ್ರ ಸ್ನಾನ)ಪುನಃ ಮಾರ್ಜನ - ದ್ವಾತ್ರಿಂಶತಿ :
- ಓಂ ದಧಿಕ್ರಾವ್‌ಣೋ ಅಕಾರಿಷಂ ಜಿಷ್ಣೋ ರಶ್ವಸ್ಯ ವಾಜಿನಃ |
- ಸುರಭಿನೋ ಮುಖಾಕರತ್ಪ್ರಣ ಆಯೂಗುಂಷಿ ತಾರಿಷತ್ ||೧||
- ಓಂ ಆಪೋಹಿಷ್ಠಾ ಮಯೋ ಭುವಃ|
- ತಾನ ಊರ್ಜೆ ದದಾತನ || ಮಹೇರಣಾಯ ಚಕ್ಷಸೇ ||೨||
- ಓಂ ಯೋವಃ ಶಿವತಮೋ ರಸಃ|| ತಸ್ಯ ಭಾಜಯತೇ ಹನಃ |
- ಉಶತೀರಿವ ಮಾತರಃ ||೩|| ಓಂ ತಸ್ಮಾ ಅರಂಗ ಮಾಮವಃ |
- ಯಸ್ಯ ಕ್ಷಯಾಯ ಜಿನ್ವಥಃ | ಆಪೋ ಜನಯ ಥಾ ಚ ನಃ||೪||
- ( ಇಲ್ಲಿ ಸ್ನಾನ ಪವನದ, ಶಿರಸ್ಸು ಮತ್ತು ಮುಖಕ್ಕೆ ಅನ್ವಯಿಸುವ ೪
ಮಂತ್ರಗಳನ್ನು ಮಾತ್ರಾ ಕೊಟ್ಟಿದೆ. ಮಂದಿನ ೨೮ ಮಂತ್ರಗಳನ್ನು ಕಾಲಾವಕಾಶದ ದೃಷ್ಠಿಯಿಮದ ಕೊಟ್ಟಿಲ್ಲ, ದೈನಂದಿನ ಸಂಧ್ಯಾವಂದನೆಯಲ್ಲಿ ಇಷ್ಟು ಮಂತ್ರಗಳನ್ನು ಮಾತ್ರಾ ಹೇಳುವುದು ರೂಢಿ ).
ಅರ್ಘ್ಯ ಪ್ರದಾನ[ಬದಲಾಯಿಸಿ]
- (ಸೂರ್ಯನಿಗೆ ಅರ್ಘ್ಯವನ್ನು ಕೊಡುವುದು -ಬೆಳಗಿನದು ಮಧ್ಯಾಹ್ನದ್ದು ಸಂಧ್ಯಾವಂದನೆ ಮತ್ತು ಅರ್ಘ್ಯ ಪ್ರದಾನ - ಒಟ್ಟಿಗೇ ಮಾಡುವುದು ರೂಢಿ ,. ನೀರುತುಂಬಿದ ಥಾಲಿಯನ್ನು ಒಳಮುಖವಾಗಿ ಬೊಗಸೆಯಲ್ಲಿ ಇಟ್ಟು ಕೊಂಡು ಸ್ವಲ್ಪ ಸ್ವಲ್ಪವೇ ಬಗ್ಗಿಸಿಕೊಂಡು ಮಧ್ಯದ ಅಂಗೈಗೆ ನೀರು ಬಿಟ್ಟುಕೊಂಡು ಬರಳುಗಳ ತುದಿಯಲ್ಲಿ ಎರಡೂ ಕೈ ಬೊಗಸೆಯಿಂದ ನೀರು ಬಿಡುವುದು, ನಿಂತುಕೊಂಡು ಬೆಳಿಗ್ಗೆ ಮಧ್ಯಾಹ್ನ ಫೂರ್ವಾಭಿ ಮುಖವಾಗಿ; ಸಂಜೆ ಪಶ್ಚಮ ಅಭಿಮುಖವಾಗಿ ಬಿಡುವುದು ನಿಯಮ ; ಕುಳಿತು ಅರ್ಘ್ಯ ಕೊಡುವುದಾದರೆ ಹಾಗೆಯೇ ಕೊಡುವುದು ರೂಢಿ ; ಹೊಳೆ ಕೆರೆಗಳಲ್ಲಾದರೆ ಬೊಗಸೆಯಲಿ ನೀರನ್ನು ಎತ್ತಿ ಬೆರಳ ತುದಿಯಿಂದ ನೀರು ಬಿಡಬಹುದು):
- ಮಮ ಸ್ಮ ತ ಸ್ಮಾರ್ಥ ನಿತ್ಯ ಕರ್ಮಾನುಷ್ಠಾನ ಸಿದ್ಧ್ಯರ್ಥಂ ಪ್ರಾಥಃ /ಮಧ್ಯಾಹ್ನ / ಸಾಯಂ /ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಪ್ರಾತರ್ -ಮಧ್ಯಾಹ್ನ ಅರ್ಘ್ಯ ಪ್ರದಾನಮಹಂ ಕರಿಷ್ಯೆ || (ಪ್ರದಾನಂ ಅಹಂ ಕರಿಷ್ಯೆ) :
|| ಅಥಾರ್ಘ್ಯಂ ಪ್ರಾತಃ||[ಬದಲಾಯಿಸಿ]
ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ ||
