ಸಂತ ಲೂಕ

ವಿಕಿಪೀಡಿಯ ಇಂದ
Jump to navigation Jump to search

ಪ್ರಭು ಯೇಸು ಇಸ್ರಯೇಲ್ ಜನತೆಯ ರಕ್ಷಕ ಮಾತ್ರವಲ್ಲ, ಇಡೀ ಮಾನವಕುಲದ ಉದ್ದಾರಕ. ಈ ಸತ್ಯವೇ ಲೂಕನ ಶುಭಸಂದೇಶಕ್ಕೆ ಪ್ರಧಾನ. "ದೀನದಲಿತರಿಗೆ ಶುಭಸಂದೇಶವನ್ನು ಸಾರಲು ಯೇಸು ಪವಿತ್ರಾತ್ಮರಿಂದ ಅಭಿಷಿಕ್ತರಾದವರು," ಎಂಬುದನ್ನು ಇದರಲ್ಲಿ .ಒತ್ತಿ ಹೇಳಲಾಗಿದೆ. ಬಗೆಬಗೆಯ ಕುಂದು ಕೊರತೆಗಳಿಂದ ಬಳಲುತ್ತಿರುವ ಜನತೆಯ ಬಗ್ಗೆ ಕರುಣೆ ಹಾಗೂ ಅನುಕಂಪದಿಂದ ತುಂಬಿತುಳುಕುತ್ತದೆ ಈ ಸಂದೇಶ.[೧]

ಶಾಂತಿಸಂತಸಕ್ಕೂ ಇದರಲ್ಲಿ ಸಾಕಷ್ಟು ಪ್ರಾಮುಖ್ಯತೆ ಕೊಡಲಾಗಿದೆ. ಕ್ರಿಸ್ತೇಸುವಿನ ಆಗಮನ ಮತ್ತು ಆರೋಹಣವನ್ನು ಬಣ್ಣಿಸುವ ಮೊದಲನೆಯ ಹಾಗು ಕೊನೆಯ ಅಧ್ಯಾಯಗಳಲ್ಲಿ ಈ ಗುಣಗಣಿತ್ತದೆ.

ಯೇಸುಸ್ವಾಮಿ ಸ್ವರ್ಗಾರೋಹಣವಾದ ಕ್ರೈಸ್ತವಿಶ್ವಾಸ ಹಾಗೂ ಶ್ರದ್ಡೆ ಹೇಗೆ ಹಬ್ಬಿಹರಡಿತೆಂಬುದನ್ನು ಲೇಖಕ ಲೂಕನು "ಪ್ರೇಷಿತರ ಕಾರ್ಯಕಲಾಪಗಳು" ಎಂಬ ತನ್ನ ಮತ್ತೊಂದು ಕೃತಿಯಲ್ಲಿ ಸವಿಸ್ತಾರವಾಗಿ ನಿರೂಪಿಸಿದ್ದಾನೆ.

ಸ್ನಾನಿಕ ಯೊವಾನ್ನನ ಮತ್ತು ಯೇಸುವಿನ ಜನನ ಹಾಗೂ ಬಾಲ್ಯಗಳ ವೃತ್ತಾಂತವನ್ನು ಈ ಕೃತಿಯಲ್ಲಿ ಮಾತ್ರ ಕಾಣಬಹುದು. ಅಂತೆಯೇ ಯೇಸು ಗಲಿಲೇಯದಿಂದ ಜೆರುಸಲೇಮಿಗೆ ಕೈಗೊಂಡ ಪ್ರಯಾಣದಲ್ಲಿ ಸಂಭವಿಸಿದ ಘಟನೆಗಳ ಕ್ರಮಬದ್ಧ ವರದಿಗೆ ಈ ಕೃತಿ ಅಗತ್ಯ. ದೇವದೂತರ ಗಾನ, ಕುರುಬರ ಭೇಟಿ, ದೇವಾಲಯದಲ್ಲಿ ಬಾಲಕ ಯೇಸುವಿನ ಸಂವಾದ, ಸದಯ ಸಮಾರಿತ, ದುಂದುಗಾರ ಮಗ, ಈ ಮುಂತಾದ ಸಾಧನೆ ಬೋಧನೆಗಳು ಮಿಕ್ಕ ಮೂರು ಶುಭಸಂದೇಶಗಳಲ್ಲಿ ದೊರಕವು. ಪ್ರಾರ್ಥನೆ, ಪವಿತ್ತಾತ್ಮ, ಯೇಸುವಿನ ಸೇವಾವೃತ್ತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಪಾಪಪರಿಹಾರ ಇವು ಈ ಶುಭಸಂದೇಶದ ವೈಶಿಷ್ಟ್ಯವೆನ್ನಬಹುದು.

ಉಲ್ಲೇಖ[ಬದಲಾಯಿಸಿ]

  1. ಎನ್. ಆರ್. ಎಸ್.ವಿ. ಪವಿತ್ರ ಬೈಬಲ್
"https://kn.wikipedia.org/w/index.php?title=ಸಂತ_ಲೂಕ&oldid=759900" ಇಂದ ಪಡೆಯಲ್ಪಟ್ಟಿದೆ