ಸಂತ ಮಾರ್ಕ್ ಕೆಥೆಡ್ರಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಾಲಯ

ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಸಿಎಸ್‌ಐ ಧರ್ಮಮಂಡಲಿಗೆ ಸೇರಿದ ಸಂತ ಮಾರ್ಕನ ಕೆಥೆಡ್ರಲ್ ೧೮೧೨ರಲ್ಲಿ ಅಸ್ತಿತ್ವಕ್ಕೆ ಬಂತು. ಯೇಸುಕ್ರಿಸ್ತನ ಹನ್ನೆರಡು ಶಿಷ್ಯರಲ್ಲಿ ಒಬ್ಬನಾದ ಮಾರ್ಕನ ಹೆಸರಿನ ಈ ಚರ್ಚು ಇಂಗ್ಲಿಷ್ ವಾಸ್ತುವಿನಂತಿದ್ದು ದೊಡ್ಡದಾದ ಗುಮ್ಮಟ ಹೊಂದಿದೆ. ಪ್ರಶಾಂತ ಒಳಾವರಣದ ಗೋಡೆಗಳ ಮೇಲಿನ ಬಿಲ್ಗಾರ ಪ್ರತಿಮೆಗಳು ಚರ್ಚಿನ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. ಮಧುರ ದನಿಯ ಗಂಟೆಗಳಿಂದ ಸಜ್ಜುಗೊಂಡ ಈ ಗುಡಿಯು ೧೭ನೇ ಶತಮಾನದ ಪೌಲನ ಕೆಥೆಡ್ರಲ್ಅನ್ನು ಹೋಲುತ್ತದೆ. ೧೯೦೧ರಲ್ಲಿ ವಿಸ್ತೃತಗೊಂಡು ೧೯೨೭ರಲ್ಲಿ ಮರುನಿರ್ಮಾಣವಾದ ಈ ಚರ್ಚು ವಿಶಿಷ್ಟ ಕೆತ್ತನೆಯ ಮುಂಬಾಗಿಲು ಹಾಗೂ ಬಣ್ಣದ ಗಾಜಿನ ಅಳವಡಿಕೆಯಿಂದ ಮತ್ತಷ್ಟು ಸುಂದರವಾಗಿದೆ.

ಹೊರಗಿನ ಕೊಂಡಿಗಳು[ಬದಲಾಯಿಸಿ]

http://www.saintmarks.in/