- ಓಂ ತತ್ಸವಿತುರ್ವರೇಣಿಯಂ(ವರೇಣ್ಯಂ) ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ | ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ (ಭೂರ್ಭುವಃ ಸುವಃರೋಂ)
- |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ ||
- ತ್ರಿ ಪ್ರಧಾನಾರ್ಘ್ಯಂ || (ಬೆಳಗಿನ ಕಾಲದ್ದು ಮೂರು ಪ್ರಧಾನ ಅರ್ಘ್ಯ ಕೊಡಬೇಕು - ಕನಿಷ್ಠ ಒಂದನ್ನಾದರೂ ಕೊಡಬೇಕು )
|
| ಅಥ ಮಧ್ಯಾಹ್ನೇ: ಮಧ್ಯಾಹ್ನದ ೩ ಪ್ರಾಧಾನ ಅರ್ಘ್ಯ,||[ಬದಲಾಯಿಸಿ]
(ಕಾಲಾತಿಕ್ರಮಣಕ್ಕೆ ಪ್ರಾಯಶ್ಚಿತ ಅರ್ಘ್ಯ ಬೆಳಗ್ಗಿನಂತೆ) :
- ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ | ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ | ಓ ಗ್ಂ ಸುವಃ | ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ || ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ ||
- ಇತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ ||
೩ ಪ್ರಾಧಾನ ಅರ್ಘ್ಯ,
- ಒಂದನ್ನಾದರೂ ಕೊಡುವುದು) :
- ೧ ; ಓಂ ಹಗುಂಸಃ ಶುಚಿಷದ್ವಸು ರಂತರಿಕ್ಷ (ಶುಚಿ ಷದ್ವಸುಃ ಅಂತರಿಕ್ಷ)
- ಸದ್ದೋತಾ ವೇದಿಷದತಿಥಿರ್ದು ರೋಣಸತು| ನೃಷದ್ವರ ಸದ್ಧ್ಯತ ಸದ್ವ್ಯೋಮಾ
- ಸದಬ್ಜಾ ಗೋಜಾ ಋತಜಾ ಅದ್ರಿಜಾ ಋತಂ ಬೃಹತೂ ||
- ಶ್ರೀ ಭಾಸ್ಕರಾಯ ನಮಃ | ಇದಂ ವೋ ಅರ್ಘ್ಯಂ (ಇದಂ ತೇ ಅರ್ಘ್ಯಂ)||
- ೨. ಓಂ ಆಸತ್ಯೇನ ರಜಸಾ ವರ್ತಮಾನೋ ನಿವೇಶಯನ್ನಮೃತಂ ಮರ್ತ್ಯಂಚ |
- ಹಿರಣ್ಯಯೇನ ಸವಿತಾ ರಥೇನಾss ದೇವೋಯಾತಿ ಭುವನಾ ವಿಪಶ್ಯನ್ ||
- ಶ್ರೀ ಭಾಸ್ಕರಾಯ ನಮಃ |ಇದಂ ತೇ ಅರ್ಘ್ಯಂ)||
- ೩. ಓಂ ತತ್ಸವಿತುರ್ವರೇಣಿಯಂ(ವರೇಣ್ಯಂ)
- ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ |
- ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ
- (ಭೂರ್ಭುವಃ ಸುವಃರೋಂ)
- |ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ ||
||ಸಾಯಂಕಾಲೇ|| (ಸಾಯಂಕಾಲ ಬೆಳಗಿನಂತೆ) :[ಬದಲಾಯಿಸಿ]
- ಮಮ ಸ್ಮ ತ ಸ್ಮಾರ್ಥ ನಿತ್ಯ ಕರ್ಮಾನುಷ್ಠಾನ ಸಿದ್ಧ್ಯರ್ಥಂ ಸಾಯಂ ಸಂಧ್ಯಾ ಕಾಲಾತಿಕ್ರಮಣ ದೋಷ ಪರಿಹಾರಾರ್ಥಂ, ಪ್ರಾಯಶ್ಚಿತ್ತಾರ್ಘ್ಯ ಪೂರ್ವಕ ಅರ್ಘ್ಯ ಪ್ರದಾನಮಹಂ ಕರಿಷ್ಯೆ || (ಪ್ರದಾನಂ ಅಹಂ ಕರಿಷ್ಯೆ) :
- ಓಂ ತತ್ಸವಿತುರ್ವರೇಣಿಯಂ(ವರೇಣ್ಯಂ) ಭರ್ಗೋ ದೇವಸ್ಯ ಧೀಮಹಿ ಧಿಯೋ
- ಯೋನಃ ಪ್ರಚೋದಯಾತ್ |
- ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ
- (ಭೂರ್ಭುವಃ ಸುವಃರೋಂ) |ಶ್ರೀ ಭಾಸ್ಕರಾಯ ನಮಃ |ಇದಂ ತೇ ಅರ್ಘ್ಯಂ|| ( ಪ್ರಾಯಶ್ಚಿತ್ತ ಅರ್ಘ್ಯ)
- | ತ್ರಿ ಪ್ರಧಾನಾರ್ಘ್ಯಂ ||
- (ಬೆಳಗಿನ ಕಾಲದ್ದು ಮೂರು ಪ್ರಧಾನ ಅರ್ಘ್ಯ ಕೊಡಬೇಕು - ಕನಿಷ್ಠ ಒಂದನ್ನಾದರೂ ಕೊಡಬೇಕು )
- (ಕಾಲಾತಿಕ್ರಮಣಕ್ಕೆ -ಕಾಲ ಮೀರಿದ್ದಕ್ಕೆ ಪ್ರಾಯಶ್ಚಿತ ಅರ್ಘ್ಯ)
- ಓಂ ಭೂಃ | ಓಂ ಭುವಃ | ಓ ಗ್ಂ ಸುವಃ |
- ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ |
- ಓಂ ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ
- ಯೋನಃ ಪ್ರಚೋದಯಾತ್ || ಓಂ ಭೂಃ | ಓಂ ಭುವಃ | ಓ ಗ್ಂ ಸುವಃ |
- ಓಂ ಮಹಃ| ಓಂ ಜನಃ | ಓಂ ತಪಃ | ಓಗುಂ ಸತ್ಯಂ ||
- ಶ್ರೀ ಭಾಸ್ಕರಾಯ ನಮಃ | ಇದಂ ತೇ ಅರ್ಘ್ಯಂ || ಇತಿ ಪ್ರಾಯಶ್ಚಿತ್ತಾರ್ಘ್ಯಂ ದತ್ವಾ ||
||ಅಥ ತರ್ಪಣ ||[ಬದಲಾಯಿಸಿ]
- (ಮೇಲೆ ಹೇಳಿದಂತೆ ಅಂಗೈಯಿಂದ ಬೆರಳುಗಳ ಮೂಲಕ ನೀರು ಬಿಡಬೇಕು)
- ಗಾಯತ್ರೀಂ ತರ್ಪಯಾಮಿ || ಸಾವಿತ್ರೀಂ ತರ್ಪಯಾಮಿ ||
- ಸರಸ್ವತೀಂ ತರ್ಪಯಾಮಿ ||ಛಂದರ್ಷೀಂ ತರ್ಪಯಾಮಿ ||
- ಸಂಧ್ಯಂ ತರ್ಪಯಾಮಿ |\ ಋಗ್ವೇದಂ ತರ್ಪಯಾಮಿ||
- ಯಜುರ್ವೇದ ತರ್ಪಯಾಮಿ|| ಸಾಮವೇದ ತರ್ಪಯಾಮಿ
- || ಇತಿ ತರ್ಪಯಿತ್ವಾ ||
- (ಆಸಾವಾದಿತ್ಯೋ ಬ್ರಹ್ಮೇತಿ ಬ್ರಹೈವ ಸನ್ ಬ್ರಹ್ಮಾಪ್ಯೇತಿ ಯ ಏವಂ ವೇದ)
- ||ಆಸಾವಾದಿತ್ಯೋ ಬ್ರಹ್ಮ || ಜಲ ಹಸ್ತ ಪ್ರದಕ್ಷಿಣಂ ಕೃತ್ವಾ || (ಬಲ ಹಸ್ತದಲ್ಲಿ ನೀರನ್ನು ತೆಗೆದುಕೊಂಡು ತಲೆಯ ಸುತ್ತ ಪ್ರದಕ್ಷಿಣ ರೀತಿ ಸುತ್ತುವುದು).
- ಅನೇನ ಪ್ರಾತರ್ -ಮಧ್ಯಾಹ್ನ (ಸಾಯಂ) ಅರ್ಘ್ಯ ಪ್ರದಾನ ವಿಧಿ ಕರ್ಮಣಃ ಶ್ರೀಪರಮೇಶ್ವರ ಪ್ರೀಯತಾಂ || (ಸಾಯಂಕಾಲಕ್ಕೆ ಸಾಯಂ ಮಾತ್ರಾ ಹೇಳಬೇಕು) ಪೂರ್ವದಾಚಮ್ಯ ||(ಹಿಂದಿನಂತೆ ಆಚಮನ ಮಾಡುವುದು).
- (ಅರ್ಘ್ಯ ಅಸ್ತ್ರ ಉಪಸಂಹಾರ)
- ಉತ್ತಿಷ್ಠ ದೇವಿ ಗಂತವ್ಯಂ ಪುನರಾಗಮನಾಯಚ ||
- ಉತ್ತಿಷ್ಠ ದೇವಿ ಸ್ಥಾತವ್ಯಂ (ಗಾಯತ್ರೀ) ಪ್ರವಿಶ್ಯ ಹೃದಯಂ ಮಮ||
ಗಾಯತ್ರೀ ಜಪ[ಬದಲಾಯಿಸಿ]
- ಯಾವದೇ ಜಪ ಮಾಡುವಾಗ ಎಡದ ಕೈಯನ್ನು ಜನಿವಾರದ ಗಂಟಿನೊಂದಿಗೆ ಹೃದಯದ ಮೇಲೆ ಇಟ್ಟುಕೊಂಡು ಬಲಕೈ ಬೆರಳುಗಳಿಂದ ಜಪದ ಎಣಿಕೆ ಮಾಡುವುದು - ಅಥವಾ ಹೋಕ್ಕಳ ಕೆಳಗೆ ಕಾಲುಗಳ ಮೇಲೆ ಎಡ ಅಂಗೈ -ಅದರ ಮೇಲೆ ಬಲ ಅಂಗೈ ಇಟ್ಟು ಕೊಂಡು ಬಲ ಕೈ ಬೆರಳ ಗಿಣ್ಣು ಎಣಿಸುತ್ತಾ ಜಪ ಮಾಡಬಹುದು -ಜಪ ಮಾಡುವಾಗ ತುಟಿ, ನಾಲಗೆ, ಅಥವಾ ಗಂಟಲ ಸ್ನಾಯುಗಳು ಅಲುಗಾಡದಂತೆ ಮನಸ್ಸಿನಲ್ಲಿ ಪ್ರತಿ ಅಕ್ಷರವೂ ಬರುವಂತೆ (ಬಿಡದಂತೆ) ಜಪಮಾಡುವುದು ಶ್ರೇಷ್ಠವಾದುದು; ಕಣ್ಣನ್ನು ಅರ್ಧ ಮಚ್ಚಿರಬೇಕು, ಮೂಗಿನ ತುದಿ ನೋಡುತ್ತಾ ಕಣ್ಣಿಗೆ ತೊಂದರೆಕೊಡುವ ಅಗತ್ಯವಿಲ್ಲ. ಮಂದ ಬೆಳಕಿರಬೇಕು. ನಿಶ್ಶಬ್ದವಿರಬೇಕು, ಹೊಟ್ಟೆ ತುಂಬಿರಬಾರದು, ತೀರಾ ಖಾಲಿಯಾಗಿರಬಾರದು, ಮನಸ್ಸು ಶಾಂತವಾಗಿ, ಆನಂದ ವಾಗಿರಬೇಕು) :
ಗುರು ವಂದನೆ :[ಬದಲಾಯಿಸಿ]
- ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ ||
- ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀಗುರವೇ ನಮಃ||
- ೧). ಓಂ ಗುಂ ಗುರಭ್ಯೋ ನಮಃ || ಓಂ ಗಂ ಗಣಪತಯೇ ನಮಃ||
- ಓಂ ದುಂ ದುರ್ಗಾಯೈ ನಮಃ || ಓಂ ಕ್ಷಂ ಕೇತ್ರ ಪಾಲಾಯ ನಮಃ||
- ಓಂ ಸಂ ಸರಸ್ವತ್ಯೈ ನಮಃ|| ಓಂ ಪಂ ಪರಮಾತ್ಮನೇ ನಮಃ ||
- (ನಮಃ ಹೇಳುವಾಗ , ಶಿರಸ್ಸು, ಬಲ ಭುಜ, ಎಡ ಭಜ, ಮೊಣ ಕಾಲು,
- ನಾಭಿ, ಹೃದಯಗಳನ್ನು ಮಟ್ಟಿಕೋಳ್ಳಬೇಕು -
- ಅಲ್ಲಿ ಆ ದೇವತೆಗಳನ್ನು ಸ್ಥಾಪಿಸಿದಂತೆ)
- ೨). ಓಂ ಭೂಃ | ಇತಿ ಪಾದಯೋಃ| (ಪಾದಗಳಲ್ಲಿ-ಬಲ ಹಸ್ತದಿಂದ ಎಡ, ಎಡಹಸ್ತದಿಂದ ಬಲ ಪಾದ ಒಟ್ಟಿಗೆ ಸ್ಪರ್ಶಿಸುವುದು) ;
- ಓಂ ಭುವಃ | ಇತಿ ಜಾನುನೋಃ| (ಬಲದಿಂದ ಬಲ , ಎಡದಿಂದ ಎಡ ಮೊಳಕಾಲು ಸ್ಪರ್ಶ).
- ಓಗ್ಂ ಸುವಃ | ಇತಿ ಊರ್ವೋಃ | (ತೊಡೆಗಳಲ್ಲಿ); ಓಂ ಮಹಃ | ಇತಿ ಜಠರೇ | (ಹೊಟ್ಟೆಯಲ್ಲಿ); ಓಂ ಜನಃ |
- ಇತಿ ಕಂಠೇ | (ಕುತ್ತಿಗೆಯಲ್ಲಿ); ಓಂ ತಪಃ | ಇತಿ ಮುಖೇ | (ಬಾಯಿಯಲ್ಲಿ); ಓಗ್ಂ ಸತ್ಯಂ | ಇತಿ ಶಿರಸಿ
- (ನೆತ್ತಿಯಲ್ಲಿ - ಎಂದರೆ ಸ್ಪರ್ಶಮಾಡಬೇಕು, ಅಥವಾ ಮನಸ್ಸನ್ನು ನಿಲ್ಲಿಸು-ಧ್ಯಾನಿಸು)|| ಯಿತಿ ವಿನ್ಯಸ್ಯ||
- (ಈ ರೀತಿ ವಿನ್ಯಾಸ ಕ್ರಿಯೆ).
- ಓಂ ತತ್ಸವಿತುರ್ವರೇಣಿಯಂ(ವರೇಣ್ಯಂ) ಭರ್ಗೋ
- ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ |
- ಓಮಾಪೋಜ್ಯೋತಿ ರಸೋsಮೃತಂ ಬ್ರಹ್ಮ ಭೂರ್ಭುವಸ್ಸುವರೋಂ
- (ಭೂರ್ಭುವಃ ಸುವಃರೋಂ) || ಇತಿ ಪ್ರಾಣಾನಾಯಮ್ಯ (ಪ್ರಾಣಾಯಾಮ ಆಯಿತು)
- ೩). ಓಂ ವಿಶ್ವಾಮಿತ್ರ ಋಷಿಃ || ಶಿರಸಿ|| (ನೆತ್ತಿ ಸ್ಪರ್ಶಿಸು)
- ದೇವೀ ಗಾಯತ್ರೀ ಛಂದಃ || ಮುಖೇ|| (ಬಾಯಿ)
- ಸವಿತಾ ದೇವತಾ || ಹೃದಯೇ|| (ಮುಟ್ಟಿ ಕೊಳ್ಳಬೇಕು).
- ಗಾಯತ್ರೀ ಜಪೇ ವಿನಿಯೋಗಃ|| (ಚಮಚದ ನೀರನ್ನು ಬಲ ಕೈಯಿಂದ ನೀರು ಬಿಡಬೇಕು).
೪) ಅಥ ಜಪಂ || (ಜಪ ಮಾಡುವುದು) (೧೦೮ - ೨೮- ೧೦ಜಪ)
ಜಪ[ಬದಲಾಯಿಸಿ]
ಓಂ ಭೂರ್ಭುವಸ್ಸುವಃ || ತತ್ಸವಿತುವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್ ||
- (ಭೂಃ ಭುವಃ ಸುವಃ ಸೇರಿದರೆ - ಭೂರ್ಭುವಸ್ಸುವಃ; ಕೆಲವರಲ್ಲಿ ಎರಡನೇ ಬಾರಿ ಓಂ ಸೆರಿಸುವ ಪದ್ದತಿ ಇಲ್ಲ.) || ಜಪಿತ್ವಾ || ಶ್ರೀ ಗಾಯತ್ರೀ ಜಪಂ ಶ್ರೀ ಪರಮೇಶ್ವರ ಪ್ರೀಯತಾಂ || (ಬಲ ಕೈ ಯಿಂದ ನೀರು ಬಿಡುವುದು)
ಉಪಸ್ಥಾನ[ಬದಲಾಯಿಸಿ]
- {ಉಪಸ್ಥಾನದ (ವೇದ) ಮಂತ್ರಗಳನ್ನು ಸಂಕ್ಷಿಪ್ತ ಸಂಧ್ಯಾವಂದನೆ ಯಲ್ಲಿ ಕೊಟ್ಟಿಲ್ಲ. ಅದನ್ನು ಈಗ ಹೇಳುವುದು ಕಡಿಮೆ. ಆಗತ್ಯವಿದ್ದಲ್ಲಿ ಪೂರ್ಣಸಂಧ್ಯಾವಂದನೆ ಯ ಪಾಠದಿಂದ ತೆಗೆದುಕೊಳ್ಳಬಹುದು. ಅಥವಾ ಮೂರೂ ಹೊತ್ತಿನ ಉಪಸ್ಥಾನದ ಕ್ರಿಯೆ ಸೇರಿಸಿ;
- ಓಂ ಸೂರ್ಯಾಯ ನಮಃ;
- ಓಂ ಮಿತ್ರಾಯ ನಮಃ;
- ಓಂ ವರುಣಾಯ ನಮಃ ||
ಎಂದು ಹೇಳಿ ನಮಸ್ಕರಿಸಬಹುದು}
ಸರ್ವದೇವ ನಮಸ್ಕಾರ[ಬದಲಾಯಿಸಿ]
- {ಉಪಸ್ಥಾನದ (ವೇದ) ಮಂತ್ರಗಳನ್ನು ಸಂಕ್ಷಿಪ್ತ ಸಂಧ್ಯಾವಂದನೆ ಯಲ್ಲಿ ಕೊಟ್ಟಿಲ್ಲ. ಅದನ್ನು ಈಗ ಹೇಳುವುದು ಕಡಿಮೆ. ಆಗತ್ಯವಿದ್ದಲ್ಲಿ ಪೂರ್ಣಸಂಧ್ಯಾವಂದನೆ ಯ ಪಾಠದಿಂದ ತೆಗೆದುಕೊಳ್ಳಬಹುದು. ಅಥವಾ ಮೂರೂ ಹೊತ್ತಿನ ಉಪಸ್ಥಾನದ ಕ್ರಿಯೆ ಸೇರಿಸಿ ಓಂ ಸೂರ್ಯಾಯ ನಮಃ; ಓಂ ಮಿತ್ರಾಯ ನಮಃ; ಓಂ ವರುಣಾಯ ನಮಃ || ಎಂದು ಹೇಳಿ ನಮಸ್ಕರಿಸಬಹುದು}
- ನಮೋ ಬ್ರಹ್ಮಣೇ ನಮೋ ಅಸ್ತ್ವಗ್ನಯೇ | ನಮಃ ಪ್ರಥಿವೈ | ನಮಃ ಓಷದೀಭ್ಯಃ|| ನಮೋ ವಾಚೇ ನಮೋ ವಾಚಸ್ಪತಯೇ | ನಮೋ ವಿಷ್ಣವೇ | ಬೃಹತೇ ಕರೋಮಿ || ಓಂ ಶಾಂತಿಃ ಶಾಂತಿಃ ಶಾಂತಿಃ || ಓಂ ಸಂಧ್ಯಾಯೈ ನಮಃ | ಓಂ ಗಾಯತ್ರೈ ನಮಃ | ಓಂ ಸಾವಿತ್ರೈ ನಮಃ | ಓಂ ಸರಸ್ವತ್ತೈ ನಮಃ | ಓಂ ಸರ್ವಾಭ್ಯೋ ದೇವತಾಭ್ಯೋ ನಮಃ | ಓಂ ಸರ್ವೇಭ್ಯೋ ದೇವೇಭ್ಯೋ ನಮಃ | ಓಂ ಋಷಿಭ್ಯೋ ನಮಃ | ಓಂ ಮುನಿಭ್ಯೋ ನಮಃ| ಓಂ ಗುರುಭ್ಯೋ ನಮಃ| ಓಂ ಆಚಾರ‍್ಯೇಭ್ಯೋ ನಮಃ| ಓಂ ಇಷ್ಟದೇವತಾಭ್ಯೋ ನಮಃ | ಓಂ ಈಶಾನ ಗೋ ಪಿತೃ ಮಾತೃ ಗುರು ದೇವತಾಭ್ಯೋ ನಮಃ || ಸಂಧ್ಯಾ ಸರಸ್ವತೀಬ್ಯೋ ನಮೋ ಅಸ್ತು ||
- ಶ್ರೀಮದ್ ಯಜುಃ ಶಾಖಾ ಬೋಧಾಯನ ಸೂತ್ರಾನ್ವಿತ - ೧ . ಕಾಶ್ಯಪ ವತ್ಸರ ನೈದೃವ ತ್ರಯಾ ಋಷಯಃ ಪ್ರವರಾನ್ವಿತ ಕಾಶ್ಯಪ ಗೋತ್ರೋತ್ಪನ್ನ --ಶರ್ಮಾ ಅಹಮಸ್ಮಿ ಅಹಂಭೋ ಅಭಿವಾದಯೇ || ೨. ವಿಶ್ವಾಮಿತ್ರ ದೇವರಾತ ಔದಲೇತಿ ತ್ರಯಾ ಋಷಯ ಪ್ರವರಾನ್ವಿತ ವಿಶ್ವಾಮಿತ್ರ ಗೋತ್ರೋತ್ಪನ್ನ -- ಶರ್ಮಾ ಅಹಮಸ್ಮಿ ಅಹಂಭೋ ಅಭಿವಾದಯೇ || (ಇದರಂತೆ ಅವರವರ ಗೋತ್ರ ಪ್ರವರ ಹೇಳಿ ಅಭಿವಾದನೆ -ನಮಸ್ಕಾರ ಮಾಡಬೇಕು; ಎಡದ ಕೈಯಿಂದ ನೆಲ ಮುಟ್ಟಿಕೊಂಡು ಬಲ ಕೈಯಿಂದ ನೆಲವನ್ನೂ ಬಲ ಕಿವಿಯನ್ನೂ ಮೂರು ಬಾರಿ ಮುಟ್ಟಿಕೊಳ್ಳುವುದು - ಹಿರಿಯರಿಗೆ ನಮಸ್ಕಾರ ಮಾಡುವಾಗ ಎಡ ಕೈಯಿಂದ ಅವರ ಬಲ ಪಾದ ಮುಟ್ಟಿಕೊಂಡು ಮೂರು ಬಾರಿ ಅಭಿವಾದನೆ ಮಾಡಬೇಕು)
- (ನಿಂತು ದಕ್ಷಿಣಕ್ಕೆ ತಿರುಗಿ ಅಪಮೃತ್ಯು ನಿವಾರಣೆಗೆ ಯಮ ಸ್ತುತಿ)
- ಓಂ ಯಮಾಯ ಧರ್ಮರಾಜಾಯ |
- ಮೃತ್ಯವೇ ಚಾಂತ್ತಕಾಯ ಚ || ವೈವಸ್ವತಾಯ ಕಾಲಾಯ |
- ಸರ್ವ ಭೂತ ಕ್ಷಯಾಯಚ |
- ಔದಂಬರಾಯ ದದ್ನಾಯ | ನೀಲಾಯ ಪರಮೇಷ್ಠಿನೇ ||
- ವೃಕೋದರಾಯ ಚಿತ್ರಾಯ |
- ಚಿತ್ರ ಭುಕ್ತಾಯ ವೈ ನಮೋ ನಮಃ||
- (ಉತ್ತರಕ್ಕೆ ತಿರುಗಿ ಅಪಮೃತ್ಯು ನಿವಾರಣೆಗೆ ಶಿವ ಸ್ತುತಿ)
- ಋತಗ್ಂ ಸತ್ಯಂ ಪರಂ ಬ್ರಹ್ಮ ಪುರುಷಂ ಕೃಷ್ಣ ಪಿಂಗಲಂ |
- ಊರ್ಧ್ವ ರೇತಂ ವಿರೂಪಾಕ್ಷಂ ವಿಶ್ವರೂಪಾಯ ವೈನಮೋ ನಮಃ||
- (ಶಿಷ್ಟ ರಕ್ಷಕ ಶ್ರೀ ಕೃಷ್ಣನಿಗೆ ನಮಸ್ಕಾರ )
- ನಮೋ ಬ್ರಹ್ಮಣ್ಯ ದೇವಾಯ |
- ಗೋ ಬ್ರಾಹ್ಮಣ್ಯ ಹಿತಾಯಚ || ಜಗದ್ದಿತಾಯ ಕೃಷ್ಣಾಯ |
- ಗೋವಿಂದಾಯ ವೈ ನಮೋ ನಮಃ ||
- ಆಕಾಶಾತ್ ಪತಿತಂ ತೋಯಂ | ಯಥಾ ಗಚ್ಛತಿ ಸಾಗರಂ |
- ಸರ್ವ ದೇವ ನಮಸ್ಕಾರಂ | ಕೇಶವಂ ಪ್ರತಿ ಗಚ್ಛತಿ ||
- ಇತಿ ಪ್ರದಕ್ಷಿಣ ತ್ರಯಂ ಕೃತ್ವಾ ||
- (ಮೂರು ಪ್ರದಕ್ಷಿಣ ನಮಸ್ಕಾರ ಮಾಡಿ ಕುಳಿತುಕೊಳ್ಳುವುದು.).
ಅಷ್ಟಾಕ್ಷರೀ ಜಪಂ :[ಬದಲಾಯಿಸಿ]
- ಶ್ರೀಪರಮೇಶ್ವರ ಪ್ರೀತ್ಯರ್ಥಂ ಅಷ್ಟಾಕ್ಷರೀ ಜಪಂ ಕರಿಷ್ಯೇ (ಬಲ ಹಸ್ತದಿಂದ ನೀರು ಬಿಡುವುದು)
ಶ್ರೀಪರಮೇಶ್ವರ ಪ್ರೀತ್ಯರ್ಥಂ ಅಷ್ಟಾಕ್ಷರೀ ಜಪಂ ಕರಿಷ್ಯೇ (ಬಲ ಹಸ್ತದಿಂದ ನೀರು ಬಿಡುವುದು) ಓಂ ಸಾಧ್ಯಾ ನಾರಾಯಣ ಋಷಿಃ | (ಶಿರಸಿ -ಮುಟ್ಟಿಕೊಳ್ಳುವುದು.) | ಗಾಯತ್ರೀ ಛಂದಃ (ಮುಖೇ- ಬಾಯಿ)| ಪರಬ್ರಹ್ಮ ಪರಮಾತ್ಮಾ ದೇವತಾ| ಹೃದಯೇ| ಅಷ್ಟಾಕ್ಷರೀ ಜಪೇ ವಿನಿಯೋಗಃ || || ಓಂ ನಮೋ ನಾರಾಯಣಾಯ || (ಗಾಯತ್ರೀ ಜಪದ ಎರಡರಷ್ಟು ಜಪ ) ಅಷ್ಟಾಕ್ಷರೀ ಜಪಂ ಶ್ರೀ ಪರಮೇಶ್ವರ ಪ್ರೀಯತಾಂ || (ಬಲ ಹಸ್ತದಿಂದ ನೀರು ಬಿಡುವುದು)
ಪಂಚಾಕ್ಷರೀ ಜಪ :[ಬದಲಾಯಿಸಿ]
- ಶ್ರೀ ಪರಮೇಶ್ವರ ಪ್ರೀತ್ಯರ್ಥಂ ಪಂಚಾಕ್ಷರೀ ಜಪಂ ಕರಿಷ್ಯೇ (ಬಲ ಹಸ್ತದಿಂದ ನೀರು ಬಿಡುವುದು).
- || ಆಚಮ್ಯ ||
- ಓಂ ವಾಮದೇವ ಋಷಿಃ ||ಶಿರ|| ಪಂಕ್ತೀ ಛಂದಃ || ಮುಖ ||
- ಶ್ರೀ ಸದಾಶಿವ ರುದ್ರೋ ದೇವತಾ || ಹೃದಯ ||
- ಪಂಚಾಕ್ಷರೀ ಜಪೇ ವಿನಿಯೋಗಃ ||
- ನಮಃ ಶಿವಾಯ ಇದು ಐದು ಅಕ್ಷರಗಳಾದರೂ ಜಪ ಮಾಡುವಾಗ 'ಓಂ' ಕಾರ ಸೇರಿಸಿ, ಓಂ ನಮಃ ಶಿವಾಯ ಎಂದು ಜಪಿಸಬೇಕು. 'ಓಂ' ಕಾರಕ್ಕೆ ವಿಶೇಷ ಅರ್ಥವೂ ಮಹತ್ವವೂ ಇದೆ.
- (ಅಷ್ಟಾಕ್ಷರೀ ಜಪದ ಎರಡರಷ್ಟು ಜಪ).
- ಪಂಚಾಕ್ಷರೀ ಜಪಂ ಶ್ರೀ ಪರಮೇಶ್ವರ ಪ್ರೀಯತಾಂ ||
ಭಗವದರ್ಪಣ.[ಬದಲಾಯಿಸಿ]
- (ಸಂಧ್ಯಾವಂದನ ಮುಕ್ತಾಯ)
- ಯಸ್ಯಸ್ಮೃತ್ಯಾಚ ನಾಮೋಕ್ತ್ಯಾ |
- ತಪೋ ಸಂಧ್ಯಾ ಕ್ರಿಯಾ ದಿಷು ||
- ನ್ಯೂನಂ ಸಂಪೂರ್ಣ ತಾಂ ಯಾತಿ |
- ಸದ್ಯೋ ವಂದೇ ತಂ ಅಚ್ಯುತಂ || ಅನೇನ ಪ್ರಾತಃ / ಮಧ್ಯಾಹ್ನ / ಸಾಯಂ /
- ಸಂಧ್ಯಾವಧಿ ಕರ್ಮಣಃ ಶ್ರೀ ಪರಮೇಶ್ವರ ಪ್ರೀಯತಾಂ || ಪ್ರೀಯತೋ ವರದೋ ಭವತು ||
- ಸಂಧ್ಯಾ ಕಾಲೇ ಮಂತ್ರ ತಂತ್ರ , ಸ್ವರ ವರ್ಣ, ನ್ಯೂನಾತಿರಿಕ್ತ ,
- ಲೋಪ ದೋಷ , ಪ್ರಾಯಶ್ಚಿತ್ತಾರ್ಥಂ ನಾಮ ತ್ರಯ ಜಪಂ ಅಹಂ ಕರಿಷ್ಯೆ ||
- ಓಂ ಅಚ್ಯುತಾಯ ನಮಃ || ಓಂ ಅಚ್ಯುತಾಯ ನಮಃ || ಓಂ ಅನಂತಾಯ ನಮಃ ||
- ಓಂ ಅನಂತಾಯ ನಮಃ ಓಂ ಗೋವಿಂದಾಯ ನಮಃ ||
- ಓಂ ಗೋವಿಂದಾಯ ನಮಃ || ವಿಷ್ಣೋ -ವಿಷ್ಣೋ ಸ್ಮರನ್ ||ವಿಷ್ಣವೇ ನಮಃ ||
- ವಿಷ್ಣವೇ ನಮಃ || ವಿಷ್ಣವೇ ನಮಃ ||
- || ದ್ವಿರಾಚಮ್ಯ || ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ |
- ಓಂ ಸಾಮ ವೇದಾಯ ಸ್ವಾಹಾ||
- ಓಂ ಋಗ್ವೇದಾಯ ಸ್ವಾಹಾ | ಓಂ ಯಜುರ್ವೇದಾಯ ಸ್ವಾಹಾ |
- ಓಂ ಸಾಮ ವೇದಾಯ ಸ್ವಾಹಾ ||
ಟಿಪ್ಪಣಿ[ಬದಲಾಯಿಸಿ]
- (ಟಿಪ್ಪಣಿ:- ಅಭ್ಯಾಸವಾದರೆ ಈಕ್ರಮದ ಸಂಧ್ಯಾವಂದನೆಯನ್ನು ೧೦-೧೨ ನಿಮಿಷಗಳಲ್ಲಿ ಮಾಡಿ ಮುಗಿಸಬಹುದು. ಶಾಲೆಗೆ ಹೋಗುವ ಮಕ್ಕಳಿಗಾಗಿ ಮುಖ್ಯಾಂಶಗಳನ್ನು ಮಾತ್ರಾ ಸಂಗ್ರಹಿಸಿದೆ ಮತ್ತುವಿವರಣೆ ಕೊಟ್ಟಿದೆ. ಚಂ.)
- ಸಂಧ್ಯಾವಂದನ ಪೂರ್ಣಪಾಠ ಟಿಪ್ಪಣಿ, ಅರ್ಥ , ಸೂಚನೆ ಗಳೊಂದಿಗೆ.
- ಸಂಕ್ಷಿಪ್ತ ಸಂಧ್ಯಾವಂದನೆ ಮಂತ್ರ ಮತ್ತು ಭೋಜನ ವಿಧಿ ಟಿಪ್ಪಣಿ ರಹಿತ
- ಶ್ರೀ ಸಿದ್ಧಿ ವಿನಾಯಕ
- ಗಾಯತ್ರಿ ಮತ್ತು ಗಾಯತ್ರೀ ಪುಟ೨ ಅರ್ಥ- ವಿವರಣೆ
- ಹವ್ಯಕ
- ನಿತ್ಯ ಕರ್ಮಗಳು
- ಹವ್ಯಕ |
- ದೇವತಾರ್ಚನ ವಿಧಿ
- ಸಂಕ್ಷಿಪ್ತ ಪೂಜಾಕ್ರಮ ಹೆಚ್ಚಿನ ವಿಷಯಕ್ಕೆ